Wednesday, 29 November 2017

ತೋಟಗಾರಿಕೆ ಬೆಳೆಗೆ ಫಸಲ್ ಬಿಮಾ ಯೋಜನೆ,ನವೆಂಬರ್30ರಂದು ನಗರದಲ್ಲಿ ಮಾಹಿತಿ ಆಯುಕ್ತರಿಂದ ಪ್ರಕರಣಗಳ ವಿಚಾರಣೆ (28-11-2017)

   

ನ. 29ರಂದು ನಗರದಲ್ಲಿ ಭಾವೈಕ್ಯತಾ ಮಕ್ಕಳ ಮೇಳ

 ಚಾಮರಾಜನಗರ, ನ.28 - ಭಾರತ ಸೇವಾದಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನಾವು ಭಾರತೀಯರು ಎಂಬ ಒಂದು ದಿನದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳವನ್ನು ನವೆಂಬರ್ 29 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಜಿಲ್ಲಾಧಿಕಾರಿ ಭವನದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ತಾಲೂಕು ದಂಡಾಧಿಕಾರಿಗಳಾದ ಪುರಂದರ ಅವರು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸುವರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲಕ್ಷ್ಮೀಪತಿ ಅವರು 9.30 ಗಂಟೆಗೆ ಪ್ರಭಾತ್ ಪೇರಿ ನಡೆಸಿಕೊಡುವರು. ಬೆಳಿಗ್ಗೆ 11 ಗಂಟೆಗೆ ಭಾರತ ಸೇವಾದಳದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕಾರ್ಯಕ್ರಮ ಉದ್ಘಾಟಿಸುವರು. ಸೇವಾದಳದ ತಾಲ್ಲೂಕು ಅಧ್ಯಕ್ಷರಾದ ಸಿ. ಎಂ ನರಸಿಂಹಮೂರ್ತಿ ಅಧ್ಯಕ್ಷತೆವಹಿಸುವರು. ಹಿರಿಯ ಸಾಹಿತಿಗಳಾದ ಕೆ. ವೆಂಕಟರಾಜು ಮುಖ್ಯ ಭಾಷಣಕಾರರಾಗಿ ಆಗಮಿಸುವರು. ವನ್ಯಜೀವಿ ಸಲಹಾ ಮಂಡಳಿ ಸದಸ್ಯರಾದ ಮಲ್ಲೇಶಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಆರ್. ರಾಚಪ್ಪ, ರೋಟರಿ ಸಂಸ್ಥೆ ಅಧ್ಯಕ್ಷರಾದ ಸುಭಾಷ್ ಮುಖ್ಯ ಅತಿಥಿಗಳಾಗಿ ಪಾಲ್ಗಳ್ಳುವರು. ಮಧ್ಯಾಹ್ನ 3ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ದಿನಬಂಧು ಸಂಸ್ಧೆಯ ಗೌರವ ಕಾರ್ಯದರ್ಶಿಗಳಾದ ಪ್ರೊ. ಜಿ. ಎಸ್. ಜಯದೇವ್ ಸಮಾರೋಪ ಭಾಷಣ ಮಾಡುವರು. ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷರಾದ ವೆಂಕಟನಾಗಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಹದೇವಪ್ಪರವರು ಪ್ರಮಾಣ ಪತ್ರ ವಿತರಿಸುವರು. ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯರಾದ ಆರ್. ನಾಗರಾಜು, ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾದ ಮಹದೇವಪ್ಪರವರು ಪಾಲ್ಗೊಳ್ಳವರು. ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆ ಕುರಿತು ಪಳನಿಸ್ವಾಮಿ ಜಾಗೇರಿರವರು ಪ್ರಾತ್ಯಕ್ಷಿಕೆ ಮತ್ತು ವಿಶೇಷ ಉಪನ್ಯಾಸ ನೀಡುವರು. ಬಿಗ್‍ಬಾಸ್ ಖ್ಯಾತಿಯ ಸುಮಾ ರಾಜ್ ಕುಮಾರ್ ಅವರಿಂದ ಮಾತನಾಡುವ ಗೊಂಬೆ ಪ್ರದರ್ಶನ, ಖ್ಯಾತ ಜಾದೂ ಕಲಾವಿದರಾದ ಜಗ್ಗೂ ಜಾದೂಗಾರ್‍ರಿಂದ ಜಾದು ಪ್ರದರ್ಶನ, ಸಂಜೆ 4 ಗಂಟೆಗೆ ದೀನ ಬಂಧು ಮಕ್ಕಳಿಂದ ಹಕ್ಕಿ ಹಬ್ಬ ನಾಟಕ ಪ್ರದರ್ಶನ,. ಭಾರತ ಸೇವಾದಳದ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
 

ನ. 30ರಂದು ಚಾ.ನಗರಸಭೆ ಸಾಮಾನ್ಯ ಸಭೆ

ಚಾಮರಾಜನಗರ, ನ. 28 ಚಾಮರಾಜನಗರ ನಗರಸಭೆಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಶೋಭಾ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 30ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
       

ನ. 29ರಂದು ವಿದ್ಯುತ್ ವ್ಯತ್ಯಯ

ಚಾಮರಾಜನಗರ ನ. 28 ಚಾಮುಂಡೇಶ್ವÀರಿ ವಿದ್ಯುತ್ ಸರಬರಾಜು ನಿಗಮವು ನವೆಂಬರ್ 29ರಂದು ರಾಮಸಮುದ್ರ ವ್ಯಾಪ್ತಿಗೆ ಬರುವ ಹೌಸಿಂಗ್ ಬೋರ್ಡ್ ಕಾಲೋನಿ, ಕೋರ್ಟ್ ರಸ್ತೆ, ಕರಿನಂಜನಪುರ ಭಾಗಗಳಲ್ಲಿ ರಸ್ತೆ ಅಗಲೀಕರಣ ನಿಮಿತ್ತ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ನಿರ್ವಹಿಸಲಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹೌಸಿಂಗ್ ಬೋರ್ಡ್ ಕಾಲೋನಿ, ಕೋರ್ಟ್ ರಸ್ತೆ, ಕರಿನಂಜನಪುರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ  ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 5ರಂದು ವಿಕಲಚೇತನರಿಗೆ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆ : ನೋಂದಣಿಗೆ ಸೂಚನೆ

ಚಾಮರಾಜನಗರ ನ. 28 ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಡಿಸೆಂಬರ್ 5ರಂದು ಬೆಳಿಗ್ಗೆ 9 ಗಂಟೆಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಸ್ಪರ್ಧೆ ಮತ್ತು ಸಾಂಸ್ಕøತಿಕ ಸ್ಪರ್ಧೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವ 6 ವರ್ಷಕ್ಕಿಂತ ಮೇಲ್ಪಟ್ಟ ದೈಹಿಕ, ಶ್ರವಣ ದೋಷ ಹಾಗೂ ಬುದ್ಧಿಮಾಂದ್ಯ ವಿಕಲಚೇತನರು ಆಯಾ ತಾಲ್ಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ದೂರವಾಣಿ ಸಂಖ್ಯೆ ಸಂಪರ್ಕಿಸಿ ತಮ್ಮ ಹೆಸರÀುಗಳನ್ನು ಅಂಗವಿಕಲತೆ ಮತ್ತು ವಯಸ್ಸಿನೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ವಿಕಲಚೇತನರ ಗುರುತಿನ ಚೀಟಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08226-224688, ರಾಜೇಶ್, ಚಾಮರಾಜನಗರ – ಮೊಬೈಲ್ 9611436675, ಕವಿರತ್ನ, ಕೊಳ್ಳೆಗಾಲ - ಮೊಬೈಲ್ 9729598574, ಮಂಜುಳ, ಗುಂಡ್ಲುಪೇಟೆ – ಮೊಬೈಲ್ 8150978441, ಮಹದೇವಯ್ಯ, ಯಳಂದೂರು – ಮೊಬೈಲ್ 9740164149 ಇವರನ್ನು ಸಂಪರ್ಕಿಸುವಂತೆ ಕಚೇರಿ ಪ್ರಕಟಣೆ ತಿಳಿಸಿದೆ.

   

ಜವಾಹರ ನವೋದಯ ವಿದ್ಯಾಲಯ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ


ಚಾಮರಾಜನಗರ, ನ. 28 - ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯದಲ್ಲಿ 2018-19ನೇ ಸಾಲಿಗೆ 6ನೇ ತರಗತಿ ದಾಖಲಾತಿ ಸಂಬಂಧ 5ನೇ ತರಗತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಡಿಸೆಂಬರ್ 2ರವರೆಗೆ ಅವಧಿ ವಿಸ್ತರಿಸಲಾಗಿದೆ.
ಈ ಹಿಂದೆ ನವೆಂಬರ್ 25ರಂದು ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿತ್ತು. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಅವಧಿ ವಿಸ್ತರಿಸಲಾಗಿದೆ ಎಂದು ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಳ್ಳೇಗಾಲ : ಗ್ರಾಮೀಣ ಕ್ರೀಡೋತ್ಸವ

ಚಾಮರಾಜನಗರ ನ. 28 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕೊಳ್ಳೇಗಾಲ ತಾಲೂಕಿನ 3 ಹೋಬಳಿಗಳಲ್ಲಿ ಗ್ರಾಮೀಣ ಕ್ರೀಡೋತ್ಸವವನ್ನು ಡಿಸೆಂಬರ್ 14 ರಿಂದ 18ರವರೆಗೆ ಹಮ್ಮಿಕೊಂಡಿದೆ.
ಕ್ರೀಡೆಗಳು ಆಯಾ ದಿನಾಂಕಗಳಂದು ಬೆಳಿಗ್ಗೆ 9.30 ಗಂಟೆಗೆ ಪ್ರಾರಂಭಗೊಳ್ಳಲಿದೆ.
ಡಿಸೆಂಬರ್ 14ರಂದು ಹನೂರು ಹೋಬಳಿಯ ಮಂಗಲದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಮಹಿಳೆಯರಿಗೆ ಕಬಡ್ಡಿ, ಪುರುಷರಿಗೆ ಖೋಖೋ ಕ್ರೀಡೆ ನಡೆಯಲಿದೆ.
ಡಿಸೆಂಬರ್ 16ರಂದು ಲೊಕ್ಕನಹಳ್ಳಿ ಹೋಬಳಿಯ ಒಡೆಯರಪಾಳ್ಯದ ಶ್ರೀ ಮಹದೇಶ್ವರ ಪದವಿಪೂರ್ವ ಕಾಲೇಜು  ಮೈದಾನದಲ್ಲಿ ಮಹಿಳೆಯರಿಗೆ ಖೋಖೋ,  ಪುರುಷರಿಗೆ ವಾಲಿಬಾಲ್ ಪಂದ್ಯ ನಡೆಯಲಿದೆ.
ಡಿಸೆಂಬರ್ 18ರಂದು ರಾಮಾಪುರದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಮಹಿಳೆಯರಿಗೆ ಕಬಡ್ಡಿ, ಪುರುಷರಿಗೆ ವಾಲಿಬಾಲ್ ಪಂದ್ಯ ನಡೆಯಲಿದೆ.
ಆಸಕ್ತ ಶಾಲಾ ಕಾಲೇಜು, ಯುವಕ ಸಂಘಗಳು, ಸ್ತ್ರೀಶಕ್ತಿ ಸಂಘಗಳು, ಮಹಿಳಾ ಸಂಘಗಳು, ಪುರುಷ ಸ್ವಸಹಾಯ ಸಂಘಗಳು ಭಾಗವಹಿಸಬಹುದು.
ಸ್ಪರ್ಧಿಗಳು ಆಧಾರ್ ಕಾರ್ಡ್, ಡಿಎಲ್, ರೇಷನ್ ಕಾರ್ಡ್ ಅಥವಾ ಇತರೆ ದಾಖಲಾತಿಗಳನ್ನು ಕಡ್ಡಾಯವಾಗಿ ತರಬೇಕು. ಆಯಾ ಹೋಬಳಿ ಹೊರತುಪಡಿಸಿ ಬೇರಾವುದೇ ಹೋಬಳಿಯವರು ಭಾಗವಹಿಸುವಂತಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಘಟಕರ (ದೂ.ಸಂಖ್ಯೆ. 08226-224932, ಮೊಬೈಲ್ 9482718278, 988021027)ನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ. ಚಲುವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹಕಾರ ಸಂಘ ರದ್ದು : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಚಾಮರಾಜನಗರ ನ. 28 - ಚಾಮರಾಜನಗರ ತಾಲೂಕಿನ ನಾಗವಳ್ಳಿಯ ಸಿದ್ದಪ್ಪಾಜಿ ಮೇದರ ಕುಶಲ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘವು ತನ್ನ ಬೈಲಾ ರೀತ್ಯ ಉದ್ದೇಶಗಳನ್ನು ಈಡೇರಿಸದೆ ಕಾರ್ಯ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘವನ್ನು ರದ್ದುಗೊಳಿಸುವಂತೆ ಸಮಾಪನಾ ಅಧಿಕಾರಿಯನ್ನಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಧೀಕ್ಷಕರನ್ನು ನೇಮಿಸಲಾಗಿದೆ.
ಸಮಾಪನಾಧಿಕಾರಿಯವರು ಸಂಘದ ಸಮಾಪನಾ ಕಾರ್ಯವನ್ನು ಪೂರ್ಣಗೊಳಿಸಿ ಸಮಾಪನಾ ಕಾರ್ಯ ಪ್ರಗತಿ ಸಾಧಿಸಬೇಕಾದ ಹಿನ್ನೆಲೆಯಲ್ಲಿ ಸಂಘವನ್ನು ಮುನ್ನಡೆಸಿಕೊಂಡು ಹೋಗಲು ಸಂಘದ ಯಾವುದೇ ಸದಸ್ಯರು ಇದುವರೆವಿಗೂ ಆಸಕ್ತಿ ತೋರಿಸದ ಕಾರಣ ಸಂಘದ ನೋಂದಣಿ ರದ್ದತಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.
ಸಂಘದ ನೋಂದಣಿ ರದ್ದುಗೊಳಿಸುವ ಸಂಬಂಧ ಸಂಘದ ಸದಸ್ಯರುಗಳಾಗಲಿ, ಸಾರ್ವಜನಿಕರಿಂದಾಗಲಿ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ 15 ದಿನಗಳೊಳಗೆ ಸಮಾಪನಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಲು ತಿಳಿಸಿದೆ. ಸಂಘವನ್ನು ಪುನಶ್ಚೇತನಗೊಳಿಸಲು ಆಸಕ್ತಿ ಇದ್ದಲ್ಲಿ ಲಿಖಿತ ಮನವಿಯನ್ನು ಸಲ್ಲಿಸುವುದು.
ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು, ಅಹವಾಲುಗಳು ಸ್ವೀಕೃತವಾಗದಿದ್ದಲ್ಲಿ ಸಂಘದ ನೋಂದಣಿ ಸಂಖ್ಯೆ ರದ್ದತಿಗೆ ಯಾರಿಂದಲೂ ಯಾವುದೇ ಆಕ್ಷೇಪಣೆಗಳು ಇಲ್ಲವೆಂದು ಹಾಗೂ ಸಂಘದ ಪುನಶ್ಚೇತನಕ್ಕೆ ಯಾವ ಸದಸ್ಯರಿಂದಲೂ ಆಸಕ್ತಿ ಇಲ್ಲವೆಂದು ಪರಿಗಣಿಸಿ ಸಂಘದ ನೋಂದಣಿ ರದ್ದತಿಗೆ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಹನಿ ನೀರಾವರಿಗೆ ಕಡತ ಸಲ್ಲಿಸಲು ರೈತರಿಗೆ ಮನವಿ

ಚಾಮರಾಜನಗರ ನ. 28 - ಸೂಕ್ಷ್ಮ ಹನಿ ನೀರಾವರಿ ಯೋಜನೆಯಡಿ (ಡ್ರಿಪ್) ಪ್ರಸಕ್ತ ಸಾಲಿಗೆ  ಚಾಮರಾಜನಗರ ಜಿಲ್ಲೆಯಾದ್ಯಂತ ತೋಟಗಾರಿಕೆ ಬೆಳೆಗಳಲ್ಲಿ ಹನಿ ನೀರಾವರಿ ಅಳವಡಿಸಿಕೊಳ್ಳಲು ರೈತಬಾಂಧವರಿಗೆ ತೋಟಗಾರಿಕೆ ಇಲಾಖೆಯಿಂದ ಕಾರ್ಯಾದೇಶ ನೀಡಲಾಗಿದೆ.
ಕಾರ್ಯಾದೇಶ ಪಡೆದಿರುವ ರೈತರು ಸರ್ಕಾರದಿಂದ ಅನುಮೋದನೆಯಾಗಿರುವ ಕಂಪನಿ, ಅಧಿಕೃತ ಡೀಲರುಗಳಿಂದ ಐಎಸ್‍ಐ ಗುಣಮಟ್ಟದ ಪರಿಕರಗಳನ್ನು ಅಳವಡಿಸಿಕೊಂಡು ಕೂಡಲೇ ಸಹಾಯಧನಕ್ಕಾಗಿ ಅರ್ಜಿಯನ್ನು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಕೋರಿದೆ.
ಇಲ್ಲವಾದಲ್ಲಿ ನೀಡಿರುವ ಕಾರ್ಯಾದೇಶ ತನ್ನಿಂತಾನೇ ರದ್ದಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಕೇಂದ್ರೀಯ ನೆರವಿನಡಿ ಪ.ವರ್ಗದ ಆದಿವಾಸಿಗಳಿಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ, ನ. 28 ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ವರ್ಗದ ಆದಿವಾಸಿಗಳಿಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ಬೆಳೆಗಳು ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಗಳ ಸ್ಥಾಪನೆ ಮತ್ತು ಹಣ್ಣು ಮತ್ತು ತರಕಾರಿ ಸಾಗಾಣಿಕೆ ಮಾಡುವ ಸಣ್ಣ ವಾಹನಗಳ ಖರೀದಿಗೆ ಘಟಕ ವೆಚ್ಚದ ಶೇಕಡ 70 ರಷ್ಟು ಗರಿಷ್ಠ 1 ಲಕ್ಷದವರೆಗೆ ಸಹಾಯಧನ ಲಭಿಸಲಿದೆ.
ಕೃಷಿ ಅಭಿವೃದ್ಧಿಗಾಗಿ ಪವರ್ ಟಿಲ್ಲರ್, ಮಿನಿ ಟ್ರಾಕ್ಟರ್, ಹಾರ್ವೆಸ್ಟಿಂಗ್ ಮೆಷಿನ್, ಸಿಡ್ ಡಿಕೋರ್ಟಿಕೇಡರ್ಸ್ ಖರೀದಿ ಮತ್ತು ತೋಟಗಾರಿಕೆ ನರ್ಸರಿ ಸ್ಥಾಪನೆಗೆ ಫಟಕ ವೆಚ್ಚದ ಶೇಕಡ 70 ರಷ್ಟು ಗರಿಷ್ಠ 1 ಲಕ್ಷ ರೂ. ಸಹಾಯ ಧನ ನೀಡಲಾಗುತ್ತದೆ. ಕೋಳಿ ಸಾಕಾಣಿಕೆಗಾಗಿ ಸುಸಜ್ಜಿತ ಕೋಳೆ ಮಾರಾಟ ಮಳಿಗೆ ಸ್ಥಾಪನೆಗೆ ಘಟಕ ವೆಚ್ಚದ ಶೇ. 70ರಷ್ಟು ಗರಿಷ್ಟ 1 ಲಕ್ಷ ರೂ. ಸಹಾಯಧನ ಹಾಗೂ ಕೋಳಿ ಉತ್ಪಾದನ ಘಟಕಗಳ ಅಭಿವೃದ್ಧಿ ಕಾರ್ಯ (ಫೌಲ್ಟ್ರಿ ಫಾರಂ) ಹಾಗೂ ಫಟಕ ವೆಚ್ಚದ ಶೇಕಡ 70ರಷ್ಟು ಗರಿಷ್ಠ 5 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತದೆ. ಸುಸಜ್ಜಿತ ಮೀನು ಮಾರಾಟ ಮಳಿಗೆ ಸ್ಥಾಪನೆ ಹಾಗೂ ಮೀನು ಸಾಕಾಣಿಕೆಗಾಗಿ ಶೀತಲ ಪೆಟ್ಟಿಗೆ ಅಳವಡಿಸಿಕೊಂಡಿರುವ ದ್ವಿಚಕ್ರ ವಾಹನ ಖರೀದಿಗೆ ಫಟಕ ವೆಚ್ಚದ ಶೇಕಡ 70ರಷ್ಟು ಗರಿಷ್ಠ 1 ಲಕ್ಷ ರೂ. ಸಹಾಯ ಧನ ಲಭಿಸಲಿದೆ. ಶೀತಲ ಘಟಕ ಸ್ಥಾಪನೆ ಹಾಗೂ ಸಣ್ಣ ಹಿಡುವಳಿದಾರಿಗೆ ಹಣ್ಣು ಮತ್ತು ತರಕಾರಿ ಸಂರಕ್ಷಿಡಲು ಶೀತಲ ಪೆಟ್ಟಗೆ ಖರೀದಿಗಾಗಿ ಫಟಕ ವೆಚ್ಚದ ಶೇಕಡ 70ರಷ್ಟು ಗರಿಷ್ಟ 60 ಸಾವಿರ ರೂ.ವರೆಗೆ ಸಹಾಯ ಧನ ನೀಡಲಾಗುವುದು.
     ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದ ಆವರಣದ ಮಲ್ಟಿ ಪರ್ಪಸ್ ಹಾಲ್‍ನಲ್ಲಿರುವ ನಿಗಮದ ಕಚೇರಿಯಲ್ಲಿ ಅಥವಾ ಆಯಾ ತಾಲೂಕು ಅಭಿವೃದ್ಧಿ ಅಧಿಕಾರಿಗಳನ್ನು ಭೇಟಿ ಮಾಡಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 16ರೊಳಗೆ ಸಲ್ಲಿಸಬೆÉೀಕು. ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ (ದೂ.ಸಂಖ್ಯೆ 08226-223856) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ತೋಟಗಾರಿಕೆ ಬೆಳೆಗೆ ಫಸಲ್ ಬಿಮಾ ಯೋಜನೆ

ಚಾಮರಾಜನಗರ ನ. 28 :- ತೋಟಗಾರಿಕೆ ಇಲಾಖೆಯು 2017-18ನೇ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಕೆಲ ಹೋಬಳಿಗಳಲ್ಲಿ ಈರುಳ್ಳಿ ಹಾಗೂ ಟೊಮೊಟೋ ಬೆಳೆಯನ್ನು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಒಳಪಡಿಸಿದೆ.
ಚಾಮರಾಜನಗರ ತಾಲೂಕಿನ ಹರದನಹಳ್ಳಿಯಲ್ಲಿ ನೀರಾವರಿ ಆಶ್ರಿತ ಟೊಮೊಟೋ ಹಾಗೂ ಹರವೆ ಹೋಬಳಿಯಲ್ಲಿ ನೀರಾವರಿ ಆಶ್ರಿತ ಈರುಳ್ಳಿ ಬೆಳೆ ವಿಮೆಗೆ ಸೇರಿದೆ.
ಗುಂಡ್ಲುಪೇಟೆ ತಾಲೂಕಿನ ಕಸಬಾ, ತೆರಕಣಾಂಬಿ, ಬೇಗೂರು, ಹಂಗಳ ಹೋಬಳಿ ವ್ಯಾಪ್ತಿಯಲ್ಲಿ  ನೀರಾರಿ ಆಶ್ರಿತ ಈರುಳ್ಳಿ ಮತ್ತು ಟೊಮೊಟೋ ಬೆಳೆ ವಿಮೆಗೆ ಸೇರಿವೆ.
ನಿಗದಿತ ಅರ್ಜಿ ನಮೂನೆ ಬ್ಯಾಂಕಿನಿಂದ ಪಡೆದು ಆರ್‍ಟಿಸಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಸ್ವಯಂ ಘೋಷಿತ ಬೆಳೆ ವಿವರದೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
ಟೊಮೊಟೋ ಬೆಳೆಗೆ ಪ್ರತಿ ಎಕರೆಗೆ 2328 ರೂ. ಹಾಗೂ ಈರುಳ್ಳಿಗೆ 1498 ರೂ. ವಿಮಾ ಕಂತು ನಿಗದಿಯಾಗಿದೆ. ವಿಮೆ ಪಾವತಿಗೆ ಹಿಂಗಾರು ಹಂಗಾಮಿಗೆ ನವೆಂಬರ್ 30 ಕಡೆಯ ದಿನವಾಗಿದೆ.
ಯೋಜನೆಯು 2017ರ ಅಕ್ಟೋಬರ್ 1ರಿಂದ 31ರವರೆಗೆ ನಾಟಿ ಮಾಡಿದ ರೈತರಿಗೆ ಮಾತ್ರ ಅನ್ವಯವಾಗಲಿದೆ.
ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೆಂಬರ್30ರಂದು ನಗರದಲ್ಲಿ ಮಾಹಿತಿ ಆಯುಕ್ತರಿಂದ ಪ್ರಕರಣಗಳ ವಿಚಾರಣೆ


ಚಾಮರಾಜನಗರ ನ. 28 :- ರಾಜ್ಯ ಮಾಹಿತಿ ಆಯುಕ್ತರಾದ ಕೆ.ಎಂ.ಚಂದ್ರೇಗೌಡ ಅವರು ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಹಕ್ಕು ಪ್ರಕರಣಗಳ ವಿಚಾರಣೆಯನ್ನು ನವೆಂಬರ್30ರಂದು ಬೆಳಿಗ್ಗೆ11ಗಂಟೆಗೆ ನಗರದ ಜಿಲ್ಲಾ ಆಡಳಿತ ಭವನದಲ್ಲಿರುವ ಕೆ.ಡಿ.ಪಿ.ಸಭಾಂಗಣದಲ್ಲಿ ನಡೆಸುವರು.
ಒಟ್ಟು 65 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಆಯುಕ್ತರು ವಿಚಾರಣೆ ನಡೆಸುವರೆಂದು ಜಿಲ್ಲಾ ಆಡಳಿತ ಪ್ರಕಟಣೆ ತಿಳಿಸಿದೆ.

ನ. 28ರಂದು ಪ.ಜಾ. ನಿರುದ್ಯೋಗಿಗಳಿಗೆ ನಗರದಲ್ಲಿ ವಾಹನ ಚಾಲನಾ ತರಬೇತಿಗೆ ಸಂದರ್ಶನ

ಚಾಮರಾಜನಗರ, ನ. 23 - ಸಮಾಜ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿಗೆ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ ಯುವತಿಯರಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡುವ ಸಂಬಂಧ ನವೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸಂದರ್ಶನ ಏರ್ಪಡಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







                                                                                                                                                                                       

















No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು