ಪಿಡಿಓ ಅಮಾನತು
ಚಾಮರಾಜನಗರ, ಜು. 16 - ನರೇಗಾ, ವಸತಿಯೋಜನೆ ಅನುಷ್ಠಾನಗೊಳಿಸದೆ ನಿರ್ಲಕ್ಷ್ಯವಹಿಸಿದ ಹಾಗೂ ಮುಖ್ಯಕಚೇರಿಯಿಂದ ನೀಡಿದ ಆದೇಶಗಳನ್ನು ಪಾಲಿಸದೆ ಸಂಸ್ಥೆಯ ಮುಖ್ಯಸ್ಥರಮೇಲೆ ಬಾಹ್ಯ ಒತ್ತಡವನ್ನು ತಂದ ಮಾರ್ಟಳ್ಳಿ ಗ್ರಾಮಪಂಚಾಯಿತಿ ಅಭಿವೃದಿ ಅಧಿಕಾರಿಯನ್ನು ಅಮಾನುತು ಮಾಡಿ ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಆದೇಶಹೊರಡಿಸಿದ್ದಾರೆ.
ಮೂಲ ಚಿಕ್ಕಲ್ಲೂರು ಗ್ರಾಮಪಂಚಾಯಿತಿಯ ಅಭಿವೃದ್ದಿ ಅಧಿಕಾರಿಯಾಗಿದ್ದು, ಮಾರ್ಟಳ್ಳಿ ಗ್ರಾಮಪಂಚಾಯಿತಿಗೆ ನಿಯೋಜನೆಗೊಂಡಿದ್ದ ಟಿ.ಶಿವಕುಮಾರ್ ಅಮಾನುತುಗೊಂಡವರು.
ಇವರು ವರ್ಗಾವಣೆಗೊಂಡಿದ್ದರು ಆದೇಶವನ್ನು ಉಲ್ಲಂಘಿಸಿ ವರ್ಗಾವಣೆಯಾಗಿರುವ ಸ್ಥಳಕ್ಕೆ ಕರ್ತವ್ಯಕ್ಕೆ ಹಾಜರಾಗದೆ ಬೇಜವ್ದಾರಿತನ ತೋರಿದ್ದರು. ಸಂಸ್ಥೆಯ ಮುಖ್ಯಸ್ಥರ ಮೇಲೆ ಒತ್ತಡ ತಂದಿದ್ದರು.
ತಾಲೂಕು ಪಂಚಾಯಿತಿ ನೀಡಿದ್ದ ಸೂಚನೆಗಳನ್ನು ಪಾಲಿಸದೆ ಅವಿಧೇಯತೆ ಹಾಗೂ ಬೆಜವ್ದಾರಿತನ ತೋರಿದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೂಲ ಚಿಕ್ಕಲ್ಲೂರು ಗ್ರಾಮಪಂಚಾಯಿತಿಯ ಅಭಿವೃದ್ದಿ ಅಧಿಕಾರಿಯಾಗಿದ್ದು, ಮಾರ್ಟಳ್ಳಿ ಗ್ರಾಮಪಂಚಾಯಿತಿಗೆ ನಿಯೋಜನೆಗೊಂಡಿದ್ದ ಟಿ.ಶಿವಕುಮಾರ್ ಅಮಾನುತುಗೊಂಡವರು.
ಇವರು ವರ್ಗಾವಣೆಗೊಂಡಿದ್ದರು ಆದೇಶವನ್ನು ಉಲ್ಲಂಘಿಸಿ ವರ್ಗಾವಣೆಯಾಗಿರುವ ಸ್ಥಳಕ್ಕೆ ಕರ್ತವ್ಯಕ್ಕೆ ಹಾಜರಾಗದೆ ಬೇಜವ್ದಾರಿತನ ತೋರಿದ್ದರು. ಸಂಸ್ಥೆಯ ಮುಖ್ಯಸ್ಥರ ಮೇಲೆ ಒತ್ತಡ ತಂದಿದ್ದರು.
ತಾಲೂಕು ಪಂಚಾಯಿತಿ ನೀಡಿದ್ದ ಸೂಚನೆಗಳನ್ನು ಪಾಲಿಸದೆ ಅವಿಧೇಯತೆ ಹಾಗೂ ಬೆಜವ್ದಾರಿತನ ತೋರಿದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಗರಕ್ಕೆ 3 ದಿನ ನೀರು ಸರಬರಾಜು ವ್ಯತ್ಯಯ
ಚಾಮರಾಜನಗರ, ಜು. 15 :- ಚಾಮರಾಜನಗರ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಮಂಗಲ ನೀರು ಶುದ್ದೀಕರಣ ಘಟಕದಲ್ಲಿ ಹೊಸದಾಗಿ ಮೋಟಾರ್, ಟ್ರಾನ್ಸ್ ಫಾರ್ಮರ್, ಪೆನಾಲ್ ಬೋರ್ಡ್ ಹಾಗೂ ಸ್ಟಾರ್ಟರ್‍ಗಳನ್ನು ಅಳವಡಿಸಲಾಗಿದ್ದು ಪೈಪ್ ಲೈನ್‍ಗೆ ಜೋಡಣೆ ಮಾಡುವ ಅಂತಿಮ ಹಂತದ ಕೆಲಸ ನಿರ್ವಹಿಸಬೇಕಾಗಿದೆ.ಈ ಹಿನ್ನೆಲೆಯಲ್ಲಿ ಜುಲೈ 17 ರಿಂದ 19ರವರೆಗೆ ಪಟ್ಟಣಕ್ಕೆ ಕಾವೇರಿ ಹಾಗೂ ಕಬಿನಿ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ಸಮೀಪವಿರುವ ಕೈಪಂಪು, ಕೊಳವೆ ಬಾವಿ ಹಾಗೂ ಕಿರು ನೀರು ಸರಬರಾಜು ಯೋಜನೆಗಳಿಂದ ನೀರು ಪಡೆದುಕೊಂಡÀು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತ ರಾಜಣ್ಣ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮಲೆಮಹದೇಶ್ವರ ಬೆಟ್ಟ : ಸ್ವಾಮಿಗೆ ಶ್ರಾವಣ ಮಾಸದ ವಿಶೇಷ ಸೇವೆ ಆರಂಭ
ಚಾಮರಾಜನಗರ, ಜು. 15- ಕೊಳ್ಳೇಗಾಲ ತಾಲೂಕಿನ ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಜುಲೈ 24ರಂದು ಬೆಳಿಗ್ಗೆ 9.25 ರಿಂದ 10.50 ಗಂಟೆಯ ಒಳಗೆ ಶ್ರೀ ಕ್ಷೇತ್ರದ ಬೃಹನ್ಮಠಾಧ್ಯಕ್ಷರಾದ ಪಟ್ಟದ ಶ್ರೀ ಗುರುಸ್ವಾಮಿಗಳವರ ಸಾನಿಧ್ಯದಲ್ಲಿ 108 ಕುಂಭಗಳ ಉತ್ಸವ ಮತ್ತು ಶ್ರೀ ಸ್ವಾಮಿಗೆ ಅಭಿಷೇಕದೊಂದಿಗೆ ಶ್ರಾವಣ ಮಾಸದ ಪೂಜೆಯನ್ನು ಪ್ರಾರಂಭಿಸಲಾಗುತ್ತಿದೆ.ಶ್ರಾವಣ ಮಾಸದಲ್ಲಿ ಸ್ವಾಮಿಗೆ ವಿವಿಧ ಸೇವೆಗಳ ಲಭ್ಯವಿದ್ದು ಪಂಚ ಕಳಸ ಸಮೇತ ನವರತ್ನ ಕಿರೀಟಧಾರಣೆ ಸೇವೆ 750 ರೂ., ಸಹಸ್ರ ಕುಂಭಾಭಿಷೇಕ ಸೇವೆಗೆ 500 ರೂ., ಸಹಸ್ರ ರುದ್ರಾಭಿಷೇಕ ಸೇವೆಗೆ 250 ರೂ, ಲಕ್ಷ ಬಿಲ್ವಾರ್ಚನೆ ಸೇವೆಗೆ 250 ರೂ. ಹಾಗೂ ಸಹಸ್ರ ವಾಹನೋತ್ಸವಕ್ಕೆ 250 ರೂ. ನಿಗದಿಪಡಿಸಿದೆ.
ಆಗಸ್ಟ್ 21ರ ಸೋಮವಾರ ಬೆಳಿಗ್ಗೆ 9.25 ರಿಂದ 10.50 ಗಂಟೆಯ ಒಳಗೆ 108 ಕುಂಭಗಳ ಉತ್ಸವ ಮತ್ತು ಶ್ರೀ ಸ್ವಾಮಿಗೆ ಅಭಿಷೇಕದೊಂದಿಗೆ ಶ್ರಾವಣ ಮಾಸದ ಪೂಜೆ ಮುಕ್ತಾಯವಾಗುತ್ತದೆ.
ಭಕ್ತಾಧಿಗಳು ನೇರವಾಗಿ ಬರಲು ಸಾಧ್ಯವಾಗದಿದ್ದಲ್ಲಿ ಮನಿಯಾರ್ಡರ್ ಮೂಲಕ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರ ಹೆಸರಿಗೆ ಕಳುಹಿಸಿ ಸೇವೆ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ಮಹಿಳೆ ಶವ ಪತ್ತೆ : ವಾರಸುದಾರರ ಪತ್ತೆಗೆ ಮನವಿ
ಚಾಮರಾಜನಗರ, ಜು. 15 :- ತಾಲೂಕಿನ ಕುಂಬಾರಗುಂಡಿ ಗ್ರಾಮದಲ್ಲಿ ಬಸ್ ನಿಲ್ದಾಣದ ಬಳಿಯ ಜಗದೀಶ್ ಅವರ ಜಮೀನಿನಲ್ಲಿ ಪಾರ್ಥೇನಿಯಂ ಗಿಡಗಳ ಪೊದೆಯ ಮಧ್ಯೆ ಬಹಿರ್ದೆಸೆ ಅಥವಾ ಮೂತ್ರ ವಿಸರ್ಜನೆಗೆ ಬಂದು ಮೃತಪಟ್ಟಿರುವಂತೆ ಕಂಡುಬಂದ ಮಹಿಳೆಯ ಶವ ಪತ್ತೆಯಾಗಿದೆ.ಗ್ರಾಮದ ಸಿದ್ದರಾಜನಾಯ್ಕ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಶವದ ಮುಖ, ಮೂಗು ಹಾಗೂ ಬಾಯಲ್ಲಿ ಹುಳ ಬಂದಿದ್ದ ಕಾರಣ ಶವ ಪರೀಕ್ಷೆ ನಡೆಸಿ ಶವಸಂಸ್ಕಾರ ಮಾಡಲಾಗಿದೆ.
ಮೃತಳÀು 75 ರಿಂದ 80 ವರ್ಷದವರಾಗಿದ್ದು ಕೋಲು ಮುಖ, ಸಾದಾರಣ ಮೈಕಟ್ಟು, ಕೃಶವಾದ ಶರೀರ, ಬಿಳಿ ತಲೆ ಕೂದಲು ಹಾಗೂ ಎಣ್ಣೆಗೆಂಪು ಬಣ್ಣ ಹೊಂದಿದ್ದರು. ಸುಮಾರು 4.8 ಅಡಿ ಎತ್ತರವಿದ್ದು ಮೈಮೇಲೆ ಕಡು ನೀಳಿ ಬಣ್ಣದ ರವಿಕೆ, ಕಂದು ಬಣ್ಣದ ಹೂವಿನ ಡಿಸೈನ್ ನೀಲಿ ಬಾರ್ಡರ್ ಸೀರೆ, ಮಾಸಲು ನೀಲಿ ಬಣ್ಣದ ಒಳಲಂಗ, ಕಿವಿಯಲ್ಲಿ ಚಿನ್ನದ ಮಾದರಿಯ ಓಲೆ, ಎರಡು ಕೈಗಳಲ್ಲಿ ಒಂದೊಂದು ಕೆಂಪು ಗಾಜಿನ ಬಳೆಗಳಿವೆ.
ವಾರಸುದಾರರು ಇದ್ದಲ್ಲಿ ನಗರದ ಪೂರ್ವ ಪೊಲೀಸ್ ಠಾಣೆ 08226-222058, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮೊಬೈಲ್ ಸಂ. 9480804648, ಚಾಮರಾಜನಗರ ಗ್ರಾಮಾಂತರ ವೃತ್ತ ನಿರೀಕ್ಷಕರ ಕಚೇರಿ 08226-224630, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ 08226-222090, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 08226-222383 ಸಂಪರ್ಕಿಸುವಂತೆ ಪೂರ್ವ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಆನಂದೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಜು. 20ರಂದು ವಿಕಲಚೇತನ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರ
ಚಾಮರಾಜನಗರ, ಜು. 15 - ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ವಶಿಕ್ಷಣ ಅಭಿಯಾನ ಆರ್‍ಎಂಎಸ್‍ಎ ವತಿಯಿಂದ 6 ರಿಂದ 16ರ ವಯೋಮಾನದ 1 ರಿಂದ 10ನೇ ತರಗತಿವರೆಗಿನ ವಿಕಲಚೇತನ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರವನ್ನು ಜುಲೈ 20ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಪೇಟೆ ಪ್ರೈಮರಿ ಶಾಲೆಯಲ್ಲಿ ಏರ್ಪಡಿಸಿದೆ.ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಆದರ್ಶ ವಿದ್ಯಾಲಯ ಆಯ್ಕೆ ಪಟ್ಟಿ ಪ್ರಕಟ: ದಾಖಲಾಗಲು ಸೂಚನೆ
ಚಾಮರಾಜನಗರ, ಜು. 15 - ನಗರದ ಆದರ್ಶ ವಿದ್ಯಾಲಯದಲ್ಲಿ 2017-18ನೇ ಸಾಲಿಗೆ 6ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡುವ ಸಲುವಾಗಿ ಆಯ್ಕೆ ಪಟ್ಟಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.ಆಯ್ಕೆಯಾದ ವಿದ್ಯಾರ್ಥಿಗಳು 6ನೇ ತರಗತಿಗೆ ದಾಖಲಾಗುವಂತೆ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಜು. 15 - ಮಾರ್ಚ್ ಹಾಗೂ ಏಪ್ರಿಲ್ 2017ರಲ್ಲಿ ನಡೆದ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇ. 90 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 3ಎ ಹಾಗೂ 3ಬಿ.ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಡಿ. ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.ಅರ್ಜಿ ಸಲ್ಲಿಸಲು ಜುಲೈ 31 ಕಡೆಯ ದಿನ. ವಿದ್ಯಾರ್ಥಿಗಳನ್ನು ಮೆರಿಟ್ ಹಾಗೂ ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನೋಡÀಬಹುದು. ಹಾಗೂ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ಸಹಾಯವಾಣಿ ಸಂಖ್ಯೆ 080-65970004ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಫಿಜಿಯೋಥೆರಪಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 15 - ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವಶಿಕ್ಷಣ ಆಭಿಯಾನದ ಸಮನ್ವಯ ಶಿಕ್ಷಣ ಚಟುವಟಿಕೆಯಡಿ ಪ್ರತಿ ತಾಲೂಕಿಗೆ ಒಬ್ಬರಂತೆ 5 ಜನ ಫಿಜಿಯೋಥೆರಪಿಸ್ಟ್‍ಗಳ ಸೇವೆ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಬ್ಯಾಚುಲರ್ ಆಫ್ ಫಿಜಿಯೋಥೆರಪಿ (ಬಿಪಿಟಿ) ಪದವಿ ಅಥವಾ ಡಿಪ್ಲೊಮಾ ಇನ್ ಫಿಜಿಯೋಥೆರಪಿ (ಡಿಪಿಟಿ) ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 25ರೊಳಗೆ ಅರ್ಜಿ ಸಲ್ಲಿಸಬೇಕು. ಗೌರವ ಸಂಭಾವನೆಯನ್ನು ಕೆಲಸ ಮತ್ತು ಪಾವತಿ (ವರ್ಕ್ ಅಂಡ್ ಪೇ) ರೂಪದಲ್ಲಿ ನೀಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಸಾಪ ಪರೀಕ್ಷೆ : ಅರ್ಜಿ ಆಹ್ವಾನ
ಚಾಮರಾಜನಗರ, ಜು. 15 - ಕನ್ನಡ ಸಾಹಿತ್ಯ ಪರಿಷತ್ತು 2017-18ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಿದೆ.ಪರೀಕ್ಷೆಯು ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿದ್ದು ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. 50 ರೂ. ದಂಡ ಶುಲ್ಕದೊಂದಿಗೆ ಸೆಪ್ಟೆಂಬರ್ 15ರವರೆಗೆ ಅವಕಾಶವಿದೆ.
ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ಪರಿಷತ್ತಿನ ಮಾರಾಟ ಮಳಿಗೆಯಲ್ಲಿ 25 ರೂ. ಪಾವತಿಸಿ ಪಡೆಯಬಹುದು. ಮನಿಯಾರ್ಡರ್ ಮೂಲಕ 30 ರೂ. ಪಾವತಿಸಿಯೂ ಅಂಚೆ ಮೂಲಕ ಪಡೆಯಬಹುದು. ಅಂತರ್ಜಾಲ ತಿತಿತಿ.ಞಚಿsಚಿಠಿಚಿ.iಟಿ ತಾಣದಿಂದ ಪಡೆದವರು ಪರೀಕ್ಷಾ ಶುಲ್ಕದೊಂದಿಗೆ 25 ರೂ.ಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕು.
ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು – 18 (ದೂ.ಸಂ. 080-26623584) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಯಳಂದೂರು : ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 15 - ಯಳಂದೂರು ಪಟ್ಟಣ ಪಂಚಾಯಿತಿಯು ಪಟ್ಟಣ ವ್ಯಾಪ್ತಿಗೆ ಒಳಪಡುವವರಿಂದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ 2017-18ನೇ ಸಾಲಿನ ವಾಜಪೇಯಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ.ಸಾಮಾನ್ಯ ವರ್ಗದವರಿಗೆ 9 ಹಾಗೂ ಅಲ್ಪಸಂಖ್ಯಾತರಿಗೆ 7 ಮನೆಗಳಂತೆ ಒಟ್ಟು 16 ಮನೆಗಳ ಗುರಿ ನೀಡಲಾಗಿದೆ. ಸ್ವಂತ ಹೆಸರಿನ ನಿವೇಶನ ದಾಖಲಾತಿ, ಜಾತಿ, ವಾರ್ಷಿಕ ಆದಾಯ (ರೂ. 87600ಗಿಂತ ಕಡಿಮೆ), ಖಾತಾ ನಕಲು, ಹಕ್ಕು ಪತ್ರ (ಮೂಲ ಪ್ರತಿ), 100 ರೂ. ಬಾಂಡ್ ಪೇಪರ್‍ನಲ್ಲಿ ಕುಟುಂಬದ ಯಾವುದೇ ಭಾಗದಲ್ಲಿ ಸರ್ಕಾರಿ ಯೋಜನೆಯಲ್ಲಿ ಮನೆ ಕಟ್ಟಲು ಸಹಾಯಧನ ಪಡೆದಿರುವುದಿಲ್ಲ ಎಂಬ ಕುರಿತು ನೋಟರಿಯಿಂದ ಪ್ರಮಾಣ ಪತ್ರ, ಬಿಪಿಎಲ್ ಪಡಿತರ ಚೀಟಿ, ವಾಸ ಸ್ಥಳ ದೃಢೀಕರಣ ಪತ್ರ, ಮನೆ ಕಟ್ಟಲು ಲೈಸೆನ್ಸ್ ಹಾಗೂ ಆಶ್ರಯ ಸಮಿತಿ ಕೇಳುವ ಇತರೆ ದಾಖಲಾತಿಗಳೊಂದಿಗೆ ಅರ್ಜಿಯನ್ನು ಆಗಸ್ಟ್ 9ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಯಳಂದೂರು ಪಟ್ಟಣ ಪಂಚಾಯಿತಿ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment