Wednesday, 25 April 2018

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018 ಚುನಾವಣೆ: ಯಾವುದೇ ಲಂಚ, ಆಮಿಷ ಒಡ್ಡಿದ್ದಲ್ಲಿ ದೂರು ನೀಡಿ, ನಗರದಲ್ಲಿ ಅರ್ಥಪೂರ್ಣವಾಗಿ ನಡೆದ ಭಗೀರಥ ಜಯಂತಿ(22-04-2018)

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018
ಚುನಾವಣೆ: ಯಾವುದೇ ಲಂಚ, ಆಮಿಷ ಒಡ್ಡಿದ್ದಲ್ಲಿ ದೂರು ನೀಡಿ

ಚಾಮರಾಜನಗರ, ಏ. 22 - ಮತದಾನದ ಹಿನ್ನಲೆಯಲ್ಲಿ ಯಾರೇ ವ್ಯಕ್ತಿ ಲಂಚ, ಆಮಿಷ ನೀಡುವುದು, ಮತದಾರರಿಗೆ ಬೆದರಿಕೆ, ಬೀತಿ ಹುಟ್ಟಿಸುವ ಪ್ರಸಂಗಗಳು ಕಂಡುಬಂದರೆ ಕೂಡಲೆ ಜಿಲ್ಲಾ ಹಾಗೂ ತಾಲ್ಲೂಕು ದೂರು ನಿರ್ವಹಣ ಕೋಷಕ್ಕೆ ಮಾಹಿತಿ ನೀಡುವಂತೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಮನವಿ ಮಾಡಿದ್ದಾರೆ.
          ಮತದಾರರ ಹಕ್ಕನ್ನು ಚಲಾಯಿಸಲು ಯಾರೇ ವ್ಯಕ್ತಿಯ ಮನವೊಲಿಸುವ ದೃಷ್ಟಿಯಿಂದ ಚುನಾವಣಾ ಪ್ರಕ್ರಿಯೆಯ  ಅವಧಿಯಲ್ಲಿ ಹಣ ಅಥವಾ ವಸ್ತು ರೂಪದಲ್ಲಿ ಯಾವುದೇ ಲಂಚವನ್ನು ಕೊಡುವ ಅಥವಾ ತೆಗೆದುಕೊಳ್ಳುವ ಯಾರೇ ವ್ಯಕ್ತಿಯು ಭಾರತ ದಂಡ ಸಂಹಿತೆಯ 171ಬಿ ಪ್ರಕರಣದ ಮೇರೆಗೆ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆಯಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತರಾಗಲಿದ್ದಾರೆ.  ಅಲ್ಲದೆ, ಯಾರೇ ಅಭ್ಯರ್ಥಿಗೆ ಅಥವಾ ಮತದಾರನಿಗೆ ಅಥವಾ ಯಾರೇ ಇತರ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಗಾಯಪಡಿಸಿ ಬೆದರಿಕೆಯೊಡ್ಡುವ ಯಾರೇ ವ್ಯಕ್ತಿಯು ಭಾರತ ದಂಡ ಸಂಹಿತೆಯ 171ಸಿ ಪ್ರಕರಣದ ಮೇರೆಗೆ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಅವಧಿಯ ಕಾರಾಗೃಹ ಶಿಕ್ಷೆಗೆ ಅಥವಾ ಜುಲ್ಮಾನೆಗೆ ಅಥವಾ ಅವೆರಡರಿಂದಲೂ ದಂಡನೆಗೆ ಗುರಿಯಾಗಲಿದ್ದಾರೆ.
ಲಂಚವನ್ನು ಕೊಡುವವರು ಅಥವಾ ತೆಗೆದುಕೊಳ್ಳುವವರು ವಿರುದ್ಧವೂ ಪ್ರಕರಣವನ್ನು ದಾಖಲು ಮಾಡುವುದಕ್ಕಾಗಿ ಮತ್ತು ಮತದಾರರಲ್ಲಿ ಹೆದರಿಕೆ ಭೀತಿಯನ್ನುಂಟುಮಾಡುವುದರಲ್ಲಿ ನಿರತರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಕ್ಷಿಪ್ರ ಸಂಚಾರಿ ದಳಗಳನ್ನು ರಚಿಸಲಾಗಿದೆ.  ಯಾವುದೇ ಲಂಚ ಸ್ವೀಕರಿಸುವ ಹಾಗೂ ಯಾರೇ ಲಂಚವನ್ನು ನೀಡಲು ಬಂದರೆ ಅಥವಾ ಲಂಚ ನೀಡುತ್ತಿರುವ ಬಗ್ಗೆ ತಿಳಿದು ಬಂದರೆ ಮತದಾರರಿಗೆ ಬೆದರಿಕೆಯೊಡ್ಡುತ್ತಿರುವುದು, ಭೀತಿ ಹುಟ್ಟಿಸುತ್ತಿರುವ ಪ್ರಸಂಗಗಳ ಬಗ್ಗೆ ತಿಳಿದು ಬಂದರೆ,  ದೂರುಗಳನ್ನು ಸ್ವೀಕರಿಸಲು ಸ್ಥಾಪಿಸಲಾಗಿರುವ 24*7 ಅವಧಿಯೂ ಕಾರ್ಯನಿರ್ವಹಿಸುವ  ಜಿಲ್ಲೆಯ ದೂರು ನಿರ್ವಹಣಾ ಕೋಶ ಮತ್ತು ತಾಲ್ಲೂಕು ದೂರು ನಿರ್ವಹಣಾ ಕೋಶಕ್ಕೆ, ಮಾಹಿತಿ ನೀಡಬೇಕು
ದೂರು ಸಲ್ಲಿಕೆಗಾಗಿ ಜಿಲ್ಲಾ ದೂರು ನಿರ್ವಹಣಾ ಕೋಶ, ಜಿಲ್ಲಾಧಿಕಾರಿಗಳ ಕಚೇರಿ ಚಾಮರಾಜನಗರ, ಶುಲ್ಕ ರಹಿತ ದೂರವಾಣಿ ಸಂಖ್ಯೆ:1800 425 0133, ತಾಲ್ಲೂಕು ದೂರು ನಿರ್ವಹಣಾ ಕೋಶ, ತಾಲ್ಲೂಕು ಕಚೇರಿ ಚಾಮರಾಜನಗರ, ಶುಲ್ಕ ರಹಿತ ದೂರವಾಣಿ ಸಂಖ್ಯೆ:1800 4256 190, 5)ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ:08226-223220, ಸಂಪರ್ಕಿಸುವಂತೆ  ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ, ಕಲಘಟಗಿ ಅಶೋಕ ಭೀಮಣ್ಣ  ಹಾಗೂ ಸಹಾಯಕ ಚುನಾವಣಾ ಅಧಿಕಾರಿ, ಟಿ. ರಮೇಶ್ ಬಾಬು ಪ್ರಕಟಣೆಯಲ್ಲಿ ಕೋರಿದ್ದಾರೆ.

ಏಪ್ರಿಲ್ 24ರಂದು ನಗರದಲ್ಲಿ ಡಾ.ರಾಜ್‍ಕುಮಾರ್ ಜನ್ಮ ದಿನಾಚರಣೆ ಕಾರ್ಯಕ್ರಮ

ಚಾಮರಾಜನಗರ, ಏ. 22-  ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ  ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕøತರಾದ ಮೇರು ನಟ ಡಾ.ರಾಜ್‍ಕುಮಾರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಏಪ್ರಿಲ್ 24ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದರ್ ಕುಮಾರ್ ಮೀನಾ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.  ಹೆಸರಾಂತ ಚ¯ನಚಿತ್ರ ಸಾಹಿತಿ ಬಿ.ಎ.ಮಧು ಅವರು ಮುಖ್ಯ ಭಾಷಣಕಾರರಾಗಿ ಆಗಮಿಸುವರು. 
ಸಭಾ ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ 9 ಗಂಟೆಗೆ ಈಶ್ವರಿ ಸ್ಕೂಲ್ ಅಫ್ ಮ್ಯೂಸಿಕ್ ಅವರಿಂದ ಡಾ.ರಾಜ್ ಕುಮಾರ್ ಅಭಿನಯದ ಸದಭಿರುಚಿ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. 


ನಗರದಲ್ಲಿ ಅರ್ಥಪೂರ್ಣವಾಗಿ ನಡೆದ  ಭಗೀರಥ ಜಯಂತಿ 

ಚಾಮರಾಜನಗರ, ಏ. 21 -  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಭಗೀರಥ ಜಯಂತಿಯನ್ನು ನಗರದಲ್ಲಿಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. 
ನಗರದ  ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಕಾರ್ಯಕ್ರಮದಲ್ಲಿ
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಕೆ.ಹರೀಶ್ ಕುಮಾರ್ ಅವರು ಭಗೀರಥರ ನಿಷ್ಠೆ, ಛಲ, ಸಾಧನೆಯನ್ನ ಪ್ರತಿಯೊಬ್ಬರೂ ಆದರ್ಶವಾಗಿಟ್ಟುಕೊಂಡು ಅನುಸರಿಸಬೇಕು.  ಭಗೀರಥರ ಪ್ರಯತ್ನ ಸಾಧನೆಯನ್ನ ಇಂದಿಗೂ ಸ್ಮರಿಸಿಕೊಳ್ಳಲಾಗುತ್ತಿದೆ ಎಂದರು. 
ಭಗೀರಥರ ಕುರಿತ ವಿಚಾರಗಳನ್ನು ತಿಳಿದುಕೊಳ್ಳಬೇಕಿದೆ.  ಪೋಷಕರು ಗುರುಗಳ ಆಕಾಂಕ್ಷೆಯನ್ನು ಶ್ರದ್ಧೆಯಿಟ್ಟು ನೆರವೇರಿಸಲು ಮುಂದಾಗಬೇಕಿದೆ.  ಎಂದು ಹರೀಶ್ ಕುಮಾರ್ ಸಲಹೆ ಮಾಡಿದರು. 
ಮಹಾಪುರುಷರ ದಾರ್ಶನಿಕರ, ಮಹಾತ್ಮರ ಉನ್ನತ ಧ್ಯೇಯ ಮೌಲ್ಯಗಳನ್ನು ಎಲ್ಲರಿಗೂ ತಿಳಿಸುವ ಹಾಗೂ ಪಸರಿಸುವ ಆಶಯದೊಂದಿಗೆ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗುತ್ತಿದೆ ಎಂದು ಹರೀಶ್ ಕುಮಾರ್ ಅವರು ತಿಳಿಸಿದರು. 
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಹದೇವಯ್ಯ ಹಾಜರಿದ್ದರು. 











No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು