ಕರ್ನಾಟಕ ಸರ್ಕಾರ
ಪೊಲೀಸ್ ಅಧೀಕ್ಷಕರವರ ಕಛೇರಿ,
ಚಾಮರಾಜನಗರ ಜಿಲ್ಲೆ,
ಚಾಮರಾಜನಗರ
---------------------------------------------------------------
ದಿನಾಂಕ 24.05.2017
ಆದ್ದರಿಂದ ಮಾನವ ರಹಿತ ವಾಯು ವಾಹನಗಳಾದ (Uಟಿmಚಿಟಿಟಿeಜ ಂeಡಿiಚಿಟ ಗಿehiಛಿಟe/Uಂಗಿ) ಅಥವಾ ಮಾನವ ರಹಿತ ಏರಕ್ರಾಪ್ಟ್ (Uಟಿmಚಿಟಿಟಿeಜ ಂiಡಿಛಿಡಿಚಿಜಿಣ Sಥಿsಣems/UಂS), ಉದಾಹರಣೆ ಡ್ರೋಣ್ ಕ್ಯಾಮೆರಾ/ಆಡಿoಟಿe ಅಚಿmeಡಿಚಿ ಗಳ ಬಳಕೆಯ ಬಗ್ಗೆ ಅಂತಿಮ ಮಾರ್ಗದರ್ಶಿ ಸೂತ್ರಗಳ ಪರಾಮರ್ಷಣೆಯಾಗುವವರೆಗೆ ವಾಣಿಜ್ಯ ಉದ್ದೇಶ ಅಥವಾ ಮನರಂಜನೆಯ ಉದ್ದೇಶ ಅಥವಾ ಬೇರ್ಯಾವುದೇ ಉದ್ದೇಶದಿಂದ ಸಾರ್ವಜನಿಕರು ಬಳಕೆ ಮಾಡದಂತೆ ಕೋರಲಾಗಿದೆ.
(ಕುಲ್‍ದೀಪ್ ಕುಮಾರ್ ಆರ್ ಜೈನ್, ಐ.ಪಿ.ಎಸ್)
ಪೊಲೀಸ್ ಅಧೀಕ್ಷಕರು,
ಚಾಮರಾಜನಗರ ಜಿಲ್ಲೆ.
______________________________________________________________________________
ಮಾನವ ರಹಿತ ವಾಯು ವಾಹನ, ಡ್ರೋಣ್ ಕ್ಯಾಮರಾ ಬಳಸದಂತೆ ಮನವಿ
ಚಾಮರಾಜನಗರ, ಮೇ. 24 - ಮಾನವ ರಹಿತ ವಾಯು ವಾಹನಗಳಾದ (Uಟಿmಚಿಟಿಟಿeಜ ಂeಡಿiಚಿಟ ಗಿehiಛಿಟe/Uಂಗಿ) ಅಥವಾ ಮಾನವ ರಹಿತ ಏರಕ್ರಾಪ್ಟ್ (Uಟಿmಚಿಟಿಟಿeಜ ಂiಡಿಛಿಡಿಚಿಜಿಣ Sಥಿsಣems/UಂS), ಉದಾಹರಣೆ ಡ್ರೋಣ್ ಕ್ಯಾಮೆರಾಗಳ ಬಳಕೆಯ ಬಗ್ಗೆ ಅಂತಿಮ ಮಾರ್ಗದರ್ಶಿ ಸೂತ್ರಗಳ ಪರಾಮರ್ಶೆಯಾಗುವವರೆಗೆ ವಾಣಿಜ್ಯ, ಮನರಂಜನೆ ಅಥವಾ ಬೇರಾವುದೇ ಉದ್ದೇಶದಿಂದ ಸಾರ್ವಜನಿಕರು ಇವುಗಳನ್ನು ಬಳಕೆ ಮಾಡಬಾರದೆಂದು ಪೊಲೀಸ್ ಇಲಾಖೆ ತಿಳಿಸಿದೆ.
ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್‍ರವರು ಇತ್ತೀಚೆಗೆ ಸಾರ್ವಜನಿಕರು ಮಾನವ ರಹಿತ ವಾಯು ವಾಹನ (Uಟಿmಚಿಟಿಟಿeಜ ಂeಡಿiಚಿಟ ಗಿehiಛಿಟe/Uಂಗಿ) ಅಥವಾ ಮಾನವ ರಹಿತ ಏರಕ್ರಾಪ್ಟ್ (Uಟಿmಚಿಟಿಟಿeಜ ಂiಡಿಛಿಡಿಚಿಜಿಣ Sಥಿsಣems/UಂS) ಉದಾಹರಣೆ ಡ್ರೋಣ್ ಕ್ಯಾಮೆರಾಗಳ ಬಳಕೆ ಮಾಡುತ್ತಿರುವುದನ್ನು ಪ್ರಸ್ತಾಪಿಸಿ ಭಾರತದಂತಹ ಹೆಚ್ಚು ಜನಸಾಂದ್ರತೆಯ ದೇಶದಲ್ಲಿ ವಾಣಿಜ್ಯ, ಮನರಂಜನೆ ಅಥವಾ ಬೇರಾವುದೇ ಉದ್ದೇಶದಿಂದ ಬಳಕೆ ಮಾಡುವುದು ವಾಯು ಸಂಚಾರ ಸುರಕ್ಷತೆಯ ದೃಷ್ಠಿಯಿಂದ ಹಾಗೂ ಭದ್ರತಾ ದೃಷ್ಠಿಯಿಂದ ಸರಿಯಿಲ್ಲವೆಂದು ತಿಳಿಸಿರುತ್ತಾರೆ. ಇವುಗಳ ಬಳಕೆಯ ಬಗ್ಗೆ ಅಂತಿಮ ಮಾರ್ಗದರ್ಶಿ ಸೂತ್ರಗಳ ಪರಾಮರ್ಶೆಯಾಗುವವರೆಗೆ ಸರ್ಕಾರೇತರ ಸಂಸ್ಥೆಗಳು, ಸಂಘಟನೆಗಳು ಅಥವಾ ಯಾವುದೇ ವ್ಯಕ್ತಿ ಯಾವುದೇ ಕಾರಣದಿಂದ ಇವುಗಳನ್ನು ಬಳಸದಂತೆ ಪೊಲೀಸ್ ಅಧೀಕ್ಷಕರಾದ ಕುಲ್‍ದೀಪ್ ಕುಮಾರ್ ಆರ್. ಜೈನ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಗುಂಡ್ಲುಪೇಟೆ : ವಿದ್ಯಾರ್ಥಿನಿಲಯ, ಆಶ್ರಮ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 24:- ಗುಂಡ್ಲುಪೇಟೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ವಿದ್ಯಾರ್ಥಿನಿಲಯ ಹಾಗೂ ಆಶ್ರಮ ಶಾಲೆಗಳಿಗೆ ಪ್ರವೇಶಕ್ಕಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾರ್ವಜನಿಕ ಬಾಲಕರ ವಿದ್ಯಾರ್ಥಿನಿಲಯಗಳಾದ ಗುಂಡ್ಲುಪೇಟೆ ಟೌನ್, ಬೊಮ್ಮಲಾಪುರ, ಬಾಚಹಳ್ಳಿ, ಹಂಗಳ, ಕಬ್ಬಳ್ಳಿ, ಸಾರ್ವಜನಿಕ ಬಾಲಕಿಯರ ವಿದ್ಯಾರ್ಥಿನಿಲಯಗಳಾದ ಗುಂಡ್ಲುಪೇಟೆ ಟೌನ್, ಬೇಗೂರು, ಕಬ್ಬಳ್ಳಿ, ಎಸ್ ಟಿ ಆಶ್ರಮಶಾಲೆ, ಬಂಡೀಪುರ ಹಾಗೂ ಮದ್ದೂರು (1 ರಿಂದ 5ನೇ ತರಗತಿವರೆಗೆ), ಗುಂಡ್ಲುಪೇಟೆ ಟೌನ್‍ನಲ್ಲಿರುವ ಎಸ್ ಟಿ ಬಾಲಕಿಯರ ವಿದ್ಯಾರ್ಥಿನಿಲಯ, ಮೆಟ್ರಿಕ್ ನಂತರದ ಕಾಲೇಜು ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ 6 ರಿಂದ 10ನೇ ತರಗತಿಗೆ ಸೇರಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಪಠ್ಯಪುಸ್ತಕ, ಲೇಖನ ಸಾಮಗ್ತಿ, ಸಮವಸ್ತ್ರ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುವುದು.
ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಪ್ರಥಮ, ದ್ವಿತೀಯ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆಶ್ರಮ ಶಾಲೆಗಳಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ಅರ್ಜಿಗಳನ್ನು ಗುಂಡ್ಲುಪೇಟೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಆಯಾ ವಿದ್ಯಾರ್ಥಿನಿಲಯದಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಮೇ 30ರೊಳಗೆ ಆಯಾ ಕಚೇರಿಗೆ ಸಲ್ಲಿಸಬೇಕÉಂದು ಗುಂಡ್ಲುಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ. 27ರಂದು ಹರದನಹಳ್ಳಿಯಲ್ಲಿ ಸೆಸ್ಕ್ ಜನಸಂಪರ್ಕ ಸಭೆ
ಚಾಮರಾಜನಗರ, ಮೇ. 24 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಹರದನಹಳ್ಳಿ ಉಪವಿಭಾಗದ ಸೆಸ್ಕ್ ಕಚೇರಿಯಲ್ಲಿ ಮೇ 27ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಜನಸಂಪರ್ಕ ಸಭೆಯನ್ನು ನಡೆಸಲಿದೆ.
ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಭೆಗೆ ಹಾಜರಾಗಿ ತಿಳಿಸಬಹುದೆಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಚಿಂತನ ಮಂಥನ ಕಮ್ಮಟಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 24 :- ಕರ್ನಾಟಕ ಸಾಹಿತ್ಯ ಅಕಾಡೆಮಿಯು ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮೈಸೂರಿನ ವಿಶ್ವವಿದ್ಯಾನಿಲಯ ಆವರಣದಲ್ಲಿ ವಿಶೇಷ ಘಟಕ, ಗಿರಿಜನ ಉಪಯೋಜನೆ, ಸಾಮಾನ್ಯ ಯೋಜನೆಯಡಿಯಲ್ಲಿ ಮೈಸೂರು ವಿಭಾಗಮಟ್ಟದ ವಸತಿ ಸಹಿತ ಎರಡು ದಿನಗಳ ಡಾ.ಬಿ.ಆರ್. ಅಂಬೇಡ್ಕರ್ ಚಿಂತನ-ಮಂಥನ (ರಾಷ್ಟ್ರದ ಅಭಿವೃದ್ಧಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಕುರಿತ ಕಮ್ಮಟ) ಕಮ್ಮಟವನ್ನು ಏರ್ಪಡಿಸಲು ಉದ್ದೇಶಿಸಿ ಅರ್ಜಿ ಆಹ್ವಾನಿಸಿದೆ.
ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಶಿಕ್ಷಣ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಕಾರ್ಮಿಕ ಸಮುದಾಯ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ರೈತ ಸಮುದಾಯ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಮುದಾಯ, ಡಾ.ಬಿ.ಆರ್. ಅಂಬೇಡ್ಕರ್- ವರ್ಣ, ಜಾತಿ ವÀುತ್ತು ಅಸ್ಪøಶ್ಯತೆ, ಡಾ.ಬಿ.ಆರ್. ಅಂಬೇಡ್ಕರ್ - ಸಾಮಾಜಿಕ ವಿಮೋಚನೆ, ಡಾ.ಬಿ.ಆರ್. ಅಂಬೇಡ್ಕರ್ – ಧಾರ್ಮಿಕ ಚಿಂತನೆಗಳು, ಡಾ.ಬಿ.ಆರ್. ಅಂಬೇಡ್ಕರ್ – ಆರ್ಥಿಕ ಚಿಂತನೆಗಳು, ಡಾ.ಬಿ.ಆರ್. ಅಂಬೇಡ್ಕರ್ - ನೀರಾವರಿ ಚಿಂತನೆಗಳು, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಪ್ರಜಾಪ್ರಭುತ್ವದ ಚಿಂತನೆಗಳು, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ತಳ ಸಮುದಾಯದÀ ಹಕ್ಕುಗಳು, ಡಾ.ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯತೆ ಮತ್ತು ಪ್ರಬುದ್ಧ ಭಾರತದ ಕಲ್ಪನೆ ಈ ಎಲ್ಲ ವಿಷಯಗಳನ್ನು ಅಭ್ಯಾಸ ಮಾಡಿಯೇ ಅಭ್ಯರ್ಥಿಗಳು ಕಮ್ಮಟಕ್ಕೆ ಹಾಜರಾಗಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬಂದುಹೋಗಲು ಪ್ರಯಾಣ ಭತ್ಯೆ, ಊಟ ಉಪಾಹಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಜಿಲ್ಲೆಯ 18 ರಿಂದ 40ರ ವಯೋಮಿತಿಯಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿಯೊಂದಿಗೆ ವಯಸ್ಸಿಗೆ ಸಂಬಂಧಿಸಿದಂತೆ ಎಸ್ ಎಸ್ ಎಲ್ ಸಿ ಅಂಕಪಟ್ಟಿಯ ದೃಢೀಕೃತ ಪಟ್ಟಿ, ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಲಗತ್ತಿಸಬೇಕು. ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಇ ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು.
ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ ಸೈಟ್ hಣಣಠಿ://ಞಚಿಡಿಟಿಚಿಣಚಿಞಚಿsಚಿhiಣಥಿಚಿಚಿಛಿಚಿಜemಥಿ.oಡಿg ಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಡಾ. ಎಸ್. ನರೇಂದ್ರಕುಮಾರ್, ಸಮನ್ವಯಾಧಿಕಾರಿಗಳು, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ, ಮೈಸೂರು-570006 (9481818439) ಇವರಿಗೆ ಶ್ರೀಘ್ರವೇ ಕಳುಹಿಸಬೇಕು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಸಿ.ಎಚ್. ಭಾಗ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖಾದಿ ಗ್ರಾಮೋದ್ಯೋಗ ಮಂಡಳಿಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 24- ಕರ್ನಾಟಕ ರಾಜÀ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ 10 ಲಕ್ಷ ರೂ.ವರೆಗೆ ಬ್ಯಾಂಕುಗಳಿಂದ ಆರ್ಥಿಕ ಸಹಾಯ ಪಡೆದು ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಕೈಗಾರಿಕೆ ಸ್ಥಾಪಿಸುವ ಅಭ್ಯರ್ಥಿಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು 21 ರಿಂದ 35ರ ವಯೋಮಿತಿಯೊಳಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಯೋಧರು, ಅಂಗವಿಕಲರು, ಮಹಿಳೆಯರಾಗಿದ್ದಲ್ಲಿ ಗರಿಷ್ಟ ವಯೋಮಿತಿ 45 ವರ್ಷಗಳು. 8ನೇ ತರಗತಿ ಉತ್ತೀರ್ಣರಾಗಿರಬೇಕು. ಅರ್ಜಿಯನ್ನು ಆನ್ ಲೈನ್ ಮೂಲಕ (ವೆಬ್ ಸೈಟ್ ತಿತಿತಿ.ಛಿmegಠಿ.ಞಚಿಡಿ.ಟಿiಛಿ.iಟಿ) ಜೂನ್ 12ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧಿಕಾರಿಯನ್ನು (ಮೊಬೈಲ್ 9480825621) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ನವೋದಯ ಶಾಲೆಯಲ್ಲಿ 9ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 24- ಚಾಮರಾಜನಗರ ತಾಲೂಕು ಹೊಂಡರಬಾಳು ಗ್ರಾಮದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ 9ನೇ ತರಗತಿ ಪ್ರವೇಶಕ್ಕೆ ಪರಿಶಿಷ್ಟ ಪಂಗಡ ಸೇರಿದ ಗ್ರಾಮೀಣ ಬಾಲಕರೊಬ್ಬರಿಗೆ ಪ್ರವೇಶಕ್ಕೆ ಅವಕಾಶವಿದ್ದು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಜವಹರ್ ನವೋದಯ ವಿದ್ಯಾಲಯ ಕಚೇರಿ, ಸರ್ವಶಿಕ್ಷಣ ಅಭಿಯಾನ ಕೇಂದ್ರ ಸಂಸ್ಥೆಗಳಲ್ಲಿ ಪಡೆಯಬಹುದು. ವೆಬ್ ಸೈಟ್ ತಿತಿತಿ.ಟಿvshq.oಡಿg ಟಿಚಿvoಜಚಿಥಿಚಿhಥಿಜ.gov.iಟಿ ಅರ್ಜಿ ಲಭ್ಯವಿದೆ. ಅರ್ಜಿಗಳನ್ನು ಜೆರಾಕ್ಸ್ ಅಥವಾ ಟೈಪ್ ಮಾಡಿಸಿ ಭರ್ತಿ ಮಾಡಿ ನವೋದಯ ವಿದ್ಯಾಲಯ ಕಚೇರಿಗೆ ಮೇ 29ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
No comments:
Post a Comment