Wednesday, 24 January 2018

“ಮಾನವೀಯತೆ ಸತ್ತಿಲ್ಲ” ನಾವು ಚಿತ್ರೀಕರಣದಲ್ಲೂ ಸಾಯ್ಸೋಲ್ಲ....#vss SHORTLY... COMING SOON

ಶೀಘ್ರದಲ್ಲೇ  ಸಾಮಾಜಿಕ ಜಾಲತಾಣದಲ್ಲಿ ತೆರೆಕಾಣಲಿರುವ “ಮಾನವೀಯತೆ ಸತ್ತಿಲ್ಲ” ಕಿರುಚಿತ್ರ  

ಏನಾದರೂ ಸಮಾಜಕ್ಕೆ ಸಂದೇಶ ಕೊಡಬೇಕು ಎಂದು ನಮ್ಮೂರ ಹೈಕಳು ತಮ್ಮಲ್ಲಿರುವ ಮೊಬೈಲ್, ಹ್ಯಾಂಡಿಕ್ಯಾಮ್,ಎಚ್.ಡಿ ಕ್ಯಾಮೆರಾ. ವಾಹನಗಳು ತೆಗೆದುಕೊಂಡು ಚಿತ್ರೀಕರಣ ಮಾಡಲು ಹೊರಟೆ ಬಿಟ್ಟರು.. ಅದೇ.. ಇದ್ದಕ್ಕಿಂದಂಗೆಯೇ ಸ್ಥಳದಲ್ಲಿ ಪಾತ್ರಗಳು, ಅವರ ಅಭಿನಯ ಸಿದ್ದಪಡಿಸಿದರೆ ಏನೆಲ್ಲಾ ಆಗಬಹುದು ಹೇಳಿ. ಆದರೂ ಯೋಜನೆ ಎಂಟತ್ತು ದಿನದಾದದ್ದಾರೂ ಅಭಿನಯಿಸೋಕೆ ಕೇವಲ ಕ್ಷಣಗಳಿಗೆ ಸೀಮಿತವಾದವು.…

ಪಾತ್ರದಾರಿಗಳು ಎಲ್ಲದಕ್ಕೂ ಸೈ ಎಂದು ಚಿತ್ರೀಕರಣ ಸ್ಥಳದಲ್ಲಿ ಸಿದ್ದರಾದರು. ಮೊದಲಿಗೆ ಯುವಕರಿಬ್ಬರು ಹೊರಡುವ ದ್ವಿಚಕ್ರವಾಹನದಲ್ಲಿ ಪೋನ್ ಕರೆಬಂದಾಗ ಹಿಂಬದಿ ಸವಾರ ಮೊಬೈಲ್ ಅಲ್ಲಿ ಮಾತನಾಡಬೇಡ ಎಂದು ಹೇಳಿದರೂ ಮುಂಬದಿ ಸವಾರ ಕೇಳದೇ ವಾಹನ ಚಾಲನೆ ಮಾಡಿದ್ದೆ ಅಪಘಾತಕ್ಕೆ ಕಾರಣವಾಯಿತು. ಇಲ್ಲಿಂದ ಪ್ರಾರಂಭವಾದ ಕಥೆ ಮಾನವೀಯತೆ ಸತ್ತಿಲ್ಲ ಅನ್ನೊ ಸಂದೇಶ ಸಾರುವ ಚಿತ್ರಣವನ್ನು ನಿರ್ದೇಶಕ ಕಿಶೋರ್ ಚಂದ್ರ ಸಿದ್ದಪಡಿಸಿದರು.

ಅಪಘಾತವಾದಾಗ ನೆರವಿಗೆ ಬಾರದ ದಾರಿಹೋಕ ಜನ,ಯುವಕರ ಸೆಲ್ಪಿಗೀಳು , ಸ್ಥಳಕ್ಕೆ ಬಂದ ಮಾದ್ಯಮ ಛಾಯಗ್ರಾಹಕರು ತಮ್ಮ ಕೆಲಸ ಮಾಡಿಕೊಂಡು ಆರಕ್ಷಕರಿಗೂ ಮಾಹಿತಿ ನೀಡದೇ ಮೌನವಹಿಸಿ, ಆಸ್ಪತ್ರೆಗೂ ದಾಖಲಿಸಿದೇ ಪಲಾಯನಗೈದ ಚಿತ್ರಣ, ಓರ್ವ ಚಿಂದಿ ಆಯುವವನ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು ಮಾಡಿದ ಚಿತ್ರಣ, ಆರಕ್ಷಕರು ಜನತೆಗೆ ನೀಡಿದ ಸಂದೇಶ ಎಲ್ಲವೂ ಇದರಲ್ಲಿ ಅಡಕವಾಗಿದೆ.
ನಾವು ಕಷ್ಟದಲ್ಲಿದ್ದರೂ ಮತ್ತೋರ್ವರಿಗೆ ಸಹಾಯ ಮಾಡಬೇಕು, ಪೋಲೀಸ್ ಪ್ರಕರಣ  ದಾಖಲಾದರೂ ಸರಿಯೇ ಇನ್ನೊಬ್ಬರಿಗೆ ನೆರವಾಗಬೇಕು, ಅದರಿಂದ ನಮಗೇನು ತೊಂದರೆಯಾಗುವುದಿಲ್ಲ ಎಂಬ ಅಂಶವನ್ನು ಈ ಕಿರುಚಿತ್ರ ಪ್ರಾಯೋಜಿಸಲಿದೆ.
ಈ ಚಿತ್ರಣದಲ್ಲಿ ಅಪಘಾತವಾದಾಗ ಚಿಂದಿ ಆಯುವವ ಅವರಲ್ಲಿದ್ದ ಮೊಬೈಲ್ ತೆಗೆದುಕೊಂಡು ಕರೆ ಮಾಡಲು ಮುಂದಾದಾಗ ಆತತನ್ನ ಕಳ್ಳ ಎಂದು ಬಿಂಬಿಸುವ, ಕರೆ ಮಾಡಲು ಅಂಗಡಿಯತ್ತ ಬಂದಾಗ ಅಂಗಡಿ ಮಾಲಕ ನೋಡುವ ನೋಟ ಎಲ್ಲವೂ ಚಿತ್ರಸಿಸಲಾಗಿದೆ. ವಿಶೇಷ ಎಂದರೆ ಇಲ್ಲಿ  ಬಹುತೇಕ ಜನರು 108 ಕರೆ ಮಾಡುತ್ತಾರೆ ಎನ್ನುವ ಭಾವನೆಯನ್ನು ಇಲ್ಲಿ ಹುಸಿಗೊಳಿಸಲಾಗುತ್ತದೆ.
ಚಿಂದಿ ಆಯುವವನ ಪಾತ್ರದಲ್ಲಿ ಪತ್ರಕರ್ತ  ರಾಮಸಮದ್ರ ಎಸ್.ವೀರಭದ್ರಸ್ವಾಮಿ ಅವರು ಹೇಳುವಂತೆ ಪಕ್ಕದಲ್ಲಿರುವ ಆಂಬ್ಯುಲೆನ್ಸ್ ಕೆಲವು ವೇಳೆ ಬರೋದೇ ಇಲ್ಲ. ಅವರು ಅವರ ನಿಯಂತ್ರಣದಿಕಾರಿ ಗಮನಕ್ಕೆ ತರುವವರೆಗೆ ಬಹುತೇಕ ಸಮಯವಾಗುತ್ತದೆ ಅದರ ಬದಲಿಗೆ 100 ಕ್ಕೆ ಕರೆ ಮಾಡದರೆ ಸಮೀಪದ ಆರಕ್ಷಕ ಸಿಬ್ಬಂದಿಗಳು ನೆರವಿಗೆ ಬರುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಠಾಣೆಗಾಗಲೀ, ಸಮೀಪದ ಆರಕ್ಷಕ ಸಿಬ್ಬಂದಿಗಾಗಲೀ, ಬೀಟ್ ಆರಕ್ಷಕರಿಗೆ ಮಾಹಿತಿ ನೀಡಿದರೆ ಅವರು ಸಮೀಪದ ಆಸ್ಪತ್ರೆಯಲ್ಲಿರುವ  ಠಾಣಾ ಕೇಂದ್ರಕ್ಕೆ ನಿಸ್ತಂತುವಾಹಿಸಿ ( ವೈರ್ ಲೆಸ್) ಮುಖಾಂತರ ಮಾಹಿತಿ ರವಾನಿಸಿದಾಗ ಆಸ್ಪತ್ರೆಯಲ್ಲಿರವ ಆರಕ್ಷಕರು ಸ್ಪಂದಿಸುತ್ತಾರೆ ಇದರಿಂದ ಗಾಯಾಳು ಬದುಕುಳಿಯೋ ಸಾದ್ಯತೆಗಳಿರುತ್ತದೆ ಎಂಬ ಮಹತ್ವವನ್ನು ಹೇಳಿದರು.
 ಬಹುತೇಕ ಅಪಘಾತ ಸ್ಥಳದಲ್ಲಿ ಮಾಹಿತಿ ನೀಡುವವರೇ ಜನಸಾಮಾನ್ಯರಾಗಿರುತ್ತಾರೆ. ಬೆರಳಣಿಕೆಯಂತಹ ಅನ್ಯ ವರ್ಗದವರು ಪೊಲೀಸ್ ಠಾಣೆಗೆ ಮಾಹಿತಿ ನೀಡೋದು ಹೊರತು ಪಡಿಸಿದರೆ ನಮಗೇಕೆ ಇದೆಲ್ಲ ಎನ್ನೋ ಉಸಾಭರಿ ಎಂದು ಹೊರಟು ಹೋಗುವವರು ಇಂತಹ ಅಮಾನವೀಯತೆ ಕೆಲಸ ಮಾಡಬೇಡಿ ಎನ್ನುವಂತಾಗಿದೆ ಈ ಚಿತ್ರಣ.
ನನ್ನ ಅಬಿಪ್ರಾಯದಂತೆ ಹೇಳುವುದಾದರೆ ಕ್ಯಾಲಿಬರ್ 115 ಅಲ್ಲಿ ಅಪಫಾತವಾದಾಗ ಓರ್ವ ಸಿಬ್ಬಂದಿ ಪ್ರಾಣ ಉಳಿಸಿದ್ದು ಉಂಟು ಆವಾಗ ವಿಚಾರಣೆ, ತನಿಖೆ ಅಂತೆಲ್ಲ ಮಾಡಿದಿತ್ತು ಆದರೆ ಈಗ ಅದೆಲ್ಲದಕ್ಕೂ ಉಚ್ಚ ನ್ಯಾಯಾಲಯದ ಆದೇಶದಂತೆ ಮುಕ್ತಿ ಸಿಕ್ಕಿದೆ. ಮೂರು ವರ್ಷದ ಹಿಂದೆ ಜೋಡಿರಸ್ತೆಯಲ್ಲಿ ಅಪಘಾತವಾದಾಗ 100 ಕರೆ ಮಾಡಿದ್ದಲ್ಲೆ ಡಿ.ಪಿ.ಓ ನಂ.9480804601 ಗೂ  ತಿಳಿಸಿದಾಗ ಸ್ವತಃ  ಅಂದಿನ ಎಸ್ಪಿ ರಾಜೇಂದ್ರ ಪ್ರಸಾದ್ ಸ್ಥಳಕ್ಕೆ ಬಂದು ಸಹಾಯ ಸಹಕಾರ ಮಾಡಿದ್ದು ಇದೆ.

ನೆನಪು ಪಿಕ್ಚರ್ ಅರ್ಪಿಸುತ್ತಿರುವ “ಮಾನವೀಯತೆ ಸತ್ತಿಲ್ಲ” ಕಿರುಚಿತ್ರದ ಚಿತ್ರಣವನ್ನು ನಂದೀಶ್ ಮಾಡಿದ್ದು ಶ್ರೀವತ್ಸ, ನವೀನ್ ಮಡಿವಾಳ್ , ಸುರೇಶ್ ,ಅಶ್ವಿನ್,ಪ್ರಸಾದ್, ಚಿಂದಿ ಆಯುವವನ ಪಾತ್ರದಲ್ಲಿ ಪತ್ರಕರ್ತ  ರಾಮಸಮದ್ರ ಎಸ್.ವೀರಭದ್ರಸ್ವಾಮಿ, ಬಂಗಾರು, ವಿಶೇಷ ಪಾತ್ರದಲ್ಲಿ ಕುಮಾರ್, ಮಾದ್ಯಮ ಛಾಯಗ್ರಾಹಕನಾಗಿ ಬಂಗಾರು, ಚೇತನ್,ಕಾರ್ತಿಕ್,ಆರಕ್ಷಕ ಪಾತ್ರದಲ್ಲಿ ಮಹೇಶ್, ದಾರಿಹೋಕನಾಗಿ ಪ್ರಸಾದ್, ನವೀನ್, ಶಿವು, ಸಿದ್ದು, ಮಗುವಿನ ಪಾತ್ರದಲ್ಲಿ ಭವೀಷ್ ಅಭಿನಯಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು