ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
ಇಪ್ಪತ್ತಮೂರು ನಾಮಪತ್ರ ಸಲ್ಲಿಕೆ
ಚಾಮರಾಜನಗರ, ಏ. 23 :- ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಐದನೇ ದಿನವಾದ ಇಂದು ಜಿಲ್ಲೆಯಲ್ಲಿ ಇಪ್ಪತ್ತಮೂರು ನಾಮಪತ್ರ ಸಲ್ಲಿಕೆಯಾಗಿದೆ.
ಹನೂರು ವಿಧಾನಸಭಾ ಕ್ಷೇತ್ರದಿಂದ ಎಲ್.ಎ.ಡಿ (ಲೋಕ್ ಆವಾಜ್ ದಳ್) ಅಭ್ಯರ್ಥಿಯಾಗಿ ಎಸ್.ಗಂಗಾಧರ, ಭಾರತೀಯ ಜನತಾ ಪಕ್ಷದಿಂದ ಪ್ರೀತನ್ ಕೆ.ಎನ್, ಎಂ.ಇ.ಪಿ ಅಭ್ಯರ್ಥಿಯಾಗಿ ಪ್ರದೀಪ್ ಕುಮಾರ್ ಎಂ., ಜನತಾದಳ (ಜಾತ್ಯಾತೀತ) ಅಭ್ಯರ್ಥಿಯಾಗಿ ಎಂ.ಆರ್ ಮಂಜುನಾಥ್, ಪಕ್ಷೇತರ ಅಭ್ಯರ್ಥಿಗಳಾಗಿ ಸಿದ್ದಪ್ಪ.ಆರ್, ಆರ್.ಮಹೇಶ, ಜೆ.ಜಯಪ್ರಕಾಶ್ ಎಂಬುವರು ತಲಾ ಒಂದು ನಾಮಪತ್ರ ನಾಮಪತ್ರ ಸಲ್ಲಿಸಿದ್ದಾರೆ.ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಎನ್.ಮಹೇಶ್ ಅವರು ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಎಂ.ಹೊನ್ನೂರಯ್ಯ ಅವರು ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಆಲ್ ಇಂಡಿಯ ಮಹಿಳಾ ಎಂಪವರ್‍ಮೆಂಟ್ ಪಾರ್ಟಿಯಿಂದ ಎಂ.ಆರ್ ಸರಸ್ವತಿ, ಪಕ್ಷೇತರ ಅಭ್ಯರ್ಥಿಯಾಗಿ ಸುರೇಶ ಬಿ.ಎನ್ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಆಲ್ ಇಂಡಿಯಾ ಮಹಿಳಾ ಎಂಪವರ್ ಪಾರ್ಟಿ ಅಭ್ಯರ್ಥಿಯಾಗಿ ಏ.ಜಿ. ರಾಮಚಂದ್ರರಾವ್, ಪಕ್ಷೇತರ ಅಭ್ಯರ್ಥಿಯಾಗಿ ಬಿ.ಸಿದ್ದಯ್ಯ, ಬಿ.ಸಿ.ಶೇಖರ ರಾಜು, ಪ್ರಜಾಪರಿವರ್ತನ ಪಾರ್ಟಿ ಅಭ್ಯರ್ಥಿಯಾಗಿ ಕಾಂತರಾಜ ಸಿ.ಜೆ, ಬಹುಜನ ಸಮಾಜ ಪಾರ್ಟಿಯಿಂದ ಎಸ್.ಗುರುಪ್ರಸಾದ್ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಸಿ.ಮೋಹನ ಕುಮಾರಿ ಉರುಫ್ ಗೀತಾ ಅವರು ನಾಲ್ಕು ನಾಮಪತ್ರ ಸಲ್ಲಿದ್ದಾರೆ.
ಒಟ್ಟಾರೆ ಇಂದು ಹದಿನೇಳು ಅಭ್ಯರ್ಥಿಗಳಿಂದ ಒಟ್ಟು ಇಪ್ಪತ್ತಮೂರು ನಾಮಪತ್ರ ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.
ಅಮಾನತು
ಚಾಮರಾಜನಗರ, ಏ. 23 - ಚಾಮರಾಜನಗರ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಪ್ರಥಮ ದರ್ಜೆ ಲೆಕ್ಕ ಸಹಾಯಕರಾದ ಕೆ.ಕೃಷ್ಣನಾಯಕ್ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.ಕಳೆದ ಏಪ್ರಿಲ್ 9ರಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಕಚೇರಿಗೆ ದಾಳಿ ಮಾಡಿದ ವೇಳೆ ಕೆ.ಕೃಷ್ಣನಾಯಕ್ ಅವರ ಬಳಿ ಹೆಚ್ಚುವರಿ ಅಕ್ರಮ ಹಣ ಇದ್ದು ಇದನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1998ರ ಅನ್ವಯ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನದಲ್ಲಿಟ್ಟಿದ್ದ ಕಾರಣ ದಸ್ತಗಿರಿ ಮಾಡಿದ ಏಪ್ರಿಲ್ 9ರಿಂದಲೇ ಪೂರ್ವಾನ್ವಯವಾಗುವಂತೆ ಅಮಾನತುಗೊಳಿಸಿರುವುÅದಾಗಿ ಆದೇಶದಲ್ಲಿ ತಿಳಿಸಲಾಗಿದೆ.
No comments:
Post a Comment