ಚಾಮರಾಜನಗರ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸಕಲ ಸಿದ್ಧತೆ : ಅಶೋಕ್ ಭೀಮಣ್ಣ ಕಲಘಟಗಿ
ಚಾಮರಾಜನಗರ ಏ. 12 - ಚಾಮರಾಜನಗರ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯವಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಶೋಕ್ ಭೀಮಣ್ಣ ಕಲಘಟಗಿ ಅವರು ತಿಳಿಸಿದರು.ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿದ್ಧತೆ ಕುರಿತು ನಗರದ ತಾಲೂಕು ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮತನಾಡಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 236 ಮತಗಟ್ಟೆಗಳಿದ್ದು, ಅವುಗಳಲ್ಲಿ 41 ಸೂಕ್ಷ್ಮ, 22 ಅತೀ ಸೂಕ್ಷ್ಮ ಹಾಗೂ 170 ಸಾಮಾನ್ಯ ಮತಗಟ್ಟೆಗಳಿವೆ. ಕ್ಷೇತ್ರದಾದ್ಯಂತ ಪಾರದರ್ಶಕ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಮತ್ತು ಮಾದರಿ ನೀತಿ ಸಂಹಿತೆ ಪಾಲನೆಗಾಗಿ 2 ವಿಡಿಯೋ ಸರ್ವೇಲೆನ್ಸ್, 1 ವಿಡಿಯೋ ವೀವಿಂಗ್, 6 ಫ್ಲೈಯಿಂಗ್ ಸ್ಕ್ವಾಡ್ ಮತ್ತು 6 ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡಗಳನ್ನು ರಚಿಸಲಾಗಿದೆ ಎಂದರು.
ಚುನಾವಣಾ ಅಕ್ರಮಗಳನ್ನು ತಡೆಯಲು 6 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಪುಣಜನೂರು, ಚಿಕ್ಕಹೊಳೆ, ಬಿಸಿಲವಾಡಿ, ಬಂದಿಗೌಡನಹಳ್ಳಿ ಮತ್ತು ಮೂಡಲಹೊಸಹಳ್ಳಿಯಲ್ಲಿ ಅಂತರರಾಜ್ಯ ಹಾಗೂ ಪಣ್ಯದಹುಂಡಿ ಬಳಿ ಅಂತರ್‍ಜಿಲ್ಲಾ ಚೆಕ್ ಪೋಸ್ಟ್ ತೆರೆಯಲಾಗಿದೆ. ಈ ಚೆಕ್‍ಪೋಸ್ಟ್‍ಗಳು ದಿನದ 24 ಗಂಟೆಗಳ ಅವಧಿಯಲ್ಲಿಯೂ ಸಹ ಜಾಗೃತವಾಗಿರಲಿವೆ. ಅಲ್ಲದೆ, ಚುನಾವಣಾ ಸಂಬಂಧ ದೂರು ಸಲ್ಲಿಸಲು ಸಮಾಧಾನ್ ಮತ್ತು ಅಭ್ಯರ್ಥಿಗಳು ವಾಹನ ಸೇರಿದಂತೆ ಅಗತ್ಯ ಪರವಾನಗಿ ಪಡೆಯಲು ಸುವಿಧ ತಂತ್ರಾಂಶದ ಮೂಲಕ ಅನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಕ್ಷೇತ್ರದಲ್ಲಿ 100834 ಪುರುಷ, 103267 ಮಹಿಳೆಯರು ಹಾಗೂ 16 ತೃತೀಯ ಲಿಂಗಿ ಮತದಾರರಿದ್ದು, ಯಾವೊಬ್ಬ ಮತದಾರರು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಗೊಂದಲವಿಲ್ಲದೆ ಮತದಾನ ಮಾಡಲು ಅನುಕೂಲವಾಗುವಂತೆ ಭಾವಚಿತ್ರವಿರುವ ಚುನಾವಣಾ ಗುರುತಿನ ಚೀಟಿಯನ್ನು ನೀಡಲಾಗಿದೆ ಎಂದು ಕಲಘಟಗಿ ತಿಳಿಸಿದರು.
ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಟಿ. ರಮೇಶ್‍ಬಾಬು ಅವರು ಮಾತನಾಡಿ ಚುನಾವಣಾ ಸಂಬಂಧ ತೆರೆಯಲಾಗಿರುವ ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ 08226-223220, ವಾಟ್ಸಾಪ್ ಸಂಖ್ಯೆ 8277855831 ಆಗಿದ್ದು, ಯಾವುದೇ ವಿಧದ ಚುನಾವಣಾ ಅಕ್ರಮಗಳು ಕಂಡುಬಂದ ಸಂದರ್ಭದಲ್ಲಿ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದರು.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಒಂದು ದಿನ ಮುಂಚಿತವಾಗಿ ಕಡ್ಡಾಯವಾಗಿ ಬ್ಯಾಂಕ್‍ನಲ್ಲಿ ಖಾತೆ ತೆರೆಯಬೇಕು. ಅಲ್ಲದೆ ತನ್ನ ಚುನಾವಣಾ ವಹಿವಾಟು, ಖರ್ಚು-ವೆಚ್ಚಗಳನ್ನು ಆ ಖಾತೆಯಿಂದಲೇ ನಿರ್ವಹಿಸಬೇಕು. ವಿದ್ಯುತ್, ನೀರು ಬಿಲ್ಲು ಹಾಗೂ ಇತರೆ ಸರ್ಕಾರಿ ಬಾಕಿಗಳನ್ನು ಉಳಿಸಿಕೊಂಡಿದ್ದಲ್ಲಿ ಎಲ್ಲವನ್ನು ಪಾವತಿಸಿ ನಾಮಪತ್ರದೊಂದಿಗೆ ಬೇಬಾಕಿ(ಎನ್.ಡಿ.ಸಿ) ಪತ್ರವನ್ನು ಸಹ ಸಲ್ಲಿಸಬೇಕಾಗಿದೆ ಎಂದರು.
ಚುನಾವಣಾ ಸ್ಪರ್ಧೆಗಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಠೇವಣಿ ಹಣ 10 ಸಾವಿರ ರೂ. ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ಸಾವಿರ ರೂ. ನಿಗಧಿಯಾಗಿದ್ದು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳು ಮೂಲಜಾತಿ ಪ್ರಮಾಣಪತ್ರವನ್ನು ನಾಮಪತ್ರದೊಂದಿಗೆ ಸಲ್ಲಿಸಬೇಕಾಗಿರುವುದು ಅವಶ್ಯ ಎಂದು ರಮೇಶ್‍ಬಾಬು ಅವರು ಮಾಹಿತಿ ನೀಡಿದರು.
ಪ್ರೋಬೇಷನರಿ ಅಧಿಕಾರಿ ಗೀತಾಹುಡೇದ್, ಚುನಾವಣಾ ವೆಚ್ಚ ಘಟಕದ ದೇವನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ವಿಧಾನಸಭಾ ಚುನಾವಣೆ – 2018
ಭದ್ರತಾ ಕಾಯ್ಕೆಯಡಿ 33 ಪ್ರಕರಣಗಳು ದಾಖಲು: 9 ಅಬಕಾರಿ ಪ್ರಕರಣ ದಾಖಲು
ಚಾಮರಾಜನಗರ, ಏ. 12 - ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಪೊಲೀಸ್ ಇಲಾಖೆಯು ಮುಂಜಾಗ್ರತ ಕ್ರಮ ಜರುಗಿಸಿದ್ದು, ಏಪ್ರಿಲ್ 11ರಂದು ಭದ್ರತಾ ಕಾಯ್ದೆಯಡಿ 33 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಅಬಕಾರಿ ಕಾಯ್ದೆಯಡಿ ಒಟ್ಟು 9 ಪ್ರಕರಣಗಳು ದಾಖಲು ಮಾಡಿಕೊಳ್ಳಲಾಗಿದೆ. ಹನೂರು ಠಾಣೆಯಲ್ಲಿ 4, ಯಳಂದೂರು ಠಾಣೆಯಲ್ಲಿ 2 ಹಾಗೂ ಬೇಗೂರು, ಸಂತೇಮರಹಳ್ಳಿ, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ತಲಾ 1 ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಒಟ್ಟು 7360 ರೂ. ಮೌಲ್ಯದ 24.49 ಲೀ. ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಒಟ್ಟು 41 ಜಾಮೀನು ರಹಿತ ವಾರೆಂಟ್ ಕಾರ್ಯಗತಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ಏ. 13ರಂದು ಜಿ.ಪಂ. ಅಧ್ಯಕ್ಷರ ಚುನಾವಣೆ
ಚಾಮರಾಜನಗರ, ಏ. 12 (- ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಏಪ್ರಿಲ್ 13ರಂದು ಮಧ್ಯಾಹ್ನ 12 ಗಂಟೆಗೆ ಚಾಮರಾಜನಗರದ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಚುನಾವಣೆ ಸಭೆ ಕರೆಯಲಾಗಿದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಹೆಚ್ಚುವರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದೆ.ಕನ್ನಡ ಭಾಷಾ ವಿಷಯದ ಮೌಲ್ಯಮಾಪನ ಕೇಂದ್ರ ಬದಲು
ಚಾಮರಾಜನಗರ, ಏ. 12 - ಚಾಮರಾಜನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಿಗದಿಯಾಗಿದ್ದ ಎಸ್‍ಎಸ್‍ಎಲ್‍ಸಿ ಪ್ರಥಮ ಭಾಷೆ ಕನ್ನಡ ವಿಷಯದ ಮೌಲ್ಯಮಾಪನ ಕೇಂದ್ರವನ್ನು ಚಾಮರಾಜನಗರದ ಸಿದ್ದಾರ್ಥನಗರ ಬಡಾವಣೆಯಲ್ಲಿರುವ ಸೇಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಗೆ ಬದಲಾಯಿಸಲಾಗಿದೆ.ಏಪ್ರಿಲ್ 18 ಹಾಗೂ 19ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ಏಪ್ರಿಲ್ 21ರಂದು ನವೋದಯ ಪ್ರವೇಶ ಪರೀಕ್ಷೆಯು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಹೀಗಾಗಿ ಕನ್ನಡ ಭಾಷಾ ವಿಷಯದ ಮೌಲ್ಯಮಾಪನ ಕೇಂದ್ರವನ್ನು ಬದಲಿಸಲಾಗಿದೆ.
ಮೌಲ್ಯಮಾಪನ ಆದೇಶ ಪಡೆದ ಎಲ್ಲ ವಿಷಯದ ಉಪ ಮೌಲ್ಯಮಾಪಕರು ಕಡ್ಡಾಯವಾಗಿ ಏಪ್ರಿಲ್ 16ರಿಂದ ಮೌಲ್ಯಮಾಪನ ಮಾಡಲು ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏ. 18ರಂದು ಜಿಲ್ಲಾಡಳಿತದ ವತಿಯಿಂದ ಬಸವ ಜಯಂತಿ ಆಚರಣೆ
ಚಾಮರಾಜನಗರ, ಏ. 12 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಮಹಾನ್ ಮಾನವತಾವಾದಿ, ಯುಗಪುರುಷ, ಸಮಾಜ ಸುಧಾರಕರಾದ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಸಮಾರಂಭವನ್ನು ಏಪ್ರಿಲ್ 18ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕೊಳ್ಳೇಗಾಲದ ಸರ್ಕಾರಿ ಎಂಜಿಎಸ್‍ವಿ ಪದವಿಪೂರ್ವ ಕಾಲೇಜು ಉಪನ್ಯಾಸಕರಾದ ಎಲ್. ದೊರೆಸ್ವಾಮಿ ಅವರು ಮುಖ್ಯ ಭಾಷಣ ಮಾಡುವರು.
ಗುಂಡ್ಲುಪೇಟೆ ಹಿಂದೂಸ್ಥಾನಿ ಸಂಗೀತ ಗಾಯಕರಾದ ಬಿ. ಸಿದ್ದನಗೌಡ ಅವರಿಂದ ವಚನ ಗಾಯನ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಏ. 15ರಂದು ಪ್ರವೇಶ ಪರೀಕ್ಷೆ
ಚಾಮರಾಜನಗರ, ಏ. 12 - ಕರ್ನಾಟಕ ವಸತಿ ಶಿಕ್ಷÀಣ ಸಂಸ್ಥೆಗಳ ಸಂಘಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಏಕಲವ್ಯ, ಡಾ. ಬಿ.ಆರ್. ಅಂಬೇಡ್ಕರ್ ಮಾದರಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಏಪ್ರಿಲ್ 15ರಂದು ನಡೆಯಲಿದೆ.ಅಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಪ್ರವೇಶ ಪತ್ರ ಪಡೆದಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ಕರ್ನಾಟಕ ವಸತಿ ಶಿಕ್ಷÀಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯÁಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment