ಕುಮಾರನಪುರದಲ್ಲಿ ಮಳೆಗಾಗಿ ಕತ್ತೆಗಳ ಮದುವೆ !
ಅರೆ ಇದೇನು ಪೂಜೆ ನೀಡುವ ಇದ್ಯಾವ ಮದುವೆ ಅಂದು ಕೊಂಡಿರಾ.. ಇದು ತಾಲ್ಲೂಕಿನ ಕೊಮಾರನಪುರ ಗ್ರಾಮದಲ್ಲಿ ಮಳೆಗಾಗಿ ಕತ್ತೆಗಳ ಮದುವೆಯನ್ನು ಮಾಡಿಸಿದ ಗ್ರಾಮಸ್ಥರು ಸಂಭ್ರಮಿಸಿದ ಪರಿ. ಬಿಳಿಗಿರಿರಂಗನಬೆಟ್ಟದ ತಪ್ಪಲಿನಲ್ಲಿರುವ ಈ ಗ್ರಾಮ ಈ ವರ್ಷ ಕಂಡು ಕೇಳರಿಯದ ಬರ ಎದುರಿಸುತ್ತಿದೆ. ಗ್ರಾಮದ ಕೊಳವೆ ಬಾವಿಗಳಲ್ಲಿ ಕ್ರಮೇಣ ನೀರು ಬತ್ತಿ ಹೋಗುತ್ತಿದೆ. ಸುತ್ತಮುತ್ತ ಮಳೆಯಾಗುತ್ತಿದ್ದರು ಗ್ರಾಮಕ್ಕೆ ಈ ವರ್ಷ ಒಂದೂ ಬಾರಿಯೂ ಮಳೆಯಾಗಿಲ್ಲ.
ಇದಕ್ಕಾಗಿ ಕೆಲ ದಿನಗಳಿಂದ ಗ್ರಾಮದ ಮಕ್ಕಳು ಕಪ್ಪೆ ಮದುವೆ ಮಾಡಿದ್ದಾರೆ. ಬಸವನ ಮೆರವಣಿಗೆ ನಡೆದಿದೆ. ಇದರೊಂದಿಗೆ ಮಹಾಭಾರತದ ವಿರಾಟ ಪರ್ವದ ಪಾರಾಯಣವನ್ನು ಮಾಡಲಾಗಿದೆ. ಆದರು ಮಳೆ ಸಿಂಚನವಾಗದಿರುವುದರಿಂದ ಕತ್ತೆಗಳ ಮದುವೆ ಮಾಡಿಸಲು ಗ್ರಾಮಸ್ಥರು ಒಂದೆಡೆ ಸಭೆ ಸೇರಿ ತೀರ್ಮಾನಿಸಿದ್ದಾರೆ. ಅದರಂತೆ ಓಲಗದೊಂದಿಗೆ ಕತ್ತೆಗಳಿಗೆ ವಸ್ತ್ರಗಳನ್ನು ಹಾಕಿ ಸಿಂಗರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರತಿ ಮನೆಯವರೂ ವಿಶೇಷ ಪೂಜೆಯನ್ನು ಸಲ್ಲಿಸಿ ಮಳೆಯಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
No comments:
Post a Comment