ಗುಂಡ್ಲುಪೇಟೆ ಇಒ ಕರ್ತವ್ಯದಿಂದ ಬಿಡುಗಡೆ.....VSS
ಗುಂಡ್ಲುಪೆಟೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಪುಷ್ಪ. ಎಂ. ಕಮ್ಮಾರ್ ಅವರನ್ನು ಮಾತೃ ಇಲಾಖೆಯಾದ ಕೃಷಿ ಇಲಾಖೆಗೆ ವಾಪಸ್ಸು ಕಳುಹಿಸಿ ವರ್ಗಾವಣೆ ಮಾಡಲಾಗಿದೆ.
ಸರ್ಕಾರದ ಅಧಿಸೂಚನೆಯಂತೆ ಪುಷ್ಪ. ಎಂ. ಕಮ್ಮಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಸದರಿ ಹುದ್ದೆಯ ಪ್ರಭಾರವನ್ನು ಗುಂಡ್ಲುಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇಶಕರಾದ ಹೆಚ್. ಎಸ್. ಬಿಂದ್ಯಾ ಅವರಿಗೆ ವಹಿಸಿ ಆದೇಶಿಸಿಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ತಿಳಿಸಿದ್ದಾರೆ.
ಸರ್ಕಾರದ ಅಧಿಸೂಚನೆಯಂತೆ ಪುಷ್ಪ. ಎಂ. ಕಮ್ಮಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಸದರಿ ಹುದ್ದೆಯ ಪ್ರಭಾರವನ್ನು ಗುಂಡ್ಲುಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇಶಕರಾದ ಹೆಚ್. ಎಸ್. ಬಿಂದ್ಯಾ ಅವರಿಗೆ ವಹಿಸಿ ಆದೇಶಿಸಿಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ತಿಳಿಸಿದ್ದಾರೆ.
ಪ್ರೇಕ್ಷಕರ ಮನಮುಟ್ಟಿದ ಯುಗಪುರುಷ-----------------------------------VSS
ಮಹಾತ್ಮರ ಮಹಾತ್ಮ ರಾಜ್ ಚಂದ್ರಜೀ ಮತ್ತು ಮಹಾತ್ಮಾ ಗಾಂಧಿಯವರ ನಡುವಿನ ಆಧ್ಯಾತ್ಮಿಕ ಸಂಬಂಧವನ್ನು ಚಿತ್ರಿಸುವ ಒಂದು ಸ್ಪೂರ್ತಿದಾಯಕ ರೂಪಕವಾಗಿದೆ.
ಶ್ರೀಮದ್‍ಜೀ ಮತ್ತು ಗಾಂಧೀಜಿಯವರ ನಡುವೆ ಆರಂಭವಾದ ಪ್ರಾಮಾಣಿಕ ಸ್ನೇಹ, ಆಧ್ಯಾತ್ಮಿಕ ಮಾರ್ಗದರ್ಶನ ಗಾಂಧೀಜಿಯವರ ಅಭಿಪ್ರಾಯಗಳು ಮತ್ತು ಅವರ ನಂಬಿಕೆಗಳ ಮೇಲೆ ಪ್ರಭಾವ ಬೀರಿದ ಘಟನೆಗಳು ಕಲಾವಿದರಿಂದ ನೈಜವಾಗಿ ಮೂಡಿ ಬಂತು.
ರಾಜ್‍ಚಂದ್ರಜೀಯವರೊಂದಿಗಿನ ಸ್ಪೂರ್ತಿದಾಯಕ ಸಂವಹನ, ಪತ್ರ ವ್ಯವಹಾರ ಮತ್ತು ಅವರ ಆಧ್ಯಾತ್ಮಿಕ ದಾರಿಯ ಹಿಂಬಾಲಿಸುವಿಕೆಯ ಕುರಿತು ಗಾಂಧೀಜಿಯವರು ಸವೆಸಿದ ಆಂತರಿಕ ಮತ್ತು ಬಾಹ್ಯ ವಿಕಸನಗಳ ಕುರಿತು ಪ್ರೇಕ್ಷಕರನ್ನು ರೂಪಕ ಮಂತ್ರ ಮಗ್ದಗೊಳಿಸಿತು. ನೈರ್ಮಲ್ಯಕ್ಕೆ ಗಾಂಧಿಯವರು ನೀಡಿದ ಮಹತ್ವ ಹಾಗೂ ಸ್ವತ: ತಾವೇ ಕಸ ಸ್ವಚ್ಛಗೊಳಿಸಿ ಇತರರಿಗೆ ಮಾದರಿಯಾಗುವ ಪ್ರಕರಣಗಳು ಪ್ರೇಕ್ಷಕರನ್ನು ತಲುಪಿದವು.
ಗಾಂಧೀಜಿ ಪಾತ್ರದಲ್ಲಿ ಮಾಲತೇಶ್, ಯುವ ಗಾಂಧಿ ಪಾತ್ರದಲ್ಲಿ ಶಶಿಕುಮಾರ್, ರಾಜ್ ಚಂದ್ರ ಅವರ ಪಾತ್ರದಲ್ಲಿ ಕುಶಾಲ್ ಅಭಿನಯಿಸಿ ವಿಶೇಷ ಗಮನಸೆಳೆದರು. ಕಸ್ತೂರಬಾ ಗಾಂಧಿ ಪಾತ್ರದಲ್ಲಿ ಭೂಮಿಕಾ ಪ್ರಸನ್ನ ಅಭಿನಯಿಸಿದರು. ಉಳಿದ ಪಾತ್ರಗಳಲ್ಲಿ ಮಂಜುನಾಥ್, ಕಿರಣ್, ಲೋಕೇಶ್, ಬಿಲಾಲ್, ಎಂ.ಎನ್ ಸೈಯದ್, ಅವಿನಾಶ್, ಚೇತನ್ ಸುಶೀಲ್, ರಾಮನಾಥಗೌಡ, ಸಂಜಯ್, ನವೀನ್, ದೃಷ್ಯಾಂತ್, ಆನಂದ್ ಅಭಿನಯಿಸಿದರು.
ನಿರ್ವಹಣೆ ಶಶಾಂಕ್ ಅವರದ್ದಾಗಿದ್ದು ದ್ವನಿ ನಿರ್ವಹಣೆ ಸಂದೀಪ್ ಜೈನ್ ಹಾಗೂ ಬೆಳಕು ನಿರ್ವಹಣೆ ಅವಿನಾಶ್ ಅವರದ್ದಾಗಿತ್ತು. ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದವರು ಕೃಷ್ಣ ಹೆಬ್ಬಾಲೆ. ಶ್ರೀಮದ್ ರಾಜ್ ಚಂದ್ರ ಮಿಷನ್, ಧರಮ್‍ಪುರ್ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ನಾಟಕ ಪ್ರದರ್ಶಿತವಾಯಿತು.
**************************************************************************
ವಿದ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಳ್ಳಿ : ಜಿ.ಪಂ. ಸದಸ್ಯರಾದ ಸಿ.ಎನ್. ಬಾಲರಾಜು ಸಲಹೆ............................. VSS
ಚಾಮರಾಜನಗರ, ಜು. 21 - ಸಮಾಜದ ಉನ್ನತಿಗೆ ಪೂರಕವಾಗಿರುವ ಶಿಕ್ಷಣವನ್ನು ಪಡೆಯಲು ಪ್ರತಿಯೊಬ್ಬರೂ ಮುಂದಾಗುವಂತೆ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಅವರು ಸಲಹೆ ಮಾಡಿದರು.
ತಾಲೂಕಿನ ಬದನಗುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಮಾದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿ ಹಮ್ಮಿಕೊಂಡಿರುವ ಶಿಕ್ಷಣ, ಆರೋಗ್ಯ, ಪರಿಸರ ಕುರಿತ ವಿಶೇಷ ಕಾರ್ಯಕ್ರಮದ ಅಂಗವಾಗಿ ನಡೆದ ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಉತ್ತಮ ಮೌಲ್ಯಗಳು ಪಡೆಯಬೇಕು. ಶಿಕ್ಷಣ ಪಡೆದರೆ ಜಾಗೃತಿ ಉಂಟಾಗಿ ಶೋಷಣೆಯೂ ತಪ್ಪಲಿದೆ. ಇಡೀ ಸಮಾಜದ ಅಭ್ಯುದಯಕ್ಕೆ ಶಿಕ್ಷಣವು ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆಯೂ ಸಿಗುತ್ತಿದೆ ಎಂದರು.
ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಹೆಚ್ಚು ಗಮನ ಹರಿಸಬೇಕು. ನಿರಂತರ ಹಾಗೂ ಕಾಳಜಿಯಿಂದ ಅಧ್ಯಯನ ಮಾಡಿ ಉನ್ನತ ಸ್ಥಾನಕ್ಕೆ ಏರುವ ಗುರಿ ಹೊಂದಬೇಕು. ವಿದ್ಯಾರ್ಥಿ ಜೀವನವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಬಾಲರಾಜು ಅವರು ಕಿವಿಮಾತು ಹೇಳಿದರು.
ಪರಿಸರ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕಿದೆ. ನಮ್ಮ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕಿದೆ. ಗಿಡಮರಗಳನ್ನು ಪೋಷಿಸುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿಯೇ ಮಾದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಮೂರು ಪ್ರೌಢಶಾಲೆಗಳಲ್ಲಿ ಪರಿಸರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆರೋಗ್ಯದ ಹಿತದೃಷ್ಠಿಯಿಂದ ಎಲ್ಲ ಮನೆಗಳಲ್ಲೂ ಶೌಚಾಲಯ ಹೊಂದಬೇಕಿದೆ. ಶೌಚಾಲಯ ನಿರ್ಮಾಣಕ್ಕಾಗಿ ಸಾಮಾನ್ಯ ವರ್ಗದವರಿಗೆ 12 ಸಾವಿರ ರೂ., ಪ.ಜಾ, ಪ.ಪಂ. ವರ್ಗದವರಿಗೆ 15 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ನಿವೇಶನ ಕೊರತೆ ಕಂಡುಬಂದರೆ ಸಮುದಾಯ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ. ಈ ಸೌಲಭ್ಯಗಳನ್ನು ಪಡೆಯಲು ಗ್ರಾಮೀಣ ಜನರು ಮುಂದಾಗಬೇಕೆಂದು ಬಾಲರಾಜು ಅವರು ತಿಳಿಸಿದರು.
ಮಾದಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣ ಸುಧಾರಣೆ, ಆರೋಗ್ಯ ಕಾರ್ಯಕ್ರಮಗಳ ಪ್ರಗತಿಗಾಗಿ ವಿಶೇಷ ಒತ್ತು ನೀಡಲಾಗುತ್ತಿದೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂವಾದ, ಇತರೆ ಪ್ರಗತಿಪರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಾಲರಾಜು ತಿಳಿಸಿದರು.
ಸಂವಾದದ ವೇಳೆ ವಿದ್ಯಾರ್ಥಿಗಳು ಕೆಲವು ಸಮಸ್ಯೆಗಳನ್ನು ಮುಂದಿಟ್ಟರು. ಈ ಎಲ್ಲ ಕೊರತೆಗಳನ್ನು ನೀಗಿಸಲು ಅಗತ್ಯವಿರುವ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಸೂಚನೆ ನೀಡಲಾಗುವುದೆಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಲರಾಜು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ ಅವರು ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುವುದು. ಇಲಾಖಾ ವತಿಯಿಂದ ಲಭ್ಯವಾಗಬೇಕಿರುವ ಎಲ್ಲ ಯೋಜನೆಗಳನ್ನು ತಲುಪಿಸುವ ದಿಸೆಯಲ್ಲಿ ಮುಂದಾಗಿದ್ದೇವೆ ಎಂದರು.
ತಾಲೂಕು ಪಂಚಾಯತ್ ಸದಸ್ಯರಾದ ಬಸವಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್, ಮಹದೇವಸ್ವಾಮಿ, ಮೇಲಾಜಿಪುರದ ಗುರುಸ್ವಾಮಿ, ರಾಜಶೇಖರ್, ಶಾಲಾ ಮುಖ್ಯ ಶಿಕ್ಷಕರಾದ ಬೆಳ್ಳೇಗೌಡ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೆಸ್ಕಾಂ : ಜು. 24ರವರೆಗೆ ತಂತ್ರಾಂಶ ತುರ್ತು ನಿರ್ವಹಣಾ ಕಾರ್ಯ
ಚಾಮರಾಜನಗರ, ಜು. 21 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವ್ಯಾಪ್ತಿಯ ನಗರದಲ್ಲಿ ಜುಲೈ 21 ರಿಂದ 24ರ ಬೆಳಿಗ್ಗೆ 9 ಗಂಟೆಯವರೆಗೆ ಆರ್.ಎ.ಪಿ.ಡಿ.ಆರ್.ಪಿ. ತಂತ್ರಾಂಶದ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಆರ್.ಎ.ಪಿ.ಡಿ.ಆರ್.ಪಿ. ತಂತ್ರಾಂಶಗಳಾದ ವಿದ್ಯುನ್ಮಾನ ಪಾವತಿ (ತಿತಿತಿ.ಛಿesಛಿmಥಿsoಡಿe.oಡಿg), ಕರ್ನಾಟಕ ಮೊಬೈಲ್ ಒನ್ ಮತ್ತು ವಿದ್ಯುನ್ಮಾನ ಹೊಸ ತಂತ್ರಾಂಶ (ತಿತಿತಿ.iಟಿಜಿovieತಿಠಿoಡಿಣಚಿಟ) ಕಾರ್ಯನಿರ್ವಹಣೆ ಮಾಡುವುದಿಲ್ಲ.ಎಟಿಪಿ ಯಂತ್ರ ಹಾಗೂ ಸೆಸ್ಕಾಂನ ನಗದು ಕೌಂಟರ್‍ಗಳು (ಕ್ಯಾಶ್ ಕೌಂಟರ್) ಎಂದಿನಂತೆ ಆಫ್ ಲೈನ್ ತಂತ್ರಾಂಶದ ಮೂಲಕ ಕಾರ್ಯ ನಿರ್ವಹಣೆ ಮಾಡಲಿದೆ. ಗ್ರಾಹಕರು ನಿಗಮದೊಂದಿಗೆ ಸಹಕರಿಸುವಂತೆ ಚೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಜು. 22ರಂದು ಜಿ.ಪಂ. ಸಾಮಾನ್ಯ ಸಭೆ
ಚಾಮರಾಜನಗರ, ಜು. 21 :- ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಂ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಜುಲೈ 22ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆಜು. 22ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಜು. 21- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಜುಲೈ 22ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ತಮ್ಮ ಕುಂದುಕೊರತೆಗಳಿದ್ದಲ್ಲಿ ದೂ.ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ನೈರ್ಮಲ್ಯ ಕಾರ್ಯಕ್ರಮಗಳಿಗೆ ಸಹಕಾರ ಅಗತ್ಯ: ಡಾ. ಕೆ. ಹರೀಶ್‍ಕುಮಾರ್
ಚಾಮರಾಜನಗರ ಜು 21 - ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ಉದ್ದೇಶದಿಂದ ಅನುಷ್ಟಾನಗೊಳಿಸಲಾಗುತ್ತಿರುವ ಸ್ವಚ್ಛ ಭಾರತ್ ಮಿಷನ್‍ಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿಗಳಾದ ಡಾ. ಕೆ. ಹರೀಶ್ ಕುಮಾರ್ ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಆಯೋಜಿತವಾಗಿದ್ದ ಗಾಂಧೀಜಿಯವರ ಸ್ವಚ್ಛತೆ ಕುರಿತ ಸಂದೇಶ ಹಾಗೂ ಶ್ರೀಮದ್ ರಾಜ್ ಚಂದ್ರಜೀ ಅವರ ಆಧ್ಯಾತ್ಮಿಕ ಸಂಬಂಧವನ್ನು ಪ್ರಸ್ತುತ ಪಡಿಸುವ ‘ಯುಗಪುರುಷ’ ನಾಟಕ ಪ್ರದರ್ಶನ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 30 ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. 2018ರ ಅಕ್ಟೋಬರ್ 2 ರ ವೇಳೆಗೆ ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ಉದ್ದೇಶದೊಂದಿಗೆ ನೈರ್ಮಲ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಸ್ವಚ್ಛ ಭಾರತ್ ಮಿಷನ್ ಅಡಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಕೈಗೊಳ್ಳಲಾಗಿದೆ ಎಂದರು.
ಶೌಚಾಲಯ ನಿರ್ಮಾಣ ಮಾಡಿದರಷ್ಟೇ ಸಾಲದು. ಅದರ ಬಳಕೆಯಾದರೆ ಮಾತ್ರ ಆರೋಗ್ಯ ಸಮಾಜ ನಿರ್ಮಾಣವಾಗುತ್ತದೆ. ವೈಯಕ್ತಿಕ ಆರೋಗ್ಯ ದೃಷ್ಟಿಯಿಂದ ಎಲ್ಲರೂ ಶೌಚಾಲಯ ನಿರ್ಮಿಸಿ ಕೊಂಡು ಉಪಯೋಗಿಸಬೇಕಿದೆ. ಈ ಕುರಿತು ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂದು ತಿಳಿಸಿದರು.
ಗಾಂಧೀಜಿಯವರು ಗ್ರಾಮೀಣ ಪ್ರದೇಶ ಅಭಿವೃದ್ದಿಯಾದರೆ ದೇಶದ ಪ್ರಗತಿ ಆದಂತೆ ಎಂದು ಪ್ರತಿಪಾದಿಸಿದ್ದರು. ಗ್ರಾಮೀಣ ಅಭಿವೃದ್ದಿ ಗಾಂಧೀಜಿಯವರ ಕನಸು ಸಹ ಆಗಿತ್ತು. ಸ್ವಚ್ಛತೆ ಬಗ್ಗೆ ವಿಶೇಷವಾಗಿ ಪ್ರಾಧಾನ್ಯತೆ ನೀಡುವ ಬಗ್ಗೆ ಗಾಂಧೀಜಿಯವರು ಹೇಳುತ್ತಲೇ ಬಂದರು. ಗಾಂಧಿಯವರು ತಿಳಿಸಿದ ನೈರ್ಮಲ್ಯ ಸಂದೇಶ ಜಾಗೃತಿಗಾಗಿ ಯುಗಪುರುಷ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕೆ. ಹರೀಶ್ ಕುಮಾರ್ ತಿಳಿಸಿದರು.
ಪ್ರಸ್ತುತ ಸಂಧರ್ಭದಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಮೌಲ್ಯಗಳು ಹಾಗು ಮೂಲ ತತ್ವಗಳು ಮರೆಯಾಗುತ್ತಿವೆ. ಇಂತಹ ಹೊತ್ತಿನಲ್ಲಿ ಅರಿವು ಮೂಡಿಸುವ ಯುಗಪುರುಷದಂತಹ ನಾಟಕ ಪ್ರದರ್ಶನಗಳು ಬೇಕಿದೆ ಎಂದು ಕೆ. ಹರೀಶ್ ಕುಮಾರ್‍ರವರು ಅಭಿಪ್ರಾಯಪಟ್ಟರು.
ನಾಟಕ ಪ್ರದರ್ಶನದ ಬಳಿಕ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಎಂ. ಗಾಯತ್ರಿ ಅವರು ಶ್ರೀಮದ್ ರಾಜ್ ಚಂದ್ರಜೀ ಮತ್ತು ಗಾಂಧೀಜಿಯವರ ಮಧ್ಯೆ ಇದ್ದ ಆಧ್ಯಾತ್ಮಿಕ ಬಾಂಧವ್ಯ ಹಾಗೂ ಗಾಂಧೀಜಿಯವರು ನೈರ್ಮಲ್ಯಕ್ಕೆ ತಾವೇ ಸ್ವತ: ಇಳಿದು ಅದರ ಮಹತ್ವವನ್ನು ಸಾರಿದ ಘಟನೆಗಳು ಅತ್ಯಂತ ನೈಜವಾಗಿ ಕಲಾವಿದರಿಂದ ಮೂಡಿ ಬಂದಿತು. ಚಿಕ್ಕಪಾತ್ರದಿಂದ ಹಿಡಿದು ಪ್ರಮುಖ ಪಾತ್ರಧಾರಿಗಳೆಲ್ಲರೂ ಅತ್ಯತ್ತಮವಾಗಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದಾರೆ ಎಂದು ಪ್ರಶಂಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಯೋಜನಾಧಿಕಾರಿ ಎಂ ಮಾದೇಶು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
No comments:
Post a Comment