ಜು. 5 ರಿಂದ ಭ್ರಷ್ಟಾಚಾರ ನಿಗ್ರಹ ಧಳ ಅಧಿಕಾರಿಗಳ ಭೇಟಿ
ಚಾಮರಾಜನಗರ, ಜು. 03 :- ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳ ಅಧಿಕೃತ ವಿಳಂಬ, ಲಂಚದ ಹಣಕ್ಕೆ ಒತ್ತಾಯಿಸುವುದು ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ಭ್ರಷ್ಟಾಚಾರ ನಿಗ್ರಹ ಧಳದ ಅಧಿಕಾರಿಗಳು ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಭೇಟಿ ನೀಡಲಿದ್ದಾರೆ.ಜುಲೈ 5ರಂದು ಗುಂಡ್ಲುಪೇಟೆಯ ಸರ್ಕಾರಿ ಅತಿಥಿಗೃಹದಲ್ಲಿ, ಜುಲೈ 11 ರಂದು ಚಾಮರಾಜನಗರದ ಎ.ಸಿ.ಬಿ ಪೊಲೀಸ್ ಠಾಣೆಯಲ್ಲಿ, ಜುಲೈ 19ರಂದು ಯಳಂದೂರು ಸರ್ಕಾರಿ ಅತಿಥಿ ಗೃಹದಲ್ಲಿ, ಜುಲೈ 24ರಂದು ಕೊಳ್ಳೇಗಾಲ ಸರ್ಕಾರಿ ಅತಿಥಿಗೃಹದಲ್ಲಿ ಮತ್ತು ಜುಲೈ 31ರಂದು ಹನೂರಿನ ಸರ್ಕಾರಿ ಅತಿಥಿಗೃಹದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವರು. ನಾಗರಿಕರು ಇದರ ಸದುಪಯೋಗ ಪಡೆಯುವಂತೆ ಭ್ರಷ್ಟಾಚಾರ ನಿಗ್ರಹ ಧಳದ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.
ಚಾಮರಾಜನಗರ ನಗರಸಭೆ : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಚಾಮರಾಜನಗರ, ಜು. 03 ನಗರಸಭಾ ವ್ಯಾಪ್ತಿಯಲ್ಲಿ ಸಿ.ಎಂ.ಎಸ್.ಎಂ.ಟಿ.ಡಿ.ಪಿ. ಯೋಜನೆಯಡಿ ಮಂಜೂರಾಗಿರುವ ನಂಜನಗೂಡು-ಬಿ.ಆರ್.ಹಿಲ್ಸ್ ರಸ್ತೆಯಿಂದ (ರಾಜ್ಯ ಹೆದ್ದಾರಿ 80ರಿಂದ 81) ಯಳಂದೂರು-ಗುಂಡ್ಲುಪೇಟೆ ರಸ್ತೆ ವರ್ತುಲ ರಸ್ತೆ ನಿರ್ಮಿಸಲು ವರ್ತುಲ ರಸ್ತೆಗಾಗಿ ಗುರುತಿಸಿರುವ ಜಮೀನನ್ನು ಜಮೀನಿನ ಮಾಲೀಕರಿಂದ ಖರೀದಿಸಿ ಪರಿಹಾರ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಈ ಸಂಬಂಧ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ವರ್ತುಲ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2016ರ ಮೇ 31ರ ಸರ್ಕಾರಿ ಅದೇಶವನ್ನು ಪರಿಶೀಲಿಸಿದ್ದು, ಅದರನ್ವಯ ಪ್ರತಿ ಎಕರೆಗೆ 22.50 ಲಕ್ಷ ರೂ. ಪರಿಹಾರವನ್ನು ನೀಡಬಹುದೆಂದು ಜಿಲ್ಲಾಧಿಕಾರಿಗಳ ದರ ನಿರ್ಧರಣಾ ಸಲಹಾ ಸಮಿತಿ ನಿರ್ಧರಿಸಿರುವ ದರದಂತೆ ಖರೀದಿ ಮಾಡಲು ಮತ್ತು ನಿರ್ಧರಿಸುವ ದರದ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಅಂತಹ ಆಕ್ಷೇಪಣೆಗಳನ್ನು ಲಿಖಿತವಾಗಿ 30 ದಿನಗಳ ಒಳಗಾಗಿ ನಗರಸಭೆಗೆ ಸಲ್ಲಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.
No comments:
Post a Comment