Saturday, 7 April 2018

ನೈತಿಕ ಮತದಾನಕ್ಕೆ ಉತ್ತೇಜಿಸಲು ವಿದ್ಯಾರ್ಥಿಗಳಿಗೆ ಜಿ.ಪಂ. ಸಿಇಓ ಹರೀಶ್ ಕುಮಾರ್ ಸಲಹೆ (06-04-2018)



                             ವಿಧಾನಸಭಾ ಚುನಾವಣೆ – 2018:


ನೈತಿಕ ಮತದಾನಕ್ಕೆ ಉತ್ತೇಜಿಸಲು ವಿದ್ಯಾರ್ಥಿಗಳಿಗೆ ಜಿ.ಪಂ. ಸಿಇಓ ಹರೀಶ್ ಕುಮಾರ್ ಸಲಹೆ

ಚಾಮರಾಜನಗರ, ಏ. 06 - ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಮುಕ್ತ ಹಾಗೂ ನೈತಿಕವಾಗಿ ಮತದಾನ ಮಾಡುವಂತೆ ಉತ್ತÉೀಜಿಸುವ ದಿಸೆಯಲ್ಲಿ ವಿದ್ಯಾರ್ಥಿಗಳು ಸಹ ಪರಿಣಾಮಕಾರಿಯಾಗಿ ಜಾಗೃತಿ ಕೆಲಸವನ್ನು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಃಣಾಧಿಕಾರಿ ಹಾಗೂ ಸ್ವೀಪ್ ಸಮಿತಿಯ ಜಿಲ್ಲಾ ಮುಖ್ಯಸ್ಥರೂ ಆದ ಡಾ. ಕೆ. ಹರೀಶ್ ಕುಮಾರ್ ಸಲಹೆ ಮಾಡಿದರು.
ನಗರದ ಜೆ ಎಚ್ ಪಟೇಲ್ ಸಭಾಂಗಣದಲ್ಲಿ ಇಂದು ಸ್ವೀಪ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಜಾಥಾ ನಡೆಸಿ ಸಮಾವೇಶಗೊಂಡ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯುವ ಮತದಾರರು ಜಾಗೃತರಾದರೆ ಜನತಂತ್ರ ವ್ಯವಸ್ಥೆ ಸದೃಢಗೊಳ್ಳುತ್ತದೆ. ಯುವ ಶಕ್ತಿಯು ಅತ್ಯಂತ ಪ್ರಭಾವಶಾಲಿಯಾಗಿದೆ. ಯುವಜನರು ವಿವೇಚನೆಯಿಂದ ವರ್ತಿಸಿದರೆ ಉತ್ತಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಮತದಾನದಂತಹ ಪ್ರಮುಖ ಪ್ರಕ್ರಿಯೆಯಲ್ಲಿ ಯುವ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹರೀಶ್ ಕುಮಾರ್ ತಿಳಿಸಿದರು.
ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಬಾರದು. ಮುಕ್ತ, ಪಾರದರ್ಶಕ ಚುನಾವಣೆ ಪ್ರಕ್ರಿಯೆಗೆ ಪ್ರತಿಯೊಬ್ಬರ ಪಾತ್ರವೂ ಅಗತ್ಯವಾಗಿದೆ. ಯಾವುದೇ ಮುಲಾಜಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸಲು ವಿದ್ಯಾರ್ಥಿಗಳು ಅವರ ಪೋಷಕರು ಹಾಗೂ ಸುತ್ತಮುತ್ತಲಿನ ಜನರಿಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಹೀಗಾಗಿ ನೈತಿಕ ಮತದಾನಕ್ಕೆ ಪ್ರೋತ್ಸಾಹಿಸುವ ಕೆಲಸದಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕೆಂದು ಹರೀಶ್ ಕುಮಾರ್ ಸಲಹೆ ಮಾಡಿದರು.
ಮತದಾನಕ್ಕೆ ಕೈಗೊಂಡಿರುವ ಸಿದ್ಧತೆಗಳು ಹಾಗೂ ಎಲ್ಲ ವರ್ಗದ ಜನರೂ ಮತದಾನದಲ್ಲಿ ಪಾಲ್ಗೊಳ್ಳಲು ಪೂರಕವಾಗಿರುವಂತೆ ಕೈಗೊಳ್ಳಲಾಗಿರುವ ವ್ಯವಸ್ಥÉಗಳ ಬಗ್ಗೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಒಳಗೊಂಡ ಓಟರ್ ಗೈಡ್ ಸಹ ಬಿಡುಗಡೆ ಮಾಡಲಾಗುತ್ತದೆ. ಎಲ್ಲರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಬೇಕು. ಯುವ ಜನರು ಜಾಗೃತಿ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕು ಎಂದು ಹರೀಶ್ ಕುಮಾರ್ ಮನವಿ ಮಾಡಿದರು.
ಇದೇವೇಳೆ ವಿದ್ಯಾಥಿಗಳಿಗೆ ಮಾಸ್ಟರ್ ಟ್ರೈನರ್ ಶ್ರೀನಿವಾಸ್ ಅವರು ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಕೂಡ ಪ್ರಾತ್ಯಕ್ಷಿಕೆ ಮೂಲಕ ಮತಯಂತ್ರ ಹಾಗೂ ವಿವಿ ಪ್ಯಾಟ್ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ಪಡೆದರು.
ಚಾಮರಾಜನಗರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಹಾಜರಿದ್ದರು.
ಇದಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಾಲಯ ಬಳಿ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಮತದಾನ ಮಹತ್ವ ಕುರಿತು ನಡೆಸಿದ ಬೃಹತ್ ಜಾಥಾಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಕುಮಾರ್ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ನೈತಿಕವಾಗಿ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ತದನಂತರ ವಿದ್ಯಾರ್ಥಿಗಳು ಪ್ರಮುಖ ಬೀದಿಯಲ್ಲಿ ಜಾಥಾ ನಡೆಸಿದರು. ನಮ್ಮ ಮತ ನಮ್ಮ ಹಕ್ಕು ಎಂಬ ಘೋಷವಾಕ್ಯವನ್ನು ಮೊಳಗಿಸಿದರು. ದಾರಿಯುದ್ದಕ್ಕೂ ವಿದ್ಯಾರ್ಥಿಗಳು ಮತದಾನದ ಮಹತ್ವ ಸಾರುವ ವಿವಿಧ ಸಂದೇಶಗಳ ಭಿತ್ತಿ ಫಲಕವನ್ನು ಪ್ರದರ್ಶಿಸಿ ಗಮನ ಸೆಳೆದರು.


ಗುಂಡ್ಲುಪೇಟೆ : ಮತದಾನದ ಮಹತ್ವ ಸಾರಲು ಜಾಗೃತಿ ಜಾಥಾ

ಚಾಮರಾಜನಗರ, ಏ. 06- ಮತದಾನದ ಪವಿತ್ರ ಕಾರ್ಯದ ಕುರಿತು ಮಹತ್ವ ತಿಳಿಸುವ ಉದ್ದೇಶದಿಂದ ಗುಂಡ್ಲುಪೇಟೆ ತಾಲೂಕು ಸ್ವೀಪ್ ಸಮಿತಿಯ ವತಿಯಿಂದ ಗುಂಡ್ಲುಪೇಟೆ ಪಟ್ಟಣದಲ್ಲಿ ಇತ್ತೀಚೆಗೆ ಬೃಹತ್ ಜಾಥಾ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು.
ಪಟ್ಟಣದ ಗುರುಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆದ ಡಾ. ಕೆ. ಹರೀಶ್ ಕುಮಾರ್ ಮತದಾರರ ಪಟ್ಟಿಗೆ ಅರ್ಹರು ಸೇರ್ಪಡೆಗೊಳ್ಳಲು ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು. ಮನೆಮನೆಗೆ ಭೇಟಿ ನೀಡಿ ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಮತಗಟ್ಟೆ ಮಟ್ಟದ ಜಾಗೃತಿ ಗುಂಪುಗಳು ಮತದಾರರ ಜಾಗೃತಿಗಾಗಿ ಕೈಗೊಳ್ಳಬೇಕಿರುವ ಕಾರ್ಯವಿಧಾನಗಳ ಬಗ್ಗೆ ತಿಳಿದುಕೊಂಡು ವ್ಯಾಪಕವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಹರೀಶ್ ಕುಮಾರ್ ಅವರು ತಿಳಿಸಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕವಾಗಿ ಭಾಗಿಯಾಗುವ ಮೂಲಕ ಮತದಾರರನ್ನು ಜಾಗೃತಿಗೊಳಿಸಬೇಕು. ನೈತಿಕವಾಗಿ ಪ್ರತಿಯೊಬ್ಬರೂ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ಸಿಇಓ ಅವರು ತಿಳಿಸಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಕೆ.ಎಚ್. ಸತೀಶ್ ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನದ ಕುರಿತು ಮಾಹಿತಿ ನೀಡುವ ಫಲಕಗಳನ್ನು ಹಿಡಿದು ಜಾಥಾ ನಡೆಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಇತರರು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

   

ಏಪ್ರಿಲ್ 8ರಂದು ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಮಿಂಚಿನ ನೋಂದಣಿ ಅಭಿಯಾನ

            ಚಾಮರಾಜನಗರ, ಏ. 06 :-  ಚುನಾವಣಾ ಆಯೋಗವು ಆಯಾ ಮತ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಏಪ್ರಿಲ್ 8ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಆಯಾ ಮತಗಟ್ಟೆಗಳಲ್ಲಿ ಮಿಂಚಿನ ನೋಂದಣಿ ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.
ಅಂದು ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಜರಿದ್ದು ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆಯವರೆಗೆ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅರ್ಜಿ ಸ್ವೀಕರಿಸಲಿದ್ದಾರೆ.  ನಿಯಮಾನುಸಾರ ಪರಿಶೀಲಿಸಿ ಅರ್ಹರನ್ನು ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ.
ಈ ಅವಕಾಶವನ್ನು ಜಿಲ್ಲೆಯ ಜನತೆ ಸದುಪಯೋಗ ಮಾಡಿಕೊಳ್ಳಬೇಕು.  ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಹಮ್ಮಿಕೊಂಡಿರುವ ಮಿಂಚಿನ ನೋಂದಣಿ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ಬಿ ಕಾವೇರಿ ಅವರು  ಮನವಿ ಮಾಡಿದ್ದಾರೆ.

ಕಚೇರಿ ಸ್ಥಳಾಂತರ

ಚಾಮರಾಜನಗರ, ಏ. 06 -  ಜಿಲ್ಲಾಡಳಿತ ಭವನದ 2ನೇ ಮಹಡಿಯ ಕೊಠಡಿ ಸಂಖ್ಯೆ 214  ಕಾರ್ಯ ನಿರ್ವಹಿಸುತ್ತಿದ್ದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯು ಕೊಠಡಿ ಸಂಖ್ಯೆ 217ಕ್ಕೆ ಸ್ಥಳಾಂತರಗೊಂಡಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆ – 2018 ಪರಿಷ್ಕøತ ವೀಡಿಯೋ ಸರ್ವೈಲೆನ್ಸ್ ತಂಡ 

ಚಾಮರಾಜನಗರ, ಏ. 07 - ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಲು ನೇಮಕ ಮಾಡಿರುವ ವಿಡಿಯೋ ಸರ್ವೈಲೆನ್ಸ್ ಅಧಿಕಾರಿಗಳ ತಂಡವನ್ನು ಬಾಗಶಃ ಮಾರ್ಪಡಿಸಿ  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.

ಕೊಳ್ಳೇಗಾಲ ತಾಲೂಕು - ಹನೂರು ವಿಧಾನಸಭಾ ಕ್ಷೇತ್ರ – ತಂಡ 1:- ಮೇಲ್ವಿಚಾರಕರಾಗಿ ಎಚ್. ಕ್ಯಾತ, (ಬಿಆರ್‍ಸಿ), ತಾಲೂಕು ಯೋಜನಾ ಸಮನ್ವಯಾಧಿಕಾರಿ, ಹನೂರು ಶೈಕ್ಷಣಿಕ ವಲಯ, ಹನೂರು (ಮೊ. 9480695113, 9663182766), ಮಹೇಶ್ (ಮೊ.9986686773) ಅವರನ್ನು ವೀಡಿಯೋಗ್ರಾಫರ್ ಆಗಿ ನೇಮಕ ಮಾಡಿದೆ.

ತಂಡ 2:-  ಮೇಲ್ವಿಚಾರಕರಾಗಿ ನಂಜುಂಡಶೆಟ್ಟಿ, ರಾಜಸ್ವ ನಿರೀಕ್ಷಕರು, ಹನೂರು ಟೌನ್ ಪಂಚಾಯಿತಿ (ಮೊ. 9620626698, 8762783666), ಅರುಣ್ (ಮೊ.9620486985) ಅವರನ್ನು ವೀಡಿಯೋಗ್ರಾಫರ್ ಆಗಿ ನೇಮಕ ಮಾಡಿದೆ.
ತಂಡ 3:-  ಮೇಲ್ವಿಚಾರಕರಾಗಿ ಬಿ. ಸರ್ವೇಶ್ ಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಕೊಳ್ಳೇಗಾಲ (ಮೊ. 953083695), ವಿನೋದ್ (ಮೊ.9379292571) ಅವರನ್ನು ವೀಡಿಯೋಗ್ರಾಫರ್ ಆಗಿ ನೇಮಕ ಮಾಡಿದೆ.
ತಂಡ 4:-  ಮೇಲ್ವಿಚಾರಕರಾಗಿ ಡಿ. ರಾಜು, ಕಿರಿಯ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಯಳಂದೂರು (ಮೊ. 9900478557), ರೋಹಿತ್ (ಮೊ. 8884110084) ಅವರನ್ನು ವೀಡಿಯೋಗ್ರಾಫರ್ ಆಗಿ ನೇಮಕ ಮಾಡಿದೆ.

ಕೊಳ್ಳೇಗಾಲ (ಎಸ್.ಸಿ) ವಿಧಾನಸಭಾ ಕ್ಷೇತ್ರ – ಚಾಮರಾಜನಗರ ತಾಲೂಕು- ಸಂತೆಮರಹಳ್ಳಿ                    ತಂಡ 1:-  ಮೇಲ್ವಿಚಾರಕರಾಗಿ ಮಂಜುನಾಥಸ್ವಾಮಿ, ಎಜುಕೇಷನ್ ಕೋ ಆರ್ಡಿನೇಟರ್, ಬಿಇಓ ಕಚೇರಿ, ಯಳಂದೂರು (ಮೊ. 9480366979), ಎಂ. ದಿಲೀಪ್ (ಮೊ. 9620797963) ಅವರನ್ನು ವೀಡಿಯೋಗ್ರಾಫರ್ ಆಗಿ ನೇಮಕ ಮಾಡಿದೆ.

ತಂಡ 2:-  ಮೇಲ್ವಿಚಾರಕರಾಗಿ ಜಾರ್ಜ್ ಫಿಲಿಪ್, ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಣ ಇಲಾಖೆ, ಚಾಮರಾಜನಗರ (ಮೊ. 9740123899), ಶಿವಕುಮಾರ್ (ಮೊ.9480733319, 9035003319) ಅವರನ್ನು ವೀಡಿಯೋಗ್ರಾಫರ್ ಆಗಿ ನೇಮಕ ಮಾಡಿದೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರ – ಚಾಮರಾಜನಗರ ತಾಲೂಕು - ತಂಡ 1:-  ಮೇಲ್ವಿಚಾರಕರಾಗಿ ಸಿ. ಶಿವಸ್ವಾಮಿ, ಉಪನ್ಯಾಸಕರು, ಪದವಿಪೂರ್ವ ಕಾಲೇಜು, ಅಮಚವಾಡಿ, ಚಾ.ನಗರ ತಾಲೂಕು (ಮೊ. 7892474589), ನಾಗೇಂದ್ರ (ಮೊ.9731899580) ಅವರನ್ನು ವೀಡಿಯೋಗ್ರಾಫರ್ ಆಗಿ ನೇಮಕ ಮಾಡಿದೆ.

ತಂಡ 2:-  ಮೇಲ್ವಿಚಾರಕರಾಗಿ ಎ.ಡಿ. ನಾಗರಾಜು, ಕಿರಿಯ ಅಭಿಯಂತರರು, ಪಿಆರ್‍ಇಡಿ, ಚಾಮರಾಜನಗರ (ಮೊ. 9948608628), ಅಭಿ (ಮೊ.9742567074) ಅವರನ್ನು ವೀಡಿಯೋಗ್ರಾಫರ್ ಆಗಿ ನೇಮಕ ಮಾಡಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ – ಗುಂಡ್ಲುಪೇಟೆ ತಾಲೂಕು - ತಂಡ 1:-  ಮೇಲ್ವಿಚಾರಕರಾಗಿ ಬಿ. ಸೋಮಸುಂದರ್, ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಗುಂಡ್ಲುಪೇಟೆ (ಮೊ. 8277930778), ಓರ್ವ ವೀಡಿಯೋಗ್ರಾಫರ್ ಅವರನ್ನು ನೇಮಕ ಮಾಡಿದೆ.
ತಂಡ 2:-  ಮೇಲ್ವಿಚಾರಕರಾಗಿ ಸಿದ್ದಪ್ಪ, ಸಹಾಯಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಗುಂಡ್ಲುಪೇಟೆ ತಾಲೂಕು (ಮೊ. 9448200804), ಒಬ್ಬ ವೀಡಿಯೋಗ್ರಾಫರ್ ಅವರನ್ನು ನೇಮಕ ಮಾಡಿದೆ.



ಚುನಾವಣಾ ನಿರತ ಅಧಿಕಾರಿ ನೌಕರರ ಆರೋಗ್ಯ ಚಿಕಿತ್ಸೆಗೆ ವೈದ್ಯಕೀಯ ತಂಡ ನಿಯೋಜನೆ

ಚಾಮರಾಜನಗರ, ಏ. 07 - ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನೇಮಿಸಲಾಗಿರುವ  ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ತಂಡ, ಸ್ಟ್ಯಾಟಿಕ್ ಸರ್ವೈಲೆನ್ಸ್ ತಂಡ, ಎಂಸಿಸಿ ತಂಡ ಹಾಗೂ ಚೆಕ್ ಪೋಸ್ಟ್ ಅಧಿಕಾರಿಗಳು ಹಾಗೂ ನೌಕರರಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಕ್ಷಿಪ್ತಗತಿಯಲ್ಲಿ ಪ್ರಥಮ ಚಿಕಿತ್ಸೆ ನೀಡುವ ಸಲುವಾಗಿ ವೈದ್ಯಕೀಯ ತಂಡವನ್ನು ನಿಯೋಜಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರ – ಡಾ. ರೂಪ, ಆರ್‍ಬಿಎಸ್‍ಕೆ ವೈದ್ಯಕೀಯ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕೊಳ್ಳೇಗಾಲ ತಾಲೂಕು (ಮೊ.7022706895), ಡಾ. ಮರಿಯಪ್ಪ ಎಸ್. ರೋಟಿ, ಆರ್‍ಬಿಎಸ್‍ಕೆ ವೈದ್ಯಕೀಯ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕೊಳ್ಳೇಗಾಲ ತಾಲೂಕು (ಮೊ.8762950072),
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ – ಡಾ. ನಾಗೇಂದ್ರ, ಆರ್‍ಬಿಎಸ್‍ಕೆ ವೈದ್ಯಕೀಯ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಯಳಂದೂರು ತಾಲೂಕು (ಮೊ.9964289023),
ಡಾ. ಪ್ರವೀಣ್ ಕುಮಾರ್ ಆರ್‍ಬಿಎಸ್‍ಕೆ ವೈದ್ಯಕೀಯ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಯಳಂದೂರು ತಾಲೂಕು (ಮೊ.9481532801),
ಚಾಮರಾಜನಗರ ವಿಧಾನಸಭಾ ಕ್ಷೇತ್ರ – ಡಾ. ಜಿ. ಶ್ರೀಕಾಂತ್, ಆರ್‍ಬಿಎಸ್‍ಕೆ ವೈದ್ಯಕೀಯ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಚಾಮರಾಜನಗರ ತಾಲೂಕು (ಮೊ.8023796718),
ಡಾ. ಗೀತಾರಾಣಿ, ಆರ್‍ಬಿಎಸ್‍ಕೆ ವೈದ್ಯಕೀಯ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಚಾಮರಾಜನಗರ ತಾಲೂಕು (ಮೊ.8884500848, 9036804290),
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ – ಡಾ. ಟಿ. ರವಿ, ಆರ್‍ಬಿಎಸ್‍ಕೆ ವೈದ್ಯಕೀಯ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಗುಂಡ್ಲುಪೇಟೆ ತಾಲೂಕು (ಮೊ.9986403389), ಡಾ. ಸುಕಲ, ಆರ್‍ಬಿಎಸ್‍ಕೆ ವೈದ್ಯಕೀಯ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಗುಂಡ್ಲುಪೇಟೆ ತಾಲೂಕು (ಮೊ.9986126396),
ಪ್ರತಿ ತಂಡದಲ್ಲಿ ಓರ್ವ ಆರ್‍ಬಿಎಸ್‍ಕೆ ಸ್ಟಾಫ್ ನರ್ಸ್, ಅಪ್ತಮೆಟಿಕ್ ಅಸಿಸ್ಟೆಂಟ್ ಇರಲಿದ್ದಾರೆ. ನಿಯೋಜಿಸಿರುವ ವೈದ್ಯ ಅಧಿಕಾರಿಗಳ ತಂಡವು ಚೆಕ್‍ಪೋಸ್ಟ್ ಇನ್ನಿತರ ಕಡೆ ಆಗಾಗ್ಗೆ ಭೇಟಿ ನೀಡಿ ಚುನಾವಣಾ ಕರ್ತವ್ಯ ನಿಯೋಜಿತ ಅಧಿಕಾರಿ ನೌಕರರ ಆರೋಗ್ಯ ತಪಾಸಣೆ ನಡೆಸಿ ಅಗತ್ಯವಿದ್ದಲ್ಲಿ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. 
ಚುನಾವಣಾ ಕರ್ತವ್ಯ ಅಧಿಕಾರಿ ನೌಕರರು ಚಿಕಿತ್ಸೆಗಾಗಿ ಬಂದಾಗ ಆದ್ಯತೆ ಮೇರೆಗೆ ತಪಾಸಣೆ ನಡೆಸಿ ತುರ್ತಾಗಿ ಚಿಕಿತ್ಸೆ ನೀಡಲು ಕ್ರಮವಹಿಸಬೇಕು ಎಂದು ಸಹ ಜಿಲ್ಲಾಧಿಕಾರಿ ಕಾವೇರಿಯವರು ಆದೇಶದಲ್ಲಿ ತಿಳಿಸಿದ್ದಾರೆ.


ಏ. 10ರಂದು ಬಸವೇಶ್ವರ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ

ಚಾಮರಾಜನಗರ, ಏ. 06 - ಜಿಲ್ಲಾಡಳಿತದ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ ಸಂಬಂಧ ಚರ್ಚಿಸುವ ಸಲುವಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 10 ರಂದು ಮಧ್ಯಾಹ್ನ 12 ಗಂಟೆಗೆ  ಪೂರ್ವಭಾವಿ ಸಭೆ ಕರೆಯಲಾಗಿದೆ. 
ಸಮುದಾಯ ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ನಾಗರಿಕರು ಸಭೆಗೆ ಹಾಜರಾಗಿ ಬಸವೇಶ್ವರ ಜಯಂತಿ ಆಚರಣೆ ಸಂಬಂಧ ಸಲಹೆ ನೀಡುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿ ಪ್ರಕಟಣೆ ಕೋರಿದೆ.

ವಿಧಾನಸಭಾ ಚುನಾವಣೆ – 2018
ಮಾನವ ಸರಪಳಿ ಮೂಲಕ ಮತದಾನ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು 

ಚಾಮರಾಜನಗರ, ಏ. 07 - ಪ್ರಜಾಪಭುತ್ವದ ಬಲವರ್ಧನೆಗೆ ಪ್ರತಿಯೊಬ್ಬರೂ ಸಕ್ರಿಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರಿವು ಮೂಡಿಸುವ ಸಲುವಾಗಿ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ಮಾನವ ಸರಪಳಿ ರಚಿಸಿ ಗಮನ ಸೆಳೆದರು.


             ಜೆ.ಎಸ್.ಎಸ್ ಮಹಿಳಾ ಬಿ.ಎಡ್ ಕಾಲೇಜು, ನರ್ಸಿಂಗ್,  ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ನಗರದ ಜೈ ಭುವನೇಶ್ವರಿ ವೃತ್ತ (ಪಚ್ಚಪ್ಪ ವೃತ್ತದಲ್ಲಿ) ಬೃಹತ್ ಮಾನವ ಸರಪಳಿ ರಚಿಸುವ ಮೂಲಕ ಮತದಾನ ಮಹತ್ವವನ್ನು ಸಾರಿದರು
            ಮಾನವ ಸರಪಳಿ ಮಾಡಿ, ನಂತರ ಪುನ: ಬಿ ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಸಮಾವೇಶಗೊಂಡರು.
            ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಜಿಲ್ಲಾ ಅಧ್ಯಕ್ಷರು ಆದ ಡಾ. ಕೆ.ಹರೀಶ್ ಕುಮಾರ್ ಅವರು ಯಾವುದೇ ಆಮಿಷಕ್ಕೆ ಒಳಗಾಗದೆ  ಮತದಾನದದಲ್ಲಿ ಪಾಲ್ಗೊಳ್ಳಲು ಪೋಷಕರಿಗೆ ಹಾಗೂ ನೆರೆಹೊರೆಯವರಿಗೆ ತಿಳಿಸಬೇಕು.  ನೈತಿಕ ಮತದಾನ ಮಾಡಲು ಉತ್ತೇಜಿಸಬೇಕು ಎಂದು ಸಲಹೆ ಮಾಡಿದರು.
            ಬಳಿಕ ಕಾಲೇಜು ವಿದ್ಯಾರ್ಥಿಗಳಿಗೆ, ಇ.ವಿ.ಎಂ ಹಾಗೂ ವಿ.ವಿ ಪ್ಯಾಟ್ (ಮತದಾನ ಖಾತರಿ ಯಂತ್ರ)ದ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.
ಜಿಲ್ಲಾ ಪಂಚಾಯತ್ ಉಪಕಾಯದರ್ಶಿ ಮುನಿರಾಜಪ್ಪ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ರಮೇಶ್ ವಿವಿಧ ಕಾಲೇಜಿನ ಪ್ರಾಂಶುಪಾಲರು, ಹಾಗೂ ಉಪನ್ಯಾಸಕರು ಹಾಜರಿದ್ದರು,




 










   
               











No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು