ವಿವಿಧ ಮಹಾತ್ಮರ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಮಹಾತ್ಮರ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಇದೇ ಮೇ 20ರಂದು ದೇವರ ದಾಸಿಮಯ್ಯ ಜಯಂತಿ ಹಾಗೂ ಮೇ 23ರಂದು ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
ನಗರದ ಚಾಮರಾಜೇಶ್ವರ ದೇವಾಲಯ ಬಳಿ ನಿಗಧಿತ ದಿನಾಂಕದಂದು ದೇವರ ದಾಸಿಮಯ್ಯ ಹಾಗೂ ಸರ್ವಜ್ಞರ ಭಾವಚಿತ್ರ ಮೆರವಣಿಗೆ ಏರ್ಪಡಿಸಲು ಹಾಗೂ ಜೆ.ಎಚ್. ಪಟೇಲ್ ಸಭಾಂಗÀಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದೇ ವೇಳೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಮೆರವಣಿಗೆಗೆ ಅಗತ್ಯವಿರುವ ಕಲಾತಂಡಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿಯೋಜಿಸಲಿದೆ. ಇನ್ನಿತರ ಅವಶ್ಯಕ ಸಿದ್ಧತೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗುವುದು. ಆಹ್ವಾನ ಪತ್ರಿಕೆ ಮುದ್ರಣ, ಮೆರವಣಿಗೆ ಮಾರ್ಗಗಳಲ್ಲಿ ಪೂರ್ಣಗೊಳಿಸಬೇಕಿರುವ ಕಾಮಗಾರಿ ಇತರೆ ಕೆಲಸಗಳನ್ನು ಕೈಗೊಳ್ಳಲು ನಿರ್ದೇಶನ ನೀಡಲಾಗುವುದು ಎಂದರು.
ದಲಿತ ವಚನಕಾರರ ಜಯಂತಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ಕಾರ್ಯಕ್ರಮಕ್ಕೂ ಜಿಲ್ಲಾಡಳಿತದ ವತಿಯಿಂದ ದಿನಾಂಕ ನಿಗಧಿ ಮಾಡಲಾಗುತ್ತದೆ. ಭಗವಾನ್ ಮಹಾವೀರರ ಜಯಂತಿ ಆಚರಣೆಯನ್ನೂ ಮಾಡಲಿದ್ದು ಸಮುದಾಯದ ಮುಖಂಡರು ದಿನಾಂಕವನ್ನು ಗೊತ್ತುಪಡಿಸುವ ಬಗ್ಗೆ ಅಭಿಪ್ರಾಯ ನೀಡಬೇಕು. ದಿನಾಂಕ ಅಂತಿಮವಾದ ಕೂಡಲೇ ಅಗತ್ಯ ಸಿದ್ಧತೆಗೆ ಕಾರ್ಯೋನ್ಮುಖರಾಗಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು.
ಜಯಂತಿ ಕಾರ್ಯಕ್ರಮದಂದು ವಿಚಾರಧಾರೆಗಳನ್ನು ತಿಳಿಸಲು ಪ್ರಮುಖ ಭಾಷಣಕಾರರನ್ನು ಆಹ್ವಾನಿಸಲಾಗುವುದು. ಈ ಸಂಬಂಧ ನೀಡುವ ಸಲಹೆಗಳನ್ನೂ ಸಹ ಪರಿಗಣಿಸಿ ಅಂತಿಮವಾಗಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗಾಯತ್ರಿ ಅವರು ತಿಳಿಸಿದರು.
ಜಯಂತಿ ಆಚರಣೆ ಸಂಬಂಧ ಹಾಜರಿದ್ದ ಮುಖಂಡರು, ಪ್ರತಿನಿಧಿಗಳು ಸಲಹೆ ನೀಡಿದರು.
ಮುಖಂಡರಾದ ಶಾ. ಮುರಳಿ, ಮದ್ದೂರು ವಿರೂಪಾಕ್ಷ, ಸಿ ಕೆ ಮಂಜುನಾಥ್, ಗೋಪಾಲ್, ನಿಜಧ್ವನಿ ಗೋವಿಂದರಾಜು, ನಾಗರಾಜು, ಸುಂದರ್, ಗೋಪಾಲಕೃಷ್ಣ, ಕುಮಾರ್, ರಂಗಶೆಟ್ಟರ್, ಡಿ. ರಂಗಸ್ವಾಮಿ, ಸೋಮಶೇಖರ್,
ಸಿ. ವೆಂಕಟರಮಣ, ಶ್ರೀಧರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ನಾಗವೇಣಿ, ಜಂಟಿ ಕೃಷಿ ನಿರ್ದೇಶರಾದ ತಿರುಮಲೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಇತರ ಮುಖಂಡರು, ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.
ತಂಬಾಕು ಉತ್ಪನ್ನ ನಿಷೇಧ ಕುರಿತ ಫಲಕಗಳ ಅಳವಡಿಕೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚನೆ
ಚಾಮರಾಜನಗರ, ಮೇ. 08 - ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳಿಂದ ರಕ್ಷಿಸುವ ಸಲುವಾಗಿ ತರಲಾಗಿರುವ ಸಿಗರೇಟು, ಇತರೆ ತಂಬಾಕು ಉತ್ಪನ್ನಗಳ ಕಾಯಿದೆ (ಕೋಟ್ಪಾ 2003)ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಂಗಡಿ, ಹೋಟೆಲ್, ಇನ್ನಿತರ ನಾಗರಿಕ ಪ್ರದೇಶಗಳಲ್ಲಿ ಅಗತ್ಯ ಕ್ರಮ ವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಕೆ.ಎಂ. ಗಾಯತ್ರಿ ಸೂಚನೆ ನೀಡಿದ್ದಾರೆ.ಜಿಲ್ಲಾ ವ್ಯಾಪ್ತಿಯಲ್ಲಿರುವ ಹೋಟೆಲ್, ಕಾಫಿ, ಟೀ, ಬೀಡಾ ಸ್ಟಾಲ್, ಕಚೇರಿ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡದಂತೆ ಎಚ್ಚರಿಕೆ ನೀಡಬೇಕಿದೆ. ಧೂಮಪಾನ ನಿಷೇಧಿತ ಪ್ರದೇಶವೆಂದು 60*45 ಸೆಂ.ಮೀ. ಅಳತೆಯ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ದೂಮಪಾನಕ್ಕೆ ಬೇಕಿರುವ ಸಾಮಗ್ರಿಗಳನ್ನು ಗ್ರಾಹಕರಿಗೆ ನೀಡಬಾರದು. ತಂಬಾಕು ಉತ್ಪನ್ನಗಳ ಜಾಹಿರಾತುಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರದರ್ಶಿಸಬಾರದು.
18 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ. 18 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಮನವರಿಕೆ ಮಾಡಿಕೊಡುವ ಫಲಕವನ್ನು ಸಹ 60*30 ಸೆಂ.ಮೀ. ಅಳತೆಯಲ್ಲಿ ಅಂಗಡಿಯ ಮುಂದೆ ಕಡ್ಡಾಯವಾಗಿ ಅಳವಡಿಸಬೇಕು. ಶಾಲಾ ಕಾಲೇಜು ಶೈಕ್ಷಣಿಕ ಸಂಸ್ಥೆಗಳ ಆವರಣದಿಂದ 100 ಯಾರ್ಡ್‍ಗಳ (ಗಜ) ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು. ಇಂಥಹ ಪ್ರಕರಣಗಳೂ ಕಂಡುಬಂದಲ್ಲಿ ಕಾಯಿದೆಯಡಿ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಮಾಹಿತಿ ಫಲಕವನ್ನು ಶೈಕ್ಷಣಿಕ ಸಂಸ್ಥೆಯ ಪ್ರವೇಶ ದ್ವಾರದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.
ತಂಬಾಕು ಉತ್ಪನ್ನ ಪ್ಯಾಕುಗಳ ಮೇಲೆ ನಿರ್ಧಿಷ್ಟ ಎಚ್ಚರಿಕೆ ಚಿಹ್ನೆ ಇಲ್ಲದೆ ಮಾರಾಟ ಮಾಡುವಂತಿಲ್ಲ. ವೆಬ್ ಸೈಟ್ ತಿತಿತಿ.mohಜಿತಿ.iಟಿ ಮೂಲಕ ಎಚ್ಚರಿಕೆ ಚಿಹ್ನೆಗಳ ಬಗ್ಗೆ ಉತ್ಪಾದಕರು ಮಾಹಿತಿ ಪಡೆಯಬಹುದು. ಇನ್ನು 10 ದಿನಗಳೊಳಗೆ ಸಾರ್ವಜನಿಕ ಸ್ಥಳ, ಹೋಟೆಲ್, ಅಂಗಡಿ, ಕಚೇರಿ, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿಗದಿತ ವಿನ್ಯಾಸ ಮಾದರಿಯಲ್ಲಿ ಎಚ್ಚರಿಕೆ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ನಾಮಫಲಕ ಮಾದರಿಯು ವೆಬ್ ಸೈಟ್ ತಿತಿತಿ.sಣoಠಿಣobಚಿಛಿಛಿo.iಟಿ ನಲ್ಲಿ ಲಭ್ಯವಿದೆ.
ತಂಬಾಕು ಉತ್ಪನ್ನ ಸೇವನೆ ತಡೆಗಾಗಿ ನೀಡಲಾಗಿರುವ ಸೂಚನೆ, ಅನುಷ್ಠಾನಗೊಳಿಸಿರುವ ಕಾನೂನು ಉಲ್ಲಂಘಿಸಿದಲ್ಲಿ ಕ್ರಮ ಜರುಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಸಂಪರ್ಕಿಸುವಂತೆ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ತಿಳಿಸಿದ್ದಾರೆ.
ಮಿಲಿಟರಿ ಬಾಲಕರ ವಸತಿ ನಿಲಯಕ್ಕೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ. 08 :- ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಮೈಸೂರು ನಗರದಲ್ಲಿರುವ ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 2017-18ನೇ ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿಯಿಂದ 12ನೇ ತರಗತಿಯವರಿಗೆ ಮತ್ತು ಡಿಪ್ಲೊಮೋ ಓದುತ್ತಿರುವ ಕರ್ನಾಟಕ ರಾಜ್ಯದ ಮಾಜಿ ಸೈನಿಕರ ಮತ್ತು ಅವಲಂಬಿತರ ಗಂಡು ಮಕ್ಕಳಿಗೆ ಉಚಿತ ಪ್ರವೇಶವನ್ನು ನೀಡಲಿದ್ದು ಅರ್ಜಿ ಆಹ್ವಾನಿಸಿದೆ.ಮೈಸೂರು ನಗರದ ಸುತ್ತ ಮುತ್ತಲಿನ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆದವರಿಗೆÀ ನಿಲಯದಲ್ಲಿ ಪ್ರವೇಶ ನೀಡಲಾಗುವುದು.
ಅರ್ಜಿ ನಮೂನೆಯನ್ನು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಮೀಪ, ಜೆ.ಎಲ್.ಬಿ. ರಸ್ತೆ, ಮೈಸೂರು-570005 ಇವರಿಂದ ಕಾರ್ಯಾಲಯದ ಕೆಲಸದ ದಿನಗಳಲ್ಲಿ ಪಡೆದುಕೊಳ್ಳಬಹುದು ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಮೇ 30ರೊಳಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2425240 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
*****************************
ಜಿಲ್ಲಾಧಿಕಾರಿಗಳವರ ಜೊತೆ ಸಮಗ್ರವಾಗಿ ಚರ್ಚಿಸಿದ ವಾಟಾಳ್ ನಾಗರಾಜ್
ಚಾಮರಾಜನಗರದಲ್ಲಿ ಬರಗಾಲ ಬಂದು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಾಗಿದೆ ಆಧ್ದರಿಂದ ಸರ್ಕಾರ ಕೂಡಲೇ ಕೊತ್ತಲವಾಡಿಕೆರೆ, ಸುವರ್ಣನಗರಕೆರೆ, ಅರಕಲವಾಡಿಕೆರೆ, ಎಣ್ಣೆಹೊಳೆಕೆರೆ, ಬಂಡಿಗೆರೆ, ಮರದಗಕೆರೆ, ಚಿಕ್ಕಕೆರೆ, ದೊಡ್ಡಕೆರೆ, ಸಿಂಡನಕೆರೆ, ಕೋಡಿಮೋಳೆಕೆರೆ, ದೊಡ್ಡರಾಯಪೇಟೆಕೆರೆ, ಮಾಲಗೆರೆ ಕಾಗಲವಾಡಿ ಕೆರೆ, ಹಾಗೂ ಸುವರ್ಣಾವತಿ ಜಲಾಶಯ ಚಿಕ್ಕಹೊಳೆ ಜಲಾಶಯಕ್ಕೆ ತಕ್ಷಣವೇ ನದಿಪಾತ್ರಗಳಿಂದ ನೀರು ತುಂಬಿಸಬೇಕು, ಮಳೆ ಇಲ್ಲದೆ ನೀರಿಲ್ಲದೆ ಒಣಗಿ ನಿಂತಿರುವ ತೆಂಗಿನಮರಗಳಿಗೆ ಪರಿಹಾರ ಕೊಡಬೇಕು, ಅಮಚವಾಡಿ ಸೇರಿದಂತೆ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಗೋ ಶಾಲೆ ತೆರೆಯಬೇಕು, ಒಳಚರಂಡಿ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕು, ಕೆಲ್ಲಂಬಳ್ಳಿ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಬಡ ರೈತರು ವ್ಯವಸಾಯ ಮಾಡುತ್ತಿರುವ ಜಮೀನುಗಳನ್ನು ಸರ್ಕಾರ ಅಕ್ರಮವಾಗಿ ವಶಪಡಿಸಿಕೊಂಡಿರುವುದನ್ನು ವಾಪಾಸ್ ಕೊಡಬೇಕು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಕೊಡಬೇಕು, ಚಾಮರಾಜನಗರದ ಎಲ್ಲಾ ವರ್ಗದ ಜನತೆಗೆ ನಿವೇಶನ ಕೊಡಬೇಕು, ಚಾಮರಾಜನಗರದ ಜಿಲ್ಲಾಸ್ಪತ್ರೆ ಸುಧಾರಣೆಯಾಗÀಬೇಕು, ಅಲ್ಲದೆ ಇನ್ನಿತರ ವಿಷಯಗಳ ಬಗ್ಗೆ ವಾಟಾಳ್ ನಾಗರಾಜ್ ರವರು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಮನವಿ ಪತ್ರ ನೀಡಿ ಒತ್ತಾಯಿಸಿದರು,
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಾಮರಾಜನಗರ ಸಮಸ್ತ ಜನತೆಗೆ ಕಾವೇರಿ ಎರಡನೇ ಹಂತ ಕುಡಿಯುವ ನೀರು ಯೋಜನೆ ಜಾರಿಯಾಗಬೇಕು, ಈ ಯೋಜನೆಯಿಂದ ಸುತ್ತಮುತ್ತ 30-40 ಹಳ್ಳಿಗಳಿಗೆ ಕುಡಿಯುವ ನೀರು ದೊರಕುತ್ತದೆ, ಅಮಚವಾಡಿ ಗ್ರಾಮದಲ್ಲಿ ಒಂದು ಬಿಂದಿಗೆ ನೀರಿಗೆ 2 ರೂ ಕೊಟ್ಟು ಕುಡಿಯುತ್ತಿದ್ದಾರೆ, ಇದು ಒಳ್ಳೆಯ ಬೆಳೆವಣಿಗೆಯಲ್ಲ, ಆದ್ದರಿಂದ ಕೂಡಲೇ ಸರ್ಕಾರ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಬೇಕೆಂದು ವಾಟಾಳ್ ನಾಗರಾಜ್ ರವರು ಒತ್ತಾಯಿಸಿದರು
ಕಳಸ
ಮಹಾದಾಯಿ-ಕಳಸಾ ಬಂಡೂರಿ ಯೋಜನೆ ಹಾಗೂ ಮೇಕೆದಾಟು ಯೋಜನೆಗಾಗಿ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ನಮ್ಮ ರಾಜ್ಯದ ಲೋಕಸಭಾ ಸದಸ್ಯರು ಅದರಲ್ಲೂ ಬಿಜೆಪಿ ಸದಸ್ಯರುಗಳು ಪ್ರಧಾನಿಯವರ ಜೊತೆ ಒತ್ತಡ ಹೇರಿದರೆ ಮಹಾರಾಷ್ಟ್ರ-ಗೋವಾ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಪ್ರಧಾನಿಯವರು ಮಾತನಾಡಿದರೆ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಬಹುದೆಂದು ವಾಟಾಳ್ ನಾಗರಾಜ್ ರವರು ಹೇಳಿದರು,
ಪಾತಾಳಗಂಗೆಯಿಂದ ನೀರು ತಂದು ಕೊಡುವ ಬದಲು ಸಮುದ್ರ ಮುಖಾಂತರ ನೀರು ಕೊಡಬೇಕು ಪಾತಳಗಂಗೆಯಿಂದ ನೀರು ತಂದರೆ ಭೂಗರ್ಭಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಸರ್ಕಾರ ಪಾತಾಳ ಗಂಗೆಯ ಯೋಜನೆಯನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ವಾಟಾಳ್ ಒತ್ತಾಯಿಸಿದರು.
ಕಳೆದ 50 ವರ್ಷಗಳಿಂದ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡುತ್ತಿರುವ ನಾನು ಎಂದೂ ಕೂಡ ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, ನಾನು ಮನಸ್ಸು ಮಾಡಿದ್ದರೆ ಎಂದೋ ಎರಡು ಸಲ ರಾಜ್ಯದಲ್ಲಿ ಮುಖ್ಯಮತ್ರಿಯಾಗುತ್ತಿದ್ದೆ 30 ವರ್ಷಗಳ ಕಾಲ ಮಂತ್ರಿಯಾಗುತ್ತಿದ್ದೆ. ಎಂದು ವಾಟಳ್ ತಿಳಿಸಿದರು.
ರಾಜ್ಯದಲ್ಲಿ ರೈತ ಸಂಘ, ಕನ್ನಡ ಚಳುವಳಿ, ಪ್ರಗತಿಪರ ಸಂಘಟನೆಗಳು ಸೇರಿ ರಾಜ್ಯಲ್ಲಿ ಹೊಸ ಯುಗ ಪ್ರಾರಂಭಿಸಿ ಅಧಿಕಾರ ಹಿಡಿಯಬೇಕಾಗಿದೆ. ಆದ್ದರಿಂದ ಮುಂದಿನ ಚುಣಾವನೆಯಲ್ಲಿ ನಾನು ಚಾಮರಾಜನಗರದಿಂದಲೇ ಸ್ಪರ್ಧಿಸುತ್ತೇನೆ ಎಂದು ವಾಟಾಳ್ ತಿಳಿಸಿದರು.
No comments:
Post a Comment