ಜಿಲ್ಲೆಯ ಜನತೆಗೆ ಜೆ.ಎಸ್.ಎಸ್ ಆಸ್ಪತ್ರೆ ಸಮರ್ಪಿಸಿದ ಸಿದ್ದರಾಮಯ್ಯ
ಚಾಮರಾಜನಗರ: ಇಪ್ಪತ್ತೈದು ಕೋಟಿ ರೂಪಾಯಿಗೂ ವೆಚ್ಚದಲ್ಲಿದಲ್ಲಿ ನಿರ್ಮಿಸಲಾದ 100 ಹಾಸಿಗೆಗಳ ನೂತನ ಆಸ್ಪತ್ರೆಯನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಜನತೆಗೆ ಸಮರ್ಪಿಸಿದ್ದಾರೆ.
ಜೆ.ಎಸ್.ಎಸ್ ಆಸ್ಪತ್ರೆ ಹಾಗೂ ಜೆ.ಎಸ್.ಎಸ್.ಮಹಿಳಾ ಕಾಲೇಜು ಸುವರ್ಣ ಮಹೋತ್ಸವ ಉದ್ಘಾಟನೆ ನೆರವೇರಿಸಿದರು.
ಸರ್ಕಾರದ ಜೊತಡ ಜೊತೆಗೆ ಮಠ ಮಾನ್ಯಗಳು ಆರೋಗ್ಯ ಕ್ಷೇತ್ರದತ್ತ ಕೈ ಜೋಡಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಿದೆ. ಮೈಸೂರಿನಲ್ಲಿ ಕೆ.ಆರ್ ಆಸ್ಪತ್ರೆ ಮೂರ್ನಾಲ್ಕು ಜಿಲ್ಲೆಗಳಿಗೆ ಪ್ರಸಿದ್ದಿಯಾಗಿ ನಂvರ ಜೆ.ಎಸ್.ಎಸ್ ಆರೋಗ್ಯ ಕ್ಷೇತ್ರದತ್ತ ಹೆಜ್ಜೆ ಹಾಕಿ ಉತ್ತಮ ಆಸ್ಪತ್ರೆ ನಿರ್ಮಾಣ ಮಾಡಿ ಇನ್ನು ಹೆಚ್ಚು ಸಹಕಾರಿಯಾಯಿತು. ಹಾಗಿಯೇ ಚಾಮರಾಜನಗರದಲ್ಲೂ ಉತ್ತಮ ಆಸ್ಪತ್ರೆಯಾಗಿ ಬೆಳೆಯಲಿ ಎಂದು ಆಶಿರ್ವದಿಸಿದರು. ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರದ ವತಿಯಿಂದ ಪದವಿ ಪಡೆಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸುಮಾರು 1.50 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ತಿಳಿಸಿದರು.
ಆಸ್ಪತ್ರೆಯಲ್ಲಿ ಏನೇನಿದೆ.?
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ನಡೆಸುವ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಗ್ರಾಮೀಣ ಜನರಿಗೆ ಹೆಚ್ಚಿನ ಸೇವೆ ಒದಗಿಸಬೇಕೆಂದು ಅತ್ಯಾದುನಿಕ ಸೌಲಭ್ಯಗಳನ್ನು ಒಳಗೊಂಡ 100 ಹಾಸಿಗೆ ನೂತನ ಆಸ್ಪತ್ರೆಯನ್ನು ಕಳೆದ ವರ್ಷವಷ್ಟೇ ಸಾಂಪ್ರಾದಾಯಿಕವಾಗಿ ಪೂಜೆ ಸಲ್ಲಿಸಿ ಹೊರ ರೋಗಿಗಳ (ಓಪಿಡಿ) ಸೇವೆಯನ್ನು ಒದಗಿಸಿತ್ತು.
ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಈಗ ನುರಿತ ವೈದ್ಯರು, 18 ಸ್ಪೆಷಾಲಿಟಿ ಹಾಗೂ 5 ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.ಅತ್ಯಾದುನಿಕ ಪ್ರಯೋಗಾಲಯಗಳು, ಸಿಟಿ ಸ್ಕ್ಯಾನ್, ಎಕ್ಸ್ ರೇ, ಅಲ್ಟ್ರಾ ಸೌಂಡ್, ಎರಡು ಶಸ್ತ್ರ ಚಿಕಿತ್ಸಾ ಕೊಠಡಿಗಳು, ಹೆರಿಗೆ ಶಸ್ತ್ರ ಚಿಕಿತ್ಸಾ ಕೊಠಡಿಗಳು, ತೀವ್ರಾ ನಿಗ ಘಟಕಗಳನ್ನು ಹೊಂದಿದೆ.
ಡಯಾಲಿಸಿಸ್ ಸೌಲಭ್ಯ, ಔಷದಿ ಕೇಂದ್ರ, ಆಂಬ್ಯುಲೆನ್ಸ್ ಸೇವೆ, ಉಪಹಾರ ಕೇಂದ್ರಗಳಿದ್ದು ವಿವಿದ ಆರೋಗ್ಯ ವಿಮಾ ಯೋಜನೆಗಳ ಮೂಲಕ ಚಿಕಿತ್ಸೆ ಪಡೆಯಬಹುದಾಗಿದೆ.
*******************************************************88
ಹೆಲಿಪ್ಯಾಡ್ ಅಲ್ಲಿ ಹೇಳಿದ್ದೇನು?
ಬೋಸ್ ಮಾಡೊ ಕೆಲಸ ಹೈ ಕಮಾಂಡ್ ನೋಡಿಕೊಳ್ಳುತ್ತದೆ ಎಂದ ಸಿ ಎಂ!
ದಲ್ಲಿ ಪಿಡಬ್ಲುಡಿ ಸಚಿವರ ಮಗ ನಡೆಸುತ್ತಿರುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚಾಲನೆ ಕೊಡುವುದು ಸರಿಯೆ ಎನ್ನುವ ಪ್ರಶ್ನೆಗೆ ಅದನ್ನು ಹೈ ಕಮಾಂಡ್ ನೋಡಿಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅವರು ಚಾಮರಾಜನಗರದಲ್ಲಿ ಜೆಎಸ್ಎಸ್ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಹೆಲಿಪ್ಯಾಡ್ನಲ್ಲಿ ಮಾತನಾಡಿದ್ದಾರೆ. ಮೈಸೂರಲ್ಲಿ ತಮ್ಮ ಮಗ ಹಾಗೂ ಮೊನ್ನೆ ಲೊಕಪಯೋಗಿ ಸಚಿವರ ಮಗ ಮಾಡುತ್ತಿರುವ ಸರ್ಕಾರಿ ಕಾರ್ಯಕ್ರಮ, ಕಾಮಗಾರಿ ಚಾಲನೆ ಸರಿಯಾ ಎಂದಾಗ ನನಗೆ ಗೊತ್ತೆ ಇಲ್ಲ ಎಂದು ಉತ್ತರಿಸಿದ್ದಾರೆ. ಮಾದ್ಯಮದಲ್ಲಿ ಬರುತ್ತಿದ್ದ ದೃಶ್ಯಗಳು ನಿಮಗೆ ಗೊತ್ತಿಲ್ಲವೆ ಎಂದರೆ ನೋಡಿಲ್ಲ, ಅದೆಲ್ಲಾ ಸುಳ್ಳು ಎಂದು ಉತ್ತರ ನೀಡಿದ್ದಾರೆ.
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ.
ಚಾಮರಾಜನಗರಕ್ಕೆ ಸಿದ್ದು ಆಗಮನ,ರಜೆ ಇದ್ದರೂ ಅಧಿಕಾರಿಗಳಲ್ಲಿ ನಡುಕ!
ಚಾಮರಾಜನಗರ: ಖಾಸಗೀ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಯಿಂದ ಅದಿಕಾರಿಗಳಲ್ಲಿ ನಡುಕ ಉಂಟಾಗಿದೆ .ಕಾರಣ ಿಂದು ಭಾನುವಾರ ಮುಖ್ಯಮಂತ್ರಿಗಳು ಜೆ.ಎಸ್.ಎಸ್ ಆಸ್ಪತ್ರೆ ಹಾಗೂ ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವದ ಉದ್ಘಾಟನೆ ನಡೆಯಲಿದ್ದು ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿರುವುದುಕಾರ್ಯಕ್ರಮ ಖಾಸಗೀಯಾದರೂ ಮೈಸೂರಿನಲ್ಲೆ ವಾಸ್ತವ್ಯ ಹೂಡಿರುವ ಎಷ್ಟೊ ಅಧಿಕಾರಿಗಳು ರೈಲಿನಲ್ಲಿ ಮುಂಜಾನೆಯೇ ಚಾಮರಾಜನಗರಕ್ಕೆ ಬಂದಿದ್ದಾರೆ. ಅಪ್ಪಿತಪ್ಪಿ ಯಾವುದಾದರೂ ಇಲಾಖೆಯಲ್ಲಿನ ಮಾಹಿತಿ ಕೇಳಿದರೆ ಕ್ಷಣ ಮಾತ್ರದಲ್ಲಿ ಕೊಡುವಂತಾಗಬೇಕು ಇಲ್ಲವಾದರೆ ಅಧಿಕಾರಿಯನ್ನೇ ಅಮಾನತು ಮಾಡುವಂತೆ ಸ್ಥಳದಲ್ಲೆ ಆದೇಶ ಮಾಡಿ ಬಿಡುತ್ತಾರೆ ಎಂಬ ಭಯದಿಂದ ಓಡೋಡಿ ಬಂದಿದ್ದಾರೆ.ಅದೂ ಭಾನುವಾರ ರಜಾ ದಿನದಲ್ಲೂ... ಎಷ್ಟೇ ಆದರೂ ರಾಜ್ಯದ ದೊರೆ ಅಲ್ಲವೇ.?
ಇಂದು ರೈಲು ನಿಲ್ದಾಣಕ್ಕೆ ಭೇಟಿ ನೀಡಿದಾಗ ಸರ್ಕಾರಿ ವಾಹನಗಳು ಸಾಲು ಸಾಲು ನಿಂತಿದ್ದು ಕಂಡು ಬಂದವು. ಆಗ ಈ ಸತ್ಯಾಂಶ ಹೊರಬಂದಿದೆ. ಏನೇ ಆಗಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರದೇ ಕಳ್ಳಾಟ ಆಡುತ್ತಿದ್ದು ಸ್ಥಳೀಯವಾಗಿ ಮೊಕ್ಕಂ ಹೂಡುವಂತೆ ಆದೇಶ ಮಾಡಿ ಸರ್ಕಾರ ವಾಹನಗಳು ದುರುಪಯೋಗದಂತೆ ತಡೆಯಬೇಕಾಗಿದೆ.
No comments:
Post a Comment