ಮಾಂಬಳ್ಳಿಯಲ್ಲಿ ಹೊಂಬಾಳೆ ಸಂಸ್ಥೆಯಿಂದ ‘ಭೀಮೋತ್ಸವ’
ಯಳಂದೂರು ಮೇ 09 :- ರಾಜ್ಯ ಮಟ್ಟದಲ್ಲಿ ಪ್ರತಿಷ್ಠಿತ ಹೆಸರು ಹೊಂದಿರುವ ರಾಜ್ಯ ಪ್ರಶಸ್ತಿ ಪುರಸ್ಕøತ ಗಾಯಕ ಸಂಗೀತ ನಿರ್ದೇಶಕ, ಸಂಘಟಕ ಎಚ್.ಫಲ್ಗುಣ ಅವರ ಸಾರಥ್ಯದ ಹೊಂಬಾಳೆ ಪ್ರತಿಭಾರಂಗ ಸಂಸ್ಥೆಯು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಹಾಗೂ ಮಾಂಬಳ್ಳಿ ಕಲ್ಪತರು ಪ್ರಗತಿಪರ ಚಿಂತಕರ ವೇದಿಕೆಯ ಸಹಕಾರದೊಂದಿಗೆ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆ ಅಂಗವಾಗಿ ‘ಭೀಮೋತ್ಸವ’ - ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇದೇ ಮೇ 13 ರಂದು ಮಾಂಬಳ್ಳಿ ಗ್ರಾಮದಲ್ಲಿರುವ ಶ್ರೀಮತಿ ಕಮಲಮ್ಮ ಶ್ರೀ ಕರಿಗೇಗೌಡ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದೆ.ಬೆ. 9.30 ಕ್ಕೆ ಅಗರದ ಗ್ರಾಮದ ಹಿಂಡಿ ಮಾರಮ್ಮನವರ ದೇವಸ್ಥಾನದ ಆವರಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ಯನ್ನು ಎತ್ತಿನ ಗಾಡಿಗಳು, ಮಂಗಳ ವಾದ್ಯ ಮತ್ತು ವಿವಿಧ ಜಾನಪದ ತಂಡಗಳೊಂದಿಗೆ ಏರ್ಪಡಿಸಲಾಗಿದೆ. ಹನುಮಂತನಾಯಕ ಮತ್ತು ತಂಡ, ಕನಕಪುರ (ಪೂಜಾ ಕುಣಿತ), ಚಂದ್ರಕುಮಾರ್ ಎ.ಎಸ್. ಮತ್ತು ತಂಡ, ರಾಮನಗರ (ಡೊಳ್ಳು ಕುಣಿತ), ಜಿ.ಎನ್.ಸುರೇಶ್ ಮತ್ತು ತಂಡ, ತುಮಕೂರು (ಗಾರುಡಿ ಗೊಂಬೆ), ಪಲ್ಲವಿ ಮತ್ತು ತಂಡ, ಚಿತ್ರದುರ್ಗ (ಮಹಿಳಾ ತಮಟೆ), ಜಿ.ಮಂಜುನಾಥ ಮತ್ತು ತಂಡ, ತುಮಕೂರು (ಸೋಮನ ಕುಣಿತ), ಸಿ.ಎಸ್.ಲೋಕೇಶ್ ಮತ್ತು ತಂಡ, ತುಮಕೂರು (ವೀರಭದ್ರ ಕುಣಿತ), ನಿರ್ಮಲಾ ಬಾಯಿ ಮತ್ತು ತಂಡ, ಚಿತ್ರದುರ್ಗ (ಲಂಬಾಣಿ ನೃತ್ಯ) ಮಂತಾದ ಜಾನಪದ ತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ. ಮದ್ಯಾಹ್ನ 12ಕ್ಕೆ ವೇದಿಕೆ ಕಾರ್ಯಕ್ರಮವಿದೆ.
ಸಂಜೆ 4 ಕ್ಕೆ ಜೆ.ಮೂರ್ತಿ (ಮುಡಿಗುಂಡ), ಸ್ವಾಮಿ ಗಾಮನಹಳ್ಳಿ (ಮಂಡ್ಯ), ರಾಜೇಶ್ (ಆನೇಕಲ್), ಲಕ್ಷ್ಮೀರಾಮ್ (ಮೈಸೂರು), ಸ್ವಾಮಿ ಬೂದನೂರು (ಮಂಡ್ಯ) ಅವರುಗಳು ಅಂಬೇಡ್ಕರ್ ಕುರಿತ ಗೀತೆಗಳ ಗಾಯನ ನಡೆಸಿಕೊಡಲಿದ್ದಾರೆ. ಶರತ್ (ಕೀಬೋರ್ಡ್), ಕಿರಣ್ (ತಬಲಾ), ಮೋಹನ್ (ರಿದಂಪ್ಯಾಡ್) ಅವರು ಗಾಯನಕ್ಕೆ ವಾದ್ಯ ಸಹಕಾರ ನೀಡುತ್ತಾರೆ.
ಸಂಜೆ 6ಕ್ಕೆ ಧಾರವಾಡದ ಗಣಕರಂಗ ಪ್ರಸ್ತುತ ಪಡಿಸುವ ರಾಜ್ಯಾದ್ಯಂತ ಹೆಸರು ಗಳಿಸಿರುವ ಡಾ.ಎಚ್.ಟಿ.ಪೋತೆಯವರ ರಮಾಬಾಯಿ ಕಾದಂಬರಿ ಆಧಾರಿತ ‘ರಮಾಬಾಯಿ ಅಂಬೇಡ್ಕರ’ ನಾಟಕದ ಪ್ರದರ್ಶನವಿದೆ.
ಡೋಲು, ನಾದಸ್ವರ, ಸಂಗೀತ ಕಲೆ ತರಬೇತಿಗೆ ಸವಿತಾ ಸಮಾಜದ ಅಭ್ಯರ್ಥಿಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 09 :- ಹಿಂದುಳಿದ ವರ್ಗಗಳ ಕಲÁ್ಯಣ ಇಲಾಖೆಯು ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪಾರಿಕ ಕಲೆಯಾದ ಡೋಲು, ನಾದಸ್ವರ, ಸಂಗೀತ ಕಲೆಗಳಲ್ಲಿ ಉಚಿತವಾಗಿ ತರಬೇತಿ ನೀಡಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 4 ವರ್ಷಗಳ ತರಬೇತಿಯನ್ನು ಊಟ, ವಸತಿ, ಶಿಕ್ಷಣದೊಂದಿಗೆ ಉಚಿತವಾಗಿ ನೀಡಲಾಗುತ್ತದೆ. ತರಬೇತಿ ಪಡೆಯಲು ಇಚ್ಚಿಸುವವರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಮೇ 16ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಯಶಸ್ವಿನಿ ಸಹಕಾರ ಆರೋಗ್ಯ ರಕ್ಷಣಾ ಯೋಜನೆ ನೋಂದಣಿ, ನವೀಕರಣಕ್ಕೆ ಆಹ್ವಾನ
ಚಾಮರಾಜನಗರ, ಮೇ. 09 - 2017-18ನೇ ಸಾಲಿಗೆ ಗ್ರಾಮೀಣ ಹಾಗೂ ನಗರ ಯಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣಾ ಯೋಜನೆಗೆ ಹೊಸದಾಗಿ ನೋಂದಾಯಿಸಲು ಹಾಗೂ ಈಗಾಗಲೇ ನೊಂದಾಯಿಸಿರುವವರು ಪ್ರಸಕ್ತ ಸಾಲಿಗೆ ನವೀಕರಿಸಿಕೊಳ್ಳಲು ಸಹಕಾರ ಸಂಘಗಳ ಉಪನಿಬಂಧಕರು ಕೋರಿದ್ದಾರೆ.ಮೇ 1ರಿಂದ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ಪ್ರಾರಂಭವಾಗಿದ್ದು ಜೂನ್ 30ಕ್ಕೆ ಅಂತಿಮಗೊಳ್ಳಲಿದೆ. ಗ್ರಾಮೀಣ ಯಶಸ್ವಿನಿ ಯೋಜನೆ ನೋಂದಣಿಗೆ ಸಾಮಾನ್ಯವರ್ಗದ ಸದಸ್ಯರು 300 ರೂ.ರಂತೆ ಪಾವತಿ ಮಾಡಬೇಕು. ಪರಿಶಿಷ್ಟ ಜಾತಿ ವರ್ಗದವರಾಗಿದ್ದಲ್ಲಿ 50 ರೂ. ಪಾವತಿಸಬೇಕು. ಉಳಿದ 250 ರೂ.ಗಳನ್ನು ಸರ್ಕಾರ ಸಹಾಯಧನವಾಗಿ ಪಾವತಿಸಲಿದೆ. ನಗರ ಯಶಸ್ವಿನಿ ಯೋಜನೆಗೆ ಸಾಮಾನ್ಯ ಸದಸ್ಯರು 710 ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸದಸ್ಯರು 110 ರೂ. ಪಾವತಿಸಬೇಕು. ಉಳಿದ 600 ರೂ.ಗಳನ್ನು ಸರ್ಕಾರ ಸಹಾಯಧನವಾಗಿ ಪಾವತಿಸಲಿದೆ.
ಯಾವುದೇ ಒಂದು ಕುಟುಂಬದಲ್ಲಿ ಐವರು ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರ ನೋಂದಣಿ, ನವೀಕರಣ ಮಾಡಬೇಕಿದ್ದಲ್ಲಿ ಶೇ.15ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಆಯಾ ಸಹಕಾರ ಸಂಘಗಳ ಕಾರ್ಯದರ್ಶಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿ, ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಹಕಾರ ಸಂಘಗಳ ನಿಬಂಧಕರ ಕಚೇರಿ ಮತ್ತು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಸೇನೆ ನೇಮಕಾತಿ ರ್ಯಾಲಿ
ಚಾಮರಾಜನಗರ, ಮೇ. 09- ಸೇನಾ ನೇಮಕಾತಿಗಾಗಿ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್‍ನಲ್ಲಿರುವ ಸ್ಪೋಟ್ಸ್ ಸ್ಟೇಡಿಯಂನಲ್ಲಿ ಮೇ 29 ರಿಂದ ಜೂನ್ 2ರವರೆಗೆ ರ್ಯಾಲಿ ನಡೆಯಲಿದೆ.ಆಸಕ್ತ ಯುವಕರು ಆನ್ ಲೈನ್ ಮೂಲಕ ಮೇ 14ರೊಳಗೆ ಅರ್ಜಿಯನ್ನು ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿ ವೆಬ್ ಸೈಟ್ ನಲ್ಲಿ ನೊಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.
ಯಳಂದೂರು : ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 09 (ಕರ್ನಾಟಕ ವಾರ್ತೆ):- ಯಳಂದೂರು ತಾಲೂಕಿನ ವಿವಿಧೆಡೆ ಸಮಾಜ ಕಲ್ಯಾಣ ಇಲಾಖೆ ನಿರ್ವಹಣೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.5 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಬಹುದು. ಅರ್ಜಿಯನ್ನು ಆಯಾ ನಿಲಯದ ಮೇಲ್ವಿಚಾರಕರು ಅಥವಾ ಯಳಂದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ. 08226-240309 ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ. 15ರಂದು ಅಂಚೆ ವಿಮೆ ಏಜೆಂಟ್ ನೇಮಕಕ್ಕೆ ನೇರ ಸಂದರ್ಶನ
ಚಾಮರಾಜನಗರ, ಮೇ. 09 - ಅಂಚೆ ಇಲಾಖೆಯ ವಿವಿಧ ವಿಮೆಗಳಿಗೆ ಸಂಬಂಧಿಸಿದಂತೆ ಏಜೆಂಟರನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಮೇ 15ರಂದು ಬೆಳಿಗ್ಗೆ 11 ಗಂಟೆಗೆ ನಂಜನಗೂಡು ಪಟ್ಟಣದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.ಅಭ್ಯರ್ಥಿಯು 5 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆವುಳ್ಳ ಪ್ರದೇಶದ ನಿವಾಸಿಯಾಗಿದ್ದಲ್ಲಿ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. 5 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆವುಳ್ಳ ಪ್ರದೇಶದ ನಿವಾಸಿಯಾಗಿದ್ದಲ್ಲಿ ಪಿಯುಸಿ ತೇರ್ಗಡೆಯಾಗಿರಬೇಕು. 18 ರಿಂದ 60ರ ವಯೋಮಿತಿಯೊಳಗಿರಬೇಕು. ವಿಮೆ ಕ್ಷೇತ್ರ, ಕಂಪ್ಯೂಟರ್ ಜ್ಞಾನ ಹೊಂದಿದ್ದು ಸ್ಥಳೀಯ ಪ್ರದೇಶದ ಪರಿಚಯ ಇರುವ ಅಭ್ಯರ್ಥಿಗಳಾಗಿದ್ದಲ್ಲಿ ಆದ್ಯತೆ ನೀಡಲಾಗುತ್ತದೆ.
ಆಸಕ್ತರು ಸ್ವವಿವರ, ವಯಸ್ಸು, ವಿದ್ಯಾರ್ಹತೆ, ಅನುಭವ ಇನ್ನಿತರ ಅಗತ್ಯ ದಾಖಲಾತಿಗಳೊಡನೆ ನೇರವಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಂಜನಗೂಡು ಅಂಚೆ ಅಧೀಕ್ಷಕರ ಕಚೇರಿ (ದೂ.ಸಂ. 08221-226291/226293) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
No comments:
Post a Comment