ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
6 ಅಭ್ಯರ್ಥಿಗಳಿಂದ ಉಮೇದುವಾರಿಕೆ ವಾಪಸ್: ಅಂತಿಮವಾಗಿ ಚುನಾವಣಾ ಕಣದಲ್ಲಿ 43 ಅಭ್ಯರ್ಥಿಗಳು
ಚಾಮರಾಜನಗರ, ಏ. 27:- ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 49 ಅಭ್ಯರ್ಥಿಗಳ ಪೈಕಿ 6 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಅಂತಿಮವಾಗಿ ಚುನಾವಣಾ ಕಣದಲ್ಲಿ ಒಟ್ಟು 43 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇವರ ಪೈಕಿ ಶಿವಸೇನ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶ್ರೀಕಂಠಸ್ವಾಮಿ ಅವರು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಅಂತಿಮವಾಗಿ 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದು, ಅಭ್ಯರ್ಥಿಗಳ ವಿವರ ಇಂತಿದೆ ಸಿ.ಪುಟ್ಟರಂಗಶೆಟ್ಟಿ-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕೆ.ಆರ್.ಮಲ್ಲಿಕಾರ್ಜುನಪ್ಪ-ಭಾರತೀಯ ಜನತಾ ಪಾರ್ಟಿ, ಎ.ಎಂ.ಮಲ್ಲಿಕಾರ್ಜುನ ಸ್ವಾಮಿ-ಬಹುಜನ ಸಮಾಜ ಪಾರ್ಟಿ, ಎಸ್.ಗಣೇಶ್- ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ, ಡಿ.ನಾಗಸುಂದರ-ಭಾರತೀಯ ರಿಪಬ್ಲಿಕನ್ ಪಕ್ಷ, ನಾರಾಯಣ ಸ್ವಾಮಿ.ಜೆ-ಸಾಮಾನ್ಯ ಜನತಾ ಪಾರ್ಟಿ(ಲೋಕ ತಾಂತ್ರಿಕ್), ವಾಟಾಳ್ ನಾಗರಾಜ್-ಕನ್ನಡ ಚಳವಳಿ ವಾಟಾಳ್ ಪಕ್ಷ, ಎಂ.ಆರ್ ಸರಸ್ವತಿ-ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ಎಂ.ಚಿನ್ನಸ್ವಾಮಿ-ಪಕ್ಷೇತರ, ಪ್ರಸನ್ನ ಕುಮಾರ್.ಬಿ- ಪಕ್ಷೇತರ, ಎಂ.ಎಸ್.ಮಲ್ಲಿಕಾರ್ಜುನ್-ಪಕ್ಷೇತರ, ರಂಗಸ್ವಾಮಿ-ಪಕ್ಷೇತರ, ಸುರೇಶ.ಬಿ.ಎನ್-ಪಕ್ಷೇತರ, ಎಂ.ಹೊನ್ನೂರಯ್ಯ-ಪಕ್ಷೇತರ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇವರ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಂ.ರಾಜೇಶ್ ಅವರು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಅಂತಿಮವಾಗಿ 7 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದು ಅವರ ವಿವರ ಇಂತಿದೆ ಎ.ಆರ್.ಕೃಷ್ಣಮೂರ್ತಿ-ಭಾರತೀಂiÀi ರಾಷ್ಟ್ರೀಂiÀi ಕಾಂಗ್ರೆಸ್, ಜಿ.ಎನ್ ನಂಜುಂಡಸ್ವಾಮಿ-ಭಾರತೀಯ ಜನತಾ ಪಕ್ಷ, ಎನ್.ಮಹೇಶ್-ಬಹುಜನ ಸಮಾಜ ಪಕ್ಷ, ಚಿಕ್ಕಸಾವಕ-ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅ.), ನಿಂಗರಾಜ್.ಜಿ-ರಿಪಬ್ಲಿಕನ್ ಸೇನೆ, ಲಕ್ಷ್ಮಿಜಯಶಂಕರ-ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ನಾಗರತ್ನ ಎಂ-ಪಕ್ಷೇತರ, .
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ನಾಮಪತ್ ಸಲ್ಲಿಸಿದ್ದರು. ಇವರ ಪೈಕಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಮಹೇಶ್.ಜಿ ಹಾಗೂ ದುಂಡಯ್ಯ ಅವರು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಅಂತಿಮವಾಗಿ 7 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದು ಅವರ ವಿವರ ಇಂತಿದೆ. ಎಸ್.ಗುರುಪ್ರಸಾದ್-ಬಹುಜನ ಸಮಾಜ ಪಾರ್ಟಿ, ಸಿ.ಎಸ್.ನಿರಂಜನ್ ಕುಮಾರ್-ಭಾರತೀಯ ಜನತಾ ಪಾರ್ಟಿ, ಎಂ.ಸಿ.ಮೋಹನ್ ಕುಮಾರಿ ಉರುಫ್ ಗೀತಾ-ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಸಿ.ಜೆ ಕಾಂತರಾಜ-ಪ್ರಜಾ ಪರಿವರ್ತನ ಪಾರ್ಟಿ, ಎ.ಜಿ.ರಾಮಚಂದ್ರರಾವ್-ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ಬಿ.ಸಿ.ಶೇಖರರಾಜು-ಪಕ್ಷೇತರ, ಬಿ.ಸಿದ್ದಯ್ಯ-ಪಕ್ಷೇತರ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇವರ ಪೈಕಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಪರಿಮಳ ನಾಗಪ್ಪ ಹಾಗೂ ಕೆ.ಸಿದ್ದರಾಜು ಅವರು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಚುನಾವಣಾ ಕಣದಲ್ಲಿ ಅಂತಿಮವಾಗಿ 15 ಅಭ್ಯರ್ಥಿಗಳು ಉಳಿದುಕೊಂಡಿದ್ದು ಅವರ ವಿವರ ಇಂತಿದೆ. ಆರ್.ನರೇಂದ್ರ-ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಪ್ರೀತನ್ ಕೆ.ಎನ್.-ಭಾರತೀಯ ಜನತಾ ಪಕ್ಷ, ಎಂ.ಆರ್.ಮಂಜುನಾಥ್-ಜನತಾ ದಳ(ಜಾತ್ಯಾತೀತ), ಎಸ್.ಗಂಗಾಧರ-ಲೋಕ್ ಆವಾಜ್ ದಳ್, ಪ್ರದೀಪ್ ಕುಮಾರ್ ಎಂ.-ಆಲ್ ಇಂಡಿಯ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, ಬಿ.ಭಾನುಪ್ರಕಾಶ್-ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ, ಆರ್.ಪಿ.ವಿಷ್ಣುಕುಮಾರ್-ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಜಗಮ್, ಡಿ.ಶ್ರೀಕಂಠಸ್ವಾಮಿ-ಸ್ವರಾಜ್ ಇಂಡಿಯಾ, ಜೆ.ಜಯಪ್ರಕಾಶ್- ಪಕ್ಷೇತರ, ಜಾನ್ ಡಾನ್ ಬೋಸ್ಕೋ.ಕೆ-ಪಕ್ಷೇತರ, ಮಹೇಶ-ಪಕ್ಷೇತರ, ಆರ್.ಮಹೇಶ-ಪಕ್ಷೇತರ, ಸಿದ್ದಪ್ಪ.ಆರ್-ಪಕ್ಷೇತರ, ಸೆಲ್ವರಾಜ್.ಎಸ್-ಪಕ್ಷೇತರ, ಜ್ಞಾನಪ್ರಕಾಶ್.ಜೆ-ಪಕ್ಷೇತರ,
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿಗೆ ತರಬೇತಿ: ಕಡ್ಡಾಯ ಹಾಜರಾತಿಗೆ ಜಿಲ್ಲಾಧಿಕಾರಿ ಸೂಚನೆ
ಚಾಮರಾಜನಗರ, ಏ. 28 - ಸಾರ್ವತ್ರಿಕ ವಿಧಾಸಭಾ ಚುನಾವಣೆ ಸಂಬಂಧ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರದ 976 ಮತಗಟ್ಟೆಗಳಿಗೆ ನೇಮಕವಾಗಿರುವ ಮತಗಟ್ಟೆ ಮಟ್ಟದ ಅಧ್ಯಕ್ಷಾಧಿಕಾರಿ (ಪಿಆರ್‍ಒ), ಮತದಾನ ಅಧಿಕಾರಿ ಸಿಬ್ಬಂದಿಗೆ(ಎಪಿಆರ್‍ಒ ಮತ್ತು ಪಿಒ) ವಿವಿಧ ದಿನಗಳಂದು ತರಬೇತಿ ಏರ್ಪಡಿಸಲಾಗಿದೆ. ಏಪ್ರಿಲ್ 30 ರಂದು ಬೆಳಗ್ಗೆ 9 ಗಂಟೆಗೆ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣದ ವಾಸವಿ ವಿದ್ಯಾ ಕೇಂದ್ರದಲ್ಲಿ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ನಂಜನಗೂಡು ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ. ಮೇ 1 ರಂದು ಬೆಳಗ್ಗೆ 9 ಗಂಟೆಗೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣದ ವಾಸವಿ ವಿದ್ಯಾಕೇಂದ್ರದಲ್ಲಿ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿರುವ ಕೆ.ವಿ.ಎನ್ ಶಾಲೆ, ಶ್ರೀ ಜವಹರ್ ಎಜುಕೇಷನ್ ಟ್ರಸ್ಟ್ ನಲ್ಲಿ ತರಬೇತಿ ನೀಡಲಾಗುತ್ತದೆ.
ನೇಮಕವಾಗಿರುವ ಅಧಿಕಾರಿ ಸಿಬ್ಬಂದಿ ನಿಗದಿಪಡಿಸಿರುವ ದಿನಾಂಕದಂದು ತರಬೇತಿಗೆ ತಪ್ಪದೇ ಹಾಜರಾಗಬೇಕು, ಗೈರು ಹಾಜರಾದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ಅನುಸಾರ ಶಿಸ್ತು ಕ್ರಮ ಜರುಗಿಸಲಾಗುವುದುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
ಪಿಆರ್‍ಒ, ಎಪಿಆರ್‍ಒ ತರಬೇತಿ: ಚುನಾವಣಾ ಆದೇಶ, ಎಪಿಕ್ ಕಾರ್ಡ್ ಪ್ರತಿ ತರಲು ಸೂಚನೆ
ಚಾಮರಾಜನಗರ, ಏ. 28 - ವಿಧಾನಸಭಾ ಸಾರ್ವತಿಕ ಚುನಾವಣೆ ಸಂಬಂಧ ಏಪ್ರಿಲ್ 30ರಂದು ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿರುವ ಮೊದಲ ಹಂತದ ತರಬೇತಿಗೆ ಪಿ.ಆರ್.ಒ ಮತ್ತು ಎ.ಪಿ.ಆರ್.ಒ ಗಳು ಚುನಾವಣೆ ಆದೇಶದ ಪ್ರತಿ ಹಾಗೂ ತಮ್ಮ ಎಪಿಕ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರುವಂತೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ಚುನಾವಣಾ ಸಭೆ: ಸಾಮಾನ್ಯ ವೀಕ್ಷಕರು, ಪೊಲೀಸ್ ವೀಕ್ಷಕರಿಂದ ಸಿದ್ಧತೆ ಪರಿಶೀಲನೆ
ಚಾಮರಾಜನಗರ, ಏ. 27 - ಜಿಲ್ಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಸಂಬಂಧ ಕೈಗೊಳ್ಳಲಾಗಿರುವ ಸಿದ್ಧತೆಯನ್ನು ನಾಲ್ಕು ವಿಧಾನಸಭಾ ಕ್ಷೇತ್ರಗಳ ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು ಪರಿಶೀಲಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಚುನಾವಣಾ ಸಂಬಂಧ ಸಭೆಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ವಜೀರ್ ಸಿಂಗ್ ಗೋಯಟ್, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಲಕ್ಷ್ಮಿ ನಾರಾಯಣ ಸೋನಿ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಮನೋಜ್ ಕುಮಾರ್, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಅನಿಲ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವೀಕ್ಷಕರಾದ ಡಾ.ರವೀಂದ್ರ ಶಿಶ್ವೆ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ಚುನಾವಣಾ ಸಿದ್ಧತಾ ಸಂಬಂಧ ಮಾಹಿತಿ ಪಡೆದುಕೊಂಡರು.
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಯಲು ಎಲ್ಲಾ ಅಧಿಕಾರಿಗಳು ಅತ್ಯಂತ ಜಾಗರೂಕರಾಗಿ ಕರ್ತವ್ಯ ನಿರ್ವಹಿಸಬೇಕು. ನಿಷ್ಪಕ್ಷಪಾತವಾಗಿ ಚುನಾವಣಾ ಕಾರ್ಯ ನಿರ್ವಹಿಸಬೇಕು. ಚುನಾವಣಾ ಕೆಲಸದಲ್ಲಿ ಯಾವುದೇ ಲೋಪ ಕಂಡುಬಂದರೆ ನಿರ್ಧಾಕ್ಷಿಣ್ಯವಾಗಿ ಚುನಾವಣಾ ಆಯೋಗಕ್ಕೆ ವರದಿ ಮಾಡಲಾಗುವುದು ಎಂದು ವೀಕ್ಷಕರು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಮಾತನಾಡಿ ಚುನಾವಣಾ ಸಂಬಂಧ ಜಿಲ್ಲೆಯಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಚುನಾವಣಾ ಗುರುತಿನ ಚೀಟಿ(ಎಪಿಕ್)ಗಳ ವಿತರಣಾ ಕಾರ್ಯ ನಿರ್ವಹಿಸಲಾಗಿದೆ. ನೀತಿಸಂಹಿತೆ ಪಾಲನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ಸೆಕ್ಟರ್ ಅಧಿಕಾರಿಗಳು, ಪ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸರ್ವೆಲೆನ್ಸ್, ವಿಡಿಯೋ ಸರ್ವೆಲೆನ್ಸ್ ಸೇರಿದಂತೆ ಇತರೆ ಅವಶ್ಯಕ ತಂಡಗಳನ್ನು ರಚಿಸಲಾಗಿದೆ ಎಂದರು.
ಚುನಾವಣಾ ಸಂಬಂಧ ಮಸ್ಟರಿಂಗ್, ಡಿಮಸ್ಟರಿಂಗ್, ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಹಾಗೂ ಚುನಾವಣಾ ಎಣಿಕೆ ಕಾರ್ಯಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕಕ್ಕೆ ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ. ಮತಗಟ್ಟೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯವನ್ನು ನಿರ್ವಹಿಸಲಾಗಿದೆ. ಚುನಾವಣೆಗೆ ಅವಶ್ಯವಿರುವ ಎಲ್ಲಾ ಅವಶ್ಯಕ ವ್ಯವಸ್ಥೆಗೆ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಮುಖ್ಯಸ್ಥರು ಆದ ಡಾ.ಕೆ.ಹರೀಶ್ ಕುಮಾರ್ ಅವರು ಮಾತನಾಡಿ ಮತದಾನ ಜಾಗೃತಿಗಾಗಿ ಜಿಲ್ಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡಲಾಗುತ್ತಿದೆ. ವಿದ್ಯುನ್ಮಾನ ಮತಯಂತ್ರ ಹಾಗೂ ವಿ.ವಿ ಪ್ಯಾಟ್ ಬಳಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮತದಾನ ಪ್ರಮಾಣ ಹೆಚ್ಚಳ ಹಾಗೂ ನೈತಿಕ ಮತದಾನ ಮಾಡಲು ಉತ್ತೇಜಿಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಮುಂದೆ ಮನೆ ಮನೆಗೂ ತೆರಳಿ ಇನ್ನಷ್ಟೂ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದರು. .
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಪೊಲೀಸ್ ಬಂಧೂಬಸ್ತ್ ಸೇರಿದಂತೆ ಪೊಲೀಸ್ ಇಲಾಖೆ ವತಿಯಿಂದ ಕೈಗೊಂಡಿರುವ ಇತರೆ ಸಿದ್ಧತೆಗಳ ಬಗ್ಗೆ ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಚುನಾವಣೆ ಸಂಬಂಧ ಕೈಗೊಂಡಿರುವ ಇಲಾಖೆಯ ಸಿದ್ಧತೆಗಳ ಕುರಿತು ವಿವರಿಸಿದರು. ಅಬಕಾರಿ, ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಚುನಾವಣೆ ಹಿನ್ನಲೆಯಲ್ಲಿ ನಿರ್ವಹಿಸಲಾಗುತ್ತಿರುವ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪ ವಿಭಾಗಾಧಿಕಾರಿ ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳಾದ ಫೌಜಿಯಾ ತರನುಮ್, ಇತರೆ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳು, ವಿವಿಧ ಸಮಿತಿಯ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿಗೆ ತರಬೇತಿ: ಕಡ್ಡಾಯ ಹಾಜರಾತಿಗೆ ಜಿಲ್ಲಾಧಿಕಾರಿ ಸೂಚನೆ
ಚಾಮರಾಜನಗರ, ಏ. 27 :- ಸಾರ್ವತ್ರಿಕ ವಿಧಾಸಭಾ ಚುನಾವಣೆ ಸಂಬಂಧ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರದ 976 ಮತಗಟ್ಟೆಗಳಿಗೆ ನೇಮಕವಾಗಿರುವ ಮತಗಟ್ಟೆ ಮಟ್ಟದ ಅಧ್ಯಕ್ಷಾಧಿಕಾರಿ (ಪಿಆರ್‍ಒ), ಮತದಾನ ಅಧಿಕಾರಿ ಸಿಬ್ಬಂದಿಗೆ(ಎಪಿಆರ್‍ಒ ಮತ್ತು ಪಿಒ) ವಿವಿಧ ದಿನಗಳಂದು ತರಬೇತಿ ಏರ್ಪಡಿಸಲಾಗಿದೆ. ಏಪ್ರಿಲ್ 30 ರಂದು ಬೆಳಗ್ಗೆ 9 ಗಂಟೆಗೆ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣದ ವಾಸವಿ ವಿದ್ಯಾ ಕೇಂದ್ರದಲ್ಲಿ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ನಂಜನಗೂಡು ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತದೆ. ಮೇ 1 ರಂದು ಬೆಳಗ್ಗೆ 9 ಗಂಟೆಗೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣದ ವಾಸವಿ ವಿದ್ಯಾಕೇಂದ್ರದಲ್ಲಿ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿರುವ ಕೆ.ವಿ.ಎನ್ ಶಾಲೆ, ಶ್ರೀ ಜವಹರ್ ಎಜುಕೇಷನ್ ಟ್ರಸ್ಟ್ ನಲ್ಲಿ ತರಬೇತಿ ನೀಡಲಾಗುತ್ತದೆ.
ನೇಮಕವಾಗಿರುವ ಅಧಿಕಾರಿ ಸಿಬ್ಬಂದಿ ನಿಗದಿಪಡಿಸಿರುವ ದಿನಾಂಕದಂದು ತರಬೇತಿಗೆ ತಪ್ಪದೇ ಹಾಜರಾಗಬೇಕು, ಗೈರು ಹಾಜರಾದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951ರ ಅನುಸಾರ ಶಿಸ್ತು ಕ್ರಮ ಜರುಗಿಸಲಾಗುವುದುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಾ ಪ್ರದರ್ಶನ ಮೂಲಕ ಮತದಾನ ಜಾಗೃತಿ ಮೂಡಿಸಿದ ಕಲಾವಿದರು
ಚಾಮರಾಜನಗರ, ಏ. 27 :- ಮತದಾನದ ಮಹತ್ವ ಸಾರುವ ಮಹತ್ತರ ಉದ್ದೇಶದೊಂದಿಗೆ ಜಿಲ್ಲೆಯ ಕಲಾವಿದರು ಇಂದು ನಗರದಲ್ಲಿ ಕಲಾ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು.ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನದ ಜಾಗೃತಿಗಾಗಿ ವಿಭಿನ್ನ ಕಲಾ ಪ್ರಕಾರಗಳ ಕಲಾವಿದರಿಂದ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವೀರಗಾಸೆ, ಬ್ಯಾಂಡ್ ವಾದನ, ಜಾನಪದ ಕಲೆ ಪ್ರಕಾರಗಳ ಮೂಲಕ ಕಲಾವಿದರು ಮತದಾನದ ಪ್ರಾಮುಖ್ಯತೆಯನ್ನು ವಿವರಿಸಲು ಉತ್ಸಾಹದಿಂದ ಕಲಾ ಪ್ರದರ್ಶನ ಜಾಥಾದಲ್ಲಿ ಪಾಲ್ಗೊಂಡರು. ಕಲಾವಿದರ ಜಾಥಾ ಹಿನ್ನಲೆಯಲ್ಲಿ ಕುತೂಹಲದಿಂದ ಜನರು ವೀಕ್ಷಿಸಿದರು.
ನಗರದ ಚಾಮರಾಜೇಶ್ವರ ದೇವಾಲಯ ಬಳಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಮುಖ್ಯಸ್ಥರಾದ ಡಾ.ಕೆ.ಹರೀಶ್ ಕುಮಾರ್ ಅವರು ಹಸಿರು ನಿಶಾನೆ ತೋರುವ ಮೂಲಕ ಸಾಂಸ್ಕøತಿಕ ಕಲಾ ಜಾಗೃತಿ ಜಾಥಾಗೆ ಚಾಲನೆ ನೀಡಿದರು.
ಇದೇ ವೇಳೆ ನೈತಿಕವಾಗಿ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.
ಜಾಗೃತಿ ಜಾಥಾ ಚಾಲನೆ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಮುಕ್ತ ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಮತದಾನದಂತಹ ಮಹತ್ವ ಸಂದರ್ಭದಲ್ಲಿ ದೂರ ಉಳಿಯಬಾರದು. ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಯಾವುದೇ ಆಮಿಷಕ್ಕೆ ಒಳಗಾಗದೆ ಹಾಗೂ ಪ್ರಜಾಪ್ರಭುತ್ವದ ಯಶಸ್ವಿಗಾಗಿ ಮುಕ್ತವಾಗಿ ಮತದಾನದಲ್ಲಿ ಜನರು ಪಾಲ್ಗೊಳ್ಳಬೇಕು ಎಂಬ ಸಂದೇಶ ಅರಿವು ಮೂಡಿಸುವ ದಿಸೆಯಲ್ಲಿ ಸ್ಥಳೀಯಾ ಕಲಾವಿದರ ಕಲಾ ಪ್ರದರ್ಶನ ಹಾಗೂ ಜಾಥಾ ಮೂಲಕ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಜಾನಪದ ಕಲೆಗಳ ತವರೂರಾಗಿರುವ ಜಿಲ್ಲೆಯಲ್ಲಿ ಕಲಾವಿದರಿಂದಲೆ ಮತದಾನ ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿದೆ ಎಂದು ಹರೀಶ್ ಕುಮಾರ್ ಅವರು ಅಭಿಪ್ರಾಯ ಪಟ್ಟರು.
ಚಾಮರಾಜನಗರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಹದೇವಯ್ಯ ಇತರರು ಹಾಜರಿದ್ದರು.
No comments:
Post a Comment