Monday, 27 November 2017

ಕಾನೂನಿನಡಿ ಎಲ್ಲರು ಸಮಾನರು : ನ್ಯಾಯಾಧೀಶರಾದ ಆರ್.ಪಿ ನಂದೀಶ್,ವಿಕಲಚೇತನರಿಗಾಗಿ ಮೀಸಲಿಟ್ಟಿರುವ ಶೇ. 3ರಷ್ಟು ಅನುದಾನ ಸಮರ್ಪಕ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ (28-11-2017)

     

ವಿಕಲಚೇತನರಿಗಾಗಿ ಮೀಸಲಿಟ್ಟಿರುವ ಶೇ. 3ರಷ್ಟು ಅನುದಾನ ಸಮರ್ಪಕ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ 

ಚಾಮರಾಜನಗರ, ನ. 27 :- ವಿಕಲಚೇತನರಿಗಾಗಿ ವಿವಿಧ ಇಲಾಖೆಗಳಲ್ಲಿ ಮೀಸಲಿಟ್ಟಿರುವ ಶೇ. 3 ರಷ್ಟು ಅನುದಾನದಲ್ಲಿ ಅಗತ್ಯ ಸೌಲಭ್ಯವನ್ನು ತಲುಪಿಸಿ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ವಿಕಲಚೇತನರ ಜಿಲ್ಲಾಮಟ್ಟದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಕಲಚೇತನರ ಶ್ರೇಯೋಬಿವೃದ್ಧಿಗಾಗಿ ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ ಹಾಗೂ ವಿವಿಧ ಇಲಾಖೆಗಳಲ್ಲಿ ಶೇ. 3ರಷ್ಟು ಅನುದಾನವನ್ನು ಮೀಸಲಿಟ್ಟಿದೆ. ಈ ಅನುದಾನದಲ್ಲಿ ವಿಕಲಚೇತನರಿಗೆ ಅಗತ್ಯವಾಗಿರುವ ಸೌಲಭ್ಯ ಹಾಗೂ ಸವಲತ್ತುಗಳನ್ನು ತಲುಪಿಸಬೇಕು. ಅ ಮೂಲಕ ಅದು ಸಮರ್ಪಕವಾಗಿ ನಿರ್ವಹಣೆಯಾಗಬೇಕು ಎಂದರು.
ಸಾಮಾಜಿಕ ನ್ಯಾಯ ಹಾಗೂ ಸಮನಾವಕಾಶ ಒದಗಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಹಲವಾರು ಕಾರ್ಯಕ್ರನ್ನುಗಳನ್ನು ರೂಪಿಸಿ ಜಾರಿಗೊಳಿಸಿದೆ. ವಿವಿಧ ಇಲಾಖೆಗಳು, ಪಂಚಾಯತ್‍ಗಳು ಯಾವ ಕಾರ್ಯಕ್ರಮ ಅನುಷ್ಠಾನಗೊಳಿಸಿವೆ. ಎಷ್ಟು ಅನುದಾನವನ್ನು ವ್ಯಯಿಸಿವೆ. ಏನೇನು ಸಾಧನ ಸಲಕರಣೆಗಳನ್ನು ಮಂಜೂರು ಮಾಡಿರುವ ಕುರಿತು ಮುಂದಿನ ಸಭೆಗೆ ಮಾಹಿತಿಯನ್ನು ಪೂರ್ವಭಾವಿಯಾಗಿ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ಗ್ರಾಮಪಂಚಾಯತ್ ಮಟ್ಟದಲ್ಲಿ ವಿಕಲಚೇತನರನ್ನು ಗುರುತಿಸಬೇಕು. ವಿಕಲಚೇತನರನ್ನು ಗುರುತಿಸಲು ಗ್ರಾಮಿಣ ಪುನರ್ವಸತಿ ಕಾರ್ಯಕರ್ತರು ಹಾಗೂ ತಾಲೂಕುಮಟ್ಟದಲ್ಲಿ ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ನಿಯೋಜಿಸಬೇಕು. ಈ ಕಾರ್ಯಕರ್ತರು ವಿಕಲಚೇತನರೆ ಅಗಿರಬೇಕು. ಅಂತಹವನ್ನು ಗೌರವ ಸಂಭಾವನೆ ನೀಡಿ ಡಿಸೆಂಬರ್ 30ರೊಳಗೆ ನೇಮಕ ಮಾಡಿಕೊಳ್ಳುವಂತೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲೆಯ ಗ್ರಾಮಪಂಚಾಯತ್‍ಗಳ ವತಿಯಿಂದ ಕಳೆದ ಎರಡು ವರ್ಷಗಳಲ್ಲಿ ಅನುಷ್ಠಾನವಾಗಿರುವ ಕಾರ್ಯಕ್ರಮಗಳ ಸವಿವರ ಮಾಹಿತಿಯನ್ನು ಹಾಗೂ ಎಲ್ಲ ಗ್ರಾಮಪಂಚಾಯತ್‍ಗಳ ಪಾಸ್‍ಪುಸ್ತಕದ ಪ್ರತಿ ಜಿಲ್ಲಾಧಿಕಾರಿ ಕಚೇರಿಗೆ ಡಿಸೆಂಬರ್-18ರೊಳಗೆ ಸಲ್ಲಿಕೆಯಾಗಬೇಕು. ಎಂದ ಜಿಲ್ಲಾಧಿಕಾರಿ ರಾಮು ಅವರು ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ವಿಕಲಚೇತನರು ಪ್ರವೇಶಿಸಲು ಅನುಕೂಲವಾಗುವಂತೆ ಅಗತ್ಯ ರ್ಯಾಂಪ್ ವ್ಯವಸ್ಥೆ ಕಲ್ಪಿಸಿರಬೇಕು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿಕಲಚೇತನರಿಗಾಗಿ ಶೌಚಾಲಯವಿರಬೇಕು ಎಂದು ತಿಳಿಸಿದರು.
ಅನುದಾನವನ್ನು ದುರ್ಬಳಕೆ ಮಡಿಕೊಂಡಿರುವ ಕೆಲವು ಸ್ವಯಂಸೇವಾ ಸಂಸ್ಥೆಗಳ ಕುರಿತು ಪ್ರಸ್ತಾಪಿಸಿದ ವಿಕಲಚೇತನರ ಮುಖಂಡರಿಗೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಅಂತಹ ಪ್ರಕರಣಗಳು ದಾಖಲೆ ಸಮೇತ ದೊರೆತರೆ ಅಗತ್ಯ ಕ್ರಮ ಜರುಗಿಸುವುದಾಗಿ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ದೊಡ್ಡಪ್ಪ ಮೂಲಿಮನಿ, ಜಿಲ್ಲಾ ಸರ್ಜನ್ ರಘುರಾಮ್, ಜಿಲ್ಲಾ ಉದ್ಯೋಗಾಧಿಕಾರಿ ಉಮಾ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾ.ಪಂ., ಗ್ರಾ. ಪಂ. ಉಪಚುನಾವಣೆ : ಅಧಿಸೂಚನೆ ಪ್ರಕಟ

ಚಾಮರಾಜನಗರ ನ. 27 - ಜಿಲ್ಲೆಯ ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಜಿಲ್ಲಾಧಿಕಾರಿ ಬಿ. ರಾಮು ಅವರು ಇಂದು ಅಧಿಸೂಚನೆ ಹÉೂರಡಿಸಿದ್ದಾರೆ.
ನಾಮಪತ್ರ ಸಲ್ಲಿಸಲು ನವೆಂಬರ್ 30 ಅಂತಿಮ ದಿನ. ಡಿಸೆಂಬರ್ 1ರಂದು ನಾಮಪತ್ರಗಳ ಪರೀಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಡಿಸೆಂಬರ್ 4 ಕಡೆಯ ದಿನ. ಮತದಾನ  (ಅವಶ್ಯವಿದ್ದರೆ) ಡಿಸೆಂಬರ್ 17ರಂದು ಬೆಳ್ಳಿಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮರು ಮತದಾನ (ಅವಶ್ಯವಿದ್ದರೆ) ಡಿಸೆಂಬರ್ 19ರಂದು ನಡೆಯಲಿದೆ. ಮತಗಳ ಎಣಿಕೆ ಕಾರ್ಯ ಡಿಸೆಂಬರ್ 20ರಂದು ಬೆಳಿಗ್ಗೆ 8 ಗಂಟೆಗೆ ತಾಲ್ಲೂಕು ಕೇಂದ್ರದಲ್ಲಿ ಆರಂಭವಾಗಲಿದೆ. ಅದೇ ದಿನ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಚಾಮರಾಜನಗರ ತಾಲ್ಲೂಕು ಪಂಚಾಯಿತಿಯ ಹರದನಹಳ್ಳಿ ಕ್ಷೇತ್ರದ (ಸಾಮಾನ್ಯ) ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.
ಚಾಮರಾಜನಗರ ತಾಲ್ಲೂಕಿನ ಬದನಗುಪ್ಪೆ ಗ್ರಾಮ ಪಂಚಾಯಿತಿ ಬೇಡರಪುರ  (ಸಾಮಾನ್ಯ), ಸಂತೇಮರಹಳ್ಳಿ  (ಅನುಸೂಚಿತ ಜಾತಿ - ಮಹಿಳೆ), ಅಮಚವಾಡಿ (ಹಿಂದುಳಿದ ಅ ವರ್ಗ), ಹೊನ್ನಹಳ್ಳಿ ಗ್ರಾಮ ಪಂಚಾಯಿತಿಯ ವಡ್ಗಲ್‍ಪುರ (ಹಿಂದುಳಿದ ಅ ವÀರ್ಗ) ಕ್ಷೇತ್ರಗಳ ತಲಾ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಕೊಳ್ಳೆಗಾಲ ತಾಲ್ಲೂಕಿನ ಗೋಪಿನಾಥಂ (ಸಾಮಾನ್ಯ), ಗುಂಡ್ಲುಪೇಟೆ ತಾಲ್ಲೂಕಿನ  ಬಲಚವಾಡಿ ಗ್ರಾಮ ಪಂಚಾಯಿತಿಯ ಗುರುವಿನಪುರ (ಸಾಮಾನ್ಯ), ತೆರಕಣಾಂಬಿ (ಅನುಸೂಚಿತ ಪಂಗಡ), ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಕುರುಬರಹುಂಡಿ (ಸಾಮಾನ್ಯ - ಮಹಿಳೆ) ಕ್ಷೇತ್ರಗಳ ತಲಾ ಒಂದೊಂದು ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿದ್ದು  ಒಟ್ಟು 8 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ವಿವಿಧ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ನ. 27 - ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಎಸಿಸಿಪಿಎಲ್ ಸಂಸ್ಥೆ ಮೂಲಕ ವಿವಿಧ ತರಬೇತಿಯನ್ನು ಅಲ್ಪಸಂಖ್ಯಾತ ಯುವಜನರಿಗೆ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. 18 ರಿಂದ 40ರ ವಯೋಮಿತಿಯೊಳಗಿರಬೇಕು. ಅರ್ಜಿಗಳನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಲ್ಟಿಪರ್ಪಸ್ ಹಾಲ್‍ನ 1ನೇ ಮಹಡಿಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಯಿಂದ ಪಡೆದು ಭರ್ತಿ ಮಾಡಿ ನವೆಂಬರ್ 30ರೊಳಗೆ ಸಲ್ಲಿಸಬೇಕು.
ವಿವರಗಳಿಗೆ ಸದರಿ ಕಚೇರಿಯನ್ನು ಸಂಪರ್ಕಿಸುವಂತೆ ಇಲಾಖೆಯ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
         
     

ಕಾನೂನಿನಡಿ ಎಲ್ಲರು ಸಮಾನರು : ನ್ಯಾಯಾಧೀಶರಾದ ಆರ್.ಪಿ ನಂದೀಶ್


ಚಾಮರಾಜನಗರ, ನ. 27 - ಸರ್ವರನ್ನು ಸರಿಸಮಾನವಾಗಿ ಕಾಣುವ ಸಮಾನತೆ ತತ್ವವನ್ನು ಪ್ರತಿಪಾದಿಸುವ  ಸಂವಿಧಾನ ನಮ್ಮದಾಗಿದ್ದು, ಬಡವ ಶ್ರೀಮಂತ ಎಂಬ ತಾರತಮ್ಯವಿಲ್ಲದೆÉ ಕಾನೂನಿನಡಿ ಎಲ್ಲರು ಸಮಾನರು ಎಂಬುದನ್ನು ದೇಶದ ಕಾನೂನು ವ್ಯವಸ್ಥೆಯು ಒಳಗೊಂಡಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಕಾರ್ಯದರ್ಶಿ ಆರ್.ಪಿ. ನಂದೀಶ್ ಅವರು ತಿಳಿಸಿದರು.
    ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಇಂದು  ನೆಹರು ಯುವಕೇಂದ್ರ, ಜಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿವಸ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ  ಮಾತನಾಡಿದರು.
ದೇಶದಲ್ಲಿ ಕಾನೂನು ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಂವಿಧಾನದಲ್ಲಿರುವ ಕಾನೂನುಗಳ ಬಗ್ಗೆ ಹೆಚ್ಚು ಓದಿಕೊಳ್ಳಬೇಕು, ಸಂವಿಧಾನದ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಿರಬೇಕು. ಜೊತೆಗೆ ದೇಶದ ಪ್ರತಿಯೊಬ್ಬ ಪ್ರಜೆಯು ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಬೇಕು,ನ್ಯಾಯಾಲಯಗಳಲ್ಲಿ  ಪ್ರಶ್ನಿಸುವ ಅವಕಾಶವನ್ನು ನಮ್ಮ ಸಂವಿಧಾನವು ನೀಡಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್  ಮಾತನಾಡಿ ಬಾಬ ಸಾಹೇಬರಿಗೆ ಬಾಲ್ಯದಲ್ಲಾದಂತಹ ಅಪಮಾನ ಹಾಗೂ ನೋವುಗಳಿಂದ ಮುಕ್ತಿಯನ್ನು ಪಡೆಯಬೇಕು ಎಂಬ ದೃಡನಿರ್ಧಾರ ಕೈಗೊಂಡರು. ಸಾಹುಮಹಾರಾಜರ ನೆರವಿನಿಂದ  ಹೊರ ದೇಶಗಳಲ್ಲಿ ವ್ಯಾಸಂಗ ಮಾಡಿ ಮಹಾನ್ ಪಾಂಡಿತ್ಯವನ್ನು ಪಡೆದು ವಿಶ್ವ ಶ್ರೇಷ್ಠ ಸಂವಿಧಾನವನ್ನು ರಚಿಸಿದರು.
ಅಂಬೇಡ್ಕರ್ ಅವರಂತೆಯೆ ಜ್ಞಾನವಂತರಾಗಿ ಉನ್ನತ ಸ್ಥಾನ ಗಳಿಸಿಕೊಂಡು ಸಾರ್ಥಕ ಜೀವನ ನಡೆಸುವ ಕಡೆ ಗಮನ ಹರಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರು ಸಾಮರಸ್ಯ, ಸಹಬಾಳ್ವೆಯ ತತ್ವಗಳಿಗೆ ಬದ್ದರಾಗಿ  ಸಮಾನತೆಯಿಂದ ಜೀವನ ನಡೆಸಿದರೆ ಅಂಬೇಡ್ಕರ್ ಕಂಡ ಕನಸ್ಸು ನನಸಾಗುತ್ತದೆ ಎಂದು ಇಂದು ಶೇಖರ್  ಹೇಳಿದರು.
ಕಾಲೇಜು ಪ್ರಾಂಶುಪಾಲ(ಪ್ರಭಾರ )ಡಿ.ಸಿ.ಲಿಂಗರಾಜು, ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಆರ್ ಅರುಣ್ ಕುಮಾರ್, ಬಾಲನ್ಯಾಯ ಮಂಡಳಿ ಸದಸ್ಯರಾದ ಟಿ.ಜೆ ಸುರೇಶ್, ನೆಹರು ಯುವ ಕೇಂದ್ರದ ಶಂಕರ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕರಾದ ರೂಪ.ಎನ್, ದಾಕ್ಷಾಯಿಣಿ, ಎನ್ ಪ್ರಭಾವತಿ, ಗೋವಿಂದರಾಜು, ರಾಜೇಶ್, ಪ್ರÀ್ರದೀಪ್, ಸೌಭಾಗ್ಯ, ಮಂಜಪ್ಪ ಉಮಾಮಹೇಶ್ವರಿ ಇನ್ನಿತರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.




 
 


 



















No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು