ನ. 18ರಂದು ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ
ಚಾಮರಾಜನಗರ, ನ. 14 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನವೆಂಬರ್ 18ರಂದು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 9 ಗಂಟೆಗೆ ವಿವಿಧ ಜಾನಪದ ಕಲಾತಂಡಗಳೊಡನೆ ಸಾಗಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಪ್ರವಾಸಿ ಮಂದಿರದ ಬಳಿ ಚಾಲನೆ ನೀಡುವರು.
ಬೆಳಿಗ್ಗೆ 11 ಗಂಟೆಗೆ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಸಮಾರಂಭವನ್ನು ಸಕ್ಕರೆ, ಸಣ್ಣ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಉದ್ಘಾಟಿಸುವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆಯ ಅಧ್ಯಕ್ಷರಾದ ಶೋಭ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಹುಣಸೂರಿನ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಬಿ. ನಂಜುಂಡಸ್ವಾಮಿ ಮುಖ್ಯ ಭಾಷಣಕಾರರಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಸಹಾಯಧನ : ಅರ್ಜಿ ಆಹ್ವಾನ
ಚಾಮರಾಜನಗರ, ನ. 14:- ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿಗೆ ಸೂಕ್ಷ್ಮ ಹನಿ ನೀರಾವರಿ (ಡ್ರಿಪ್ ಇರಿಗೇಷನ್) ಪದ್ಧತಿ ಅಳವಡಿಕೆಗೆ ಉತ್ತೇಜನ ನೀಡುತ್ತಿದೆ. ಹನಿ ನೀರಾವರಿ ಪದ್ಧತಿ ಅಳವಡಿಕೆಯಿಂದ ನೀರಿನ ಮಿತಬಳಕೆ, ನಿಖರ ಗೊಬ್ಬರ, ನೀರು ಬಳಕೆಯಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಬೆಳೆದು ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ.
ಯೋಜನೆಯಡಿ ಎಲ್ಲಾ ವರ್ಗದ ರೈತರಿಗೂ ಮೊದಲ 2 ಹೆಕ್ಟೇರ್ ಪ್ರದೇಶಕ್ಕೆ ತರಕಾರಿ ಬೆಳೆಗೆ ಶೇ. 90 ಹಾಗೂ ನಂತರದ 3 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣು, ತೋಟದ ಬೆಳೆಗಳಿಗೆ ಶೇ. 45ರ ಸಹಾಯಧನ ಪಡೆಯಬಹುದು.
ಹಿಂದಿನ ವರ್ಷಗಳಲ್ಲಿ ಈ ಯೋಜನೆಯಡಿ ಸಹಾಯಧನ ಪಡೆದಿರುವ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಸ್ಥಳೀಯವಾಗಿ ದೊರೆಯುವ ನಾನ್ ಐಎಸ್‍ಐ, ಪೇಪರ್ ಡ್ರಿಪ್, ಹೊರರಾಜ್ಯ, ಅನುಮೋದನೆಯಾಗಿಲ್ಲದ ಪರಿಕರಗಳನ್ನು ಅಳವಡಿಸಿದಲ್ಲಿ ಯಾವುದೇ ರೀತಿಯ ಸಹಾಯಧನ ಪಡೆಯಲು ಅವಕಾಶ ಇರುವುದಿಲ್ಲ.
ನೀರಾವರಿ ಸೌಲಭ್ಯ ಇರುವ ಆಸಕ್ತ ರೈತರು ಅಗತ್ಯ ದಾಖಲಾತಿಗಳೊಂದಿಗೆ ನೊಂದಣಿ ಅರ್ಜಿಯನ್ನು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ನೊಂದಾಯಿಸಿಕೊಂಡು ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ ಅನುಮೋದನೆಯಾಗಿರುವ ಕಂಪನಿ, ಅಧಿಕೃತ ಡೀಲರ್‍ಗಳಿಂದ ಮಾತ್ರ ಐಎಸ್‍ಐ ಗುಣಮಟ್ಟದ ಪರಿಕರಗಳನ್ನು ಖಾತರಿಪಡಿಸಿಕೊಂಡು ನಂತರ ತಾಕಿನಲ್ಲಿ ಅಳವಡಿಸಿಕೊಂಡಲ್ಲಿ ಸಹಾಯಧನ ಪಡೆಯಲು ಅರ್ಹರಿರುತ್ತಾರೆ.
ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಣ ಮಟ್ಟದ ಆಹಾರ ಪದಾರ್ಥಗಳ ಮಾರಾಟಕ್ಕೆ ಜಿಲ್ಲಾಧಿಕಾ.ಬಿ.ರಾಮು ಸಲಹೆ.
ಚಾಮರಾಜನಗರ, ನ. 14 -ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ಮಾಡುವವರು ಶುಚಿತ್ವ ಮತ್ತು ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ರಾಮು ಅವರು ಸಲಹೆ ಮಾಡಿದರು.
ಜಿಲ್ಲಾಡಳಿತ ಭವನದ ಕೆ.ಡಿ.ಪಿ ಸಭಾಂಗಣದಲ್ಲಿ ಇಂದು ಪೌರಾಡಳಿತ ನಿರ್ದೇಶನಾಲಯ, ರಾಜ್ಯ ನಗರಾಭಿವೃದ್ದಿ ಸಂಸ್ಥೆ ಹಾಗೂ ನಗರಾಭಿವೃದ್ದಿ ಕೋಶ ಸಂಯುಕ್ತಾಶ್ರಯದಲ್ಲಿ ನಡೆದ ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ-ನಲ್ಮ್) ಕಾರ್ಯಕ್ರಮದಡಿ ಬೀದಿ ಬಿದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ ಹಾಗೂ ನಿಯಂತ್ರಣ ಅಭಿಯಾನ ಕುರಿತು ಪಟ್ಟಣ ಮಾರಾಟ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತಿಕರಣ ಪ್ರಭಾವದಿಂದ ನಗರ ಮತ್ತು ಪಟ್ಟಣ ಪ್ರದೇಶಗಳು ಅಭಿವೃದ್ಧಿಯಾಗುತ್ತಿವೆ. ಹೆಚ್ಚಿನ ಜನರು ಐಷರಾಮಿ ಮಾಲ್ ಸಂಸ್ಕøತಿಗೆ ಮಾರುಹೋಗುತ್ತಿರುವ ಸಂದರ್ಭದಲ್ಲಿ ಮಧ್ಯಮ ಸಣ್ಣ ಹಾಗೂ ಬೀದಿ ವ್ಯಾಪಾರಿಗಳ ವೃತ್ತಿಗೆ ತೊಂದರೆಯಾಗಬಹುದು ಎಂದು ಅಭಿಪ್ರಾಯ ಪಟ್ಟ ಜಿಲ್ಲಾಧಿಕಾರಿಯವರು ಹೋಟೆಲ್ ಬೇಕರಿಯಂತಹ ತಿನಿಸು ಪದಾರ್ಥಗಳನ್ನು ಗ್ರಾಹಕರಿಗೆ ಪೂರೈಸುವವರು ಉತ್ತಮ ಗುಣಮಟ್ಟದ ಆಡುಗೆ ಎಣ್ಣೆ ಬಳಸಿ ಆಹಾರ ತಯಾರಿಸಬೇಕು, ಶುದ್ಧ ನೀರನ್ನು ಬಳಸಬೇಕು, ಸಾರ್ವಜನಿಕರಿಗೆ ಗುಣ ಮಟ್ಟದ ಹಣ್ಣು ತರಕಾರಿ ಮಾರಾಟ ಮಾಡುವುದರ ಜೊತೆಗೆ ವ್ಯಾಪಾರ ಮಾಡುವ ಸ್ಥಳಗಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುಲು ಹೆಚ್ಚು ಗಮನಹರಿಸಬೇಕು ಎಂದು ತಿಳಿ ಹೇಳಿದರು.
ರಸ್ತೆ ಬದಿ ವ್ಯಾಪಾರಸ್ತರನ್ನು ಗುರುತಿಸಿ ಅವರಿಗೆ ಪರವಾನಗಿ ನೀಡಬೇಕು. ಹಣ ಕಾಸಿನ ಅಗತ್ಯ ಇದ್ದರೆ ಬ್ಯಾಂಕ್‍ಗಳ ಮೂಲಕ ಸಾಲ ಪಡೆದು ವ್ಯಾಪಾರ ಮಾಡುವುದರ ಮೂಲಕ ಅವರ ಆರ್ಥಿಕಾಭಿವೃದ್ಧಿಯಾಗಲು ಹಾಗೂ ಜೀವನೋಪಾಯ ಸುಧಾರಿಸಲು ಈ ಅಧಿನಿಯಮ ಪೂರಕವಾಗಲಿದೆ ಎಂದು ತಿಳಿಸಿದರು.
ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ ಬೀದಿ ವ್ಯಾಪಾರಸ್ತರು ಎಲ್ಲೆಂದರಲ್ಲಿ ವ್ಯಾಪಾರ ಮಾಡಬಾರದು. ಜಿಲ್ಲಾಡಳಿತವು ಸೂಚಿಸಿರುವ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ನಡೆಸಬೇಕು. ಇನ್ನು ಹೆಚ್ಚಿನ ಮಾರುಕಟ್ಟೆ ವಲಯಗಳನ್ನು ಸ್ಥಾಪಿಸಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು .
ನಗರಸಭೆ ಅಧ್ಯಕ್ಷರಾದ ಶೋಭ ಪುಟ್ಟಸ್ವಾಮಿ ಅವರು ಮಾತನಾಡಿ ನಗರದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಬೀದಿ ವ್ಯಾಪಾರಿಗಳು ರಸ್ತೆ ಬದಿಯಲ್ಲೇ ತಳ್ಳುವ ಗಾಡಿಗಳನ್ನು ನಿಲ್ಲಿಸಿ ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.ಈ ಹಿನ್ನಲೆಯಲ್ಲಿ ಸೂಚಿಸಿರುವ ನಿಗದಿತ ಸ್ಥಳದಲ್ಲೆ ವ್ಯಾಪಾರ ಪ್ರಕ್ರಿಯೆಗಳನ್ನು ನಡೆಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್‍ಮೀನಾ, ಡಿ.ಯು.ಡಿ.ಸಿ ಯೋಜನಾ ನಿರ್ದೇಶಕರಾದ ಕೆ.ಸುರೇಶ್,ಡೇ-ನಲ್ಮ್ ಯೋಜನಾಧಿಕಾರಿ ಡಾ.ಎಸ್ ಪುಟ್ಟಸ್ವಾಮಿ, ಇನ್ನಿತರ ಅಧಿಕಾರಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾಜಮುಖಿ ವ್ಯಕ್ತಿತ್ವ ಬೆಳೆಸಿಕೊಳ್ಳಲು ಯುವಜನರಿಗೆ ಜಿಲ್ಲಾಧಿಕಾರಿ ಸಲಹೆ.
ಚಾಮರಾಜನಗರ, ನ. 14 :- ದೇಶ ಅಭಿವೃದ್ಧಿಯತ್ತ ಸಾಗಲು ಯುವಜನರ ಪಾತ್ರ ಮುಖ್ಯವಾಗಿದ್ದು, ಯುವ ಜನತೆ ಸಂಕುಚಿತ ಮನೋಭಾವನೆಯಿಂದ ಹೊರಬಂದು ಮತ್ತೊಬ್ಬರು ಗುರುತಿಸುವಂತೆ ಬೆಳೆಯಬೇಕು. ಸಮಾಜಮುಖಿ ವ್ಯಕ್ತಿತ್ವ ಬೆಳೆಸಿಕೊಳ್ಳುಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಸಲಹೆ ನೀಡಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇಂದು ನೆಹರು ಯುವ ಕೇಂದ್ರದ ಸ್ಥಾಪನಾ ದಿವಸದ ಅಂಗವಾಗಿ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಹುರಳಿನಂಜನಪುರದ ಉದಯ್ ಭೀಮ್ ಯುವಜನ ಸಂಘ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಅತ್ಯುತ್ತಮ ಯುವ ಸಂಘ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
14 ರಿಂದ 39 ರ ವರ್ಷದ ಒಳಗಿನವರು ಯುವಜನರೆಂದು ಗುರುತಿಸಲಾಗಿದೆ. ಭಾರತದಲ್ಲಿ ಯುವಕರ ಸಂಖ್ಯೆ ಶೇಕಡಾ 50ಕ್ಕಿಂತಲೂ ಹೆಚ್ಚಿದ್ದು ಯುವ ರಾಷ್ಷ್ರ ಎಂದು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇವರನ್ನು ಉತ್ತಮ ಶಿಕ್ಷಣ, ಕೌಶಲ್ಯ ತರಬೇತಿಗಳ ಮೂಲಕ ಸದೃಢರನ್ನಾಗಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ಗ್ರಾಮೀಣ ಜನರ ಕಲೆಯನ್ನು ಗುರುತಿಸಿ, ತರಬೇತಿ, ಸಲಹೆ, ಮಾರ್ಗದರ್ಶನದ ಮೂಲಕ ಸಂಘಟಿತರಾಗುವಂತೆ ಮಾಡಿ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿ ಬಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಘ ಸಂಸ್ಥೆಗಳು ಪ್ರಶಸ್ತಿ ಪಡೆಯಲು ಶ್ರಮಿಸಬೇಕು ಎಂದು ಬಿ. ರಾಮು ಸಲಹೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಮಾತಾಡಿ ದೇಶದಲ್ಲಿ ಯುವಜ£ರÀ ಸಂಖ್ಯೆ ಅಧಿಕವಾಗಿದೆ. ಯುವಶಕ್ತಿಯನ್ನು ಸಮರ್ಥವಾಗಿ ಉಪಯೋಗಿಸಿಕೊಂಡಾಗ ಮಾತ್ರ ಯುವ ಜನರ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿ ಸಾಧ್ಯ ಎಂದರು. ಇದಕ್ಕಾಗಿ ಉತ್ತಮ ಶಿಕ್ಷಣ, ತರಬೇತಿ ಹಾಗೂ ಸಂಶೋಧನೆಗಳು ನಡೆಯಬೇಕೆಂದು ತಿಳಿಸಿದರು.
ನೆಹರೂ ಯುವ ಕೇಂದ್ರದ ಲೆಕ್ಕಾಧಿಕಾರಿಗಳಾದ ಹೆಚ್. ಎಂ. ಬಸವರಾಜು ಮಾತನಾಡಿ ನೆಹರು ಯುವ ಕೇಂದ್ರವು ಯುವಕರ ಶ್ರೇಯೋಭಿವೃದ್ಧಿಗಾಗಿ ಸ್ಥಾಪಿತವಾಗಿದ್ದು ಯುವಕ ಯುವತಿಯರನ್ನು ತರಬೇತಿಗೊಳಿಸಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುವಂತೆ ಮಾರ್ಗದರ್ಶನ ಮಾಡುತ್ತಿದೆ ಎಂದು ತಿಳಿಸಿದರು.
ನಂಜನಗೂಡು ನಗರಸಭೆ ಪೌರಾಯುಕ್ತರಾದ ವಿಜಯ್ ಮಾತನಾಡಿ ಉದಯ್ ಭೀಮ್ ಯುವಜನ ಸಂಘವು ಯುವಜನರಿಗೆ ಮಾದರಿಯಾಗಿದ್ದು ಗ್ರಾಮದ ಸ್ವಚ್ಚತೆ, ಯುವಕರಿಗೆ ತರಬೇತಿ ಕಾರ್ಯಗಾರಗಳು, ಸಾಮಾಜಿಕ ಮೌಲ್ಯಗಳ ಕುರಿತ ಬೀದಿನಾಟಕಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ ಎಂದರು.
ಜಿಲ್ಲೆಯ ಹುರಳಿನಂಜನಪುರ ಗ್ರಾಮದ ಉದಯ್ ಭೀಮ್ ಯುವಜನ ಸಂಘಕ್ಕೆ ಜಿಲ್ಲಾ ಅತ್ಯುತ್ತಮ ಯುವಸಂಘ ಪ್ರಶಸ್ತಿ ಫಲಕ, 25000 ರೂ. ನಗದು ಚಕ್ ನೀಡಿ ಗೌರವಿಸಲಾಯಿತು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಭಾರ ಪ್ರಾಚಾರ್ಯರಾದ ರಂಗಸ್ವಾಮಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರಾದ ಎಲ್. ಸುರೇಶ್, ಸಾಧನಾ ಸಂಸ್ಥೆ ನಿರ್ದೇಶಕರಾದ ಟಿ.ಜೆ. ಸುರೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
No comments:
Post a Comment