ಶಾರ್ಟ್ ಸಕ್ರ್ಯೂಟ್: ಲಕ್ಷಾಂತರ ಮೌಲ್ಯದ ಪದಾರ್ಥಗಳು ಸುಟ್ಟು ನಾಶ
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಇಂದ ಸಂಭವಿಸಿದ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಪದಾರ್ಥಗಳು ಸುಟ್ಟು ನಾಶವಾಗಿರುವ ಘಟನೆ ಚಾಮರಾಜನಗರ ಜೋಡಿರಸ್ತೆಯಲ್ಲಿ ನಡೆದಿದೆ.ಚಾಮರಾಜನಗರ ಜೋಡಿರಸ್ತೆಯ ಪೊಲೀಸ್ ವರೀಷ್ಠಾದಿಕಾರಿ ಕಚೇರಿ ಕಮಾನು ಮುಂಭಾಗದಲ್ಲಿರುವ ಗುರುರಾಜ ಬ್ಯಾಟರಿ ಸೇಲ್ಸ್ ಅಂಡ್ ಸರ್ವಿಸ್ ಅಂಗಡಿಯಲ್ಲಿ ಈ ದುರ್ಘಟನೆ ನಡೆದಿದೆ.
ಅಂಗಡಿ ಮಾಲೀಕ ನಾಗೇಂದ್ರ ಅವರು ಇಂದು ಎಂದಿನಂತೆ ಅಂಗಡಿ ಶೆಲ್ಟರ್ ಬಾಗಿಲು ತೆರೆದು. ಮತ್ತೋಂದು ಗಾಜಿನ ಬಾಗಿಲು ಹಾಕಿ ಹೊರಗಡೆ ಹೋಗಿದ್ದರು. ಹೋಗಿ ಮತ್ತೆ ಬಂದು ನೋಡುವಷ್ಟರಲ್ಲಿ ಅಂಗಡಿಯಿಂದ ಹೊಗೆ ಬರುತ್ತಿದ್ದನ್ನು ನೋಡಿದಾಗ ಬೆಂಕಿ ಉರಿಯುತ್ತಿತ್ತು. ತಕ್ಷಣ ಅಗ್ನಿಶಾಮಕ ದಳ ಕಚೇರಿಗೆ ಪೊನ್ ಮಾಡಿ ತಿಳಸಿದಾಗ ಅವರು ಬಂದು ನಂದಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.
ಅಂಗಡಿಯಲ್ಲಿ ಯು.ಪಿ.ಎಸ್ , ಬ್ಯಾಟರಿ. ಕಂಪ್ಯೂಟರ್, ದುರಸ್ಥಿಗೆ ಕೊಟ್ಟಿದ್ದ ಇತರರ ಬ್ಯಾಟರಿಗಳು, ಕಲರ್ ಪ್ರಿಂಟರ್, ಜೆರಾಕ್ಸ್ ಯಂತ್ರ ಸೇರಿದಂತೆ ಐದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಪದಾರ್ಥಗಳು ಸುಟ್ಟುಕರುಕಲಾಗಿದೆ ಎಂದು ತಿಳಿದುಬಂದಿದೆ..
No comments:
Post a Comment