Monday, 21 August 2017

ಪರಿಸರ ಸ್ನೇಹಿಯಾಗಿ ಗೌರಿ ಗಣೇಶ ಹಬ್ಬ ಆಚರಿಸಿ: ಜಿಲ್ಲಾಧಿಕಾರಿ (21-08-2017)


ಪರಿಸರ ಸ್ನೇಹಿಯಾಗಿ ಗೌರಿ ಗಣೇಶ ಹಬ್ಬ ಆಚರಿಸಿ: ಜಿಲ್ಲಾಧಿಕಾರಿ

ಚಾಮರಾಜನಗರ, ಆ. 21- ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಮೂಲಕ ನಾಗರಿಕರು  ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಬಿ.ರಾಮು ಮನವಿ ಮಾಡಿದ್ದಾರೆ.
ಬಣ್ಣದಿಂದ ತಯಾರಿಸಿರುವ ಮೂರ್ತಿಗಳನ್ನು ಕೆರೆ, ಬಾವಿ ಹಾಗು ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸಿದಾಗ ಕಲುಷಿತವಾಗುವುದನ್ನು ತಪ್ಪಿಸಲು ಜೇಡಿ ಮಣ್ಣು ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಬೇಕು. ಈ ಮೂಲಕ ಗೌರಿ-ಗಣೇಶ ಚರ್ತುರ್ಥಿ ಆಚರಣೆಯನ್ನು ಪರಿಸರಸ್ನೇಹಿಯಾಗಿಸಲು  ನಾಗರಿಕರು ಕೆಲ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಿಷಕಾರಿ ರಾಸಾಯನಿಕ, ಲೋಹದ ಲೇಪದ ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಗಣೇಶನ ಮೂರ್ತಿ ಬಳಕೆ ಮಾಡಬೇಡಿ.  ಸಾದಾ ಜೇಡಿ ಮಣ್ಣಿನ ಮುದ್ದಾಧ ಪುಟ್ಟ ಗಣೇಶ ವಿಗ್ರಹವನ್ನು ಸ್ಥಾಪಿಸಿ. ಎಲೆ, ಹೂವುಗಳಿಂದ ಮಾಡಿದ ನೈಸರ್ಗಿಕ ಬಣ್ಣ ಹಚ್ಚಿದ ಗಣಪನನ್ನೆ ಪೂಜಿಸಿ.
ಸಾಮೂಹಿಕವಾಗಿ ಪ್ರತಿಷ್ಟ್ಟಾಪಿಸುವ  ಗಣೇಶನ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ, ಎಲ್ಲೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬೇಡಿ. ಬಾವಿ, ಕೆರೆ ಹೊಳೆಗಳಲ್ಲಿ ಗಣಪತಿ ವಿಸರ್ಜನೆ ಮಾಡಬೇಡಿ, ಹಾಗೆ ಮಾಡಿದರೆ ಅಂತರ್ಜಲ, ಕುಡಿಯುವ ನೀರಿನ ಸೆಲೆ-ಎಲ್ಲವೂ ಹಾಳಾಗುತ್ತವೆ. ಬದಲಿಗೆ ಬಕೆಟ್‍ನಲ್ಲಿ ವಿಸರ್ಜಿಸಿ, ಸೂಚಿತ ಕೆರಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆಯಿರಿ.
ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬೇಡಿ, ಪಟಾಕಿಯ ಹೊಗೆ ವಿಷಪೂರಿತವಾಗಿರುತ್ತದೆ.  ಅಲ್ಲದೆ ರಸ್ತೆ ತುಂಬಾ ಕಸವಾಗುತ್ತದೆ, ಗಡಚಿಕ್ಕುವ ಶಬ್ದವೂ  ಕಿವಿಗೆ ಹಾನಿಕರ. ಗಣೇಶ ಹಬ್ಬದಲ್ಲಿ ರಸ್ತೆ, ಚರಂಡಿಯಲ್ಲಿ ಹೊವಿನ ಹಾರ, ತಟ್ಟೆ ಲೋಟ, ಎಲೆ ಎಸೆಯಬೇಡಿ. ಕಸದ ವಾಹನ ಬಳಸಿ. ಎಂದು ಜಿಲ್ಲಾಧಿಕಾರಿ ಬಿ.ರಾಮುರವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಅಪ್ರೆಂಟಿಸ್ ತರಬೇತಿಗೆ ಪತ್ರಿಕೋದ್ಯಮ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ      

ಚಾಮರಾಜನಗರ, ಆ. 21 - ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ಸಾಲಿನ ವಿಶೇಷ ಘಟಕ ಯೋಜನೆ(ಎಸ್‍ಸಿಎಸ್‍ಪಿ)ಯಡಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮದಲ್ಲಿ ಪದವಿ ಮತ್ತು  ಸ್ನಾತಕೋತ್ತರ ಪದವೀಧರರಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಅಹ್ವಾನಿಸಿದೆ.
ಜಿಲ್ಲಾ ಕಚೇರಿಗಳಲ್ಲಿ ಕ್ಷೇತ್ರಪ್ರಚಾರ ಹಾಗೂ ಮಾಧ್ಯಮ ಕ್ಷೇತ್ರದÀಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸೆಪ್ಟೆಂಬರ್ 2017ರಿಂದ ಮಾರ್ಚ್ 2018ರ ವರೆಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು 20 ಸಾವಿರ ರೂ. ಗೌರವಧನವನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಒಟ್ಟು ಇಬ್ಬರು ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಂಡು ತರಬೇತಿ ಕೊಡಲಾಗುತ್ತದೆ.
ಅಭ್ಯರ್ಥಿಗಳು 22 ರಿಂದ 38ರ ವಯಸ್ಸಿನವರಾಗಿರಬೇಕು. ಕನ್ನಡ ಹಾಗೂ ಗಣಕಯಂತ್ರದ ಜ್ಞಾನ ಹೊಂದಿರಬೇಕು. ಬೇರೆ ಯಾವುದೇ ಉದ್ಯೋಗದಲ್ಲಿರಬಾರದು. ಜಿಲ್ಲೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಸ್ಥಳೀಯವಾಗಿ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಪಕ್ಕದ ಜಿಲ್ಲೆಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.
ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 4 ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಚಾಮರಾಜನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ ಹಾಗೂ ದೂರವಾಣಿ ಸಂಖ್ಯೆ: 08226-224731 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಗುಂಡ್ಲುಪೇಟೆ ಪುರಸಭೆ : ಬಯಲು ಶೌಚಮುಕ್ತ ಘೋಷಣೆ ಕುರಿತ ಆಕ್ಷೇಪಣೆಗೆ ಆಹ್ವಾನ

ಚಾಮರಾಜನಗರ, ಆ. 21 :- ಗುಂಡ್ಲುಪೇಟೆ ಪುರಸಭೆಯ ಒಟ್ಟು 23 ವಾರ್ಡ್‍ಗಳ ಪೈಕಿ ವಾರ್ಡ್ ನಂ 3,5,6 ಹಾಗೂ 7 ವಾರ್ಡ್‍ನ್ನು ಬಯಲು ಶೌಚಮುಕ್ತ ವಾರ್ಡ್‍ಗಳೆಂದು ಘೋಷಿಸಬೇಕಿದ್ದು, ಈ ಸಂಬಂಧ  ಅಕ್ಷೇಪಣೆಗಳಿದ್ದಲ್ಲಿ ನಾಗರಿಕರು ಪುರಸಭೆ ಕಚೇರಿಗೆ ಸಲ್ಲಿಸಬಹುದಾಗಿದೆ.
ಸ್ವಚ್ಚಭಾರತ್ ಮಿಷನ್‍ಯೋಜನೆಯಡಿ ಎಲ್ಲಾ ವಾರ್ಡ್‍ಗಳನ್ನು ಬಯಲು ಶೌಚಮುಕ್ತ ವಾರ್ಡ್‍ಗಳೆಂದು ಘೋಷಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ವಾರ್ಡ್‍ಗಳಲ್ಲಿ ಸಮೀಕ್ಷೆ ನಡೆಸಿದ್ದು, ನಾಗರಿಕರು ವೈಯಕ್ತಿಕ ಹಾಗೂ ಸಮುದಾಯ ಶೌಚಾಲಗ¼ನ್ನು ಬಳಸುತ್ತಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಕ್ಷಕರು ಸ್ವಸಹಾಯಸಂಘಗಳಿಂದ ನಿಗದಿತ ನಮೂನೆಯಲ್ಲಿ ಘೋಷಣೆ ಪಡೆದುಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಉದ್ದೇಶಿತ ನಾಲ್ಕು ವಾರ್ಡ್‍ಗಳನ್ನು ಬಯಲು ಶೌಚಮುಕ್ತ ವಾರ್ಡ್‍ಗಳೆಂದು ಘೋಷಣೆ ಮಾಡಬೇಕಿದ್ದು, ಆಕ್ಷೇಪಣೆ ಇದ್ದಲ್ಲಿ ಸೆಪ್ಟಂಬರ್ 1 ರೊಳಗೆ ಲಿಖಿತವಾಗಿ ಗುಂಡ್ಲುಪೇಟೆ ಪುರಸಭೆ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಹೆಚ್‍ಐವಿ ಸೋಂಕಿತ ಮಹಿಳೆಯರಿಗೆÀ ಸಾಲ ಸೌಲಭ್ಯ : ಅರ್ಜಿ ಆಹ್ವಾನ

ಚಾಮರಾಜನಗರ, ಆ. 21 :- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2017-18ನೇ ಸಾಲಿಗೆ ಧನಶ್ರೀಯೋಜನೆಯಡಿ ಹೆಚ್,ಐ.ವಿ ಸೋಂಕಿತ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡಲಿದ್ದು, ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಫಲಾನುಭವಿಗಳಿಗೆ 25 ಸಾವಿರ ರೂ. ಬಡ್ಡಿರಹಿತ ಸಾಲ ಹಾಗೂ 25 ಸಾವಿರ ರೂ. ಸಹಾಯಧನ ಸೇರಿದಂತೆ ಒಟ್ಟು 50 ಸಾವಿರ ರೂ ನೀಡಲಾಗುತ್ತದೆ. ಅರ್ಜಿದಾರರು 18 ರಿಂದ 60ರ ವಯೋಮಿತಿಯೊಳಗಿರಬೇಕು, ಬ್ಯಾಂಕ್ ಖಾತೆ ಹೊಂದಿರಬೇಕು ಬ್ಯಾಂಕ್‍ಖಾತೆಗೆ ಆಧಾರ್‍ಲಿಂಕೇಜ್ ಆಗಿರಬೇಕು ಹೆಚ್‍ಐವಿ ಸೋಂಕು ಕುರಿತು ವೈದ್ಯಕೀಯ ವರದಿಯನ್ನು ಹೊಂದಿರಬೇಕು ಬಿಪಿಎಲ್ ಪಡಿತರಚೀಟಿ ಇರಬೇಕು.
ಅರ್ಜಿಯನ್ನು ಚೈತನ್ಯ ನೆಟ್‍ವರ್ಕ, ಭ್ರಮರಾಂಭ ಬಡಾವಣೆ,  5ನೇ ಕ್ರಾಸ್, ಲಕ್ಷ್ಮೀಪ್ರಿಂಟರ್ ಹತ್ತಿರ ಚಾಮರಾಜನಗರ ಇಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಯೊಂದಿಗೆ ಆಗಸ್ಟ್ 31 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಚೈತನ್ಯ ನೆಟ್‍ವರ್ಕ ಸಂಸ್ಥೆಯ ದೂರವಾಣಿ ಸಂಖ್ಯೆ 08226-222960 ಮೊಬೈಲ್ 9972970470 ಅಥವಾ ನಗರದ ಜಿಲ್ಲಾಡಳಿತಭವನದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ (ದೂರವಾಣಿ ಸಂಖ್ಯೆ. 08226-222445 ಮತ್ತು 224720) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸಾಲ ಸೌಲಭ್ಯಕ್ಕೆ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಆ. 21 - ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2017-18ನೇ ಸಾಲಿಗೆ ಲಿಂಗತ್ವ ಅಲ್ಪಸಂಖ್ಯಾತರ ಪುರ್ನವಸತಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ  ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಫಲಾನುಭವಿಗಳಿಗೆ 25 ಸಾವಿರ ರೂ. ಬಡ್ಡಿರಹಿತ ಸಾಲ ಹಾಗೂ 25 ಸಾವಿರ ರೂ. ಸಹಾಯಧನ ಸೇರಿದಂತೆ ಒಟ್ಟು 50 ಸಾವಿರ ರೂ ನೀಡಲಾಗುತ್ತದೆ. ಬ್ಯಾಂಕ್ ಖಾತೆ ಹೊಂದಿರಬೇಕು ಬ್ಯಾಂಕ್‍ಖಾತೆಗೆ ಆಧಾರ್‍ಲಿಂಕೇಜ್ ಆಗಿರಬೇಕು.
ಅರ್ಜಿಯನ್ನು ಸಮತ ಸೊಸೈಟಿ, ಭ್ರಮರಾಂಭ ಬಡಾವಣೆ, ನಂ 23/ 434 ಶ್ರೀರಾಮ ಕಾಂಪ್ಲೆಕ್ಸ್,  5ನೇ ಕ್ರಾಸ್, ಲಕ್ಷ್ಮೀಪ್ರಿಂಟರ್ ಹತ್ತಿರ ಚಾಮರಾಜನಗರ ಇಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಯೊಂದಿಗೆ ಆಗಸ್ಟ್ 31 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಸಮತ ಸೊಸೈಟಿ ಮೊಬೈಲ್ ಸಂಖ್ಯೆ 9742560353 ಹಾಗೂ 9945389581 ಅಥವಾ ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ (ದೂರವಾಣಿ ಸಂಖ್ಯೆ. 08226-222445 ಮತ್ತು 224720) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಆಗಸ್ಟ್ 22 ರಂದು ನಗರದಲ್ಲಿ ಶಿಕ್ಷಕರಿಗೆ ಕಾರ್ಯಗಾರ

ಚಾಮರಾಜನಗರ, ಆ. 21- ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ವತಿಯಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರಿಗೆ ಗುಣಾತ್ಮಕ ಶಿಕ್ಷಣಕ್ಕಾಗಿ ಪೋಷಕರ ಸಹಭಾಗಿತ್ವ ವಿಷಯ ಕುರಿತು ಆಗಸ್ಟ್ 22ರಂದು ಬೆಳಿಗ್ಗೆ 10 ಗÀಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮೌಲಾನ ಆಜಾದ್ ಮಾದರಿ ಶಾಲೆಯಲ್ಲಿ 6ನೇ ತರಗತಿ ಪ್ರವೇಶಕ್ಕೆ ಅವಕಾಶ

ಚಾಮರಾಜನಗರ, ಆ. 21 - ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಗರದ ಆರ್‍ಟಿಒ ಕಚೇರಿ ಬಳಿಯಿರುವ ಮೌಲಾನ ಆಜಾದ್ ಮಾದರಿ ಶಾಲೆಯಲ್ಲಿ 6ನೇ ತರಗತಿ ಪ್ರವೇಶಕ್ಕೆ ಅವಕಾಶವಿದೆ.
ಆಂಗ್ಲಮಾಧ್ಯಮದಲ್ಲಿ ಬೋಧನೆ ಮಾಡಲಿದ್ದು, ಉಚಿತವಾಗಿ ಪ್ರವೇಶ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದ ಮಲ್ಟಿಪರ್ಪಸ್ ಹಾಲ್‍ನಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (ದೂರವಾಣಿ ಸಂಖ್ಯೆ 08226-224370) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
       






No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು