ಶ್ರೀಕೃಷ್ಣಜನ್ಮಾಷ್ಠಮಿ-ಮೈಸೂರು ಮಡಿಕೆ ಒಡೆಯುವ ಉತ್ಸವಕ್ಕೆ ಚಾಲನೆ
ಚಾಮರಾಜನಗರ ಆ-20- ಹರೇಕೃಷ್ಣ ಮತ್ರ ಪಠಣೆಗೆ ಸಂಕೋಚ ಪಡಬಾರದು ಶ್ರೀಕೃಷ್ಣ ಸ್ಮರಣೆಯಿಂದ ಸ ಮನಸ್ಸಿಗೆ ನೆಮ್ಮದಿ,ಶಾಂತಿ ದೊರೆಯಲಿದೆ ಕೃಷ್ಣನ ಧ್ಯಾನಮಾಡಿ ಪ್ರತಿಯೊಬ್ಬರು ಕೃಷ್ಣನ ಅನುಗ್ರಹ ಪಡೆಯಬೇಕೆಂದು ಮೈಸೂರಿನ ಇಸ್ಕಾನ್ ಗುರುಗಳಾದ ಶ್ರೀರಸಿಕಶೇಖರದಾಸ್ ರವರು ತಿಳಿಸಿದರು.
ಅವರು ಶ್ರೀಕೃಷ್ಣ ಪ್ರತಿಷ್ಠಾನ ಶ್ರೀಕೃಷ್ಣಜನ್ಮಾಷ್ಠಮಿ-ಮೈಸೂರು ಮಡಿಕೆ ಒಡೆಯುವ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಕೃಷ್ಣನ ಸ್ಮರಣೆಯನ್ನು ಗಡಿಜಿಲ್ಲೆಯಲ್ಲಿ ಪ್ರಸರಿಸುತ್ತಿರುವ ಶ್ರೀಕ್ರಷ್ಣ ಪ್ರತಿಷ್ಠಾನದ ಶ್ರದ್ದೆ, ಭಕ್ತಿಯನ್ನು ಮೆಚ್ಚಿದರು ಮೊಸರು ಮಡಿಕೆಒಡೆಯುವ ಉತ್ಸವ ಶ್ರೀಕೃಷ್ಣನ ನಾಮ ಕೃಷ್ಣನ ಸಂದೇಶ ತಿಳಿಯಲು ಮಾರ್ಗವಾಗಿದೆ ಎಂದರು. ಶ್ರೀಷ್ಣನ ಉತ್ಸವದಲ್ಲಿ ಸಾವಿರಾರು ಭಕ್ತರು ಅಗಮಿಸುತ್ತಿರುವುದು ಸಂತಸ ತಂದಿದೆ ಎಂದು ಹರಿನಾಮ ಮತ್ರ ಪಠಣಮಾಡಿಸಿದರು.
ವಿಶೇಷವಾಗಿ ತಯಾರಾದ ಆರು ಅಡಿ ಸೈಕಲ್ ಬ್ರಾಂಡ್ ಅಗರ್‍ಬತ್ತಿಯನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದ ಕನ್ನಡ ಚಳುವಳಿಯ ನಾಯಕ ವಾಟಾಳ್‍ನಾಗರಾಜ್ ಶ್ರೀಕೃಷ್ಣ-ರಾಮ ಮಹಾಭಾರತ, ರಾಮಯಣದ ಅವತಾರ ಪುರುಶರು. ಅಧುನಿಕ ಕಾಲದಲ್ಲಿ ಹರೇರಾಮ ಹರೇಕೃಷ್ಣ ಪಠಣ ಹೆಚ್ಚಾಗುತ್ತಿದೆ. ದೇಶದಲ್ಲಿ ಬ್ರಷ್ಠಾಚಾರ ಹೆಚ್ಚಿದೆ ನಂಬಿಕೆ ಹೊಗುತ್ತಿದೆ. ಇದಕ್ಕೆ ಪರ್ಯಾಯ ಶ್ರೀಕೃಷ್ಣ ಸ್ಮರಣೆ ಯಿಂದ ಸಾದ್ಯ ವೆಂದರು. ಇಸ್ಕಾನ್ ಸಂಸ್ಥೆಯ ಬಗ್ಗೆ ನಮಗೆ ಅಪಾರ ಗೌರವವಿದೆ ಎಂದು ತಿಳಿಸಿದರು. ಶ್ರೀಕೃಷ್ಣ ಪ್ರತಿಷ್ಠಾನ ಗಡಿಜಿಲ್ಲೆಯಲ್ಲಿ ಸಾಂಸ್ಕøತಿಕ ಶ್ರೀಮಂತಕೆಯ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಕೃಷ್ನ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್.ಋಗ್ವೇದಿ ಮಾತನಾಡಿ ಯುವಕರು ಮಕ್ಕಳಲ್ಲಿ ಏಕತೆಯ ಶಕ್ತಿ ಯನ್ನು ತುಂಬಿ ಭಾರತೀಯ ಶ್ರೇಷ್ಟ ಸಂಸ್ಕøತಿಯನ್ನು ತಿಳಿಸುವ ಪ್ರಯತ್ನವಾಗಿದೆ ಮೊಸರುಮಡಿಕೆ ಒಡೆಯುವ ಸ್ಫರ್ದೆಯಿಂದ ಭಕ್ತಿ ಶ್ರಧ್ದೆ ಛಲ, ಸಾಹಸ, ಸಹಕಾರ,ಪರಸ್ಪರಗೌರವದ ಭಾವನೆ ಮೂಡುತ್ತದೆ. ಯುವತಿಯರು ಮೊಸರು ಮಡಿಕೆಒಡೆಯುವ ಉತ್ಸವದಲ್ಲಿ ಪಲ್ಗೋಂಡಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.
ಶ್ರೀಕೃಷ್ಣನ ವಿಗ್ರಹದೊಂದಿಗೆ ಕೊಂಬುಕಹಳೆ, ನಗಾರಿ, ವಾದ್ಯ, ಚಂಡೆವಾದನ ಭಜನೆಯೊಂದಿಗೆ ಶ್ರೀ ಚಾಮರಾಜೇಶ್ವರ ದೇವಾಸ್ಥನದ ಸುತ್ತ ಮರೆವಣಿಗೆ ನಡೆಸಲಾಯಿತು.
ರಥದ ಬೀದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಹರೇಕೃಷ್ಣ ಮಂತ್ರ ಜಪಿಸಿದರು. ಭಕ್ತಿಯ ಝೇಂಕಾರ ಮೊಳಗಿತು ಇಡೀ ಪ್ರದೇಶ ಅನಂದ ಸಾಗರದಲ್ಲಿ ಮುಳುಗಿತು.
12 ಪರುಷ 2 ಯುವತಿಯರ ತಂಡ ಶ್ರೀಕೃಷ್ಣ ರಾಧ ವೇಷಧಾರಿಗಳು ಬೆಣ್ಣೆ ತೆಗೆಯುವ ಕಾರ್ಯ ರೋಮಾಂಚನವಾಗಿತ್ತು.
ಅಮಚವಾಡಿ ಝಾನ್ಸಿರಾಣಿ ಯುವತಿಯರ ತಂಡ, ಭಾರತಿಪಡೆ ಸದಸ್ಯರು ಉತ್ಸವದಲ್ಲಿ ಗಮನ ಸೆಳೆದರು.
ನಾಡಪ್ರಭು ಕೆಂಪೇಗೌಡರದ್ದು ಜಾತ್ಯಾತೀತ ಮನೋಭಾವನೆ : ಸಂಸದ ಧ್ರುವನಾರಾಯಣ ...vss
ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೇಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಪೇಗೌಡ ಅವರು ಎಲ್ಲಾ ವರ್ಗದ ಜನರ ಒಳಿತಿಗಾಗಿ ಯೋಜನೆಗಳನ್ನು ರೂಪಿಸಿದರು. ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ಜನೋಪಯೋಗಿ ಕೆಲಸಕ್ಕೆ ಮುಂದಾದರು. ಕೃಷಿಕರಿಗೂ ಅನುಕೂಲವಾಗುವಂತೆ ಹಲವು ಪ್ರಯೋಜನಗಳನ್ನು ತಲುಪಿಸುವ ಕಾರ್ಯ ನಿರ್ವಹಿಸಿದರು. ಎಲ್ಲ ವರ್ಗ ಸಮಾಜವನ್ನು ಗೌರವಿಸಿ ನ್ಯಾಯ ಕೊಡುವ ಕೆಲಸ ಮಾಡುವ ಮೂಲಕ ಜಾತ್ಯಾತೀತ ಮನೋಭಾವನೆಯನ್ನು ತೋರಿದರು ಎಂದರು.
ಇಡೀ ಪ್ರಪಂಚದಲ್ಲೇ ಗುರುತಿಸಿಕೊಂಡಿರುವ ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡರ ದೂರದರ್ಶಿತ್ವ ಆಡಳಿತವು ಕಾರಣವಾಗಿದೆ. ಅಂದಿನ ಕಾಲದಲ್ಲೇ ವ್ಯಾಪಾರ ಉದ್ಯಮ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಿ ಅನುಕೂಲ ಕಲ್ಪಿಸಿಕೊಟ್ಟರು. ಹೀಗಾಗಿ ಇಂದಿಗೂ ಕಾಟನ್ ಪೇಟೆ, ಬನ್ನಿಪೇಟೆ, ಚಿಕ್ಕಪೇಟೆ ಇನ್ನಿತರ ಪ್ರದೇಶಗಳು ತಮ್ಮದೇ ಆದ ಉದ್ಯಮಗಳಲ್ಲಿ ಚಿರಪರಿಚಿತವಾಗಿವೆ ಎಂದು ಧ್ರುವನಾರಾಯಣ ಅಭಿಪ್ರಾಯಪಟ್ಟರು.
ಉದ್ಯಾನ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಕೆಂಪೇಗೌಡರ ಕಾಲದಲ್ಲೇ ಸಾಕಷ್ಟು ಗಿಡಮರ ತೋಪು ಪೋಷಣೆಗೆ ಹೆಸರಾಗಿತ್ತು. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೆಂಪೇಗೌಡರು ಶÀ್ರಮಿಸಿದ ಫಲವಾಗಿಯೇ ರಾಜ್ಯದ ರಾಜಧಾನಿಯಾಗುವ ಅವಕಾಶ ಬೆಂಗಳೂರಿಗೆ ಲಭಿಸಿತು. ಈ ಹಿನ್ನೆಲೆಯಲ್ಲಿ ಕೆಂಪೇಗೌಡರ ಕೊಡುಗೆ ಅನನ್ಯವಾದುದು ಎಂದು ಧ್ರುವನಾರಾಯಣ ತಿಳಿಸಿದರು.
ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಶಾಸಕರಾದ ಆರ್. ನರೇಂದ್ರ ಅವರು ಕೆಂಪೇಗೌಡ ಅವರು ಬೆಂಗಳೂರಿನ ವಾಣಿಜ್ಯ, ಕೃಷಿ ಪ್ರಗತಿಗಾಗಿ ಸಾಕಷ್ಟು ಒತ್ತು ಕೊಟ್ಟರು. ಅವರ ಕಾಲದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ. ಇದಕ್ಕಾಗಿಯೇ ಸರ್ಕಾರದ ವತಿಯಿಂದ ಕೆಂಪೇಗೌಡರ ಜಯಂತಿ ಆಚರಣೆ ಮೂಲಕ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ ಎಂದರು.
ಸಮಾಜದ ಜನರು ವ್ಯಾಪಾರ ಉದ್ಯಮದ ಜತೆಗೆ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕಿದೆ. ಅದರಲ್ಲೂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆ ಮಾಡಬಾರದು. ಉನ್ನತ ವ್ಯಾಸಂಗ ಮಾಡಿ ಒಳ್ಳೆಯ ಹುದ್ದೆಗಳಿಗೆ ಏರುವಂತಾಗಬೇಕು. ಕಾಲಕ್ಕೆ ತಕ್ಕಂತೆ ಅಭಿವೃದ್ಧಿಯ ಪರಿವರ್ತನೆಗೆ ಹೊಂದಿಕೊಳ್ಳಬೇಕು ಎಂದು ನರೇಂದ್ರ ಸಲಹೆ ಮಾಡಿದರು.
ಜಿಲ್ಲಾ ಕೇಂದ್ರದಲ್ಲಿ ಒಕ್ಕಲಿಗ ಸಮುದಾಯ ಭವನಕ್ಕೆ ಸ್ಥಳೀಯ ಶಾಸಕರು ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯಗತ ಮಾಡುವಂತೆ ನರೇಂದ್ರ ಅವರು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ರಾಜ್ಯ ಸರ್ಕಾರ ಮಹನೀಯರ ಜಯಂತಿ ಆಚರಣೆ ಕಾರ್ಯಕ್ರಮ ಮೂಲಕ ಅಮೂಲ್ಯ ಕೊಡುಗೆಗಳನ್ನು, ಮೌಲ್ಯಗಳನ್ನು ತಿಳಿಸಿಕೊಡುವ ಉತ್ತಮ ಕೆಲಸ ಮಾಡುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಒಕ್ಕಲಿಗ ಸಮುದಾಯ ಭವನಕ್ಕೆ ಅಗತ್ಯವಿರುವ ನೆರವು ಒದಗಿಸಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಪಿ.ಕೆ. ಕೆಂಪೇಗೌಡ ನಾಡಪ್ರಭು ಕೆಂಪೇಗೌಡರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇವೇಳೆ ಸಮಾಜದ ಅಭಿವೃದ್ಧಿ ಶ್ರಮಿಸಿದ ಚಿಕ್ಕಣ್ಣೇಗೌಡ, ಎಲ್. ಹನುಮಯ್ಯ ಹಾಗೂ ಮಂಚೇಗೌಡರನ್ನು ಸನ್ಮಾನಿಸಲಾಯಿತು.
ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಲಾ ಸೋಮಲಿಂಗಪ್ಪ, ಮರಗದಮಣಿ, ಶಿವಮ್ಮ,ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ, ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಆಕರ್ಷಕ ಜಾನಪದ ಕಲಾತಂಡಗಳೊಡನೆ ನಡೆದ ಕೆಂಪೇಗೌಡರ ಭಾವಚಿತ್ರ ಮೆರವಣಿಗೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಿ. ಪುಟ್ಟರಂಗಶೆಟ್ಟಿ ಹಾಗೂ ಆರ್. ನರೇಂದ್ರ ಅವರು ಚಾಲನೆ ನೀಡಿದರು.
ಆ. 20ರಂದು ನಗರದಲ್ಲಿ ಡಿ. ದೇವರಾಜ ಅರಸು ಜನ್ಮ ದಿನಾಚರಣೆ ಸಮಾರಂಭ
ಚಾಮರಾಜನಗರ, ಆ. 19 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ ಕ್ರಾಂತಿಯ ಹರಿಕಾರ, ಸಾಧನೆಗಳ ಸರದಾರ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಗಸ್ಟ್ 20ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ 9 ಗಂಟೆಗೆ ಚಾಮರಾಜೇಶ್ವರ ದೇವಾಲಯ ಬಳಿ ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆಯು ಕಲಾತಂಡಗಳೊಂದಿಗೆ ಆರಂಭವಾಗಲಿದೆ.
ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಅರಸು ಅವರ ಜನ್ಮ ದಿನಾಚರಣೆ ಸಮಾರಂಭವನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಘಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ತಿನ ಉಪಸಭಾಪತಿಗಳಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮೈಸೂರಿನ ಪ್ರಗತಿಪರ ಸಾಹಿತಿಗಳಾದ ಪ್ರೊ. ಕಾಳೇಗೌಡ ನಾಗವಾರ ಶ್ರೀ ಡಿ. ದೇವರಾಜ ಅರಸು ಅವರ ಬಗ್ಗೆ ಉಪನ್ಯಾಸ ನೀಡುವರು. ಮಧ್ಯಾಹ್ನ 2 ಗಂಟೆಗೆ ಇಲಾಖೆಯ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದÉ.
ಎಸ್ ಎಸ್ ಎಲ್ ಸಿ ಪರೀಕ್ಷೆ : ಖಾಸಗಿ ವಿದ್ಯಾರ್ಥಿಗಳಿಗೆ ನೋಂದಾಯಿಸಲು ಅವಕಾಶ
ಚಾಮರಾಜನಗರ, ಆ. 19:- 2017-18ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಖಾಸಗಿಯಾಗಿ ಹೊಸದಾಗಿ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲಾಗುವುದು.ನಗರದ ಜಿಲ್ಲಾಡಳಿತ ಭವನದಲ್ಲಿರುವ ಉಪನಿರ್ದೇಶಕರ ಕಚೇರಿಯಲ್ಲಿ ಸೆಪ್ಟೆಂಬರ್ 1ರೊಳಗೆ ಪೂರಕ ದಾಖಲಾತಿಗಳೊಂದಿಗೆ ಶಾಲೆಗಳ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಂಡ್ಲುಪೇಟೆ : ಡೇನಲ್ಮ್ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಜಿ ಆಹ್ವಾನ
ಚಾಮರಾಜನಗರ, ಆ. 19 :- ಗುಂಡ್ಲುಪೇಟೆ ಪುರಸಭೆಯು ಡೇನಲ್ಮ್ ಯೋಜನೆಯಡಿ ಸ್ವಸಹಾಯ ಗುಂಪಿನ ಸದಸ್ಯರು, ಎಎಲ್‍ಎಫ್ ಸದಸ್ಯರು ಹಾಗೂ ಕೌಶಲ್ಯ ತರಬೇತಿ ಪಡೆದಿರುವವರಿಗೆ ಸ್ವ ಉದ್ಯೋಗಕ್ಕಾಗಿ ಸಾಲ ಬಡ್ಡಿ ಸಹಾಯಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.ಎಸ್‍ಎಂಐಡಿ ಯೋಜನೆಯಡಿ ಮಹಿಳಾ ಮತ್ತು ಪುರುಷ, ವಿಕಲಚೇತನರ ಸ್ವಸಹಾಯ ಗುಂಪುಗಳನ್ನು (ಚಿಂದಿ ಆಯುವವರು, ರಿಕ್ಷಾ ಎಳೆಯುವವರು, ನೈರ್ಮಲ್ಯ ಕೆಲಸಗಾರರನ್ನು ಒಳಗೊಂಡಂತೆ) ರಚಿಸಿಕೊಡಲಾಗುವುದು. 3 ತಿಂಗಳ ನಂತರ ಸುತ್ತುನಿಧಿ ನೀಡಲಾಗುತ್ತದೆ. ಅರ್ಹ ಫಲಾನುಭವಿಗಳು ಸ್ವಸಹಾಯ ಗುಂಪುಗಳನ್ನು ರಚಿಸಲು ಇಚ್ಚಿಸುವವರು ಆಗಸ್ಟ್ 25ರೊಳಗೆ ಪುರಸಭೆ ಕಾರ್ಯಾಲಯ ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಂಸದರಿಂದ ಕೇಂದ್ರ ಅರಣ್ಯ ಸಚಿವರ ಭೇಟಿ: ಜಿಲ್ಲೆಯ ಅರಣ್ಯ ಸಂರಕ್ಷಣೆಗೆ ಹೆಚ್ಚು ನೆರವಿಗೆ ಮನವಿ ..........vss
ಚಾಮರಾಜನಗರ, ಆ. 19 - ಜಿಲ್ಲೆಯ ಪ್ರಸಿದ್ಧ ತಾಣ ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿದ್ದ ಕೇಂದ್ರ ವಿಜ್ಞಾನ, ತಂತ್ರಜ್ಞಾನ, ಪರಿಸರ ಹಾಗೂ ಅರಣ್ಯ ಸಚಿವರಾದ ಡಾ. ಹರ್ಷವರ್ಧನ್ ಅವರನ್ನು ಇಂದು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಭೇಟಿ ಮಾಡಿ ಜಿಲ್ಲೆಯ ಅರಣ್ಯ ಸಂರಕ್ಷಣೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಹಣ ಒದಗಿಸುವಂತೆ ಮನವಿ ಮಾಡಿದರು.ಕೆ. ಗುಡಿಯಲ್ಲಿಂದು ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿ ಸಮಾಲೋಚಿಸಿದ ಆರ್. ಧ್ರುವನಾರಾಯಣ ಅವರು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶವು ಇದ್ದು, ಇದರ ಒಟ್ಟು ವಿಸ್ತಾರವು 574.83ಚದರ ಕಿ.ಮೀ. ಇದೆ. ಈ ಪ್ರದೇಶವು ಹುಲಿಗಳ ಭರವಸೆದಾಯಕ ಆವಾಸ ತಾಣವಾಗಿದೆ. ಪ್ರಸ್ತುತ ಪ್ರತಿ 100 ಚ. ಕಿ.ಮೀ ಗೆ 10.21 ಹುಲಿ ಸಾಂದ್ರತೆ ಇದೆ. ಈ ಅಂಕಿಅಂಶಗಳು ಹುಲಿಗಳ ಆರೋಗ್ಯಕರ ಸಂಖ್ಯೆಯನ್ನು ಸೂಚಿಸುತ್ತದೆ. ಇದಕ್ಕೆ ಅನುಗುಣವಾಗಿ ಉತ್ತಮ ಸಂರಕ್ಷಣೆಗೆ ಹೆಚ್ಚಿನ ಅನುದಾನ ಅಗತ್ಯವಿದೆ ಎಂದು ಧ್ರುವನಾರಾಯಣ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಹುಲಿ ಸಂರಕ್ಷಿತ ಪ್ರದೇಶ ನಿರ್ವಹಣೆಗೆ ಸಂಬಂಧಿಸಿದಂತೆ ಕಳ್ಳಬೇಟೆ, ಅಗ್ನಿ ಅನಾಹುತ, ಮಾನವ-ಪ್ರಾಣಿ ಸಂಘರ್ಷ ತಡೆ ಚಟುವಟಿಕೆಗಳಿಗೆ ಹೆಚ್ಚಿನ ನೆರವು ಬೇಕಿದೆ. ಹುಲಿಗಳ ಆವಾಸ ತಾಣವನ್ನು ಮತ್ತಷ್ಟು ಉತ್ತಮವಾಗಿ ನಿರ್ವಹಿಸಲು ಹೆಚ್ಚು ಅರ್ಥಿಕ ನೆರವು ಅವಶ್ಯವಿದೆ. ಆದರೆ ಪ್ರತಿ ವರ್ಷ ಹುಲಿ ಸಂರಕ್ಷಿತ ಪ್ರದೇಶ ನಿರ್ವಹಣೆ ಹಾಗೂ ಸಂರಕ್ಷಣೆಗೆ ಬಿಡುಗಡೆಯಾಗುತ್ತಿರುವ ಅನುದಾನ ಮತ್ತು ಮಂಜೂರಾತಿಯಲ್ಲಿ ಕಡಿಮೆಯಾಗುತ್ತಾ ಬರುತ್ತಿದೆ ಎಂದು ಲೋಕಸಭಾ ಸದಸ್ಯರು ಕೇಂದ್ರ ಸಚಿವರ ಗಮನ ಸೆಳೆದರು.
ಹುಲಿ ಸಂರಕ್ಷಿತ ಪ್ರದೇಶ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ನೆರವಾಗಲು ಅನುವಾಗುವಂತೆ ಸಾಕಷ್ಟು ಅನುದಾನ ನೀಡಬೇಕು. ಸಕಾಲಕ್ಕೆ ಅರ್ಥಿಕ ನೆರವು ಬಿಡುಗಡೆ ಮಾಡುವ ಮೂಲಕ ಪ್ರಾಕೃತಿಕ ಸಂಪತ್ತು ಸಂರಕ್ಷಣೆಗೆ ಅನುಕೂಲ ಕಲ್ಪಿಸಬೇಕೆಂದು ಕೋರಿ ಮನವಿ ಪತ್ರವನ್ನು ಕೇಂದ್ರ ಅರಣ್ಯ ಸಚಿವರಿಗೆ ಧ್ರುವನಾರಾಯಣ ಸಲ್ಲಿಸಿದರು.
ಕಾಡುಪ್ರಾಣಿಗಳಿಂದ ಉಂಟಾಗುವ ಬೆಳೆಹಾನಿಗೆ ನೀಡಲಾಗುತ್ತಿರುವ ಪರಿಹಾರವು ವೈಜ್ಞಾನಿಕವಾಗಿ ನಿಗದಿಯಾಗಬೇಕು. ಪ್ರತಿವರ್ಷ ಕೃಷಿ ಚಟುವಟಿಕೆಗಳಗೆ ಬೇಕಿರುವ ರಸಗೊಬ್ಬರ, ಬಿತ್ತನೆಬೀಜ, ಇನ್ನಿತರ ಪರಿಕರಗಳ ಬೆಲೆಯು ಹೆಚ್ಚಾಗುತ್ತಲೇ ಇದೆ. ಕೃಷಿ ಉತ್ಪಾದನಾ ವೆಚ್ಚವು ಏರಿಕೆಯಾಗುತ್ತಿದೆ. ಹೀಗಾಗಿ ಪ್ರತಿವರ್ಷ ರೈತರು ಕೃಷಿ ಚಟುವಟಿಕೆಗಳಿಗೆ ಮಾಡಲಾಗುವ ವೆಚ್ಚವನ್ನು ಪರಿಗಣಿಸಿ ಪರಿಹಾರ ಧನವನ್ನು ನೀಡಬೇಕು ಎಂದು ಧ್ರುವನಾರಾಯಣ ಮನವಿ ಮಾಡಿದರು.
ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಹಾವಳಿ ತಡೆಗೆ ರೈಲ್ವೆಕಂಬಿಗಳನ್ನು ಬಳಸಿ ಬೇಲಿ, ಕಂದಕ ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಕಿ. ಮೀ. ಗೆ 1.60 ಕೋಟಿ ರೂ. ನಷ್ಟು ರೈಲುಕಂಬಿಗಳು ಅಗತ್ಯವಿದೆ. ಇದನ್ನು ರಿಯಾಯಿತಿ ದರದಲ್ಲಿ ಪೂರೈಕೆ ಮಾಡಲು ಕೇಂದ್ರ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಡಲು ಸಹ ಧ್ರುವನಾರಾಯಣ ಅರಣ್ಯ ಸಚಿವರನ್ನು ಕೋರಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.
No comments:
Post a Comment