2014 ರಲ್ಲಿ ನಾವು ನಡೆಸಿದ ಸಮೀಕ್ಷೆ ಹಾಗೂ ಇಲಾಖೆ ಕೊಟ್ಟ ಮಾಹಿತಿ,
ಕೇಳಿದ್ರೆ ಬೆಚ್ಚಿ ಬೀಳ್ತೀರಾ.. ನಂಬಿ ಬಿಟ್ರೆ ಬಿಡಿ, ಇದಂತೂ ಸತ್ಯ.!
ಜಿಲ್ಲೆಯ ವಿವಿದೆಡೆ ವಾರಕ್ಕೆ ನಿರೋಧ್ ಎಷ್ಟೆಷ್ಟು ಬೇಡಿಕೆ ಇದೆ. ಅದು ಎಲ್ಲೆಲ್ಲಿ ಬಳಕೆಯಾಗುತ್ತಿದೆ ಎಂಬ 2014 ಅಂಶ ಕೇಳಿದರೆ ಆಶ್ಚರ್ಯದ ಜೊತೆಗೆ ಅನುಮಾನವು ಮೂಡುತ್ತದೆ ಎಂದರೆ ತಪ್ಪಾಗಲಾರದು. ಅದಕ್ಕಾಗಿ ಚಾಮರಾಜನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಬಳಕೆಯಾಗುತ್ತಿವುದರ 2014 ಅಂಕಿ ಅಂಶ ಇಂತಿದೆ.ಚಾಮರಾಜನಗರ: ಸರ್ಕಾರಿ ಆಸ್ಪತ್ರೆಯಲ್ಲಿ 198, ನಾಯಕರ ಬೀದಿಯಲ್ಲಿ 61, ಉಪ್ಪಾರಬೀದಿಯಲ್ಲಿ 63, ರೈಲ್ವೇ ಬಡಾವಣೆಯಲ್ಲಿ 141, ಸಂತೇಮರಳ್ಳಿ ವೃತ್ತದಲ್ಲಿ 77, ಪೌರ ಕಾರ್ಮಿಕರ ಕಾಲೋನಿ 54, ಪಾರ್ಕ್ ಮತ್ತು ಲಾಡ್ಜ್‍ಗಳಲ್ಲಿ 163, ಬಣಜಿಗರ ಬೀದಿಯಲ್ಲಿ 109, ಮುಸಲ್ಮಾನರ ಬೀದಿಯಲ್ಲಿ 66, ವರದರಾಜಪುರಂನಲ್ಲಿ 28, ಸೋಮವಾರಪೇಟೆಯಲ್ಲಿ 100, ಗಾಳೀಪುರ 129, ಮಾದಿಗರ ಬೀದಿಯಲ್ಲಿ 95, ಕರಿನಂಜನಪುರದಲ್ಲಿ 99, ರಾಮಸಮುದ್ರದಲ್ಲಿ 128, ಹೌಸಿಂಗ್ ಬೋರ್ಡ್‍ನಲ್ಲಿ 87, ಜಿಲ್ಲಾಧಿಕಾರಿ ಕಚೇರಿಯಲ್ಲಿ 56, ಬಸವೇಶ್ವರ ಚಿತ್ರಮಂದಿರದಲ್ಲಿ 28, ಬ್ರಮರಾಂಬ ಬೀದಿಯಲ್ಲಿ 47, ರಾಘವೇಂದ್ರ ಚಿತ್ರಮಂದಿರಲ್ಲಿ 53, ಚನ್ನಿಪುರದ ಮೋಳೆಯಲ್ಲಿ 65, ಜಾಲಹಳ್ಳಿಹುಂಡಿ 41, ಕುರುಬರ ಬೀದಿ 56, ಹೊಸ ಬಸ್ ನಿಲ್ದಾಣದಲ್ಲಿ 191 ರಷ್ಟು ವಾರಕ್ಕೆ ಬೇಡಿಕೆಯಿದೆ ಎನ್ನಲಾಗಿದೆ.
ಕೊಳ್ಳೇಗಾಲ: ಬಸ್ ನಿಲ್ದಾಣ,ವಿಜಯಲಕ್ಷ್ಮಿ ಲಾಡ್ಜ್ 750, ಹಳೆ ಬಸ್ ನಿಲ್ದಾಣದಲ್ಲಿ 127, ಆಸ್ಪತ್ರೆ 202, ದೇವಾಂಗ ಪೇಟೆ 103, ನಂಜಯ್ಯನಕಟ್ಟೆ 198, ಕಾವೇರಿ ರಸ್ತೆ 196, ನಾಯಕ ಬೀದಿ 108, ಮಾರುಕಟ್ಟೆ 231, ಕೊಂಗಲಕೇರಿ 112 ರಷ್ಟು ವಾರಕ್ಕೆ ಬೇಡಿಕೆಯಿದೆ ಎನ್ನಲಾಗಿದೆ.
ಯಳಂದೂರು: ಬಸ್ ನಿಲ್ದಾಣದಲ್ಲಿ 271, ಸರ್ಕಾರಿ ಆಸ್ಪತ್ರೆ 209, ಸಂತೆಮಾಳ 171, ಅಂಬಳೆ ಪಾಲ 342, ರಷ್ಟು ವಾರಕ್ಕೆ ಬೇಡಿಕೆಯಿದೆ ಎನ್ನಲಾಗಿದೆ.
ಗುಂಡ್ಲುಪೇಟೆ: ಅರಳಿಕಟ್ಟೆಬೀದಿ 40, ಹಳೆ ಬಸ್ ನಿಲ್ದಾಣ 210, ಕೋಡಿಹಳ್ಳಿ ವೃತ್ತ 53, ಕಲ್ಯಾಣಿ ಕೊಳ 66, ಅಂಬೇಡ್ಕರ್ ಬೀದಿ 60, ಹೊಸೂರು ಕಾಲೋನಿ 181, ಶಿವಮಲ್ಲಪ್ಪ ಕ್ವಾರ್ಟರ್ಸ್ 59, ಮಾದಹಳ್ಳಿ ವ್ರತ್ತ 25, ಚೆಕ್‍ಪೋಸ್ಟ್ 64, ಮೈಸೂರು ರಸ್ತೆ 83, ಸರ್ಕಾರಿ ಆಸ್ಪತ್ರೆ 96, ನಾಗರತ್ನಮ್ಮ ಬಡಾವಣೆ 41, ಸರ್ಕಾರಿ ಬಸ್ ನಿಲ್ದಾಣ 68, ಕ್ಯಾಲಿಕಟ್ ರಸ್ತೆ 65 ರಷ್ಟು ವಾರಕ್ಕೆ ಬೇಡಿಕೆಯಿದೆ ಎನ್ನಲಾಗಿದೆ.
2014 ರಲ್ಲಿ ನಿರೋಧ್‍ಗಳನ್ನು ಸಮಪರ್ಕವಾಗಿ ಪೂರೈಕೆ ಮಾಡಲಾಗುತ್ತಿದೆ. ಎಲ್ಲ ಕಡೆ ಸರಬರಾಜಾಗುತ್ತದೆ ಎಂದಿರುವ ಸಂಬಂದಿಸಿದ ಇಲಾಖೆಗಳು ಎಲ್ಲೆಲ್ಲಿ ನಿರೋಧ್ ಬಾಕ್ಸ್ ಹಾಕಿದ್ದಾರೆ ಎಂಬುದನ್ನು ಅವರೇ ತೋರಿಸಲೇ ಇಲ್ಲ.
************************************************************************
ಡಿ. 4ರಂದು ವಿಶ್ವ ಏಡ್ಸ್ ದಿನಾಚರಣೆ
ಚಾಮರಾಜನಗರ, ಡಿ. 01 :- ನೆಹರು ಯುವ ಕೇಂದ್ರ, ಸಿದ್ದಾರ್ಥ ಸ್ವತಂತ್ರ ಪದವಿಪೂರ್ವ ಕಾಲೇಜು ಹಾಗೂ ಬಸವಪುರದ ಗೌತಮಬುದ್ಧ ಸಾಂಸ್ಕøತಿಕ ಕ್ರೀಡಾ ಮತ್ತು ಕಲಾ ಯುವಜನ ಸಂಘ ಇವರ ಸಹಯೋಗದೊಂದಿಗೆ ಡಿಸೆಂಬರ್ 4ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಸಿದ್ದಾರ್ಥ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಎಂ. ಮಹದೇವು ಕಾರ್ಯಕ್ರಮ ಉದ್ಘಾಟಿಸುವರು. ಸಿದ್ದಾರ್ಥ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಸಿ. ರಂಗಸ್ವಾಮಿ ಅಧ್ಯಕ್ಷತೆ ವಹಿಸುವರು.
ಡಿ. 6ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮ
ಚಾಮರಾಜನಗರ, ಡಿ. 01- ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 61ನೇ ಪರಿನಿರ್ವಾಣ ದಿನ ಕಾರ್ಯಕ್ರಮವನ್ನು ಡಿಸೆಂಬರ್ 6ರಂದು ಬೆಳಿಗ್ಗೆ 10 ಗಂಟೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ನಂತರ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಜಿಲ್ಲೆಯ ವಿವಿಧ ಸಂಘಸಂಸ್ಥೆಯ ಪದಾಧಿಕಾರಿಗಳು, ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಡಿ. 2ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ ಡಿ. 01 - ಚಾಮುಂಡೇಶ್ವÀರಿ ವಿದ್ಯುತ್ ಸರಬರಾಜು ನಿಗಮವು ಡಿಸೆಂಬರ್ 2ರಂದು ರಾಮಸಮುದ್ರ ವ್ಯಾಪ್ತಿಗೆ ಬರುವ ಹೌಸಿಂಗ್ ಬೋರ್ಡ್ ಕಾಲೋನಿ, ಕೋರ್ಟ್ ರಸ್ತೆ ಹಾಗೂ ಕರಿನಂಜನಪುರ ಭಾಗಗಳಲ್ಲಿ ರಸ್ತೆ ಅಗಲೀಕರಣ ಮಾಡಲು ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿಯನ್ನು ನಿರ್ವಹಿಸಲಿದೆ.ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆ ತಿಳಿಸಿದೆÉ.
ವಾರ್ಷಿಕ ಪ್ರಶಸ್ತಿಗಾಗಿ ಪತ್ರಕರ್ತರಿಂದ ಲೇಖನ-ವರದಿ ಆಹ್ವಾನ
ಚಾಮರಾಜನಗರ, ಡಿ. 01 :- ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾ ಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಹಾಗೂ ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆಯು ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತೀ ವರ್ಷ ತಲಾ 10 ಸಾವಿರ ರೂ.ಗಳ ನಗದು ಪ್ರಶಸ್ತಿ ನೀಡಲು ದತ್ತಿ ಸ್ಥಾಪಿಸಿದ್ದು 2017ರ ಸಾಲಿಗಾಗಿ ಲೇಖನಗಳನ್ನು ಆಹ್ವಾನಿಸಿವೆ.2017ರ ಜನವರಿಯಿಂದ ಅಕ್ಟೋಬರ್ 17ರವರೆಗೆ ಪ್ರಕಟವಾಗಿರುವ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗೆ ಅಭಿಮಾನಿ ಪ್ರಶಸ್ತಿ 2017 ಹಾಗೂ ಮಾನವೀಯ ಸಮಸ್ಯೆ ಪ್ರತಿಬಿಂಬಿಸುವ ಲೇಖನ ವರದಿಗೆ ಮೈಸೂರು ದಿಗಂತ ಪ್ರಶಸ್ತಿ 2017 ಎಂದು ದಾಖಲಿಸಿ ಪ್ರತ್ಯೇಕವಾಗಿ ಕಳುಹಿಸಬೇಕು.
ಕನ್ನಡ ದೈನಿಕ, ವಾರಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಬರೆದಿರುವ ವರದಿ ಲೇಖನಗಳು ಮಾತ್ರ ಪ್ರಶಸ್ತಿಗೆ ಅರ್ಹವಾಗಿರುತ್ತವೆ. ಲೇಖನ ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರ ಪಡೆದು ಕಳುಹಿಸಬೇಕು.
ಲೇಖನ ವರದಿಗಳನ್ನು ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಭಿಮಾನಿ ಪ್ರಶಸ್ತಿ 2017 ಹಾಗೂ ಮೈಸೂರು ದಿಗಂತ ಪ್ರಶಸ್ತಿ 2017, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು - 560001 ಇವರಿಗೆ ಡಿಸೆಂಬರ್ 26ರೊಳಗೆ ಕಳುಹಿಸುವಂತೆ ಅಕಾಡೆಮಿ ಅಧ್ಯಕ್ಷರಾದ ಎಂ. ಸಿದ್ದರಾಜು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕೊಳ್ಳೇಗಾಲ : ಸ್ವಚ್ಚನಗರ ಪ್ರಶಸ್ತಿಗೆ ಸಹಕರಿಸಲು ಮನವಿ
ಚಾಮರಾಜನಗರ, ಡಿ. 01:- ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಕಳೆದ 3 ವರ್ಷಗಳಿಂದ ದೇಶದ ನಗರ, ಪಟ್ಟಣಗಳಿಗೆ (ಸ್ವಚ್ಚ ಸರ್ವೇಕ್ಷಣ) ಸ್ವಚ್ಚ ನಗರ ಪ್ರಶಸ್ತಿ ನೀಡುತ್ತಿದೆ.ಮೊದಲೆರಡು ವರ್ಷಗಳಲ್ಲಿ ಮೈಸೂರು ಸ್ವಚ್ಚನಗರ ಪ್ರಶಸ್ತಿ ಪಡೆದಿತ್ತು. ಈ ಬಾರಿಯ ಸಮೀಕ್ಷೆಯನ್ನು ಜನವರಿ 2018ರಿಂದ ಕೈಗೊಳ್ಳಲಾಗುತ್ತಿದ್ದು, ಸಮೀಕ್ಷೆಯಲ್ಲಿ ದೇಶದ ಎಲ್ಲಾ ನಗರ, ಪಟ್ಟಣಗಳನ್ನು ಸ್ವಚ್ಚ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕೊಳ್ಳೇಗಾಲ ನಗರಸಭೆಯು ನಗರವನ್ನು ಉತ್ತಮವಾಗಿರಿಸುವ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು, ವಿಷಯ ಪರಿಣಿತರ ಪಾತ್ರ, ಭಾಗವಹಿಸುವಿಕೆ ಮುಖ್ಯವಾಗಿದೆ.
ನಾಗರಿಕರು ಪ್ರತಿದಿನ ಮನೆಯಲ್ಲಿ, ಹೋಟೆಲ್, ಬೇಕರಿ, ಇತರೆ ಅಂಗಡಿಯವರು ಉತ್ಪತ್ತಿಯಾಗುವ ಯಾವುದೇ ಕಸವನ್ನು ಹಸಿಕಸ-ಒಣಕಸವನ್ನಾಗಿ ಬೇರ್ಪಡಿಸಿ ಪ್ರತ್ಯೇಕವಾಗಿ ನಗರಸಭೆ ವಾಹನಗಳಿಗೆ ನೀಡುವುದು. ತ್ಯಾಜ್ಯವನ್ನು ಚರಂಡಿ, ಖಾಲಿ ನಿವೇಶನ, ತೆರೆದ ಪ್ರದೇಶಗಳಲ್ಲಿ ಬಿಸಾಡಬಾರದು. ಸ್ವಚ್ಚತೆಗೆ ಸಂಬಂಧಿಸಿದ ದೂರುಗಳನ್ನು ಚಿತ್ರಗಳ ಸಹಿತ ಸಲ್ಲಿಸಲು ಮೊಬೈಲ್‍ನಲ್ಲಿ ಠಿಟಚಿಥಿ sಣoಡಿe ನಲ್ಲಿರುವ Seಚಿಛಿhhಚಿಣಚಿ ಂಠಿಠಿ ಗಳಾದ ಎಚಿಟಿಚಿhiಣhಚಿ, Sತಿಚಿಛಿhhಚಿ mohಚಿಟಟಚಿಗಳನ್ನು ಬಳಸಬೇಕು.
ಆರೋಗ್ಯ ಹಾಗೂ ನಗರದ ಸ್ಚಚ್ಚತೆಗೆ ಬಯಲಲ್ಲಿ ಮಲಮೂತ್ರ ವಿಸರ್ಜಿಸುವುದನ್ನು ತಡೆಗಟ್ಟುವ ಸಲುವಾಗಿ ನಗರಸಭೆ ವ್ಯಾಪ್ತಿಯ ಎಲ್ಲಾ ಪೆಟ್ರೋಲï ಬಂಕ್‍ಗಳಲ್ಲಿನ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದೆ. ಸಾರ್ವಜನಿಕ ಸ್ಥಳ ಹಾಗೂ ವಿವಿಧ ವಾರ್ಡ್‍ಗಳಲ್ಲಿ ಇರುವ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯವನ್ನು ನಿರ್ಮಿಸಿದ್ದು ಸಾರ್ವಜನಿಕರ ಬಳಕೆಗೆ ಅನುವು ಮಾಡಲಾಗಿದೆ.
ನಗರವನ್ನು ಡಿಸೆಂಬರ್‍ನಲ್ಲಿ ಬಯಲುಮುಕ್ತ ಶೌಚಾಲಯ ನಗರವನ್ನಾಗಿ ಘೋಷಿಸಬೇಕಾಗಿರುವುದರಿಂದ ಸಾರ್ವಜನಿಕರು ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಉಪಯೋಗಿಸುವುದು ಕಡ್ಡಾಯವಾಗಿದೆ. ಇದುವರೆಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳದವರು ಕೂಡಲÀÉೀ ನಗರಸಭೆಯ ಆರೋಗ್ಯ ಶಾಖೆಯ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಶೌಚಾಲಯವನ್ನು ಡಿಸೆಂಬರ್ 10ರೊಳಗೆ ನಿರ್ಮಿಸಿಕೊಂಡು ಸಹಾಯಧನ ಪಡೆಯಬಹುದಾಗಿದೆ.
ನಗರಸಭೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಸ್ವಚ್ಚತಾ ಸಮಿತಿಗಳನ್ನು ರಚಿಸಿಕೊಂಡು ಸ್ಚಚ್ಚತೆಗೆ ಆದ್ಯತೆ ನೀಡುವುದು. ಶಾಲಾ ಕಾಲೇಜುಗಳಲ್ಲಿ ಸ್ವಚ್ಚತಾ ರ್ಯಾಂಕಿಂಗ್‍ನಲ್ಲಿ ವಿವಿಧ ಸ್ಥರಗಳಲ್ಲಿ ಅಗ್ರಸ್ಥಾನ ಪಡೆಯುವ ಶಾಲಾ ಕಾಲೇಜುಗಳಿಗೆ ನಗರಸಭೆ ವತಿಯಿಂದ ಬಹುಮಾನ ನೀಡಲಾಗುವುದು.
ಸಾರ್ವಜನಿಕರು ಸ್ವಚ್ಚತೆಗೆ ಆದ್ಯತೆ ನೀಡಿ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪ್ರಕಟಣೆ ಕೋರಿದೆ.
ಶಿಲ್ಪಕಲಾ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಡಿ. 01-ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2015 ರಿಂದ 2017ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಡಿ ಬಹುಮಾನ ನೀಡಲು ಅರ್ಜಿ ಆಹ್ವಾನಿಸಿದೆ.2014 ಜನವರಿಯಿಂದ 2016ರ ಡಿಸೆಂಬರ್ ಅವಧಿಯಲ್ಲಿ ಮುದ್ರಣಗೊಂಡ ಪುಸ್ತಕಗಳನ್ನು 2015, 2016 ಹಾಗೂ 2017ನೇ ಸಾಲಿನಲ್ಲಿ ನೀಡುವ ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು.
ಪುಸ್ತಕಗಳನ್ನು ಡಿಸೆಂಬರ್ 10ರೊಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, 1ನೇ ಮಹಡಿ, ಕನ್ನಡ ಭವನ, ಜೆಸಿ ರಸ್ತೆ, ಬೆಂಗಳೂರು - 560002 (ದೂ.ಸಂ. 080-22278725) ಇವರನ್ನು ಸಂಪರ್ಕಿಸುವಂತೆ ರಿಜಿಸ್ಟ್ರಾರ್ ಹೆಚ್.ವಿ. ಇಂದ್ರಮ್ಮ ಪ್ರಕಟಣೆಯಲ್ಲಿ ಕೋರಿದ್ದಾರೆ.
ತಾತ್ಕಾಲಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಡಿ. 01-ಜಿಲ್ಲೆಯ ಆಯುಷ್ ಇಲಾಖೆ ಆಡಳಿತ ವ್ಯಾಪ್ತಿಯಲ್ಲಿ ಬರುವ ಕೇಂದ್ರ ಸರ್ಕಾರದಿಂದ ಉನ್ನತೀಕರಣಗೊಂಡ ಚಾಮರಾಜನಗರ ಜಿಲ್ಲಾ ಆಯುರ್ವೇದ ಆಸ್ಪತ್ರೆ ಹಾಗೂ ಗುಂಡ್ಲುಪೇಟೆ ತಾಲೂಕು ಮಟ್ಟದ ಆಯುರ್ವೇದ ಆಸ್ಪತ್ರೆಗೆ ತಾತ್ಕಾಲಿಕವಾಗಿ ಮಂಜೂರಾಗಿರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.ಆಯುರ್ವೇದ ತಜ್ಞ ವೈದ್ಯರ 4 ಹುದ್ದೆಗಳಿಗೆ ನಿಗದಿಪಡಿಸಿದ ಮೀಸಲಾತಿ ಪರಿಶಿಷ್ಟ ಜಾತಿ ಹಾಗೂ ಸಮತಳ ಮೀಸಲಾತಿ ಪರಿಶಿಷ್ಟ ಜಾತಿ, ಸಾಮಾನ್ಯ ಅಭ್ಯರ್ಥಿ, ಮೀಸಲಾತಿ ಹಾಗೂ ಸಮತಳ ಮೀಸಲಾತಿಗೆ ಸಾಮಾನ್ಯ ಅಭ್ಯರ್ಥಿಯನ್ನು ನಗರದ ಜಿಲ್ಲಾ ಆಯುರ್ವೇದ ಆಸ್ಪತ್ರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಮೀಸಲಾತಿ 3ಬಿ ಹಾಗೂ 3ಬಿ, ಮಹಿಳಾ ಅಭ್ಯರ್ಥಿ ಮತ್ತು ಮೀಸಲಾತಿಯಲ್ಲಿ ಸಾಮಾನ್ಯ ಅಭ್ಯರ್ಥಿ ಹಾಗೂ ಸಮತಳ ಮೀಸಲಾತಿಯಲ್ಲಿ ಸಾಮಾನ್ಯ ಅಭ್ಯರ್ಥಿ, ಮಹಿಳಾ ಅಭ್ಯರ್ಥಿಯನ್ನು ಗುಂಡ್ಲುಪೇಟೆಯ ತಾಲೂಕು ಆಯುರ್ವೇದ ಆಸ್ಪತ್ರೆಗೆ ನೇಮಿಸಿಕೊಳ್ಳಲಿದೆ. ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಹರು.
ಔಷಧಿ ವಿತರಕರ 3 ಹುದ್ದೆಗಳನ್ನು ನಿಗದಿಪಡಿಸಿದ ಮೀಸಲಾತಿ ಹಾಗೂ ಸಮತಳ ಮೀಸಲಾತಿಯಲ್ಲಿ ಸಾಮಾನ್ಯ ಅಭ್ಯರ್ಥಿಯನ್ನು ನಗರದ ಜಿಲ್ಲಾ ಆಯುರ್ವೇದ ಆಸ್ಪತ್ರೆಗೆ ಹಾಗೂ ಮೀಸಲಾತಿ 3ಬಿ ಹಾಗೂ ಸಮತಳ ಮೀಸಲಾತಿಯಲ್ಲಿ 3ಬಿ, ಮಹಿಳಾ ಅಭ್ಯರ್ಥಿ ಹಾಗೂ ಮೀಸಲಾತಿಯಲ್ಲಿ ಸಾಮಾನ್ಯ ಅಭ್ಯರ್ಥಿ ಮತ್ತು ಸಮತಳ ಮೀಸಲಾತಿಯಲ್ಲಿ ಸಾಮಾನ್ಯ ಅಭ್ಯರ್ಥಿ, ಮಹಿಳಾ ಅಭ್ಯರ್ಥಿಯನ್ನು ಗುಂಡ್ಲುಪೇಟೆಯ ತಾಲೂಕು ಆಯುರ್ವೇದ ಆಸ್ಪತ್ರೆಗೆ ನೇಮಿಸಿಕೊಳ್ಳಲಿದ್ದು 10ನೇ ತರಗತಿ ಉತ್ತೀರ್ಣ ಹಾಗೂ ಔಷಧಿ ವಿಜ್ಞಾನದಲ್ಲಿ ಡಿಪ್ಲೊಮಾ ಪಡೆದಿರಬೇಕು.
ಆಸಕ್ತ ಅಭ್ಯರ್ಥಿಗಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ತಮ್ಮ ಸ್ವವಿವರ, ವಿದ್ಯಾರ್ಹತೆ ಪ್ರಮಾಣ ಪತ್ರ ಹಾಗೂ ಹುದ್ದೆಗಳ ವರ್ಗೀಕರಣದ ನಕಲು ಪ್ರತಿಯೊಂದಿಗೆ ದೃಢೀಕರಿಸಿ ಡಿಸೆಂಬರ್ 21ರೊಳಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿ ಸಂಪರ್ಕಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 4 ರಿಂದ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು, ಸದಸ್ಯರ ಜಿಲ್ಲಾ ಪ್ರವಾಸ
ಚಾಮರಾಜನಗರ, ಡಿ. 01 - ರಾಜ್ಯ ಆಹಾರ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ತಂಡ ಜಿಲ್ಲೆಗೆ ಡಿಸೆಂಬರ್ 4 ರಿಂದ 6ರವರೆಗೆ ಆಯೋಗವು ಜಿಲ್ಲಾ ಪ್ರವಾಸ ಕೈಗೊಂಡಿದೆ.ಆಯೋಗದ ಅಧ್ಯಕ್ಷರಾದ ಡಾ. ಎನ್. ಕೃಷ್ಣಮೂರ್ತಿ, ಸದಸ್ಯ ಕಾರ್ಯದರ್ಶಿ ಅರುಂಧತಿ ಚಂದ್ರಶೇಖರ್, ಸದಸ್ಯರಾದ ವಿ.ಬಿ. ಪಾಟೀಲ್, ಹೆಚ್.ವಿ. ಶಿವಶಂಕರ್, ಡಿ.ಜಿ. ಹಸಬಿ, ಬಿ.ಎ. ಮಹಮ್ಮದ್ ಹಾಗೂ ಮಂಜುಳಾಬಾಯಿ ಅವರು ತಂಡದಲ್ಲಿದ್ದಾರೆ.
ಡಿಸೆಂಬರ್ 4ರಂದು ಬೆಳಿಗ್ಗೆ 9.30ಕ್ಕೆ ಕೊಳ್ಳೇಗಾಲಕ್ಕೆ ಆಗಮಿಸುವ ತಂಡವು ಅಂಗನವಾಡಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಮಧ್ಯಾಹ್ನದ ಉಪಾಹಾರ ಕೇಂದ್ರ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಡಿಸೆಂಬರ್ 5ರಂದು ಬೆಳಿಗ್ಗೆ 11 ಗಂಟೆಯಿಂದ ಜಿಲ್ಲೆಯ ಅಂಗನವಾಡಿ ಕೇಂದ್ರ, ಮಧ್ಯಾಹ್ನದ ಉಪಾಹಾರ ಯೋಜನೆ ಅನುಷ್ಠಾನದ ಬಗ್ಗೆ ಶಾಲೆಗಳಿಗೆ ಭೇಟಿ ಹಾಗೂ ಆಹಾರಧಾನ್ಯ ಸಗಟು ಮಳಿಗೆ, ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ.
ಡಿಸೆಂಬರ್ 6ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013ರ ಅನುಷ್ಠಾನ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು ಎಂದು ಪ್ರಕಟಣೆ ತಿಳಿಸಿದÉ.
ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಅರಿವು ಜಾಥಾ
ಚಾಮರಾಜನಗರ, ಡಿ. 01 - ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಎಆರ್‍ಟಿ ಕೇಂದ್ರ ಹಾಗೂ ಜಿಲ್ಲಾ ಸರ್ಕಾರಿ ನರ್ಸಿಂಗ್ ಶಾಲೆ ಇವರ ಸಹಯೋಗದಲ್ಲಿ ನಗರದಲ್ಲಿಂದು ಏಡ್ಸ್ ಜನಜಾಗೃತಿ ಜಾಥಾ ನಡೆಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆರಂಭಗೊಂಡ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾದ ಎಂ.ರಾಮಚಂದ್ರ, ಅವರು ಹಸಿರು ಬಾವುಟ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರು ನಾಗಾರಿ ಭಾರಿಸುವುದರ ಮೂಲಕ ಜನಪದ ಕಲಾತಂಡದ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಏಡ್ಸ್ ಪೀಡಿತರನ್ನು ಕಿಳಿರಿಮೆಯಿಂದ ನೋಡದೆ ಮಾನವೀಯತೆಯಿಂದ ಕಾಣಬೇಕು. ಅಲ್ಲದೆ, ಏಡ್ಸ್ ಬಗ್ಗೆ ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಜಾಥಾದಲ್ಲಿ ಭಾಗವಹಿಸಿದ್ದ ವಿವಿಧ ನರ್ಸಿಂಗ್ ಶಾಲೆ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯವರು ಏಡ್ಸ್ ಕಾಯಿಲೆಯ ಬಗ್ಗೆ ಭಿತ್ತಿ ಪತ್ರಗಳನ್ನು ಹಂಚಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ನಗರಸಭಾ ಅಧ್ಯಕ್ಷರಾದ ಶೋಭಪುಟ್ಟಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಕೆ ಪ್ರಸಾದ್, ಜಿಲ್ಲಾ ಎಡ್ಸ್ ನಿಯಂತ್ರಣಾಧಿಕಾರಿ ಡಾ. ಎನ್. ಮಹದೇವ್, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳು, ಹಾಗೂ ಮನೋನಿಧಿ ನರ್ಸಿಂಗ್ ಶಾಲೆ, ಸ್ವಯಂ ಸೇವಾ ಸಂಸ್ಥೆಗಳು, ಇನ್ನಿತರರು ಜಾಥಾದಲ್ಲಿ ಭಾಗವಯಿಸಿದ್ದರು.
ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ
ಚಾಮರಾಜನಗರ, ಡಿ. 01 -ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಡಿಸೆಂಬರ್ 4ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.ಡಿ. 04ರಂದು ಬೆಳಿಗ್ಗೆ 10 ಗಂಟೆಗೆ ಗುಂಡ್ಲುಪೇಟೆ ತಾಲೂಕಿನಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸುವರು. 11.30 ಗಂಟೆಗೆ ಬಂಡೀಪುರದಲ್ಲಿ ಗಿರಿಜನರಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಸಚಿವರ ಅಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ 8 ಗ್ರಾಮಪಂಚಾಯಿತಿಗಳಿಗೆ ಚುನಾವಣೆ: ಬಂದೂಕುಗಳನ್ನು ಪೊಲೀಸ್ ಸುಪರ್ದಿಗೆ ನೀಡಲು ಜಿಲ್ಲಾಧಿಕಾರಿ ಆದೇಶ
ಚಾಮರಾಜನಗರ, ಡಿ. 01 - ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನಲೆಯಲ್ಲಿ ಚುನಾವಣೆ ನಡೆಸುತ್ತಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿದ ಬಂದೂಕುದಾರರು ತಮ್ಮ ಬಂದೂಕುಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆÉಯ ಸುಪರ್ದಿಗೆ ನೀಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲೂಕಿನ ಒಟ್ಟು 8 ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದು, ಚಾಮರಾಜನಗರ ತಾಲೂಕಿನ ಬದನಗುಪ್ಪೆ, ಸಂತೇಮರಹಳ್ಳಿ, ಅಮಚವಾಡಿ ಹಾಗೂ ಹೊನ್ನಹಳ್ಳಿ, ಗುಂಡ್ಲುಪೇಟೆ ತಾಲೂಕಿನ ಬಲಚವಾಡಿ, ತೆರಕಣಾಂಬಿ, ಬೊಮ್ಮನಹಳ್ಳಿ ಮತ್ತು ಕೊಳ್ಳೇಗಾಲ ತಾಲೂಕಿನ ಗೋಪಿನಾಥಂ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಪರವಾನಗಿ ಹೊಂದಿರುವ ಬಂದೂಕುದಾರರು ತಮ್ಮ ಬಂದೂಕುಗಳನ್ನು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಸುಪರ್ದಿಗೆ ಒಪ್ಪಿಸುವಂತೆ ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
No comments:
Post a Comment