ಡೆಂಗ್ಯೂ ಗೆ ಶಾಲಾ ಬಾಲಕ ಬಲಿ.!
ಬಾಲಕನ ಚಿತ್ತ ಲಭ್ಯವಾಗಲಿಲ್ಲ............
(ಬಾಲಕ ಸಾವನ್ನಪ್ಪಿದ ಕಾರಣ ರಜೆ ಘೋಷಣೆ ಮಾಡಿದ ಬಿತ್ತಿ ಪತ್ರವನ್ನು ಹೊರಗಡೆ ಅಂಟಿಸಿರುವುದು ನೋಡಬಹುದು)
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ದಿನೇ ದಿನೇ ಸಣ್ಣ ಮಕ್ಕಳ ಬಲಿ ಪಡೆಯುತ್ತಿರುವ ಮಹಾಮಾರಿ ಡೆಂಗ್ಯೂಗೆ ಇಂದು ಶಾಲಾ ಬಾಲಕನೋರ್ವ ಬಲಿಯಾಗಿದ್ದಾನೆ.
ಚಾಮರಾಜನಗರ ನಿವಾಸಿ ಗಿರಿಗೌಡ ಎಂಬುವವರ ಮಗ ತೇಜಸ್ ಎಂಬುವವನೆ ಮಹಾಮಾರಿ ಡೆಂಗ್ಯೂ ಗೆ ಬಲಿಯಾದ ದುರ್ದೈವಿಯಾಗಿದ್ದಾನೆ.
ತೇಜಸ್ ಸಂತ ಪ್ರಾನ್ಸಿಸ್ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅನಾರೋಗ್ಯ ಹೆಚ್ಚಾಗಿ ಬಿಳಿ ರಕ್ತಕಣ ಕಡಿಮೆಯಾಗಿದ್ದರಿಂದ ಆಸ್ಪತ್ರೆಗೆ ದಾಖಲು ಮಾಢಿದ್ದರು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಶಾಲಾ ಆಡಳಿತ ಮಂಡಳಿಯು, ಎಸ್.ಎಸ್.ಎಲ್.ಸಿ ಮಕ್ಕಳಿಗೆ ವೇಷಭೂಷಣ ಸ್ಪರ್ದೆ ಇದ್ದ ಕಾರಣ ಇಂದು 1 ರಿಂದ 9 ರವರೆಗಿನ ಮಕ್ಕಳಿಗೆ ರಜೆ ಘೋಷಣೆ ಮಾಡಿ. ಮನೆಗೆ ತೆರಳಿ ಕುಟುಂದವರಿಗೆ ಸಮಾಧಾನ ಹೇಳಿಬಂದರು
ಬಹುತೇಕವಾಗಿ ಚಾಮರಾಜನಗರದೆಡೆ ಬಹುತೇಕ ಕಡೆ ಹೆಚ್ಚಾಗಿ ಹರಡುತ್ತಿದ್ದು ಈಗ ಕಡಿಮೆಯಾದರೂ ಆರೋಗ್ಯ ಇಲಾಖೆ ಮಾತ್ರ ಎಲ್ಲೂ ಡೆಂಗ್ಯೂ ಗೆ ಬಲಿಯಾಗೇ ಇಲ್ಲ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡಿದ್ದರು.
ಡಯಾಗ್ನಿಟಿಕ್ ಸೆಂಟರ್‍ಗಳಲ್ಲೂ ಕೆಲವರ ಮುಟ್ಟಾಳಗೇಡಿತನದಿಂದ ಪ್ಲೇಟ್ ನೆಟ್ ಎಣಿಕೆಯಲ್ಲಿ ಅಸ್ಪಷ್ಟ ಗಣಕಾಂಶ ನೀಡುವ ಮೂಲಕ ದಾರಿ ತಪ್ಪಿಸಿದ್ದನ್ನು ಹಿಂದೆ ಪ್ರಕಟಿಸಿದ್ದವು. ಆದರೆ ನೇರವಾಗಿ ಸಂತ ಜೋಸೆಫ್ ಶಾಲೆಯಲ್ಲೂ ಮಗು ಸಾವನ್ನಪ್ಪಿತ್ತು. ಅದನ್ನು ಅಲ್ಲೆಗೆಳೆದಿದ್ದರು. ಇದೇ ತರಹ ಅಲ್ಲೆಗೆಳೆಯುತ್ತಿದ್ದು ಮುಂದೆ ಯಾಮಾರಿದರೆ ಅದೇಷ್ಟೋ ಪೋಷಕರು ತಮ್ಮ ಕಂದಮ್ಮಗಳನ್ನು ಕಳೆದುಕೊಳ್ಳುತ್ತಾರೋ ಎಂಬ ಭಯಬೀತಿ ನಿರ್ಮಾಣವಾಗುದರಲ್ಲಿ ಸಂದೇಹವೇ ಇಲ್ಲ.
No comments:
Post a Comment