Tuesday, 15 August 2017

ಚಾಮರಾಜನಗರದಲ್ಲಿ ವರದಿಗಾರರ ಕೂಟ ಸೇರಿದಂತೆ ಮೂರು ಪತ್ರಿಕಾ ಸಂಘಟನೆಗಳಿವೆ.


 ಪತ್ರಕರ್ತರು ತಮ್ಮ ವೈಮನಸ್ಸನ್ನು ಬಿಟ್ಟು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಿ;
                         ಸಚಿವ ಯು.ಟಿ.ಖಾದರ್
ಚಾಮರಾಜನಗರ, ಆ.15:- ಜಿಲ್ಲಾ ಕೇಂದ್ರದಲ್ಲಿರುವ ಮೂರು ಪತ್ರಕರ್ತರ ಸಂಘಟನೆಗಳು ತಮ್ಮ ಪ್ರತಿಷ್ಠೆಗಳನ್ನು ಮರೆತು ಎಲ್ಲರೂ ಒಗ್ಗೂಡಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಿ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಪತ್ರಿಕಾ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತಿರುವ ಚುನಾಯಿತ ಪ್ರತಿನಿಧಿಗಳಿಗೆ  ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ 2017ರ ಗಡಿ ಕನ್ನಡಿಗ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪತ್ರಿಕಾ ರಂಗ ನಾಲ್ಕನೇಯ ಅಂಗವಾಗಿದ್ದು, ಪ್ರಪಂಚದಲ್ಲಿ ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳ ಅಂಕು-ಡೊಂಕುಗಳನ್ನು ತಿದ್ದಿ ಸರ್ಕಾರದ ಗಮನ ಸೆಳೆಯುವ ಮಾಧ್ಯಮ ಮಿತ್ರರು ವೈಯಕ್ತಿಕ ಪ್ರತಿಷ್ಟೆಗಳನ್ನು ಮರೆತು ಸುದ್ದಿಗಳಲ್ಲಿ ತಾರತಮ್ಯ ಮಾಡಬಾರದು, ಕೇವಲ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗದೇ ತಮ್ಮ ಪತ್ರಿಕಾ ವೃತ್ತಿಯನ್ನು ಎತ್ತಿ ಹಿಡಿಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಲೋಕಸಭಾ ಸದಸ್ಯ ಆರ್.ಧ್ರುವನಾರಾಯಣ್, ಗಡಿ ಜಿಲ್ಲೆಯ ಪತ್ರಕರ್ತರು ಇಲ್ಲಿನ ಅರಣ್ಯ ಸಂಪತ್ತು, ಪ್ರವಾಸೋದ್ಯಮದ ಅಭಿವೃದ್ದಿಯ ಬಗ್ಗೆ ವಿಶೇಷ ವರದಿಗಳನ್ನು ಮಾಡುವುದರ ಮೂಲಕ ಗಮನಸೆಳೆಯಬೇಕು. ಪತ್ರಕರ್ತರೆಲ್ಲರೂ ಸೋದರರಂತೆ ಇದ್ದು, ಸ್ವಪ್ರತಿಷ್ಠೆಗಾಗಿ ಒಳಜಗಳ ಮಾಡಬಾರದೆಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಬಂಗಾರು ಮಾತನಾಡಿ, ಕಳೆದ 10 ವರ್ಷಗಳಿಂದ ಕನ್ನಡದ ನೆಲ, ಜಲ, ಭಾಷೆ, ಸಂಸ್ಕøತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಮ್ಮ ಸಂಘ ಪ್ರೋತ್ಸಾಹಿಸಿಕೊಂಡು ಬರುತ್ತಿದೆ ಎಂದರು. ನಗರದ ಪಿಡಬ್ಲೂಡಿ ಕಾಲೋನಿಯಲ್ಲಿರುವ ಪತ್ರಿಕಾ ಭವನವನ್ನು 01.01.2016ರಲ್ಲಿ ನಮ್ಮ ಸಂಘಕ್ಕೆ ನಿರ್ವಹಣೆಗೆ ವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ರೀತಿಯ ಉತ್ತರ ಬಂದಿಲ್ಲ. ಪತ್ರಿಕಾ ಭವನವನ್ನು  ಕಾರ್ಯನಿರತ ಪತ್ರಕರ್ತರ ಸಂಘ ಬಳಕೆ ಮಾಡುತ್ತಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ವಾರ್ತಾ ಇಲಾಖೆ ತಿಳಿಸಿದೆ. ಚಾಮರಾಜನಗರದಲ್ಲಿ ವರದಿಗಾರರ ಕೂಟ ಸೇರಿದಂತೆ ಮೂರು ಪತ್ರಿಕಾ ಸಂಘಟನೆಗಳಿವೆ. ಯಾವುದೇ ಸಂಘಕ್ಕೂ ತೊಂದರೆಯಾಗದಂತೆ ಪತ್ರಕರ್ತರ ಭವನದ ನಿರ್ವಹಣೆಯನ್ನ ಜಿಲ್ಲಾಡಳಿತ ವಹಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಇದಕ್ಕುತ್ತರಿಸಿದ ಸಚಿವ ಖಾದರ್, ಶೀಘ್ರದಲ್ಲೇ ವಾರ್ತಾ ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ, ಯಾವುದೇ ಪತ್ರಕರ್ತರ ಸಂಘಟನೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಶಾಸಕ ಪುಟ್ಟರಂಗಶೆಟ್ಟಿ, ಜಿ.ಪಂ ಅಧ್ಯಕ್ಷ ಎಂ.ರಾಮಚಂದ್ರು, ಉಪಾಧ್ಯಕ್ಷ ಬಸವರಾಜು, ತಾ.ಪಂ ಅಧ್ಯಕ್ಷ ಹೆಚ್.ವಿ.ಚಂದ್ರು, ಚೂಡಾ ಅಧ್ಯಕ್ಷ ಸುಹೇಲ್ ಅಲಿಖಾನ್, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ನಗರಸಭಾ ಅಧ್ಯಕ್ಷ ರಾಜಪ್ಪ, ಜಿ.ಪಂ ಸದಸ್ಯರು, ತಾ.ಪಂ ಸದಸ್ಯರು, ನಗರಸಭಾ ಸದಸ್ಯರು, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಹೀರ್‍ಅಹಮದ್, ಖಜಾಂಚಿ ಸುರೇಶ್‍ದೊಡ್ಡರಾಯಪೇಟೆ, ಪ್ರವೀಣ್‍ಪಂಚಾಕ್ಷರಿ, ಹೊಸೂರು ಜಗದೀಶ್, ಫಾಜಿಲ್, ನಂಜುಂಡನಾಯಕ, ಗುರು, ಕುಮಾರ್, ಪುಟ್ಟು ಸೇರಿದಂತೆ ಸಂಘದ ಪದಾಧಿಕಾರಿಗಳು, ಹಿತೈಷಿ ಪತ್ರಕರ್ತರು ಹಾಜರಿದ್ದರು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು