ನಗರದ ವಿವಿಧ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ: ಪರಿಶೀಲನೆ
ಮೊದಲಿಗೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಹೆದ್ದಾರಿ ಕಾಮಗಾರಿ ಸೈಳಕ್ಕೆ ಭೇಟಿ ನೀಡಿ ಮಾಹಿತಿ ಯನ್ನು ಅಧಿಕಾರಿಗಳಿಂದ ಪಡೆದುಕೊಂಡರು. ಬಳಿಕ ನಗರದ ಕೆ.ಎಸ್.ಅರ್,ಟಿ.ಸಿ ಎದುರು ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನುವೀಕ್ಷಿಸಿದರು. ಇದೇ ವೇಳೆ ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಗುಣಮಟ್ಟದ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ನಿರ್ವಹಿಸಬೇಕು.ಹೆಚ್ಚು ಕೆಲಸಗಾರರನ್ನು ನಿಯೋಜಿಸಿ ಅತಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಸ್ಥಳದಲ್ಲಿಯೇ ಇದ್ದು ಕಾಮಗಾರಿ ಯಾವ ಗತಿಯಲ್ಲಿ ಸಾಗುತ್ತಿದೆ ಎಂಬ ಬಗ್ಗೆ ಪ್ರತಿನಿತ್ಯವು ನೋಡಿಕೊಳ್ಳಬೇಕೆಂದು ತಾಕೀತು ಮಾಡಿzರು
ತದನಂತರ ನಗರದ ಪ್ರಮುಖ ಭುವನೇಶ್ವರಿ ವೃತ್ತದ ಬಳಿ ರಸ್ತೆ ಕಾಮಗಾರಿಗೆ ಕೈಗೊಂಡಿರುವ ಪೂರ್ವ ಸಿದ್ದತೆ ಕೆಲಸಗಳನ್ನು ಕೆಲ ಹೊತ್ತು ನಿಂತು ವೀಕ್ಷಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ. ರಾಮು ಅವರು ರಸ್ತೆ ಕಾಮಗಾರಿಗೆ ಪೂರಕವಾಗಿ ಕೆಡವಲಾಗಿರುವ ಸರ್ಕಾರಿ ಕಟ್ಟಡಗಳು ಹಾಗೂ ಇನ್ನಿತರ ಮಾಹಿತಿಯನ್ನು ಉಸ್ತುವಾರಿ ಸಚಿವರಿಗೆ ನೀಡಿದರು. ಬಳಿಕ ಮತ್ತಷ್ಟು ಮುಂದೆ ಸಾಗಿ ಪ್ರಗತಿಯಲ್ಲಿರು ಕೆಲಸವನ್ನು ಉಸ್ತುವಾರಿ ಸಚಿವರು ಪರಶೀಲಿಸಿ ಕೆಲ ಅಗತ್ಯ ಸೂಚನೆ ನೀಡಿದರು.
ಡಿವೈಎಸ್ಪಿ ಕಚೇರಿ ಬಳಿಯಿಂದ ಆರಂಭವಾಗಿರುವ ಜಿಲ್ಲಾ ನ್ಯಾಯಲಯ ರಸ್ತೆ ಕಾಮಗಾರಿಯನ್ನು ಸಹ ಉಸ್ತುವಾರಿ ಸಚಿವರು ಪರಿಶೀಲಿಸಿದರು. ನಂತರ ಬೂದಿತಿಟ್ಟು ಗ್ರಾಮದ ಬಳಿ ಇರುವ ಒಳ ಚರಂಡಿ ನೀರು ಶುದ್ದೀಕರಣ ಘಟಕಕ್ಕೆ ಬೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ವೀಕ್ಷಿಸಿದರು. ಅಲ್ಲಿಂದ ಮತ್ತೆ ನಗರಕ್ಕೆ ಮರಳಿದ ಸಚಿವರು ಮುಖ್ಯಮಂತ್ರಿಯವರ ವಿಶೇಷ ಅನಧಾನದಡಿ ಕೈಗೊಳ್ಳಲಾಗಿರುವ ಚಾಮರಾಜೇಶ್ವರ ದೇವಾಲಯ ಜೀರ್ಣೋದ್ದಾರ ಕಾಮಗಾರಿಯನ್ನು ಪರಿಶೀಲಿಸಿದರು. ಅಲ್ಲದೆ ದೇವಾಲಯದ ಹಿಂಬಾಗದಲ್ಲಿ ಇತ್ತೀಚೆಗೆ ನೆಲಸಮ ಮಾಡಿರುವ ಅಂಗಡಿ ಮಳಿಗೆ ಸ್ಥಳಕ್ಕೂ ಬೇಟಿ ಕೊಟ್ಟರು.
ತದ ನಂತರ ಪಟ್ಟಣ ಪೊಲೀಸ್ ಠಾಣೆಗೆ ಬೇಟಿ ನೀಡಿದ ಸಚಿವರು ಅಲ್ಲಿ ಇರುವ ಶಿಥಿಲ ಕಟ್ಟಡವನ್ನು ವೀಕ್ಷಿಸಿದರು. ಪೊಲೀಸ್ ಠಾಣೆ ಕಟ್ಟಡ ತುರ್ತಾಗಿ ಸದರಿ ಸ್ಥಳದಲ್ಲಿಯೆ ನೂತನವಾಗಿ ನಿರ್ಮಾಣ ಮಾಡಲು ಆಗಭೇಕಿರುವ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಸ್ಥಳದಲ್ಲಿಯೆ ಇದ್ದ ಜಿಲ್ಲಾಧಿಕಾರಿಯವರಿಗೆ ಉಸ್ತುವಾರಿ ಸಚಿವರು ತಿಳಿಸಿದರು. ನಗರ ಹೊರ ವಲಯದಲ್ಲಿ ವರ್ತುಲ ರಸ್ತೆ ಕೆಲಸವನ್ನು ವ್ಯಾಪಕವಾಗಿ ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವರು ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ಭರದಿಂದ ಸಾಗಿದೆ. ನಗರದ ಅಭಿವೃದ್ದಿ ಗಮನದಲ್ಲಿಟ್ಟುಕೊಂಡು ವ್ಯಾಪಕವಾಗಿ ಎಲ್ಲೆಡೆ ಕೆಲಸ ಕೈಗೊಳ್ಳಲಾಗಿದೆ. ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣವಾಗಬೇಕಿತ್ತು. ಕಾಮಗಾರಿ ಪರಿಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂಬ ಉದ್ದೇಶದಿಂದ ಕೊಂಚ ಅವಕಾಶ ನೀಡಲಿದ್ದು ಜನವರಿ ಎರಡನೇ ವಾರದೊಳಗೆ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಕಾಮಗಾರಿ ಎಲ್ಲೆಡೆ ಏಕಕಾಲದಲ್ಲಿ ಬಿರುಸುಗೊಂಡಿರುವುದರಿಂದ ಜನರಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗಬಹುದು. ಅದರೂ ಅಭಿವೃದ್ದಿಯ ಸದುದ್ದೇಶದಿಂದ ಕ್ಥಗೊಂಡಿರುವ ಕೆಲಸಕ್ಕೆ ನಗರದ ಜನರು ಸಹಕರಿಸುತ್ತಿದ್ದಾರೆ. ದೂಳು ಮುಕ್ತಗೊಳಸಿ ನಗರವನ್ನು ಸಮಗ್ರವಾಗಿ ಪ್ರಗತಿಗೊಳಿಸುವ ಕಾರ್ಯಕ್ಕೆ ಜನರು ಮುಂದೆಯು ಸಹಕರಿಸಲಿದ್ದಾರೆ ಎಂಬ ವಿಶ್ವಾಸವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಗೀತಾಮಹದೇವ ಪ್ರಸಾದ್ ವ್ಯಕ್ತಪಡಿಸಿದರು
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ.ರವಿಕುಮಾರ್ ನÀಗರ ಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ. ಉಪಾಧ್ಯಕ್ಷರಾದ ಆರ್.ಎಂ.ರಾಜಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ ಚಂದ್ರು,ಜಿಲ್ಲಾಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಞರಾದ ಕೆ.ಪಿ ಸದಾಶಿವಮೂರ್ತಿ, ಕೆರಹಳ್ಳಿ ನವೀನ್, ನಗರಾಭಿವೃದ್ದಿ ಮಾಜಿ ಅಧ್ಯಕ್ಷರಾದ ಸೈಯದ್ ರಫಿ, ಜಿ.ಪಂ ಮುಖ್ಯಕಾರ್ಯನಿರ್ವಹ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಾಂತರಾಜು, ಚಾಮರಾಜನಗರ ಸಭೆ ಆಯುಕ್ತರಾದ ರಾಜಣ್ಣ ಇತರೆ ಅಧಿಕಾರಿಗಳು, ಮುಖಂಡರು ಈ ಸಂದರ್ಭದಲ್ಲಿ ಇದ್ದರು.
ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೆಶಕರಾಗಿ ಕೆ.ಸುರೇಶ್ ಅಧಿಕಾರ ಸ್ವೀಕಾರ
ಚಾಮರಾಜನಗರ, ನ. 04 - ಜಿಲ್ಲಾ ನಗರಾಭಿವೃದ್ದಿ ಕೋಶದ ನೂತನ ಯೋಜನಾ ನಿರ್ದೆಶಕರಾಗಿ ಕೆ.ಸುರೇಶ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಇದುವರೆಗೆ ಯೋಜನಾ ನಿರ್ದೆಶಕರ ಪ್ರಭಾರ ನಿರ್ವಹಿಸುತ್ತಿದ್ದ ಕೆ.ಎಂ.ರವಿಕುಮಾರ್ ಅವರಿಂದ ಅಧಿಕಾರ ವಹಿಸಿಕೊಂಡು ಸುರೇಶ್ ಅವರು ಕಾರ್ಯ ನಿರ್ವಹಿಸುತಿದ್ದಾರೆ.
No comments:
Post a Comment