ಅದ್ದೂರಿಯಾಗಿ ನಡೆದ ಭಗೀರಥ ಜಯಂತಿ
ಚಾಮರಾಜನಗರ,
ಮೇ. 2 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ
ಸಂಯುಕ್ತ ಆಶ್ರಯದಲ್ಲಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ
ಜಿಲ್ಲಾ ಕೇಂದ್ರದಲ್ಲಿ ಇಂದು ಆಚರಿಸಲಾಯಿತು.
ಮೊದಲಿಗೆ ನಗರದ ಪÀ್ರವಾಸಿ ಮಂದಿರದ ಆವರಣದಲ್ಲಿ ವಿವಿಧ ಜಾನಪದ ಕಲಾತಂಡಗಳೊಡನೆ ಸಾಗಿದ ಶ್ರೀ ಮಹರ್ಷಿ ಭಗೀರಥ ಅವರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಸೇರಿದಂತೆ ಇತರೆ ಗಣ್ಯರು ಚಾಲನೆ ನೀಡಿದರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಪೇಟೆ ಪ್ರೈಮರಿ ಶಾಲಾ ಆವರಣದÀಲ್ಲಿ ಸಮಾವೇಶಗೊಂಡಿತು.
ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಆಕಾಶದಿಂದ ಗಂಗೆಯನ್ನು ತಂದುಕೊಟ್ಟ ಮಹಾತಪಸ್ವಿ ಭಗೀರಥರ ಜಯಂತಿ ಸಂದರ್ಭದಲ್ಲಿ ಉಪ್ಪಾರ ಜನಾಂಗದ ಸರ್ವಾಂಗೀಣ ಅಭಿವೃದ್ಧಿ ಸಂಬಂಧಿಸಿದಂತೆ ಚರ್ಚೆ ಮಾಡುವ ಸದವಕಾಶವು ಒದಗಿದೆ ಎಂದರು.\

ದೇಶದ ಬಹುತೇಕ ರಾಜ್ಯಗಳಲ್ಲಿ ಉಪ್ಪಾರ ಸಮುದಾಯ ವಾಸವಿದೆ. ಕರ್ನಾಟಕ ರಾಜ್ಯದಲ್ಲೂ 35 ರಿಂದ 40 ಲಕ್ಷ ಉಪ್ಪಾರ ಸಮುದಾಯದ ಜನಸಂಖ್ಯೆ ಇದೆ. ಉಪ್ಪಾರ ಜನಾಂಗದ ಸ್ಥಿತಿಗತಿಗಳನ್ನು ಅವಲೋಕನ ಮಾಡಿ ಸಾಮಾಜಿಕ, ಶೈಕ್ಷಣಿಕವಾಗಿ ಮೇಲೆ ಬರಲು ಅಗತ್ಯವಿರುವ ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಶೈಕ್ಷಣಿಕವಾಗಿ ಪ್ರಗತಿಯಾದರೆ ಸಮಾಜ ಮುಂದೆ ಬರಲು ಸಾಧ್ಯವಾಗಲಿದೆ. ಹೀಗಾಗಿ ಸಮುದಾಯದ ಯಜಮಾನರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ಪ್ರೇರೇಪಿಸಬೇಕು. ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಅನುಕೂಲವಾದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮೊರಾರ್ಜಿ ಶಾಲೆ, ಇತರೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಉಚಿತ ಪಠ್ಯಪುಸ್ತಕ ಸೇರಿದಂತೆ ಇತರೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕೆಂದು ಧ್ರುವನಾರಾಯಣ ಸಲಹೆ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಉಪ್ಪಾರ ಸಮುದಾಯವನ್ನು ಮೊದಲಿಗೆ ದೇವರಾಜ ಅರಸು ಅವರು ಗುರುತಿಸಿ ಉಪ್ಪಾರ ಜನಾಂಗದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಲು ಅನುವು ಮಾಡಿಕೊಟ್ಟರು. ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಅವರು ಉಪ್ಪಾರ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡುವ ಮೂಲಕ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪೂರಕ ಬಜೆಟ್‍ನಲ್ಲಿ ನಿಗಮಕ್ಕೆ 60 ಕೋಟಿ ರೂ. ನೆರವು ನೀಡುವಂತೆ ಕೋರಲಾಗಿದೆ ಎಂದರು.
ಸಮಾಜದಲ್ಲಿ ಇರುವ ಮೂಡನಂಬಿಕೆಗಳನ್ನು ಬಿಡಬೇಕು. ಬಾಲ್ಯ ವಿವಾಹ ಪದ್ಧತಿಯನ್ನು ತಡೆಯಬೇಕು. 18 ವರ್ಷ ತುಂಬಿದ ಬಳಿಕವೇ ಹೆಣ್ಣುಮಕ್ಕಳಿಗೆ ವಿವಾಹ ಮಾಡಬೇಕು. ಶಿಕ್ಷಣದತ್ತ ಹೆಚ್ಚು ಆಸಕ್ತರಾಗಲು ಪ್ರೋತ್ಸಾಹಿಸಬೇಕು ಎಂದರು.
ಮುಖ್ಯ ಭಾಷಣ ಮಾಡಿದ ಜನಪದ ವಿಧ್ವಾಂಸÀರಾದ ಡಾ. ಪಿ.ಕೆ. ರಾಜಶೇಖರ್ ಅವರು ಉಪ್ಪಾರರು ವಿಜ್ಞಾನ ಪ್ರಪಂಚಕ್ಕೆ ಈ ಹಿಂದೆಯೇ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಉಪ್ಪನ್ನು ಮದ್ದುಗುಂಡು, ಸಿಡಿಮದ್ದುಗಳಿಗೂ ಬಳಸಲು ಸರಬರಾಜು ಮಾಡುವ ಮೂಲಕ ಅನೇಕ ರಾಜಮಹಾರಾಜರ ವಿಶ್ವಾಸ ಗಳಿಸಿದ್ದರು. ಕೆರೆ ಕಟ್ಟೆ ಕೊಳ ಕಾಲುವೆಗಳ ಹೂಳೆತ್ತುವುದು, ಶಿಲ್ಪಿಗಳು ಕೆತ್ತಿದ ಶಿಲ್ಪಗಳನ್ನು ಜೋಡಿಸಿ ದೇವಾಲಯ ನಿರ್ಮಾಣ ಮಾಡುವಂತಹ ಕಾಯಕವನ್ನೂ ಉಪ್ಪಾರರು ನಿರ್ವಹಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪÀ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅದ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್, ಸದಸ್ಯರಾದ ಆರ್. ಬಾಲರಾಜು, ಶಶಿಕಲ ಸೋಮಲಿಂಗಪ್ಪ, ಸಿ.ಎನ್. ಬಾಲರಾಜು, ಚಂದ್ರಕಲಾ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಮುಖಂಡರಾದ ಮಂಗಲ ಶಿವಕುಮಾರ್, ಚಿಕ್ಕ ಮಹದೇವು, ಹನುಮಂತಶೆಟ್ಟಿ, ಜಿ.ಎಂ. ಗಾಡ್ಕರ್, ನೂರೊಂದು ಶೆಟ್ಟಿ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಿ.ಎಸ್.ಎಫ್ ಯೋಧರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಸಂತಾಪ
ಚಾಮರಾಜನಗರ, ಮೇ.2 :- ಜಿಲ್ಲೆಯ ಬಿಎಸ್‍ಎಫ್ ಯೋಧರಾದ ಪುಟ್ಟಸ್ವಾಮಿ ಅವರ ನಿಧನಕ್ಕೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪುಟ್ಟಸ್ವಾಮಿ ಅವರ ಕುಟುಂಬಕ್ಕೆ ನಿಧನದ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಉಸ್ತುವಾರಿ ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಪುಟ್ಟಸ್ವಾಮಿ ಅವರ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಮುಖ್ಯ ಮಂತ್ರಿಯವರ ಗಮನಕ್ಕೆ ತರಲಾಗುವುದೆಂದು ಉಸ್ತುವಾರಿ ಸಚಿವರು ತಿಳಿಸಿದ್ದಾರೆ.
ಗುಂಡ್ಲುಪೇಟೆ ಪಟ್ಟಣದ ನಿವಾಸಿಯಾಗಿದ್ದ ಎನ್.ಪುಟ್ಟಸ್ವಾಮಿ ಅವರು ಬಿಎಸ್‍ಎಫ್ ಯೋಧರಾಗಿ ಅಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಾವನ್ನಪ್ಪಿದ್ದರು.

ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಚಾಮರಾಜನಗರ, ಮೇ.2 :- ಜಿಲ್ಲೆಯ ತೋಟಗಾರಿಕೆ ಇಲಾಖೆಯಲ್ಲಿ 2017-18ನೇ ಸಾಲಿಗೆ ಆಸಕ್ತ ರೈತ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ವಲಯ ಯೋಜನೆಯ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಸೂಕ್ಷ್ಮ ನೀರಾವರಿ ಯೋಜನೆ)ಯಡಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಅಳವಡಿಕೆಗೆ ಸಹಾಯಧನ ನೀಡಲಾಗುತ್ತದೆ. ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ಲಭ್ಯ. ಮೊದಲ 2 ಹೆಕ್ಟೇರ್ ಪ್ರದೇಶಕ್ಕೆ ಶೇ.90ರಂತೆ ಮತ್ತು ಉಳಿದ 3 ಹೆಕ್ಟೇರ್ ಪ್ರದೇಶಕ್ಕೆ ಶೇಕಡಾವಾರು ಮಿತಿಯೊಳಗೆ ಸಹಾಯಧನ ನೀಡಲಾಗುವುದು.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊಸ ತೋಟಗಳ ಸ್ಥಾಪನೆ ಕಾರ್ಯಕ್ರಮದಡಿ ಅಂಗಾಂಶ ಬಾಳೆ, ದಾಳಿಂಬೆ, ಪಪ್ಪಾಯ ಬೆಳೆಗಳ ಪ್ರದೇಶ ವಿಸ್ತರಣೆ ಮತ್ತು ತರಕಾರಿ ಬೇಸಾಯ ಕೈಗೊಳ್ಳಲು ಸಹಾಯಧನ ನೀಡಲಾಗುವುದು. ಸಮಗ್ರ ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆ, ಎರೆಹುಳು ಗೊಬ್ಬರ ಉತ್ಪಾದನಾ ಫಟಕ, ಜೀವಸಾರ ಉತ್ಪಾದನಾ ಘಟಕ ನಿರ್ಮಾಣ, ಸಮುದಾಯ ಹಾಗೂ ವೈಯಕ್ತಿಕ ನೀರು ಸಂಗ್ರಹಣಾ ಘಟಕಗಳ ನಿರ್ಮಾಣ, ಸಂರಕ್ಷಿತ ಬೇಸಾಯ ಮತ್ತು ಹಸಿರು ಮನೆ, ನೆರಳು ಚಪ್ಪರ ನಿರ್ಮಾಣ, ಪ್ಲಾಸ್ಟಿಕ್ ಹೊದಿಕೆ, ತೋಟಗಾರಿಕೆಯಲ್ಲಿ ಯಾಂತ್ರೀಕರಣ – ಟ್ರಾಕ್ಟರ್ (20 ಹೆಚ್‍ಪಿ), ಪವರ್ ಟಿಲ್ಲರ್ (8 ಹೆಚ್‍ಪಿ), ಕೊಯ್ಲೋತ್ತರ ನಿರ್ವಹಣೆಯಲ್ಲಿ ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಟಕಕ್ಕೆ ಸಹಾಯಧನ ಲಭಿಸಲಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅಂಗಾಂಶ ಕೃಷಿ ಬಾಳೆ ಬೆಳೆಯನ್ನು ನಿಖರ ಬೇಸಾಯ ಪದ್ಧತಿಯಲ್ಲಿ ಬೆಳೆಯಲು ನೀಡಲಿದೆ. ತೆಂಗು ಪುನಶ್ಚೇತನ ಕಾರ್ಯಕ್ರಮ ಇದರಲ್ಲಿ ಸೇರಿದೆ.
ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೆಂಗು, ಮಾವು, ಸಪೋಟ, ಅಂಗಾಂಶ ಬಾಳೆ, ನುಗ್ಗೆ, ನೇರಳೆ, ನೆಲ್ಲಿ ಮುಂತಾದ ತೋಟಗಾರಿಕೆ ಬೆಳೆಗಳನ್ನು ಅಭಿವೃದ್ಧಿಪಡಿಸಲು ಮಾರ್ಗಸೂಚಿಯಂತೆ ಕೂಲಿ ಹಾಗೂ ಸಾಮಗ್ರಿ ವೆಚ್ಚ ನೀಡಲಾಗುವುದು. ವೈಯಕ್ತಿಕ ಕಾಮಗಾರಿಯಡಿ ಪುನಶ್ಚೇತನ, ಈರುಳ್ಳಿ ಶೇಖರಣಾ ಘಟಕ, ಕೊಳವೆಬಾವಿ, ಹಿಂಗು ಗುಂಡಿ, ಪೋಷಕಾಂಶ ಕೈತೋಟಕ್ಕೆ ನೆರವು ನೀಡಲಾಗುತ್ತದೆ.
ರಾಜ್ಯವಲಯ ಯೋಜನೆಯಡಿ ತೋಟಗಾರಿಕೆ ಬೆಳೆಗಳ ರೋಗ, ಕೀಟಗಳ ಸಮಗ್ರ ನಿಯಂತ್ರಣಕ್ಕೆ ನೆರವು ಲಭಿಸಲಿದೆ. ತೋಟಗಾರಿಕೆ ಬೆಳೆಗಳ ರೋಗ, ಕೀಟಗಳ ನಿಯಂತ್ರಣಕ್ಕಾಗಿ ಸಾಮಾನ್ಯ ವರ್ಗದ ರೈತರಿಗೆ ಶೇ.50ರಂತೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಂತೆ ಗರಿಷ್ಟ 2 ಹೆಕ್ಟೇರ್ ಮಿತಿಗೆ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿದ ರೈತರಿಗೆ ಸಹಾಯಧನವನ್ನು ಒದಗಿಸಲಾಗುವುದು.
ತೆಂಗು ಬೆಳೆ ಅಭಿವೃದ್ಧಿ ಯೋಜನೆಯಡಿ ಸಂಯೋಜಿತ ಬೇಸಾಯ - ಹೊಸ ಪ್ರಾತ್ಯಕ್ಷತೆ ತಾಕುಗಳ ನಿರ್ಮಾಣ ಮತ್ತು ನಿರ್ವಹಣೆ, ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ ಕಾರ್ಯಕ್ರಮ, ರಿಪ್ಲಾಟಿಂಗ್ ಮತ್ತು ರಿಜುವೆನೇಷನ್ ಸ್ಕೀಂನಡಿ ನೆರವು ನೀಡಲಾಗುತ್ತದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ರತಿ ತಾಲೂಕಿನಲ್ಲಿ ಗುಚ್ಚಗಳನ್ನು ಬಾಳೆ, ಟೊಮೇಟೋ, ಕಲ್ಲಂಗಡಿ ಬೆಳೆಗಳ ಅನುಷ್ಠಾನ, ತೋಟಗಾರಿಕೆಗೆ ಬೆಳೆಗಳನ್ನು ಗುಚ್ಚ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಲಾಗುತ್ತದೆ. ಹನಿ ನೀರಾವರಿ ಪದ್ಧತಿ ಕಡ್ಡಾಯವಾಗಿದ್ದು ತೋಟಗಾರಿಕೆ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸುವುದು, ಕೊಯ್ಲೋತ್ತರ ಸರಪಳಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವುದು, ಸಂಸ್ಕರಣಾ ಹಾಗೂ ಮೌಲ್ಯವರ್ಧನೆಗೆ ಪ್ರೋತ್ಸಾಹಿಸಲಾಗುತ್ತದೆ.
ತೋಟಗಾರಿಕೆ ಮತ್ತು ತಾರಸಿ ತೋಟಗಳ ಉತ್ತೇಜನ ಕಾರ್ಯಕ್ರಮವನ್ನು ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗುವುದು. ಉಚಿತವಾಗಿ ತರಕಾರಿ ಬೀಜ, ಸಸಿ, ರಸಗೊಬ್ಬರ ಒಳಗೊಂಡ ಮಿನಿಕಿಟ್ ನೀಡಲಾಗುವುದು.
ತಾಲೂಕು ಪಂಚಾಯತ್ ಯೋಜನೆಯಡಿ ರೈತರಿಗೆ ತೋಟಗಾರಿಕೆ ವಿಷಯಗಳ ಕುರಿತು ತೋಟಗಾರಿಕೆ ವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಸಂಶೋಧನಾ ಕೇಂದ್ರಗಳ ತಜ್ಞರಿಂದ ತರಬೇತಿ ನೀಡಲಾಗುವುದು.
ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಯೋಜನೆಯಡಿ ರೈತರಿಗೆ ಒಂದು ಎಕರೆ ಪ್ರದೇಶಕ್ಕೆ 1000 ರೂ. ಮೀರದಂತೆ ಉಚಿತವಾಗಿ ತೆಂಗು ಗಿಡಗಳನ್ನು ವಿತರಿಸಲಾಗುವುದು.
ಶೇಕಡ 50ರ ರಿಯಾಯಿತಿ ದರದಲ್ಲಿ ಸಸ್ಯ ಸಂರಕ್ಷಣೆ ಔಷಧಿ ಖರೀದಿಸಲು ಪ್ರೋತ್ಸಾಹ ನೀಡಲಾಗುವುದು. ಗರಿಷ್ಟ ಸಹಾಯಧನ 2000 ರೂ. ಪ್ರತಿ ಹೆಕ್ಟೇರ್‍ಗೆ ನೀಡಲಾಗುವುದು. ಸಸ್ಯ ಸಂರಕ್ಷಣಾ ಔಷಧಿಗಳಿಗೆ ಮಾರ್ಗಸೂಚಿ ಪ್ರಕಾರ 1.1 ದರ ಆಧರಿಸಿ ಸಹಾಯಧನ ಒದಗಿಸಲಾಗುವುದು.
ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಹೊಸ ತೆಂಗಿನ ತೋಟಗಳ ನಿರ್ಮಾಣ ಮಾಡಲು ಶೇ.90ರಷ್ಟು ಸಹಾಯಧನ ನೀಡಲಾಗುವುದು. ಮನೆ ಮುಂದೆ ನೆಡಲು 2 ರಿಂದ 4 ತೆಂಗಿನ ಸಸಿಗಳ ವಿತರಣೆ, ತರಕಾರಿ ಬೀಜ ವಿತರಣೆ ಮಾಡಲಾಗುವುದು.
ಈ ಎಲ್ಲ ಯೋಜನೆಗಳಡಿ ಸಹಾಯಧನ, ಸೌಲಭ್ಯ ಪಡೆಯಲು ಇಚ್ಚಿಸುವ ರೈತರು, ಸಂಘಸಂಸ್ಥೆಗಳು ಜಿಲ್ಲಾ, ಆಯಾ ತಾಲೂಕು, ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ನಿಗಧಿತ ಅರ್ಜಿ ನಮೂನೆಯಲ್ಲಿ ಪೂರಕ ದಾಖಲಾತಿಗಳೊಂದಿಗೆ ಮೇ 10 ರ ಒಳಗೆ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕರಾದ ಎಂ. ನಾಗರಾಜು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೇ 3ರಂದು ಮಾತಿನ ಮಹಾಕಾವ್ಯ ಸಾಕ್ಷ್ಯಚಿತ್ರ ಪ್ರದರ್ಶನ, ಬುದ್ಧನಗೆಯ ತಾಯಿನದಿ ಕಾವ್ಯಸಂಕಲನ ಲೋಕಾರ್ಪಣೆ ಸಮಾರಂಭ
ಚಾಮರಾಜನಗರ, ಮೇ. 2 :- ನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವು ವಿಶ್ವಜ್ಞಾನಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಅಂಗವಾಗಿ ಮೇ 3ರಂದು ಬೆಳಿಗ್ಗೆ 10 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಸಭಾಂಗಣದಲ್ಲಿ ಮಾತಿನ ಮಹಾಕಾವ್ಯ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಬುದ್ದನಗೆಯ ತಾಯಿನದಿ ಕಾವ್ಯಸಂಕಲನದ ಲೋಕಾರ್ಪಣೆ ಸಮಾರಂಭವನ್ನು ಏರ್ಪಡಿಸಿದೆ.
ಮೈಸೂರು ವಿವಿ ಪ್ರಭಾರ ಕುಲಪತಿಗಳಾದ ಪ್ರೊ. ದಯಾನಂದ ಮಾನೆ ಸಮಾರಂಭ ಉದ್ಘಾಟಿಸುವರು. ಸಂಸ್ಕøತಿ ಚಿಂತಕರಾದ ಪ್ರ. ಕೆ. ಮರುಳಸಿದ್ದಪ್ಪ ಬುದ್ದನಗೆಯ ತಾಯಿನದಿ ಕಾವ್ಯಸಂಕಲನ ಬಿಡುಗಡೆ ಮಾಡುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮಾತಿನ ಮಹಾಕಾವ್ಯ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡುವರು.
ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ಕೃಷ್ಣಮೂರ್ತಿ ಹನೂರು ವಿಮರ್ಶಾ ಲೇಖನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡುವರು. ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಶಿವಬಸವಯ್ಯ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮೇ 4ರಂದು ಜಿ.ಪಂ. ಸಾಮಾನ್ಯ ಸಭೆ
ಚಾಮರಾಜನಗರ, ಮೇ.2:- ಚಾಮರಾಜನಗರ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯು ಮೇ 4ರಂದು ಬೆಳಿಗ್ಗೆ 11 ಗಂಟೆಗೆ ಅಧ್ಯಕ್ಷರಾದ ಎಂ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 9ರಂದು ತಾ.ಪಂ. ಸಾಮಾನ್ಯ ಸಭೆ
ಚಾಮರಾಜನಗರ, ಮೇ. 2 (ಕರ್ನಾಟಕ ವಾರ್ತೆ):- ಚಾಮರಾಜನಗರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಮೇ 9ರಂದು ಬೆಳಿಗ್ಗೆ 11 ಗಂಟೆಗೆ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲು ಹಾಲು ಉತ್ಪಾದಕರಿಗೆ ಮನವಿ
ಚಾಮರಾಜನಗರ, ಮೇ. 2 (ಕರ್ನಾಟಕ ವಾರ್ತೆ):- ಹಾಲು ಉತ್ಪಾದಕರು ಹಾಲಿನ ಪ್ರೋತ್ಸಾಹಧನ ಪಡೆಯಲು ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ಹಾಲು ಉತ್ಪಾದಕರ ಸಂಘಗಳಿಗೆ ತುರ್ತಾಗಿ ಮಾಹಿತಿ ನೀಡುವಂತೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ತಿಳಿಸಿದೆ.
ರೈತರು ಕೈಗೊಂಡಿರುವ ಹೈನುಗಾರಿಕೆ ಉತ್ತೇಜಿಸುವ ಸಲುವಾಗಿ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ. ಪ್ರೋತ್ಸಾಹಧನವನ್ನು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಸರ್ಕಾರದ ಆದೇಶದಂತೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಆಧಾರ್ ಜೋಡಣೆಯಾಗದ ಬ್ಯಾಂಕ್ ಖಾತೆಗಳಿಗೆ ಪ್ರೋತ್ಸಾಹಧನ ಪಾವತಿ ಮಾಡಲಾಗಿಲ್ಲ. ಆಧಾರ್ ಸಂಖ್ಯೆ ಜೋಡಣೆಯಾಗದ ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ಪ್ರೋತ್ಸಾಹಧನ ಹಣವನ್ನು ಜಮೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರು ಅವರ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜ್ಞಾನ ಲೇಖಕರ ತರಬೇತಿ ಶಿಬಿರ – ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 2 :- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಉದಯೋನ್ಮುಖ ವಿಜ್ಞಾನ ಬರಹಗಾರರು ಕಾರ್ಯನಿರತ ವಿಜ್ಞಾನ ಪತ್ರಿಕೋದ್ಯಮಿಗಳು ಹಾಗೂ ವರದಿಗಾರರಿಗೆ ಜನಪ್ರಿಯ ವಿಜ್ಞಾನ ಬರವಣಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ.
ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ಇರುವ ವಿಜ್ಞಾನ ಶಿಕ್ಷಕರು ಯುವ ಪತ್ರಿಕಾ ವರದಿಗಾರರು ಪತ್ರಿಕೋದ್ಯಮ ವಿದ್ಯಾರ್ಥಿಗಳು ಚಿತ್ರ ನಿರೂಪಕರು, ರೇಡಿಯೋ ಭಾಷಣಕಾರರು ಶಿಬಿರದಲ್ಲಿ ಭಾಗವಹಿಸಬಹುದು.
ಮೇ ತಿಂಗಳ ಕೊನೆಯ ವಾರದಲ್ಲಿ ಶಿಬಿರ ಆಯೋಜಿಸಲಾಗುತ್ತಿದ್ದು ನುರಿತ ವಿಜ್ಞಾನ ಬರಹಗಾರರು ಸಂವಹನಕಾರರಿಂದ ವಿಜ್ಞಾನ ಬರವಣಿಗೆಯ ಕುರಿತು ಕೌಶಲ್ಯ ಆಕರ ಶಬ್ಧ ಬಳಕೆ ಅನುವಾದ ಇನ್ನಿತರ ವಿಷಯಗಳ ತರಬೇತಿ ನೀಡಲಾಗುವುದು.
20 ರಿಂದ 40ರ ವಯೋಮಾನದವರಿಗೆ ಆದ್ಯತೆ ನೀಡಲಾಗುವುದು. ನೋಂದಣಿ ಉಚಿತವಾಗಿದ್ದು ಊಟ, ವಸತಿ ಹಾಗೂ ಕರ್ತವ್ಯ ಸಹಿತ ರಜೆ (ಓಓಡಿ) ಸೌಲಭ್ಯ ಒದಗಿಸಲಾಗುವುದು.
ಆಸಕ್ತರು ಅವರ ಕಿರುಪರಿಚಯ, ವಿಳಾಸ, ದೂರವಾಣಿ ಸಂಖ್ಯೆ, ಇ ಮೇಲ್ ಐಡಿ ಇನ್ನಿತರ ವಿವರಗಳು ಮತ್ತು ಎಲ್ಲೂ ಪ್ರಕಟಗೊಳ್ಳದ 800 ಮತ್ತು 250 ಪದಗಳ ಎರಡು ಕನ್ನಡ ವೈಜ್ಞಾನಿಕ ಲೇಖನಗಳ ಸ್ವರಚಿತ ಪ್ರತಿಯೊಂದಿಗೆ ಅರ್ಜಿಯನ್ನು ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ.24/2, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560070 ಇ ಮೇಲ್ :ಞಡಿvಠಿ.iಟಿಜಿo@gmಚಿiಟ.ಛಿom ಈ ವಿಳಾಸಕ್ಕೆ ಮೇ 5ರೊಳಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ ಪರಿಷತ್ತಿನ ಕಚೇರಿ (080-26718939/26718962) ಅಥವಾ ವಿಜ್ಞಾನ ಲೇಖಕರ ತರಬೇತಿ ಶಿಬಿರದ ರಾಜ್ಯ ಸಂಯೋಜಕರಾದ ದಾನಿ ಬಾಬೂರಾವ್ ಅವರ ಮೊಬೈಲ್ ಸಂ. 9448568360 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

No comments:
Post a Comment