Tuesday, 2 January 2018

ಚಿಕ್ಕಲ್ಲೂರು ಜಾತ್ರೆ : ಪ್ರಾಣಿಬಲಿ ನಿಷೇಧ – ಉಸ್ತುವಾರಿಗೆ ಹೆಚ್ಚುವರಿ ಸೆಕ್ಟರ್ ಆಫೀಸರ್‍ಗಳ ನಿಯೋಜನೆ,ವಿವಿಧ ಇಲಾಖೆಗಳಿಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ಭೇಟಿ ನೀಡಿ ಪರಿಶೀಲನೆ (01-01-2018)


ವಿವಿಧ ಇಲಾಖೆಗಳಿಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ಭೇಟಿ ನೀಡಿ ಪರಿಶೀಲನೆ


    ಚಾಮರಾಜನಗರ, ಜ. 01 :- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಇಂದು ವಿವಿಧ ಇಲಾಖೆಗಳಿಗೆ ಕಚೇರಿಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳ ಕಾರ್ಯವೈಖರಿ ಮತ್ತು ಹಾಜರಾತಿಯನ್ನು ಪರಿಶೀಲನೆ ನಡೆಸಿದರು.
ಹೊಸ ವರ್ಷದ ಮೊದಲ ದಿನದಂದೆ ದಿಢೀರ್ ಭೇಟಿ ನೀಡಿದ ಹರೀಶ್‍ಕುಮಾರ್ ಅವರು ಮೊದಲಿಗೆ ನಗರದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪಂಚಾಯತ್ ರಾಜ್ ಮತ್ತು ಇಂಜಿನಿಯರಿಂಗ್ ಕಛೇರಿಗೆ ಭೇಟಿ ನೀಡಿ  ಮುಖ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಸಕಾಲಕ್ಕೆ ಹಾಜರಾಗದೆ ಇರುವುದನ್ನು ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಹಾಜರಾತಿ ಹಾಕದಿರುವ ಮತ್ತು ಅಸಮರ್ಪಕ ಕಡತಗಳ ನಿರ್ವಹಣೆ ಕುರಿತು ಪರಿಶೀಲಿಸಿದರು ಪ್ರತಿಯೊಬ್ಬರು ಬದ್ದತೆಯಿಂದ ಕೆಲಸ ನಿರ್ವಹಿಸಬೇಕು. ತಪ್ಪಿದ್ದಲ್ಲಿ ಅಂತಹವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
     ನಂತರ ಪಂಚಾಯತ್‍ರಾಜ್ ಮತ್ತು ಇಂಜಿನಿಯರ್ ವಿಭಾಗ ಕಚೇರಿಯ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಭೇಟಿ ನೀಡಿದಾಗ ನಿಗಧಿತ ಸಮಯಕ್ಕೆ ಕಚೇರಿಗೆ ಹಾಜರಾಗದೇ ಹಲವರ ಗೈರುಹಾಜರಿ ಕಂಡುಬಂದಿತು. ನರೇಗಾ ಯೋಜನೆಯ ತಾಂತ್ರಿಕ ಮಂಜೂರಾತಿ ನೀಡುವ ಸಂಬಂಧ ಯಾವುದೇ ಕಡತಗಳನ್ನು ನಿರ್ವಹಿಸದೆ ನಿರ್ಲಕ್ಷ್ಯ ವಹಿಸಿದ್ದು, ಇಲಾಖಾ ಕಡತಗಳ ನಿರ್ವಹಣೆಯಲ್ಲಿ ತೀರಾ ನಿರಾಸಕ್ತಿ ವಹಿಸಿರುವುದು ಕಂಡುಬಂದಿತು. ಇದನ್ನು ಗಮನಿಸಿದ ಹರೀಶ್ ಕುಮಾರ್ ಅವರು ವರದಿ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.
     ತದನಂತರ ಕಾರ್ಯಪಾಲಕ ಅಭಿಯಂತರರು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
      ಉಪಕಾರ್ಯದರ್ಶಿ ಎನ್ ಮುನಿರಾಜಪ್ಪ. ಮುಖ್ಯ ಲೆಕ್ಕಾಧಿಕಾರಿ ಬಸವರಾಜು. ಇ.ಇ ದೇವರಾಜು ಅವರುಗಳು ಇದೇ ಸಂದರ್ಬದಲ್ಲಿ ಹಾಜರಿದ್ದರು.

                                   ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ

    ಚಾಮರಾಜನಗರ, ಜ. 01 - 2017-18ನೇ ಸಾಲಿನಲ್ಲಿ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಹಾಗೂ ಗಮಕ ಕಲಾಪ್ರಕಾರಗಳಲ್ಲಿ ಅಭ್ಯಾಸ ಮಾಡಿರುವ 15 ರಿಂದ 25 ವರ್ಷದ ವಯೋಮಿತಿಯ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲು ಅಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
    ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೂ ಸಹ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿಗಳನ್ನು ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಅರ್ಜಿ ಪಡೆಯಬಹುದಾಗಿದೆ ಅಥವಾ ತಿತಿತಿ.ಞಚಿಡಿಟಿಚಿಣಚಿಞಚಿsಚಿಟಿgeeಣಚಿಟಿಡಿiಣಥಿಚಿಚಿಛಿಚಿಜemಥಿ.ಛಿom ನಲ್ಲಿಯೂ ಅರ್ಜಿ ಪಡೆಯಬಹುದಾಗಿದೆ.
     ಭರ್ತಿ ಮಾಡಿದ ಅರ್ಜಿಗಳನ್ನು ಜನವರಿ 4ರ ಒಳಗೆ ಸಲ್ಲಿಸಲು ತಿಳಿಸಲಾಗಿದೆ. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 20ಸಾವಿರ ರೂ.ಗಳ ಶಿಷ್ಯವೇತನ ನೀಡಲಾಗುವುದು ಎಂದು ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಬನಶಂಕರಿ ವಿ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ವಾಹನ ಚಾಲಕರ ಸಂಘದಿಂದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆÀ

    ಚಾಮರಾಜನಗರ, ಜ. 01- ಜಿಲ್ಲಾ ಸರ್ಕಾರಿ ವಾಹನರ ಚಾಲಕರ ಸಂಘದ ವತಿಯಿಂದ ಹೊರತಂದಿರುವ ನೂತನ ವರ್ಷದ ದಿನದರ್ಶಿಕೆ (ಕ್ಯಾಲೆಂಡರ್) ಬಿಡುಗಡೆಗೊಳಿಸಲಾಯಿತು.
    ನಗರದ ಜಿಲ್ಲಾಡಳಿತ ಭವನದಲ್ಲಿಂದು ನಡೆದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಚಪ್ಪ ಅವರು ಬಿಡುಗಡೆ ಮಾಡಿದರು.
    ಇದೇ ಸಂದರ್ಭದಲ್ಲಿ ಮಾತನಾಡಿದ ರಾಚಪ್ಪ ಅವರು ವಾಹನ ಚಾಲಕರದ್ದು ಜವಾಬ್ದಾರಿಯುತ ಕೆಲಸವಾಗಿದೆ. ಕೆಲಸದಲ್ಲಿ ಶಿಸ್ತು ಹಾಗೂ ಶ್ರದ್ಧೆಯನ್ನು ಹೊಂದಿರಬೇಕು ಎಂದ ಅವರು ನೂತನ ವರ್ಷ ಎಲ್ಲರ ಜೀವನ ಹರ್ಷಮಯವಾಗಿರಲಿ ಎಂದು ಹಾರೈಸಿದರು.
    ಕಾರ್ಯಕ್ರಮದಲ್ಲಿ ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಆರ್. ಶ್ರೀನಿವಾಸ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಬಸವರಾಜು ಹಾಗೂ ಎಲ್ಲಾ ಸದಸ್ಯರು ಹಾಜರಿದ್ದರು.
ದಿನದರ್ಶಿಕೆ ಎಲ್ಲರ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿದೆ: ಡಾ. ಕೆ. ಹೆಚ್. ಪ್ರಸಾದ್
    ಚಾಮರಾಜನಗರ, ಜ. 01- ದಿನದರ್ಶಿಕೆ (ಕ್ಯಾಲೆಂಡರ್) ಇಂದು ಪ್ರತಿಯೊಬ್ಬರ ದಿನನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಹೆಚ್. ಪ್ರಸಾದ್ ಅವರು ತಿಳಿಸಿದರು.
    ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿಂದು  ನಡೆದ ಸರಳ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರಾದ ಚಂದ್ರಶೇಖರ್ ಅವರ ವತಿಯಿಂದ ಮುದ್ರಿಸಲಾಗಿರುವ 2018ರ ನೂತನ ದಿನದರ್ಶಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ. ಕೆ. ಹೆಚ್. ಪ್ರಸಾದ್ ಅವರು ಮಾತನಾಡಿ ಕಳೆದ 6 ವರ್ಷಗಳಿಂದ ಇಲಾಖೆಯ ಚಂದ್ರಶೇಖರ್ ಅವರು ದಿನದರ್ಶಿಕೆಗಳನ್ನು ಮುದ್ರಿಸಿ ಬಿಡುಗಡೆ ಮಾಡುತ್ತಿರುವುದು ಒಂದು ಉತ್ತಮ ಬೆಳವಣಿಗೆ, ದಿನದರ್ಶಿಕೆ ಎಲ್ಲರಲ್ಲೂ ಹಾಸುಹೊಕ್ಕಾಗಿದೆ. ಹೊಸ ವರ್ಷವು ಎಲ್ಲರಿಗೂ ಶಾಂತಿ, ನೆಮ್ಮದಿ ತರಲಿ ಜತೆಗೆ ಉತ್ತಮ ಆರೋಗ್ಯವನ್ನು ತರಲಿ ಎಂದು ಹಾರೈಸಿದರು.             
     ಜಿಲ್ಲಾ ಕಾರ್ಯಕ್ರಮಾಧಿಕಾರಿಗಳಾದ ಡಾ. ರಾಜು, ಡಾ. ಮಹದೇವು, ಡಾ. ನಾಗರಾಜು, ಡಾ. ಅನಿಲ್ ಕುಮಾರ್, ಸಹಾಯಕ ಆಡಳಿತಾಧಿಕಾರಿಗಳಾದ ಗುರುಲಿಂಗಯ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದರು. 

ಚಿಕ್ಕಲ್ಲೂರು ಜಾತ್ರೆ : ಪ್ರಾಣಿಬಲಿ ನಿಷೇಧ – ಉಸ್ತುವಾರಿಗೆ ಹೆಚ್ಚುವರಿ ಸೆಕ್ಟರ್ ಆಫೀಸರ್‍ಗಳ ನಿಯೋಜನೆ

ಚಾಮರಾಜನಗರ, ಜ. 01 - ಕೊಳ್ಳೇಗಾಲ ತಾಲೂಕಿನ ಶ್ರೀಕ್ಷೇತ್ರ ಚಿಕ್ಕಲ್ಲೂರು ಹೊಸಮಠದ ದೇವಸ್ಥಾನದ ಪರಿಧಿ/ಜಾತ್ರಾ ಪ್ರದೇಶದಲ್ಲಿ ಜನವರಿ 2 ರಿಂದ 7ರ ಮಧ್ಯರಾತ್ರಿಯವರೆಗೆ ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿಬಲಿ ನೀಡುವುದು ಹಾಗೂ ಮಾರಕಾಸ್ತ್ರಗಳನ್ನು ತರುವುದನ್ನು ತಡೆಗಟ್ಟಲು ಹಾಗೂ ಹೈಕೋರ್ಟ್ ನಿರ್ದೇಶನದಂತೆ ಪ್ರಾಣಿ ಬಲಿಯನ್ನು ತಡೆಗಟ್ಟಿ, ಪ್ರಾಣಿ ಬಲಿ ನಿಷೇಧದ ಬಗ್ಗೆ ತಿಳಿವಳಿಕೆ ಸಂಬಂಧ ನಿರ್ವವಣೆಗೆ ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ.
ಪ್ರಾಣಿಬಲಿ ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು, ಪ್ರಾಣಿಬಲಿ ನಿಷೇಧ ಕುರಿತು ನಾಗರಿಕರಿಗೆ ತಿಳಿವಳಿಕೆ ನೀಡುವ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಘಟನೆಗಳು ಸಂಭವಿಸಿದರೆ ತಕ್ಷಣ ಆದೇಶ ಮಾಡುವ ಸಲುವಾಗಿ ಸೆಕ್ಟರ್ ಆಫೀಸರ್‍ಗಳನ್ನು ನಿಯೋಜಿಸಲಾಗಿದೆ.
ಉಪವಿಭಾಗಾಧಿಕಾರಿ ಕೊಳ್ಳೇಗಾಲ ತಹಸೀಲ್ದಾರ್ ಅವರೊಂದಿಗೆ ಹೆಚ್ಚುವರಿಯಾಗಿ ಸೆಕ್ಟರ್ ಆಫೀಸರ್‍ಗಳನ್ನಾಗಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಎರಡನೇ ಪಾಳಿಯಲ್ಲಿ (ಮಧ್ಯಾಹ್ನ 2ರಿಂದ ರಾತ್ರಿ 10ಗಂಟೆಯವರೆಗೆ) ಬಂಡಳ್ಳಿ ರಸ್ತೆ ಮಾರ್ಗದ ಸುತ್ತಮುತ್ತಲ ಪ್ರದೇಶ ವ್ಯಾಪ್ತಿಗೆ ಕೊಳ್ಳೇಗಾಲ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹದೇವು ಮೊ: 8277930783 ರನ್ನು ನೇಮಿಸಲಾಗಿದೆ.
ಮೂರನೇ ಪಾಳಿಯಲ್ಲಿ ಕೊತ್ತನೂರು ಬಾಣೂರು, ಸುಂಡಳ್ಳಿ ಗ್ರಾಮಗಳ ಸುತ್ತ ಮುತ್ತಲ ಪ್ರದೇಶಕ್ಕೆ ಕೊಳ್ಳೇಗಾಲದ ತಾಲೂಕು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮೊ. 9481532318 ಮತ್ತು ರಾಚಪ್ಪಾಜಿ ನಗರದ ಸುತ್ತಮುತ್ತಲ ಪ್ರದೇಶಕ್ಕೆ ಕೊಳ್ಳೇಗಾಲ ಕೆ.ಐ.ಆರ್.ಡಿ.ಎಲ್ ಸಹಾಯಕ ನಿರ್ದೇಶಕರು ಮೊ. 9449863046 ಇವರನ್ನು ಹೆಚ್ಚುವರಿ ಸೆಕ್ಟರ್ ಆಫೀಸರ್‍ಗಳನ್ನಾಗಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರ ಆದೇಶದಲ್ಲಿ ತಿಳಿಸಿದೆ.

ವóರ್ಷದ ಆರಂಭಿಕ ದಿನದಂದೇ ವಿವಿಧ ಇಲಾಖೆಗೆ ಭೇಟಿ ನೀಡಿ ಪರಿಶೀಲಿಸಿದ   ಜಿ.ಪಂ ಸಿ.ಇ.ಓ 


ಚಾಮರಾಜನಗರ, ಜ. 01 - ಚಾಮರಾಜನಗರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ ಹರೀಶ್ ಕುಮಾರ್ ಅವರು ಹೊಸ ವರ್ಷದ ದಿನದಂದೇ ಜಿಲ್ಲೆಯ ವಿವಿಧ ಇಲಾಖೆಗಳಿಗೆ  ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಮೊದಲಿಗೆ ಚಾಮರಾಜನಗರದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪಂಚಾಯತ್ ರಾಜ್ ಮತ್ತು ಇಂಜಿನಿಯರಿಂಗ್ ವಿಭಾಗ ಕಚೆÉೀರಿಗೆ ಭೇಟಿ ನೀಡಿದ ಅವರು ಮುಖ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಸಕಾಲಕ್ಕೆ ಹಾಜರಾಗದೆ ಇರುವುದನ್ನು ಕುರಿತು  ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಈ ಹಾಜರಾತಿ ಹಾಕದೇ ಇರುವ ಮತ್ತು ಅಸಮರ್ಪಕ ಕಡತಗಳ ನಿರ್ವಹಣೆ ಕುರಿತು ಪರಿಶೀಲಿಸಿದರು. ಇನ್ನು ಮುಂದೆ ಪ್ರತಿಯೊಬ್ಬರು ಬದ್ದತೆಯಿಂದ ಕೆಲಸ ನಿರ್ವಹಿಸಬೇಕು. ತಪ್ಪಿದ್ದಲ್ಲಿ ಸಂಬಂಧಪಟ್ಟ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಂತರ ಕಾರ್ಯಪಾಲಕ ಅಭಿಯಂತರರು ಪಂಚಾಯತ್ ರಾಜ್ ಮತ್ತು ಇಂಜಿನಿಯರ್ ವಿಭಾಗ ಕಚೇರಿಗೆ ಭೇಟಿ ನೀಡಿದಾಗ ಕಾರ್ಯಪಾಲಕ ಅಭಿಯಂತರರು ಗೈರುಹಾಜರಾಗಿದ್ದು ಕಂಡು ಬಂತು, ಹಲವು ಸಿಬ್ಬಂದಿ ನಿಗಧಿತ ಸಮಯಕ್ಕೆ ಹಾಜರಾಗದೇ ಇರುವುದು ಕಂಡುಬಂದಿತು. ಅಲ್ಲದೇ ನರೇಗಾ ಯೋಜನೆಯ ತಾಂತ್ರಿಕ ಮಂಜೂರಾತಿ ನೀಡುವ ಸಂಬಂಧ ಯಾವುದೇ ಕಡತಗಳನ್ನು ನಿರ್ವಹಿಸದೆ ನಿರ್ಲಕ್ಷ್ಯ ವಹಿಸಿರುವುದು ಬೆಳಕಿಗೆ ಬಂದಿತು. ಇಲಾಖಾ ಕಡತಗಳ ನಿರ್ವಹಣೆಯಲ್ಲಿ ತೀರಾ ನಿರಾಸಕ್ತಿ ವಹಿಸಿರುವುದು ಕಂಡುಬಂದಿತು. ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವೈಫಲ್ಯತೆಯಿರುವುದನ್ನು ಗಮನಿಸಿದ ಸಿ.ಇ.ಓ ರವರು ವರದಿ ನೀಡುವಂತೆ ಸೂಚಿಸಿದರು.
ನಂತರ ಕಾರ್ಯಪಾಲಕ ಅಭಿಯಂತರರು, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಭೇಟಿ ನೀಡಿ ಈ ಹಾಜರಾತಿಯನ್ನು ಪರಿಶೀಲಿಸಿದಾಗ ಎಲ್ಲಾ ಸಿಬ್ಬಂದಿ ಹಾಜರಾಗಿರುವುದು ಕಂಡುಬಂದಿತು.  ಕಾರ್ಯಪಾಲಕ ಇಂಜಿನಿಯರ್ ದೇವಾರಾಜು ರವರು ಇಲಾಖೆಯ ಕಾರ್ಯಕ್ರಮಗಳು ಹಾಗೂ ಕಡತ ನಿರ್ವಹಣೆ ಕುರಿತು ಸಿ.ಇ.ಓ.ರವರಿಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಉಪಕಾರ್ಯದರ್ಶಿಗಳಾದ ಎನ್ ಮುನಿರಾಜಪ್ಪ. ಮುಖ್ಯ ಲೆಕ್ಕಾಧಿಕಾರಿ ಬಸವರಾಜು. ಹಾಜರಿದ್ದರು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು