ಆರೋಪಿಗೆ ಗಲ್ಲು, ಪ್ರಶಂಸನೀಯ ವ್ಯಕ್ತಪಡಿಸಿದ ವರೀಷ್ಟಾಧಿಕಾರಿಗಳು
ಪುಲ್ ಡಿಟೆಲ್ಸ್......ಎಸ್.ವೀರಭದ್ರಸ್ವಾಮಿ
ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಉಪ-ವಿಭಾಗ, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಹರಳೆ ಗ್ರಾಮದ ಶೇಖರ್ ರವರ ಸವರ್ೆನಂ: 36, 37, 38 ರ ಜಮೀನಿನ ತೋಟದ ಬಳಿ ಖಾಲಿ ಆವರಣದಲ್ಲಿ ದಿನಾಂಕ: 12-05-2015 ಕ್ಕೆ ಹಿಂದೆ ಸುಮಾರು 20 ದಿನಗಳಿಂದ ತಮಿಳುನಾಡಿನ ಹಂದಿಯೂರು ಮತ್ತು ಗುಡ್ಡೆಹೊಸೂರು ಗ್ರಾಮದಿಂದ ಸುಮಾರು 20 ಜನ ಕೂಲಿ ಕಾಮರ್ಿಕರು ಕಬ್ಬು ಕಟಾವು ಕೂಲಿ ಕೆಲಸಕ್ಕೆ ಬಂದು ಟೆಂಟ್ ಹಾಕಿಕೊಂಡು ವಾಸವಾಗಿದ್ದು ಅಕ್ಕಪಕ್ಕದ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದರು.
ಚಿತ್ತ್ರ ಸಂಗ್ರಹ :ಚಾ.ಜಿ.ಪೋ. ಚಾಮರಾಜನಗರ
ರಾತ್ರಿ ವೇಳೆಯಲ್ಲಿ ಕೆಲವರು ಟೆಂಟ್ನಲ್ಲಿ ಇನ್ನು ಕೆಲವರು ಪಿರ್ಯಾದಿ ಶೇಖರ್ ರವರ ತೋಟದ ಮನೆಯ ಮುಂದೆ ಪಡಸಾಲೆಯಲ್ಲಿ ಹಾಗೂ ಮಟ್ಟಾಳೆ ಗುಡಿಸಲಿನಲ್ಲಿ ಮಲಗುತ್ತಿದ್ದರು. ಈ ಪೈಕಿ ಕೂಲಿ ಕಾಮುಕರ ಜೊತೆಯಲ್ಲಿ ಮೇಸ್ತ್ರಿ ರಾಜೇಂದ್ರ ಎಂಬುವನು ಇದ್ದು ಈತನು ಇವರಿಗೆ ಮುಖ್ಯಸ್ಥನಾಗಿರುತ್ತಾನೆ.
ದಿನಾಂಕ: 12-05-2015 ರಂದು ಪಿರ್ಯಾದಿ ಶೇಖರ್ ಹಾಲು ಕರೆಯಲು ಬೆಳಗಿನ ಜಾವ ಜಮೀನಿನ ಬಳಿ ಹೋಗಿ ನೋಡಿದಾಗ ಟೆಂಟ್ನಲ್ಲಿ ವಾಸವಾಗಿದ್ದವರ ಪೈಕಿ ಕಾಶಿ, ಶಿವಮ್ಮ, ರೋಜಾ, ರಾಜೇಂದ್ರ, ರಾಜಮ್ಮ ರವರುಗಳು ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ಬರುತ್ತದೆ.
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪಿಎಸ್ಐ ಗೋವಿಂದರಾಜು ರವರು ದೂರು ಸ್ವೀಕರಿಸಿ ಮೊ.ನಂ:71/2015 ಕಲಂ-302 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತಾರೆ.
ಇದು ಘೋರ ಪ್ರಕರಣವಾದರಿಂದ ಕೇಸಿನ ತನಿಖೆಯನ್ನು ವೈ.ಅಮರನಾರಾಯಣ ಸಿಪಿಐ, ಕೊಳ್ಳೇಗಾಲ ವೃತ್ತ ರವರು ಮುಂದುವರೆಸಿರುತ್ತಾರೆ. ಈ ಕೇಸಿನ ಆರೋಪಿ ಪತ್ತೆಗಾಗಿ ಮಾನ್ಯ ಪೊಲೀಸ್ ಅಧೀಕ್ಷಕರು, ಚಾ.ನಗರ ಗ್ರಾಮಾಂತರ ವೃತ್ತ ನಿರೀಕ್ಷಕ ರಾದ ಹೆಚ್.ಎಂ.ಮಹದೇವಪ್ಪ, ಪಿಐ ಡಿಸಿಐಬಿ ಷಣ್ಮುಗವಮರ್ಾ , ಪಿಎಸ್ಐ ಡಿಸಿಐಬಿ ಕುಮಾರ ಆರಾಧ್ಯ ಹಾಗೂ ಸಿಬ್ಬಂದಿಗಳ ತಂಡವನ್ನು ರಚಿಸಿದ್ದು ಸದರಿಯವರು ಆರೋಪಿ ಮುರುಗೇಶ್ @ ಮುರುಗ ಬಿನ್ ಲೇಟ್ ಆಂಡಿಯಪ್ಪನ್, 47 ವರ್ಷ, ಮಲೆಯಾಳ್ಮಕ್ಕಳ್ ಜಾತಿ, ಕೂಲಿ ಕೆಲಸ, ಪೆರಿಯರ್ನಗರ, ಕನ್ನಂಬೂಸಿ ಪೋಸ್ಟ್, ಕೊಳತ್ತೂರು ಪೊಲೀಸ್ ಠಾಣಾ ವ್ಯಾಪ್ತಿ, ಮೆಟ್ಟೂರು ತಾಲ್ಲೂಕು, ಸೇಲಂ ಜಿಲ್ಲೆ ಅನ್ನು ದಿನಾಂಕ: 13-05-2015 ರಂದು ವಶಕ್ಕೆ ಪಡೆದು ತನಿಖಾಧಿಕಾರಿಗಳ ಮುಂದೆ ಹಾಜರ್ಪಡಿಸಿದ್ದು, ವಿಚಾರಣೆಯಲ್ಲಿ ಆರೋಪಿ ಮುರುಗೇಶ್, ತಾನು ರಂಗಸ್ವಾಮಿ ಬಿನ್ ವೇಲ್ಲಯ್ಯನ್, ಸುಂಡಪೋಡು, ಬರಗೂರು 'ಎ' ಗ್ರಾಮ, ಹಂದಿಯೂರು ತಾಲ್ಲೂಕು, ಈರೋಡ್ ಜಿಲ್ಲೆ ಜೊತೆ ಸೇರಿ ಕೃತ್ಯವೆಸಗಿರುವುದು ನಿಜವೆಂದು ಒಪ್ಪಿಕೊಂಡ ಮೇರೆಗೆ ಈತನನ್ನು ಘನ ನ್ಯಾಯಾಲಯ ಹಾಜರ್ಪಡಿಸಿರುತ್ತೆ.
ತನಿಖಾ ಕಾಲದಲ್ಲಿ ಆರೋಪಿ ಮುರುಗೇಶನು ಕೊಲೆ ಮಾಡಲು ಮುಖ್ಯ ಕಾರಣ ಶಿವಮ್ಮ ಮತ್ತು ರಾಜಮ್ಮ ರವರು ತನ್ನ ಜೊತೆ ಅಕ್ರಮ ಸಂಬಂಧಕ್ಕೆ ಸ್ಪಂದಿಸಿಲ್ಲ, ಕಾಶಿಗೆ ಮತ್ತು ರಾಜೇಂದ್ರನ ಜೊತೆ ಸಂಬಂಧ ಹೊಂದಿರುತ್ತಾರೆ. ತನಗೆ ಅವರ ಮೇಲೆ ದ್ವೇಷ ಉಂಟಾಗಿ, ಅವರು ಮಲಗಿ ನಿದ್ರೆ ಮಾಡುವ ಸಮಯದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಕಬ್ಬು ಕಟಾವು ಮಾಡಲು ತಂದಿದ್ದ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ತಿಳಿದುಬಂದಿರುತ್ತದೆ. ಕೊಲೆ ಮಾಡಿದ ನಂತರ ಆರೋಪಿ ಮುರುಗೇಶನನ್ನು ಸ್ಥಳದಿಂದ ಪಾರು ಮಾಡಲು ರಂಗಸ್ವಾಮಿ ಎಂಬ ಆರೋಪಿ ಸಹಾಯ ಮಾಡಿರುವುದಾಗಿ ತಿಳಿದಿರುತ್ತದೆ. ಕೊಲೆಯಾದವರು ಪರಿಶಿಷ್ಟ ಜಾತಿಗೆ ಸೇರಿದವರಾದರಿಂದ ಕೇಸಿನ ಕಡತವನ್ನು ಮುಂದಿನ ತನಿಖೆಗಾಗಿ ಕೊಳ್ಳೇಗಾಲ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್. ಸುರೇಶ್ ಬಾಬು ರವರಿಗೆ ವಗರ್ಾಯಿಸಿದ್ದು ಸದರಿಯವರು ಕೇಸಿನ ತನಿಖೆಯನ್ನು ಮುಂದುವರೆಸಿ ಆರೋಪಿಯ ವಿರುದ್ದ ಕಲಂ: 302, 397 ರೆ/ವಿ 34 ಐಪಿಸಿ ಮತ್ತು 3 ಕ್ಲಾಸ್() (ಗಿ) ಖಅ/ಖಖಿ ಕಂ ಂಛಿಣ-1989 ರೀತ್ಯ ದಿನಾಂಕ: 30-07-2015 ರಂದು ದೋಷಾರೋಪಣೆ ಪತ್ರವನ್ನು ತಯಾರಿಸಿ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಘನ ನ್ಯಾಯಾಲಯವು ಸೆಷಲ್, ಸಿಸಿ ನಂ: 38/2015 ರಲ್ಲಿ ವಿಚಾರಣೆ ಕೈಗೊಂಡಿರುತ್ತದೆ.
ದಿನಾಂಕ: 22-07-2017 ರಂದು ಚಾಮರಾಜನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮಣ.ಎಫ್.ಮಳವಳ್ಳಿ ರವರು ಆರೋಪಿ ಮುರುಗೇಶನಿಗೆ ಮರಣ ದಂಡನೆ (ನೇಣು ಶಿಕ್ಷೆ) ಯನ್ನು ವಿಧಿಸಿ ತೀಪರ್ು ನೀಡಿರುತ್ತಾರೆ. ಸದರಿ ಕೇಸಿನಲ್ಲಿ ಸಕರ್ಾರದ ಪರವಾಗಿ ಸಕರ್ಾರಿ ಅಭಿಯೋಜಕರು ವಾದ ಮಂಡಿಸಿರುತ್ತಾರೆ.
ಈ ಪ್ರಕರಣದ ತನಿಖೆಗೆ ಸಹಕರಿಸಿದ ಪಿಎಸ್ಐ ರವರುಗಳಾದ ಶ್ರೀ ಗೋವಿಂದರಾಜು, ಶ್ರೀ ಮೋಹಿತ್ ಸಹದೇವ್, ಶ್ರೀ ಲಕ್ಷ್ಮೀನಾರಾಯಣ ಹಾಗೂ ಮಹೇಂದ್ರ, ಶ್ರೀಮತಿ ಶಶಿರೇಖಾ ಮತ್ತು ನ್ಯಾಯಾಲಯದ ಕರ್ತವ್ಯದ ಶ್ರೀ ರಮೇಶ್, ವಾರೆಂಟ್ ಕರ್ತವ್ಯದ ನಾಗರಾಜೇಅರಸ್, ಸಮನ್ಸ್ ಕರ್ತವ್ಯದ ಶ್ರೀ ಮುರುಗೇಶ್, ಆರೋಪಿ ಪತ್ತೆ ತಂಡದ ಸಿಬ್ಬಂದಿಗಳಾದ ಶ್ರೀ ವಾಗೀಶ್, ಶ್ರೀ ಅಬ್ರಹಾರ್ ಅಲಿಖಾನ್, ಶ್ರೀ ಮಂಜುನಾಥ್, ಶ್ರೀ ಮಹೇಶ್ ರವರುಗಳಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಲು ಕ್ರಮ ಕೈಗೊಳ್ಳಲಾಗಿದೆ.
No comments:
Post a Comment