ನ. 24ರಿಂದ ನಗರದಲ್ಲಿ ಚಿತ್ರೋತ್ಸವ : ನಾಗರಿಕರಿಗೆ ಉಚಿತವಾಗಿ ಕನ್ನಡ ಸಿನಿಮಾಗಳ ವೀಕ್ಷಣೆಗೆ ಅವಕಾಶ
ಚಾಮರಾಜನಗರ, ನ. 22 (vss):- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಕನ್ನಡ ಚಿತ್ರ ರಸಿಕರಿಗೆ ಕನ್ನಡ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶ ನವೆಂಬರ್ 24 ರಿಂದ 30ರವರೆಗೆ ನಗರದಲ್ಲಿ ಲಭಿಸಲಿದೆ.
ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳ ಪ್ರದರ್ಶನದ ಚಿತ್ರೋತ್ಸವ ಸಪ್ತಾಹವು ನವೆಂಬರ್ 24 ರಿಂದ 30ರವರೆಗೆ ನಗರದ ಸಿಂಹ ಮೂವಿ ಪ್ಯಾರಡೈಸ್‍ನಲ್ಲಿ ಏರ್ಪಾಡಾಗಿದೆ.
ನವೆಂಬರ್ 24 ರಿಂದ 30ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ (ಬೆಳಗಿನ ಆಟ) ಚಲನಚಿತ್ರಗಳ ಪ್ರದರ್ಶನ ನಡೆಯಲಿದ್ದು ಚಿತ್ರ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ಅವಕಾಶ ಇರಲಿದೆ.
ನವೆಂಬರ್ 24ರಂದು ಅಮರಾವತಿ, ನವೆಂಬರ್ 25ರಂದು ಕಿರಿಕ್ ಪಾರ್ಟಿ, ನವೆಂಬರ್ 26ರಂದು ರಾಮ ರಾಮ ರೇ, ನವೆಂಬರ್ 27ರಂದು ಮದಿಪು (ತುಳು ಭಾಷೆ), ನವೆಂಬರ್ 28ರಂದು ಯೂ ಟರ್ನ್, ನವೆಂಬರ್ 29ರಂದು ಅಲ್ಲಮ ಹಾಗೂ ನವೆಂಬರ್ 30ರಂದು ಮಾರಿಕೊಂಡವರು ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.
ಅಮರಾವತಿ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಕಿರಿಕ್ ಪಾರ್ಟಿ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರಪ್ರಶಸ್ತಿ ಪಡೆದುಕೊಂಡಿದೆ. ರಾಮರಾಮರೇ ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಮದಿಪು (ತುಳು ಭಾಷೆ) ಚಲನಚಿತ್ರವು 2016ನೇ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಹಾಗೂ ಅತ್ಯುತ್ತಮ ತುಳು ಭಾಷಾ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಯೂ ಟರ್ನ್ ಚಲನಚಿತ್ರವು 2016ನೇ ಸಾಲಿನ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅಲ್ಲಮ ಚಲನಚಿತ್ರವು 2016ನೇ ಸಾಲಿನ ಪನೊರಮಾ ವಿಭಾಗದಲ್ಲಿ ಪ್ರದರ್ಶನಗೊಂಡಿದೆ. ಮಾರಿಕೊಂಡವರು ಚಲನಚಿತ್ರವು 2015ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರದರ್ಶನದಲ್ಲಿ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ಚಲನಚಿತ್ರೋತ್ಸವ ಸಪ್ತಾಹದಲ್ಲಿ ಪ್ರದರ್ಶಿತವಾಗಲಿರುವ ಚಲನಚಿತ್ರಗಳನ್ನು ಉಚಿತವಾಗಿ ವೀಕ್ಷಿಸುವ ಮೂಲಕ ಜಿಲ್ಲೆಯ ನಾಗರಿಕರು ಚಿತ್ರೋತ್ಸವ ಯಶಸ್ವಿಗೆ ಸಹಕರಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.
ಸಹಕಾರ ಡಿಪ್ಲೊಮಾ ಕೋರ್ಸ್ ಪ್ರವೆಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ನ. 22 (vss):- ಜಿಲ್ಲೆಯ ಸಾಮಾನ್ಯ ಹಾಗೂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಸಹಕಾರ ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ ಅಹ್ವಾನಿಸಲಾಗಿದೆ.
ಜನವರಿಯಲ್ಲಿ ಪ್ರಾರಂಭವಾಗುತ್ತಿರುವ 6 ತಿಂಗಳ ಅವಧಿಯ ಡಿಪ್ಲೊಮಾ ಇನ್ ಕೋ- ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್ ತರಬೇತಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಈ ತರಬೇತಿಯು ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್, ಅಫೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಹಾಲು ಓಕ್ಕೂಟ ಮತ್ತು ಇತರೆ ಎಲ್ಲಾ ರೀತಿಯ ಸಹಕಾರ ಸಂಘ ಹಾಗೂ ಬ್ಯಾಂಕ್‍ಗಳಲ್ಲಿನ ಉದ್ಯೋಗ ನೇಮಕಾತಿಗೆ ಕಡ್ಡಾಯವಾಗಿರುತ್ತದೆ. ಈ ಕೋರ್ಸ್‍ನ ಪಠ್ಯಕ್ರಮವು ಕೆ.ಎ.ಎಸ್. ಪರೀಕ್ಷೆಯ ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯ ಮತ್ತು ಸಹಕಾರ ಇಲಾಖೆಯ ಕೋ- ಆಪರೇಟಿವ್ ಇನ್ಸ್‍ಸ್ಪೆಕ್ಟರ್ ಹುದ್ದೆ ಹಾಗೂ ಇನ್ನಿತರ ಹುದ್ದೆ ನೇಮಕಾತಿ ಪರೀಕ್ಷೆಗಳಿಗೆ ಪೂರಕವಾಗಿರುತ್ತದೆ.
ಕನಿಷ್ಟ ವಿದ್ಯಾರ್ಹತೆಯು ಎಸ್.ಎಸ್.ಎಲ್.ಸಿ ಆಗಿದ್ದು, ಪ್ರವೇಶ ಪಡೆದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಮಾಸಿಕ ರೂ. 500 ಹಾಗೂ ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಮಾಸಿಕ ರೂ. 400 ಶಿಷ್ಯ ವೇತನ ನೀಡಲಾಗುವುದು
ಸಹಕಾರ ಭವನ, ಚಾಮರಾಜ ಜೋಡಿ ರಸ್ತೆ, ಮೈಸೂರು. ಇಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ನವೆಂಬರ್ 30 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ- ಆಪರೇಟಿವ್ ಮ್ಯಾನೇಜ್‍ಮೆಂಟ್ ಮೈಸೂರು ದೂರವಾಣಿ ಸಂಖ್ಯೆ 0821-2520563 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.23ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಚಾಮರಾಜನಗರ, ನ. 22 :- ತಾಲ್ಲೂಕಿನ ಸಂತೇಮರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2017-18 ನೇ ಸಾಲಿನ 3ನೇ ತ್ರೈಮಾಸಿಕ ನಿರ್ವಹಣ ಕಾರ್ಯವನ್ನು ನವೆಂಬರ್ 23 ರಂದು ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಹೊನ್ನೂರು, ಸಂತೇಮರಳ್ಳಿ, ನವಿಲೂರು, ಆಲ್ದೂರು, ಅಂಬಳೆ, ಕುದೇರು, ಮಂಗಲ ವಾಟರ್ ಸಪ್ಲೈ, ಕೆಂಪನಪುರ, ದುಗ್ಗಟ್ಟಿ, ಮತ್ತು ಚಂಡೀಪುರ ಪ್ರದೇಶಗಳಿಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಇದರಿಂದ ಸಾರ್ವಜನಿಕರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಜೊತೆ ಸಹಕರಿಸಲು ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಪ್ಪು ಬಿಳುಪು ಬಣ್ಣದ ಕಾಗದದಲ್ಲಿ ಪಹಣಿ ವಿತರಣೆ: ಜಿಲ್ಲಾಧಿಕಾರಿ ಸ್ವಷ್ಟನೆ
ಚಾಮರಾಜನಗರ, ನ. 22 (vss):- ಸಾರ್ವನಿಕರಿಗೆ ಪಹಣಿಯನ್ನು ಕಪ್ಪು ಬಿಳುಪು ಲೀಗಲ್ ಗಾತ್ರದ ಕಾಗದದ ಮೇಲೆ ಮುದ್ರಿಸಿ ಪ್ರಸ್ತುತ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ಸ್ವಷ್ಟಪಡಿಸಿದ್ದಾರೆ.
ಕಂದಾಯ ಇಲಾಖೆಯಿಂದ ರೈತರಿಗೆ, ಸಾರ್ವಜನಿಕರಿಗೆ ಗಣಕೀಕೃತ ಪಹಣಿಗಳನ್ನು ವಿತರಿಸುವ ಸೌಲಭ್ಯವನ್ನು 2001ರಿಂದ ಜಾರಿಗೆ ತರಲಾಗಿದೆ. ಸರ್ಕಾರವು ಪ್ರಸ್ತುತ ಟೆಂಡರ್‍ದಾರರಿಂದ ನೀಲಿ ಬಣ್ಣದ ಪೂರ್ವಮುದ್ರಿತ ಪಹಣಿ ನಮೂನೆಯನ್ನು ಟೆಂಡರ್‍ದಾರರಿಂದ ಪಡೆದು ಸದರಿ ನಮುನೆಯಲ್ಲಿ ಭೂಮಿ ಡಾಟಾ ಬೇಸ್‍ನಿಂದ ಪಹಣಿಯ ಮಾಹಿತಿಯನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿತು. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಪಹಣಿ ಪತ್ರ ಮುದ್ರಿಸಲು ಪೂರ್ವ ಮುದ್ರಿತ ಪಹಣಿ ನಮೂನೆಗಾಗಿ ಸರ್ಕಾರವು ಸರಬರಾಜುದಾರ ಮೇಲೆ ಸಂಪೂರ್ಣವಾಗಿ ಅವಲಂಭಿತವಾಗಿತ್ತು. ಇದರಿಂದ ರೈತರಿಗೆ ಪಹಣಿಗಳ ತುರ್ತು ಅಗತ್ಯವಿದ್ದ ಸಂದರ್ಭದಲ್ಲಿ ಅಂದರೆ ಬ್ಯಾಂಕ್‍ಗಳಿಂದ ಅಥವಾ ಯಾವುದಾದರೂ ಸಂಸ್ಥೆಯಿಂದ ಸಾಲ ಪಡೆಯಲು, ಸರ್ಕಾರದಿಂದ ಪರಿಹಾರ ಪಡೆಯುವಾಗ ಬೆಳೆವಿಮೆಗಾಗಿ ಪೂರ್ವ ಮುದ್ರಿತ ಪಹಣಿ ನಮೂನೆಯ ಸರಬರಾಜಿನಲ್ಲಿ ಸ್ವಲ್ಪ ವಿಳಂಬವಾದರೂ ಸಹ ನಿಗದಿತ ಸಮಯದಲ್ಲಿ ರೈತರು ಅಥವಾ ಸಾರ್ವಜನಿಕರು ಪಹಣಿಯನ್ನು ಪಡೆಯಲು ಕಷ್ಟವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸದರಿ ತೊಂದರೆಯನ್ನು ಅರಿತ ಸರ್ಕಾರವು ಪೂರ್ವ ಮುದ್ರಿತ ಪಹಣೆ ನಮೂನೆಗಾಗಿ ಸರಬರಾಜುದಾರ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ತಂತ್ರಾಂಶದಲ್ಲಿಯೇ ಕಪ್ಪು ಬಿಳುಪು ಬಣ್ಣದಲ್ಲಿ ಲೀಗಲ್ ಗಾತ್ರದ ಕಾಗದದ ಮೇಲೆ ಪಹಣಿಯನ್ನು ಮುದ್ರಿಸಲು ಕ್ರಮ ಕೈಗೊಂಡಿದೆ. ಸದರಿ ಕಪ್ಪು ಬಿಳುಪು ಗಾತ್ರದ ಪಹಣಿಯಲ್ಲಿ ಈ ಹಿಂದೆ ನೀಡುತ್ತಿದ್ದ ಪಹಣಿಯಲ್ಲಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದ್ದು ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳಾದ ವಿಶೇಷ ಪಹಣಿ ಗುರುತಿನ ಸಂಖ್ಯೆ, ಕ್ರಮ ಸಂಖ್ಯೆ, ಬಾರ್ ಕೋಡ್, ಡಿಜಿಟಲ್ ಸಹಿಗಳನ್ನು ಒಳಗೊಳಡಿರುತ್ತದೆ ಹಾಗೂ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿರತ್ತದೆ. ಆದರಿಂದ ಕಪ್ಪು ಬಿಳುಪು ಬಣ್ಣದ ಲೀಗಲ್ ಗಾತ್ರದ ಕಾಗದದ ಮೇಲೆ ಮುದ್ರಿಸಿ ಪ್ರಸ್ತುತ ನೀಡಲಾಗುತ್ತದೆ.
ಆದುದರಿಂದ ಸಾರ್ವಜನಿಕರು ಈ ಬದಲಾಣೆಯನ್ನು ಗಮನದಲ್ಲಿರಿಸಿಕೊಂಡು ಯಾವುದೇ ಗೊಂದಲಕ್ಕೊಳಕಾಗಾಗದೇ ತಾಲ್ಲೂಕು ಕಚೇರಿಯ ಭೂಮಿ ಕೇಂದ್ರದಲ್ಲಿ, ಅಟಲ್‍ಜೀ ಜನ ಸ್ನೇಹಿ ಕೇಂದ್ರಗಳಲಿ,್ಲ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ಸರ್ಕಾರದ ಪಹಣಿ ವಿತರಿಸಲು ಅನುಮತಿ ನೀಡಿರುವ ಖಾಸಗಿ ಕೇಂದ್ರಗಳಲ್ಲಿ ವಿತರಿಸುವ ಪಹಣಿ ಪತ್ರಗಳನ್ನು ಪಡೆದು ತಮ್ಮ ಅವಶ್ಯಕತೆಗಳಿಗೆ ಬಳಸಿಕೊಳ್ಳಬೇಕು.
ಪಹಣಿಯನ್ನು ನಿಗದಿತ ಸಮಯಕ್ಕೆ ಪಡೆಯಲು ಅನುಕೂಲವಾಗುವಂತೆ ಸಾರ್ವನಿಕರ ಹಿತದೃಷ್ಠಿಯಿಂದ ಪಹಣೆಯಲ್ಲಿ ಈ ಬದಲಾವಣೆಯನ್ನು ತರಲಾಗಿದೆ. ಪಹಣಿಯ ನೈಜತೆಯನ್ನು ತಿತಿತಿ.ಟಚಿಟಿಜಡಿeಛಿoಡಿಜs.ಞಚಿಡಿಟಿಚಿಣಚಿಞಚಿ.gov.iಟಿ ವೆಬ್- ಸೈಟ್‍ನಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.25 ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ನ. 22 (vss):- ಜಿಲ್ಲೆಯ ನಾಗರಿಕರ ಕುಂದು ಕೊರತೆಗಳನ್ನು ಅಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನವೆಂಬರ್ 25 ರಂದು ಬೆಳಿಗ್ಗೆ 10ರಿಂದ 11ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 08226-224888ಕ್ಕೆ ಕರೆ ಮಾಡಿ ತಮ್ಮ ಕುಂದು ಕೊರತೆಯನ್ನು ತಿಳಿಸಿ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ: ವಸತಿ ಯೋಜನೆ ಸಹಾಯ ಧನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ನ. 22 (vss):- ಕೊಳ್ಳೇಗಾಲ ನಗರ ಸಭೆ ವ್ಯಾಪ್ತಿಯಲ್ಲಿ 2017-18ನೇ ಸಾಲಿಗೆ ವಾಜಪೇಯಿ ನಗರ ವಸತಿ ಯೇಜನೆಯಡಿ ಮನೆ ನಿರ್ಮಿಸಿಕೊಳ್ಳಲು ಹಿಂದುಳಿದ ವರ್ಗಗಳ ಅರ್ಹ ಮಹಿಳಾ ಫಲಾನುಭವಿಗಳಿಗೆ ಸಹಾಯ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ನವೆಂಬರ್ 30 ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರದ ಪೌರಾಯುಕ್ತರ ಕಚೇರಿಯ ಸಂಬಂಧಪಟ್ಟ ಶಾಖೆಯಲ್ಲಿ ಪಡೆಯುವಂತೆ ಪ್ರಕಟಣೆ ತಿಳಿಸಿದೆ.
ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆ : ಹೆಸರು ನೊಂದಾಯಿಸಲು ಅವಕಾಶ
ಚಾಮರಾಜನಗರ, ನ. 22 (vss):- ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯನ್ನು ಪ್ರಸಕ್ತ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಹೋಬಳಿ, ಗ್ರಾಮಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುವ ಭತ್ತ, ಮುಸುಕಿನ ಜೋಳ, ರಾಗಿ, ಈರುಳ್ಳಿ, ಟೊಮೆಟೊ, ಮಳೆ ಆಶ್ರಯದಲ್ಲಿ ಬೆಳೆಯಲಾಗುವ ಮುಸುಕಿನ ಜೋಳ, ರಾಗಿ, ಕಡಲೆ, ಹೆಸರು, ಹುರುಳಿ ಬೆಳೆ ಬೇಸಿಗೆ ಹಂಗಾಮಿಗೆ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುವ ಭತ್ತ, ರಾಗಿ, ಈರುಳ್ಳಿ, ಟೊಮೆಟೊ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ವಿಮೆಗೆ ಒಳಪಡಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲೂಕುಗಳಲ್ಲಿ ಮಳೆಯಾಶ್ರಿತ ಹುರುಳಿ ಬೆಳೆಯನ್ನು ವಿಮೆಗೆ ಅಧಿಸೂಚಿಸಿದೆ.
ಹಿಂಗಾರು ಹಂಗಾಮಿಗೆ ಮಳೆಯಾಶ್ರಿತ ಹುರುಳಿ, ಮುಸುಕಿನ ಜೋಳ ಮತ್ತು ನೀರಾವರಿ ಆಶ್ರಿತ ಮುಸುಕಿನ ಜೋಳ, ಈರುಳ್ಳಿ, ಟೊಮೆಟೊ ಬೆಳೆಗೆ ನೊಂದಾಯಿಸಲು ನವೆಂಬರ್ 30 ಕಡೆದಿನವಾಗಿದೆ. ಹಿಂಗಾರು ಹಂಗಾಮಿಗೆ ಮಳೆಯಾಶ್ರಿತ ಹೆಸರು, ಕಡಲೆ, ರಾಗಿಗೆ ಡಿಸೆಂಬರ್ 15 ಮತ್ತು ನೀರಾವರಿ ಆಶ್ರಿತ ಭತ್ತ, ರಾಗಿ ಬೆಳೆಗೆ ನೊಂದಾಯಿಸಲು ಡಿಸೆಂಬರ್ 30ರಂದು ಕಡೆಯ ದಿನ.
ಬೇಸಿಗೆ ಹಂಗಾಮಿನ ನೀರಾವರಿ ಆಶ್ರಿತ ಈರುಳ್ಳಿ, ಭತ್ತ, ರಾಗಿ ಮತ್ತು ಟೊಮೆಟೊ ಬೆಳೆಗಳಿಗೆ ನೊಂದಾಯಿಸಲು 2018ರ ಫೆಬ್ರವರಿ 28ರಂದು ಅಂತಿಮ ದಿನವಾಗಿದೆ.
ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಸೀತಿಯಂತಹ ದಾಖಲೆಗಳನ್ನು ನೀಡಬೇಕು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ಎಂ. ತಿರುಮಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಪ್ರಶಸ್ತಿ ಬಹುಮಾನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ನ. 22 (vss):- ಕೃಷಿ ಇಲಾಖೆಯು ಕೃಷಿ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಲು ಶ್ರಮ ಮತ್ತು ಸಕ್ರಿಯ ಪಾಲುಗಾರಿಕೆಗೆ ಕಾರಣರಾದ ರೈತರನ್ನು ಗುರುತಿಸಲು ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ ಬಹುಮಾನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹಿಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಭಾಗವಹಿಸುವ ರೈತರು ನವೆಂಬರ್ 30ರೊಳಗೆ ಹೆಸರು ನೊಂದಾಯಿಸಿಕೊಳ್ಳಬೇಕು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗೆ ಸಾಮಾನ್ಯ ರೈತರಿಗೆ 100 ರೂ. ಹಾಗೂ ಪರಿಶಿಷ್ಟ ಜಾತಿ, ವರ್ಗದ ರೈತರಿಗೆ 25 ರೂ. ಸ್ವರ್ಧ ಶುಲ್ಕ ನಿಗದಿ ಮಾಡಿದೆ.
ವಿವಿಧ ಹಂತದ ಬೆಳೆ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಿದ್ದು ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 15 ಸಾವಿರ ರೂ., ದ್ವಿತೀಯ ಬಹುಮಾನ 10 ಸಾವಿರ ರೂ. ಹಾಗೂ ತೃತೀಯ ಬಹುಮಾನ 5 ಸಾವಿರ ರೂ. ಲಭಿಸಲಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ತೃತೀಯ ಬಹುಮಾನ 10 ಸಾವಿರ ರೂ. ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವಿತೀಯ ಬಹುಮಾನ 25 ಸಾವಿರ ರೂ. ಹಾಗೂ ತೃತೀಯ ಬಹುಮಾನ 15 ಸಾವಿರ ರೂ. ಲಭಿಸಲಿದೆ.
ವಿವಿಧ ಹಂತದ ಬೆಳೆ ಸ್ಪರ್ಧೆಗೆ ನಿಗದಿಪಡಿಸಿದ ಬೆಳೆಗಳಲ್ಲಿ ಮಾತ್ರ ಸ್ಪರ್ಧೆ ಏರ್ಪಡಿಸಿ ಅರ್ಜಿ ಸ್ವೀಕರಿಸಲಾಗುವುದು. ಸಮಿತಿ ನಿಗದಿಪಡಿಸುವ ಒಂದು ಬೆಳೆಯಲ್ಲಿ ಮಾತ್ರ ಸ್ಪರ್ಧೆ ನಡೆಸಲಾಗುತ್ತದೆ.
ಬೆಳೆ ಸ್ಪರ್ಧೆಗೆ ನೊಂದಾಯಿಸಲು ರೈತರು ಅರ್ಜಿಯೊಂದಿಗೆ ಪಹಣಿ, ಶುಲ್ಕ ಪಾವತಿ ಚಲನ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಭಾವಚಿತ್ರವನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಎಂ. ತಿರುಮಲೇಶ್ ಪ್ರಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 24 ರಂದು ಬೆಳೆ ಸಮೀಕ್ಷೆ ಕಾರ್ಯಾಗಾರ
ಚಾಮರಾಜನಗರ, ನ. 22 (vss):- ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ದತ್ತಾಂಶವನ್ನು ಸ್ವತಃ ರೈತರೆ ಅಳವಡಿಸುವ ಕುರಿತು ತರಬೇತಿ ಶಿಬಿರವನ್ನು ರೈತರಿಗಾಗಿ ಜಿಲ್ಲಾಧಿಕಾರಿ ಬಿ.ರಾಮು ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 24 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆ.ಡಿ.ಪಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಈ ತರಬೇತಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರು ಭಾಗವಹಿಸಿ ಮೊಬೈಲ್ ಆ್ಯಪ್ ಬಗ್ಗೆ ಮಾಹಿತಿ ಪಡೆದು ಸಹಕರಿಸುವಂತೆ ಜಂಟಿ ಕೃಷಿ ನಿರ್ದೇಶಕರಾದÀ ಎಂ.ತಿರುಮಲೇಶ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

No comments:
Post a Comment