ಮಾವು ಬೆಳೆಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡರೆ ಲಾಭ ಹೆಚ್ಚಳ : ಡಾ. ಎಂ.ಸಿ. ಮೋಹನಕುಮಾರಿ ಸಲಹೆ
ಚಾಮರಾಜನಗರ, ಆ. 31 - ತಾಂತ್ರಿಕತೆಯನ್ನು ಅಳವಡಿಸಿಕೊಂಡು ವೈಜ್ಞಾನಿಕ ಮಾದರಿಯಲ್ಲಿ ಮಾವು ಬೆಳೆಯುವುದರಿಂದ ರೈತರು ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ ಎಂದು ಶಾಸಕಿ ಡಾ. ಎಂ.ಸಿ. ಮೋಹನಕುಮಾರಿ ಉರುಫ್. ಗೀತಾ ತಿಳಿಸಿದರು.ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ರಾಜು ಅವರ ಮಾವಿನ ತೋಟದಲ್ಲಿಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ಮಾವಿನ ತೋಟಗಳ ಪುನಶ್ಚೇತನ, ನಿರ್ವಹಣೆ ಹಾಗೂ ಸವರುವಿಕೆ ಕುರಿತು ರೈತರಿಗೆ ಆಯೋಜನೆ ಮಾಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಾವು ಒಬ್ಬ ಕೃಷಿಕರಾಗಿದ್ದು, ಮಹದೇವಪ್ರಸಾದ್ ಅವರು ಸಕ್ರಿಯ ರಾಜಕಾರಣದಲ್ಲಿದ್ದ ಸಂದರ್ಭದಲ್ಲಿ ತೋಟವನ್ನು ನೋಡಿಕೊಳ್ಳುತ್ತಿದ್ದೆ. ಕೇರಳದಿಂದ ವಿವಿಧ ಜಾತಿ ಹಣ್ಣಿನ ಸಸಿಗಳನ್ನು ತಂದು ನೆಟ್ಟು ಪೋಷಣೆ ಮಾಡುತ್ತಿದ್ದೇವೆ. ಮಾವು ಬೆಳೆಯನ್ನು ಸರಿಯಾದ ರೀತಿಯಲ್ಲಿ ಗೊಬ್ಬರ ನೀರು ಹಾಕಿ ಪೋಷಣೆ ಮಾಡಿದರೆ, ಹೆಚ್ಚಿನ ಇಳುವರಿಯನ್ನು ಪಡೆದುಕೊಳ್ಳಲು ಸಾಧ್ಯವಿದೆ. ಗಿಡಗಳು ಕನಿಷ್ಟು ಮೂರು ವರ್ಷಗಳವರೆಗೆ ಬಲಿಷ್ಟವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಬಿಡುವ ಹೂವು ಮತ್ತು ಕಾಯಿ, ರಂಬೆಗಳನ್ನು ಕತ್ತರಿಸಿ ಗಿಡ ಬೆಳೆವಣಿಗೆ ಹೆಚ್ಚಿನ ಅದ್ಯತೆ ನೀಡಿದಾಗ ಮುಂದಿನ ದಿನಗಳಲ್ಲಿ ಲಾಭ ಪಡೆದುಕೊಳ್ಳಲು ಸಾಧ್ಯವಿದೆ ಎಂದರು.
ಜಿಲ್ಲೆಯಲ್ಲಿಯೂ ಮಾವು ಬೆಳೆಗೆ ಹವಾಮಾನ ಪೂರಕವಾಗಿದೆ. ರೈತರು ಮಾವಿನ ಸಸಿಗಳನ್ನು ವೈಜ್ಞಾನಿಕವಾಗಿ ನೆಟ್ಟು ಕೃಷಿ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು. ಮಾವು ಅಭಿವೃದ್ದಿ ನಿಗಮ, ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸಹಾಯಧನ ಮತ್ತು ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಮಾವಿನ ಗಿಡಗಳನ್ನು ಬೆಳೆಯುವ ಜೊತೆಗೆ ಅಂತರ ಬೆಳೆಗಳಿಗೆ ನಿಗಾ ವಹಿಸಿದರೆ, ತಮಗೆ ಇರುವ ಭೂಮಿಯಲ್ಲಿಯೇ ಆದಾಯ ಕಂಡುಕೊಳ್ಳಲು ಸಾಧ್ಯವಿದೆ. ಕ್ಷೇತ್ರದ ರೈತರು ಸಹ ಮಾವು ಬೆಳೆಯ ಬಗ್ಗೆ ತಿಳಿದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ತೆರಕಣಾಂಬಿ ಭಾಗದಲ್ಲಿ ಮಾವು ಬೆಳೆ ಕುರಿತು ಕಾರ್ಯಾಗಾರವನ್ನು ನಡೆಸುವಂತೆ ಗೀತಾ ತಿಳಿಸಿದರು.
ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮ ಅಧ್ಯಕ್ಷ ಎಲ್. ಗೋಪಾಲಕೃಷ್ಣ ಅವರು ರೈತರ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿ ರಾಜ್ಯದಲ್ಲಿ ಶೇಕಡ 40 ರಷ್ಟು ಮಾವಿನ ಹಣ್ಣಿನ ಉತ್ಪಾದನೆಯಲ್ಲಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಅಭಿವೃದ್ದಿ ನಿಗಮದಿಂದ ಮಾವು ಇಳುವರಿಯನ್ನು ಅಧಿಕಗೊಳಿಸಿ, ಗುಣಮಟ್ಟವನ್ನು ವೃದ್ದಿಸಿಕೊಳ್ಳಲು ಜಿಲ್ಲಾವಾರು ಕಾರ್ಯಾಗಾರವನ್ನು ನಡೆಸಲಾಗುತ್ತಿದೆ. ಮಾವು ತೋಪುಗಳನ್ನು ಅಭಿವೃದ್ದಿಪಡಿಸುವ ವಿಧಾನ, ಮಾರುಕಟ್ಟೆಯನ್ನು ವಿಸ್ತರಣೆಯ ಬಗ್ಗೆ ಜಾಗೃತಿ ಮೂಡಿಸಿಕೊಂಡಾಗ ಅರ್ಥಿಕ ಪ್ರಗತಿ ಹೊಂದಬಹುದಾಗಿದೆ ಎಂದರು.
ಮಾವು ಬೇಸಾಯವನ್ನು ಅಸಕ್ತಿ ವಹಿಸದೆ ಮಾಡಿದರೆ ಲಾಭಗಿಂತ ನಷ್ಟವೇ ಹೆಚ್ಚಾಗುತ್ತದೆ. ಹೀಗಾಗಿ ರೈತರು ಶ್ರದ್ದೆಯಿಂದ ಮಾವಿನ ಗಿಡಗಳನ್ನು ಮಕ್ಕಳನ್ನು ಪೋಷಣೆ ಮಾಡುವ ಮಾದರಿಯಲ್ಲಿ ಆರೈಕೆ ಮಾಡಿದರೆ, ಹೆಚ್ಚಿನ ಲಾಭ ದೊರೆಯಲಿದೆ. ವೈಜ್ಞಾನಿಕ ಪದ್ದತಿಯನ್ನು ಅಳವಡಿಸಿಕೊಳ್ಳಲು ಮಾವು ಬೆಳೆಯುವುದರಿಂದ ಕಟಾವು, ಹಣ್ಣು ಸಂಸ್ಕರಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ನಿಗಮ ರೈತರಿಗೆ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನೀಡಲಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಾವು ಅಭಿವೃದ್ದಿ ಮಂಡಲಿ ನಿರ್ದೇಶಕರಾದ ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಮಾವು ಬೆಳೆಯುವ ರೈತರಿಗೆ ನಿಗಮದಿಂದ ಸವಲತ್ತು ಕಲ್ಪಿಸಲು ನಿಗಮ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಮಾವು ಬೆಳೆಯವು ರೈತರಿಗೆ ಉತ್ತೇಜನ, ಗಿಡಗಳ ವಿತರಣೆ, ಮಾವು ಬೆಳೆದ ರೈತರ ಜಮೀನಿನಲ್ಲಿ ಪ್ರಾತ್ಯಕ್ಷತೆ, ಮಾವು ಬೆಳೆ ಕುರಿತು ಕಾರ್ಯಾಗಾರವನ್ನು ತಾಲೂಕುವಾರು ಆಯೋಜನೆ ಮಾಡಲಾಗಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಆರೋಗ್ಯಕರವಾದ ರಸಭರಿತ ಮಾವಿನ ಹಣ್ಣುಗಳನ್ನು ಪೂರೈಸುವ ಹಾಗೂ ಜಾಗೃತಿ ಮೂಡಿಸುವ ಮಾವು ಮೇಳವನ್ನು ಜಿಲ್ಲಾಕೇಂದ್ರದಲ್ಲಿ ನಡೆಸಲಾಗಿದೆ ಎಂದು ತಿಳಿಸಿದರು.
ಜಿ.ಪಂ ಕೃಷಿ ಮತ್ತು ಕೈಗಾರಿಕಾ ಸಮಿತಿಯ ಅಧ್ಯಕ್ಷ ಕೆರೆಹಳ್ಳಿ ನವೀನ್, ಜಿ.ಪಂ. ಸದಸ್ಯರಾದ ರತ್ನಮ್ಮ ಶ್ರೀಕಂಠಪ್ಪ, ಚೆನ್ನಪ್ಪ, ಮಹೇಶ್, ನಿಗಮದ ನಿರ್ದೇಶಕರಾದ ಜಿ.ಎಸ್. ಗೌಡರ್, ಎಚ್.ಸಿ. ಮೊರಬ್, ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ, ಬೇಗೂರು ಗ್ರಾ.ಪಂ. ಉಪಾಧ್ಯಕ್ಷೆ ಚೈತ್ರಾ, ಕೃಷಿ ವಿಜ್ಞಾನ ಕೇಂದ್ರ ವಿಷಯ ತಜ್ಞ ಮೋಹನ್‍ಕುಮಾರ್, ತೋಟಗಾರಿಕೆಯ ಇಲಾಖೆಯ ಉಪ ನಿರ್ದೇಶಕ ನಾಗರಾಜು, ಮುಖಂಡರಾದ ಬಿ.ಎಂ. ಮುನಿರಾಜು ಕಾರ್ಯಕ್ರಮದಲ್ಲಿ ಇತರರು ಇದ್ದರು.
ಅಪ್ರೆಂಟಿಸ್ ತರಬೇತಿಗೆ ಪತ್ರಿಕೋದ್ಯಮ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, :ಕೃಷಿ ಇಲಾಖೆಯು ಪ್ರಸಕ್ತ ಸಾಲಿನ ರಾಜ್ಯವಲಯದಡಿಯಲ್ಲಿ ‘ಗ್ರಾಮೀಣ ಕೃಷಿ ಯಂತ್ರೋಪಕರಣ, ಸೇವಾ ಕೇಂದ್ರÀಗಳನ್ನು ಪ್ರತಿ ತಾಲೂಕಿಗೆ ಒಂದರಂತೆ’ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸೇವಾಕೇಂದ್ರ್ರಗಳನ್ನು ತೆರೆಯಲು ಮುಂದಾಗಿದೆ.
ಗ್ರಾಮೀಣ ಯುವಕರನ್ನು ಕೃಷಿಯೆಡೆಗೆ ಆಕರ್ಷಿಸಲು ಹಾಗೂ ಸ್ಥಳೀಯವಾಗಿ ಸಣ್ಣ ಕೃಷಿ ಉಪಕರಣಗಳ ತಯಾರಿಕೆ ಸೌಲಭ್ಯದೊಂದಿಗೆ ಕೃಷಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ಮತ್ತು ಯುವ ರೈತರನ್ನು ಕೃಷಿ ಕ್ಷೇತ್ರದಲ್ಲಿಯೇ ಉಳಿಸಿಕೊಂಡು ಅವರಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಸೇವಾಕೇಂದ್ರಗಳನ್ನು ಸ್ಥಾಪಿಸುವ ಕಾರ್ಯಕ್ರಮವನ್ನು ಬ್ಯಾಂಕ್ ಲಿಂಕೇಜ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.
ಇಲಾಖೆವತಿಯಿಂದ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಪಟ್ಟಣ ಪಂಚಾಯಿತಿ, ಮುನಿಸಿಪಲ್ ಮತ್ತು ನಗರ ಪ್ರದೇಶಗಳನ್ನು ಹೊರತುಪಡಿಸಿ ತಾಲೂಕಿನಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣ, ಸೇವಾಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ತಾಲೂಕು ಕೇಂದ್ರಕ್ಕೆ ಒಂದರಂತೆ ಕೃಷಿ ಚಟುವಟಿಕೆಗಳು ಹೆಚ್ಚು ಇರುವ ಹೋಬಳಿಯಲ್ಲಿ ಆಯೋಜಿಸಲಾಗುವುದು.
ಸೇವಾಕೇಂದ್ರಗಳನ್ನು ಸ್ಥಾಪಿಸಲು ಕನಿಷ್ಠ 20*15 ಅಡಿ ಅಳತೆಯ ಕೊಠಡಿ, ಗೋದಾಮು ಇರಬೇಕಾಗುತ್ತದೆ. ಈ ಯೋಜನೆಗೆ ಕೃಷಿ ಇಂಜಿನಿಯರಿಂಗ್, ಕೃಷಿ, ಆಟೋಮೊಬೈಲ್, ಮೆಕಾನಿಕಲ್ ವಿಷಯಗಳಲ್ಲಿ ಡಿಪ್ಲೋಮಾ ಹಾಗೂ ಐಟಿಐ, ಪಿಯುಸಿ ತೇರ್ಗಡೆ ಹೊಂದಿರುವ ಗ್ರಾಮೀಣ ಯುವಕರನ್ನು ಪರಿಗಣಿಸಲಾಗುವುದು. ಅಲ್ಲದೆ ಕೃಷಿ ವಿಶ್ವವಿದ್ಯಾಲಯದಿಂದ ಯಂತ್ರೋಪಕರಣಗಳ ದುರಸ್ಥಿ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ತರಬೇತಿ ಪಡೆದಿರುವ ಬಗ್ಗೆ ಪ್ರಮಾಣಪತ್ರ ಹೊಂದಿರಬೇಕು ಮತ್ತು ರೈತ ಕುಟುಂಬಕ್ಕೆ ಸೇರಿದವರಾಗಿಬೇಕು.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮಾಡಲು ಜಿಲ್ಲೆಯಲ್ಲಿ ವರ್ಗವಾರು ಸಾಮಾನ್ಯ-02ರನ್ವಯ ಗುಂಡ್ಲುಪೇಟೆ-01, ಮತ್ತು ಯಳಂದೂರು-01 ಹಾಗೂ ಪರಿಶಿಷ್ಟ ಜಾತಿಗೆ ಚಾಮರಾಜನಗರ-01 ಮತ್ತು ಪರಿಶಿಷ್ಟ ವರ್ಗಕ್ಕೆ ಕೊಳ್ಳೇಗಾಲ-01ರಂತೆ ನಿಗದಿಪಡಿಸಿದೆ. ಆಯಾ ತಾಲೂಕಿನಲ್ಲಿ ಆಯಾ ವರ್ಗದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಅಭ್ಯರ್ಥಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾಮಟ್ಟದ ಸಮಿತಿಯು ಆಯ್ಕೆ ಮಾಡಲಿದೆ. ಅಭ್ಯರ್ಥಿಗಳು ಕನಿಷ್ಠ 18ರಿಂದ 45ರ ವಯೋಮಿತಿಯಲ್ಲಿರಬೇಕಾಗಿದೆ. ಒಂದಕ್ಕಿಂತ ಹೆಚ್ಚು ಸಮಾನ ವಿದ್ಯಾರ್ಹತೆ ಹಾಗೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು.
ಸೇವಾಕೇಂದ್ರಗಳಲ್ಲಿ ಟಿಲ್ಲರ್, ಪವರ್ ಟಿಲ್ಲರ್, ಪಂಪ್‍ಸೆಟ್, ಸಸ್ಯ ಸಂರಕ್ಷಣಾ ಉಪಕರಣಗಳು, ಸೂಕ್ಷ್ಮ ನೀರಾವರಿ ಘಟಕಗಳು ಮತ್ತು ಬೋರ್‍ವೆಲ್‍ಗಳ ದುರಸ್ಥಿಯನ್ನೊಳಗೊಂಡಂತೆ ಕೃಷಿ ಚಟುವಟಿಕೆಗಳಿಗೆ ಬೇಕಾದ ಎಲ್ಲ ಯಂತ್ರೋಪಕರಣಗಳ ದುರಸ್ಥಿ ಮಾಡಬೇಕಿರುತ್ತದೆ. ಯಂತ್ರೋಪಕರಣಗಳ ದುರಸ್ಥಿಗೆ ಬೇಕಾದ ಟೂಲ್ ಕಿಟ್, ಗ್ರೈಂಡಿಂಗ್ ಮೆಷಿನ್, ಹ್ಯಾಂಡ್ ಡ್ರಿಲ್ಲಿಂಗ್ ಮೆಷಿನ್, ವೆಲ್ಡಿಂಗ್ ಮೆಷಿನ್, ಸ್ಪಾಟ್ ವೆಲ್ಡಿಂಗ್ ಮೆಷಿನ್, ಕಟ್ಟಿಂಗ್ ಮೆಷಿನ್, ಏರ್ ಕಂಪ್ರೆಸ್ಸರ್, ಬೇರಿಂಗ್ ಪುಲ್ಲರ್ ಮತ್ತು ಇತರೆ ಅವಶ್ಯವಿರುವ ಉಪಕರಣಗಳನ್ನು ಹೊಂದಿರಬೇಕಾಗಿದೆ.
ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಕನಿಷ್ಠ ಶೇ. 50ರಷ್ಟು ಅಂದರೆ ಗರಿಷ್ಠ 5 ಲಕ್ಷ ರೂ. ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ 75ರಷ್ಟು ಅಂದರೆ 7.50 ಲಕ್ಷ ರೂ. ಗಳ ಮಿತಿಯೊಳಗೆ, ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಸಹಾಯಧನವನ್ನಾಗಿ ಬ್ಯಾಂಕ್ ಸಾಲದ ಆಧಾರದಲ್ಲಿ ಒಂದು ಬಾರಿ ನೀಡಲಾಗುವುದು.
ಪ್ರೋತ್ಸಾಹಧನ ಪಡೆಯಲು ರಾಷ್ಟ್ರೀಕೃತ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ರಾಜ್ಯ ಸರ್ಕಾರಿ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು, ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್ ಮತ್ತು ನಬಾರ್ಡ್ ಬ್ಯಾಂಕುಗಳಿಂದ ಸಾಲ ಪಡೆಯಬೇಕಾಗಿದೆ.
ಆಯ್ಕೆಯಾದ ಅಭ್ಯರ್ಥಿಯು ಗ್ರಾಮೀಣ ಕೃಷಿ ಯಂತ್ರೋಪಕರಣ, ಸೇವಾಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದಂತೆ ಕೃಷಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಹಾಗೂ ಈ ಸೇವಾಕೇಂದ್ರಗಳಲ್ಲಿ ಕನಿಷ್ಠ 6 ವರ್ಷಗಳವರೆಗೆ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆ ಪಡೆಯಲು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಅವರು ಮನವಿ ಮಾಡಿದ್ದಾರೆ.
ಅಪ್ರೆಂಟಿಸ್ ತರಬೇತಿಗೆ ಅರ್ಜಿ ಅಹ್ವಾನ
ಚಾಮರಾಜನಗರ, ಆ. - ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ಸಾಲಿನ ವಿಶೇಷ ಘಟಕ ಯೋಜನೆ(ಎಸ್‍ಸಿಎಸ್‍ಪಿ)ಯಡಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವೀಧರರಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಅಹ್ವಾನಿಸಿದೆ.
ಜಿಲ್ಲಾ ಕಚೇರಿಗಳಲ್ಲಿ ಕ್ಷೇತ್ರಪ್ರಚಾರ ಹಾಗೂ ಮಾಧ್ಯಮ ಕ್ಷೇತ್ರದÀಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸೆಪ್ಟೆಂಬರ್ 2017ರಿಂದ ಮಾರ್ಚ್ 2018ರ ವರೆಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು 20 ಸಾವಿರ ರೂ. ಗೌರವಧನವನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಒಟ್ಟು ಇಬ್ಬರು ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿಕೊಂಡು ತರಬೇತಿ ಕೊಡಲಾಗುತ್ತದೆ.ಅಭ್ಯರ್ಥಿಗಳು 22 ರಿಂದ 38ರ ವಯಸ್ಸಿನವರಾಗಿರಬೇಕು. ಕನ್ನಡ ಹಾಗೂ ಗಣಕಯಂತ್ರದ ಜ್ಞಾನ ಹೊಂದಿರಬೇಕು. ಬೇರೆ ಯಾವುದೇ ಉದ್ಯೋಗದಲ್ಲಿರಬಾರದು. ಜಿಲ್ಲೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಸ್ಥಳೀಯವಾಗಿ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಪಕ್ಕದ ಜಿಲ್ಲೆಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.
ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 4 ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಚಾಮರಾಜನಗರದ ಜಿಲ್ಲಾಡಳಿತ ಭವನದ ಅವರಣದಲ್ಲಿರುವ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ ಹಾಗೂ ದೂರವಾಣಿ ಸಂಖ್ಯೆ: 08226-224731 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸೀವಿಂಗ್ ಮಿಷನ್ ಆಪರೇಟರ್ ತರಬೇತಿ : ಅಭ್ಯರ್ಥಿಗಳಿಗೆ ನೇರ ಸಂದರ್ಶನ
ಚಾಮರಾಜನಗರ, ಆ. 31:- ಕೈಮಗ್ಗ ಮತ್ತು ಜವಳಿ ಇಲಾಖೆಯು 45 ದಿನಗಳ ಅವಧಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳ ಸೀವಿಂಗ್ ಮಿಷನ್ ಆಪರೇಟರ್ ತರಬೇತಿಯನ್ನು ನಿರುದ್ಯೋಗಿ ಯುವ ಅಭ್ಯರ್ಥಿಗಳಿಗೆ ನೀಡುವ ಸಲುವಾಗಿ ನೇರ ಸಂದರ್ಶನ ನಡೆಸÀಲಿದೆ.
ಅಭ್ಯರ್ಥಿಗಳು 18 ರಿಂದ 35ರ ವಯೋಮಿತಿಯೊಳಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾಗಿದ್ದಲ್ಲಿ 18 ರಿಂದ 40ರ ವಯೋಮಿತಿಯೊಳಗಿರಬೇಕು. ಕನಿಷ್ಟ 5ನೇ ತರಗತಿ ವ್ಯಾಸಂಗ ಮಾಡಿರಬೇಕು.
ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ನಗರದ ದೇವಾಂಗ ಬೀದಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯಲ್ಲಿ (ದೂ.ಸಂ.08226-222454) ಸೆಪ್ಟೆಂಬರ್ 12ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ, ನಗರದ ವಾಣಿಯಾರ್ ಸ್ಟ್ರೀಟ್‍ನಲ್ಲಿರುವ ಕಾವ್ಯಶ್ರೀ ಗಾರ್ಮೆಂಟ್ಸ್‍ನಲ್ಲಿ (ಮೊ. 9880905210) ಸೆಪ್ಟೆಂಬರ್ 12ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮರಿಯಾಲದ ಜೆಎಸ್‍ಎಸ್ ನೈಪುಣ್ಯ ತರಬೇತಿ ಕೇಂದ್ರದಲ್ಲಿ (ದೂ.ಸಂ. 08226-230170) ಸೆಪ್ಟೆಂಬರ್ 12ರಂದು ಮಧ್ಯಾಹ್ನ 12.30 ರಿಂದ 1.30 ಗಂಟೆಯವರೆಗೆ ಸಂದರ್ಶನ ನಡೆಸಲಾಗುವುದು.
ಗುಂಡ್ಲುಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪಟ್ಟಣದ ಜೆ ಎಸ್ ಎಸ್ ಕಾಲೇಜು ಎದುರು ಇರುವ ಉದಯರವಿ ಸೇವಾ ಸಂಸ್ಥೆ (ಮೊ. 9632786586) ಯಲ್ಲಿ ಸೆಪ್ಟೆಂಬರ್ 12ರಂದು ಮಧ್ಯಾಹ್ನ 3.30 ರಿಂದ 4.30 ಗಂಟೆಯವರೆಗೆ ಸಂದರ್ಶನ ನಡೆಯಲಿದೆ.
ಕೊಳ್ಳೇಗಾಲದ ಬಣ್ಣಾರಿ ಅಮ್ಮನ್ ದೇವಸ್ಥಾನದ ಪಕ್ಕ ಪೀಸ್ ಪಾರ್ಕ್ ರಸ್ತೆಯ ಕಲ್ಪತರು ಗಾರ್ಮೆಂಟ್ಸ್‍ನಲ್ಲಿ (ಮೊ. 9986912896) ಸೆಪ್ಟೆಂಬರ್ 13ರಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30ರವರೆಗೆ ಸಂದರ್ಶನ ನಡೆಯಲಿದೆ.
ಹನೂರು ಪಟ್ಟಣದ ಕ್ರಿಸ್ತರಾಜ ಕಾನ್ವೆಂಟ್ ಹತ್ತಿರದ ಮಿಲ್ ರಸ್ತೆಯಲ್ಲಿರುವ ಮಾತೃಶ್ರೀ ಗಾರ್ಮೆಂಟ್ಸ್‍ನಲ್ಲಿ (ಮೊ. 9986912896) ಸೆಪ್ಟೆಂಬರ್ 13ರಂದು ಮಧ್ಯಾಹ್ನ 2.30 ರಿಂದ 3.30 ಗಂಟೆಯವರೆಗೆ ಸಂದರ್ಶನ ನಡೆಯಲಿದೆ.
ಅಭ್ಯರ್ಥಿಗಳು ಶೇ. 80ರಷ್ಟು ಹಾಜರಾತಿ ಪಡೆದಲ್ಲಿ ಶಿಷ್ಯ ವೇತನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಆಯಾ ನಿಗದಿತ ದಿನಾಂಕದಂದು ಅರ್ಜಿ ಹಾಗೂ ವಿದ್ಯಾಭ್ಯಾಸ ಪ್ರಮಾಣಪತ್ರ, ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರ, ವಯಸ್ಸಿನ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ (ಬೇರೆ ತಾಲೂಕಿನಲ್ಲಿ ವ್ಯಾಸಂಗ ಮಾಡಿದ ಅಬ್ಯರ್ಥಿಗಳಿಗೆ) ಇನ್ನಿತರ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಸಂಪೂರ್ಣ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿ ಅಥವಾ ದೂ.ಸಂ. 08226-222883 ಸಂಪಕಿಸುವಂತೆ ಪ್ರಕಟಣೆ ತಿಳಿಸಿದೆ.
ಸೆ. 1ರಂದು ಚಾ.ನಗರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನಾ ಸಮಾರಂಭ
ಚಾಮರಾಜನಗರ, ಆ. 31 - ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಸೆಪ್ಟೆಂಬರ್ 1ರಂದು ಬೆಳಿಗ್ಗೆ 10.30 ಗಂಟೆಗೆ ಚಾಮರಾಜನಗರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದೆ.ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಕ್ರೀಡಾಕೂಟ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅಧ್ಯಕ್ಷತೆ ವಹಿಸುವರು.
ನಗರಸಭೆ ಅಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಎಸ್. ಬಸವರಾಜು, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ನವೀನ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್. ಬಾಲರಾಜು, ಸಿ.ಎಸ್. ಬಾಲರಾಜು, ಶಶಿಕಲಾ, ಎಂ. ಚಂದ್ರಕಲಾ ಚಂದ್ರಶೇಖರ, ಶೀಲಾ, ನಗರಸಭೆ ಸದಸ್ಯರಾದ ಎಂ. ರಾಜಶೇಖರ ಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಸೆ.. 8ರಂದು ವಾದ್ಯ ಪರಿಕರ, ವೇಷಭೂಷಣ ಖರೀದಿ, ಚಿತ್ರಕಲೆ ಪ್ರದರ್ಶನ ಮೂಲ ದಾಖಲಾತಿ ಪರಿಶೀಲನೆ
ಚಾಮರಾಜನಗರ, ಆ. 31 - ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನೀಡಲಾಗುವ ವಾದ್ಯಪರಿಕರ, ವೇಷಭೂಷಣ ಖರೀದಿ ಹಾಗೂ ಚಿತ್ರಕಲೆ ಪ್ರದರ್ಶನ ಧನಸಹಾಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರಿಗೆ ಮೂಲ ದಾಖಲೆಗಳ ಪರಿಶೀಲನೆಯನ್ನು ಸೆಪ್ಟೆಂಬರ್ 8ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಾಮರಾಜನಗರ ಇಲ್ಲಿ ನಡೆಸಲಾಗುತ್ತದೆ.ಮೂಲ ದಾಖಲಾತಿಗಳ ಪರಿಶೀಲನೆಗಾಗಿ ಅರ್ಜಿದಾರರು ತಾವು ಧನಸಹಾಯಕ್ಕಾಗಿ ಆನ್‍ಲೈನ್‍ನಲ್ಲಿ ಸಲ್ಲಿಸಿರುವ ಮೂಲ ದಾಖಲಾತಿಗಳು ಹಾಗೂ ಅರ್ಜಿ ಸ್ವಿಕೃತಿಯೊಂದಿಗೆ ಸೆಪ್ಟೆಂಬರ್ 8ರೊಳಗೆ ಹಾಜರಾಗಬೇಕು.
ಈ ಅವಧಿಯಲ್ಲಿ ಅರ್ಜಿದಾರರು ಅನ್‍ಲೈನ್‍ನಲ್ಲಿ ಸಲ್ಲಿಸದೇ ಇರುವ ದಾಖಲಾತಿಗಳ ಹಾರ್ಡ್ ಕಾಪಿಗಳನ್ನು (ದಾಖಲಾತಿ ಪ್ರತಿ) ನೀಡಿದ್ದಲ್ಲಿ ಸ್ವೀಕರಿಸಲು ಹಾಗೂ ಪರಿಗಣಿಸಲು ಅವಕಾಶ ಇರುವುದಿಲ್ಲ ಹಾಗೂ ದಾಖಲಾತಿಗಳ ತಿದ್ದುಪಡಿ ಮತ್ತು ಸೇರ್ಪಡೆ ಮಾಡಲು ಕೂಡ ಅವಕಾಶ ಇರುವುದಿಲ್ಲ,
ಆನ್‍ಲೈನ್‍ನಲ್ಲಿ ಧನಸಹಾಯಕ್ಕೆ ಅರ್ಜಿ ಸಲ್ಲಿಸಿರುವ ಸಂಘಸಂಸ್ಥೆಗಳು ವಾದ್ಯಪರಿಕರ, ವೇಷಭೂಷಣ ಖರೀದಿ ಹಾಗೂ ಚಿತ್ರಕಲೆ ಅರ್ಜಿದಾರರು ಸಹ ಮೂಲ ದಾಖಲೆಗಳೊಂದಿಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸೃತಿ ಇಲಾಖೆ, ಚಾಮರಾಜನಗರ ಇಲ್ಲಿ ನಡೆಯಲಿರುವ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ.
ಮೂಲದಾಖಲೆಗಳ ಪರಿಶೀಲನೆಗೆ ಹಾಜರಾಗದೆ ಇರುವವರ ಅರ್ಜಿಗಳನ್ನು ಧನಸಹಾಯಕ್ಕೆ ಪರಿಗಣಿಸಲಾಗುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗೇವೇಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನ್ ಲೈನ್ ಮೂಲಕ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಅವಕಾಶ
ಚಾಮರಾಜನಗರ, ಆ. 31 - ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ (9 ಹಾಗೂ 10ನೇ ತರಗತಿ) ಮತ್ತು ಮೆಟ್ರಿಕ್ ನಂತರದ ತರಗತಿಗಳಲ್ಲಿ 2017-18ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ.ವೆಬ್ ಸೈಟ್ ಓSP2.0 ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು hಣಣಠಿs://sಛಿhoಟಚಿಡಿshiಠಿs.gov.iಟಿ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ 2016-17ನೇ ಸಾಲಿಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪ್ರಸಕ್ತ ಸಾಲಿಗೆ ಹೊಸದಾಗಿ ಅರ್ಜಿ ಸಲ್ಲಿಸಬೇಕಿದೆ. ಕಳೆದ ಸಾಲಿನಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ರಿನೀವಲ್ ಮಾಡಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇರುವ ಉಳಿತಾಯ ಖಾತೆಗೆ ಆಧಾರ್ ಸಂಖ್ಯೆಯನ್ನು ಜÉೂೀಡಣೆ ಮಾಡುವುಡು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸುವ ವೇಳೆ ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಸಹಾಯವಾಣಿ 01206619540 ಮತ್ತು ಟಿsಜiಡಿeಛಿಣoಡಿsಣ@gmಚಿiಟ.ಛಿom ಅಥವಾ sಣತಿeಟಜಿಚಿಡಿe@gmಚಿiಟ.ಛಿom ಸಂಪರ್ಕಿಸಬಹುದು. ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ, ದೂ.ಸಂ. 08226-226070, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಚಾಮರಾಜನಗರ ದೂ.ಸಂ. 08226-223823, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಯಳಂದೂರು 08226-240309, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಕೊಳ್ಳೇಗಾಲ 08224-255060, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಗುಂಡ್ಲುಪೇಟೆ ದೂ.ಸಂ. 08229-222984 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸೆ. 1ರಂದು ಉದ್ಯಮಶೀಲತಾ ತಿಳುವಳಿಕಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ
ಚಾಮರಾಜನಗರ, ಆ. 31 :- ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ವಿದ್ಯುತ್ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ಉದ್ಯಮಶೀಲತಾ ತಿಳಿವಳಿಕಾ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕಾರ್ಯಕ್ರಮವು ಸೆಪ್ಟೆಂಬರ್ 1ರಂದು ಬೆಳಿಗ್ಗೆ 10 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದ್ದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರಾದ ಎಂ.ಎನ್. ಮುರುಗೇಶ್ ಉದ್ಘಾಟಿಸುವರು. ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಶಿವಬಸವಯ್ಯ ಅಧ್ಯಕ್ಷತೆ ವಹಿಸುವರು.
ಎಸ್‍ಬಿಐ ಹಾಗೂ ಲೀಡ್‍ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಸುನಂದ, ನಬಾರ್ಡ್ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಜಗದೀಶ್ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಉಪನಿರ್ದೇಶಕರಾದ ರಾಜೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಅಕ್ರಮ ವಿದ್ಯುತ್ ಪ್ರವಹಿಸಿ ಆನೆ ಸಾವಿಗೆ ಕಾರಣರಾದ ವ್ಯಕ್ತಿಗೆ ಸಜೆ
ಚಾಮರಾಜನಗರ, ಆ. 31 :- ಬೆಳೆ ರಕ್ಷಣೆಗಾಗಿ ಜಮೀನಿನ ಸುತ್ತ ಅಕ್ರಮವಾಗಿ ವಿದ್ಯುತ್ ಹಾಯಿಸಿದ ಪರಿಣಾಮ ಆನೆಯೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಸಜೆ ಹಾಗೂ 1000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.ಹನೂರು ವಲಯದ ಲೊಕ್ಕನಹಳ್ಳಿ ಗ್ರಾಮದ ಬಸವರಾಜು ಶಿಕ್ಷೆಗೆ ಗುರಿಯಾದ ವ್ಯಕ್ತಿ. ಇವರು ವೇಲುಸ್ವಾಮಿ ಎಂಬುವರ ಜಮೀನನ್ನು ಗುತ್ತಿಗೆ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದರು. ಜಮೀನಿನ ಬೆಳೆ ರಕ್ಷಣೆಗಾಗಿ ಜಮೀನಿನ ಸುತ್ತ ಮರದ ಗೂಟಗಳನ್ನು ನೆಟ್ಟು ಜಿಂಕ್ ವೈಯರ್ ಸುತ್ತಿ ಅಕ್ರಮವಾಗಿ ವಿದ್ಯುತ್ ಹಾಯಿಸಿದ್ದರು. ಕಳೆದ 2012ರ ಮಾರ್ಚ್ 31ರಂದು ಅರಣ್ಯ ಪ್ರದೇಶದಿಂದ ಬಂದ ಆನೆಯೊಂದು ಜಮೀನಿನ ಬೇಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಬಸವರಾಜುವಿಗೆ ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
.
ಅಕ್ರಮ ವಿದ್ಯುತ್ ಪ್ರವಹಿಸಿ ಆನೆ ಸಾವು : ವ್ಯಕ್ತಿಗೆ ಸಜೆ
ಚಾಮರಾಜನಗರ, ಆ. 31 - ಬೆಳೆ ರಕ್ಷಣೆಗಾಗಿ ಜಮೀನಿನ ಸುತ್ತ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪರಿಣಾಮ ಆನೆಯೊಂದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕರೊಬ್ಬರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.ಗುಂಡ್ಲುಪೇಟೆ ತಾಲೂಕು ಬೇಗÀೂರು ಕುರುಬರಹುಂಡಿ ಗ್ರಾಮದ ಕೆ.ಪಿ. ಶಿವರಾಜು ಶಿಕ್ಷೆಗೆ ಗುರಿಯಾದ ವ್ಯಕ್ತಿ. ಇವರು ತಮ್ಮ ಜಮೀನನ ಮುಳ್ಳು ತಂತಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಕಳೆದ 2009ರ ಅಕ್ಟೋಬರ್ 24ರಂದು ಜಮೀನಿನ ಫಸಲು ಮೇಯಲು ಬಂದ ಕಾಡಾನೆಯೊಂದು ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಮೃತಪಟ್ಟಿತ್ತು. ಸದರಿ ಪ್ರಕರಣದ ವಿಚಾರಣೆ ನಡೆದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಕೆ.ಪಿ. ಶಿವರಾಜುವಿಗೆ ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಮೀಡಿಯಾ ಕಿಟ್‍ಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪತ್ರಕರ್ತರಿಂದ ಅರ್ಜಿ ಅಹ್ವಾನ
ಚಾಮರಾಜನಗರ, ಆ. 31 - ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಸೇರಿದ ಪತ್ರಕರ್ತರನ್ನು ಪ್ರೋತ್ಸಾಹಿಸಲು ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಮೀಡಿಯಾ ಕಿಟ್ ವಿತರಿಸಲು ಅರ್ಜಿ ಆಹ್ವಾನಿಸಿದೆ.ಅರ್ಜಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಪಡೆಯಬಹುದು ಅಥವಾ ಇಲಾಖೆಯ ವೆಬ್ ಸೈಟ್ ಞಚಿಡಿಟಿಚಿಣಚಿಞಚಿiಟಿಜಿoಡಿmಚಿಣioಟಿ.gov.iಟಿ ನಿಂದ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಪತ್ರಕರ್ತರ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ (ಉಪಜಾತಿ), ಪತ್ರಿಕಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾ ಅನುಭವ, ವೇತನ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಭರ್ತಿ ಮಾಡಿ ಸ್ವ ವಿಳಾಸ ಇರುವ ಲಕೋಟೆಯೊಂದಿಗೆ ಅರ್ಜಿ ಸಲ್ಲಿಸಬಹುದು. ಸದರಿ ಅರ್ಜಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ವಿವರ, ಪ್ರಸಾರ ಸಂಖ್ಯೆ, ಪತ್ರಿಕೆಯ ಮಾಧ್ಯಮ ಪಟ್ಟಿಯ ವಿವರ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸು ದೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ಸೆಪ್ಟೆಂಬರ್ 27ರೊಳಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-560001 ಇವರಿಗೆ ಸಲ್ಲಿಸಬೇಕು. ಲಕೋಟೆಯ ಮೇಲ್ಭಾಗದಲ್ಲಿ ನೊಂದಾಯಿತ ಪತ್ರಕರ್ತರಿಗೆ ಮೀಡಿಯಾ ಕಿಟ್‍ಗಾಗಿ ಅರ್ಜಿ ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗೆ ಸುದ್ದಿ ಮತ್ತು ಪತ್ರಿಕಾ ವಿಭಾಗದ ಉಪನಿರ್ದೇಶಕರನ್ನು ದೂ.ಸಂ.080-22028037/87 ಮೂಲಕ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.