Thursday, 13 July 2017

ಪಿಡಿಓ ಅಮಾನತು ,ಗ್ರಾ ಪಂ ಉಪಚುನಾವಣೆ : ಆಯ್ಕೆಯಾದ ಸದಸ್ಯರ ವಿವರ ಅಧಿಸೂಚನೆ ಪ್ರಕಟ 13-07-2017

ಪಿಡಿಓ ಅಮಾನತು 

ಚಾಮರಾಜನಗರ, ಜು. 13- ನರೇಗಾ, ವಸತಿಯೋಜನೆ ಅನುಷ್ಠಾನಗೊಳಿಸದೆ ನಿರ್ಲಕ್ಷ್ಯವಹಿಸಿದ ಹಾಗೂ ಮುಖ್ಯಕಚೇರಿಯಿಂದ ನೀಡಿದ ಆದೇಶಗಳನ್ನು ಪಾಲಿಸದೆ ಸಂಸ್ಥೆಯ ಮುಖ್ಯಸ್ಥರಮೇಲೆ ಬಾಹ್ಯ ಒತ್ತಡವನ್ನು ತಂದ ಮಾರ್ಟಳ್ಳಿ ಗ್ರಾಮಪಂಚಾಯಿತಿ ಅಭಿವೃದಿ ಅಧಿಕಾರಿಯನ್ನು ಅಮಾನುತು ಮಾಡಿ ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಆದೇಶಹೊರಡಿಸಿದ್ದಾರೆ.
ಮೂಲ ಚಿಕ್ಕಲ್ಲೂರು ಗ್ರಾಮಪಂಚಾಯಿತಿಯ ಅಭಿವೃದ್ದಿ ಅಧಿಕಾರಿಯಾಗಿದ್ದು, ಮಾರ್ಟಳ್ಳಿ ಗ್ರಾಮಪಂಚಾಯಿತಿಗೆ ನಿಯೋಜನೆಗೊಂಡಿದ್ದ ಟಿ.ಶಿವಕುಮಾರ್ ಅಮಾನುತುಗೊಂಡವರು.
ಇವರು ವರ್ಗಾವಣೆಗೊಂಡಿದ್ದರು ಆದೇಶವನ್ನು ಉಲ್ಲಂಘಿಸಿ ವರ್ಗಾವಣೆಯಾಗಿರುವ ಸ್ಥಳಕ್ಕೆ ಕರ್ತವ್ಯಕ್ಕೆ ಹಾಜರಾಗದೆ ಬೇಜವ್ದಾರಿತನ ತೋರಿದ್ದರು. ಸಂಸ್ಥೆಯ ಮುಖ್ಯಸ್ಥರ ಮೇಲೆ ಒತ್ತಡ ತಂದಿದ್ದರು.
ತಾಲೂಕು ಪಂಚಾಯಿತಿ ನೀಡಿದ್ದ ಸೂಚನೆಗಳನ್ನು ಪಾಲಿಸದೆ ಅವಿಧೇಯತೆ  ಹಾಗೂ ಬೆಜವ್ದಾರಿತನ ತೋರಿದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜು. 14ರಂದು ಮುಖ್ಯಮಂತ್ರಿಯವರಿಂದ ಉಮ್ಮತ್ತೂರಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಿಲಾನ್ಯಾಸ

ಚಾಮರಾಜನಗರ, ಜು. 13 - ಜಲಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮದ ವತಿಯಿಂದ ನಂಜನಗೂಡು, ಚಾಮರಾಜನಗರ ಮತ್ತು ಯಳಂದೂರು ತಾಲೂಕಿನ 24 ಕೆರೆಗಳಿಗೆ ಕಬಿನಿ ನದಿಯಿಂದ ಕುಡಿಯುವ ನೀರಿಗಾಗಿ ನೀರು ತುಂಬಿಸುವ ಯೋಜನೆಯ ಶಿಲಾನ್ಯಾಸ ಸಮಾರಂಭವನ್ನು ಜುಲೈ 14ರಂದು ಮಧ್ಯಾಹ್ನ 2 ಗಂಟೆಗೆ ತಾಲೂಕಿನ ಉಮ್ಮತ್ತೂರಿನಲ್ಲಿ ಏರ್ಪಡಿಸಲಾಗಿದೆ.
ವÀುುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಅವರು ಉದ್ಘಾಟನೆ ನೆರವೇರಿಸುವರು. ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲ್ ಜ್ಯೋತಿ ಬೆಳಗಿಸುವರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಘನ ಉಪಸ್ಥಿತರಿರುವರು. ಶಾಸಕರಾದ ಎಸ್. ಜಯಣ್ಣ ಅಧ್ಯಕ್ಷತೆ ವಹಿಸುವರು.
ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವರಾದ ಟಿ.ಬಿ. ಜಯಚಂದ್ರ, ಗ್ರಾಮೀಣಾಭಿವೃದ್ಧಿ ಸಚಿವರಾದ ಎಚ್.ಕೆ. ಪಾಟೀಲ್, ಪ್ರಾಥಮಿಕ, ಪ್ರೌಢ ಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವರಾದ ತನ್ವೀರ್ ಸೇಠ್, ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಚಾ.ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಮೈಸೂರು ಜಿ.ಪಂ. ಅಧ್ಯಕ್ಷರಾದ ನಹಿಮಾ ಸುಲ್ತಾನ ನಜೀರ್ ಅಹಮದ್, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಪ್ರತಾಪಸಿಂಹ, ಸಿ.ಎಸ್. ಪುಟ್ಟರಾಜು, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಹೆಚ್.ಪಿ. ಮಂಜುನಾಥ್, ಎಂ.ಕೆ. ಸೋಮಶೇಖರ್, ಕೆ. ವೆಂಕಟೇಶ್, ಆರ್. ನರೇಂದ್ರ, ಜಿ.ಟಿ. ದೇವೇಗೌಡ, ಸಾÀ.ರಾ. ಮಹೇಶ್, ವಾಸು, ಎಂ.ಸಿ. ಮೋಹನ ಕುಮಾರಿ ಉರುಫ್ ಗೀತಾ, ಚಿಕ್ಕಮಾದು, ಕಳಲೆ ಎಸ್ ಕೇಶವಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ಎಸ್. ನಾಗರಾಜು (ಸಂದೇಶ್ ನಾಗರಾಜು), ಕೆ.ವಿ. ನಾರಾಯಣಸ್ವಾಮಿ, ನಿಗಮ ಮಂಡಳಿ ಅಧ್ಯಕ್ಷರಾದ ಧ್ರುವಕುಮಾರ್, ಹೆಚ್. ಎ. ವೆಂಕಟೇಶ್, ಹೆಚ್.ಎಸ್. ನಂಜಪ್ಪ, ಎನ್. ನಂದಕುಮಾರ್, ಸಿದ್ಧರಾಜು, ಮಲ್ಲಿಗೆ ವೀರೇಶ್, ಕೆ.ಜಿ. ಮಹೇಶ್, ಜಿ.ವಿ. ಸೀತಾರಾಮ್, ಎಂ. ಚಿನ್ನಸ್ವಾಮಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜಿ. ನಟರಾಜು, ಎಸ್. ಬಸವರಾಜು, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಬಿ.ಎಸ್. ಮಹದೇವಪ್ಪ, ಹೆಚ್.ವಿ. ಚಂದ್ರು, ಉಪಾಧ್ಯಕ್ಷರಾದ ಗೋವಿಂದರಾಜನ್, ಪಿ.ಎನ್. ದಯಾನಿಧಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ರವೀಶ್, ದೇವರಾಜಮ್ಮ, ಪಿ. ಸೋಮಣ್ಣ, ಉಪಾಧ್ಯಕ್ಷರಾದ ಚಿಕ್ಕತಾಯಮ್ಮ, ಎಸ್. ಮಹದೇವಸ್ವಾಮಿ, ಮಹದೇವಮ್ಮ, ಜಿಲ್ಲಾ ಪಂಚಾಯತ್ ಸದಸ್ಯರಾದ ಶೀಲಾ ಮಲ್ಲೇಶ್, ಬಿ.ಎನ್. ಸದಾನಂದ, ಎ.ಎಂ. ಗುರುಸ್ವಾಮಿ, ತಾಲೂಕು ಪಂಚಾಯತ್ ಸದಸ್ಯರಾದ ಭಾಗ್ಯಮ್ಮ, ಸುಧಾ ಮಲ್ಲಣ್ಣ, ಜ್ಯೋತಿ ಶಾರ್ವನಿ ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ವಿಕಲಚೇತನರ ಕ್ಷೇತ್ರದ ರಾಷ್ಟ್ರೀಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜು. 13 :- ಕೇಂದ್ರ ಸರ್ಕಾರವು ವಿಕಲಚೇತನರ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿರುವ ವ್ಯಕ್ತಿಗಳು ಮತ್ತು ಸಂಘಸಂಸ್ಥೆಯವರಿಗೆ 2017-18ನೇ ಸಾಲಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಜಿಲ್ಲೆಯಲ್ಲಿ ವಿಕಲಚೇತನರ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಸಕ್ತ ವ್ಯಕ್ತಿಗಳು, ಸಂಘಸಂಸ್ಥೆಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಜುಲೈ 31 ಕಡೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳ ಕಚೇರಿ (ದೂ.ಸಂ. 08226-223688, 224688) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಕಲಚೇತನರಿಂದ ತ್ರಿಚಕ್ರ ವಾಹನಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ಜು. 13 - ವಿಕಲಚೇತನರ ಕಲ್ಯಾಣ ಇಲಾಖೆಯು ವಿಕಲಚೇತನರಿಗಾಗಿ ಯಂತ್ರಚಾಲಿತ ತ್ರಿಚಕ್ರ ವಾಹನ ಮಂಜೂರಾತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಜಿಲ್ಲೆಯ ತೀವ್ರತರನಾದ ವಿಕಲತೆ ಇರುವ ಅರ್ಹ ವಿಕಲಚೇತನರು ಇಲಾಖೆಯ ವೆಬ್ ಸೈಟ್ ತಿತಿತಿ.ತಿeಟಜಿಚಿಡಿeoಜಿಜisಚಿbಟeಜ.ಞqಡಿ.ಟಿiಛಿ.iಟಿ ನಲ್ಲಿ ಸೆಪ್ಟೆಂಬರ್ 19ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಆನ್‍ಲೈನ್  ಮೂಲಕ ಅರ್ಜಿ ಸಲ್ಲಿಸಬಹುದು. ಈ ಹಿಂದೆ ಅರ್ಜಿ ಸಲ್ಲಿಸಿದ್ದರೂ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳ ಕಚೇರಿ (ದೂ.ಸಂ. 08226-223688, 224688) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿವಿಧ ಯೋಜನೆಗಳಡಿ ಸಾಲಸೌಲಭ್ಯಕ್ಕಾಗಿ ಕ್ರಿಶ್ಚಿಯನ್ ಸಮುದಾಯದವರಿಂದ ಅರ್ಜಿ ಆಹ್ವಾನ

ಚಾಮರಾಜನಗರ, ಜು. 13:- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2017-18ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಸಾಲಸೌಲಭ್ಯ ಪಡೆಯಲು ಮತೀಯ ಕ್ರಿಶ್ಚಿಯನ್ ಜನಾಂಗದವರಿಂದ ಅರ್ಜಿ ಆಹ್ವಾನಿಸಿದೆ.
ಸ್ವಯಂ ಉದ್ಯೋಗ, ಅರಿವು (ವಿದ್ಯಾಭ್ಯಾಸ), ಶ್ರಮಶಕ್ತಿ, ಕಿರು (ಮೈಕ್ರೋ), ಗಂಗಾ ಕಲ್ಯಾಣ, ಭೂ ಖರೀದಿ, ಪಶುಸಂಗೋಪನೆ (ಗ್ರಾಮೀಣ ಮಹಿಳೆಯರಿಗೆ ಮಾತ್ರ), ಟ್ಯಾಕ್ಸಿ, ಗೂಡ್ಸ್ ವಾಹನ ಖರೀದಿಗೆ ಸಾಲಸೌಲಭ್ಯ ಲಭಿಸಲಿದೆ. ಅಲ್ಲದೆ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂತಿರುಗಿರುವ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಸಾಲ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.
18 ರಿಂದ 55 ವರ್ಷದೊಳಗಿರಬೇಕು. ಕುಟುಂಬದ ವಾರ್ಷಿಕ ವರಮಾನ (ಅರಿವು ಯೋಜನೆ ಹೊರತುಪಡಿಸಿ) ಗ್ರಾಮಾಂತರ ಪ್ರದೇಶದವರಿಗೆ 81 ಸಾವಿರ ರೂ., ನಗರ ಪ್ರದೇಶದವರಿಗೆ 1,03,000 ರೂ. ಮೀರಿರಬಾರದು. ಶೇ. 33ರಷ್ಟು ಮಹಿಳೆಯರಿಗೆ ಹಾಗೂ ಶೇ. 3ರಷ್ಟು ಅಂಗವಿಕಲರಿಗೆ ಮೀಸಲಾತಿ ಇರುತ್ತದೆ. ಅರ್ಜಿದಾರರು ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಪ್ರತಿ ಸಲ್ಲಿಸಬೇಕು. ಬ್ಯಾಂಕ್‍ನ ಉಳಿತಾಯ ಖಾತೆಗೆ ಆಧಾರ್ ಹೊಂದಾಣಿಕೆ ಮಾಡಬೇಕು. ಈ ಹಿಂದೆ ನಿಗಮದ ಸೌಲಭ್ಯ ಪಡೆದವರು ಅರ್ಹರಿರುವುದಿಲ್ಲ.
ನಿಗದಿತ ಅರ್ಜಿ ನಮೂನೆಯನ್ನು ನಿಗಮದ ವೆಬ್ ಸೈಟ್ ತಿತಿತಿ.ಞmಜಛಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜುಲೈ 31ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-222332 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಗ್ರಾ ಪಂ ಉಪಚುನಾವಣೆ : ಆಯ್ಕೆಯಾದ ಸದಸ್ಯರ ವಿವರ ಅಧಿಸೂಚನೆ ಪ್ರಕಟ

ಚಾಮರಾಜನಗರ, ಜು. 13 - ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾದವರ ಹೆಸರು ನಮೂದಿಸಿ ಜಿಲ್ಲಾಧಿಕಾರಿಯವರು ಅಧಿಸೂಚನೆ ಪ್ರಕಟಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮ ಪಂಚಾಯಿತಿಯ ಒಂದು ಸದಸ್ಯ ಸ್ಥಾನಕ್ಕೆ ನಾಗಮ್ಮ (ಅನುಸೂಚಿತ ಪಂಗಡ-ಮಹಿಳೆ), ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮ ಪಂಚಾಯಿತಿಯ ಒಂದು ಸದಸ್ಯ ಸ್ಥಾನಕ್ಕೆ ನಾಗರತ್ನ (ಸಾಮಾನ್ಯ-ಮಹಿಳೆ), ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಗ್ರಾಮ ಪಂಚಾಯಿತಿಯ ಒಂದು ಸದಸ್ಯ ಸ್ಥಾನಕ್ಕೆ ಪುಟ್ಟಸ್ವಾಮಿಗೌಡ (ಹಿಂದುಳಿದ ಅ ವರ್ಗ) ಅವರು ಆಯ್ಕೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅಧಿಸೂಚನೆ ಪ್ರಕಟಿಸಿದ್ದಾರೆ.

ಕರ್ನಾಟಕ ನಗರ, ಗ್ರಾಮಾಂತರ ಯೋಜನೆ (ನಿವೇಶನ ಅನುಮೋದನೆ) ನಿಯಮ ತಿದ್ದುಪಡಿ ಕರಡು ಪ್ರಕಟ : ಸಲಹೆ ಸೂಚನೆ ಆಹ್ವಾನ

ಚಾಮರಾಜನಗರ, ಜು. 13 - ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ (ನಿವೇಶನ ಅನುಮೋದನೆ) ನಿಯಮಾವಳಿಗಳು 2017ರ ಪರಿಚ್ಚೇದ 17 ಮತ್ತು 74ರ ತಿದ್ದುಪಡಿ ಕರಡನ್ನು ತಯಾರಿಸಿ ಪ್ರಕಟಿಸಲಾಗಿದ್ದು ಈ ಸಂಬಂಧ ತಿದ್ದುಪಡಿ ಬಗ್ಗೆ ಸಲಹೆ ಸೂಚನೆಗಳನ್ನು ನಾಗರಿಕರಿಂದ ಆಹ್ವಾನಿಸಲಾಗಿದೆ.
ಕರಡನ್ನು ಕರ್ನಾಟಕ ರಾಜ್ಯ ಪತ್ರ ಭಾಗ ಗಿI-ಂ ದಿನಾಂಕ 6.7.2017ರಲ್ಲಿ ಪ್ರಕಟಿಸಲಾಗಿದೆ. ತಿದ್ದುಪಡಿ ಬಗ್ಗೆ ಸಲಹೆ ಸೂಚನೆಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಣೆಯಾದ ಒಂದು ತಿಂಗಳೊಳಗೆ ಸರ್ಕಾರದ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ವಿಕಾಸಸೌಧ, ಬೆಂಗಳೂರು-560001 ಇಲ್ಲಿಗೆ ಸಲ್ಲಿಸಬಹುದು. ತಿದ್ದುಪಡಿಯ ಕರಡು ಪ್ರತಿಯನ್ನು ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಕಟಣಾ ಫಲಕದಲ್ಲಿ ಪ್ರಚುರಪಡಿಸಲಾಗಿದೆ. ನಾಗರಿಕರು ಕಚೇರಿ ವೇಳೆಯಲ್ಲಿ ತಿದ್ದುಪಡಿಯ ಕರಡು ಪ್ರತಿಯನ್ನು ವೀಕ್ಷಿಸಬಹುದಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.
   

ಜು. 14ರಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿಯವರ ಪ್ರವಾಸ

ಚಾಮರಾಜನಗರ, ಜು. 13:- ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಜುಲೈ 14ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
 ಮಧ್ಯಾಹ್ನ 2 ಗಂಟೆಗೆ ಕುದೇರಿನಲ್ಲಿರುವ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ  (ಚಾಮುಲ್)ಕ್ಕೆ ಭೇಟಿ ನೀಡುವರು. ಮಧ್ಯಾಹ್ನ 2.30 ಗಂಟೆಗೆ ಉಮ್ಮತ್ತೂರಿನಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವರು ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಬಳಿಕ ಮೈಸೂರಿಗೆ ತೆರಳುವರೆಂದು ಪ್ರಕಟಣೆ ತಿಳಿಸಿದೆ.

ಜು. 14ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ


ಚಾಮರಾಜನಗರ, ಜು. 13:- ಆಹಾರ ನಾಗರಿಕ ಪೂರೈಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಜುಲೈ 14 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 8 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸುವರು. ಮಧ್ಯಾಹ್ನ 2 ಗಂಟೆಗೆ ಉಮ್ಮತ್ತೂರಿಗೆ ಆಗಮಿಸುವರು. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 5ಗಂಟೆಗೆ ಮಂಜೇರಿಗೆ ತೆರಳುವರು ಎಂದು ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ. ಎಂ.ಎಸ್.ಮಂಜುನಾಥ್ ತಿಳಿಸಿದ್ದಾರೆ.

ಜು. 14ರಂದು ಜಲಸಂಪನ್ಮೂಲ ಸಚಿವರ ಜಿಲ್ಲಾ ಪ್ರವಾಸ


ಚಾಮರಾಜನಗರ, ಜು. 13 :-  ಜಲಸಂಪನ್ಮೂಲ ಸಚಿವರಾದ ಎಂ.ಬಿ.ಪಾಟೀಲ ಅವರು  ಜುಲೈ 14 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಮಧ್ಯಾಹ್ನ3 ಗಂಟೆಗೆ  ಉಮ್ಮತ್ತೂರಿಗೆ ಆಗಮಿಸುವರು. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  ಎಂದು  ಪ್ರಕಟಣೆ ತಿಳಿಸಿದೆ.

ನಂಜನಗೂಡು, ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನ 24 ಕೆರೆಗಳಿಗೆ ಕುಡಿಯುವ ನೀರಿಗಾಗಿ ಸುತ್ತೂರು ಗ್ರಾಮದ ಹತ್ತಿರ ಕಬಿನಿ ನದಿಯಿಂದ ನೀರೆತ್ತುವ ಯೋಜನೆಯ ವಿವರಗಳು

ಯೋಜನೆಯ ಉದ್ದೇಶ : ನಂಜನಗೂಡು ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನ ಸುತ್ತಮುತ್ತಲಿನ 33 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 24 ಕೆರೆಗಳು ಕಳೆದ 30 ವರ್ಷಗಳಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಬವಣೆ ಪಡುವಂತಾಗಿರುತ್ತದೆ ಹಾಗೂ ಅಂತರ್ಜಲದ ಮಟ್ಟವು ಕುಸಿದಿರುತ್ತದೆ. ಇದನ್ನು ಮನಗಂಡು ಘನ ಸರ್ಕಾರವು ಸುತ್ತೂರು ಗ್ರಾಮದ ಹತ್ತಿರ ಕಬಿನಿ ನದಿಯಿಂದ ಕುಡಿಯುವ ನೀರಿಗಾಗಿ ನೀರನ್ನು ಎತ್ತಿ ಕೆರೆಗಳಿಗೆ ನೀರು ತುಂಬಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯು ಚಾಮರಾಜನಗರ ಜಿಲ್ಲೆಯ ಬಹುಮುಖ್ಯ ಯೋಜನೆಯಾಗಿರುತ್ತದೆ. ಈ ಯೋಜನೆಯಲ್ಲಿ ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದ ಬಳಿ ಕಬಿನಿ ನದಿಯಿಂದ ಮೂರು ಹಂತದಲ್ಲಿ ಒಟ್ಟಾರೆ 51.13 ಕಿ.ಮೀ. ಉದ್ದದ ರೈಸಿಂಗ್ ಮೈನ್ ಮೂಲಕ 0.628 ಟಿ.ಎಂ.ಸಿ. ನೀರನ್ನು 72.00 ಕ್ಯೂಸೆಕ್ಸ್‍ರಂತೆ ಜೂನ್ ನಿಂದ ಸೆಪ್ಟೆಂಬರ್ ವರೆಗೆ 101 ದಿನಗಳ ಮಳೆಗಾಲದ ಅವಧಿಯಲ್ಲಿ ಎತ್ತಿ ನಂಜನಗೂಡು, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನ ಒಟ್ಟು 24 ಕೆರೆಗಳಿಗೆ ನೀರನ್ನು ಹರಿಸುವ ಮೂಲಕ 54 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಉದ್ದೇಶಿಸಲಾಗಿದೆ.
ಮೊದಲನೇ ಹಂತ: ನಂಜನಗೂಡು ತಾಲ್ಲೂಕು ಸುತ್ತೂರು ಗ್ರಾಮದ ಬಳಿ ಕಬಿನಿ ನದಿಯಿಂದ 72.00 ಕ್ಯೂಸೆಕ್ಸ್ ನೀರನ್ನು 1400 ಹೆಚ್.ಪಿ. ಸಾಮಥ್ರ್ಯದ 3+1 ಪಂಪುಗಳ ಸಹಾಯದಿಂದ 1300 ಮಿ.ಮಿ ವ್ಯಾಸದ ಎಂ.ಎಸ್. ಪೈಪ್‍ಗಳ ಮೂಲಕ 35.13 ಕಿ.ಮೀ ಉದ್ದ (14.25 ಕಿ.ಮೀ ಉದ್ದದ ರೈಸಿಂಗ್ ಮೈನ್ ಹಾಗೂ 20.88 ಕಿ.ಮೀ ಉದ್ದದ ಗುರುತ್ವಾಕರ್ಷಣೆ ಮೈನ್) ಹಾಗೂ 96.94 ಮೀ. ಎತ್ತರಕ್ಕೆ ಪಂಪ್ ಮಾಡಲು ನಂಜನಗೂಡು ತಾಲ್ಲೂಕು ಸುತ್ತೂರು ವಿದ್ಯುತ್ ಉಪಸ್ಥಾವರದಿಂದ ಸುತ್ತೂರು ಪಂಪ್‍ಹೌಸ್‍ವರೆಗೆ ತಂತಿ ಅಳವಡಿಸಿ ವಿದ್ಯುತ್ ಸರಬರಾಜು ಮಾಡಲು ಉದ್ದೇಶಿಸಲಾಗಿದೆ.
            ನಂಜನಗೂಡು ತಾಲ್ಲೂಕು ಕುಂಕೆರೆಗೆ ಮೊದಲನೇ ಜಂಕ್ಷನ್ ಮುಖಾಂತರ, 14.25 ಕಿ.ಮೀ. ನಂತರ ಡೆಲಿವರಿ ಚೇಂಬರ್‍ನಿಂದ ಗುರುತ್ವಾಕರ್ಷಣೆ ಮೂಲಕ ಚಾಮರಾಜನಗರ ತಾಲ್ಲೂಕಿನ ಜನ್ನೂರು ಕೆರೆ, ಬಾಗಲಿ ಕೆರೆಗಳಿಗೆ ಎರಡನೇ ಜಂಕ್ಷನ್ ಮುಖಾಂತರ, ಉಮ್ಮತ್ತೂರು ಕೆರೆಗೆ ಮೂರನೇ ಜಂಕ್ಷನ್ ಮುಖಾಂತರ, ನಂಜನಗೂಡು ತಾಲ್ಲೂಕಿನ ಚಿಕ್ಕಹೊಮ್ಮ ಕೆರೆಗೆ ನಾಲ್ಕನೇ ಜಂಕ್ಷನ್ ಮುಖಾಂತರ, ಚಾಮರಾಜನಗರ ತಾಲ್ಲೂಕಿನ ಯಡಿಯೂರು ಅಡ್ಡಹಳ್ಳ ಕೆರೆಗೆ 5ನೇ ಜಂಕ್ಷನ್ ಮುಖಾಂತರ, ದೊಡ್ಡರಾಯಪೇಟೆ ಕೆರೆಗೆ ಆರನೇ ಜಂಕ್ಷನ್ ಮುಖಾಂತರ, ಹೊಮ್ಮ ಕೆರೆ, ಕಣ್ಣೇಗಾಲ ಕೆರೆ ಹಾಗೂ ಯಳಂದೂರು ತಾಲ್ಲೂಕಿನ ಅಂಬ್ಲೆ ಕೆರೆಹಳಿಗೆ ಏಳನೇ ಜಂಕ್ಷನ್ ಮುಖಾಂತರ ಹಾಗೂ ಕೋಡಿ ಮೊಳೆ ಕೆರೆಗೆ ನೀರನ್ನು ಹರಿಸಲು ವಿನ್ಯಾಸಗೊಳಿಸಲಾಗಿದೆ.

ಕೆರೆಗಳ ವಿವರಗಳು:

ತಾಲ್ಲೂಕು ಕೆರೆಯ ಹೆಸರು ಸಾಮಥ್ರ್ಯ
(ದಶಲಕ್ಷ ಘನ ಅಡಿಗಳು)
ನಂಜನಗೂಡು ಕುಂಕೆರೆ 23.00
ಚಿಕ್ಕಹೊಮ್ಮ 9.53
ಚಾಮರಾಜನಗರ ಜನ್ನೂರು ಕೆರೆ 6.50
ಬಾಗಲಿ ಕೆರೆ 22.90
ಉಮ್ಮತ್ತೂರು ಕೆರೆ 62.70
ಯಡಿಯೂರು ಅಡ್ಡಹಳ್ಳ 30.70
ದೊಡ್ಡರಾಯಪೇಟೆ ಕೆರೆ 10.71
ಹೊಮ್ಮ ಕೆರೆ 48.06

ಕಣ್ಣೇಗಾಲ ಕೆರೆ 32.00
ಕೋಡಿ ಮೊಳೆ ಕೆರೆ 14.11
ಯಳಂದೂರು ಅಂಬ್ಲೆ ಕೆರೆ 62.39
ಕೆರೆಗಳ ಒಟ್ಟು ಸಾಮಥ್ರ್ಯ 292.60

ಎರಡನೇ ಹಂತ (ಬಲಭಾಗ) : ಚಾಮರಾಜನಗರ ತಾಲ್ಲೂಕು ಕೋಡಿ ಮೊಳೆ ಕೆರೆಯಿಂದ 72.00 ಕ್ಯೂಸೆಕ್ಸ್ ನೀರನ್ನು 700 ಹೆಚ್.ಪಿ. ಸಾಮಥ್ರ್ಯದ 3 ಪಂಪುಗಳ ಸಹಾಯದಿಂದ 1200 ಮಿ.ಮಿ ವ್ಯಾಸದ ಮತ್ತು 900 ಮಿ.ಮಿ ವ್ಯಾಸದ ಎಂ.ಎಸ್. ಪೈಪ್‍ಗಳ ಮೂಲಕ 8.50 ಕಿ.ಮೀ ಉದ್ದದ ರೈಸಿಂಗ್ ಮೈನ್ ಹಾಗೂ 43.39 ಮೀ. ಎತ್ತರಕ್ಕೆ ಪಂಪ್ ಮಾಡಲು ಚಾಮರಾಜನಗರ ತಾಲ್ಲೂಕು ದೊಡ್ಡರಾಯಪೇಟೆ ವಿದ್ಯುತ್ ಉಪಸ್ಥಾವರದಿಂದ ಕೋಡಿ ಮೊಳೆ ಪಂಪ್‍ಹೌಸ್‍ವರೆಗೆ ತಂತಿ ಅಳವಡಿಸಿ ವಿದ್ಯುತ್ ಸರಬರಾಜು ಮಾಡಲು ಉದ್ದೇಶಿಸಲಾಗಿದೆ.
       ಚಾಮರಾಜನಗರ ತಾಲ್ಲೂಕು ಕೋಡಿ ಮೊಳೆಕೆರೆಯಿಂದ ದೊಡ್ಡಕೆರೆ, ಚಿಕ್ಕಕೆರೆ ಹಾಗೂ ಸಿಂಡಿಗೆರೆ ಕೆರೆಗಳಿಗೆ ಮೊದಲನೇ ಜಂಕ್ಷನ್ ಮುಖಾಂತರ, ನಗರದ ಕೆರೆಗೆ ಎರಡನೇ ಜಂಕ್ಷನ್ ಮುಖಾಂತರ, ನಂತರ ಡೆಲಿವರಿ ಚೇಂಬರ್‍ನಿಂದ ಗುರುತ್ವಾಕರ್ಷಣೆ ಮೂಲಕ ಬಂಡಿಗೆರೆ ಕೆರೆ ಮತ್ತು ಮರಗದ ಕೆರೆಗಳಿಗೆ ನೀರನ್ನು ಹರಿಸಲು ವಿನ್ಯಾಸಗೊಳಿಸಲಾಗಿದೆ.

ಕೆರೆಗಳ ವಿವರಗಳು:

ತಾಲ್ಲೂಕು ಕೆರೆಯ ಹೆಸರು ಸಾಮಥ್ರ್ಯ
(ದಶಲಕ್ಷ ಘನ ಅಡಿಗಳು)
ಚಾಮರಾಜನಗರ ದೊಡ್ಡಕೆರೆ 100.66
ಚಿಕ್ಕಕೆರೆ 33.00
ಸಿಂಡಿಗೆರೆ ಕೆರೆ 14.45
ಮರಗದಕೆರೆ 32.10
ಬಂಡಿಗೆರೆ ಕೆರೆ 40.32
ನಗರದ ಕೆರೆ 16.70
ಕೆರೆಗಳ ಒಟ್ಟು ಸಾಮಥ್ರ್ಯ 237.23

ಮೂರನೇ ಹಂತ (ಎಡಭಾಗ) : ಚಾಮರಾಜನಗರ ತಾಲ್ಲೂಕು ಕೋಡಿ ಮೊಳೆ ಕೆರೆಯಿಂದ 72.00 ಕ್ಯೂಸೆಕ್ಸ್ ನೀರನ್ನು 935 ಹೆಚ್.ಪಿ. ಸಾಮಥ್ರ್ಯದ 3 ಪಂಪುಗಳ ಸಹಾಯದಿಂದ 1100 ಮಿ.ಮಿ ವ್ಯಾಸದ ಎಂ.ಎಸ್. ಪೈಪ್‍ಗಳ ಮೂಲಕ 7.50 ಕಿ.ಮೀ ಉದ್ದದ ರೈಸಿಂಗ್ ಮೈನ್ ಹಾಗೂ 55.92 ಮೀ. ಎತ್ತರಕ್ಕೆ ಪಂಪ್ ಮಾಡಲು ಚಾಮರಾಜನಗರ ತಾಲ್ಲೂಕು ದೊಡ್ಡರಾಯಪೇಟೆ ವಿದ್ಯುತ್ ಉಪಸ್ಥಾವರದಿಂದ ಕೋಡಿ ಮೊಳೆ ಪಂಪ್‍ಹೌಸ್‍ವರೆಗೆ ತಂತಿ ಅಳವಡಿಸಿ ವಿದ್ಯುತ್ ಸರಬರಾಜು ಮಾಡಲು ಉದ್ದೇಶಿಸಲಾಗಿದೆ.
            ಚಾಮರಾಜನಗರ ತಾಲ್ಲೂಕು ಕೋಡಿ ಮೊಳೆಕೆರೆಯಿಂದ ಮೊದಲನೇ ಜಂಕ್ಷನ್ ಮುಖಾಂತರ ಸರಗೂರು ಮೋಳೆ ಕೆರೆಗೆ, ನಂತರ ಡೆಲಿವರಿ ಚೇಂಬರ್‍ನಿಂದ ಗುರುತ್ವಾಕರ್ಷಣೆ ಮೂಲಕ ಹೆಬ್ಬಹಳ್ಳ ಕೆರೆಗೆ, ಮಲ್ಲದೇವನಹಳ್ಳಿ ಕೆರೆಗೆ, ಪುಟ್ಟನಪುರ ಕೆರೆಗೆ, ಹೊಂಡರಬಾಳು ಕೆರೆಗೆ, ನಾಗವಳ್ಳಿ ಕೆರೆಗೆ, ಮತ್ತು ಕಾಗಲವಾಡಿ ಕೆರೆಗಳಿಗೆ ನೀರನ್ನು ಹರಿಸಲು ವಿನ್ಯಾಸಗೊಳಿಸಲಾಗಿದೆ.

ಕೆರೆಗಳ ವಿವರಗಳು:

ತಾಲ್ಲೂಕು ಕೆರೆಯ ಹೆಸರು ಸಾಮಥ್ರ್ಯ
(ದಶಲಕ್ಷ ಘನ ಅಡಿಗಳು)
ಚಾಮರಾಜನಗರ ಸರಗೂರು ಮೋಳೆ ಕೆರೆ 7.42
ಹೆಬ್ಬಹಳ್ಳ ಕೆರೆ 10.31
ಮಲ್ಲದೇವನಹಳ್ಳಿ ಕೆರೆ 21.85
ಪುಟ್ಟನಪುರ ಕೆರೆ 1.44
ಹೊಂಡರಬಾಳು ಕೆರೆ 20.80
ನಾಗವಳ್ಳಿ ಕೆರೆ 61.00
ಕಾಗಲವಾಡಿ ಕೆರೆ 31.15
ಕೆರೆಗಳ ಒಟ್ಟು ಸಾಮಥ್ರ್ಯ 153.97


************





No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು