ನೀವು ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದೀರಾ.? ನೀವು ಬುದ್ದಿವಂತರಾದರೆ ಇದನ್ನು ಓದಿ….***
10 ನಿಮಿಷ ಸಮಯ ಮಾಢಿಕೊಂಡು ಓದುವಂತವರಾಗಿ, ಇಲ್ಲದಿದ್ದರೆ ಇದನ್ನ ಓದಲೇ ಬೇಡಿ. ಶೇರ್ ಮಾಡಿ ಮುಂದಿನ ಬುದ್ದಿವಂತ ಜನ ಓದುತ್ತಾರೆ. ನಾವು ಸಂದರ್ಶಕರ ಪುಸ್ತಕದ ಬಗ್ಗೆ, ಅದರ ಆಗು ಹೋಗುಗಳು, ಮಹತ್ವ, ಯಶಸ್ವಿಯಾಗಿ ನಡೆಯುತ್ತಿದಿಯೇ.? ಎಂಬುದರ ಬಗ್ಗೆ ನೇರ ಮಾತುಸಂದರ್ಶಕರೇ…ಎಚ್ಚರ.. ನೀವು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ಅಂಶಗಳು…
ಅರೆ ಇದೇನಿದು? ಪೊಲೀಸ್ ಠಾಣೆ ಮೆಟ್ಟಿಲು ಏಕೆ ಹತ್ತಬೇಕು, ನಾವು ಬುದ್ದಿವಂತರು ಅನ್ನೊದನ್ನ ನಿರ್ದರಿಸೋಕೆ ಇವರ್ಯಾರು ಎಂದು ಕೊಂಡಿದ್ದೀರಾ? ಹೌದು ನೀವು ಮೆಟ್ಟಿಲು ಏರಬೇಕಾದ ಅನಿವಾರ್ಯವಿದ್ದಾಗ ಕೆಲವು ಮುಂಜಾಗ್ರತ ಕ್ರಮವಹಿಸಿ ಇಲ್ಲದಿದ್ದರೆ ನೀವು ನಿಜವಾಗಲೂ ದಡ್ಡರೇ..!ನೀವು ಪೊಲೀಸ್ ಠಾಣೆಗೆ ಹೋಗುವಾಗಲೆ ಅಲ್ಲಿ ಸ್ವಾಗತಕಾರರು ನಿಮ್ಮನ್ನ ಸ್ವಾಗತಿಸಲು ಕಾದು ಕುಳಿತಿರುತ್ತಾರೆ ಅಷ್ಟೇ ಅಲ್ಲ ನಿಮಗೆ ಯಾವ ತರಹದ ಸಹಾಯ ಠಾಣಾ ವ್ಯಾಪ್ತಿಯಲ್ಲಿ ಆಗಬೇಕು ಎಂಬುದನ್ನು ತಿಳಿಸುತ್ತಾರೆ.
ಸಂದರ್ಶಕರ ಪುಸ್ತಕ ಎಂದರೇನು?
ಮೊಬೈಲ್ ಕಳೆದುಕೊಂಡಾಗ, ಜಗಳವಾಡಿಕೊಂಡಾಗ, ಹಣಕಾಸು, ಲೇವಾದೇವಿ ವ್ಯವಹಾರ ,ಮೋಸ ವಂಚನೆ ಪ್ರಕರಣಗಳ ದಾಖಲು ಮಾಡಬೇಕಾದಾಗ ಅಥವಾ ಯಾರಾದರನ್ನ ನೋಡಬೇಕಾದರೆ ಠಾಣೇಯಲ್ಲಿ ನಿಮ್ಮ ಹೆಸರು, ವಿಳಾಸ, ವೃತ್ತಿ ,ಏನಕ್ಕಾಗಿ, ಯಾರನ್ನ ನೋಡಲು ಬಂದಿದ್ದೀರಾ, ? ಎಂಬ ಇತ್ಯಾದಿ ಅಂಶಗಳು ಪುಸ್ತಕದಲ್ಲಿ ನೊಂದಣೆಯಾಗುತ್ತದೆ ಅದೇ ಸಂದರ್ಶಕರ ಪುಸ್ತಕ ಎಂದು ಕರೆಯಲ್ಪಡುತ್ತದೆ. ಆದರೆ ಈಗ ಉನ್ನತೀಕರಿಸಿ ಈ ಸಂದರ್ಶಕರು ಎಂದು ಕಂಪ್ಯೂಟರ್ ಅಲ್ಲಿ ನಮೂದಿಸಲಾಗುತ್ತಿದೆ.ನಾ ಕಂಡಂತೆ ಚಾಮರಾಜನಗರದಲ್ಲಿ ಜಿಲ್ಲಾ ಪೊಲೀಸ್ ವರೀಷ್ಟಾಧಿಕಾರಿ ಮದುಕರ್ ಶೆಟ್ಟಿ ಅವರು ಹಿಂದೆ ಎಸ್ಪಿ ಅವರ ಹುದ್ದೆಯಲ್ಲಿ ಅದಿಕಾರದಲ್ಲಿದ್ದಾಗ ಈ ಯೋಜನೆ ಜಾರಿಯಲ್ಲಿತ್ತು ಅಷ್ಟೇ ಅಲ್ಲ ಚಾಚು ತಪ್ಪದೆ ಪಾಲನೆಯಾಗುತ್ತಿತ್ತು. ನಂತರ ಇವರು ಬೇರೆಡೆಗೆ ವರ್ಗಾವಣೆಯಾದ ಮೇಲೆ ಇದನ್ನು ಕಂತೆ ಕಟ್ಟಿ ಗುಡ್ ಬೈ ಹೇಳಿದ್ದರು.
ಸಡನ್ ಆಗಿ ಮತ್ತೆ ಕಾಣಿಸಿಕೊಂಡಿದ್ದೆ 2015 ರ ಎಸ್ಪಿ ಕುಲದೀಪ್ ಕುಮಾರ್ ಜೈನ್ ಅವರ ಅವದಿಯಲ್ಲಿ ಅದೂ ಅವರ ಕಚೇರಿಯಲ್ಲಿ,,… ಇನ್ನ ಯಾವುದೇ ಠಾಣೆಯಲ್ಲಿ ಇರಲಿಲ್ಲ.. ಈ ಪುಸ್ತಕ ಇಡುವಂತೆ ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಅವರು ಎರಡು ಬಾರಿ ಜೈನ್ ಅವರಿಗೆ ಅರ್ಜಿ ಸಲ್ಲಿಸಿದ್ದರು.ಅಷ್ಟೇ ಅಲ್ಲ ದಕ್ಷಿಣ ವಲಯ ಮಹಾನಿರ್ದೇಶಕರಿಗೆ, ಬೆಂಗಳೂರು ಮಹಾನಿರ್ದೇಶಕರಿಗೂ ಮನವಿ ಮಾಢಲಾಗಿತ್ತು.
ಈಗ ಎಲ್ಲೆಡೆ ಠಾಣೆಗಳಲ್ಲಿ ಸಂದರ್ಶಕರ ಪುಸ್ತಕ ರಾರಾಜಿಸುತ್ತಿದೆ. ಸ್ವಾಗತಕಾರರು ಸಹಾಯ ಬೇಕೆ ಎಂಬ ಪುಟ್ಟ ನಾಮಫಲಕ ಹಾಕಿ ತಮ್ಮ ಸಂದರ್ಶಕರನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಬೀಟ್ ವ್ಯವಸ್ಥೆಯಿಂದ ಕಡಿಮೆಯಾಗಿದ್ದ ಠಾಣೇಗಳಲ್ಲಿ ಜನರ ದರ್ಶನ, ಈಗ ಸಂದರ್ಶಕರ ಪುಸ್ತಕ ಬಂದ ಮೇಲಂತು ಮೊದಲು ಠಾಣೆಗೆ ಬರುತ್ತಿದ್ದ ಜನರು, ಮದ್ಯವರ್ತಿಗಳ ಸಂಖ್ಯೆ ತೀರ ಕಡಿಮೆಯಾಗಿದೆ.
ಸಂದರ್ಶಕರ ಪುಸ್ತ ಅಗತ್ಯವೇನು?
ಹೌದು ಇದರ ಅಗತ್ಯ ಏನಿದೆ ಅಂತೆಲ್ಲ ಕೇಳಬಹುದು.. ಮುಂದೆ ನೀವು ಮೆಟ್ಟಿಲು ಏರಿದಾಗ ಬಹುಶಃ ನಿಮಗೆ ಗೊತ್ತಾಗುತ್ತದೆ. ನನಗೆ ಅನುಭವಕ್ಕೆ ಬಂದಂತೆ, ಹೊಂಗನೂರು ಗಲಭೆ ಪ್ರಕರಣದಲ್ಲಿ ಕೆಲವರು ಟಪಾಲು ವಿಬಾಗಕ್ಕೆ ಅರ್ಜಿ ಕೊಟ್ಟು ಬಂದು ಅರ್ಜಿ ಕೊಟ್ಟಿದ್ದೇನೆ, ಏನು ಕ್ರಮ ತೆಗೆದುಕೊಂಡಿದ್ದೀರಾ ಎಂದು ಸಾರ್ವಜನಿಕ ಕೇಳಿದಾಗ ಎಸ್ಪಿ ಜೈನ್ ಕೊಟ್ಟ ಉತ್ತರ ಇಷ್ಟೆ…,, ನಿನಗೆ ನ್ಯಾಯ ಬೇಕಿದ್ದರೆ ನೇರವಾಗಿ ನನ್ನ ಬಳಿ ಬರಬೇಕಿತ್ತು. ಯಾವುದೋ ಅರ್ಜಿಯನ್ನು ಎಲ್ಲಿಗೋ ಕೊಟ್ಟು ಹೋದರೆ ಅದು ನನ್ನ ಬಳಿ ಬರುವ ತನಕ ವಿಳಂಬವಾಗಬಹುದು ಅಥವಾ ಅದರ ವಿಚಾರ ಏನು ಎಂಬುದು ತಿಳಿಯಲು ಸಮಯವಕಾಶ ಬೇಕಾಗಬಹುದು ಎಂದಿದ್ದರು.
ಸುಮ್ಮನಾಗದ ಸಾರ್ವಜನಿಕ ನಿಮ್ಮನ್ನು ನೋಡಿಯೇ ಅರ್ಜಿ ಕೊಟ್ಟು ಬಂದು ಮಾತನಾಢುತ್ತಿರುವುದು ಎಂದಾಗ ನೀವು ಎಲ್ಲಿಗೆ ಯಾಕೆ ಬಂದಿದ್ದೀರೀ, ಯಾವಾಗ ಬಂದಿದ್ದೀರಾ ಎಂಬ ಎಲ್ಲಾ ಅಂಶ ಕಛೇರಿಯಲ್ಲಿ ಸಿಗುತ್ತದೆ ಬನ್ನಿ ತೋರಿಸುತ್ತೇವೆ ಎಂದರು. ನೂರಾರು ಜನರ ಮದ್ಯೆ ಈ ಖಡಕ್ ಉತ್ತರಕ್ಕೆ ಆತನಿಗೆ ಬೆವರು ಇಳಿದೇ ಹೋಯಿತು.ಇದು ಇಲಾಖೆಯದು ಒಂದು ಕಡೆಯಾದರೆ ನನ್ನ ಸ್ವಂತ ಅನುಭವ ಕಥೆಯೂ ಇದೆ ಕೇಳಿ….ಒಂದು ಮಾನವ ಹಕ್ಕು ಆಯೋಗ ಮತ್ತು ಎಸ್ಪಿ ಅವರ ಆದೇಶದ ಅರ್ಜಿ ವಿಚಾರಣೆ ಚಾಮರಾಜನಗರದಿಂದ ಗುಂಡ್ಲುಪೇಟೆಗೆ ಹೋಗಿ ಬರಬೇಕಾದ ಸ್ಥಿತಿಯನ್ನು ಅಲ್ಲಿನ ಪೇದೆ …(ವಿ…..ಪೇದೆ ಮೊದಲ ಹೆಸರು.) ಸೃಷ್ಟಿ ಮಾಢಿದ್ದರು.
ಎಷ್ಟೇ ಆದರೂ ಇವರ ಆದೇಶ ಉಲ್ಲಂಘನೆ ಮಾಢುವುದು ಬೇಡ ಎಂದು ಠಾಣೆಗೆ ಹೋದರೆ ಅಲ್ಲಿ ನಾಟಕೀಯ ವ್ಯವಸ್ಥೆ ಇನ್ಸ್‍ಪೆಕ್ಟರ್ (ಪ್ರ) ಅವರದ್ದು, ನಾನು ಅಲ್ಲಿದ್ದೀನಿ, ಇಲ್ಲಿದೀನಿ ಅಂತ, ಹೋಗಿರುವುದಕ್ಕೆ ನಾನು ಸಾಕ್ಷಿಯಿಲ್ಲ. ಏನು ಮಾಡೋದು ಯೋಚಿಸಿ ಅಲ್ಲಿ ಪೊಟೋ ತೆಗೆದು ವರೀಷ್ಠಾಧಿಕಾರಿ ಜೈನ್ ಅವರಿಗೆ ಕಳುಹಿಸಬೇಕಾದ ಸ್ಥಿತಿ ಎದುರಾಯಿತು. ನಾನೇನು ವಿದ್ಯಾವಂತ, ಆಂಡ್ರಾಯ್ಡ್ ಮೊಬೈಲ್, ಸಾಮಾಜಿಕ ಜಾಲತಾಣದ ಅರಿವು, ಹಿರಿಯ ಅದಿಕಾರಿಗಳÀ ದೂರವಾಣಿ ಸಂಖ್ಯೆ ಗೊತ್ತಿತ್ತು ಕಳಿಸಿದೆ. ಠಾಣೆಗೆ ಬಂದವರೆಲ್ಲ ಕಳಿಸಬೇಕಲ್ಲ.. ರೈತರು, ಕೂಲಿಕಾರರು, ಬರುತ್ತಾರೆ ಅವರಿಗೆ ಗದ್ಗರಿತ ಮಾತು ಕೇಳಿ ಭಯ ಉಂಟುಮಾಡುವವರು ಇರುವಾಗ ಇನ್ನೆಲ್ಲಿ ಎಸ್ಪಿ ಅವರ ಜೊತೆ ದರ್ಶನ, ಸಂದರ್ಶನ ನೀವೆ ಹೇಳಿ. ಆದರೂ ನಿಮಗೆ ಒಂದಷ್ಟು ಟಿಪ್ಟ್ ಕೊಡ್ತೇವೆ ಪಾಲಿಸಿ.
ನಿಮಗಿಷ್ಟು ಟಿಪ್ಸ್….:.
1) ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಂತೆಯೇ ನೀವು ನೇರವಾಗಿ ಸ್ವಾಗತಕಾರರ ಬಳಿ ಹೋಗಿ ಅವರು ಕೇಳಿದ ನಿಮ್ಮ ಮಾಹಿತಿಯನ್ನು ನೀಡಿ ಹಾಗೇ ಅವರ ಹೆಸರು. ಇಲಾಖೆ ನೀಡಿದ ಫೊನ್ ನಂಬರ್ ಪಡೆಯಿರಿ.2)ಕಡ್ಡಾಯವಾಗಿ ನೀವು ಪ್ರವೇಶ ಕೊಟ್ಟ ಸಮಯವನ್ನು ಸಂದರ್ಶಕರ ಪುಸ್ತಕದಲ್ಲಿ ಅವರು ಬರೆದುಕೊಳ್ಳುವಂತೆ ಹೇಳಿ, ಬರುವಾಗ ನೀವು ಆ ಜಾಗ ಬಿಡುವ ಸಮಯ ಕಡ್ಡಾಯವಾಗಿ ನಮೂದಿಸಿ ಬನ್ನಿ.
3) ನಿಮ್ಮ ಖಾಸಗೀ ವಾಹನಗಳನ್ನು ಠಾಣೆಯ ಹೊರಗಡೆ ನಿಲ್ಲಿಸಿ, ಒಳಗಡೆ ತೆಗೆದುಕೊಂಡು ಪಾರ್ಕಿಂಗ್ ಸಮಸ್ಯೆಗೆ ನೀವು ಕಾರಣರಾಗಬೇಡಿ.
4) ನಿಮಗೆ ಅಲ್ಲಿ ಯಾರಾದರೂ ಸರಿಯಾಗಿ ಸ್ಪಂದಿಸದಿದ್ದರೆ ಹಿರಿಯ ಅದಿಕಾರಿಗಳು ,ವರೀಷ್ಟಾಧಿಕಾರಿಗಳ ಬಳಿ ಅಪ್ಪಣೆ ಪಡೆದು ಮೌಖಿತ, ಲಿಖಿತ ದೂರು ಸಲ್ಲಿಸಿ.
5) ನಿಮ್ಮ ವಿಚಾರಣೆ ಮಾಡುವ ಅದಿಕಾರಿಗಳು, ಸ್ಥಳದಲ್ಲಿರುವ ಪೇದೆಗಳು, ಸಿಬ್ಬಂದಿಗಳು ಯಾರು ಏನು? ( ಒಂದೆ ಹೆಸರಿನವರು ಇಬ್ಬರು ಮೂವರು ಇದ್ದರೆ ಕಷ್ಟ, ಆದರೆ (ಮೆಟಲ್) ಸಂಖ್ಯೆ ಬದಲಾಗಿರುತ್ತದೆ.
5) ಹಣಕಾಸು ವ್ಯವಹಾರಿವಿದ್ದರೆ ಚೆಕ್, ಡಿ.ಡಿ ಮೂಲಕ ವ್ಯವಹರಿಸಿ ನಿಮಗೆ ಆದಾಯ ಅದಿಕಾರಿಗಳಿಂದ ವಿಚಾರಣೆ ತಪ್ಪಬಹುದು
ಡಿ.ಜಿ.ಪಿ ಅವರೇ ಧನ್ಯವಾದಗಳು,
ನಾನು ಬರೆದ ಕೆಲವು ಪತ್ರಗ ಳನ್ನ ಓದಿ ಈಗಾಗಲೇ ಅಂದು ( ಆರ್.ಕೆ.ದತ್ತ ಅವರು ಕ್ರಮ ತೆಗೆದುಕೊಂಡಿರುತ್ತೀರಿ ಧನ್ಯವಾದಗಳು, ಇನ್ನು ಸಿ.ಸಿ.ಕ್ಯಾಮೆರಾ ಅಳವಡಿಕೆ ಬಗ್ಗೆ ಅನುಮೋದನೆ ಸಲ್ಲಿಕೆ ಕುರಿತು ತಿಳಿಸಿರುತ್ತೀರಿ. ಆದರೆ ಇಂದು ಚಾಮರಾಜನಗರದಲ್ಲಿರುವ ಇಲಾಖೆಯ ಸಿ.ಸಿ.ಕ್ಯಾಮೆರಾ ಕೆಟ್ಟಿದೆ. ಈಗಾಗಲೇ ಚಾಲ್ತಿ ಮಾಢಿರುವ ಸಂದರ್ಶಕರ ಪುಸ್ತಕದ ವಿವರ (ನನಗೆ ತಿಳಿದು ಬಂದಂತೆ 23-11-2017) ಸರಿಯಾಗಿ ಮಾಹಿತಿ ಪಡೆಯುತ್ತಿಲ್ಲ ಅಷ್ಟೇ ಅಲ್ಲಿ ನಮೂದಿಸುತ್ತಿಲ್ಲ ಎಂಬ ಗಂಬೀರ ಆರೋಪ ಮಾಢುತ್ತಿದ್ದೇನೆ. ಅದನ್ನು ಇಂದಿನ ಡಿ.ಜಿ.ಪಿ ನೀಲಮಣಿ ರಾಜು ಅವರಿಗೆ ಪತ್ರ ಮುಖೆನಾ ತಿಳಿಸುತ್ತಿದ್ದೇನೆ. ಗಂಬೀರವಾಗಿ ಪರಿಗಣಿಸಿ ಪರಿಶೀಲಿಸಿ..….ಸಂಪರ್ಕಿಸಿ...
ಚಾಮರಾಜನಗರ ನಿವಾಸಿಗಳಾಗಿದ್ದರೆ ದಯಮಾಡಿ ಎಸ್ಪಿ--9480804600, 9480804601,
No comments:
Post a Comment