Wednesday, 3 January 2018

ಚಿಕ್ಕಲ್ಲೂರು ಜಾತ್ರೆ : ಪ್ರಾಣಿಬಲಿ ನಿಷೇಧ – ಉಸ್ತುವಾರಿಗೆ ಹೆಚ್ಚುವರಿ ಸೆಕ್ಟರ್ ಆಫೀಸರ್‍ಗಳ ನಿಯೋಜನೆ (03-01-2018)

ಚಿಕ್ಕಲ್ಲೂರು ಜಾತ್ರೆ : ಪ್ರಾಣಿಬಲಿ ನಿಷೇಧ – ಉಸ್ತುವಾರಿಗೆ ಹೆಚ್ಚುವರಿ ಸೆಕ್ಟರ್ ಆಫೀಸರ್‍ಗಳ ನಿಯೋಜನೆ

ಚಾಮರಾಜನಗರ, ಜ. 03 - ಚಿಕ್ಕಲೂರು ಜಾತ್ರಾ ಸಂಬಂಧ ಪ್ರಾಣಿಬಲಿ ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು, ಪ್ರಾಣಿಬಲಿ ನಿಷೇಧ ಕುರಿತು ನಾಗರಿಕರಿಗೆ ತಿಳಿವಳಿಕೆ ನೀಡುವ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಘಟನೆಗಳು ಸಂಭವಿಸಿದರೆ ತಕ್ಷಣ ಆದೇಶ ಮಾಡುವ ಸಲುವಾಗಿ ನೇಮಕ ಮಾಡಲಾಗಿರುವ ಸೆಕ್ಟರ್ ಆಫೀಸರ್‍ಗಳ ನಿಯೋಜನೆ ಸಂಬಂಧ ಪರಿಷ್ಕøತ ಆದೇಶ ಮಾಡಲಾಗಿದೆ.
    ಎರಡನೇ ಪಾಳಿಯಲ್ಲಿ (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ) ಕೊತ್ತನೂರು ಬಾಣೂರು, ಸುಂಡಳ್ಳಿ ಗ್ರಾಮಗಳ ಸುತ್ತ ಮುತ್ತಲ ಪ್ರದೇಶಕ್ಕೆ ಯಳಂದೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧೀಕಾರಿ ಮಲ್ಲಿಕಾರ್ಜುನಸ್ವಾಮಿ (ಮೊ. 9480695110) ಇವರನ್ನು ನಿಯೋಜಿಸಿದೆ.
ಶ್ರೀ ಕ್ಷೇತ್ರ ಚಿಕ್ಕಲೂರು ಹೊಸ ಮಠದಲ್ಲಿನ ಜಾತ್ರ ಮಹೋತ್ಸವ ನಡೆಯುವ ವೇಳೆ ಪ್ರಾಣಿ ಬಲಿ ನಿಷೇಧ ಸಂಬಂಧದ ಸಂಪೂರ್ಣ ಮೇಲುಸ್ತುವಾರಿ ನಿರ್ವಹಿಸಿ ಹಾಗೂ ಕೊಳ್ಳೇಗಾಲದ ಉಪವಿಭಾಗಾಧಿಕಾರಿಗಳೊಂದಿಗೆ ಸಮನ್ಮಯ ಸಾಧಿಸಿ ವರದಿ ಸಲ್ಲಿಸಲು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರಾದ ಎಂ.ಎನ್. ಮುರುಳೇಶ್ (ಮೊ: 9945119833/9980452844)  ಅವರನ್ನು ನಿಯೋಜಿಸಲಾಗಿದೆ.

ಕರಾವಳಿ ಭದ್ರತಾ ಪಡೆ ಹುದ್ದೆಗಳ ತರಬೇತಿಗೆ ಅರ್ಜಿ ಆಹ್ವಾನ


ಚಾಮರಾಜನಗರ, ಜ. 03:- ಭಾರತೀಯ ಕರಾವಳಿ ಭದ್ರತಾ ಪಡೆಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಪುರುಷ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಲಿದ್ದು ಅರ್ಜಿ ಆಹ್ವಾನಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತರಬೇತಿ ನೀಡಲಿದೆ.  ಹಿಂದುಳಿದ ವರ್ಗಗಳಾದ ಪ್ರವರ್ಗ-1, 2(ಎ), 3(ಎ), ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುವುದು. ಅಭ್ಯರ್ಥಿಗಳು ಜನವರಿ 10ರ ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಇಲಾಖೆ ವೆಬ್‍ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.iಟಿ ಸಹಾಯ ವಾಣಿ 080-65970004 ಸಂಪರ್ಕಿಸಲು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಯುವ ಸಂಘಗಳಿಗೆ ಸುತ್ತು ನಿಧಿ: ಅರ್ಜಿ ಆಹ್ವಾನ


ಚಾಮರಾಜನಗರ, ಜ. 03 -  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017- 18ನೇ ಸಾಲಿನ ಯುವ ಶಕ್ತಿ ಯೋಜನೆಯಡಿ ಆದಾಯೋತ್ಪನ್ನ ಚಟುವಟಿಕೆ ಹಮ್ಮಿಕೊಳ್ಳಲು ಸುತ್ತು ನಿಧಿ ನೀಡುವ ಸಲುವಾಗಿ ಯುವ ಸಂಘಗಳಿಂದ ಅರ್ಜಿ ಆಹ್ವಾನಿಸಿದೆ.
ಯುವ ಶಕ್ತಿ ಯೋಜನೆಯಡಿ ಸಾಮಾಜಿಕ ಕ್ಷೇತ್ರದಲ್ಲಿ ಅಸಾಧಾರಣ ಪ್ರಗತಿ ಕೆಲಸವನ್ನು ಮಾಡುತ್ತಿರುವ ಇಲಾಖೆಯಲ್ಲಿ ನೊಂದಾಯಿಸಿಕೊಂಡು ನವೀಕರಿಸಿದ ಯುವಕ ಯುವತಿ ಸಂಘಗಳನ್ನು ಆಯ್ಕೆ ಮಾಡಿಕೊಂಡು  ತಲಾ 5ಲಕ್ಷ ರೂ.  ಸುತ್ತು ನಿಧಿ ಮಂಜೂರು ಮಾಡಲಾಗುತ್ತದೆ.
 ನಗರದ ಜಿಲ್ಲಾಡಳಿತ ಭವನದಲ್ಲಿರುವÀ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಜನವರಿ 10 ಒಳಗೆ ಸಲ್ಲಿಸಬೇಕು.
 ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು (ದೂ. 08226-224932) ಸಂಪರ್ಕಿಸಲು ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.     

 ಪ್ರಥಮ ಪಿಯುಪರೀಕ್ಷೆ: ನೊಂದಣಿಗೆ ಸೂಚನೆ


ಚಾಮರಾಜನಗರ, ಜ. 03 -  201-18 ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಫೆಬ್ರವರಿ 08 ರಿಂದ 21ರ ವರೆಗೆ ನಡೆಯಲ್ಲಿದೆ. ಪರೀಕ್ಷೆಗೆ ಹಾಜರಾಗಲು ಬಯಸುವ ಅನುತ್ತೀರ್ಣರಾz ವಿದ್ಯಾಥಿಗಳು ಒಂದು ವಿಷಯಕ್ಕೆ 50 ರೂ, ಎರಡು ವಿಷಯಕ್ಕೆ 100 ರೂ. ಹಾಗೂ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ 150 ರೂ. ನಂತೆ ಪರೀಕ್ಷ ಶುಲ್ಕ ಪಾವತಿಸಿ ಜನವರಿ 10ರೊಳಗೆ ಸಂಬಂಧಿಸಿದ ಕಾಲೇಜುಗಳಲ್ಲಿ ನೊಂದಾಯಿಸಿಕೊಳ್ಳುವಂತೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರವೀಂದ್ರ ಕುಮಾರ್ ಪಿಳ್ಳೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು