Tuesday, 29 August 2017

25 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ನರಹಂತಕ ವೀರಪ್ಪನ್ ಸಹಚರನಾದ ಶಿವಸ್ವಾಮಿ @ ಡಬ್ಬಲ್‍ಗುಂಡಿ ಬಂಧನ (28-08-2017)



ಮ.ಮ.ಬೆಟ್ಟದಲ್ಲಿ ರಸಮಂಜರಿ ಕಾರ್ಯಕ್ರಮ ಹಿನ್ನೆಲೆ : ನೌಕರ ಅಮಾನತು

ಚಾಮರಾಜನಗರ, ಆ. 29 :- ಕೊಳ್ಳೇಗಾಲ ತಾಲ್ಲೂಕಿನ ಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಸಂಜೆ ಗಣೇಶೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ರಸಮಂಜರಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ದ್ವಿತೀಯ ದರ್ಜೆ ಸಹಾಯಕ ಹಾಗೂ ಪ್ರಾಧಿಕಾರದ ನೌಕರರ ಸಂಘದ ಕಾರ್ಯದರ್ಶಿಯೂ ಆಗಿರುವ ಪಿ ಮಹದೇವಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಕಾರ್ಯಾಥರ್À ನೌಕರರಾಗಿದ್ದ ಬಸವಣ್ಣ ಎಂಬುವರ ಸೇವೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಆದೇಶಿಸಲಾಗಿದೆ ಎಂದು ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ ಎಂ ಗಾಯತ್ರಿ ತಿಳಿಸಿದ್ದಾರೆ.
ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಪ್ರಾಧಿಕಾರದ ವತಿಯಿಂದ ಆಯೋಜಿಸಲಾಗಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಗಾಯತ್ರಿಯವರು ರಸಮಂಜರಿ ಕಾರ್ಯಕ್ರಮ ಕುರಿತು ವರದಿಯಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪ್ರಾಧಿಕಾರದ ನೌಕರರ  ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

   

25 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ನರಹಂತಕ ವೀರಪ್ಪನ್ ಸಹಚರನಾದ ಶಿವಸ್ವಾಮಿ @ ಡಬ್ಬಲ್‍ಗುಂಡಿ ಬಂಧನ 

 ಚಾಮರಾಜನಗರ ಜಿಲ್ಲೆ ರಾಮಾಪುರ ಪೊಲೀಸ್ ಠಾಣೆ ಮತ್ತು ಮ.ಮ ಬೆಟ್ಟ ಪೊಲೀಸ್ ಠಾಣೆಗಳಲ್ಲಿ     1. ಮೊ.ನಂ 14/1992 ಪ್ರಕರಣ ದಾಖಲಾಗಿದ್ದು, ದಿನಾಂಕ 16-02-1992 ರಂದು ಕರಿಕಲ್ಲು ಗಣಿಮಾಲಿಕರಾದ
  ಸಂಪಂಗಿ ರಾಮಾಯ್ಯ ರವರ ಮಗನಾದ ರಾಮಮೂರ್ತಿ ರವರನ್ನು ಹಣ ಸುಲಿಗೆಗಾಗಿ ಅಫಹರಣ ಪ್ರಕರಣ.
2. ಮೊ.ನಂ 41/1992 ರಲ್ಲಿ ದಿನಾಂಕ 20-05-1992 ರಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ
   ಕರ್ತವ್ಯದಲ್ಲಿದ್ದ 5 ಜನ ಪೊಲೀಸ್ ಸಿಬ್ಬಂದಿಗಳನ್ನು ಹತ್ಯೆ ಮಾಡಿದ ಪ್ರಕರಣ.
3. ಮೊನಂ 20/1993 ರಲ್ಲಿ ದಿನಾಂಕ 17-11-1992 ರಂದು ನೆಲ್ಲೂರು ಗ್ರಾಮದ ವಾಸಿ ಚಿನ್ನಗೌಂಡರ್
  ಎಂಬುವರನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣ.
4. ಮಲೈ ಮಹದೇಶ್ವರ ಬೆಟ್ಟದ ಠಾಣೆಯಲ್ಲಿ ದಾಖಲಾಗಿದ್ದ ಮೊ.ನಂ 09/1993 ರಲ್ಲಿ ಪಾಲಾರ್ ಬಾಂಬ್ ಬ್ಲಾಸ್ಟ್
  ಪ್ರಕರಣ.
       ಮೇಲ್ಕಂಡ ಪ್ರಕರಣಗಳಲ್ಲಿ ಕಳೆದ 25 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ನರಹಂತಕ ವೀರಪ್ಪನ್ ಸಹಚರನಾದ ಶಿವಸ್ವಾಮಿ @ ಡಬ್ಬಲ್‍ಗುಂಡಿ ಬಿನ್ ಕುಂಜಶೆಟ್ಟಿ @ ಮುನಿಶೆಟ್ಟಿ 53 ವರ್ಷ ಈತನ ಪತ್ತೆ ಬಗ್ಗೆ ಮಾನ್ಯ ಆರಕ್ಷಕ ಅಧೀಕ್ಷಕರಾದ ಶ್ರೀಧರ್ಮೇಂದರ್ ಕುಮಾರ್ ಮೀನಾ ರವರ ನಿರ್ದೇಶನದಂತೆ ಹಾಗೂ ಅಪÀರ ಆರಕ್ಷಕ ಅಧೀಕ್ಷಕರಾದ ಶ್ರೀಮತಿ ಗೀತಾ ರವರು ಹಾಗೂ ಕೊಳ್ಳೇಗಾಲ ಉಪವಿಭಾಗ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪುಟ್ಟಮಾದಯ್ಯರವರ ಮಾರ್ಗದರ್ಶನದಲ್ಲಿ ರಾಮಾಪುರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀ ಶಿವಸ್ವಾಮಿ ರವರು ಹಾಗೂ ಪಿ.ಎಸ್.ಐ ಕೆ.ಕೆ.ಶ್ರೀಧರ ಹಾಗೂ ಸಿಬ್ಬಂದಿಯವರಾದ ಶಂಕರ ಹೆಚ್.ಸಿ-154, ಪಿಸಿ-474 ರಮೇಶ, ಪಿ.ಸಿ-482 ಅಣ್ಣಾದೊರೆ ರವರು ಆರೋಪಿಯನ್ನು ದಿನಾಂಕ 27-08-2017 ರಂದು ರಾತ್ರಿ ತಮಿಳುನಾಡಿನ ಸತ್ತಿಮಂಗಲದ ನಾಲಾರೋಡಿನ ಡಿ.ಜಿ.ಪುದೂರು ಎಂಬ ಗ್ರಾಮದಿಂದ ಆರೋಪಿಯನ್ನು ಬಂಧಿಸಿದ್ದು ದಿನಾಂಕ 28-08-2017 ರಂದು  ಆರೋಪಿಯನ್ನು ಗೌರವಾನ್ವಿತ ಘನ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಕೊಳ್ಳೇಗಾಲ ರವರ ಮುಂದೆ ಹಾಜರುಪಡಿಸಲಾಗಿರುತ್ತದೆ. ಆರೋಪಿಯನ್ನು ದಸ್ತಗಿರಿ ಮಾಡಿದ ತಂಡದ ಮೇಲ್ಕಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಲು ಕ್ರಮ ಕೈಗೊಳ್ಳಲಾಗಿದೆ.

                                        

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು