ಬಾಲ್ಯವಿವಾಹ ತಡೆ, ಶಿಕ್ಷಣ ಜಾಗೃತಿ ಕಾನೂನು ರಥಕ್ಕೆ ಚಾಲನೆ
ಚಾಮರಾಜನಗರ, ಜು. 01 :- ಮಕ್ಕಳ ಶಿಕ್ಷಣ ಹಕ್ಕು ಜಾರಿಗಾಗಿ ಶಾಲೆ ಕಡೆ ನನ್ನ ನಡೆ ಹಾಗೂ ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ಕಾನೂನು ರಥಕ್ಕೆ ಇಂದು ಚಾಲನೆ ನೀಡಲಾಯಿತು.ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾಧನ ಸಂಸ್ಥೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾರ್ಮಿಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಹಸಿರು ನಿಶಾನೆ ತೋರುವ ಮೂಲಕ ಕಾನೂನು ಜಾಗೃತಿ ಸಂಚಾರಿ ವಾಹನಕ್ಕೆ ಚಾಲನೆ ನೀಡಿದರು.
ಬಳಿಕ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಿಕ್ಷಣ ಮತ್ತು ಬಾಲ್ಯವಿವಾಹ ಸಂಬಂಧಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾನೂನು ರಥ ಎಲ್ಲ ಹಳ್ಳಿಗಳಿಗೆ ಸಂಚರಿಸಲಿದೆ. ಜನರಲ್ಲಿ ಪರಿಣಾಮಕಾರಿಯಾಗಿ ತಿಳಿವಳಿಕೆ ನೀಡಬೇಕೆಂಬ ನಿಟ್ಟಿನಲ್ಲಿ ನಾಲ್ಕೂ ತಾಲೂಕುಗಳ ವ್ಯಾಪ್ತಿಯಲ್ಲಿ ಸಂಚಾರಿ ವಾಹನ ಭೇಟಿ ಕೊಡಲಿದೆ ಎಂದರು.
ಬಾಲ್ಯ ವಿವಾಹ ಪಿಡುಗನ್ನು ಸಮಾಜದಲ್ಲಿ ದೂರ ಮಾಡಬೇಕಿದೆ. 15 ರಿಂದ 19ರ ವಯಸ್ಸಿನ ಹೆಣ್ಣುಮಕ್ಕಳ ವಿವಾಹವಾಗುವ ಪ್ರಮಾಣ ಶೇ. 35ರಷ್ಟಿದೆ ಹಾಗೂ 21 ವರ್ಷದೊಳಗೆ ವಿವಾಹವಾಗುತ್ತಿರುವ ಯುವಕರ ಸಂಖ್ಯೆಯೂ ಶೇ. 9ರಷ್ಟಿದೆ ಎಂದು ಮಾಹಿತಿ ಇದೆ. ಇದರಿಂದ ಹೆಣ್ಣು ಹಾಗೂ ಗಂಡುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿಶೇಷವಾಗಿ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ತಾಯ್ತನ ಹೊಂದುವುದರಿಂದ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂದರು.
ಬಾಲ್ಯವಿವಾಹ ತಡೆಗೆ ಕಠಿಣ ಕಾಯಿದೆ ರೂಪಿಸಲಾಗಿದೆ. ಆದರೂ ಬಾಲ್ಯವಿವಾಹ ಪ್ರಕರಣಗಳು ಮುಂದುವರಿಯುತ್ತಲೇ ಇವೆ. ಇದರ ಸಂಪೂರ್ಣ ನಿರ್ಮೂಲನೆಗೆ ಹಲವಾರು ಇಲಾಖೆಗಳು, ಸಂಘಸಂಸ್ಥೆಗಳು ಶ್ರಮಿಸುತ್ತಿವೆ. ಶಿಕ್ಷಣದಿಂದ ಅರಿವು ಹೆಚ್ಚಾಗಲಿದೆ. ಶಿಕ್ಷಣದಿಂದ ಯಾರೊಬ್ಬರೂ ದೂರ ಉಳಿಯಬಾರದೆಂಬ ಉದ್ದೇಶದಿಂದ ಕಡ್ಡಾಯ ಶಿಕ್ಷಣ ಕಾಯಿದೆ ಸಹ ಜಾರಿಗೆ ಬಂದಿದೆ. 6 ರಿಂದ 14 ವರ್ಷದ ವಯೋಮಾನದ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಲೇಬೇಕಿದೆ. ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿಯೇ ಕಾನೂನು ಸೇವಾ ಪ್ರಾಧಿಕಾರವು ಕಾರ್ಯಕ್ರಮ ನಡೆಸುತ್ತಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಜಿಲ್ಲೆಯು ಪ್ರಾಕೃತಿಕವಾಗಿ ಸಂಪದ್ಭರಿತವಾಗಿದೆ. ಇದರ ಜತೆ ಜಿಲ್ಲೆಯ ಸಾಮಾಜಿಕ ಆರ್ಥಿಕ ಬದಲಾವಣೆಯು ಅಗತ್ಯವಾಗಿದೆ. ಬಾಲ್ಯವಿವಾಹದಂತ ಪದ್ಧತಿಗಳು ಹೋಗಬೇಕಿದೆ. ಬಾಲ್ಯವಿವಾಹಕ್ಕೆ ಒಳಗಾಗಲಿರುವ ಹುಡುಗಿಯರು ಪ್ರತಿರೋಧ ಒಡ್ಡಬೇಕು. ಬಾಲ್ಯವಿವಾಹದಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ತಿಳಿವಳಿಕೆ ಹೊಂದಬೇಕು ಎಂದರು.
ಬಾಲ್ಯವಿವಾಹ ಪಿಡುಗು ಹೋಗಲಾಡಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಲ್ಲರ ಸಹಕಾರ ಪಡೆದು ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಿದೆ. ಈ ಕಾರ್ಯಕ್ರಮ ಪರಿಣಾಮಕಾರಿ ಅನುಷ್ಠಾನದಿಂದ ವ್ಯಾಪಕವಾಗಿ ಜಾಗೃತಿ ಮೂಡಿಸಲಾಗುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಬಗ್ಗೆ ಹೆಚ್ಚು ಮನಮುಟ್ಟುವಂತೆ ಕಾರ್ಯಕ್ರಮ ಆಯೋಜನೆಯನ್ನು ಮಾಡಲಾಗುತ್ತದೆ ಎಂದರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಲ್. ಜೆ. ಭವಾನಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ದೀಪಾ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಬಂಡಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ, ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ತಿರುಮಲೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶೀಲ, ಸಾಧನ ಸಂಸ್ಥೆ ಅಧ್ಯಕ್ಷರಾದ ಟಿ.ಜೆ. ಸುರೇಶ್, ಕಾರ್ಮಿಕ ಇಲಾಖೆ ಯೋಜನಾಧಿಕಾರಿ ಮಹೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿವಿಧ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 01 - ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ವಿವಿಧ ಸಾಲ ಯೋಜನೆಗಳ ಸೌಲಭ್ಯವನ್ನು ನೀಡಲಿದ್ದು ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಂದ ಅರ್ಜಿ ಆಹ್ವಾನಿಸಿದೆ.ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿ ಸರಕು ಸಾಗಾಣಿಕೆ ವಾಹನ ಕೊಳ್ಳಲು ಸಜಾಯಧನ, ಗಂಗಾಕಲ್ಯಾಣ, ವೈಯಕ್ತಿಕ ನೀರಾವರಿ ಯೋಜನೆ, ವೃತ್ತಿ ತರಬೇತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಬೈರಾಗಿ, (ಬಾವ), ಬಾಲ ಸಂತೋಷಿ-ಜೋಷಿ, ಬಾಜಿಗರ್, ಭರಡಿ, ಬುಡಬುಡಿಕಿ ಜೋಶಿ ಗೋಂಧಳಿ, ಚಾರ, ಚಿತ್ರಕಥಿ ಜೋಷಿ, ಧೋಲಿ, ಢವೇರಿ, ದೊಂಬರಿ, ಘಿಸಾಡಿ, ಗರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲ್ಕರಿ, ಕೋಲ್ಹಟಿ, ನಂದಿವಾಲ ಜೋಷಿ ಗೋಂದಳಿ, ಪುಲ್‍ಮಾಲ್ಲಿ, ನಾಥಪಂಥಿ ಡೌರಿ ಗೋಸಾವಿ, ನಿರ್ಶಿಕಾರಿ, ಪಾಂಗ್ಯುಯಲ್, ಜೋಷಿ (ಸಾದ ಜೋಷಿ), ಸಾನ್ಸಿಯ, ಸರಾನಿಯ, ತಿರುಮಲಿ, ವಾಯ್ಡು, ವಾಸುದೇವ್, ವಾಡಿ, ವಾಗ್ರಿ, ವಿರ್, ಬಜನಿಯ, ಶಿಕ್ಕಲಿಗರ್, ಗೊಲ್ಲ, ಕಿಲ್ಲಿಕ್ಯಾತಸ್, ಸರೋಡಿ, ದುರ್ಗ ಮುರ್ಗ (ಬುರ್‍ಬುರ್‍ಚ), ಹಾವಗಾರ್ (ಹಾವಾಡಿಗಾರ್), ಪಿಚಗುಂಟಲ, ಮಸಣಿಯ ಯೋಗಿ, (ಬೆಸ್ತರ್)ಬುಂಡಬೆಸ್ತ, ಕಟಬು, ದರ್ವೆಶ್, ಕಾಶಿ ಕಪಾಡಿ, ದೊಂಬಿದಾಸ ಮತ್ತು ಬೈಲ್‍ಪತರ್ ಅರ್ಹರು.
ಯೋಜನೆ ಪೈಕಿ ಶೇ. 50ರಷ್ಟು ಗೊಲ್ಲ ಸಮುದಾಯಕ್ಕೆ ಹಾಗೂ ಶೇ. 50ರಷ್ಟು ಇತರೆ ಅಲೆಮಾರಿ, ಅರೆಅಲೆಮಾರಿ ಜನಾಂಗಕ್ಕೆ ಸೌಲಭ್ಯ ಒದಗಿಸಲಾಗುವುದು. ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲ್ಲಿ ಜುಲೈ 8ರ ಒಳಗೆ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಜುಲೈ 15 ಕಡೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮದ ವೆಬ್‍ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಜbಛಿಜe ನೋಡುವಂತೆ ಪ್ರಕಟಣೆ ತಿಳಿಸಿದÉ.
ಜು. 5 ಮತ್ತು 6ರಂದು ಅಡುಗೆ ಸಹಾಯಕರು ಹಾಗೂ ರಾತ್ರಿಕಾವಲುಗಾರರ ಹುದ್ದೆಗಳಿಗೆ ದೈಹಿಕ ಸಾಮಥ್ರ್ಯ ಹಾಗೂ ಪ್ರಾಯೋಗಿಕ ಪರೀಕ್ಷೆಯ ದಿನಾಂಕ ನಿಗದಿ
ಚಾಮರಾಜನಗರ, ಜು. 01 -ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಗ್ರೂಪ್ ಡಿ ವೃಂದದ ಅಡುಗೆ ಸಹಾಯಕರು ಹಾಗೂ ರಾತ್ರಿಕಾವಲುಗಾರರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಲುವಾಗಿ ದಾಖಲಾತಿ ಪರಿಶೀಲನೆಗೆ ಹಾಜರಾಗಿರುವ ಅಭ್ಯರ್ಥಿಗಳಲ್ಲಿ 1:3ರ ಅನುಪಾತದಲ್ಲಿ ದೈಹಿಕ ಸಾಮಥ್ರ್ಯ ಹಾಗೂ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ದಿನಾಂಕ ನಿಗಧಿಗೊಳಿಸಲಾಗಿದೆ.ಅಡುಗೆ ಸಹಾಯಕರ ಪ್ರಾಯೋಗಿಕ ಪರೀಕ್ಷೆಯನ್ನು ನಗರದ ಎಲ್.ಐ.ಸಿ ಕಚೇರಿ ಹತ್ತಿರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜುಲೈ 5ರಂದು ಬೆಳಿಗ್ಗೆ 9 ಗಂಟೆಗೆ ನಡೆಸಲಾಗುವುದು. ರಾತ್ರಿ ಕಾವಲುಗಾರರ ದೈಹಿಕ ಸಾಮಥ್ರ್ಯ ಪರೀಕ್ಷೆಯನ್ನು ನಗರದ ಖಾಸಗಿ ಬಸ್ ನಿಲ್ದಾಣದ ಹತ್ತಿರವಿರುವ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜುಲೈ 6ರಂದು ಬೆಳಿಗ್ಗೆ 9 ಗಂಟೆಗೆ ನಡೆಸಲಾಗುವುದು.
ದೈಹಿಕ ಸಾಮಥ್ರ್ಯ ಮತ್ತು ಪ್ರಾಯೋಗಿಕ ಪರೀಕ್ಷೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಕರೆ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಕರೆ ಪತ್ರ ತಲುಪದಿದ್ದಲ್ಲಿ ಕಚೇರಿಯಿಂದ ಪಡೆದುಕೊಳ್ಳಬೇಕು. ಅದಾಗ್ಯೂ ಕರೆ ಪತ್ರ ಸಿಗದೆ ಇದ್ದರೂ ದೈಹಿಕ ಸಾಮಥ್ರ್ಯ ಹಾಗೂ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ ತಿತಿತಿ.ಛಿhಚಿmಚಿಡಿಚಿರಿಟಿಚಿgಚಿಡಿ.ಟಿiಛಿ.iಟಿ ವಿಳಾಸವನ್ನು ಪರಿಶೀಲಿಸಿಕೊಂಡು ನಿಗಧಿತ ದಿನಾಂಕದಂದು ನಿಗಧಿತ ಸ್ಥಳದಲ್ಲಿ ಸಂಬಂಧಪಟ್ಟ ಪರೀಕ್ಷೆಗಳಿಗೆ ಹಾಜರಾಗುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 04 ರಂದು ಉದ್ಯೋಗ ಮೇಳ : ನೇರ ಸಂದರ್ಶನ
ಚಾಮರಾಜನಗರ, ಜು. 01 -ನಗರದ ಜಿಲ್ಲಾ ಉದ್ಯೋಗ ವಿನಮಿಮಯ ಕಚೇರಿಯಲ್ಲಿ ಜುಲೈ 4ರಂದು ಬೆಳಿಗ್ಗೆ 10 ಗಂಟೆಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿ ಹಾಗೂ ಯಾವುದೇ ಟ್ರೇಡ್‍ನಲ್ಲಿ ಡಿಪ್ಲೋಮಾ ಹಾಗೂ ಐ.ಟಿ.ಐ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗಾಗಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ.18ರಿಂದ 32 ವರ್ಷ ವಯೋಮಿತಿಯುಳ್ಳವರು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನದಲ್ಲಿ ಆಯ್ಕೆಯಾದವರಿಗೆ ಸಿಂಪ್ಲಿ ಗ್ರಾಮೀಣ್ ಬಿಸಿನೆಸ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ತರಬೇತಿ ಹಾಗೂ ಉದ್ಯೋಗ ನೀಡಲಾಗುವುದು. ಅರ್ಹರಾದವರು ಕಂಪನಿಯಿಂದ ನೀಡಲಾಗುವ 4 ತಿಂಗಳ ತರಬೇತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ತರಬೇತಿಗಾಗಿ 5000 ರೂ. ಸಂಭಾವನೆ ನೀಡಲಾಗುತ್ತದೆ.
ಸಂದರ್ಶನದಲ್ಲಿ ಆಯ್ಕೆಯಾದವರು ಮಂಡ್ಯ, ಮದ್ದೂರಿನಲ್ಲಿ ಕೆಲಸ ನಿರ್ವಹಿಸಲು ಸಿದ್ದರಿರಬೇಕು. ಉಚಿತ ವಸತಿ ವ್ಯವಸ್ಥೆಯಿದೆ. ಅಲ್ಲದೆ, 9954 ರೂ. ಗಳ ಮಾಸಿಕ ವೇತನ ನೀಡಲಾಗುವುದು. ಸಂದರ್ಶನಕ್ಕೆ ಹಾಜರಾಗುವವರು ಸ್ವ ವಿವರದೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಉದ್ಯೋಗ ಮೇಳದಲ್ಲಿ ಬಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 08226-224430 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಚಾಮರಾಜನಗರ, ಜು. 01 - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 15ರವರೆಗೆ ವಿಸ್ತರಿಸಿದೆ.2017-18ನೇ ಸಾಲಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ, ಪಿಹೆಚ್‍ಡಿ, ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ.ಗೆ ಸೇರಿದ ವಿದ್ಯಾರ್ಥಿಗಳು ವ್ಯಾಸಂಗ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ವಿವರಗಳಿಗೆ ಇಲಾಖಾ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ನೋಡಬಹುದು. ಅಲ್ಲದೆ ದೂರವಾಣಿ ಸಂಖ್ಯೆ 080-65970004 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
No comments:
Post a Comment