ಡಾ. ಬಿ.ಆರ್. ಅಂಬೇಡ್ಕರ್ – 126 ವರ್ಷಾಚರಣೆ ಕಾರ್ಯಕ್ರಮ ಸಿದ್ದತೆಗೆ ಡಿ.ಸಿ. ಸೂಚನೆ
ಚಾಮರಾಜನಗರ, ಜು. 17 :- ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ವರ್ಷಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜನೆ ಮಾಡಿರುವ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೂ ಜುಲೈ 20 ರಂದು ಡಾ|| ಬಿ.ಆರ್. ಅಂಬೇಡ್ಕರ್ - 126 ತಮಗಿದೋ ನಮ್ಮ ಗೌರವ ನಮನ ಎಂಬ ಸಾಂಸ್ಕøತಿಕ ಹಾಗೂ ಉಪನ್ಯಾಸ ಕಾರ್ಯಕ್ರಮಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ. ಹರೀಶ್‍ಕುಮಾರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಅಂಬೇಡ್ಕರ್ 126ನೇ ವರ್ಷಾಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ರವರ 126 ವರ್ಷಾಚರಣೆ ಅಂಗವಾಗಿ ಜುಲೈ 21 ರಿಂದ 23 ವರೆಗೆ ಬೆಂಗಳೂರುನಲ್ಲಿ ಜಿ.ಕೆ.ವಿ.ಕೆ. ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ ಏರ್ಪಾಡಾಗಿದೆ. ಇದರ ಪೂರ್ವಭಾವಿಯಾಗಿ ಜುಲೈ 20 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಅಂಬೇಡ್ಕರ ಅವರ ಬಗ್ಗೆ ಹೋರಾಟದ ಹಾಡುಗಳು ವಿಚಾರಧಾರೆಗಳ ಉಪನ್ಯಾಸವನ್ನು ಅರ್ಥಪೂರ್ಣವಾಗಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು. ಅಂಬೇಡ್ಕರ್ ರವರ ಕುರಿತು ಪ್ರಗತಿಪ್ರರ ಹೋರಾಟದ ಹಾಡುಗಳು ಹಾಗೂ ಸ್ಥಳೀಯ ಜನಪದ ಕಲೆ ಪ್ರದರ್ಶನ ಏರ್ಪಡಿಸುವ ಜೊತೆಗೆ ಅಂಬೇಡ್ಕರ್ ವಿಚಾರಧಾರೆಗಳ ಕುರಿತು ಹೆಚ್ಚು ಬಲ್ಲವರಿಂದ ಉಪನ್ಯಾಸ ಆಯೋಜಿಸಬೇಕಿದ್ದು, ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಲ್ಲದೆ ನಗರದ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದ ಬಳಿ ಇರುವ ಡಾ|| ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಬಳಿ ವಿಶೇಷವಾಗಿ 50 ಕಲಾವಿದರಿಂದ ಚವರ್iವಾದ್ಯ ಮೇಳಗಳ ವಾದ್ಯ ನಿನಾದ ಮೊಳಗಿಸುವ ಕಾರ್ಯಕ್ರಮವನ್ನು ಸಂಜೆ 6 ಗಂಟೆಗೆ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು. ಪ್ರಾಥಮಿಕ ಸುತ್ತಿನ ಸಭೆಯಲ್ಲಿ ನಿರ್ಧರಿಸಿರುವಂತೆ ಬೀಸು ಕಂಸಾಳೆ, ಗೋರುಕನ ನೃತ್ಯವನ್ನು ಏರ್ಪಡಿಸಬೇಕು. ಸ್ಥಳೀಯ ಕಲಾವಿಧರಿಂದ ಕಾರ್ಯಕ್ರಮ ಪ್ರಸ್ತುತಪಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಅಧಿಕಾರಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದವರನ್ನು ತೊಡಗಿಸಿಕೊಂಡು ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜನೆ ಮಾಡಬೇಕು. ಯಾವುದೇ ಲೋಪಕ್ಕೆ ಅವಕಾಶವಾಗದಂತೆ ಸಂಪೂರ್ಣವಾಗಿ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ ರೂಪುರೇಷಗಳನ್ನು ಸಿದ್ದಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶರಾದ ಕೆ.ಎಚ್.ಸತೀಶ್ ರವರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 126ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಸಾಂಸ್ಕøತಿಕ ಹಾಗೂ ಉಪನ್ಯಾಸ ಕಾರ್ಯಕ್ರಮಕ್ಕೆ ಎಲ್ಲರೂ ಮುಕ್ತವಾಗಿ ಕೈಜೋಡಿಸುವಂತೆ ಮನವಿ ಮಾಡಿದರು. ಸಾಂಸ್ಕøತಿಕ ಕಾರ್ಯಕ್ರಮ, ಉಪನ್ಯಾಸ, ಚರ್ಮವಾದ್ಯ, ಜನಪದ ಕಲೆ ಪ್ರಕಾರ ಆಯ್ಕೆ, ಹೋರಾಟದ ಹಾಡುಗಳು ಇನ್ನಿತರೆ ವ್ಯವಸ್ಥೆಗಳನ್ನು ಏರ್ಪಡಿಸುವ ಸಂಬಂಧ ಸಭೆಯಲ್ಲಿದ್ದ ಮುಖಂಡರು ಸಲಹೆ ನೀಡಿದರು. ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನಡೆಯಲು ಅಗತ್ಯ ಸಹಕಾರ ನೀಡುವುದಾಗಿ ಮುಖಂಡರು ಸಭೆಯಲ್ಲಿ ತಿಳಿಸಿದರು.
ನಗರದಲ್ಲಿ ಗಮನಸೆಳೆದ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅರ್ಥಪೂರ್ಣ ರೂಪಕ
ಚಾಮರಾಜನಗರ, ಜು. 17 - ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 126ನೇ ವರ್ಷಾಚರಣೆ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಮಾವೇಶ ಹಮ್ಮಿಕೊಂಡಿರುವ ಪೂರ್ವಭಾವಿಯಾಗಿ ಮೈಸೂರಿನ ನೆಲೆ ಹಿನ್ನಲೆ ಸಂಸ್ಥೆ ವತಿಯಿಂದ ನಗರದಲ್ಲಿ ಇಂದು ನಡೆದ ಡಾ. ಬಿ.ಆರ್. ಅಂಬೇಡ್ಕರ್ ರವರ ಕುರಿತು ಹಾಡು ಅಭಿನಯದ ನೃತ್ಯ ರೂಪಕವು ವಿಶೇಷ ಗಮನ ಸೆಳೆಯಿತು.
ನಗರದ ಚಾಮರಾಜೇಶ್ವರ ದೇವಾಲಯದ ಬಳಿ ಅಂಬೇಡ್ಕರ್ ಅವರ ಕುರಿತು ಸಮಾನತೆ - ಅನ್ವೇಷಣೆ ಎಂಬ ಘೋಷ ವಾಕ್ಯದೊಂದಿಗೆ ನೆಲೆ ಹಿನ್ನಲೆ ಸಂಸ್ಥೆ ಕಲಾವಿದರು ಕತ್ತಲ ರಾಜ್ಯದ ಹೊಸ ಬೆಳಕು ಎಂಬ ಅರ್ಥಪೂರ್ಣ ರೂಪಕ ಹಾಗೂ ಬೀದಿ ನಾಟಕವನ್ನು ಪ್ರದರ್ಶಿಸಿದರು . ಅಂಬೇಡ್ಕರ್ ಅವರ ಬಾಲ್ಯ, ಹೋರಾಟ, ಸಂವಿಧಾನ ರಚನೆ ವಿಶೇಷವಾಗಿ ಸಮಾನತೆಗಾಗಿ ನಡೆಸಿದ ಅವಿರತ ಶ್ರಮದ ಹಾದಿಯನ್ನು ಹಾಡು, ಅಭಿನಯದ ಮೂಲಕ ಕಲಾವಿದರು ಪ್ರಸ್ತುತಪಡಿಸಿದರು. ಮಹಿಳೆಯರ ಸಮಾನತೆಗೆ ಅಂಬೇಡ್ಕರ್ ಅವರು ನೀಡಿದ ಆದ್ಯತೆ, ಶೋಷಿತ ವರ್ಗಗಳ ಏಳಿಗೆಗಾಗಿ ರೂಪಿಸಿದ ಕಾರ್ಯಕ್ರಮ, ಎಲ್ಲಾ ವರ್ಗದವರ ಬಗೆಗಿನ ಕಾಳಜಿ ಇನ್ನಿತರ ಹಲವಾರು ವಿಚಾರ ಧಾರೆಗಳನ್ನು ಒಳಗೊಂಡ ಕಾರ್ಯಕ್ರಮವನ್ನು ಕಲಾವಿದರು ಜನರ ಮುಂದೆ ಅಭಿನಯದ ಮೂಲಕ ತೆರೆದಿಟ್ಟರು. ರಾಜಪ್ಪ ದಳವಾಯಿ ರಚಿಸಿರುವ ಹಾಗೂ ಹಿರಿಯ ರಂಗಕರ್ಮಿ ಹೆಚ್. ಜನಾರ್ಧನ್ (ಜನ್ನಿ) ಅವರ ನಿರ್ದೇಶನದಲ್ಲಿ ರೂಪುಗೊಂಡಿರುವ ರೂಪಕವನ್ನು ಕಲಾವಿದರು ಅಚ್ಚುಕಟ್ಟಾಗಿ ಪ್ರಸ್ತುತಪಡಿಸುವ ಮೂಲಕ ಗಮನ ಸೆಳೆದರು. ಕಲಾವಿದರಾದ ಗುರುಸಿದ್ದ ಬೆಸಗರಹಳ್ಳಿ, ಅನುಸೂಯ, ಕುಮಾರ್ ಕೆ.ಆರ್.ಪೇಟೆ, ಮಂಟೇಲಿಂಗಯ್ಯ, ಹೆಚ್.ಡಿ.ಕೋಟೆ ಚಂದ್ರು, ಶ್ರೀಧರ ಪ್ರತಾಪ್, ಚಂದ್ರಣ್ಣ, ನೀಲಮ್ಮ, ನೆಲೆ ಹಿನ್ನಲೆ ಶ್ರೀಧರ್ ತಂಡದಲ್ಲಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಹೆಚ್. ಸತೀಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರು ಹಾಗೂ ಸಾಹಿತಿ ಸೋಮಶೇಖರ್ ಬಿಸಲ್ವಾಡಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಜಯಕಾಂತ ಇತರರು ಹಾಜರಿದ್ದರು. ಕರ್ನಾಟಕ ರಕ್ಷಣಾ ಸೇನೆಯಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ
ಚಾಮರಾಜನಗರ ಜುಲೈ-17- ಚಾಮರಾಜನಗರ ಜಿಲ್ಲೆಯ ಅಭಿವೃದ್ದಿಯಲ್ಲಿ ಹಾಗೂ ನಗರಸಭೆಯ ವೈಪಲ್ಯವನ್ನು ಖಂಡಿಸಿ ಕರ್ನಾಟಕ ರಕ್ಷಣಾ ಸೇನೆ ಯಿಂದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.
ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಪ್ರತಿಭಟನ ಕಾರರು ಮೆರವಣಿಗೆ ನಡೆಸಿ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಣಿ ನಿರ್ಮಿಸಿ ಜಿಲ್ಲಾಡಳಿತ ಕಛೇರಿಗೆ ಸಿಬದ್ದಿಗಳು ತೆರಳದಂತೆ ಬಾಗಿಲು ಹಾಕಿ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತವು ಜಿಲ್ಲೆಯ ಅಭಿವೃದ್ದಿ ವಿಷಯದಲ್ಲಿ ಯಿಂದೆಟು ಹಾಕುತ್ತಿದೆ ರಾಜಕೀಯ ಪ್ರತಿನಿಧಿಗಳು ಯುಜಿಡಿ,ರಸ್ತೆ, ಜಿಲ್ಲಾಸ್ಪತ್ರೆಯ ವಿಚಾರದಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವದಲ್ಲಿ ಹಿಂದೆಟ್ಟು ಹೊಡೆಯುತ್ತಿದ್ದಾರೆ ಎಂದು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಪ್ರತತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷ ಮಿಂಚು ನಾಗೇಂದ್ರ ಮಾತನಾಡಿ ನಗರದ ಅಭಿವೃದ್ದಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಪ್ರಯೋಜಕರಾಗಿದ್ದಾರೆ ಜನರಿಗೆ ಸಂಕ್ರಮಿಕ ರೋಗಗಳು ಬರಲು ಜಿಲ್ಲಾಡಳಿತವೆ ಕಾರಣ ನಗರಸಭೆಯ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಸಭೆ ಕರೆದು ಎಚ್ಚರಿಯನ್ನು ನೀಡುವದರಲ್ಲಿ ವಿಪಲರಾಗಿದ್ದಾರೆ ನಗರದ ರಸ್ತೆ ಮತ್ತು ಯು.ಜಿ.ಡಿ ಕಾಮಗಾರಿಯನ್ನು ಶಿಘ್ರವಾಗಿ ಪೂರ್ಣಗೊಳಿಸಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ತತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ಸೇನೆಯ ಉಪಾಧ್ಯಕ್ಷ ಪಿ.ಮಹೇಶ್, ಸಿ.ಎನ್.ರುದ್ರ, ನಗರ ಘಟಕದ ಅಧ್ಯಕ್ಷ ಶಿವಕುಮಾರ್, ತಾ.ಉ.ಆದ್ಯಕ್ಷ ಸಿ.ಡಿ.ಪ್ರಕಾಶ್, ನಗರ ಘಟಕದ ಉಪಾಧ್ಯಕ್ಷ ಮದುಸೂದನ್, ಪ್ರಭುಸ್ವಾಮಿ, ಮಂಜುನಾಥ್, ರವಿ, ಭಾಗ್ಯ ಶಶಿಕಲಾಚಂದ್ರಶೇಖರ್, ಸುಂದರಮ್ಮ, ಇನ್ನಿ ಮುಂತಾದವರು ಭಾಗವಹಿಸಿದ್ದರು.
No comments:
Post a Comment