Saturday, 13 May 2017

ಸಿದ್ದರಾಮಯ್ಯ ಹತ್ತಲ್ಲ, ಇಪ್ಪತ್ತು ಸಲ ಬಂದರೂ ಡಬಲ್ ರೋಡ್ ಡಬ್ಬಾ ರೋಡೆ.!ನಾಳೆ ಜೆ.ಎಸ್.ಎಸ್ ಆಸ್ಪತ್ರೆ ಸಿದ್ದರಾಮಯ್ಯ ಅವರಿಂದ ಸಮರ್ಪಣೆ


*****************************************************************************
13-05-2017 ವಿಶೇಷ ಸುದ್ದಿಗಳು-----------------.S.VEERABHADRA SWAMY. RAMAMSAMUDRA.
*******************************************************************************

ನಾಳೆ ಜೆ.ಎಸ್.ಎಸ್ ಆಸ್ಪತ್ರೆ ಸಿದ್ದರಾಮಯ್ಯ ಅವರಿಂದ ಸಮರ್ಪಣೆ                    ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ


 ಚಾಮರಾಜನಗರ: ಇಪ್ಪತ್ತೈದು ಕೋಟಿ ರೂಪಾಯಿಗೂ ವೆಚ್ಚದಲ್ಲಿದಲ್ಲಿ ನಿರ್ಮಿಸಲಾದ 100 ಹಾಸಿಗೆಗಳ ನೂತನ  ಆಸ್ಪತ್ರೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಜನತೆಗೆ ಸಮರ್ಪಿಸಲಿದ್ದಾರೆ.
ಜೆ.ಎಸ್.ಎಸ್ ಆಸ್ಪತ್ರೆ  ಹಾಗೂ ಜೆ.ಎಸ್.ಎಸ್.ಮಹಿಳಾ ಕಾಲೇಜು ಸುವರ್ಣ ಮಹೋತ್ಸವ ಉದ್ಘಾಟನೆ ನೆರವೇರಿಸುವÀರು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ನಡೆಸುವ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಗ್ರಾಮೀಣ ಜನರಿಗೆ ಹೆಚ್ಚಿನ ಸೇವೆ ಒದಗಿಸಬೇಕೆಂದು ಅತ್ಯಾದುನಿಕ ಸೌಲಭ್ಯಗಳನ್ನು ಒಳಗೊಂಡ 100 ಹಾಸಿಗೆ ನೂತನ ಆಸ್ಪತ್ರೆಯನ್ನು ಕಳೆದ ವರ್ಷವಷ್ಟೇ ಸಾಂಪ್ರಾದಾಯಿಕವಾಗಿ ಪೂಜೆ  ಸಲ್ಲಿಸಿ ಹೊರ ರೋಗಿಗಳ (ಓಪಿಡಿ) ಸೇವೆಯನ್ನು ಒದಗಿಸಿತ್ತು.

ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಈಗ ನುರಿತ  ವೈದ್ಯರು, 18 ಸ್ಪೆಷಾಲಿಟಿ ಹಾಗೂ 5 ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಅತ್ಯಾದುನಿಕ ಪ್ರಯೋಗಾಲಯಗಳು, ಸಿಟಿ ಸ್ಕ್ಯಾನ್, ಎಕ್ಸ್ ರೇ, ಅಲ್ಟ್ರಾ ಸೌಂಡ್, ಎರಡು ಶಸ್ತ್ರ ಚಿಕಿತ್ಸಾ ಕೊಠಡಿಗಳು, ಹೆರಿಗೆ  ಶಸ್ತ್ರ ಚಿಕಿತ್ಸಾ ಕೊಠಡಿಗಳು, ತೀವ್ರಾ ನಿಗ ಘಟಕಗಳನ್ನು ಈ ಆಸ್ಪತ್ರೆ ಹೊಂದಿದೆ.
*****************************************************************************


ಸಿದ್ದರಾಮಯ್ಯ  ಹತ್ತಲ್ಲ, ಇಪ್ಪತ್ತು ಸಲ ಬಂದರೂ ಡಬಲ್ ರೋಡ್ ಡಬ್ಬಾ ರೋಡೆ.!
             ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಹತ್ತಲ್ಲ, ಇಪ್ಪತ್ತು ಸಲ ಚಾಮರಾಜನಗರಕ್ಕೆ ಬಂದರೂ ಡಬಲ್ ರೋಡ್ ಡಬ್ಬಾ ರೋಡೆ.! ಎಂದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಮಾತೆತ್ತಿದರೆ ಸಾಕು ಚಾಮರಾಜನಗರಕ್ಕೆ ಹೋಗಿ ಮೌಡ್ಯತೆ ತೊರೆದೆ ಎನ್ನುವ ಭಾಷಣಗಳು ಜನರು ಕೇಳಿ ಕೇಳಿ ಸಾಕಾಗಿದೆ ಆದರೆ ಇಲ್ಲಿ  ರಸ್ತೆಗಳು ಕಿತ್ತು ಹೋಗಿದೆ.  ಮುಖ್ಯಮಂತ್ರಿಗಳು ಬರುತ್ತಿದ್ದಾರೆ ಎಂದರೆ ಸಾಕು ತಾತ್ಕಲಿಕವಾಗಿ ಡಾಂಬರ್ ಹಾಕಿ ತೇಪೆ ಹಾಕುತ್ತಿದ್ದಾರೆ. ಇಲ್ಲಿ ಇರುವ ನಾವು ಮನುಷ್ಯರಲ್ಲವಾ,ಆವಾಗ ಹಾಕದವರು ಈಗ ಹಾಕುವುದು ಎಷ್ಟು ಸರಿ  ಎಂದು ಹಿಡಿ ಶಾಪ ಹಾಕುತ್ತಿದ್ದಾರೆ.


**********************************************************

10-02-2016 ರಂದು ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಸುದ್ದಿ

******************************************************ಶಿಕ್ಷಣ ಕ್ಷೇತ್ರದೆಡೆಯಿಂದ ವೈದ್ಯಕೀಯ ಕ್ಷೇತ್ರದತ್ತ ಹೆಜ್ಜೆಯಿಡುತ್ತಿರುವ ಜೆ.ಎಸ್.ಎಸ್.ಸಂಸ್ಥೆ
ಶೀಘ್ರದಲ್ಲಿಯೇ ಚಾಮರಾಜನಗರದಲ್ಲಿ ನೂತನ ಆಸ್ಪತ್ರೆ ಉದ್ಘಾಟನೆಗೆ ಸಜ್ಜು
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ, ಫೆ- ರಾಜ್ಯಾದಾದ್ಯಂತ ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆ ಇದೀಗ ಚಾಮರಾಜನಗರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದು ಸದ್ಯದಲ್ಲಿಯೇ ವೈದ್ಯಕೀಯ ಕ್ಷೇತ್ರದತ್ತ ಹೆಜ್ಜೆ ಹಾಕಲು ಅವಣಿಸುತ್ತಿದೆ.
ಚಾಮರಾಜನಗರದಲ್ಲಿ ಜೆ.ಎಸ್.ಎಸ್.ಸಂಸ್ಥೆ ವತಿಯಿಂದ ಕೈಗಾರಿಕಾ ತರಬೇತಿ ನೈಪುಣ್ಯತಾ ಕೇಂದ್ರ. ಪದವಿ, ಪದವಿಪೂರ್ವ ಕಾಲೇಜು, ನರ್ಸಿಂಗ್ ಕಾಲೇಜು ಆರಂಭಿಸಿ ಉನ್ನತ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿರುವ ಸಂಸ್ಥೆ ಈಗ ಪಟ್ಟಣದ ಕೇಂಧ್ರದಲ್ಲಿ ಆಸ್ಪತ್ರೆ ತೆರೆದು ವೈದ್ಯಕೀಯ ಕ್ಷೇತ್ರದಲ್ಲಿಯೇ  ಸೇವೆ ಮಾಡಿ ಹೆಸರು ಮಾಡಬೇಕೆಂದು ದೃಡ ಸಂಕಲ್ಪ ತೊಟ್ಟಿದೆ.
ಚಾಮರಾಜನಗರದ ಜೋಡಿ ರಸ್ತೆಯಲ್ಲಿರುವ ಜೆ.ಎಸ್.ಎಸ್. ಕಾಲೇಜಿನ ಪಕ್ಕದದಲ್ಲಿಯೇ 3.5 ಎಕರೆ ಪ್ರದೇಶ, 54 ಸಾವಿರ ಚದರ ಅಡಿಯಲ್ಲಿ ಅತ್ಯುತ್ತಮ ಮೂಲಭೂತ ಸೌಲಭ್ಯಗಳೊಂದಿಗೆ ನೂತನ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಈಗಾಗಲೇ ಸಾಂಪ್ರದಾಯಿಕವಾಗಿ ಆಸ್ಪತ್ರೆಗೆ ಹೋಮ ಹವನಗಳೊಂದಿಗೆ ಪೂಜೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
“ಸಮುದಾಯ ಬೇರೂರಿ, ನಿಮ್ಮ ಅಗತ್ಯಗಳಿಗನುಸಾರವಾಗಿ ಬೆಳೆಯುತ್ತಿರುವ ಜೆ.ಎಸ್.ಎಸ್.ಆಸ್ಪತ್ರೆ ನಿಮ್ಮ ಆರೋಗ್ಯ ಸ್ಥಿತಿ ಅನ್ವೇಷಿಸಿ” ಎಂಬ ಹೆಗ್ಗಳಿಕೆಯಿಂದ 100 ಹಾಸಿಗೆಯುಳ್ಳ ಕಟ್ಟಡ ಸದ್ಯದಲ್ಲಿಯೇ ಅದ್ದೂರಿಯಾಗಿ ಉದ್ಘಾಟನೆಯಾಗಲಿದೆ.
ಆಸ್ಪತ್ರೆಯ ವ್ಯಾಪಕ ರೋಗನಿರ್ಣಯ ಹಾಗೂ ಚಿಕಿತ್ಸಾ ಸೇವೆಗಳನ್ನು ಒದಗಿಸಲಿದ್ದು ತೀವ್ರ ನಿಗಾ ಘಟಕದ ಹಾಗೂ ತುರ್ತು ಆರೈಕೆ ಸೌಲಭ್ಯದ 15 ಹಾಸಿಗೆಗಳನ್ನು ಹೊಂದಿದೆ. ಆಸ್ಪತ್ರೆಯ ಎಲ್ಲಾ ವಿಭಾಗಗಳಲ್ಲಿ ಸಮರ್ಪಿತ ಮನೋಭಾವ ಅರ್ಹ ಹಾಗೂ ನುರಿತ ವೈದ್ಯರನ್ನು ಈಗಾಗಲೇ ನೇಮಕ ಮಾಡಕೊಳ್ಳಲಾಗಿದೆ
ಚಾಮರಾಜನಗರದಲ್ಲಿ ಪ್ರಾರಂಭವಾಗುತ್ತಿರುವ ನೂತನ ಆಸ್ಪತ್ರೆಯಲ್ಲಿ ಎರಡು ಶಸ್ತ್ರಚಿಕಿತ್ಸಾ ಕೊಠಡಿಗಳು, ಪ್ರತ್ಯೇಕ ಹೆರಿಗೆ ಚಿಕಿತ್ಸಾ ಕೊಠಡಿ ಹಾಗೂ ಹೆರಿಗೆ ಕೊಠಡಿ ಮತ್ತು ಕಿರು ಶಸ್ತ್ರಚಿಕಿತ್ಸಾ ಕೊಠಡಿಗಳಿದೆ. ದಿನದ 24 ಘಂಟೆಗಳ ಸೇವೆಯಲ್ಲಿ ನವಜಾತ ಶಿಶು ತೀವ್ರ ಘಟಕಾ (ಎನ್,ಐ.ಸಿ.ಯು), ವೈದ್ಯಕೀಯ ತೀವ್ರ ನಿಗಾಘಟಕ (ಎಮ್.ಐ.ಸಿಯು), ಶಸ್ತ್ರಚಿಕಿತ್ಸಾ ತೀವ್ರ ನಿಗಾಘಟಕಗಳು(ಎಸ್,ಐ.ಸಿ.ಯು), ಮತ್ತು ತುರ್ತು ಮತ್ತು ಅಪಘತ ಚಿಕಿತ್ಸಾ ಘಟಕಗಳು ಸಿದ್ದಗೊಂಡಿದೆ.

ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಟಿ ಸೇವೆಗಳು: ಹೃದಯರೋಗ ಚಿಕಿತ್ಸೆ, ಕಿವಿ.ಮೂಗು ಗಂಟಲುಚಿಕಿತ್ಸೆ, ನರರೋಗ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ಮಾನಸಿಕ ರೋಗ ಚಿಕಿತ್ಸೆ, ಮೂತ್ರರೋಗ ಚಿಕಿತ್ಸೆ, ಮೂತ್ರಪಿಂಡ ರೋಗ ಚಿಕಿತ್ಸೆ ಹಾಗೂ ಗ್ಯಾಸ್ಟ್ರೋ ಎಂಟರಾಲಜಿ ಸೇವೆಗಳನ್ನು ಒದಗಿಸಲಿದೆ.
ಸದಾ ಕಾಲ ದೊರೆಯಲಿರುವ ಸೇವೆಗಳು: ಔಷದ ಕೇಂದ್ರ , ಡಯಾಲಿಸಿಸ್, ಆಂಬ್ಯುಲೆನ್ಸ್ ಸೇವೆ, ರೇಡಿಯಾಲಜಿ, ಪ್ರಯೋಗಾಲಯ ರಕ್ತ ಸಂಗ್ರಹ ಕೇಂದ್ರಗಳು, ಕೇಂದ್ರೀಯ ಸ್ಪೈರಲ್ ಸರಬರಾಜು ಕೇಂದ್ರ, ಅತ್ಯುತ್ತಮ ಫಿಸಿಯೋಥೇರಫಿ ಹಾಗೂ ಪುನರ್ವಸತಿ ಸೌಲಭ್ಯಗಳು ಸಿಗಲಿದೆ.
ಆಸ್ಪತ್ರೆಯಲ್ಲಿ ನೀರು ಶುದ್ದೀಕರಣ ಘಟಕ, ತ್ಯಾಜ್ಯ ನೀರು ಸಂಸ್ಕರಣಾ ಘಟಕ, ಬಟ್ಟೆ ಸ್ವಚ್ಚ ಮಾಡುವ ಘಟಕ, ಉಪಾಹಾರ ಕೇಂದ್ರ, ಶವಾಗಾರ, ವೈದ್ಯಕೀಯ ಅನಿಲ ಬಹುದ್ವಾರಿಗಳ ಸೇವೆಗಳನ್ನು ಸಿದ್ದ ಮಾಢಿಕೊಂಡಿದ್ದು ರೋಗಿಗಳಿಗೆ ತಕ್ಕಂತೆ ಖಾಸಗೀ, ಅರೆಖಾಸಗೀ, ಕ್ಯೂಬಿಕಲ್, ಸಾಮಾನ್ಯ ಎಂಬ ನಾಲ್ಕು ತರಹದ ವಾರ್ಡ್‍ಗಳನ್ನು ಸಿದ್ದಮಾಡಿದೆ
ನಗದು ರಹಿತ ಪ್ರಯೋಜನಗಳು: ಯಶಸ್ವಿನಿ ಹಾಗೂ ವಾಜಪೇಯಿ ಆರೋಗ್ಯ ಶ್ರೀ ಇತ್ಯಾದಿ ಆರೋಗ್ಯ ವಿಮಾ ಸೇವೆಗಳನ್ನು ಒಳಪಡಿಸುವ ಸಾದ್ಯತೆಯಿದೆ. ಸದ್ಯದಲ್ಲಿಯೇ ಉದ್ಘಾಟನೆಯಾಗಲಿದೆ ಎಂದು ಈಗಾಗಲೇ ಸುತ್ತೂರು ಜಾತ್ರಾ ಮಹೋತ್ಸವದ ವಸ್ತು ಪ್ರದರ್ಶನದ ಕೇಂಧ್ರದಲ್ಲಿ ಪ್ರಚಾರ ಮಾಡಲಾಗುತ್ತಿದ್ದು ಚಾಮರಾಜನಗರದ ಪಟ್ಟಣದ ಜನತೆಗೆ ಉತ್ತಮ ಆಸ್ಪತ್ರೆಯ ಭಾಗ್ಯ ಒದಗಿ ಬಂದಂತಾಗಿದೆ
ಬಹುತೇಕವಾಗಿ ಸೂಪರ್ ಸ್ಪೆಷಾಲಟಿ ಆಸ್ಪತ್ರೆ ಪ್ರಾರಂಭವಾಗುತ್ತಿದ್ದಂತೆಯೇ ಪಟ್ಟಣದಲ್ಲಿರುವ ಬಹುತೇಕ ಖಾಸಗೀ ಆಸ್ಪತ್ರೆಗಳಿಗೆ ಭಾರೀ ಹೊಡೆತ ಬೀಳುವ ಸಾದ್ಯತೆಯ ಜೊತೆಗೆ ಸರ್ಕಾರಿ ಆಸ್ಪತ್ರೆಗೆ ತೆರಳಬೇಕೆಂದಿರುವ ಜನರೂ ಕೂಡ ಇನ್ನು ಮುಂದೆ ಇತ್ತ ಬರಲಾರಂಬಿಸುವುದಂತು ನಿಜ ಎಂದರೆ ತಪ್ಪಾಗಲಾರದು.

********************************************************************************

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು