Tuesday, 23 January 2018

ಮಹಿಳೆಯರ ನೆರವಿನ ಒನ್ ಸ್ಟಾಪ್ ಸೆಂಟರ್ ಕಟ್ಟಡ ನಿರ್ಮಾಣಕ್ಕೆ ಸಂಸದ, ಶಾಸಕರು, ಜಿ.ಪಂ. ಅಧ್ಯಕ್ಷರಿಂದ ಭೂಮಿ ಪೂಜೆ (22-01-2018)

ಮಹಿಳೆಯರ ನೆರವಿನ ಒನ್ ಸ್ಟಾಪ್ ಸೆಂಟರ್ ಕಟ್ಟಡ ನಿರ್ಮಾಣಕ್ಕೆ ಸಂಸದ, ಶಾಸಕರು, ಜಿ.ಪಂ. ಅಧ್ಯಕ್ಷರಿಂದ ಭೂಮಿ ಪೂಜೆ 

ಚಾಮರಾಜನಗರ, ಜ. 22 :- ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ ಹಾಗೂ ನೆರವು ನೀಡುವ ವಿಶೇಷ ಘಟಕ ಒನ್ ಸ್ಟಾಪ್ ಸೆಂಟರ್ ಸ್ವಂತ ಕಟ್ಟಡ ನಿರ್ಮಾಣಕ್ಕೆ ಇಂದು ನಗರದಲ್ಲಿ ಗುದ್ದಲಿ ಪೂಜೆ ನೆರವೇರಿದೆ.
ನಗರದ ಚನ್ನೀಪುರ ಮೋಳೆ ಬಡಾವಣೆಯಲ್ಲಿರುವ ನಿವೇಶನದಲ್ಲಿ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಸಿ. ಪುಟ್ಟರಂಗಶರಟ್ಟಿ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಒನ್ ಸ್ಟಾಪ್ ಸೆಂಟರ್ ಕಟ್ಟಡ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಿದರು.
ಬಳಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ಮತ್ತು ಕಾನೂನು ನೆರವು, ಸಮಾಲೋಚನೆ ವ್ಯವಸ್ಥೆಗಳನ್ನು ಒದಗಿಸುವ ಮಹಿಳಾ ವಿಶೇಷ ಘಟಕ ಒನ್ ಸ್ಟಾಪ್ ಸೆಂಟರ್ ಕಟ್ಟಡವನ್ನು 36 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎಂದರು.
ಕೇಂದ್ರ ಸಚಿವರನ್ನು ತಾವು ಭೇಟಿ ಮಾಡಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಒನ್ ಸ್ಟಾಪ್ ಸೆಂಟರ್ ನಿರ್ಮಾಣಕ್ಕೆ ಮನವಿ ಮಾಡಿದ್ದೆನು. ರಾಜ್ಯದಲ್ಲಿ ಒಟ್ಟು 4 ಮಹಿಳಾ ವಿಶೇಷ ಘಟಕ ಒನ್ ಸ್ಟಾಪ್ ಸೆಂಟರ್‍ಗಳ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಈ ಪೈಕಿ ಚಾಮರಾಜನಗರವು ಸಹ ಸೇರಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಒಟ್ಟು 36 ಲಕ್ಷ ರೂ. ವೆಚ್ಚದಲ್ಲಿ ಒನ್ ಸ್ಟಾಪ್ ಸೆಂಟರ್ ಕಟ್ಟಡ ನಿರ್ಮಾಣವಾಗಲಿದ್ದು ಈಗಾಗಲೇ 28 ಲಕ್ಷ ರೂ. ಬಿಡುಗಡೆಯಾಗಿದೆ. ಶಾಸಕರು ಈ ಕಟ್ಟಡ ನಿರ್ಮಾಣವಾಗಲಿರುವ ಪ್ರದೇಶದ ಬಳಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಿಂದ ಕಟ್ಟಡ ಪೂರ್ಣಗೊಂಡು ಅನುಕೂಲಗಳು ಲಭ್ಯವಾಗಲಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಈಗಾಗಲೇ ಜಿಲ್ಲಾ ಆಸ್ಪತ್ರೆಯಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ ಹಾಗೂ ಪೊಲೀಸ್ ಕಾನೂನು ನೆರವು ನೀಡುವ ಘಟಕ ನಿರ್ವಹಣೆಯಾಗುತ್ತಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಎಲ್ಲಾ ಬಗೆಯ ನೆರವು, ಪುನರ್ವಸತಿ ಕಲ್ಪಿಸುವ ಮೂಲಕ ಮುಖ್ಯ ವಾಹಿನಿಗೆ ತರಲು ಒನ್ ಸ್ಟಾಪ್ ಸೆಂಟರ್ ಪೂರಕವಾಗಿ ನೆರವಾಗಲಿದೆ. ಹೀಗಾಗಿ ಜಿಲ್ಲೆಯ ಜನತೆಗೆ ಈ ಕಟ್ಟಡವು ಅನುಕೂಲವಾಗಲಿದೆ ಎಂದು ಧ್ರುವನಾರಾಯಣ ಆಶಿಸಿದರು.
ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಜಯಶೀಲ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರಾದ ರಾಜಪ್ಪ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜ. 26ರಂದು ನಗರದಲ್ಲಿ ಗಣರಾಜ್ಯೋತ್ಸವ ದಿನ ಆಚರಣೆ

ಚಾಮರಾಜನಗರ, ಜ. 22 :- ಜಿಲ್ಲಾಡಳಿತದ ವತಿಯಿಂದ ಗಣರಾಜ್ಯೋತ್ಸವ ದಿನ ಆಚರಣೆಯನ್ನು ಜನವರಿ 26ರಂದು ಬೆಳಿಗ್ಗೆ 9 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ ಅವರು ಧ್ವಜಾರೋಹಣ ನೆರವೇರಿಸುವರು. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ನಗರಸಭೆ ಅಧÀ್ಯಕ್ಷರಾದ ಶೋಭ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಂದು ಸಂಜೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದ ಬಳಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5.30 ರಿಂದ 6.30ರವರೆಗೆ ನಗರದ ಎಂ. ನಟರಾಜು ಮತ್ತು ತಂಡದವರು ದೇಶಭಕ್ತಿ ಗೀತೆಗಳನ್ನು ಹಾಡಲಿದ್ದಾರೆ. 6.30 ರಿಂದ 7.30ರವರೆಗೆ ಶಾಲಾಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. 7.30 ರಿಂದ 8.30ರವರೆಗೆ ಗುಂಡ್ಲುಪೇಟೆಯ ಎಸ್.ಎಂ. ಡ್ಯಾನ್ಸ್ ಗ್ರೂಪ್ ಅಂಡ್ ಮೆಲೋಡಿಸ್, ಸದ್ದಾಂ ಅಹಮದ್ ಮತ್ತು ತಂಡದವರು ನೃತ್ಯ ರೂಪಕ ಪ್ರಸ್ತುತ ಪಡಿಸುವರೆಂದು ಪ್ರಕಟಣೆ ತಿಳಿಸಿದೆ.

ಜ. 31ರಂದು ಮಹದೇಶ್ವರ ದೇವಾಲಯದ ಗೋಲಕ ಹಣ ಎಣಿಕೆ

ಚಾಮರಾಜನಗರ, ಜ. 22:- ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಗೋಲಕಗಳ ಹಣ ಪರ್ಕಾವಣೆ ಕಾರ್ಯವು ಜನವರಿ 31ರಂದು ಬೆಳಿಗ್ಗೆ ನಡೆಯಲಿದೆ.
ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಯೋಗದೊಂದಿಗೆ ಪರ್ಕಾವಣೆ ಕಾರ್ಯವನ್ನು ನಡೆಸಲಾಗುವುದೆಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 29ರಂದು ನಗರದಲ್ಲಿ ಉದ್ಯೋಗ ಮೇಳ 

ಚಾಮರಾಜನಗರ, ಜ. 22:- ಉದ್ಯೋಗ ಮತ್ತು ತರಬೇತಿ ಇಲಾಖೆಯು ಆಶ್ರಯದಲ್ಲಿ ಜನವರಿ 29ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜೆಎಸ್‍ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಕೌಶಲ್ಯಾಧಾರಿತ ಉದ್ಯೋಗ ಮೇಳ ನಡೆಯಲಿದೆ.
ಮೈಸೂರು ಮತ್ತು ಬೆಂಗಳೂರಿನ ಖಾಸಗಿ ಕಂಪನಿಗಳ ಆಸ್ಪತ್ರೆ ಸೇವೆಗಳು, ಸೆಕ್ಯುರಿಟಿ ಸೇವೆಗಳು, ಹಣಕಾಸಿನ ಸೇವೆಗಳು ಹಾಗೂ ಇತರೆ ಸೇವೆಗಳ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಈ ಕಂಪನಿಗಳಲಲಿ ಕೌಶಲ್ಯಾಧಾರಿತ ಉದ್ಯೋಗಕ್ಕೆ ಸೇರಬಯಸುವ ಅಭ್ಯರ್ಥಿಗಳಿಗಾಗಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ನರ್ಸಿಂಗ್, ಬಿಎಸ್ಸಿ ನರ್ಸಿಂಗ್, ಎಎನ್‍ಎಂ, ಜಿಎನ್‍ಎಂ ವಿದ್ಯಾರ್ಹತೆ ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವ 18 ರಿಂದ 35ರ ವಯೋಮಾನದ ಅಭ್ಯರ್ಥಿಗಳು ಭಾಗವಹಿಸಬಹುದು.
ನೇರ ಸಂದರ್ಶನ ಕಾರ್ಯಕ್ರಮದಲ್ಲಿ ಆಸಕ್ತ ಅಬ್ಯರ್ಥಿಗಳು ಸ್ವ ವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು. ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ (ದೂ.ಸಂ. 08226-224430 ಅಥವಾ ಮೊಬೈಲ್ 9620049302) ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ಸಿ.ಎಂ. ಉಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಜ. 31ರಿಂದ ಗಣಕ ಯಂತ್ರ ಪರೀಕ್ಷಾ ಕೇಂದ್ರಗಳÀ ಸುತ್ತ ನಿಷೇದಾಜ್ಞೆ

ಚಾಮರಾಜನಗರ, ಜ. 22:- ಚಾಮರಾಜನಗರದ ಕೆಲವು ಕೇಂದ್ರಗಳಲ್ಲಿ ಗಣಕಯಂತ್ರ ಶಿಕ್ಷಣ ಪರೀಕ್ಷೆಯು ಜನವರಿ 31 ರಿಂದ ಫೆಬ್ರವರಿ 6ರವರೆಗೆ ನಡೆಯಲಿದೆ.
ಜನವರಿ 31ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಕಯಂತ್ರ ಲಿಖಿತ ಪರೀಕ್ಷೆ, ಫೆಬ್ರವರಿ 1 ರಿಂದ 6ರವರೆಗೆ ನಗರದ ಸಿದ್ಧಾರ್ಥನಗರದ ಕಾನ್ವೆಂಟ್ ಆಸ್ಪತ್ರೆ ರಸ್ತೆಯ ವಿಷೂವಲ್ ಸಾಫ್ಟ್‍ಟೆಕ್ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್‍ನಲ್ಲಿ ಗಣಕಯಂತ್ರ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇದಾಜ್ಞೆ ವಿಧಿಸಿ ಸಾರ್ವಜನಿಕ ನಿಷೇಧಿತ ಸ್ಥಳ ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ.
ನಗರದ ಕೇಂದ್ರಗಳಲ್ಲಿ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಹಾಗೂ ಶಾಂತಿ ಸುವ್ಯವಸ್ಥೆಯಿಂದ ಪರೀಕ್ಷೆ ನಡೆಯಲು ಅನುವಾಗುವಂತೆ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಮುಚ್ಚಲು ಆದೇಶಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ನಿಷೇಧ ಆದೇಶ ಅನ್ವಯವಾಗುವುದಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಕೌಂಟೆಂಟ್ ಕನ್ಸಲ್‍ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜ. 22:- ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿಯಲ್ಲಿ ಅಕೌಂಟೆಂಟ್ ಕನ್ಸಲ್‍ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಎಂಕಾಂ ಪದವಿ ಹೊಂದಿದ್ದು ಅಕೌಂಟಿಂಗ್ ಮತ್ತು ಆಡಿಟ್ ನಲ್ಲಿ 5 ವರ್ಷಗಳ ಕನಿಷ್ಟ ಅನುಭವ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಇರಬೇಕು. ವಿಶೇಷವಾಗಿ ಎಂಎಸ್ ಆಫೀಸ್, ಟ್ಯಾಲಿಯಲ್ಲಿ ಅನುಭವ ಇರಬೇಕು. ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಉತ್ತಮ ಜ್ಞಾನ ಇರಬೇಕು. ಮಾಸಿಕ ವೇತನವಾಗಿ 30 ಸಾವಿರ ರೂ. ನೀಡಲಾಗುತ್ತದೆ. ಅಭ್ಯರ್ಥಿಗಳು ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಕಚೇರಿ (ಕೊಠಡಿ ಸಂ. 118) ಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜನವರಿ 29ರೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿ ಸಂಪರ್ಕಿಸಬಹುದಾಗಿದೆ.
   

ಉನ್ನತ ಶಿಕ್ಷಣಕ್ಕೆ ಒಲವು ತೋರಲು ಆರ್.ದ್ರುವನಾರಾಯಣ ಸಲಹೆ

ಚಾಮರಾಜನಗರ, ಜ. 22:- ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ಹೊಂದುವ ಮೂಲಕ ಕಾರ್ಯೊನ್ಮುಖರಾಗಬೇಕೆಂದು ಲೋಕಸಭಾ ಸದಸ್ಯರಾದ ಆರ್.ಧ್ರುವನಾರಾಯಣ ಸಲಹೆ ಮಾಡಿದರು.

    ಕಾಲೇಜು ಶಿಕ್ಷಣ ಇಲಾಖೆವತಿಯಿಂದ ನಗರದ ಪೇಟೆ ಪ್ರೈಮರಿ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಇಂದು  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿ ಅವರು ಮಾತನಾಡಿದರು.

ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇಕಡ 24% ಮಾತ್ರ ಇದ್ದು ಹೆಚ್ಚಿನ ಜನರು ಉನ್ನತ ವ್ಯಾಸಂಗ ಮಾಡುವ ಕಡೆ ಗಮನಹರಿಸಬೇಕು. ಜಿಲ್ಲೆಗೆ ಕಾನೂನು ಕಾಲೇಜು ಮಂಜೂರಾಗಿದ್ದು ಮುಂದಿನ ಬಜೆಟ್‍ನಲ್ಲಿ ಕೃಷಿ ವಿಜ್ಞಾನ ಕಾಲೇಜು ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
     ಇಂದಿನ  ಮಾಹಿತಿ ಯುಗದಲ್ಲಿ  ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಲ್ಯಾಪ್‍ಟಾಪ್ ಪೂರಕವಾಗಿದ್ದು ಇದರ ಸದ್ಬಳಕೆ ಮಾಡಿಕೊಳ್ಳಬೇಕು. À ಮಾರ್ಚ್ ನಂತರ  ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೂ ಲ್ಯಾಪ್‍ಟಾಪ್ ವಿತರಿಸುವ ಉದ್ದೇಶವಿದೆ ಎಂದು ಧ್ರುವನಾರಾಯಣ ತಿಳಿಸಿದರು.
  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರಾದÀ ಪುಟ್ಟರಂಗಶೆಟ್ಟಿ ಅವರು  ಇಂದಿನ ವಿದ್ಯಾರ್ಥಿಗಳ  ಹೆಚ್ಚಿನ ಓದಿಗೆ ಲ್ಯಾಪ್‍ಟಾಪ್ ಅಗತ್ಯವಾಗಿದೆ.   ವಿದಾರ್ಥಿಗಳು ತಾಂತ್ರಿಕವಾಗಿ ಮುಂದುವರಿಯಲು ಲ್ಯಾಪ್‍ಟಾಪ್ ಪೂರಕವಾಗಿದೆ.  ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳು ಹೆಚ್ಚಿನ ಹಣ ನೀಡಿ ಲ್ಯಾಪ್‍ಟಾಪ್ ಕೊಂಡು ಕೊಳ್ಳಲು ಸಾದ್ಯವಾಗದಿರುವ ಕಾರಣ ಸರ್ಕಾರದ ವತಿಯಿಂದ ಉಚಿತವಾಗಿ ಲ್ಯಾಪ್‍ಟಾಪ್ ವಿತರಿಸಲಾಗುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಓದಿ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲರಾದ ಸುಮತಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.

ಕಾಲೇಜು ಅಭಿವೃದ್ದಿ ಮಂಡಳಿ ಸದಸ್ಯರಾದ ಸಿ.ಎಂ. ನರಸಿಂಹಮೂರ್ತಿ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ ರವಿಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ಕುಮಾರ್ ನಾಯಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

25ರಂದು ಅಖಂಡ ಕರ್ನಾಟಕ ಬಂದ್‍ಗೆ ಕರೆ 


 ಚಾಮರಾಜನಗರ – ಜ,22  ಮಹಾದಾಯಿ- ಕಳಸಾ ಬಂಡೂರಿ ಹಾಗೂ ಮೇಕೆದಾಟು ಯೋಜನೆ ಜಾರಿಗೆ  ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು  ಮಧ್ಯ ಪ್ರವೇಶಕ್ಕೆ ಆಗ್ರಹಿಸಿ ಇದೇ 25ರಂದು ಅಖಂಡ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
   ಇಂದು ನಗರದ ಸರ್ಕಾರಿ ಬಸ್ ನಿಲ್ದಾಣ(ಕೆ.ಎಸ್.ಆರ್.ಟಿ.ಸಿ) ದಲ್ಲಿ ಮಹಾದಾಯಿ- ಕಳಸಾ ಬಂಡೂರಿ , ಮೇಕೆದಾಟು ಯೋಜನೆ ಜಾರಿಗೆ ಬರಬೇಕು, ಚಾಮರಾಜನಗರ ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿ ವಾಟಾಳ್ ನಾಗಾರಾಜ್ ಅವರು ಮಲಗಿ ಸತ್ಯಾಗ್ರಹ ಮಾಡಿದರು ನಂತರ ಪೋಲಿಸರು ಅವರನ್ನು ಬಂಧಿಸಿ ನಗರ ಪೋಲಿಸ್ ಠಾಣೆ ಕರೆದೊಯ್ದರು ನಂತರ ಬಿಡುಗಡೆಗೊಳಿಸಿದರು.
  ಇದಕ್ಕು ಮೊದಲು ಮಾತನಾಡಿದ ವಾಟಾಳ್ ರವರು ಫೆ,3ರ ಒಳಗೆ ಪ್ರಧಾನ ಮಂತ್ರಿ ನರೇಂದ್ರಮೋದಿ  ವರು ಗೋವಾ, ಮಹಾರಾಷ್ಟ್ರ, ಕರ್ನಾಟಕ ಮುಖ್ಯ ಮಂತ್ರಿಗಳ ಸಭೆ ಕರೆಯಬೇಕು ತಾವೇ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಇಲ್ಲವಾದಲ್ಲಿ ಬೆಂಗಳೂರಿಗೆ ಫೆ,4ರಂದು ಆಗಮಿಸುವ ದಿನ ಬೆಂಗಳೂರು ಬಂದ್ ಮಾಡುತ್ತೇವೆ ಮುಂದಿನ ದಿನಗಳಲ್ಲಿ ದೆಹಲಿಗೆ ತೆರಳಿ ಸಂಸತ್ ಭವನ ಎದುರು ಸಾವಿರಾರು ಸಂಘಟನೆಗಳೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ವಾಟಾಳ್ ಹೇಳಿದರು.
ಇದೇ 25ರಂದು ಅಖಂಡ ಕರ್ನಾಟಕ ಬಂದ್‍ಗೆ ಸುಮಾರು 2,300 ಸಂಘಟನೆಗಳು  ಬೀದರ್ ನಿಂದ ಚಾಮರಾಜನಗg, À ಕೋಲಾರದಿಂದ – ಮಂಗಳೂರು ವರೆಗೆ ಬೆಂಬಲ ನೀಡಲಿದೆ ಆದ್ದರಿಂದ ಚಾಮರಾಜನಗರದ ಜನತೆ ಕೂಡ ಬೆಳಗ್ಗೆ 6:00 ಗಂಟೆಯಿಂದ ಸಂಜೆ 6:00 ರವರೆಗೆ ಬಂದ್‍ಗೆ ಸಹಕರಿಸಬೇಕು. ಎಂದು ವಾಟಾಳ್ ಅವರು ಮನವಿ ಮಾಡಿದರು.
  ಕೇಂದ್ರ ಸರ್ಕಾರ ಮೊದಲಿನಿಂದಲೂ ಕರ್ನಾಟಕ ರಾಜ್ಯವನ್ನು ಗುಲಾಮ ರೀತಿಯಲ್ಲಿ ನೋಡುತ್ತಿದೆ. ಆಂಧ್ರಪ್ರದೇಶ ತೆಲಂಗಾಣ ಕಂಡರೆ ಎದರುತ್ತಿದೆ. ತಮಿಳುನಾಡು, ಕೇರಳ ಎಂದರೆ ಎದರುತ್ತಾರೆ. 3ವರ್ಷಗಳಿಂದ ಹೋರಾಟ ಮಾಡುತ್ತಿರುವ ಹೈದರಾಬಾದ್ ಕರ್ನಾಟಕ , ಉತ್ತರ ಕರ್ನಾಟಕ ಜನತೆ ಹೋರಾಟ ಮಾಡುತ್ತಿದ್ದರು  ಪ್ರಧಾನಿ ಅವರಿಗೆ ತಿಳಿದಿಲ್ಲವೆ ಎಂದು ಪ್ರಶ್ನೆಸಿದ ವಾಟಾಳ್ ಅವರು ,ಕಾಂಗ್ರೆಸ್, ಬಿಜೆ,ಪಿ, ಈ ಪಕ್ಷಗಳು ಕೂಡ ಮಹಾದಾಯಿ-ಕಳಸಾ ಬಂಡೂರಿ ಹಾಗೂ ಮೇಕೆದಾಟು ಯೋಜನೆ ಜಾರಿಗೆ ತರುವಲ್ಲಿ ವಿಫಲರಾಗಿದ್ದರೆ.ಎಂದು ವಾಟಾಳ್ ಹೇಳಿದ್ದರೆ.
ನಮ್ಮ ರಾಜ್ಯದ ಲೋಕಸಭಾ ಸದಸ್ಯರು, ರಾಜ್ಯ ಸಭಾ ಸದಸ್ಯರು, ಕರ್ನಾಟಕದಲ್ಲಿರುವ ಕೇಂದ್ರದ ಮಂತ್ರಿಗಳು ಪಾರ್ಲಿಮೆಟ್‍ನಲ್ಲಿ ಧರಣಿ,ಸತ್ಯಾಗ್ರಹ ಹೋರಾಟಮಾಡಲಿಲ್ಲ ನಮ್ಮ ರಾಜ್ಯದ ಸಂಸದರು  ಸಂಪೂರ್ಣ ವಿಫಲರಾಗಿದ್ದಾರೆ. ಎಂದು ತಿಳಿಸಿದ ವಾಟಾಳ್ ಅವರು ಗೋವಾದಲ್ಲಿ ಸುಮಾರು 40ಸಾವಿರಕ್ಕೂ ಹೆಚ್ಚು ಕನ್ನಡಿಗರು ಇದ್ದಾರೆ ಮುಂದಿನ ದಿನಗಳಲ್ಲಿ ಗೋವಾ ಕರ್ನಾಟಕ ರಾಜ್ಯಕ್ಕೆ ಸೇರಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ದಳಪತಿ ವೀರತಪ್ಪ, ಕಿರಗಸೂರುಮಾದಪ್ಪ, ಕಾರ್ ನಾಗೇಶ್, ನಾಗರಾಜಮೂರ್ತಿ, ಸುರೇಶ್‍ನಾಗ್, ರಾಜೇಂದ್ರ, ಶ್ರೀನಿವಾಸಗೌಡ, ನಾಗೇಂದ್ರ, ಕುಮಾರ್, ಶಿವಣ್ಣ, ರಾಜು, ನಾರಾಯಣ, ಲಿಂಗರಾಜು, ಶಿವಲಿಂಗಮೂರ್ತಿ, ಮಹದೇವಶೆಟ್ಟಿ, ಮಹೇಶ್  ಸೇರಿದಂತೆ ಅನೇಕರು ಹಾಜರಿದ್ದರು.




No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು