Thursday, 2 November 2017

ರಸ್ತೆ ಕಾಮಗಾರಿ ತ್ವರಿತ ಪೂರ್ಣಗೊಳಿಸಿ: ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಮೋಹನ ಕುಮಾರಿ ಸೂಚನೆ (01-11-2017)

  ಕನ್ನಡ ರಾಜ್ಯೋತ್ಸವದ ದಿನದ ಚಿತ್ರಗಳು.....VSS







  ರಸ್ತೆ ಕಾಮಗಾರಿ ತ್ವರಿತ ಪೂರ್ಣಗೊಳಿಸಿ: ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಮೋಹನ ಕುಮಾರಿ ಸೂಚನೆ 



ಚಾಮರಾಜನಗರ, ನ. 01- ಚಾಮರಾಜನಗರ ಪಟ್ಟಣ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೈಗೊಳ್ಳಲಾಗಿರುವ ಹೆದ್ದಾರಿ  ಹಾಗೂ ಇತರೆ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸÀುವಂತೆ ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನ ಕುಮಾರಿ (ಗೀತ ಮಹದೇವಪ್ರಸಾದ್) ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ರಸ್ತೆ ಅಭಿವೃದ್ಧಿ ಕಾಮಗಾರಿ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲಾಕೇಂದ್ರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುಂಠಿತವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಈ ರೀತಿ ರಸ್ತೆ ಕಾಮಗಾರಿ ನಡೆದರೆ ಹೇಗೆ? ಎಂದು ಪ್ರಶ್ನಿಸಿದ ಸಚಿವರು ನಾಳೆಯಿಂದಲೇ ಕಾಮಗಾರಿ ಚುರುಕುಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ರಸ್ತೆ ಅಭಿವೃದ್ಧಿಗೆ ತೊಡಕಾಗಿರುವ ದುರಸ್ತಿ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ನೀರು ಚರಂಡಿಯಂತಹ ಪೈಪ್‍ಲೈನ್‍ಗಳ ಜೋಡಣೆ ರಿಪೇರಿಯ ಸಣ್ಣಪುಟ್ಟ ಕೆಲಸಗಳನ್ನು ಕೂಡಲೇ ನಿರ್ವಹಿಸಬೇಕು. ಎಲ್ಲ ಅಗತ್ಯ ಕೆಲಸಗಳನ್ನು ಪೂರೈಸಿ ರಸ್ತೆ ಕಾಮಗಾರಿ ಸಾಗಲು ಅನುವು ಮಾಡಿಕೊಡಬೇಕೆಂದು ತಿಳಿಸಿದರು.

ಅಭಿವೃದ್ಧಿ ಕೆಲಸಗಳನ್ನು ಬದ್ದತೆಯಿಂದ ಮಾಡಬೇಕು. ಕಾಮಗಾರಿ ನಿರ್ವಹಣೆಯಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಸಬೇಕಿದೆ. ಇಲ್ಲ ಸಲ್ಲದ ಸಬೂಬು ಹೇಳಿಕೊಂಡು ಕಾಲ ವ್ಯರ್ಥಮಾಡಿದರೆ ಸಹಿಸಲಾಗುವುದಿಲ್ಲ. ಒಳಚರಂಡಿ, ವಿದ್ಯುತ್, ಕುಡಿಯವ ನೀರು ಸರಬರಾಜು ನಿರ್ವಹಣೆ ಜವಾಬ್ದರಿ ಹೊತ್ತಿರುವ ಅಧಿಕಾರಿಗಳು ಆಯಾ ಕೆಲಸವನ್ನು ವಿಳಂಬ ಮಾಡದೆ ಮುಗಿಸಿ ಎಂದು ಉಸ್ತುವಾರಿ ಸಚಿವರು ತಾಕೀತು ಮಾಡಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿ  ಕೈಗೊಳ್ಳುತ್ತಿರುವ ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯಬೇಕು. ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ದೊಡ್ಡ ಅರಸಿನ ಕೊಳ ಅಭಿವೃದ್ಧಿ, ಟ್‍ನ್ ಪೋಲಿಸ್ ಠಾಣೆ ಬಳಿಯ ಮಾರುಕಟ್ಟೆ  ಸಂಕೀರ್ಣ ಸೇರಿದಂತೆ ಎಲ್ಲ ಅಭಿವೃದ್ಧಿ ಕೆಲಸಗಳು ಕಾಲಮಿತಿಯೊಳಗೆ ನಡೆಯಬೇಕು ಎಂದರು.

ಜಿಲ್ಲಾಧಿಕಾರಿ ಬಿ.ರಾಮ ಅವರು ಮಾತನಾಡಿ ಜಿಲ್ಲಾಕೇಂದ್ರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇದ್ದ ಅಡಚಣೆಗಳು ಪರಿಹಾರವಾಗಿದೆ. ಹೀಗಾಗಿ ಇನ್ನೂ ಕಾಮಗಾರಿ ಬಿರುಸುಗೊಳಿಸಬೇಕು ಹೊರತು ವಿಳಂಬ ಮಾಡುವುದು ಸರಿಯಲ್ಲ. ಹೆಚ್ಚು ಕೆಲಸಗಾರರನ್ನು ನಿಯೋಜಿಸಿ ಹಗಲು ರಾತ್ರಿ ಕಾರ್ಯನಿರ್ವಹಿಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ರಸ್ತೆ ಅಭಿವೃದ್ಧಿ ಕಾಮಗಾರಿಯು ನಿರೀಕ್ಷಿತ ವೇಗದಲ್ಲಿ ಸಾಗದೆ ಇರುವ ಪರಿಣಾಮ ಜನರು ಪರಿತಪಿಸುವಂತಾಗಿದೆ. ಇನ್ನು ಮುಂದೆ ಕಾಮಗಾರಿ ಅತಿ ಶೀಘ್ರವಾಗಿ ಪ್ರಗತಿಯಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನರಗಸಭೆ ಅಧ್ಯಕ್ಷರಾದ ಶೋಭಾ ಪುಟ್ಟಸ್ವಾಮಿ. ಉಪಾಧ್ಯಕ್ಷರಾದ ಆರ್.ಎಂ.ರಾಜಪ್ಪ, ಕಾಡಾ ಅಧ್ಯಕ್ಷರಾದ ಎಚ್.ಎಸ್.ನಂಜಪ್ಪ ,ಕನಿಷ್ಠ ವೇತನ ಸಲಹÀ ಮಂಡಳಿ ಅಧ್ಯಕ್ಷರಾದ ಉಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರ ಕುಮಾರ್ ಮೀನಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಾಂತರಾಜು, ಲೋಕಪಯೋಗಿ ಇಲಾಖೆ ಇಂಜಿನಿಯರ್ ಗಣೇಶ್, ಚಾಮರಾಜನಗರ ಸಭೆ ಆಯುಕ್ತರಾದ ರಾಜಣ್ಣ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಚಿಕ್ಕಮಾದು ನಿಧನಕ್ಕೆ ಸಂಸದರಿಂದ ಸಂತಾಪ


ಚಾಮರಾಜನಗರ, ನ. 01 -ಹೆಚ್.ಡಿ.ಕೋಟೆ ಶಾಸಕರಾದ ಚಿಕ್ಕಮಾದು ಅವರ ನಿಧನಕ್ಕೆ ಲೋಕಸಭಾ ಸದ್ಯಸರಾದ ಆರ್.ಧ್ರುವನಾರಾಯಣ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಾದು ಅವರು ನನ್ನ ಆತ್ಮೀಯ ಸ್ನೇಹಿತರು. ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ. ಹೆಚ್.ಡಿ.ಕೊಟೆ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕಾಳಜಿ ಹೊಂದಿದ್ದರು. ಕ್ಷೇತ್ರದ ಅಭಿವೃದ್ಧಿಗೆ ನಾವಿಬ್ಬರು ಚರ್ಚಿಸಿ ಹಲವಾರು ಕೆಲಸಗಳನ್ನು ಮಾಡಿದ್ದೇವೆ.
ಅವರ ಅಕಾಲಿಕ ಸಾವು ತುಂಬಲಾರದ ನಷ್ಟ. ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ತುಂಬಾ ನೋವುಂಟು ಮಾಡಿದೆ ಎಂದು ಸಂಸದರು ತಿಳಿಸಿದ್ದಾರೆ.






























No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು