Saturday, 14 April 2018

ಅಂಬೇಡ್ಕರ್ ಅವರ ಸಮಾನತೆಯ ಚಿಂತನೆಗಳು, ಸಿದ್ದಾಂತಗಳು ಸಾರ್ವಕಾಲಿಕ: ಜಿಲ್ಲಾಧಿಕಾರಿ ಬಿ.ಬಿ ಕಾವೇರಿ (14-04-2018)




ಅಂಬೇಡ್ಕರ್ ಅವರ ಸಮಾನತೆಯ ಚಿಂತನೆಗಳು, ಸಿದ್ದಾಂತಗಳು ಸಾರ್ವಕಾಲಿಕ: ಜಿಲ್ಲಾಧಿಕಾರಿ ಬಿ.ಬಿ ಕಾವೇರಿ 

ಚಾಮರಾಜನಗರ ಏ. 14 - ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ, ಅದರ್ಶ, ಚಿಂತನೆಗಳು ಹಾಗೂ ಸಿದ್ದಾಂತಗಳು ಸಾರ್ವಕಾಲಿಕವಾಗಿವೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಅಭಿಪ್ರಾಯ ಪಟ್ಟರು.



ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ, ರಾಷ್ಟ್ರನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ 127ನೇ ಜನ್ಮ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರದ್ದು ಪ್ರಬುದ್ಧ ವ್ಯಕ್ತಿತ್ವ. ತಳ ಸಮುದಾಯಗಳ ಹಾಗೂ ದಮನಿತರ ಸ್ಫೂರ್ತಿಯ ಸೆಲೆಯಾಗಿದ್ದ ಅಂಬೇಡ್ಕರ್ ಅವರು ಅಸ್ಪøಶ್ಯತೆ ನಿವಾರಣೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟರು. ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ದೇಶದ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಉತ್ತಮ ಸಂವಿಧಾನ ರಚಿಸಿಕೊಟ್ಟರು. ಸ್ವಾತಂತ್ರ್ಯ ಹೋರಾಟಕ್ಕೂ ಸಹ ಸಕಾರಾತ್ಮಕ ಸಂದೇಶ ನೀಡಿದ್ದ ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಸಾರ್ವಕಾಲಿಕ ಮೌಲ್ಯ ಪಡೆದಿವೆ ಎಂದರು.
ಸಾಮಾಜಿಕ, ಅರ್ಥಿಕ, ರಾಜಕೀಯ ಹಾಗೂ ತಾತ್ವಿಕ ವಿಚಾರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅಂಬೇಡ್ಕರ್ ಅವರು ಭಾರತೀಯ ಸಮಾಜವನ್ನು ಸಮಾನತೆಯ ತತ್ವದಲ್ಲಿ ಕಟ್ಟಲು ಪಣತೊಟ್ಟಿದ್ದರು. ಇದನ್ನು ವಿಶ್ವದ ಅನೇಕ ಉನ್ನತ ವಿದ್ಯಾಸಂಸ್ಥೆಗಳು ಗುರುತಿಸಿ ಇಂದಿಗೂ ಗೌರವಿಸುತ್ತಿವೆÉ. ಅಂಬೇಡ್ಕರರ ಜೀವನ, ಹೋರಾಟ, ಚಿಂತನೆ ಹಾಗೂ ಸಿದ್ದಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಕಾವೇರಿ ಅವರು ತಿಳಿಸಿದರು.
ಪ್ರಧಾನ ಭಾಷಣ ಮಾಡಿದ ಮೈಸೂರು ಮಹಾರಾಜ ಕಾಲೇಜಿನ ಅರ್ಥಶಾಸ್ತ್ರ ಹಾಗೂ ಸಹಕಾರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಿ. ಷಣ್ಮುಗಂ ಅವರು ಮಾತನಾಡಿ ಅಂಬೇಡ್ಕರ್ ಅವರು ಸಾಮಾಜಿಕ, ರಾಜಕೀಯ ಹಾಗೂ ಅರ್ಥಿಕ ಕ್ಷೇತ್ರಗಳನ್ನು ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಹಾಗೂ ಭ್ರಾತೃತ್ವ ತತ್ವಗಳ ಆಧಾರದಲ್ಲಿ ಮರು ಸಂಘಟಿಸÀಬೇಕೆಂದು ಪ್ರತಿಪಾದಿಸಿದ್ದರು ಎಂದರು.
ದೇಶದಲ್ಲಿ ಶೇ. 50ರಷ್ಟಿದ್ದ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರು ದೌರ್ಜನ್ಯ, ಶೋಷಣೆಗೊಳಗಗಿದ್ದರು. ಈ ಎಲ್ಲರೂ ಸೇರಿದಂತೆ ಎಲ್ಲ ಸಮುದಾಯಗಳು ಮುಖ್ಯವಾಹಿನಿಗೆ ಬಂದರೆ ಮಾತ್ರ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯ ಎಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು. ದೇಶದ ಅಭಿವೃದ್ಧಿಗಾಗಿ ಕೃಷಿ, ಕೈಗಾರಿಕೆ, ಜಲನೀತಿ ಹಾಗೂ ಜನಸಂಖ್ಯಾ ನೀತಿಯನ್ನು ಪ್ರತಿಪಾದಿಸಿದ್ದರು. ವಿವಿಧೋದ್ಧೇಶ ನೀರಾವರಿ ಯೋಜನೆ, ಜಲವಿದ್ಯುತ್ ಯೋಜನೆಗಳಿಗೂ ಅಂಬೇಡ್ಕರ್ ಅವರು ಅಡಿಗಲ್ಲು ಹಾಕಿದ್ದರು ಎಂದರು.
ಅರ್ಥಿಕತೆಯ ಅಭಿವೃದ್ಧಿಗಾಗಿ ದೇಶಕ್ಕೆ ಕೇಂದ್ರ ಬ್ಯಾಂಕಿನ ಅವಶ್ಯವನ್ನು ಅರಿತಿದ್ದ ಅಂಬೇಡ್ಕರ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದರು. ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿದ್ದ ಅವರು ಅಂದಿನ ಆಡಳಿತವನ್ನು ದಿಕ್ಕರಿಸಿ, ಪ್ರಜಾಪ್ರಭುತ್ವ ವ್ಯವಸ್ಥೆ ಬಯಸಿದ್ದರು. ಅಲ್ಲದೆ ಪ್ರಜಾಸತ್ಯಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸಿ ಪ್ರೌಢ ಮತದಾನ ವ್ಯವಸ್ಥೆಯನ್ನು ಜಾರಿಗೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಷಣ್ಮುಗಂ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಅವರು ವಿಶ್ವ ಕಂಡ ಶ್ರೇಷ್ಠ ಜ್ಞಾನಿಯಾಗಿದ್ದಾರೆ. ಅಂಬೇಡ್ಕರ್  ಅವರ ವಿಚಾರಧಾರೆ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅವರು ಅಂಬೇಡ್ಕರ್ ಅವರು ಬಾಲ್ಯದಲ್ಲಿಯೇ ಸಾಕಷ್ಟು ನೋವು ಅನುಭವಿಸಿದರೂ ಮುಂದೆ ಛಲದಿಂದ ಉನ್ನತ ಅಧ್ಯಯನ ಮಾಡಿದರು.  ಇಂತಹ ಸಾಧನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರದ್ದೇ ಹಾದಿಯಲ್ಲಿ ನಡೆಯಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸತೀಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹರದನಹಳ್ಳಿ ನಟರಾಜ್ ಹಾಗೂ ಲತಾಪುಟ್ಟಸ್ವಾಮಿ ಅವರಿಂದ ನಾಡಗೀತೆ, ಹನೂರು ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳಿಂದ ಬುದ್ಧ ಗೀತೆ ಹಾಗೂ ರಂಗಜಂಗಮ ಕಲಾತಂಡದ ರಾಮಸಮುದ್ರ ಮಹೇಶ್ ಅವರಿಂದ ಅಂಬೇಡ್ಕರ್ ಜಾಗೃತಿ ಗೀತೆಗಳು ಕಾರ್ಯಕ್ರಮದ ಆರಂಭದಲ್ಲಿ ಗಮನ ಸೆಳೆದವು.
ಅಲ್ಲದೆ, ಸಮಾರಂಭಕ್ಕೂ ಮುನ್ನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು, ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.   


ವಿಧಾನಸಭಾ ಚುನಾವಣೆ – 2018
ಬ್ಯಾಂಕ್, ಶಸ್ತ್ರ ಸಜ್ಜಿತ ಸಿಬ್ಬಂದಿ ಬಂದೂಕುಗಳಿಗೆ ಠೇವಣಿಯಿಂದ ವಿನಾಯಿತಿ

ಚಾಮರಾಜನಗರ, ಏ. 14 -  ಬ್ಯಾಂಕ್‍ನ ಭದ್ರತೆ ಮತ್ತು ಸುರಕ್ಷತೆಯ ದೃಷ್ಠಿಯಿಂದ ಬ್ಯಾಂಕುಗಳಲ್ಲಿರುವ ಶಸ್ತ್ರ, ಬಂದೂಕುಗಳನ್ನು ಹಾಗೂ ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿ (ಆರ್ಮಡ್ ಸೆಕ್ಯೂರಿಟಿ ಗಾರ್ಡ್) ಹೊಂದಿರುವ ಬಂದೂಕುಗಳಿಗೆ ಪೊಲೀಸ್ ಠಾಣೆಯ ಸುಪರ್ದಿನಲ್ಲಿ ಠೇವಣಿ(ಡಿಪಾಸಿಟ್) ಮಾಡುವುದಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಆದೇಶ ಹೊರಡಿಸಿದ್ದಾರೆ. 
ವಿಧಾನ ಸಭಾ ಚುನಾವಣಾ ಹಿನ್ನಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಂದೂಕು ಪರವಾನಗಿ ಹೊಂದಿರುವ ಬಂದೂಕುದಾರರು ಬಂದೂಕು (ಆಯುಧ)ಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯ ಸುಪರ್ದಿನಲ್ಲಿ ಠೇವಣಿ(ಡಿಪಾಸಿಟ್) ಮಾಡಲು ಆದೇಶಿಸಲಾಗಿತ್ತು.  ಸದರಿ ಆದೇಶವನ್ನು ಭಾಗಶಃ ಮಾರ್ಪಾಡು ಮಾಡಿ ಬ್ಯಾಂಕ್‍ನ ಭದ್ರತೆ ಹಾಗೂ ಸುರಕ್ಷತೆ ದೃಷ್ಠಿಯಿಂದ ಬ್ಯಾಂಕುಗಳಲ್ಲಿರುವ ಶಸ್ತ್ರ, ಬಂದೂಕುಗಳು ಹಾಗೂ ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿ (ಆರ್ಮಡ್ ಸೆಕ್ಯೂರಿಟಿ ಗಾರ್ಡ್) ಹೊಂದಿರುವ ಬಂದೂಕುಗಳಿಗೆ ಪೊಲೀಸ್ ಠಾಣೆಯ ಸುಪರ್ದಿನಲ್ಲಿ ಠೇವಣಿ (ಡಿಪಾಸಿಟ್) ಮಾಡುವುದಕ್ಕೆ ವಿನಾಯಿತಿ ನೀಡಲಾಗಿದೆ.
ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಶಸ್ತ್ರ, ಬಂದೂಕು ಪರವಾನಗಿದಾರರು ತಮ್ಮ ಬಳಿ ಇರುವ ಎಲ್ಲಾ ರೀತಿಯಾ ಶಸ್ತ್ರ ಬಂದೂಕುಗಳನ್ನು (ಎಸ್.ಬಿ.ಎಂ.ಎಲ್, ಎಸ್.ಬಿ.ಬಿ.ಎಲ್, ಡಿ.ಬಿ.ಬಿ.ಎಲ್, ಡಿ.ಬಿ.ಎಂ.ಎಲ್, ರಿವಾಲ್ವಾರ್ ಹಾಗೂ ಪಿಸ್ತೂಲ್ ಇತ್ಯಾದಿ ಶಸ್ತ್ರಾಸ್ತ್ರಗಳನ್ನು) ಸಂಬಂಧಿಸಿದ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯ ಅಧಿಕಾರಿಗಳ ವಶಕ್ಕೆ ಕೂಡಲೇ ಠೇವಣಿ/ಡಿಪಾಸಿಟ್ ಇಡಲು ಆದೇಶಿಸಿದೆ.  ಈ ಆದೇಶವು ಬ್ಯಾಂಕ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಒಡೆತನದ ಸಂಸ್ಥೆಗಳ ಶಸ್ತ್ರಾಸ್ತ್ರಗಳಿಗೆ ಅನ್ವಹಿಸುವುದಿಲ್ಲ.  ಸದರಿ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಆಮ್ರ್ಸ್ ಆಕ್ಟ್ 1959 ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಆದೇಶದಲ್ಲಿ  ಎಚ್ಚರಿಸಿದ್ದಾರೆ. 
ವಿಧಾನಸಭಾ ಚುನಾವಣೆ – 2018

ಸ್ಟಾಟಿಕ್ ಸರ್ವೈಲೆನ್ಸ್ ತಂಡಕ್ಕೆ ಪೊಲೀಸ್ ಇಲಾಖೆ ಸಿಬ್ಬಂಧಿ ನಿಯೋಜನೆ

ಚಾಮರಾಜನಗರ, ಏ. 14   ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಸ್ಟಾಟಿಕ್ ಸರ್ವೈಲೈನ್ಸ್ ಅಧಿಕಾರಿಗಳ ತಂಡಕ್ಕೆ ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ಬಿ ಕಾವೇರಿ ಅವರು ಅದೇಶ ಹೊರಡಿಸಿದ್ದಾರೆ. 
ಹನೂರು ವಿಧಾನ ಸಭಾ ಕ್ಷೇತ್ರ ತಂಡ 1:- ಮೊದಲನೇ ಪಾಳಿಗೆ ಶಿವಮೂರ್ತಿ, ಮಲೆ ಮಹದೇಶ್ವರ ಬೆಟ್ಟ ಠಾಣೆ(9964305145), ಲಿಂಗರಾಜು ಡಿ.ಎ.ಆರ್ ಚಾಮರಾಜನಗರ(948185251), ಪ್ರಶಾಂತ್ ಮಲೆ ಮಹದೇಶ್ವರ ಬೆಟ್ಟ ಠಾಣೆ(8152834383) ಎರಡನೇ ಪಾಳಿಗೆ ಶಂಕರ, ರಾಮಾಪುರ ಠಾಣೆ(9986456268), ಶಿವಕುಮಾರ್ ಡಿ.ಎ.ಆರ್ ಚಾಮರಾಜನಗರ(9886588050), ಆನಂದ್ ಕುಮಾರ್ ರಾಮಾಪುರ ಠಾಣೆ(9945839026), ಮೂರನೇ ಪಾಳಿಗೆ ರವಿ, ಹನೂರು ಠಾಣೆ(8151444277), ಕುಮಾರಸ್ವಾಮಿ ಡಿ.ಎ.ಆರ್ ಚಾಮರಾಜನಗರ(9743270801), ಮಂಜುನಾಥ ಹನೂರು ಠಾಣೆ(9980747646) ನೇಮಕವಾಗಿದ್ದಾರೆ. 
ತಂಡ 2:- ಮೊದಲನೇ ಪಾಳಿಗೆ ವೆಂಕಟಾಚಲ, ಕೊಳ್ಳೇಗಾಳ ಪಟ್ಟಣ ಠಾಣೆ(9741930599), ವಿವೇಕಾನಂದ, ಕೊಳ್ಳೇಗಾಲ ಪಟ್ಟಣ ಠಾಣೆ, ಎರಡನೇ ಪಾಳಿಗೆ ಕುಮಾರ, ಕೊಳ್ಳೇಗಾಳ ಪಟ್ಟಣ ಠಾಣೆ(8105423820), ಮಾದೇಶ, ಕೊಳ್ಳೇಗಾಳ ಪಟ್ಟಣ ಠಾಣೆ, ಮೂರನೇ ಪಾಳಿಗೆ ಕೃಷ್ಣಮೂರ್ತಿ ಮತ್ತು ಕುಮಾರ್ ಯಳಂದೂರು ಠಾಣೆ ನೇಮಕವಾಗಿದ್ದಾರೆ.
ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರ ತಂಡ 1:- ಮೊದಲನೇ ಪಾಳಿಗೆ ಶಂಕರಪ್ಪ, ಕೊಳ್ಳೇಗಾಲ ಪಟ್ಟಣ ಠಾಣೆ(9449217452), ವಿ.ಮಾದೇಶ್ ಡಿ.ಎ.ಆರ್ ಚಾಮರಾಜನಗರ(9986601203), ಶಿವಕುಮಾರ್, ಕೊಳ್ಳೇಗಾಳ ಪಟ್ಟಣ ಠಾಣೆ(9008081152), ಎರಡನೇ ಪಾಳಿಗೆ ಇಲಿಯಾಸ್ ಪಾಷಾ, ಯಳಂದೂರು ಠಾಣೆ(9449203272), ಶಿವಾಜಿ ಡಿ.ಎ.ಆರ್ ಚಾಮರಾಜನಗರ(9900719285), ರಾಜೇಶ್ ಯಳಂದೂರು ಠಾಣೆ(8861994932), ಮೂರನೇ ಪಾಳಿಗೆ ಈರಪ್ಪ, ಮಾಂಬಳ್ಳಿ ಠಾಣೆ(9902646826), ನಾಗರಾಜು, ಡಿ.ಎ.ಆರ್ ಚಾಮರಾಜನಗರ (9986757968), ಮಹದೇವಸ್ವಾಮಿ, ಮಾಂಬಳ್ಳಿ ಠಾಣೆ(9916472468) ನೇಮಕವಾಗಿದ್ದಾರೆ.
ತಂಡ 2:- ಮೊದಲನೇ ಪಾಳಿಯ ಚನ್ನಪ್ಪ, ಮಾಂಬಳ್ಳಿ ಠಾಣೆ(9972836795), ನಾಗರಾಜು, ಕೊಳ್ಳೇಗಾಲ ಪಟ್ಟಣ ಠಾಣೆ, ಎರಡನೇ ಪಾಳಿಗೆ ಕುಮಾರ, ಮಾಂಬಳ್ಳಿ ಠಾಣೆ(9902781761), ಕಿಶೋರ್ ಕುದೇರು ಠಾಣೆ (8296706343), ಮೂರನೇ ಪಾಳಿಗೆ ಸೋಮಣ್ಣ, ಸಂತೇಮರಹಳ್ಳಿ ಠಾಣೆ(8660244006), ಪುಟ್ಟಸ್ವಾಮಿ, ಕುದೇರು ಠಾಣೆ(8151848755) ನೇಮಕವಾಗಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ ತಂಡ 1:- ಮೊದಲನೇ ಪಾಳಿಗೆ ವಿನಯಕುಮಾರ, ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ(8139918818), ಹರಿಪ್ರಸಾದ್, ಡಿ.ಎ.ಆರ್ ಚಾಮರಾಜನಗರ(9980230928), ಎರಡನೇ ಪಾಳಿಗೆ ಸುರೇಶ್ ಯಾದವ್, ಚಾಮರಾಜನಗರ ಗ್ರಾಮಾಂತರ ಠಾಣೆ(9448025351), ಶಿವಾನಂದಸ್ವಾಮಿ, ಡಿ.ಎ.ಆರ್ ಚಾಮರಾಜನಗರ(9880870986), ಮೂರನೇ ಪಾಳಿಗೆ ಮಹೇಶ, ಚಾಮರಾಜನಗರ ಪೂರ್ವ ಠಾಣೆ(8073254252), ನಾಗರಾಜು ಡಿ.ಎ.ಆರ್ ಚಾಮರಾಜನಗರ(8884902450) ನೇಮಕವಾಗಿದ್ದಾರೆ.
ತಂಡ 2:- ಮೊದಲನೇ ಪಾಳಿಗೆ ಲೋಕೇಶ್, ಚಾಮರಾಜನಗರ ಟೌನ್ ಠಾಣೆ(7019842289), ಎರಡನೇ ಪಾಳಿಗೆ ಎಂ.ಆರ್ ಮಹದೇವ ಸ್ವಾಮಿ, ಸಂತೇಮರಹಳ್ಳಿ ಠಾಣೆ(9945474581), ಮೂರನೇ ಪಾಳಿಗೆ ಶಿವಕುಮಾರಸ್ವಾಮಿ, ಕುದೇರು ಪೊಲೀಸ್ ಠಾಣೆ(9591595728) ನೇಮಕವಾಗಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ತಂಡ 1:- ಮೊದಲನೇ ಪಾಳಿಗೆ ಸುಕೇಶ, ಗುಂಡ್ಲುಪೇಟೆ ಠಾಣೆ(9886360747), ಎರಡನೇ ಪಾಳಿಗೆ ನಾಗೇಂದ್ರ, ಚಾಮರಾಜನಗರ(9964865069), ಮೂರನೇ ಪಾಳಿಗೆ ಸ್ವಾಮಿ ಬೇಗೂರು ಪೊಲೀಸ್ ಠಾಣೆ(9606569436ಮತ್ತು9743380508) ನೇಮಕವಾಗಿದ್ದಾರೆ.
ತಂಡ 2:- ಮೊದಲನೇ ಪಾಳಿಗೆ ಮಹದೇವಶೆಟ್ಟಿ, ಗುಂಡ್ಲುಪೇಟೆ ಪೊಲೀಸ್ ಠಾಣೆ(8550892149), ಮಹದೇವ, ಡಿ.ಎ.ಆರ್ ಚಾಮರಾಜನಗರ(9739092295), ಎರಡನೇ ಪಾಳಿಗೆ ಚಾಮರಾಜು, ತೆರಕಣಾಂಬಿ ಪೊಲೀಸ್ ಠಾಣೆ(8197712335), ನಾಗಣ್ಣ ಜಿ.ಪಿ, ತೆರಕಣಾಂಬಿ ಪೊಲೀಸ್ ಠಾಣೆ(8746929094), ಮೂರನೇ ಪಾಳಿಗೆ ಶಿವಪ್ರಸಾದ್, ಡಿ.ಎ.ಆರ್ ಚಾಮರಾಜನಗರ(9916754930), ಕೆ.ಜಿ ಕೃಷ್ಣಮೂರ್ತಿ, ಗುಂಡ್ಲುಪೇಟೆ ಪೊಲೀಸ್ ಠಾಣೆ(7022925536) ನೇಮಕವಾಗಿದ್ದಾರೆ.


ಎಸ್.ಎಸ್.ಎಲ್.ಸಿ ಪರೀಕ್ಷಾ ಮೌಲ್ಯಮಾಪನ ಕೇಂದ್ರ ಸುತ್ತಲೂ ನಿಷೇದಾಜ್ಞೆ

ಚಾಮರಾಜನಗರ, ಏ. 14  ಚಾಮರಾಜನಗರ ಪಟ್ಟಣದ 6 ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮೌಲ್ಯಮಾಪನ ನಡೆಯಲಿರುವ ಹಿನ್ನಲೆಯಲ್ಲಿ ಮೌಲ್ಯಮಾಪನದ ಕೇಂದ್ರದ 200 ಮೀ. ಸುತ್ತಲ ಪ್ರದೇಶದಲ್ಲಿ  ಏಪ್ರಿಲ್ 16 ರಿಂದ 24ರವರೆಗೆ ಬೆಳಗ್ಗೆ 6ರಿಂದ ಸಂಜೆ 6ಗಂಟೆಯವರೆಗೆ ಸಾರ್ವಜನಿಕ ನಿಷೇದಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ನಿಷೇದಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ನಗರದ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ, ಸೆಂಟ್ ಜೋಸೆಫ್ ಪ್ರೌಢಶಾಲೆ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ಸೆಂಟ್ ಪೌಲ್ ಪ್ರೌಢಶಾಲೆ, ಸಿ.ಆರ್. ಬಾಲರ ಪಟ್ಟಣ ಪ್ರೌಢಶಾಲೆ, ಜೆ.ಎಸ್.ಎಸ್ ಬಾಲಕಿಯರ ಪ್ರೌಢಶಾಲೆ ಪರೀಕ್ಷಾ ಮೌಲ್ಯಮಾಪನ ಕೇಂದ್ರಗಳಾಗಿವೆ.
ಪರೀಕ್ಷಾ ಮೌಲ್ಯಮಾಪನ ಕಾರ್ಯವು ನ್ಯಾಯೋಚಿತವಾಗಿ ನಡೆಯಲು, ಮೌಲ್ಯಮಾಪನ ಕೇಂದ್ರಗಳಿಗೆ ಅನಧಿಕೃತ ವ್ಯಕ್ತಿಗಳು ಸಾರ್ವಜನಿಕರು, ಪ್ರಚಾರಕ್ಕಾಗಿ ಬರುವ ಜನಪ್ರತಿನಿಧಿಗಳ ಪ್ರವೇಶವನ್ನು ನಿಷೇದಿಸಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ನಿಷೇದಾಜ್ಞೆ ವಿಧಿಸಲಾಗಿದೆ. 
ಈ ಆದೇಶವು ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿತರಾದ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಅನ್ವಯಿಸುವುದಿಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು