ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಕೊನೆಗೂ ಸಾವು
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್ರಿಯಕರನಿಂದ ಮೋಸಕ್ಕೆ ಬಲಿಯಾಗಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ ನಡೆಸಿದ್ದ ವಿದ್ಯಾರ್ಥಿನಿ ಕೊನೆಗೂ ಇಂದು ಕೊನೆಯುಸಿರೆಳಿದ್ದಾಳೆ.
ಚಾಮರಾಜನಗರದಲ್ಲಿ 18 ರಂದು ಮೈಸೂರಿನ ಗಂಗೋತ್ರಿ ಲೇಔಟ್ ನ ನಿವಾಸಿ ಆರ್. ರಕ್ಷಿತ (21 ) ಆತ್ಮಹತ್ಯೆಗೆ ಯತ್ನ ನಡೆಸಿದ್ದಳು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು 22 ( ಸೋಮವಾರ) ಸಾವನ್ನಪ್ಪಿದ್ದಾಳೆ. . ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿ.ಎಸ್.ವಿಭಾಗದ 6 ಸೆಮಿಷ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ಕೆ ಎಸ್ ಆರ್ ಟಿ ಸಿ ಡ್ರೈವರ್ ಶ್ರೀನಿವಾಸ್ ಜೊತೆ ಪ್ರೇಮಿಸಿ ವಿವಾಹವಾಗಿದ್ದರು. ಅಂತರ್ಜಾತಿ ವಿವಾಹದ ಕಲಹ (ಶ್ರೀನಿವಾಸ ಕೊರಮ ಸಮುದಾಯಕ್ಕೆ ಸೇರಿದವನು. ರಕ್ಷಿತ ಒಕ್ಕಲಿಗ ಗೌಡ ಸಮುದಾಯದ ಹುಡುಗಿ. ) ಪೆಟ್ರೋಲ್ ಮಿಶ್ರಿತ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಅಂದು ಪ್ರೇರೆಪಸಿತ್ತು. ಬೆಂಕಿ ಹಚ್ಚಿಕೊಂಡ ಆರ್. ರಕ್ಷಿತ ಸಾವನ್ನಪ್ಪಿದ್ದಾಳೆ.ಪಟ್ಟಣ ಠಾಣೆಯಲ್ಲಿ ದೂರು ಧಾಖಲಿಸಿಕೊಂಡು ಕಳೆದ ಎರಡು ದಿನಗಳ ಹಿಂದೆಯೆ ಚಾಲಕ ಶ್ರೀನಿವಾಸ್ ಅನ್ನು ಬಂದಿಸಿದ್ದರು
ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್ರಿಯಕರನಿಂದ ಮೋಸಕ್ಕೆ ಬಲಿಯಾಗಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ ನಡೆಸಿದ್ದ ವಿದ್ಯಾರ್ಥಿನಿ ಕೊನೆಗೂ ಇಂದು ಕೊನೆಯುಸಿರೆಳಿದ್ದಾಳೆ.
ಚಾಮರಾಜನಗರದಲ್ಲಿ 18 ರಂದು ಮೈಸೂರಿನ ಗಂಗೋತ್ರಿ ಲೇಔಟ್ ನ ನಿವಾಸಿ ಆರ್. ರಕ್ಷಿತ (21 ) ಆತ್ಮಹತ್ಯೆಗೆ ಯತ್ನ ನಡೆಸಿದ್ದಳು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು 22 ( ಸೋಮವಾರ) ಸಾವನ್ನಪ್ಪಿದ್ದಾಳೆ. . ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿ.ಎಸ್.ವಿಭಾಗದ 6 ಸೆಮಿಷ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ಕೆ ಎಸ್ ಆರ್ ಟಿ ಸಿ ಡ್ರೈವರ್ ಶ್ರೀನಿವಾಸ್ ಜೊತೆ ಪ್ರೇಮಿಸಿ ವಿವಾಹವಾಗಿದ್ದರು. ಅಂತರ್ಜಾತಿ ವಿವಾಹದ ಕಲಹ (ಶ್ರೀನಿವಾಸ ಕೊರಮ ಸಮುದಾಯಕ್ಕೆ ಸೇರಿದವನು. ರಕ್ಷಿತ ಒಕ್ಕಲಿಗ ಗೌಡ ಸಮುದಾಯದ ಹುಡುಗಿ. ) ಪೆಟ್ರೋಲ್ ಮಿಶ್ರಿತ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಅಂದು ಪ್ರೇರೆಪಸಿತ್ತು. ಬೆಂಕಿ ಹಚ್ಚಿಕೊಂಡ ಆರ್. ರಕ್ಷಿತ ಸಾವನ್ನಪ್ಪಿದ್ದಾಳೆ.ಪಟ್ಟಣ ಠಾಣೆಯಲ್ಲಿ ದೂರು ಧಾಖಲಿಸಿಕೊಂಡು ಕಳೆದ ಎರಡು ದಿನಗಳ ಹಿಂದೆಯೆ ಚಾಲಕ ಶ್ರೀನಿವಾಸ್ ಅನ್ನು ಬಂದಿಸಿದ್ದರು
ಶಾಲೆಯಿಂದ ಹೊರಗುಳಿದ ಮಕ್ಕಳ ಸೇರ್ಪಡೆಗೆ ವಿಶೇಷ ದಾಖಲಾತಿ ಆಂದೋಲನ
S.VEERANHADRA SWAMY, --RAMASAMUDRA
ಚಾಮರಾಜನಗರ, ಮೇ. 22 :- ಶಾಲೆಯಿಂದ ಹೊರಗುಳಿದ ಎಲ್ಲಾ ಮಕ್ಕಳನ್ನು ಶಾಲಾ ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಉದ್ದೇಶದೊಂದಿಗೆ ಜಿಲ್ಲೆಯಲ್ಲಿ ವಿಶೇಷ ದಾಖಲಾತಿ ಆಂದೋಲನವನ್ನು ಕೈಗೊಳ್ಳಲಾಗಿದೆ. ಮೇ 15ರಿಂದಲೇ ಆಂದೋಲನವು ಪ್ರಾರಂಭವಾಗಿದ್ದು ಮೇ 31ರವರೆಗೂ ಮುಂದುವರೆಯಲಿದೆ.ಕಳೆದ 2016ರ ಡಿಸೆಂಬರ್ ತಿಂಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲಾಗಿದೆ. ಈ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಮಹತ್ತರ ಗುರಿಯೊಂದಿಗೆ ವಿಶೇಷ ದಾಖಲಾತಿ ಆಂದೋಲನ ನಡೆಸಲಾಗುತ್ತಿದೆ. ಜತೆಗೆ 5 ವರ್ಷ 10 ತಿಂಗಳು ವಯೋಮಾನದ ಎಲ್ಲ ಮಕ್ಕಳನ್ನು ಶಾಲೆಗೆ ದಾಖಲಿಸುವುದು, ಈಗಾಗಲೇ ಶಾಲೆಗೆ ಬರುತ್ತಿರುವ ಮಕ್ಕಳು ಶಾಲಾ ಪ್ರಾರಂಭದ ದಿನದಿಂದಲೇ ಶಾಲೆಗೆ ಹಾಜರಾಗುವಂತೆ ಮಾಡುವ ಉದ್ದೇಶದಿಂದ ಕಾಳಜಿ ವಹಿಸಿ ವಿಶೇಷ ದಾಖಲಾತಿ ಆಂದೋಲನ ಆರಂಭಿಸಲಾಗಿದೆ.
ಜನವಸತಿ, ಶಾಲೆ, ಕ್ಲಸ್ಟರ್, ಬ್ಲಾಕ್ ಹಾಗೂ ಜಿಲ್ಲಾಮಟ್ಟದಲ್ಲಿ ಆಂದೋಲನ ನಡೆಯಲಿದೆ. ಈ ಕುರಿತು ವ್ಯಾಪಕವಾಗಿ ಅರಿವು ಮೂಡಿಸಲು ಸಹ ಸೂಚನೆ ನೀಡಲಾಗಿದೆ. ಶಾಲಾ ದಾಖಲಾತಿ ಆಂದೋಲನದ ಅವಧಿಯಲ್ಲಿ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಣ ಆಸಕ್ತರು ಆಯಾ ಪ್ರದೇಶದಲ್ಲಿ ಲಭ್ಯವಿರುವ ಶಾಲಾ ಮಕ್ಕಳೊಂದಿಗೆ ಬ್ಯಾನರ್, ಜಾಥಾ, ಘೋಷಣೆಗಳ ಮೂಲಕ ಸಮುದಾಯದಲ್ಲಿ ಅರಿವು ಮೂಡಿಸಲು ನಿರ್ಧರಿಸಲಾಗಿದೆ. ಸಂಜೆಯ ವೇಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಟಕ, ಸಾಕ್ಷ್ಯಚಿತ್ರ ಪ್ರದರ್ಶನ, ಜಾನಪದ ಗೀತೆ, ಇನ್ನಿತರ ಕಲಾ ಮಾಧ್ಯಮಗಳ ಮೂಲಕ ಶಿಕ್ಷಣದ ಮಹತ್ವವನ್ನು ತಿಳಿಸಲಾಗುತ್ತದೆ.
ಶಾಲಾ ವ್ಯಾಪ್ತಿಯ ಜನವಸತಿ ಪ್ರದೇಶದ ಎಲ್ಲ ಮನೆಗಳಿಗೆ ಮುಖ್ಯ ಶಿಕ್ಷಕರು, ಎಸ್‍ಡಿಎಂಸಿ, ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಶಾಲೆಗೆ ದಾಖಲಾಗಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಶಾಲಾ ಪ್ರಾರಂಭದ ದಿನವೇ ಶಾಲೆಗೆ ಹಾಜರಾಗಲು ಪೋಷಕರೊಂದಿಗೆ ಸಮಾಲÉೂೀಚಿಸಬೇಕು. 5 ವರ್ಷ 10 ತಿಂಗಳು ತುಂಬಿದ ಎಲ್ಲ ಮಕ್ಕಳು 1ನೇ ತರಗತಿಗೆ ಕಡ್ಡಾಯವಾಗಿ ದಾಖಲಾತಿ ಮಾಡುವಂತೆ ತಿಳಿಸಲಾಗಿದೆ.
ದಾಖಲಾತಿ ಆಂದೋಲನಕ್ಕೆ ಗ್ರಾಮದ ವಿದ್ಯಾವಂತ ಯುವಸಂಘಗಳು, ಸ್ಥಳೀಯ ಸ್ವಯಂ ಸೇವಾಸಂಘಗಳು, ಸರ್ಕಾರೇತರ ಸಂಸ್ಥೆಗಳು, ಶಾಲಾ ಸಿಬ್ಬಂದಿ, ನಾಕರಿಕರ ಸಹಕಾರ ಪಡೆಯುವಂತೆಯೂ ಶಿಕ್ಷಣ ಇಲಾಖೆ ಸೂಚಿಸಿದೆ.
ಕೃಷಿ ಹಾಗೂ ಇತರ ಕ್ಷೇತ್ರಗಳಲ್ಲಿ ದಿನಗೂಲಿಯಾಗಿ ಕಾರ್ಯನಿರ್ವಹಿಸುತ್ತಿರುವ ಪೋಷಕರು ಹಾಗೂ ಅವರ ಮಕ್ಕಳ ಪಟ್ಟಿಯನ್ನು ಸಮೀಕ್ಷೆ ಸಂದರ್ಭದಲ್ಲಿ ತಯಾರಿಸಲಾಗಿದೆ. ಈ ಪಟ್ಟಿ ಆಧರಿಸಿ ಹೊಲ ಗದ್ದೆ, ಅಂಗಡಿ ಹೋಟೆಲ್, ಕಟ್ಟಡ ಕಾಮಗಾರಿ, ಇಟ್ಟಿಗೆ, ಸುಣ್ಣದ ಬಟ್ಟಿಯಂತಹ ಕೆಲಸ ಸ್ಥಳದಲ್ಲಿ ಪೋಷಕರನ್ನು ಹಾಗೂ ಕೆಲಸ ನೀಡುವ ಮಾಲೀಕರನ್ನು ಭೇಟಿ ಮಾಡಿ ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಮನವೊಲಿಸುವ ಕಾರ್ಯವು ಮಾಡಲಾಗುತ್ತದೆ.
ಬಾಲ್ಯವಿವಾಹ ಅಥವಾ ಬೇರೆ ಕಾರಣಗಳಿಂದ ಶಾಲೆ ಬಿಟ್ಟಿದ್ದಲ್ಲಿ ಅಂತಹ ಮಕ್ಕಳನ್ನು ಪೋಷಕರು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಕಾರ್ಯಕರ್ತೆಯರ ಸಹಾಯದೊಂದಿಗೆ ಶಾಲೆಗೆ ದಾಖಲಿಸುವ ಕೆಲಸವನ್ನು ನಿರ್ವಹಿಸಲಾಗುತ್ತದೆ.
ಈ ವಿಶೇಷ ದಾಖಲಾತಿ ಆಂದೋಲನವಲ್ಲದೆ 6 ರಿಂದ 14ರ ವಯೋಮಾನದ ಎಲ್ಲ ಮಕ್ಕಳು ಶಾಲೆಗೆ ದಾಖಲಾಗುವುದನ್ನು ಖಾತರಿ ಪಡಿಸಿಕೊಳ್ಳಲು ಜೂನ್ 1 ರಿಂದ 30ರವರೆಗೆ ಸಾಮಾನ್ಯ ದಾಖಲಾತಿ ಆಂದೋಲನವನ್ನು ಶಿಕ್ಷಣ ಇಲಾಖೆ ನಡೆಸಲು ಸಿದ್ಧತೆ ಕೈಗೊಳ್ಳುತ್ತಿದೆ.
ವಿಶೇಷ ದಾಖಲಾತಿ ಆಂದೋಲನದ ಅವಧಿಯಲ್ಲಿ 5 ವರ್ಷ 10 ತಿಂಗಳು ವಯೋಮಾನದಿಂದ 14 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಶಾಲಾ ಮುಖ್ಯವಾಹಿನಿಗೆ ಸೇರದೆ ಉಳಿದಿದ್ದಲ್ಲಿ ಅಂತಹ ಮಕ್ಕಳ ಪಟ್ಟಿಯನ್ನು ತಯಾರಿಸಿಕೊಂಡು ಶಾಲಾ ಸೇರ್ಪಡೆಗೆ ಕ್ರಿಯಾ ಯೋಜನೆ ತಯಾರಿಸಲಾಗುತ್ತದೆ. 5 ರಿಂದ 6ನೇ ತರಗತಿ, 8 ರಿಂದ 9ನೇ ತರಗತಿಗೆ ಉತ್ತೀರ್ಣರಾಗಿದ್ದು ಶಾಲೆಗೆ ಹೋಗದೇ ಇದ್ದಲ್ಲಿ ಮತ್ತೆ ಶಾಲೆಗೆ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ.
ಹೊರ ರಾಜ್ಯಗಳಿಂದ ಬಂದು ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುತ್ತಿರುವ ಬಾಲಮಂದಿರದಲ್ಲಿ ವ್ಯವಸ್ಥೆ ಕಲ್ಪಿಸುವುದು, ಬಾಲಕಾರ್ಮಿಕ ಮಕ್ಕಳಿಗೆ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯಡಿ ಶಾಲೆಗಳಿಗೆ ದಾಖಲಿಸುವ ಕಾರ್ಯ ನಿರ್ವಹಿಸಲಾಗುತ್ತದೆ.
ಒಟ್ಟಾರೆ ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ಪ್ರತಿಯೊಂದು ಮಗುವಿಗೂ ಶಿಕ್ಷಣ ಹಕ್ಕು ಮೂಲಭೂತ ಹಕ್ಕಾಗಿದೆ. ಎಲ್ಲ ಮಕ್ಕಳಿಗೂ ಗುಣಾತ್ಮಕ ಶಿಕ್ಷಣ ನೀಡುವುದು ಆದ್ಯ ಕರ್ತವ್ಯವಾಗಿದೆ. ತಾರತಮ್ಯವಿಲ್ಲದೆ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬ ಸದುದ್ದೇಶದೊಂದಿಗೆ ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ದಾಖಲಾಗಬೇಕು. ದಾಖಲಾದ ಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆಯಬೇಕು ಎಂಬ ಗುರಿಯೊಂದಿಗೆ ವಿಶೇಷ ದಾಖಲಾತಿ ಆಂದೋಲನ ಹಾಗೂ ಸಾಮಾನ್ಯ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಈ ಎರಡೂ ಶಿಕ್ಷಣ ಸಂಬಂಧಿ ಮಹತ್ವದ ಆಂದೋಲನಕ್ಕೆ ನಾಗರಿಕರು, ಸ್ವಯಂಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿ, ಸಿಬ್ಬಂದಿ, ಪೋಷಕರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುವ ಮೂಲಕ ಮಕ್ಕಳನ್ನು ಶಾಲೆಗೆ ದಾಖಲಿಸಲು ನೆರವಾಗಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಮನವಿ ಮಾಡಿದ್ದಾರೆ.ಮೇ.
ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಜಾಥ
ಚಾಮರಾಜನಗರ ಮೇ 22- ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಮೇ 2017ರ ಜಾಥಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಂ ರಾಮಚಂದ್ರªರವರು ಹಸಿರು ಬಾವುಟ ತೋರಿಸುವ ಮುಖಾಂತರ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಈ ಜಾಥಾ ಕಾರ್ಯಕ್ರಮದಲ್ಲಿ ಈ ಜಾಥಾ ಕಾರ್ಯಕ್ರಮವನ್ನು ಡಾ. ಹರೀಶ್ ಕುಮಾರ್ ಸಿ.ಇ.ಒ ಜಿಲ್ಲಾ ಪಂಚಾಯಿತ್ ಚಾಮರಾಜನಗರ, ಡಾ. ಕೆ. ಹೆಚ್. ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಚಾಮರಾಜನಗರ, ಡಾ. ಎಂ. ಅನಿಲ್ ಕುಮಾರ್, ಜಿಲ್ಲಾ ಮಲೇರಿಯಾಧಿಕಾರಿಗಳು, ಚಾಮರಾಜನಗರ, ಇವರುಗಳ ನೇತೃತ್ವದಲ್ಲಿ ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾರ್ಯಾಕ್ರಮಾಧಿಕಾರಿಗಳಾದ ಡಾ. ಎಂ. ನಾಗರಾಜು, ಡಾ. ವಿಶ್ವೇಶ್ವಯ್ಯ, ಡಾ. ಮಹದೇವು, ಡಾ. ರಾಜು, ಹಿರಿಯ ವೈದ್ಯಾಧಿಕಾರಿ ಡಾ. ಲೋಹಿತ್ , ಡಾ. ಶ್ರೀನಿವಾಸ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಹಿರಿಯ ಆರೋಗ್ಯ ಸಹಾಯಕರುಗಳಾದ ಎಂ. ನಾಗರಾಜು, ಎನ್. ದಯಾನಂದ ದ್ವಾರಕೀಶ್, ಗೋಣಿಬಸಪ್ಪ, ಎಂ. ಹೆಚ್. ಮಂಜುನಾಥ, ದೊರೆಸ್ವಾಮಿ ನಾಯಕ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಸಿಬ್ಬಂದಿ ವರ್ಗದವರು ರವರು ಭಾಗವಹಿಸಿದ್ದರು.
ಈ ಜಾಥಾ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ನರ್ಸಿಂಗ್ ಶಾಲೆಯ ಮಕ್ಕಳು, ಮನೋನಿಧಿ ಮತ್ತು ಸರ್ಕಾರಿ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಯವರು ಜಾಥಾ ಮೆರವಣಿಗೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ಸಭೆಯನ್ನು ಹಮ್ಮಿಕೊಂಡು ಡೆಂಗ್ಯೂ ಕಾಯಿಲೆ ಹರಡುವ ರೀತಿ, ಮುಂಜಾಗ್ರತೆ ಹಾಗೂ ನಿಯಂತ್ರಣ ಕ್ರಮದಲ್ಲಿ ಸಾರ್ವಜನಿಕರ ಪಾತ್ರ ಇತರ ಇಲಾಖಾ ಅಧಿಕಾರಿಗಳ ಸಹಭಾಗಿತ್ವದ ಬಗ್ಗೆ ಮನವರಿಕೆ ಮಾಡಲಾಯಿತು.
ಈ ಜಾಥಾ ಕಾರ್ಯಕ್ರಮದಲ್ಲಿ ಈ ಜಾಥಾ ಕಾರ್ಯಕ್ರಮವನ್ನು ಡಾ. ಹರೀಶ್ ಕುಮಾರ್ ಸಿ.ಇ.ಒ ಜಿಲ್ಲಾ ಪಂಚಾಯಿತ್ ಚಾಮರಾಜನಗರ, ಡಾ. ಕೆ. ಹೆಚ್. ಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಚಾಮರಾಜನಗರ, ಡಾ. ಎಂ. ಅನಿಲ್ ಕುಮಾರ್, ಜಿಲ್ಲಾ ಮಲೇರಿಯಾಧಿಕಾರಿಗಳು, ಚಾಮರಾಜನಗರ, ಇವರುಗಳ ನೇತೃತ್ವದಲ್ಲಿ ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾರ್ಯಾಕ್ರಮಾಧಿಕಾರಿಗಳಾದ ಡಾ. ಎಂ. ನಾಗರಾಜು, ಡಾ. ವಿಶ್ವೇಶ್ವಯ್ಯ, ಡಾ. ಮಹದೇವು, ಡಾ. ರಾಜು, ಹಿರಿಯ ವೈದ್ಯಾಧಿಕಾರಿ ಡಾ. ಲೋಹಿತ್ , ಡಾ. ಶ್ರೀನಿವಾಸ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಹಿರಿಯ ಆರೋಗ್ಯ ಸಹಾಯಕರುಗಳಾದ ಎಂ. ನಾಗರಾಜು, ಎನ್. ದಯಾನಂದ ದ್ವಾರಕೀಶ್, ಗೋಣಿಬಸಪ್ಪ, ಎಂ. ಹೆಚ್. ಮಂಜುನಾಥ, ದೊರೆಸ್ವಾಮಿ ನಾಯಕ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಸಿಬ್ಬಂದಿ ವರ್ಗದವರು ರವರು ಭಾಗವಹಿಸಿದ್ದರು.
ಈ ಜಾಥಾ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ನರ್ಸಿಂಗ್ ಶಾಲೆಯ ಮಕ್ಕಳು, ಮನೋನಿಧಿ ಮತ್ತು ಸರ್ಕಾರಿ ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಯವರು ಜಾಥಾ ಮೆರವಣಿಗೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ಸಭೆಯನ್ನು ಹಮ್ಮಿಕೊಂಡು ಡೆಂಗ್ಯೂ ಕಾಯಿಲೆ ಹರಡುವ ರೀತಿ, ಮುಂಜಾಗ್ರತೆ ಹಾಗೂ ನಿಯಂತ್ರಣ ಕ್ರಮದಲ್ಲಿ ಸಾರ್ವಜನಿಕರ ಪಾತ್ರ ಇತರ ಇಲಾಖಾ ಅಧಿಕಾರಿಗಳ ಸಹಭಾಗಿತ್ವದ ಬಗ್ಗೆ ಮನವರಿಕೆ ಮಾಡಲಾಯಿತು.
23ರಂದು ನಗರದಲ್ಲಿ ಕವಿ ಸರ್ವಜ್ಞ ಜಯಂತಿ ದಿನಾಚರಣೆ
ಚಾಮರಾಜನಗರ, ಮೇ. 22 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕವಿ ಸರ್ವಜ್ಞ ಜಯಂತಿಯನ್ನು ಮೇ 23ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ 9.30 ಗಂಟೆಗೆ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಬಳಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಸರ್ವಜ್ಞ ಅವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡುವರು. ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಉದ್ಫಾಟಿಸುವರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನ ಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆ ಅಧ್ಯಕ್ಷರಾದ ಎಸ್.ಎನ್. ರೇಣುಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವೆಂಕಟಯ್ಯನಛತ್ರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಭಾರÀ ಪ್ರಾಂಶುಪಾಲರಾದ ಮಹೇಶ್ ಹರವೆ ಮುಖ್ಯ ಭಾಷಣ ಮಾಡುವರು.
ಕಾರ್ಯಕ್ರಮಕ್ಕೂ ಮೊದಲು ನಗರದ ಕದಳಿ ಮಹಿಳಾ ವೇದಿಕೆಯಿಂದ ವಚನಗಾಯನ ಏರ್ಪಡಿಸಲಾಗಿದೆ
ಮೇ 25ರವರೆಗೆ ಕೌಶಲ್ಯ ನೋಂದಣಿ ವಿಸ್ತರಣೆ
ಚಾಮರಾಜನಗರ ಮೇ22:- ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ನಿರುದ್ಯೋಗಿ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಶಿಬಿರವನ್ನು ಮೇ 25ರವರೆಗೆ ವಿಸ್ತರಿಸಲಾಗಿದ್ದು ತರಬೇತಿ ಆಕಾಂಕ್ಷಿತರು ನೋಂದಾಯಿಸಿಕೊಳ್ಳಲು ಅವಕಾಶವಿದೆ.ಯುವಜನರು, ಅಲ್ಪಸಂಖ್ಯಾತರು, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಕೌಶಲ್ಯ ಕರ್ನಾಟಕ ನೋಂದಣಿ ಅಭಿಯಾನವನ್ನು ಮೇ 25ರವರೆಗೂ ಸರ್ಕಾರದ ಆದೇಶದಂತೆ ವಿಸ್ತರಿಸಲಾಗಿದೆ.
ತರಬೇತಿ ಪಡೆಯಲು ಇಚ್ಚಿಸುವ ಯುವಜನರು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ತೆರೆಯಲಾಗಿರುವ ನೋಂದಣಿ ಕೇಂದ್ರಗಳಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ಜ. 27ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಮೇ. 22 :- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಮೇ 27ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ಕುಂದುಕೊರತೆಗಳಿದ್ದಲ್ಲಿ ದೂರವಾಣಿ ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕೊಳ್ಳೇಗಾಲ : ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 22 - ಕೊಳ್ಳೇಗಾಲ ತಾಲೂಕಿನ ವಿವಿಧೆಡೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಣೆಯಾಗುತ್ತಿರುವ ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿಗಳನ್ನು ಸಂಬಂಧಪಟ್ಟ ವಿದ್ಯಾರ್ಥಿನಿಲಯ ಅಥವಾ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಜೂನ್ 10 ಕಡೆಯ ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಚಾ.ನಗರ ತಾಲೂಕು : ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 22 - ಚಾಮರಾಜನಗರ ತಾಲೂಕಿನ ವಿವಿಧೆಡೆ ಇರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ವಹಣೆಯಲ್ಲಿರುವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಚಾಮರಾಜನಗರ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಬಾಲಕಿಯರ ವಿದ್ಯಾರ್ಥಿನಿಲಯ, ಜೆಎಸ್‍ಎಸ್ ಅನಾಥಾಲಯ, ಮರಿಯಾಲದಲ್ಲಿರುವ ಶ್ರೀ ಮುರುಘರಾಜೇಂದ್ರ ಅನುದಾನಿತ ಖಾಸಗಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ತಾಲೂಕಿನ ವೆಂಕಟಯ್ಯನಛತ್ರ, ಅರಕಲವಾಡಿ, ಕಾಗಲವಾಡಿಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಹರವೆಯಲ್ಲಿರುವ ಶ್ರೀ ಗುರುಮಲ್ಲೇಶ್ವರ ಅನುದಾನಿತ ಖಾಸಗಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ವೈದ್ಯಕೀಯ ಸೌಲಭ್ಯ ಸೇರಿದಂತೆ ಇತರೆ ಅನುಕೂಲತೆಗಳನ್ನು ಕಲ್ಪಿಸಲಾಗುತ್ತದೆ.
ಪ್ರವರ್ಗ 1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ್ದು 5 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು.
ಅರ್ಜಿಯನ್ನು ಆಯಾ ನಿಲಯದ ಮೇಲ್ವಿಚಾರಕರು ಅಥವಾ ನಗರದ ಸತ್ತಿ ರಸ್ತೆಯ ಡಿ. ದೇವರಾಜ ಅರಸು ಭವನದಲ್ಲಿರುವ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಕಚೇರಿಯಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 10ರೊಳಗೆ ಸಲ್ಲಿಸಬೇಕು. ವಿವರಗಳಿಗೆ ಸದರಿ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಿಗೆ ತರಬೇತಿ : ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 22 (:- ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಿಗೆ ಪ್ರಮುಖ ದಿನಪತ್ರಿಕೆ, ಎಲೆಕ್ಟ್ರಾನಿಕ್ ಮಾಧ್ಯಮಗಳ ಕಚೇರಿಯಲ್ಲಿ 10 ತಿಂಗಳ ತರಬೇತಿ ಕೊಡಿಸುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಪತ್ರಿಕೋದ್ಯಮ ಪದವಿ ಮುಗಿಸಿ ಹೊರಬರುವ ವಿದ್ಯಾರ್ಥಿಗಳಿಗೆ ಮಾಧ್ಯಮ ಕಚೇರಿಯ ಎಲ್ಲ ವಿಭಾಗಗಳ ತರಬೇತಿಯನ್ನು ನೀಡುವ ಮೂಲಕ ತರಬೇತಿ ಹೊಂದಿದ ಪತ್ರಕರ್ತರಾಗುವಂತೆ ಸಜ್ಜುಗೊಳಿಸುವುದು ಅಕಾಡೆಮಿಯ ಉದ್ದೇಶವಾಗಿದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಾದ 5 ಮಂದಿ ಹಾಗೂ ಇತರೆ ವರ್ಗಗಳಿಗೆ ಸೇರಿದ ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಾದ 5 ಮಂದಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ 10 ತಿಂಗಳ ಕಾಲ ಮಾಸಿಕ 10 ಸಾವಿರ ರೂ,ಗಳನ್ನು ಗೌರವಧನವಾಗಿ ನೀಡಲಾಗುತ್ತದೆ.
ಕರ್ನಾಟಕದ ಯಾವುದೇ ವಿವಿಯಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಂವಹನ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ 28 ವರ್ಷದೊಳಗಿನ ಅಭ್ಯರ್ಥಿಗಳು ಸ್ವವಿವರ, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ವಿದ್ಯಾರ್ಹತೆಗೆ ಸಂಬಂಧಿಸಿದ ಇತರೆ ದಾಖಲೆ, ಛಾಯಾಚಿತ್ರಗಳನ್ನು ಸ್ಕ್ಯಾನ್ ಮಾಡಿ ಇ ಮೇಲ್ ವಿಳಾಸವಾದ ಣಡಿಚಿiಟಿeeಞmಚಿ@gmಚಿiಟ.ಛಿom ಅಥವಾ ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಸೆಂಟರ್, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇಲ್ಲಿಗೆ ಅಂಚೆ ಮೂಲಕ ಮೇ 30ರೊಳಗೆ ಅರ್ಜಿಯನ್ನು ಕಳುಹಿಸಬೇಕು ಎಂದು ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಎಂ. ಸಿದ್ಧರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃತ ವೃದ್ಧರ ಸಂಬಂಧಿಕರ ಮಾಹಿತಿಗೆ ಮನವಿ
ಚಾಮರಾಜನಗರ, ಮೇ. 22 - ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ದರೊಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮೃತಪಟ್ಟಿದ್ದು ಸದರಿ ವ್ಯಕ್ತಿಯ ಸಂಬಂಧಿಕರÀು ಇದ್ದಲ್ಲಿ ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಕೋರಲಾಗಿದೆ.
ಸುಮಾರು 70 ವಯಸ್ಸಿನವರಾಗಿದ್ದು ಕೋಲು ಮುಖ, ಕುರುಚಲು ಬಿಳಿ ಗಡ್ಡ ಮೀಸೆ, ನೀಳವಾದ ಮೂಗÀು, ಗುಳಿ ಬಿದ್ದ ಕಣ್ಣುಗಳು, ಎಣ್ಣೆಗೆಂಪು ಬಣ್ಣ, ಕೃಶ ಶರೀರವಿದ್ದು ಬೊಕ್ಕ ತಲೆ ಇರುತ್ತದೆ. ಸದರಿ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08226-222058 ಮೊಬೈಲ್ 9480804648, ಗ್ರಾಮಾಂತರ ನಿರೀಕ್ಷಕರ ಕಚೇರಿ 08226-224630, ಡಿವೈಎಸ್‍ಪಿ ಕಚೇರಿ 08226-222090, ಪೊಲೀಸ್ ಕಂಟ್ರೋಲ್ ರೂಂ 08226-222383 ಸಂಪರ್ಕಿಸುವಂತೆ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಆನಂದೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
No comments:
Post a Comment