Wednesday, 24 May 2017

ಪಿ.ಯು.ಪ್ರವೇಶಕ್ಕೆ ಇಷ್ಟು ಕಡಿಮೆ ಶುಲ್ಕ,ಹಾಗಿದ್ರೆ ಎಷ್ಟು ಗೊತ್ತಾ.? ಕೇಳಿದ್ರೆ ಬೆಚ್ಚಿ ಬೀಳ್ತೀರಾ.?

     ಕೋರ್ಟ್ ಆದೇಶವನ್ನು ಗಾಳಿಗೆ ತೂರಿದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳು.!

ಸರ್ಕಾರ ನಿಗದಿ ಶುಲ್ಕಕ್ಕೆ ಬೆಲೆಯಿಲ್ಲ, ಹೆಚ್ಚು ಶುಲ್ಕ ನೀಡಿದರೆ ಕಾಲೇಜಿಗೆ ಪ್ರವೇಶ.!
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ,  - ಜಿಲ್ಲೆಯಲ್ಲಿ ಖಾಸಗಿ ಶಾಲೆಗಳು ಪ್ರವೇಶ ನೀಡುವ ಸಂದರ್ಭದಲ್ಲಿ ಯಾವ ರೀತಿ ಪೋಷಕರಿಗೆ ಅನಗತ್ಯ ಕಿರುಕುಳ ನೀಡಲಾರಂಭಿಸಿದೆ ಎಂದರೆ ಪೋಷಕರನ್ನೆ ಸಾಯುವಷ್ಟುರ ಮಟ್ಟಿಗೆ ಶೋಷಿಸುತ್ತಿದೆ.ನಾಮಫಕದಲ್ಲಿ ಪ್ರವೇಶ ಶುಲ್ಕ ಕಡ್ಡಾಯವಾಗಿ ಹಾಕಬೇಂಬ ನಿಯಮ ಮರೆತಿರುವ ಸಂಸ್ಥೆಗಳು ಯಾವುದೇ ವಿವರ ಹಾಕದೇ ವಸೂಲಿಗೆ ನಿಂತಿದೆ.,
 ಜಿಲ್ಲೆಯಲ್ಲಿನ ಬಹುತೇಕ ಖಾಸಗಿ ಶಾಲೆಗಳು ನಿಗದಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚ ಹಣ ಪಡೆಯಲಾರಂಭಿಸಿದೆ. ಇದರಿಂದ ಶಿಕ್ಷಣ ವ್ಯಾಪಾರೀಕರಣವಾಗುತ್ತಿದ್ದು, ವಿದ್ಯೆ ಹಣ ಉಳ್ಳವರ ಪಾಲಾಗುತ್ತಿದೆ.
ಚಾಮರಾಜನಗರದ ಹೆಸರಾಂತ ಖಾಸಗೀ ವಿದ್ಯಾಸಂಸ್ಥೆ ಕಾಲೇಜಿಗೆ ಸರ್ಕಾರ ನಿಗದಿಪಡಿಸಿ ದರಕ್ಕಿಂತ ಹೆಚ್ಚು ಪಡೆಯುತ್ತಿದೆ. ಇದರ ಬಗ್ಗೆ ಪೋಷಕರು ಕೇಳಲು ಹೋದರೆ ಇಚ್ಚೆ ಇದ್ದರೆ ಸೇರಿಸಿ ಇಲ್ಲದಿದ್ದರೆ ಸರ್ಕಾರಿ ಕಾಲೇಜಿಗೆ ಸೇರಿಸಿ ಎಂದು ಬೇಜವಬ್ದಾರಿ ಉತ್ತರ ನೀಡುತ್ತಿದ್ದಾರೆ.
ಸರ್ಕಾರ ಹೊರಡಿಸಿದ ಶುಲ್ಕದ ವಿವರದಂತೆ:


ಖಾಸಗೀ ಅನುದಾನಿತ ಪದವಿಪೂರ್ವ ಕಾಲೇಜು ಕಲಾ ವಿಭಾಗಕ್ಕೆ ಸೇರಲ್ಪಡುವ ಸಾಮಾನ್ಯ ವರ್ಗದವರು 1700 ನೀಡಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ-1ದವರು 512 ರೂಪಾಯಿ ಹಾಗೂ ಹಿಂದುಳಿದ ವರ್ಗ 2ಅ,2ಬ,3ಅ,3ಬ ಮತ್ತು1ಸಿ ವರ್ಗದವರು 631 ರೂಪಾಯಿಗಳು, ವಿಜ್ಞಾನ ವಿದ್ಯಾರ್ಥಿಗಳು ಸಾಮಾನ್ಯ ವರ್ಗದವರಾದರೆ ಹೆಚ್ಚವರಿಯಾಗಿ 2186 ರೂಪಾಯಿ ನೀಡಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ-1ದವರು 1117 ರೂಪಾಯಿ ಹಾಗೂ ಹಿಂದುಳಿದ ವರ್ಗ 2ಅ,2ಬ,3ಅ,3ಬ ಮತ್ತು1ಸಿ ವರ್ಗದವರು 1117 ರೂಪಾಯಿಗಳು ನೀಡಬೇಕು. ಜೊತೆಗೆ ಕಾಲೇಜು ನಿಗದಿ ಮಾಡಿದ ವಿಶೇಷ ಅಭಿವೃದ್ದಿ ಶುಲ್ಕ ನೀಡಬೇಕು.
ಖಾಸಗೀ ಅನುದಾನ ರಹಿತ ಪದವಿಪೂರ್ವ ಕಾಲೇಜು ಕಲಾ ವಿಭಾಗಕ್ಕೆ ಸೇರಲ್ಪಡುವ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ-1ದವರು, ಹಿಂದುಳಿದ ವರ್ಗ 2ಅ,2ಬ,3ಅ,3ಬ ಮತ್ತು1ಸಿ ವರ್ಗದವರು, 692 ರೂಪಾಯಿ ನೀಡಬೇಕು. ಜೊತೆಗೆ ವಿಶೇಷ ಅಭಿವೃದ್ದಿ ಶುಲ್ಕ, ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಶುಲ್ಕ,ಬೋಧನಾ ಶುಲ್ಕ ಸೇರಿಸಬೇಕು. ವಿಜ್ಞಾನ ವಿಭಾಗಕ್ಕೆ ಸೇರಬೇಕಾದ ವಿದ್ಯಾರ್ಥಿಗಳು ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ-1ದವರು, ಹಿಂದುಳಿದ ವರ್ಗ 2ಅ,2ಬ,3ಅ,3ಬ ಮತ್ತು1ಸಿ ವರ್ಗದವರು ಪ್ರಯೋಗ ಶುಲ್ಕ, ಪ್ರಾಯೋಗಿಕ ಶುಲ್ಕ ಸೇರಿ 1178 ರ ಜೊತೆಗೆ ಕಾಲೇಜು ನಿಗದಿ ಮಾಡಿದ ವಿಶೇಷ ಅಭಿವೃದ್ದಿ ಶುಲ್ಕ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಶುಲ್ಕ,ಬೋಧನಾ ಶುಲ್ಕ ಸೇರಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮನಸ್ವೇಚ್ಚೆ ಬಂದಂತೆ ಪೋಷಕರಿಂದ ಹಣ ವಸೂಲಿಗೆ ಇಳಿಯಲಾರಂಬಿಸಿದ್ದಾರೆ.
ಈಗ ಬರೊಬ್ಬರಿ 6 ರಿಂದ 15 ಸಾವಿರ ವರೆಗೆ ಶುಲ್ಕ ವಸೂಲಿಗೆ ನಿಂತಿದ್ದು ಯಾವುದೇ ಸಂಘಟನೆಗೆ ಯಾವುದೂ ಬೇಕಿಲ್ಲ. ಕೆಲವರಿಗೆ ಇದೇ ಹಬ್ಬ. 

(  ಶಾಲೆಗಳಲ್ಲಿ ಪುಕ್ಕಟ್ಟೆ ವ್ಯವಹಾರ ಮಾಡಿರುವ ಖಾಸಗೀ ಸುದ್ದಿಗಳು, ಆರ್.ಟಿ.ಇ ವಂಚಿಸಿ ಮಕ್ಕಳ ಪೋಷಕರಿಂದ ವಸೂಲಿ ಮಾಢಿರುವ ಮಾಹಿತಿ ಹಕ್ಕಿನ ಪ್ರತಿ ಲಗತ್ತಿಸಲಾಗುವುದು)


ಖಾಸಗಿ ಶಾಲೆಗಳು ಪ್ರವೇಶ ನೀಡುವಾಗ ಶಾಲೆಯಲ್ಲಿ ಪಡೆಯಲಾಗುವ ಶುಲ್ಕದ ವಿವರವನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಪಡೆಯುವ ಶುಲ್ಕದ ವಿವರ ಕುರಿತು ಅರಿವು ಮೂಡಿಸುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ. ಪೋಷಕರಿಂದ ಪಡೆದ ಶುಲ್ಕಕ್ಕೆ ಕಡ್ಡಾಯವಾಗಿ ರಸೀತಿ ನೀಡಬೇಕು. ದಾಖಲಾತಿ ಸಂದರ್ಭದಲ್ಲಿ ಡೊನೇಷನ್ ವಸೂಲಿ ಮಾಡಲು ಅವಕಾಶ ಇಲ್ಲವೆಂದು ಜಿಲ್ಲಾ ಶಿಕ್ಷಣ ನಿಯಂತ್ರಣ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ರಾಮು ಸೂಚನೆ ನೀಡಿದ್ದರೂ ನಮ್ಮನ್ನು ಕೇಳಲು ಅವರ್ಯಾರು ಎಂದು ಅವರಿಗೆ ಬಂದಂತೆ ಸುಮ್ಮನಿದ್ದಾರೆ. ಆದರೆ ಯಾವುದೇ ಖಾಸಗೀ ಶಾಲಾ-ಕಾಲೇಜುಗಳಲ್ಲೂ ಇದುವರೆಗೂ ಶುಲ್ಕದ ವಿವರವನ್ನು ಸೂಚನಾ ಫಲಕದಲ್ಲಿ ಪ್ರಕಟಿಸಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಖಾಸಗೀ ವಿದ್ಯಾಸಂಸ್ಥೆಯಲ್ಲಿ ಎರಡೆರಡು ರಶೀದಿಗಳನ್ನು ಹರಿದರೂ ಒಂದು ರಶೀದಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ.


ಜೋಡಿರಸ್ತೆಯಲ್ಲಿರುವ ಹೆಸರಾಂತ ವಿದ್ಯಾಸಂಸ್ಥೆ ಕಾಲೇಜಿನಲ್ಲಿ ಅರ್ಜಿ ಪಡೆದಿರುವ ಆಡಳಿತ ವರ್ಗ ತಾವು ಸಲ್ಲಿಸಿದ್ದ ಅರ್ಜಿ ನಮೂನೆಯಲ್ಲಿ ಸಂಬಂದಿಸಿದ ವಿಷಯ ಸಿಗುವುದಿಲ್ಲ ಎಂದಿದ್ದು, ಹೆಚ್ಚು ಹಣ  ನೀಡಿದವರಿಗೆ ಅವರು ನಿಗದಿ ಮಾಡಿದ ವಿಷಯ ಅಥವಾ ವಿಭಾಗವನ್ನು ನೀಡಲಾರಂಭಿಸಿದೆ. ಒಟ್ಟಾರೆ ವಿದ್ಯೆ ಮಾರಾಟದ ವಸ್ತುವಾಗಿದ್ದು 10 ರಿಂದ 20 ಸಾವಿರಕ್ಕೂ ಹೆಚ್ಚು ಹಣ ನೀಡಿ ಪ್ರಥಮ ಪಿ.ಯು.ಸಿ ಪ್ರವೇಶ ಪಡೆಯಬೇಕಾಗಿದೆ.
ಮತ್ತೊಂದೆಡೆ ಜೆ.ಎಸ್.ಎಸ್ ಸಂಸ್ಥೆಯ ಉಪನ್ಯಾಸಕರೇ ಮನೆಪಾಠ ದಂದೆಗೆ ಇಳಿದು ಪ್ರತಿ ವಿಷಯಕ್ಕೆ 3,500 ರೂಪಾಯಿಯಂತೆ ನಾಲ್ಕು ವಿಷಯಗಳಿಗೆ 14 ಸಾವಿರ ವಿದ್ಯಾರ್ಥಿಗಳಿಂದ ಸುಲಿಯುವ ತಂತ್ರ ರೂಪಿಸಿಕೊಂಡಿದೆ
ತಕ್ಷಣ ಸಂಭಂದಿಸಿದ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾಗಿರುವ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ದೂರು ಸಲ್ಲಿಸಬೇಕೆಂದು ಜಿಲ್ಲಾ ಶಿಕ್ಷಣ ನಿಯಂತ್ರಣ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ರಾಮು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ರಜನಿ ಎಸ್ ಮಲಕ್ಕಿ ಹಾಗೂ ಎಲ್ಲಕ್ಕಿಂತ ಸರ್ಕಾರ ಗಮನವಹಿಸಬೇಕಾಗಿದೆ.
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು