ವಿಶ್ವ ತಂಬಾಕು ರಹಿತ ದಿನಾಚರಣೆ 2017ರ ಅಂಗವಾಗಿ ಜಾಥ
*ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಮರೆವಣಿಗೆಯಲ್ಲಿ ಮನೋನಿದಿ ಶಶ್ರೂಷಕ ತರಬೇತಿÀ ಸಂಸ್ಥೆ, ಸರ್ಕಾರಿ ಶಶ್ರೂಷಕ ಕೇಂದ್ರ, ಜೆ.ಎಸ್.ಎಸ್ ಶಶ್ರೂಷಕ ತರಬೇತಿÀ ಸಂಸ್ಥೆ, ವಿದ್ಯಾರ್ಥಿಗಳು ಭಾಗವಹಿಸಿ ತಂಬಾಕು ಅಭಿವೃದ್ದಿಗೆ ಮಾರಕ ಎಂದು ಘೋಷಣೆಯನ್ನು ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.
ಜಾಥದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಪ್ರಸಾದ್,ಜಿಲ್ಲಾ ಪಂಚಾಯಿತ್ ಆರೋಗ್ಯ ಸ್ಥಾಯಿ ಸಮಿತಿ ಅದ್ಯಕ್ಷ ಸದಾಶಿವಮೂರ್ತಿ, ಡಿ.ಎಸ್.ಒ ನಾಗರಾಜು, ಡಾ.ಲೋಕೇಶ್, ಅರೋಗ್ಯ ಇಲಾಖೆ ದೊರೆಸ್ವಾಮಿ, ಇನ್ನು ಮುಂತಾದವರು ಹಾಜರಿದ್ದರು.
ಕುಂದು-ಕೊರತೆ ಆಲಿಸಿದ ಉಸ್ತುವಾರಿ ಸಚಿವರು
*ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ, ಮೇ 31 - ಸಾರ್ವಜನಿಕರ ಕುಂದುಕೊರತೆ ಆಲಿಸಿ ಪರಿಹರಿಸುವ ಸಲುವಾಗಿ ಆಹಾರ, ನಾಗರೀಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್‍ರವರು ಇಂದು ನಗರದಲ್ಲಿ ನಡೆಸಿದ ಕುಂದು-ಕೊರತೆ, ಆಲಿಸಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಬೆಳಿಗ್ಗೆ ಸಾರ್ವಜನಿಕರು ಉಸ್ತುವಾರಿ ಸಚಿವರನ್ನು ಕಂಡು ತಮ್ಮ ಕುಂದು-ಕೊರತೆಗಳನ್ನು ನಿವೇದಿಸಿಕೊಂಡರು. ಇನ್ನೂ ಕೆಲವರು ಲಿಖಿತವಾಗಿ ಅರ್ಜಿ ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.ಖಾತೆ ಬದಲಾವಣೆಗಾಗಿ ಕಳೆದ ಹಲವು ದಿನಗಳಿಂದ ತಾವು ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಯಾವುದೇ ಪರಿಹಾರ ದೊರೆತಿಲ್ಲವೆಂದು ನಾಗರೀಕರೊಬ್ಬರು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿ ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಯವರಿಂದ ಮಾಹಿತಿ ಪಡೆದುಕೊಂಡ ಉಸ್ತುವಾರಿ ಸಚಿವರು, ಮನವಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ತಿಳಿಸಿದರು.
ಈ ಸಂಬಂಧ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಬಿ.ರಾಮುರವರು ಸಣ್ಣ ಜಮೀನುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸುವ ಸಂಬಂಧ ಕೆಲವು ನಿಬಂಧನೆಗಳು ಇವೆ ಇದನ್ನು ಅನುಸರಿಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಈ ಸಂಬಂಧ ತಾವು ಸಹ ಉನ್ನತಮಟ್ಟದಲ್ಲಿ ಸಮಾಲೋಚಿಸುತ್ತೇನೆ, ಅರ್ಹರಿಗೆ ಅನುಕೂಲವಾಗುವಂತೆ ಚಿಂತನೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.
ಉದ್ಯೋಗ ಅಕಾಂಕ್ಷಿ ಅಭ್ಯರ್ಥಿಯೊಬ್ಬರು ತಮ್ಮ ಪದವಿಗೆ ಅನುಗುಣವಾಗಿ ಪ್ರಥಮದರ್ಜೆ ಗುಮಾಸ್ತರ ಹುದ್ದೆಗೆ ವರದಿ ಮಾಡಿಕೊಳ್ಳಲು ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ, ಬದಲಿಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ. ಈ ಬಗ್ಗೆ ನಿರ್ದೇಶನ ನೀಡಬೇಕೆಂದು ಕೋರಿದರು. ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿಯವರಿಂದ ಮಾಹಿತಿ ಯನ್ನು ಸಚಿವರು ಪಡೆದುಕೊಂಡರು. ಪದವಿ ಪ್ರಮಾಣ ಪತ್ರ ತೊಡಕಿನಿಂದ ಸಮಸ್ಯೆ ಉಂಟಾಗಿದೆ ಈಗ ಪ್ರಸ್ತುತ ಹುದ್ದೆಗೆ ವರದಿ ಮಾಡಿಕೊಂಡು ಕಾನೂನು ಸಲಹೆ ಪಡೆದು ಮುಂದಿನ ಅವಕಾಶಕ್ಕೆ ಮನವಿ ಮಾಡಿಕೊಳ್ಳುವಂತೆ ಸಚಿವರು ಸಲಹೆ ನೀಡಿದರು.
ಕೆ.ಎಸ್.ಆರ್.ಟಿ.ಸಿ ನೌಕರರೊಬ್ಬರು ತಮ್ಮನ್ನು ಸರಿಯಾದ ಕಾರಣ ನೀಡದೇ ಕೆಲಸದಿಂದ ಹೊರಹಾಕಲಾಗಿದೆ. ನನಗೆ ಬರಬೇಕಿರುವ ಯಾವುದೇ ಭತ್ಯೆ, ಇತರೇ ಸೌಲಭ್ಯಗಳನ್ನು ಕಲ್ಪಿಸಲು ಹಿಂದೇಟು ಹಾಕಲಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ನನ್ನ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ಕಲ್ಪಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಭತ್ಯೆ, ಇತರೇ ಸೌಲಭ್ಯಗಳನ್ನು ನೀಡಲು ನಿಯಮಾನುಸಾರವಾಗಿ ಪರಿಶೀಲಿಸುವಂತೆ ಸ್ಥಳದಲ್ಲೇ ಇದ್ದ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಯಾವುದೇ ಕಾರಣಕ್ಕೂ ಉದ್ಯೋಗ ನೀಡಲು ಅವಕಾಶ ಇರುವುದಿಲ್ಲ ಎಂಬುದನ್ನು ಸಚಿವರು ಮನವಿದಾರರಿಗೆ ಸ್ಪಷ್ಟಪಡಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ಚೂಡ ಅಧ್ಯಕ್ಷರಾದ ಸುಹೇಲ್ ಆಲಿ ಖಾನ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪವಿಭಾಗಾಧಿಕಾರಿ ರೂಪ ಇನ್ನಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸ್ವಚ್ಛತೆ, ಆರೋಗ್ಯ ಪೂರಕ ಕಾರ್ಯಕ್ರಮಗಳಿಗೆ ನಿಗಾವಹಿಸಲು ಉಸ್ತುವಾರಿ ಸಚಿವರ ಸೂಚನೆ
*ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ, ಮೇ 31 - ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯ ಪೂರಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವಂತೆ ಆಹಾರ, ನಾಗರೀಕ ಸರಬರಾಜು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಮಳೆ, ಬೆಳೆ, ಇತರೆ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ವರದಿಗಳು ಬರುತ್ತಿವೆ. ಹೀಗಾಗಿ ಗ್ರಾಮ, ಪಟ್ಟಣ ನಗರ ಪ್ರದೇಶ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು. ಮಳೆಯ ನೀರು ನಿಂತು ಯಾವುದೇ ತೊಂದರೆಗೆ ಅವಕಾಶವಾಗದಂತೆ ಚರಂಡಿಗಳ ಸ್ವಚ್ಛತೆ ಮಾಡಬೇಕು, ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಮಳೆಗಾಲ ಸಂದರ್ಭದಲ್ಲಿ ಆರೋಗ್ಯದ ಕಡೆಯೂ ಹೆಚ್ಚು ಗಮನ ನೀಡಬೇಕಿದೆ. ಮಳೆಗಾಲದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳು ಉಲ್ಬಣವಾಗದಂತೆ ಮುನ್ನೆಚ್ಚರಿಕೆಯಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗ್ರತೆ ವಹಿಸಬೇಕಿದೆ, ಜನರಿಗೆ ಅರಿವು ನೀಡಿ ಮಾಹಿತಿ ನೀಡುವ ಕೆಲಸವನ್ನು ನಿರ್ವಹಿಸಬೇಕಿದೆ ಎಂದರು.
ಮಳೆಗಾಲದ ವೇಳೆ ದಿನದ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುವ ಸಹಾಯವಾಣಿ ಕೇಂದ್ರ ತೆರೆಯಬೇಕು, ವಿಶೇಷವಾಗಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ವಿದ್ಯುತ್ ಪೂರೈಸುವ ನಿಗಮದ ಅಧಿಕಾರಿಗಳು ಸಹ ದೂರು ಬಂದ ಕೂಡಲೇ ಜನರಿಗೆ ಸ್ಪಂದಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಹಾನಿಗೆ ಒಳಗಾದ ಆಸ್ತಿ-ಪಾಸ್ತಿ, ಸಂತ್ರಸ್ಥ ಜನರಿಗೆ ಪರಿಹಾರ ನೀಡುವ ಕೆಲಸ ಶೀಘ್ರಗತಿಯಲ್ಲಿ ಆಗಬೇಕು. ಪ್ರಸ್ತುತ ಪರಿಹಾರ ಒದಗಿಸಬೇಕಿರುವ ಪ್ರಕರಣಗಳನ್ನು ನಿಯಮಾನುಸಾರ ಪರಿಶೀಲಿಸಿ ತುರ್ತಾಗಿ ವಿಲೇವಾರಿ ಮಾಡುವಂತೆ ಸಚಿವರು ಸೂಚಿಸಿದರು.
ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಬಿತ್ತನೆಬೀಜ, ರಸಗೊಬ್ಬರ, ಕೃಷಿ ಪರಿಕರಗಳನ್ನು ಸಮರ್ಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.
ನದಿಮೂಲದಿಂದ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿ ಪರಿಶೀಲಿಸಿದ ಸಚಿವರು ಜುಲೈ ಅಂತ್ಯದೊಳಗೆ ಶುದ್ಧೀಕರಿಸಿದ ನೀರನ್ನು ಒದಗಿಸಲು ಅವಶ್ಯವಿರುವ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ನಗರ ಸೇರಿದಂತೆ ಪಟ್ಟಣದ ಪ್ರದೇಶಗಳಲ್ಲಿ ಹಾದು ಹೋಗಿರುವ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸ್ಪಷ್ಟ ನಿರ್ಧಾರ ಕೈಗೊಂಡು ಮುಂದಿನ ಕೆಲಸಗಳಿಗೆ ಅನುವು ಮಾಡಿಕೊಡಲು ತುರ್ತಾಗಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಯವರಿಗೆ ಉಸ್ತುವಾರಿ ಸಚಿವರು ತಿಳಿಸಿದರು.
ಇದೇ ವೇಳೆ ಮೈಸೂರಿನಲ್ಲಿ ನಡೆಯಲಿರುವ ಫಲಾನುಭವಿಗಳ ಸವಲತ್ತು ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಕೈಗೊಂಡಿರುವ ಸಿದ್ಧತೆಗಳನ್ನು ಸಚಿವರು ಪರಿಶೀಲಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್.ಜಯಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ಚೂಡ ಅಧ್ಯಕ್ಷರಾದ ಸುಹೇಲ್ ಆಲಿ ಖಾನ್, ಜಿಲ್ಲಾಧಿಕಾರಿ ಬಿ.ರಾಮು, ಜಿ.ಪಂ.ಸಿ.ಇ.ಓ, ಡಾ|| ಕೆ.ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪವಿಭಾಗಾಧಿಕಾರಿ ರೂಪ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಜೂನ್ 3 ರಂದು ಮೈಸೂರಿನಲ್ಲಿ ಸವಲತ್ತು ವಿತರಣಾ ಸಂಭ್ರಮ: ಸಚಿವ ಯು.ಟಿ.ಖಾದರ್
*ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ, ಮೇ 31:- ಸರ್ಕಾರದ ವತಿಯಿಂದ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಪ್ರಯೋಜನ ಪಡೆದಿರುವ ಫಲಾನುಭವಿಗಳ ಸಮಾವೇಶ ಹಾಗೂ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಜೂನ್ 3 ರಂದು ಮೈಸೂರಿನಲ್ಲಿ ಆಯೋಜಿಸಿದ್ದು, ಜಿಲ್ಲೆಯಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸಲಿದ್ದಾರೆಂದು ಆಹಾರ, ನಾಗರೀಕ ಪೂರೈಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದ ಸಚಿವರು, ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಪ್ರಯೋಜನ ಪಡೆದ ಫಲಾನುಭವಿಗಳು ಇದ್ದಾರೆ. ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಗಳನ್ನು ಸಹ ಗುರುತಿಸಲಾಗಿದೆ. ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮವು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜೂನ್ 3 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಫಲಾನುಭವಿಗಳು ಬರಲಿದ್ದಾರೆ ಎಂದರು.‘ಕೊಟ್ಟ ಮಾತು ದಿಟ್ಟ ಸಾಧನೆ’ ಎಂಬ ಘೋಷಣೆಯಡಿ ಫಲಾನುಭವಿಗಳಿಗೆ ಸವಲತ್ತು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿಯವರೇ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸುವರು. ಮೈಸೂರು ವಿಭಾಗಕ್ಕೆ ಒಳಪಡುವ ಎಲ್ಲಾ ಜಿಲ್ಲೆಗಳ ಹೆಚ್ಚು ಸಂಖ್ಯೆಯ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಬಿತ್ತನೆಬೀಜ, ಗೊಬ್ಬರ ಇತರೆ ಅಗತ್ಯ ವಸ್ತುಗಳನ್ನು ಪೂರೈಸಲು ಸೂಚಿಸಲಾಗಿದೆ. ಸ್ಥಳೀಯ ಸಂಸ್ಥೆಗಳು ಯಾವುದೇ ತೊಂದರೆಗೆ ಜನರು ಒಳಗಾಗದಂತೆ ವಹಿಸಬೇಕಿರುವ ಮುನ್ನೆಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್.ಜಯಣ್ಣ, ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಎಂ.ರಾಮಚಂದ್ರ, ಉಪಾಧ್ಯಕ್ಷರಾದ ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ಚೂಡಾ ಅಧ್ಯಕ್ಷರಾದ ಸುಹೇಲ್ ಆಲಿ ಖಾನ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಜಿಲ್ಲಾಧಿಕಾರಿ ಬಿ.ರಾಮು, ಜಿ.ಪಂ.ಸಿ.ಇ.ಓ, ಡಾ|| ಕೆ.ಹರೀಶ್ ಕುಮಾರ್, ಇತರರು ಹಾಜರಿದ್ದರು.
ಜಿಲ್ಲಾಡಳಿತ ಭವನದ ಬಳಿ ಗಿಡಗಳ ನೆಡುವಿಕೆಗೆ ಉಸ್ತುವಾರಿ ಸಚಿವರ ಚಾಲನೆ
*ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ, ಮೇ 31 - ವಿಶ್ವಪರಿಸರ ದಿನ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಆವರಣದಲ್ಲಿ ತೋಟಗಾರಿಕೆ ಇಲಾಖೆವತಿಯಿಂದ ವಿಶೇಷವಾಗಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಆಹಾರ, ನಾಗರೀಕ ಪೂರೈಕೆ ಸಚಿವರಾದ ಯು.ಟಿ.ಖಾದರ್ ಅವರು ಇಂದು ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಎದುರು ಇರುವ ವಿಶಾಲ ಪ್ರದೇಶದಲ್ಲಿ ಹಲಸು, ನೇರಳೆ, ಮಾವು, ಸೀಬೆ, ನೆಲ್ಲಿ ಇತರೆ ಅಮೂಲ್ಯ ಹಾಗೂ ಪೌಷ್ಟಿಕ ಸತ್ವವುಳ್ಳ ಹಣ್ಣುಗಳನ್ನು ಬಿಡುವ ಗಿಡ ನೆಡುವ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆ ಈ ಬಾರಿ ಹಮ್ಮಿಕೊಂಡಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಹೂವು, ಹಣ್ಣುಗಳ ಗಿಡಗಳನ್ನು ಹೆಚ್ಚಾಗಿ ಬೆಳೆದು ಪೋಷಣೆ ಮಾಡುವ ನಿಟ್ಟಿನಲ್ಲಿ ಪರಿಸರ ದಿನ ಆಚರಣೆಗೆ ಪೂರಕವಾಗಿ ಇಂದಿನಿಂದಲೇ ಕಾರ್ಯಕ್ರಮ ಆರಂಭಿಸಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಗಿಡವೊಂದಕ್ಕೆ ಮಣ್ಣು, ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಬಳಿಕ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್.ಜಯಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ಜಿಲ್ಲಾಧಿಕಾರಿ ಪಿ.ರಾಮು ಸೇರಿದಂತೆ ಇತರೇ ಗಣ್ಯರು ಸಹ ಒಂದೊಂದು ಗಿಡವನ್ನು ನೆಟ್ಟು ನೀರೆರೆದರು.
ಗಿಡಗಳನ್ನು ಉತ್ತಮವಾಗಿ ಪೋಷಣೆ ಮಾಡುವ ಮೂಲಕ ಮಾದರಿಯನ್ನಾಗಿಸುವಂತೆ ಸಚಿವರು, ಇತರೆ ಗಣ್ಯರು ಆಶಿಸಿದರು.
ಜೂನ್ 1 ರಂದು ಹರದನಹಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನÀಕ್ಕೆ ಚಿಂತನ, ಮಂಥನ
ಚಾಮರಾಜನಗರ, ಮೇ 3- ಗ್ರಾಮೀಣ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಸದುದ್ದೇಶದೊಂದಿಗೆ ಜಿಲ್ಲಾ ಪಂಚಾಯಿತಿಯು ಜಿಲ್ಲೆಯ 23 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಚಿಂತನ-ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆವತಿಯಿಂದ ಅನುಷ್ಠಾನ ಮಾಡುತ್ತಿರುವ ಕಾರ್ಯಕ್ರಮಗಳ ಪೈಕಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ, ಸ್ವಚ್ಛ ಭಾರತ್ ಮಿಷನ್ ಅಡಿ ಶೌಚಾಲಯಗಳ ನಿರ್ಮಾಣ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪುಗೊಳಿಸಲಾಗಿದೆ.
ಈ ಕಾರ್ಯಕ್ರಮಗಳ ಜೊತೆಯಲ್ಲಿಯೇ ಇತರೇ ಯೋಜನೆಗಳನ್ನು ಗ್ರಾಮೀಣ ಭಾಗದ ಜನತೆಗೆ ಪರಿಣಾಮಕಾರಿಯಾಗಿ ತಲುಪಿಸಲು ಆಯಾ ಜಿಲ್ಲಾ ಪಂಚಾಯತಿ ಕ್ಷೇತ್ರದ ಮುಖ್ಯ ಸ್ಥಳದಲ್ಲಿ ಆಯಾ ಭಾಗದ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರು, ಅಧ್ಯಕ್ಷರು, ಉಪಾಧ್ಯಾಕ್ಷರು, ಹಿರಿಯ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅನುಷ್ಠಾನ ಅಧಿಕಾರಿಗಳು ಕುಳಿತು ಚರ್ಚಿಸಿ ಫಲಪ್ರದವಾಗುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಿದ್ದಾರೆ.
ಮೊದಲಿಗೆ ಜೂನ್ 1 ರಂದು ಬೆಳಿಗ್ಗೆ 8:00 ಗಂಟೆಗೆ ಹರದನಹಳ್ಳಿಯ ವಾಲ್ಮೀಕಿ ಸಮುದಾಯ ಭವನದಲ್ಲಿ ಹರದನಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರರವರ ಸಮ್ಮುಖದಲ್ಲಿ ಕಾರ್ಯಕ್ರಮ ಆರಂಭವಾಗುತ್ತಿದೆ. ಬಳಿಕ ಜಿಲ್ಲೆಯ ಉಳಿದ 22 ಜಿ.ಪಂ ಕ್ಷೇತ್ರಗಳಲ್ಲೂ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಡುವಣ ಕಾರ್ಯಕ್ರಮ ಅನುಷ್ಠಾನ ಸಭೆಗಳು ಆಯಾ ಭಾಗದಲ್ಲೇ ಆಯೋಜಿತವಾಗಲಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ|| ಕೆ.ಹರೀಶ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳೀಯ ಪಂಚಾಯತ್ ಚುನಾಯಿತು ಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಕಾರ್ಯಕ್ರಮಗಳ ಯಶಸ್ವಿ ಜಾರಿಗೆ ಕೈಗೊಳ್ಳಬೇಕಿರುವ ಸಿದ್ಧತೆಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮುಂದಾಗಲಿದ್ದಾರೆ.
ಕಡ್ಡಾಯವಾಗಿ ಜಿಲ್ಲಾ ಕೇಂದ್ರಕೇಂದ್ರದಲ್ಲೆ ಉಳಿಯುವಂತೆ ಆದೇಶ- ಉಸ್ತುವಾರಿ ಸಚಿವ ಖಾದರ್
*ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಇಂದು ಮಾದ್ಯಮದವರೊಂದಿಗೆ ಹೇಳಿದರು. ಅವರು ಕರೆದಿದ್ದ ಪತ್ರಿಕಾಘೊಷ್ಟಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಅದಿಕಾರಿಗಳು ಇರೋದೆ ಇಲ್ಲ ಜನರ ಸಮಸ್ಯೆ ಯಾವ ಅದಿಕಾರಿಗೆ ಹೇಳಬೇಕು ಎಲ್ಲರೂ ಮೈಸೂರಿಗೆ ಬೇಗ ಹೊರಡುತ್ತಾರೆ ಎಂದು ತಿಳಿಸಿದರು. ಸಚಿವ ಖಾದರ್ ಪ್ರತಿಕ್ರಿಯಿಸಿ ಕಛೇರಿ ಮುಗಿಯುವ ತನಕ ಕಡ್ಡಾಯವಾಗಿ ಇರಬೇಕು ಎಂದರು.ಇಲ್ಲದೆ ಇದ್ದರೆ ಜಿಲ್ಲಾದಿಕಾರಿ ಹೊಣೆ ಎಂದು ಜಾರಿಕೊಂಡರೆ ಹೊರತು ಕೇಂದ್ರದಲ್ಲೆ ಮೊಕ್ಕಾಂ ಹೂಡುವ ಆದೇಶ ಮಾಡುವರೆ ಎಂದು ಕಾದುನೋಡಬೇಕಾಗಿದೆ.
ಮೈಸೂರಲ್ಲಿ ಜೂನ್ ೩ ಕ್ಕೆ-ಉಸ್ತುವಾರಿ ಸಚಿವ ಖಾದರ್ *
ವರದಿ.ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ:ಜೂನ್ 3 ರಂದು ಮಹಾರಾಣಿ ಕಾಲೇಜು ಆವರಣದಲ್ಲಿ ಕೊಟ್ಟ ಮಾತು,ದಿಟ್ಟ ಸಾದನೆ ಎಂಬ ಕಾರ್ಯಕ್ರಮ ನಡೆಯಲಿದೆ ಎಂದು ಉಸ್ತುವಾರಿ ಸಚಿವ ಖಾದರ್ ಹೇಳಿದರು. ಅವರು ನಗರದ ಜಿಲ್ಲಾಡಳಿತ ಭವನದ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಇಂದು ಮಾದ್ಯಮದವರೊಂದಿಗೆ ಈ ವಿಷಯ ಹೇಳಿದರು. ಮೈಸೂರು ವಿಭಾಗದಲ್ಲಿ ಸರ್ಕಾರಿ ಸವಲತ್ತು ವಿತರಣೆ ಮಾಡುವ ಈ ಕಾರ್ಯಕ್ರಮವನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಸರ್ಕಾರದ ಸಾದನೆ ಬಗ್ಗೆ ಸಂದೇಶ ನೀಡಲಿದ್ದಾರೆ . ಸಾವಿರಾರು ಜನ ಸವಲತ್ತು ಪಡೆಯಲಿದ್ದು ಸಾಂಕೇತಿಕವಾಗಿ ಚಾಮರಾಜನಗರದ 80 ಜನ ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಪೇದೆಗೆ ಹಲ್ಲೆ, ಆರೋಪಿ ಅರೆಸ್ಟ್
*ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ: ಇತ್ತಿಚೆಗೆ ಪೊಲಿಸ್ ಪೇದೆಯ ಮೇಲೆ ಗಲಾಟೆ ಮಾಡಿ ಹಲ್ಲೆಗೆ ಮುಂದಾಗಿದ್ದ ಆರೋಪಿಯನ್ನ ಪೊಲಿಸರು ಬಂದಿಸಿದ್ದಾರೆ. ಮೊನ್ನೆ ಘಟನೆಯ ಸಂಪೂರ್ಣ ಚಿತ್ರಣ ನಮ್ಮ ವೆಬ್ ನ್ಯೂಸ್ ಪೊರ್ಟಲ್ ಪ್ರಕಟಿಸಿತ್ತು. ರಕ್ಷಣೆ ನೀಡುವ ಪೊಲಿಸರಿಗೆ ಕೆಲವೊಮ್ಮೆ ರಕ್ಷಣೆ ಇಲ್ಲದಿದ್ದರೆ ತಮ್ಮ ಪ್ರಾಣವನ್ನೊ, ಅಂಗಾಂಗಗಳನ್ನೊ ಕಳೆದುಕೊಳ್ಳಬೇಕಾಗುತ್ತದೆ ಎಂಬುದಕ್ಕೆ ಪೇದೆ ಶಂಕರ್ ಎಂಬಾತನ ಪ್ರಕರಣ ಸಾಕ್ಷಿಯಾಗಿತ್ತು ಇದನ್ನ ಸಂಪೂರ್ಣವಾಗಿ ವಿವರಿಸಿದ್ದೇವು. ಪ್ರಕರಣದ ವಿವರ-ಹೆಚ್ಚು ಪ್ರಯಾಣಿಕರನ್ನ ತುಂಬಿ ಅಡ್ಡಾದಿಡ್ಡಿ ಪಾರ್ಕ್ ಮಾಡಿ ಸಂಚಾರಕ್ಕೆ ತೊಂದರೆಯಾಗುವುದನ್ನ ಕೇಳಲು ಹೋದ ಪೇದೆಗೆ ಚಾಲಕ ಮನಬಂದಂತೆ ಆಟೋ ಚಾಲಕ ಅವ್ಯಾಚ್ಯ ಪದಗಳನ್ನು ಬಳಸಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದಾರೆ. ಪೇದೆ ಇದನ್ನೆಲ್ಲ ಸಹಿಸಿಕೊಂಡು ಆಟೋ ಠಾಣೆಗೆ ಕರೆದೊಯ್ಯಲು ಮುಂದಾದಾಗ ಕೂರಿಸಿಕೊಂಡು ಆಟೊ ಪಲ್ಟಿ ಮಾಡಿ ಸಾಯಿಸಲು ಯತ್ನ ನಡೆಸಿದ್ದನು *ಜಿಲ್ಲಾಸ್ಪತ್ರೆಯಲ್ಲಿ ಕಾಲಿಗೆ ಪೆಟ್ಟು ಬಿದ್ದ ಕಾರಣ ಪೇದೆ ಚಿಕಿತ್ಸೆ ಪಡೆದಿದ್ದರು. * ಪಟ್ಟಣ ಠಾಣೆಗೆ ದೂರು ದಾಖಲಿಸಿದ್ದು ಆಟೋ ಪೊಲೀಸರ ವಶದಲ್ಲಿತ್ತು. ಇದೀಗ ಆರೊಪಿ ಜಿಯಾಉಲ್ಲಾ ಅವರನ್ನ ಪಟ್ಟಣ ಠಾಣಾ ಪೊಲೀಸರು ಬಂದಿಸಿದ್ದಾರೆ.
:ಮೋದಿಯವರಿಗೆ ತಾಕತ್ತಿದ್ದರೆ ರಪ್ತು ಮಾಡೊ ಅನುಮತಿ ರದ್ದು ಮಾಡಲಿ- ಉಸ್ತುವಾರಿ ಸಚಿವ ಖಾದರ್
*ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*
ಚಾಮರಾಜನಗರ: ಗೋಮಾಂಸ ನಿಷೇದ ಬಗ್ಗೆ ಮಾತನಾಡೊ ಮೋದಿಯವರು ತಾಕತ್ತಿದ್ದರೆ ರಪ್ತು ಮಾಡೊ ಅನುಮತಿ ರದ್ದು ಮಾಡಲಿ ಎಂದು ಉಸ್ತುವಾರಿ ಸಚಿವ ಖಾದರ್ ಖಾದರ್ ಖಾರವಾಗಿ ಹೇಳಿದರು ಕೇಂದ್ರದವರಿಗೆ ಶೇ.೧% ಪಶುಸಾಕೊ ಯೋಗ್ಯತೆ ಇಲ್ಲ . ದಾರಿ ತಪ್ಪಿಸೊದು ಯಾಕೆ ಸಾಕುವ ಕಾಳಜಿ ಇಲ್ಲ ಎಂದರು.
ಸಾವಿನ ಮನೆಯಲ್ಲಿ ಬೇಳೆ ಕಾಳು ಬೇಯಿಸಿಕೊಳ್ಳೊದರಲ್ಲಿ ನಿಸ್ಸೀಮರು- ಖಾದರ್. *ವರದಿ.ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ:
ಸಾವಿನ ಮನೆಯಲ್ಲಿ ಬೇಳೆ ಕಾಳು ಬೇಯಿಸಿಕೊಳ್ಳೊದರಲ್ಲಿ ನಿಸ್ಸೀಮರು ಎಂದು ಉಸ್ತುವಾರಿ ಸಚಿವ ಖಾದರ್ ಹೇಳಿದರು. ಅವರು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ,
ಅನುರಾಗ್ ತಿವಾರಿ ಸಾವಿನ ತನಿ ಖೆಗೆ ಸರ್ಕಾರದ ಸಂಪೂರ್ಣ ಬೆಂಬಲ ಇದೆ.ಬಿಜೆಪಿಯವರು ಸಾವಿನ ಮನೆಯಲ್ಲಿ ರಾಜಕೀಯ ಮಾಡ್ತಾ ಇದ್ದಾರೆ.
ಡಿ.ಕೆ.ರವಿ ಹಾಗೂ ಗಣಪತಿ ಅವರ ಸಾವಿನಲ್ಲೂ ರಾಜಕೀಯ ಮಾಡಿದ್ರು,ಸಿಬಿಐ ವರದಿ ಬಂದ ಬಳಿಕ ತೆಪ್ಪಗಾದ್ರು ಎಂದರು
ಸಾವಿನಲ್ಲಿ ರಾಜಕೀಯ ಮಾಡುವುದರಿಂದ ಒಂದು ಓಟ್ ಕೂಡ ಬರುವುದಿಲ್ಲ
ಎಂದರು
ಸಾವಿನ ಮನೆಯಲ್ಲಿ ಬೇಳೆ ಕಾಳು ಬೇಯಿಸಿಕೊಳ್ಳೊದರಲ್ಲಿ ನಿಸ್ಸೀಮರು- ಖಾದರ್. *ವರದಿ.ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ:
ಸಾವಿನ ಮನೆಯಲ್ಲಿ ಬೇಳೆ ಕಾಳು ಬೇಯಿಸಿಕೊಳ್ಳೊದರಲ್ಲಿ ನಿಸ್ಸೀಮರು ಎಂದು ಉಸ್ತುವಾರಿ ಸಚಿವ ಖಾದರ್ ಹೇಳಿದರು. ಅವರು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ,
ಅನುರಾಗ್ ತಿವಾರಿ ಸಾವಿನ ತನಿ ಖೆಗೆ ಸರ್ಕಾರದ ಸಂಪೂರ್ಣ ಬೆಂಬಲ ಇದೆ.ಬಿಜೆಪಿಯವರು ಸಾವಿನ ಮನೆಯಲ್ಲಿ ರಾಜಕೀಯ ಮಾಡ್ತಾ ಇದ್ದಾರೆ.
ಡಿ.ಕೆ.ರವಿ ಹಾಗೂ ಗಣಪತಿ ಅವರ ಸಾವಿನಲ್ಲೂ ರಾಜಕೀಯ ಮಾಡಿದ್ರು,ಸಿಬಿಐ ವರದಿ ಬಂದ ಬಳಿಕ ತೆಪ್ಪಗಾದ್ರು ಎಂದರು
ಸಾವಿನಲ್ಲಿ ರಾಜಕೀಯ ಮಾಡುವುದರಿಂದ ಒಂದು ಓಟ್ ಕೂಡ ಬರುವುದಿಲ್ಲ
ಎಂದರು
ಜೂ. 1ರಂದು ವಿಶೇಷ ಸಂಪನ್ಮೂಲ ಶಿಕ್ಷಕರ ಹುದ್ದೆಗೆ ಕೌನ್ಸೆಲಿಂಗ್
ಚಾಮರಾಜನಗರ, ಮೇ 31 :- 2017-18ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕ್ಷೇತ್ರ ಸಂಪನ್ಮೂಲ ಕೇಂದ್ರಗಳಲ್ಲಿ ವಿಶೇಷ ಸಂಪನ್ಮೂಲ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಜೂನ್ 1ರಂದು ಮಧ್ಯಾಹ್ನ 4 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಸರ್ವಶಿಕ್ಷಣ ಅಭಿಯಾನದ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೌನ್ಸೆಲಿಂಗ್ ನಡೆಸಲಾಗುವುದು.
ಮಕ್ಕಳ ಶಿಕ್ಷಣಕ್ಕೆ ಪ್ರತಿ ಬ್ಲಾಕ್‍ಗೆ 4 ವಿಶೇಷ ಬಿಇಡಿ, ಡಿಇಡಿ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಗ್ರೇಡ್ – 2 ವಿದ್ಯಾರ್ಹತೆ ಹೊಂದಿರುವ ಶಿಕ್ಷಕರು ಮೂಲ ದಾಖಲಾತಿಗಳೊಂದಿಗೆ ಕೌನ್ಸೆಲಿಂಗ್‍ಗೆ ಹಾಜರಾಗುವುದು ಎಂದು ಸಾರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ. 17ಕ್ಕೆ ದೇವರ ದಾಸಿಮಯ್ಯ ಜಯಂತಿ ಆಚರಣೆ ಮುಂದೂಡಿಕೆ
ಚಾಮರಾಜನಗರ, ಮೇ. 31 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಜೂನ್ 3ರಂದು ಹಮ್ಮಿಕೊಳ್ಳಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಜೂನ್ 17ರಂದು ಆಚರಿಸಲು ತೀರ್ಮಾನಿಸಲÁಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.ಕೈಮಗ್ಗ, ವಿದ್ಯುತ್ ಕೈಮಗ್ಗ ಖರೀದಿ ಸಹಾಯಧನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮೇ 31 - ನಗರದ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 2017-18ನೇ ಸಾಲಿಗೆ ಕೈಮಗ್ಗ ಹಾಗೂ ವಿದ್ಯುತ್ ಕೈಮಗ್ಗ ಖರೀದಿಗಾಗಿ ಆಸಕ್ತ ಅರ್ಹ ನೇಕಾರರು, ನೇಕಾರಿಕಾ ವೃತ್ತಿಯಲ್ಲಿ ತೊಡಗಿರುವ ನಿರುದ್ಯೋಗಿ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ವಲಯ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ, ನೇಕಾರರ ವಿಶೇಷ ಪ್ಯಾಕೇಜ್ ಯೋಜನೆ, ಕೈಮಗ್ಗ ವಿಕಾಸ ಯೋಜನೆಯಡಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ಖರೀದಿಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿ (ಕೊ.ಸಂ.225) ಯಿಂದ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಜೂನ್ 30ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಇಲಾಖೆಯ ದೂ.ಸಂ. 08226-222883 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.