Wednesday, 15 November 2017

ರಥ ನಿರ್ಮಾಣ ಮಾಡಲು ಜಿಲ್ಲಾ ಆಡಳಿತ ಸಂಪೂರ್ಣ ವಿಫಲ: ವಾಟಾಳ್ ನಾಗರಾಜ್ ,ವಿವಿಧ ಇಲಾಖೆ ಕಚೇರಿಗಳಿಗೆ ಜಿಪಂ ಸಿಇಓ ಡಾ. ಕೆ. ಹರೀಶ್ ಕುಮಾರ್ ದಿಢೀರ್ ಭೇಟಿ : ಸಮಯಕ್ಕೆ ಸರಿಯಾಗಿ ಹಾಜರಾಗದ 15 ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಷೋಕಾಸ್ ನೋಟೀಸ್ (15-11-2017)

ರಥ ನಿರ್ಮಾಣ ಮಾಡಲು ಜಿಲ್ಲಾ ಆಡಳಿತ ಸಂಪೂರ್ಣ ವಿಫಲ: ವಾಟಾಳ್ ನಾಗರಾಜ್ 

ಚಾಮರಾಜನಗರ-ನ,15- ನಗರದ ಪ್ರಸಿದ್ದವಾದ ಶ್ರೀ ಚಾಮರಾಜೇಶ್ವರ ರಥಕ್ಕೆ ಬೆಂಕಿ ಬಿದ್ದು 1 ವರ್ಷ ಕಳೆದರೂ ಇನ್ನು ನೂತನ ರಥ ನಿರ್ಮಾಣ ಮಾಡಲು ಜಿಲ್ಲಾ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು.
ಇಂದು ಶ್ರೀ ಚಾಮರಾಜೇಶ್ವರ ದೇವಸ್ಥಾನ ಆವರಣದ ಮುಂಭಾಗ ಬೆಂಕಿ ಬಿದ್ದು ಭಿನ್ನವಾಗಿರುವ ಶ್ರೀ ಚಾಮರಾಜ್ವೇಶ್ವರ ರಥವನ್ನು ವೀಕ್ಷಣೆ ಮಾಡಿದ ನಂತರ ಅವರು ಮಾತನಾಡಿದರು. ಪ್ರತಿ ವರ್ಷ ಆಷಾಢ ಮಾಸದಲ್ಲಿ ನಡೆಯುವ ಶ್ರೀಚಾಮರಾಜೇಶ್ವರ ರಥ ರಾಜ ಬೀದಿಗಳಲ್ಲಿ ವೈಭವವಾಗಿ ಜರುಗುತ್ತದೆ. ಕಳೆದ ವರ್ಷ ನಡೆಯ ಬೇಕಾಗಿತ್ತು. ರಥೋತ್ಸವ ನಿಂತುಹೋಗಿದೆ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ ರವರು ಇನ್ನೂ 15 ದಿನಗಳ ಒಳಗಾಗಿ ನೂತನ ರಥನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಡದಿದ್ದರೆ ತೀವ್ರವಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಚಿಕ್ಕಂಗಡಿಬೀದಿ, ದೊಡ್ಡಂಗಡಿ ಬೀದಿ. ಜೋಡಿರಸ್ತೆ. ಡೀವಿಯೆಷನ್ ರಸ್ತೆ ಸೇರಿದಂತೆ ಇನ್ನೂ ಅನೇಕ ಕಡೆ ರಸ್ತೆ ಅಗಲೀಕರಣ ಮಾಡುವ ಕೆಲಸದಲ್ಲಿ ಕಟ್ಟದ ಮಾಲೀಕರಿಗೆ ತೊಂದರೆ ಕೊಡದೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆಸಿದ ನಂತರ ಕಟ್ಟಡ ಕೆಡುವುದಕ್ಕೆ ಹೋಗ ಬೇಕಾಗಿತ್ತು.  ಅದು ಯಾವುದು ಮಾಡದೇ ಅಧಿಕಾರಿಗಳು ಕಟ್ಟಡ ಮಾಲೀಕರಿಗೆ ಜೆಸಿಬಿ ಯಂತ್ರ ತಂದು ಅಂಗಡಿಗಳ ಮುಂದೆ ನಿಲ್ಲಿಸಿ ಮಾಲೀಕರಿಗೆ ದೌರ್ಜನ್ಯ ಎಸಗಿ ಹೆದರಿಸಿ ಭಯಪಡಿಸಿ ತೊಂದರೆ ನೀಡಿದ್ದಾರೆ. ಕಟ್ಟಡ ಮಾಲೀಕರಿಂದ ಹೈದಾರ್‍ಆಲಿ-ಟಿಪ್ಪುಸುಲ್ತಾನ್ ಕಾಲದ ದಾಖಲಾತಿ ಕೇಳುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ ಕೊಡಲೆ 15ದಿನಗಳ ಒಳಗಾಗಿ ನೊಂದವರಿಗೆ ಈಗಿನ ಮಾರುಕಟ್ಟೆದರದಲ್ಲಿ ಪರಿಹಾರ ಕೊಡಬೇಕೆಂದು ವಾಟಾಳ್ ಆಗ್ರಹಿಸಿದರು.

ಬೆಳಗಾವಿಯಲ್ಲಿರುವ ಸುವರ್ಣಸೌಧವನ್ನು ಸುಮಾರು 500ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು ಮಾಡಿರುವ ಉದ್ದೇಶ ಉತ್ತರಕರ್ನಾಟಕ-ಹೈದರಬಾದ್ ಭಾಗದ ಜನತೆಗೆ ಅನುಕೂಲ ಮಾಡುವ ಉದ್ದೇಶದಿಂದ ಸುವರ್ಣಸೌಧ ನಿರ್ಮಾಣವಾಗಿದೆ. ಈಸ್ಥಳದಲ್ಲಿ 1 ವರ್ಷದಲ್ಲಿ ಒಂದು ಸಲ ಅಧೀವೇಶನ ನಡೆಯುತ್ತದೆ ಇನ್ನುಳಿದ ದಿನಗಳಲ್ಲಿ ಅಧಿಕಾರಿಗಳಾಲಿ ಅಥವಾ ಜನಪ್ರತಿನಿದಿಗಳಾಗಲಿ ಇರುವುದಿಲ್ಲ ಎಂದು ವಾಟಾಳ್ ಹೇಳಿದರು.
ಬೆಳಗಾವಿಯಲ್ಲಿರುವ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಸಂಪೂರ್ಣ ವಿಫಲವಾಗಿದೆ. ಬೆರಳು ಎಣಿಕೆ (35) ಶಾಸಕರು ಮಾತ್ರ ಕಲಾಪದಲ್ಲಿ ಭಾಗವಹಿಸಿದ್ದಾರೆ ಇನ್ನುಳಿದ ಶಾಸಕರು ಎಲ್ಲಿ ಹೋದರು ಎಂದು ವಾಟಾಳ್ ಗುಡುಗಿದರು. ಶಾಸನ ಸಭೆ ದೇಗುಲವಿದ್ದ ಆಗೆ. ಸಭೆಗೆ ಬಾರದ ಶಾಸಕರಿಗೆ  ಪ್ರಜಾ ತಂತ್ರದ ವ್ಯವಸ್ಥೆಯೇ ಬಗ್ಗೆ ಅರಿವು ಇಲ್ಲ ಇವರು ಶಾಸನ ಸಭೆ ಅಂದರೆ ಕ್ಲಬ್ ಎಂದು  ಕೊಂಡಿದ್ದಾರೆ  ಗೈರು ಹಾಜರಾದ ಶಾಸಕರಿಂದ  ಪ್ರಜಾ ಪ್ರಭುತ್ವಕ್ಕೆ ಅನ್ಯಾಯ ವಾಗಿದೆ ಸಂವಿಧಾನಕ್ಕೆ ಅಪಮಾನ ಮಾಡಲಾಗಿದೆ ಇವರ ವಿರುದ್ದ ಇದೇ ನ,22 ರಂದು ಸುವರ್ಣಸೌಧದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಕರ್ತ ರವಿಬೆಳಗೆರೆ ಪರವಾಗಿ ವಕೀಲರು ಚರ್ಚೆ (ವಾದ) ಮಾಡಲು ಸದನದಲ್ಲಿ ಅವಕಾಶ ಕೇಳಿರುವ  ಮಾಹಿತಿ ತಿಳಿದಿದೆ. ಸದನ ಎಂದರೆ ಅದಕ್ಕೆ ತನ್ನದೇ ಆದ ಗಾಂಭೀರ್ಯವಿದೆ ಯಾವುದೇ ಕಾರಣಕ್ಕೂ ಸದನದಲ್ಲಿ ಚರ್ಚೆ ಮಾಡಲು ಅವಕಾಶÀ ಮಾಡಿ ಕೊಡಬಾರದು ಬೇಕಿದ್ದರೆ ಸಭಾಧ್ಯಕ್ಷರ ಕೊಠಡಿಯಲ್ಲಿ ಚರ್ಚೆಸಲಿ ಎಂದು ವಾಟಾಳ್ ಹೇಳಿದರು.




ವಿವಿಧ ಇಲಾಖೆ ಕಚೇರಿಗಳಿಗೆ ಜಿಪಂ ಸಿಇಓ ಡಾ. ಕೆ. ಹರೀಶ್ ಕುಮಾರ್ ದಿಢೀರ್ ಭೇಟಿ : ಸಮಯಕ್ಕೆ ಸರಿಯಾಗಿ ಹಾಜರಾಗದ 15 ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಷೋಕಾಸ್ ನೋಟೀಸ್


ಚಾಮರಾಜನಗರ, ನ. 15 :- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಜಿಲ್ಲಾಡಳಿತ ಭವನದಲ್ಲಿರುವ ವಿವಿಧ ಇಲಾಖೆ ಕಚೇರಿಗಳಿಗೆ ಇಂದು ದಿಢೀರ್ ಭೇಟಿ ನೀಡಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಹಾಜರಾತಿ ಪರಿಶೀಲಿಸಿದರು.

ಇಂದು ಬೆಳಿಗ್ಗೆ 10 ಗಂಟೆಗೆ ಕಚೇರಿ ಅವಧಿ ಪ್ರಾರಂಭವಾಗುತ್ತಿದ್ದಂತೆಯೇ ಜಿಲ್ಲಾಡಳಿತ ಭವನದ ಮಹಡಿಯಲ್ಲಿ ಇರುವ ಇಲಾಖೆ ಕಚೇರಿಗಳಿಗೆ ಯಾವ ಮುನ್ಸೂಚನೆಯನ್ನು ನೀಡದೇ ಅನಿರೀಕ್ಷಿತವಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಕುಮಾರ್ ಭೇಟಿಕೊಟ್ಟರು. ಕಚೇರಿ ಪ್ರವೇಶಿಸಿದ ಕೂಡಲೇ ಹಾಜರಾತಿ ಪುಸ್ತಕ ಪಡೆದು ಒಟ್ಟು ಕಚೇರಿಯ ಅಧಿಕಾರಿ ಸಿಬ್ಬಂದಿ ಹಾಗೂ ಹಾಜರಾತಿಯಲ್ಲಿ ದಾಖಲಾಗಿರುವವರ ಸಂಖ್ಯೆಯನ್ನು ಹರೀಶ್ ಕುಮಾರ್ ಅವರು ಪರಿಶೀಲಿಸಿದರು.

ಮೊದಲಿಗೆ ಕಾರ್ಮಿಕ ಇಲಾಖೆಗೆ ಭೇಟಿ ಕೊಟ್ಟ ವೇಳೆ ಅಲ್ಲಿನ ಜಿಲ್ಲಾ ಕಾರ್ಮಿಕ ಅಧಿಕಾರಿ ಇರದಿದ್ದುದು ಕಂಡುಬಂತು. ಉಳಿದ ಸಿಬ್ಬಂದಿಯಿಂದ ಕಚೇರಿ ಹಾಜರಾತಿ ವಿವರ ಪಡೆದರು. ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ, ಸಹಕಾರ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಖಾದಿ ಗ್ರಾಮೋದ್ಯೋಗ, ಕೈಮಗ್ಗ ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಆಹಾರ ನಾಗರಿಕ ಸರಬರಾಜು ನಿಗಮ ಸೇರಿದಂತೆ ಇತರೆ ಇಲಾಖೆ ಕಚೇರಿಗಳಿಗೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ವೇಳೆಗೆ ಹಾಜರಾಗದಿರುವುದು ಕಂಡುಬಂತು. ಪ್ರತಿ ಇಲಾಖೆಯಲ್ಲೂ ಹಾಜರಾತಿವಹಿಯನ್ನು ಕೂಲಂಕಶವಾಗಿ ಪರಿಶೀಲಿಸಿದರು.

 ಕಚೇರಿ ಅವಧಿಯಲ್ಲಿ ನಿಗದಿತ ವೇಳೆಗೆ ಹಾಜರಾಗದಿದ್ದ 15 ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. 

ನಾನು ನಿಮ್ಮ ಕಚೇರಿಗೆ ಭೇಟಿ ನೀಡಿದ ಸಮಯದಲ್ಲಿ ಹಾಜರಾತಿ ವಹಿ ಪರಿಶೀಲಿಸಿದಾಗ ಕೆಲ ಸಿಬ್ಬಂದಿ ಹಾಜರಾತಿ  ಹಾಕಿರುವುದು ಕಂಡುಬಂದಿದೆ. ನಿಗದಿತ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗುವುದು ಆದ್ಯ ಮುಖ್ಯ ಕೆಲಸವಾಗಿದೆ. ಆದರೆ ಕಚೇರಿಯ ನಿಗದಿತ ಸಮಯದಲ್ಲಿ ನೀವು ಮತ್ತು ನಿಮ್ಮ ಸಿಬ್ಬಂದಿ ಕಚೇರಿಗೆ ಹಾಜರಾಗಿಲ್ಲದಿರುವ ಬಗ್ಗೆ ನೋಟೀಸ್ ತಲುಪಿದ 24 ಗಂಟೆಯೊಳಗೆ ವಿವರಣೆ ನೀಡಬೇಕು. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದೆಂದು ನೋಟೀಸ್‍ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ನಿಗದಿತ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಸಿಬ್ಬಂದಿಗೂ ಈ ಬಗ್ಗೆ ತಿಳಿವಳಿಕೆ ನೀಡಬೇಕು. ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕೆಂದು ಡಾ. ಹರೀಶ್ ಕುಮಾರ್ ಅವರು ನೋಟಿಸಿನಲ್ಲಿ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.

ದೆಹಲಿಯ ಅಂತರ ರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಕೊಳ್ಳೇಗಾಲ ರೇಷ್ಮೆ ಸೀರೆಗಳ ಮಾರಾಟ ಮಳಿಗೆಗಳಿಗೆ ಅವಕಾಶ 


ಚಾಮರಾಜನಗರ, ನ. 15  ನವದೆಹಲಿಯಲ್ಲಿ ಆರಂಭವಾಗಿರುವ 37ನೇ ಅಂತರ ರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಕೊಳ್ಳೇಗಾಲ ರೇಷ್ಮೆ ಸೀರೆಗಳ ಎರಡು ಮಾರಾಟ ಮಳಿಗೆಗಳು ಅವಕಾಶ ಪಡೆದು ಜಿಲ್ಲೆಯ ಹಿರಿಮೆಯನ್ನು ಬಿಂಬಿಸುತ್ತಿದೆ.

ನವದೆಹಲಿಯ ಪ್ರಗತಿ ಮೈದಾನದಲ್ಲಿ ನವೆಂಬರ್ 14 ರಿಂದ 27ರವರೆಗೆ ಒಟ್ಟು 14 ದಿನಗಳ ಕಾಲ ನಡೆಯಲಿರುವ ಅಂತರರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ವಿಭಾಗ ಮತ್ತು ಕೈಮಗ್ಗ ಹಾಗೂ ಜವಳಿ ಇಲಾಖೆ ವತಿಯಿಂದ ಎರಡು ಮಳಿಗೆಗಳನ್ನು ತೆರೆಯಲಾಗಿದೆ.

ಜಿಲ್ಲೆಯ 8 ನೇಕಾರ ಸಹಕಾರ ಸಂಘಗಳ ಮೂಲಕ ತಯಾರಾದ ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟದ ಮಳಿಗೆಗಳನ್ನು ನವದೆಹಲಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ನವೆಂಬರ್ 14ರಂದು ಸಂಜೆ ಉದ್ಘಾಟಿಸಿದರು.

ಹೆಚ್ಚಿನ ನೇಕಾರ ಸಾಂದ್ರತೆ ಇರುವ ಕೊಳ್ಳೇಗಾಲ ಹಾಗೂ ಚಾಮರಾಜನಗರ ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುವ 8 ನೇಕಾರ ಸಹಕಾರ ಸಂಘಗಳನ್ನು ಒಳಗೊಂಡಂತೆ ಚಾಮರಾಜನಗರ ಹ್ಯಾಂಡ್ ಲೂಂ ಬ್ಲಾಕನ್ನು ವ್ಯಾಪಾರ ಮೇಳದಲ್ಲಿ ರೂಪಿಸಲಾಗಿದೆ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯ ಕೊಳ್ಳೇಗಾಲ ಸಿಲ್ಕ್ ಸ್ಯಾರೀಸ್ ಎಂದು ಪರಿಗಣಿಸಿ ಕೇಂದ್ರ ಸರ್ಕಾರದಿಂದ ಟ್ಯಾಗ್ ನೀಡಿ ಪರಿಗಣಿಸಲ್ಪಟ್ಟ ಸಿಲ್ಕ್ ಉತ್ಪನ್ನಗಳು ಮೈಸೂರು ರೇಷ್ಮೆ ಸೀರೆಗಳಿಗೆ ಸರಿಸಮಾನವಾಗಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಲಿ ಎಂದು ರಾಮಚಂದ್ರ ಶುಭ ಕೋರಿದರು.

ದೇಶವಿದೇಶಗಳಿಂದ ಆಗಮಿಸಿರುವ ಕೈಗಾರಿಕೋದ್ಯಮಿಗಳಿಗೆ ಅಂತರರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕಿಟ್ಟಿರುವ ಚಾಮರಾಜನಗರ ಜಿಲ್ಲೆಯ ಉತೃಷ್ಟ ಗುಣಮಟ್ಟದ ಸೀರೆಗಳು ಗಮನ ಸೆಳೆಯಲಿವೆ. ಇದರಿಂದ ನೇಕಾರರಿಗೆ ಉತ್ತೇಜನಕಾರಿಯಾಗಲಿದೆ ಎಂದು ರಾಮಚಂದ್ರ ಅವರು ಅಭಿಪ್ರಾಯಪಟ್ಟರು.

ಕೊಳ್ಳೇಗಾಲ ರೇಷ್ಮೆ ಸೀರೆಗಳು ಉತ್ತಮ ಗುಣಮಟ್ಟ ಹೊಂದಿದ್ದು ಮಾರಾಟಕ್ಕೆ ಅನುಕೂಲವಾಗುವಂತೆ ಖಾದಿ ಮತ್ತು ಗ್ರಾಮೋದ್ಯೋಗ ವಿಭಾಗ, ಕೈಮಗ್ಗ ಮತ್ತು ಜವಳಿ ಇಲಾಖೆ ನೇಕಾರರಿಗೆ ಅನುಕೂಲ ಕಲ್ಪಿಸಿಕೊಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ರೇಷ್ಮೆ ಉತ್ಪನ್ನಗಳನ್ನು ಪರಿಚಯಿಸಲು ತೆಗೆದುಕೊಂಡಿರುವ ಕ್ರಮ ಸ್ವಾಗತದಾಯಕವಾಗಿದೆ. ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಗ್ರಾಹಕರ ಅನುಕೂಲ ಮತ್ತು ಉತ್ಪನ್ನಗಳ ಮಾರುಕಟ್ಟೆಯ ಸೌಲಭ್ಯಕ್ಕಾಗಿ ಕೊಳ್ಳೇಗಾಲ ಸಿಲ್ಕ್ ಉತ್ಪನ್ನಗಳು (ಕೆಎಸ್‍ಎಸ್) ಎಂಬ ಹೆಸರಿನ ಅಧಿಕೃತ ಲೋಗೋ ಪರಿಚಯಿಸಲು ಸಹ ಹೆಮ್ಮೆಯಾಗಿದೆ. ಕರ್ನಾಟಕ ಪೆವಿಲಿಯನ್‍ನಲ್ಲಿ ಕೊಳ್ಳೇಗಾಲ ಸಿಲ್ಕ್ ಉತ್ಪನ್ನಗಳೊಂದಿಗೆ ಪ್ರದರ್ಶನದಲ್ಲಿ ಭಾಗವಹಿಸಿರುವ ಎಲ್ಲ ಉತ್ಪಾದಕರಿಗೆ ಶುಭವಾಗಲಿ ಎಂದು ರಾಮಚಂದ್ರ ಹಾರೈಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ನವೀನ್, ಖಾದಿ ಮತ್ತು ಗ್ರಾಮೋದ್ಯೋಗ ವಿಭಾಗದ ಉಪನಿರ್ದೇಶಕರಾದ ಕೆ.ಎ. ರಾಜೇಂದ್ರಪ್ರಸಾದ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಸೈಯದ್ ನಯೀಮ್ ಅಹಮದ್ ಉದ್ಘಾಟನಾ ಸಂದರ್ಭದಲ್ಲಿ ಹಾಜರಿದ್ದರು.

ನ. 20ರಿಂದ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ


ಚಾಮರಾಜನಗರ, ನ. 15 - ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ನವೆಂಬರ್ 20ರಿಂದ ಜಿಲ್ಲೆಯ ನಾಲ್ಕೂ ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ನಾಗರಿಕರಿಂದ ದೂರು ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.

ನವೆಂಬರ್ 20ರಂದು ಕೊಳ್ಳೇಗಾಲ, 21ರಂದು ಯಳಂದೂರು, 24ರಂದು ಚಾಮರಾಜನಗರ, 25ರಂದು ಗುಂಡ್ಲುಪೇಟೆಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ಕೊಡುವರು. ನಿಗದಿತ ದಿನಾಂಕದÀಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ತಾಲೂಕಿನ ಸರ್ಕಾರಿ ಅತಿಥಿ ಗೃಹದಲ್ಲಿ ಅಧಿಕಾರಿಗಳು ಹಾಜರಿರುತ್ತಾರೆ.

ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸಕ್ಕೆ ವಿಳಂಬ ಇತರೆ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ ನೌಕರರ ವಿರುದ್ಧ ನಾಗರಿಕರು ನಮೂನೆ 1 ಹಾಗೂ 2ರಲ್ಲಿ ಭರ್ತಿ ಮಾಡಿದ ಹಾಗೂ ಅಫಿಟವಿಟ್ ಮಾಡಿಸಿ ಅರ್ಜಿ ನೀಡಬಹುದು.

ಲೋಕಾಯುಕ್ತ ಅಧಿಕಾರಿಗಳ ಭೇಟಿ ಕಾರ್ಯಕ್ರಮವನ್ನು ನಾಗರಿಕರು ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ನ. 17ರಂದು ಜಿಪಂ ಕೆಡಿಪಿ ಸಭೆ


ಚಾಮರಾಜನಗರ, ನ. 15 - ಜಿಲ್ಲೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಅಧ್ಯಕ್ಷರಾದ ಎಂ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 17ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಿಗದಿಯಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಟಣೆಯಲ್ಲಿ ತಿಳಿಸಿದ್ದಾರೆ.

ವಾಹನ ಚಾಲಕರು ಮತ್ತು ವಾಹನ ಮಾಲಿಕರು ಸರ್ಕಾರದ ಜೊತೆ ಸಹಕರಿಸಬೇಕು :ಸಿ.ಟಿ.ಮೂರ್ತಿ  

ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಕೆ.ಎಸ್.ಆರ್.ಟಿ.ಸಿ ಸಂಸ್ಥೆಯಲ್ಲಿ  ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ 2017
ಚಾಮರಾಜನಗರ ನ.15- ವಾಯುಮಾಲಿನ್ಯ ದಿಂದ  ರಸ್ತೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರ  ಆರೋಗ್ಯಕ್ಕೆ ತೊಂದರೆಯಾಗಲಿದೆ.ಇದನ್ನು ತಡೆಯುಲು ವಾಹನ ಚಾಲಕರು ಮತ್ತು ವಾಹನ ಮಾಲಿಕರು ಸರ್ಕಾರದ ಜೊತೆ ಸಹಕರಿಸಬೇಕು ಎಂದು ಮೈಸೂರು ವಿಭಾಗ ಜಂಟಿ ಸಾರಿಗೆ ಅಯುಕ್ತ ಸಿ.ಟಿ.ಮೂರ್ತಿ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ ಡಿಪೊ ನಲ್ಲಿ ನಲ್ಲಿ ನಡೆದ ನವೆಂಬರ್ ತಿಂಗಳಿನ 1 ರಿಂದ 30ರವರೆಗೆ ನಡೆಯಲಿರುವ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಯನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಸಹಯೋಗದಲ್ಲಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ವಾಯುಮಾಲಿನ್ಯದ ವಿದುದ್ದ ಸಮರ ಸಾರಬೇಕಿದೆ ಇಂತಹ ಕಾರ್ಯಕ್ರಮಗಳು ಎಲ್ಲಾ ವಿಭಾಗಧ್ಯಂತ ನಡೆಯಬೇಕಿದೆ. ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ವಾಹನ ನಿರ್ವಣೆಯ ಬಗ್ಗೆ ಗಮನ ಅರಿಸಬೇಕು. ಇದರಿಂದ ನಿಮ್ಮ ವಾಹನವು ಶುದ್ದವಾಗಿರುತ್ತದೆ. ಡಿಸೇಲ್ ವಾಹನದ ಹೊಗೆ ಬಹಳ ಕೆಟ್ಟದು ಅದು ಮನುಷ್ಯನ ಆರೋಗ್ಯವನ್ನು ಕುಂಟಿತ ಗೊಳಿಸುತ್ತದೆ. ಪ್ರತಿಯೊಂದು ಮೊಟರು ವಾಹವು ವಾಯು ಮಾಲಿನ್ಯ ಬರದೆ ಇರುವುದ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು. ಎಂದು ತಿಳಿಸಿದರು.
ಡಿಸೇಲ್ ವಾಹನವು ಮೊದಲು ಪ್ರಾರಾಂಭದಲ್ಲಿಯೆ  ಹೆಚ್ಚು ಹೊಗೆ ಬರುತ್ತದೆ. ಇದನ್ನು ತಡೆಯುಲು ವಾಹನ ಚಾಲಕರು ಕ್ರಮ ವಹಿಸಬೇಕು. ಇದರಿಂದ ಉತ್ತಮ ಪರಿಸರವು ಅಳಾಗಲಿದೆ ವಾಹನ ತಪಾಸಣೆ ವೇಳೆಯಲ್ಲಿ  ವಾಯುಮಾಲಿನ್ಯದ ತಪಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಿ.ಟಿ.ಮೂರ್ತಿ ತಿಳಿಸಿದರು.
ಚಾಮರಾಜನಗರ ಆರ್.ಟಿ.ಒ, ಸಿ.ಟಿ.ಆರ್ ಪ್ರಾದೇಶಿಕ ಸಾರಿಗೆ ಆಯುಕ್ತ  ಎಂ.ಪ್ರಭುಸ್ವಾಮಿ ಮಾತನಾಡಿ ಇತ್ತಿಚಿನ ದಿನಗಳಲ್ಲಿ ವಾಕಿಂಗ್ ಮತ್ತು ಸೈಕಲ್ ಸವಾರಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಎಲ್ಲಾ ಮೊಟರ್ ವಾಹನಗಳ ಬಳಕೆಯಲ್ಲಿ ಹೆಚ್ಚು ತೋಡಗಿಸಿ ಕೊಂಡಿದ್ದಾರೆ. ಮೋಟರ್ ವಾಹನ ಬಳಕೆಯನ್ನು ಕಡಿಮೆಮಾಡಿ ಸೈಕಲ್ ಬಳಕೆ ಮಾಡುವುದರಿಂದ ಆರೋಗ್ಯವನ್ನು  ಹಾಗೂ ವಾಯು ಮಾಲಿನ್ಯವನ್ನು ತಡೆದು ಆರೋಗ್ಯವನ್ನು ಉತ್ತಮವಾಗಿ ಇಟ್ಟು ಕೊಳ್ಳಬಹುದು. ಎಂದು ತಿಳಿಸಿದರು.
 ಚಾಮರಾಜನಗರ ಕೆ.ಎಸ್.ಆರ್.ಟಿ.ಸಿ.  ಡಿಸಿ ಆರ್. ಅಶೋಕ್‍ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ಬಸ್ಸ್‍ಗಳ ನಿರ್ವಹಣೆಯಲ್ಲಿ ಉತ್ತಮವಾಗಿದೆ ಪ್ರತಿ ಬಸ್ಸ್‍ಗಳನ್ನು ಎಲ್ಲರೀತಿಯ ತಪಾಸಣೆಮಾಡಿ ಡಿಪೋ ದಿಂದ ಹೊರಗೆ ಬಿಡಲಾಗುತ್ತಿದೆ ನಮ್ಮ ಸಂಸ್ಥೆ ನೌಕರರು ಶ್ರಮವಹಿಸುತ್ತಿದ್ದಾರೆ. ಎಂದರು.
ಕಾರ್ಯಕ್ರಮದಲ್ಲಿ  ಮೈಸೂರು ವಿಭಾಗ ಜಂಟಿ ಸಾರಿಗೆ ಅಯುಕ್ತ ಸಿ.ಟಿ.ಮೂರ್ತಿರಿಂದ ಗಿಡವನ್ನು ನೆಡಿಸಲಾಯಿತು. ನಂತರ ವಾಯು ಮಾಲಿನ್ಯದ ಬಗ್ಗೆ ಒಂದು ಬಸ್ಸ್ ತಪಾಸಣೆ ಮಾಡಲಾಯಿತು. ಮೋಟಾರ್ ವಾಹನ ನಿರೀಕ್ಷಕ  ಅಶೋಕ್‍ಕಿಮಾರ್ .ಆರ್ ವಿಭಾಗೀಯ ತಾಂತ್ರಿಕ ಶಿಲ್ಪಿ ಮಲ್ಲೇಶ್, ಕಾರ್ಮಿಕ ಕಲ್ಯಾಣ ಅಧಿಕಾರಿ ರಶ್ಮಿ ಎಂ ಕಾರ್ಯಕ್ರಮದಲ್ಲಿ ಹಾಜರಿದ್ದರು.



                                                                                                   


                                                                                                                                                                                       


























































   




No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು