Saturday, 8 July 2017

ನೆನಪಾಗಿ ಉಳಿದ ಈ ವರ್ಷದ ಚಾಮರಾಜನಗರ ಅದ್ದೂರಿ ಚಾಮರಾಜೇಶ್ವರ ರಥೋತ್ಸವ ... vsss


ನೆನಪಾಗಿ ಉಳಿದ ಈ ವರ್ಷದ ಚಾಮರಾಜನಗರ ಅದ್ದೂರಿ ಚಾಮರಾಜೇಶ್ವರ ರಥೋತ್ಸವ ... ನವ ವರ ವಧುಗಳಿಗೆ ನಿರಾಸೆ    ....vss                                                  


                   ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ


ಚಾಮರಾಜನಗರ: ಆಷಾಡಮಾಸದಲ್ಲೇ ನಡೆಯುವ ಏಕೈಕ ರಥೋತ್ಸವ ಎಂದೇ ಪ್ರಸಿದ್ದಿಯಾಗಿದ್ದ ಚಾಮರಾಜನಗರದ ಚಾಮರಾಜೇಶ್ವರÀ ರಥೋತ್ಸವ ಜಿಲ್ಲಾಡಳಿತ ಹಾಗೂ ಜನಪ್ರತಿನಿದಿಗಳ ನಿಲ್ರ್ಯಕ್ಚ್ಯತನದಿಂದ ಕೊನೆಗೂ ಕನಸಾಗಿಯೇ ಉಳಿಯಿತು.

ರಾಜ್ಯದ ನಾನಾ ಮೂಲಗಳಿಂದ ಬಂದ ಲಕ್ಷಾಂತರ ನವದಂಪತಿಗಳು “ಚಾಮರಾಜೇಶ್ವರÀ ರಥೋತ್ಸವ”ದಲ್ಲಿ  ಪಾಲ್ಗೊಂಡು ರಥಕ್ಕೆ ಹಣ್ಣು ಧವನವನ್ನು ಎಸೆಯುತ್ತಿದ್ದರು. ರಥೋತ್ಸವ ಕ್ಕೆ ಹಣ್ಣು ಧವನವನ್ನು ಎಸೆಯುವುದರಿಂದ  ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಹಾಗೂ ಪುತ್ರÀ ಸಂತಾನ ಪ್ರಾಪ್ತವಾಗುವುದು ಎಂಬ ನಂಬಿಕೆಯಿಂದ ನೂತನ ದಂಪತಿಗಳು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದರು.

ಚಾಮರಾಜೇಶ್ವರ ರಥೋತ್ಸವದಲ್ಲಿ ಮಹಾರಾಜರ ಮೂರ್ತಿವುಳ್ಳ ಮುಖ್ಯ ರಥ, ಶ್ರೀ ಕೆಂಪನಂಜಾಂಬ ರಥ, ಸುಬ್ರಮಣ್ಯೇಶ್ವರ, ಗಣಪತಿ ಮತ್ತು ಚಂಡಿಕೇಶ್ವರ ರಥ ಪಂಚರಥಗಳು ದೇವಾಸ್ಥಾನದ ಮುಂಭಾಗದಿಂದ ಹೊರಟ ಮೆರವಣಿಗೆಯು ರಥದಬೀದಿಯ ಮೂಲಕ ಹಳೇ ಖಾಸಗೀ ಬಸ್ ನಿಲ್ದಾಣದ ಮೂಲಕ ಸಾಗಿ ಅದೇ ಸ್ಥಾನಕ್ಕೆ ಮರಳಿ ತಲುಪುವುದು ಸಾಮಾನ್ಯವಾಗಿತ್ತು.

ಆಷಾಡಮಾಸವನ್ನು ಸಾಮಾನ್ಯವಾಗಿ ಮೂಲಮಾಸವೆಂದು ಕರೆಯುವುದರಿಂದ ಶುಭಕಾರ್ಯಗಳು ನಿಷೇದಿಸಲ್ಪಡುತ್ತವೆ ಎಂಬ ನಂಬಿಕೆ ಇದೆ. ಆದರೆ ಈ ಮಾಸದಲ್ಲೇ ಇಲ್ಲಿ ಚಾಮರಾಜೇಶ್ವರÀ ರಥೋತ್ಸವ ನಡೆಯುವುದರಿಂದ ಇಲ್ಲಿಗೆ  ಆಗಮಿಸಿ ಹಣ್ಣು ಧವನ ಎಸೆಯುತ್ತಿರುವುದರಿಂದ ಎತ್ತ ಕಡೆ ನೋಡಿದರೂ ನವದಂಪತಿಗಳದ್ದೇ ದರ್ಬಾರಾಗಿತ್ತು.. ಆದರೆ ಇದಕ್ಕೆಲ್ಲ ಈ ಭಾರಿ (2017 ಜುಲೈ 9 ರ ದಿನಕ್ಕೆ) ತಣ್ಣೀರು ಎರಚಿದಂತಾಗಿದೆ.

ರಥೋತ್ಸವ ನಿಲ್ಲಲು ಕಾರಣ ಏನು?: ದೇವಾಲಯದ ಜೀರ್ಣೋಭಿವೃದ್ದಿ ಕಾರ್ಯ 2.10 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು ಒಂದೆಡೆಯಾದರೆ ಮತ್ತೋಂದೆಡೆ ನೂತನ ರಥ ನಿರ್ಮಾಣವಾಗಲೆಂದೆ ಮಹಾನುಭಾವ ರಥಕ್ಕೆ ಬೆಂಕಿಯಿಟ್ಟಿದ್ದೆ ಪ್ರಮುಖ ಕಾರಣವಾಗಿದೆ.
ಬಹು ವರ್ಷಗಳಿಂದ ರಥದ ಗಾಳಿಗಳು ದುರಸ್ಥಿ ಬಂದಿತ್ತು ಆದರೆ ರಥೋತ್ಸವ ನಾಳೆ ಎನ್ನುತ್ತಿದ್ದಾಗ ರಾತ್ರಿ ದುರಸ್ಥಿ ಕೆಲಸ ಮಾಡಲು ಮುಂದಾಗುತ್ತಿದ್ದರು ಇದರಿಂದ ಬೇಸತ್ತ ವ್ಯಕ್ತಿ ದೇವಾಲಯ ನೂತನವಾಗಿ ಸಿದ್ದವಾಗುತ್ತಿದೆ. ಹಾಗಿಯೇ ರಥವೂ ಹೊಸದಾಗಿ ನಿರ್ಮಾಣವಾಗಿ ಆಗಲಿ ಎಂದು ಬೆಂಕಿ ಇಟ್ಟು ಜೈಲು ಪಾಲಾದ ಮೋಹನ.
**************************************
ಜೈಲು ಪಾಲಾದವನ ಮೋಹನ್ ಅಂದು ಹೇಳಿದ್ದೇನು..? 20017 ಪೆಬ್ರವರಿ 19 ಸರಿ ಸುಮಾರು 2 ರ ಸಮಯ ದೇವಾಲಯದ ಮುಂಭಾಗ ಬೆಂಕಿ ಜ್ವಾಲೆ. ನೋಡಿದರೆ ರಥಕ್ಕೆ ಬೆಂಕಿ.. ಹಾಕಿದವರು ಯಾರು ಎಂದು ಕೆಲವರು ಮಾತಾಡುತ್ತಿದ್ದರೆ, ಇತ್ತ ಅಗ್ನಿಶಾಮಕ ದಳದವರ ಅವಿರತ ಶ್ರಮ ಕೊನೆಗೂ ಸ್ವಲ್ಪ ಮಟ್ಟಿಗೆ ಬದುಕುಳಿಯಿತು.
ಮರುದಿನ ಕಿಡಿಗೇಡಿ ಬಂದನಕ್ಕೆ ಆಗ್ರಹಿಸಿ ಪ್ರತಿಭಟನೆ, ಸ್ವಯಂಪ್ರೇರಿತ ಬಂದ್ ಗೆ ಕರೆಕೊಟ್ಟರೆ ಪೊಲೀಸರಿಗೆ ಸವಾಲಾದ ಪ್ರಕರಣ.ಇದೆಲ್ಲದನ್ನು ಭೇದಿಸಲು ಮುಂದಾದ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ , ಡಿವೈಸ್ಪಿ ಗಂಗಾದರ ಸ್ವಾಮಿ ಅವರು ಹಾಗೂ ಸಿಬ್ಬಂದಿ ವರ್ಗ ಕೊನೆಗೂ ಆರೋಪಿಯನ್ನು ಬಂದಿಸಿದರು.

ಆರೋಪಿ ಮೋಹನ್ ಬಂದಿಸಿ ಪತ್ರಿಕಾಗೋಷ್ಟಿಗೆ ಕರೆತಂದು ಘಟನೆ ಬಗ್ಗೆ ಎಲ್ಲಾ ವಿವರ ಹೇಳಿದ ಎಸ್ಪಿ ಅವರು, ಆರೋಪಿ ಉದ್ದೇಶ ಹೊಸ ರಥ ನಿರ್ಮಾಣದ ಆಸೆಯಾಗಿತ್ತು ಎಂಬುದು ಆದರೂ ಕೊನೆಗೂ ಕೇಳಲಾಗಿ ಕೋಪದಿಂದ ಉತ್ತರ ನೀಡಿದ್ದು ಅದೆ.. ಎಷ್ಟು ವರ್ಷ ಅಂತ ರಥಕ್ಕೆ ತೇಪೆ ಹಾಕುವುದು, ಹೊಸ ರಥ ಬೇಡವೇ, ದುರಸ್ಥಿ ರಥದ ಗಾಲಿಗಳ ಹೆಸರಿನಲ್ಲಿ ಲಕ್ಷ ಲಕ್ಷ ದೋಚುವುದು ಎಷ್ಟು ಸರಿ ಎಂಬುದು ಮಾತ್ರ ಕೊನೆಗೂ ನಿರಾಸೆಯಾಗಿಯೇ ಆರೋಪಿಗೂ ಇಂದು ಉಳಿದಿದೆ.

*****************************************************

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು