ಮೇ 14 ರಂದು ಚಾಮರಾಜನಗರಕ್ಕೆ ಸಿದ್ದರಾಮಯ್ಯ
ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
*ಜೆ.ಎಸ್.ಎಸ್ ಆಸ್ಪತ್ರೆ ಹಾಗೂ ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವದ ಉದ್ಘಾಟನೆ ಅಂದು ನಡೆಯಲಿದ್ದು ಉದ್ಘಾಟನೆಯನ್ನ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ ಎಂದು ಜೆಎಸ್ಎಸ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾದಿಕಾರಿ ಬೆಟ್ ಕೆರೂರ್ ತಿಳಿಸಿದ್ದಾರೆ.
*ಸುವರ್ಣ ಸಂಚಿಕೆ ಬಿಡುಗಡೆಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ,ಶಸ್ತ್ರ ಚಿಕಿತ್ಸಾ ಘಟಕ ಉದ್ಘಾಟನೆಗೆ ಆಹಾರ,ನಾಗರಿಕ ಸರಬರಾಜು ಸಚಿವ ಖಾದರ್ ಸೇರಿದಂತೆ ವಿವಿದ ಸಚಿವರು ಬಾಗವಹಿಸಲಿದ್ದಾರೆ ಎಂದು ತಿಳಿಸಿದರು
*ನೂತನವಾಗಿ ಉದ್ಘಾಟನೆಗಾಗುವ ಆಸ್ಪತ್ರೆಯಲ್ಲಿ ೨೪x೭ ತುರ್ತು ಚಿಕಿತ್ಸೆ,ಆರೋಗ್ಯವಿಮೆ, ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ ಸೇರಿದಂತೆ ಎಲ್ಲಾ ಸೌಲಭ್ಯಗಳು ಸಾರ್ವಜಿಕರಿಗೆ ದೊರೆಯಲಿದೆ ಎಂದು ತಿಳಿಸಿದರು. ಪತ್ರಿಕಾಘೊಷ್ಟಿಯಲ್ಲಿ ವೈಧ್ಯಕೀಯ ವಿಭಾಗದ ನಿರ್ದೇಶಕ ಮಹೇಶ್, ಕಾಲೇಜು ವಿಭಾಗದ ನಿರ್ದೇಶಕ ನಿರಂಜನ್ ಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು
**************************************************************************
ರಾತ್ರಿಯಿಡಿ ಸುರಿದ ಮಳೆ, ದರೆಗುರುಳಿದ ಮರ, ಕೆರೆಯಾದ ಕ್ರೀಡಾಂಗಣ, ಜೀವಾ ವಿಮಾ ನಿಗಮದ ಕಚೇರಿ.!
* ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ:ರಾತ್ರಿಯಿಡಿ ಬಿದ್ದ ಸತತ ಮಳೆಯಿಂದ ಮರಗಳು ದರೆಗುರುಳಿದ ಪರಿಣಾಮಯ ಕೆಲವೆಡೆ ಕಾರ್ಗತ್ತಲಿನಲ್ಲಿ ಮುಳುಗಿದ ಘಟನೆ ನಡೆದಿದೆ.ಚಾಮರಾಜನಗರ ಜೆಎಸ್ಎಸ್ ಕಾಲೇಜು ಸಮೀಪ ಮರ ವಿದ್ಯುತ್ ಕಂಬಕ್ಕೆ ಬಿದ್ದ ಪರಿಣಾಮವಾಗಿ ವಿದ್ಯುತ್ ವೈರ್ ತುಂಡಾಗಿ ವಿದ್ಯುತ್ ಕಡಿತವಾಗಿದೆ.
ಕೆಲವೆಡೆ ಪಾಳು ಬಿದ್ದಿದ್ದ ಕೆರೆಗಳು ತುಂಬಿದೆ. ಇತ್ತ ಕ್ರೀಡಾಂಗಣ, ಶಾಲೆ, ಜೀವಾ ವಿಮಾ ನಿಗಮದ ಕಛೇರಿ ಕೆರೆಯಾಗಿ ಮಾರ್ಪಟ್ಟಿದೆ.ಡಬಲ್ ರೋಡ್ ಇತ್ತ ಡಬ್ಬಾ ರೋಡ್ ಆಗಿದೆ.
No comments:
Post a Comment