Thursday, 25 May 2017

25-05-2017 ಎಂ.ಇ.ಎಸ್. ರನ್ನು ಬಂಧಿಸಲು ವಾಟಾಳ್ ಆಗ್ರಹ


ಎಂ.ಇ.ಎಸ್. ರನ್ನು ಬಂಧಿಸಲು ವಾಟಾಳ್ ಆಗ್ರಹ

 ಮಹಾರಾಷ್ರ್ಟ ಏಕೀಕರಣ ಸಮಿತಿ (ಎಂ.ಇ.ಎಸ್) ಸಮಿತಿಯವರನ್ನು ರಾಷ್ರ್ಟೀಯ ಭದ್ರತಾ ಕಾಯ್ದೆಯಡಿಯಲ್ಲಿ  ಬಂಧಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.

ಬೆಳಗಾವಿಯಲ್ಲಿ ನಡೆದ ಸಭೆಗೆ ಎಂ.ಇ.ಎಸ್. ಪುಂಡರು ಕನ್ನಡಿಗÀರ ಬಗ್ಗೆ. ಅವಹೇಳನಕಾರಿಯಾಗಿ ಮಾತನಾಡಿರುವ ಇವರನ್ನು ಗೂಂಡಾ ಕಾಯ್ದೆ ಯಡಿಯಲ್ಲಿ ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.
ಚಾಮರಾಜನಗರ ,ಮೇ,25-ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ, ಮಳೆಬಂದರೆ ನೀರು ತುಂಬಿ ಕೆರೆಯಾಗುತ್ತದೆ. ಪ್ರಯಾಣಿಕರಿಗೆ ತೊಂದರಯಾಗುತ್ತಿದೆ. ಕುಡಿಯುವ ನೀರಿನ ಸೌಲಭ್ಯವಿಲ್ಲ, ಚರಂಡಿಯಿಲ್ಲ,  ವಿದ್ಯುತ್ ದೀಪವಿಲ್ಲ ಹಾಗೂ ಇನ್ನೂ ಅನೇಕ ಸಮಸ್ಯೆಯಿಂದ ಕೂಡಿ ನರಕಯಾತನಯಾಗಿರುವ ಸ್ಥಳಕ್ಕೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಇಂದು ಭೇಟಿ ನೀಡಿ ಅಲ್ಲಿಯ ಕುಂದು ಕೊರತೆಗಳನ್ನು  ಪರಿಶೀಲಿಸಿದರು

 ಖಾಸಗಿ ಬಸ್ ಚಾಲಕರು - ನಿವಾರ್Àಹಕರು, ಬಸ್ ಏಜೆಂಟರು, ಪ್ರಯಾಣಿಕರು, ಅಂಗಡಿಮಾಲೀಕರು, ಮಹಿಳೆಯರು, ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಮಸ್ಯೆಗಳನ್ನು ವಾಟಾಳ್ ನಾಗರಾಜ್ ರವರಿಗೆ ಸವಿವರವಾಗಿ ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಅವರು ಇದು ಖಾಸಗಿ ಬಸ್ ನಿಲ್ದಾಣವಲ್ಲ, ಜನರ ಪಾಲಿಗೆ ವರವಾಗಬದಲು ನರಕವಾಗುತ್ತಿದೆ. ರಾತ್ರಿ ವೇಳೆಯಲ್ಲಿ ಹೈಮಸ್ಟ್ ದೀಪ ಸೇರಿದಂತೆ ಇತರೆ ಯಾವುದೇ ದೀಪವಿಲ್ಲದೆ ಕಾಡಿನಂತೆಆಗಿದೆ. ರಾತ್ರಿ ವೇಳೆ ಕುಡುಕರಿಗೆ ತಾಣವಾಗಿದೆ, ರಾತ್ರಿ ವೇಳೆ ಅನೈತಿಕ ಚಟುವಟಿಕೆಯಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ನಗರಸಭೆ ತಕ್ಷಣವೇ ಇತ್ತ ಕಡೆ ಗಮನಹರಿಸಿ ನಿಲ್ದಾಣವನ್ನು ಅಭಿವೃದ್ದಿಪಡಿಸಬೇಕು ಇಲ್ಲವಾದಲ್ಲಿ, ಮುಂದಿನ ತಿಂಗಳು ಜೂನ್- 10ರಂದು ಈ ನಿಲ್ದಾಣದಲ್ಲಿಯೇ ಮಲಗಿ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಕೆ ಕೊಟ್ಟರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಸುಮಾರು ಹತ್ತಾರು ವರ್ಷಗಳ ಹಿಂದೆ ಕೆರೆಯಾಗಿದ್ದ ಈ ಪ್ರದೇಶಕ್ಕೆ ಮಳೆನೀರು ಬರುತ್ತಿರಲಿಲ್ಲ, ಆಗಾಗಿಯೇ ಜನರಿಗಾದರೂ ಉಪಯೋಗವಾಗಲಿಯೆಂದು ಕೆರೆಯನ್ನು ದುರಸ್ತಿಗೊಳಿಸಿ, ಖಾಸಗಿ ಬಸ್ ನಿಲ್ದಾಣ, ಆಟದ ಮೈದಾನ, ಗ್ರಾಮಾಂತರ ಪೋಲಿಸ್ ಠಾಣೆ, ರೈಲ್ವೆ ಬಡಾವಣೆಂiÀi ನಿವಾಸಿಗಳಿಗೆ ಮನೆ ನಿರ್ಮಿಸಿಕೊಟ್ಟೆ ಎಂದು ವಾಟಾಳ್ ಸ್ಮರಿಸಿದರು.
ಖಾಸಗಿ ಬಸ್ ನಿಲ್ದಾಣದಲ್ಲಿ ಚಾಲಕರು- ನಿರ್ವಾಕರಿಗೆ ವಿಶ್ರಾಂತಿ ಗೃಹ ಕಟ್ಟಿಸಿಕೊಡಲು ನಾನೇ ಶಂಕುಸ್ಥಾಪನೆ ಮಾಡಿ ಕಟ್ಟಡ ಅರ್ಧಕ್ಕೆ ನಿಂತಿದೆ. ಈ ವಿಶ್ರಾಂತಿ ಗೃಹ ದಿನ ನಿತ್ಯ ಮಧ್ಯ ಸೇವನೆಮಾಡಿ ಖಾಲಿ ಬಾಟಾಲ್ ಗಳನ್ನು ತುಂಬಿರುವ ದೃಶ್ಯವನ್ನು ಕಂಡು ವಾಟಾಳ್ ಬೇಸರ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ದಳಪತಿವೀರತ್ತಪ್ಪ, ಕಾರ್ನಾಗೇಶ್, ಹರದನಳ್ಳಿ ಸುರೇಶ್‍ನಾಗ್, ನಾಗರಾಜಮೂರ್ತಿ, ವಡ್ಡರಹಳ್ಳಿ ಮಹೇಶ್, ಹುಂಡಿ ಬಸವಣ್ಣ, ಶಿವಲಿಂಗಮೂರ್ತಿ, ಪ್ರಕಾಶ್, ಮಹದೇವನಾಯಕ, ನಂಜುಂಡಸ್ವಾಮಿ, ಶಿವಸ್ವಾಮಿ, ಶಿವಣ್ಣ ಸೇರಿದಂತೆ ಇತರರು ಇದ್ದರು.

ಮೇ 26 ರಂದು ತೆರಕಣಾಂಬಿಯಲ್ಲಿ ಜನ ಸಂಪರ್ಕ ಸಭೆ.
ಚಾಮರಾಜನಗರ, ಮೇ. 25:- ನಾಗರಿಕರ ಕುಂದುಕೊರತೆ ಸಮಸ್ಯೆ ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಮೇ 26 ರಂದು ಬೆಳಗ್ಗೆ 10.30 ಗಂಟೆಗೆ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ.
ಯಾವುದೇ ಕುಂದು ಕೊರತೆ ಅಹವಾಲುಗಳು ಇದ್ದಲ್ಲಿ ಸಭೆಯಲ್ಲಿಯೇ ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು. ನಾಗರಿಕರು ಈ ಸಭೆಯ ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾ ಆಡಳಿತ ಹಾಗೂ ತಾಲ್ಲೂಕು ಆಡಳಿತದ ಪ್ರಕಟಣೆ ಕೋರಿದೆ.

ಮೇ. 27ರಂದು ಚಾಮರಾಜನಗರದಲ್ಲಿ ಸೆಸ್ಕ್ ಜನಸಂಪರ್ಕ ಸಭೆ
ಚಾಮರಾಜನಗರ, ಮೇ. 25 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಚಾಮರಾಜನಗರ  ಉಪವಿಭಾಗದ ಸೆಸ್ಕ್ ಕಚೇರಿಯಲ್ಲಿ ಮೇ 27ರಂದು ಮಧ್ಯಾಹ್ನ 3 ಗಂಟೆಗೆ ಜನಸಂಪರ್ಕ ಸಭೆಯನ್ನು ನಡೆಸಲಿದೆ.
ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಭೆಗೆ ಹಾಜರಾಗಿ ತಿಳಿಸಬಹುದೆಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 26 ರಂದು ಜಿಲ್ಲೆಯಲ್ಲಿ ಲೋಕಸಭಾ ಸದಸ್ಯರ ಪ್ರವಾಸ
ಚಾಮರಾಜನಗರ, ಮೇ. 25:- ಲೋಕ ಸಭಾ ಸದಸ್ಯರಾದ ಆರ್.ಧ್ರುವನಾರಾಯಣ ಅವರು ಮೇ 26 ರಂದು ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
ಮೂಡಲ ಅಗ್ರಹಾರದಲ್ಲಿ ಉಪ್ಪಾರ ಸಮುದಾಯ ಭವನದ ಅಡುಗೆ ಮನೆ ನಿರ್ಮಾಣ, ಚುಂಗಡಿಪುರದಲ್ಲಿ ಕನಕ ಸಮುದಾಯ ಭವನದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಕಾರ್ಯಕ್ರದಲ್ಲಿ ಭಾಗವಹಿಸುವರು. ಹೊಂಗನೂರು, ಗೂಳಿಪುರದಲ್ಲಿ ಕುಡಿಯುವ ನೀರಿನ ಒವರ್ ಹೆಡ್ ಟ್ಯಾಂಕ್ ಕಾಮಗಾರಿಗೆ ಗುದ್ದಲಿ ಪೂಜೆ , ಸಣ್ಣ ನೀರಾವರಿ ಇಲಾಖಾ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ, ಪಶು ಆಸ್ಪತ್ರೆ ,ಎ.ಎನ್.ಎಂ ವಸತಿಗೃಹ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು, ಮದ್ದೂರು ಗ್ರಾಮದ ನಾಯಕರ ಬೀದಿಯಲ್ಲಿ ಸಮುದಾಯ ಭವನ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವರು




No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು