ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ : ಉಸ್ತುವಾರಿ ಸಚಿವರಾದ ಡಾ. ಎಂ.ಸಿ.ಮೋಹನಕುಮಾರಿ
ಚಾಮರಾಜನಗರ ನ.06: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಕೊಟ್ಟ ಸಾಹಿತ್ಯಕ ಕೊಡುಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವರ ಹೆಸರನ್ನು ಅಜರಾಮರಗೊಳಿಸಿದೆ ಎಂದು ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ.ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ತಿಳಿಸಿದರು.ನಗರದ ಮಾರಿಗುಡಿ ದೇವಾಲಯದ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ನಡೆದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹರಿದಾಸ ಕೀರ್ತನೆಗಳ ಮೂಲಕ ಕನಕದಾಸರು ಸಂಗೀತ, ಸಾಹಿತ್ಯ ಮತ್ತು ಭಕ್ತಿಯ ಹೊಸ ಪರಂಪರೆಯನ್ನು ಹುಟ್ಟುಹಾಕಿದರು. ಈ ಪರಂಪರೆಯಿಂದ ಕನ್ನಡ ನಾಡು, ಸಾಹಿತ್ಯದ ಬೆಳವಣಿಗೆಗೆ ತುಂಬಾ ಸಹಕಾರಿಯಾಯಿತು ಎಂದು ಸಚಿವರು ಅಭಿಪ್ರಾಯಪಟ್ಟರು.
ಮೇಲು ಕೀಳುಗಳಿಲ್ಲದ ಸಮಾನತೆಯ ಸಮಾಜ ಸೃಷ್ಠಿಗೆ ಕನಕದಾಸರು ಪ್ರೇರಣೆ ನೀಡಿದರು. ಭಾರತ ದೇಶಕಂಡ ಒಬ್ಬ ಶ್ರೇಷ್ಠ ಸಂತ ಹಾಗೂ ಮಹಾನ್ ವ್ಯಕ್ತಿಯಾದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಮೌಢ್ಯವನ್ನು ತೊಡೆದು ಹಾಕುವಲ್ಲಿ ಮಾಡಿದ ಪ್ರಯತ್ನದಿಂದ ಅವರನ್ನು ಪೂಜನೀಯ ಸ್ಥಾನಕ್ಕೆ ಕೊಂಡೊಯ್ದಿದೆ ಎಂದು ಸಚಿವರು ನುಡಿದರು.
ಹರಿದಾಸ ಪರಂಪರೆಯ ಪ್ರವರ್ತಕರಾದ ಕನಕದಾಸರು ಕೀರ್ತನೆಗಳ ರಚನೆ ಜೊತೆಗೆ ರಾಮಧಾನ್ಯ ಚರಿತೆ, ಮೋಹನ ತರಂಗಿಣಿ, ನಳಚರಿತೆಯಂತಹ ಮೌಲಿಕ ಕೃತಿಗಳನ್ನು ರಚಿಸಿದರು. ಸಮಾನತೆಯ ಸಮಾಜ ನಿರ್ಮಾಣದ ಪರಿಕಲ್ಪನೆಗೆ ಶತಮಾನಗಳ ಹಿಂದೆಯೇ ಕನಕದಾಸರು ಅಡಿಪಾಯ ಹಾಕಿದ್ದರು ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಕನಕದಾಸರು ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ ವಿಶ್ವಬಂಧುತ್ವವನ್ನು ಸಾರಿದ ಮಹಾನ್ ವ್ಯಕ್ತಿ ವಸುದೈವ ಕುಟುಂಬಕಂ ಎಂಬ ಕಲ್ಪನೆಯನ್ನು ಕನಕದಾಸರ ವಿಚಾರಗಳಲ್ಲಿ ನಾವು ನೋಡಬಹುದಾಗಿದೆ. ಇಂತಹ ಮಹಾನ್ ಕೀರ್ತನಕಾರ ಸಂತಕವಿಯ ಜಯಂತಿಯ ಶುಭ ಸಂದರ್ಭದಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂಕಲ್ಪತೊಡುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ ಎಂದು ಉಸ್ತುವಾರಿ ಸಚಿವರಾದ ಗೀತ ಮಹದೇವಪ್ರಸಾದ್ ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿಯವರು ಸಮಾಜದ ಎಲ್ಲರ ಒಳಿತಿಗಾಗಿ ಮಹಾನ್ ವ್ಯಕ್ತಿಗಳು ಶ್ರಮಿಸಿದ್ದಾರೆ ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ನಾವೆಲ್ಲ ಒಂದೇ ಎಂದು ಸಾಗಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮಾತನಾಡಿ ಎಲ್ಲಾ ಜಯಂತಿಯ ಆಚರಣೆಯ ಉದ್ದೇಶ ಮಾನವೀಯ ಹಾಗೂ ಉದಾತ್ತ ಮೌಲ್ಯಗಳನ್ನು ತಿಳಿಸುವುದೇ ಆಗಿದೆ. ಪ್ರತಿಯೊಬ್ಬರು ಆಚರಣೆಯ ಮಹತ್ವ ಅರಿಯಬೇಕಿದೆ ಎಂದರು.
ಗುಂಡ್ಲುಪೇಟೆಯ ವಿಶ್ರಾಂತ ಪ್ರಾಂಶುಪಾಲರಾದ ಕೆಂಪರಾಜು ಮಾತನಾಡಿ ಎಲ್ಲಾ ಮಹನೀಯರ ಸಂತರ, ದಾರ್ಶನಿಕರ ಜಯಂತಿ ಕಾರ್ಯಕ್ರಮಗಳು ಒಂದೇ ದಿನದಂದು ನಡೆದು ಅವರ ಶ್ರೇಷ್ಠ ವಿಚಾರಗಳನ್ನು ತಿಳಿಸುವಂತಹ ವೇದಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಕನಿಷ್ಟವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಆರ್.ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್.ನಂಜಪ್ಪ, ನಗರಸಭೆ ಅಧ್ಯಕ್ಷರಾದ ಶೋಭ, ಉಪಾಧ್ಯಕ್ಷರಾದ ಆರ್.ಎಂ.ರಾಜಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾಧ ಕೆ.ಪಿ.ಸದಾಶಿವಮೂರ್ತಿ, ಬಿ.ಕೆ.ಬೊಮ್ಮಯ್ಯ, ಸದಸ್ಯರಾದ ಸಿ.ಎನ್.ಬಾಲರಾಜು, ಶಶಿಕಲಾ ಸೋಮಲಿಂಗಪ್ಪ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ.ನಾಗವೇಣಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್.ಸತೀಶ್, ಕುರುಬ ಸಮುದಾಯದ ಮುಖಂಡರು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಗೀತಮಹದೇವಪ್ರಸಾದ್, ಶಾಸಕರಾದ ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಸೇರಿದಂತೆ ಇತರೆ ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯ ಆರಂಭ
ನಗರದ ಜಿಲ್ಲಾಡಳಿತ ಭವನದ ಮೊದಲ ಮಹಡಿಯಲ್ಲಿ ಆರಂಬಿಸಲಾಗಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಲಯವನ್ನು ಉಸ್ತುವಾರಿ ಸಚಿವರಾದ ಗೀತಮಹದೇವಪ್ರಸಾದ್‍ರವರು ಇಂದು ಉದ್ಘಾಟಿಸಿದರು.
ಬಳಿಕ ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಅವರೊಂದಿಗೆ ಕಾರ್ಯಾಲಯದಲ್ಲಿ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ನಗರಸಭೆ ಅಧ್ಯಕ್ಷರಾದ ಶೋಭಪುಟ್ಟಸ್ವಾಮಿ ಇನ್ನಿತರರು ಹಾಜರಿದ್ದರು.
ಬದನಗುಪ್ಪೆ ಸೇರಿದಂತೆ 5 ದಿಕ್ಕಿನಲ್ಲಿ ಉಪ ನಗರ ಆಗಬೇಕು: ವಾಟಾಳ್ ನಾಗರಾಜ್
ಇಂದು ವಾಟಾಳ್ ನಾಗರಾಜ್ ಅವರು ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಬಿ.ರಾಮು ಜೊತೆ ಸಮಗ್ರ ಅಭಿವೃದ್ದಿಯ ವಿಚಾರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ಮನವಿ ಸಲ್ಲಿಸಿದರು.
ನಂತರ ವಾಟಾಳ್ ನಾಗರಾಜ್ ಅವರು ಮಾತನಾಡಿ, ನಗರದ ಜೋಡಿರಸ್ತೆ, ಡಿವಿಯೇಷನ್ ರಸ್ತೆ, ಚಿಕ್ಕಅಂಗಡಿ ಬೀದಿ, ದೊಡ್ಡಅಂಗಡಿ ಬೀದಿ, ನ್ಯಾಯಲಯ ರಸ್ತೆ ಸೇರಿದಂತೆ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಡುತ್ತಿರುವ ಮಾಲೀಕರಿಗೆ ಈಗಿನ ಮಾರುಕಟ್ಟೆ ದರದಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.
ಒಳಚರಂಡಿ ಕಾಮಗಾರಿ ಪ್ರಾರಂಭವಾಗಿ 10 ವರ್ಷ ಕಳೆದಿದ್ದರೂ ಏಕೆ ಇನ್ನು ಮುಗಿದಿಲ್ಲ. ಕೂಡಲೇ ಒಳ ಚರಂಡಿ ಕಾಮಗಾರಿ ಮುಗಿಸಬೇಕು. ಬಸವಭವನ ಕಟ್ಟಡ ನಿರ್ಮಾಣಕ್ಕೆ ನಾನು ಶಾಸಕನಾಗಿದ್ದಾಗ ನಿವೇಶನ ಖರೀದಿಸಲು ಹಣ ಸಹಾಯ ಮಾಡಿದ್ದೆ ಜಿಲ್ಲಾಧಿಕಾರಿಗಳು ಕೂಡಲೇ ಬಸವ ಭವನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಬೇಕಾಗಿ ತಿಳಿಸಿದರು.
ರಸ್ತೆ ಅಗಲೀಕರಣಕ್ಕೆ ಮನೆ ನಿವೇಶನ ಕಳೆದುಕೊಂಡಿರುವ ಫಲಾನುಭವಿಗಳಿಗೆ ಎಡಬೆಟ್ಟದ ಸಮೀಪ ನಿವೇಶನ ಕೊಟ್ಟಿದ್ದು ಆ ನಿವೇಶನಗಳಿಗೆ ರಸ್ತೆ, ಚರಂಡಿ, ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು, ಚಾಮರಾಜನಗರ ಕಲೆಯ ತವರೂರು ನಮ್ಮ ಜಿಲ್ಲೆಯವರಾದ ಡಾ.ರಾಜಕುಮಾರ್ ಸೇರಿದಂತೆ ಅನೇಕ ಕಲಾವಿದರುಗಳನ್ನು ಕೊಡುಗೆ ಯಾಗಿ ನೀಡಿದೆ. ಕೂಡಲೇ ನೆನೆಗುದಿಗೆ ಬಿದ್ದಿರುವ ರಂಗಮಂದಿರ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ನಗರದ 31 ವಾರ್ಡಿನ ಬಡಾವಣೆಗಳಲ್ಲಿ ರಸ್ತೆ ಚರಂಡಿಗಳಿಲ್ಲದೆ ನಾಗರೀಕರು ನರಕಯಾತನೆ ಪಡುತ್ತಿದ್ದಾರೆ. ಕೂಡಲೆ ರಸ್ತೆ ಚರಂಡಿ, ನೀರು, ಮೂಲಭೂತ ಸೌ ಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು. ನಗರದ ರಸ್ತೆ ಅಭಿವೃದ್ದಿ ವಿಚಾರವಾಗಿ ರಸ್ತೆ ಅಗಲೀಕರಣ ಮಾಡುವಾಗ ಕಟ್ಟಡ ಮಾಲೀಕರಿಗೆ ಅನ್ಯಾಯವಾಗದಂತೆ ಅವರ ಜೊತೆ ಸಹಕರಿಸಿ ಅವರಿಗೆ ಸೂಕ್ತ ಪರಿಹಾರ ಕೊಡುವುದರ ಮೂಲಕ ಅವರ ಜೊತೆ ಸಾಮರಸ್ಯವಾಗಿರಬೇಕೆಂದು ವಾಟಾಳ್ ಸಲಹೆ ನೀಡಿದರು.
ಹಳದಿ, ಕೆಂಪು ಬಣ್ಣದ ಕನ್ನಡ ಭಾವುಟವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಹೀಗಿರುವ ಕನ್ನಡ ಬಾವುಟವನ್ನೇ 5 ಕೋಟಿ ಕನ್ನಡಿಗರು ಒಪ್ಪಿದ್ದಾರೆ. 50 ವರ್ಷಗಳ ಹಿಂದೆ ರಾಮಮೂರ್ತಿ ಮತ್ತು ನಾನು ಸೇರಿ ಹಳದಿ, ಕೆಂಪು ಬಣ್ಣದ ಕನ್ನಡ ಧ್ವಜವನ್ನು ತಯಾರು ಮಾಡಿದ್ದೆವು ಅದೇ ಇದುವರೆವಿಗೂ ಉಳಿದುಕೊಂಡು ಬಂದಿದೆ. ಹೀಗಿರುವ ಕನ್ನಡ ಧ್ವಜವನ್ನು ಬದಲಾಯಿಸಬಾರದು ಇದಕ್ಕೆ ಸರ್ಕಾರ ಸಮಿತಿ ರಚನೆ ಮಾಡಿದೆ. ಬದಲಾವಣೆ ಮಾಡಿದ್ದೇ ಆದರೆ ಇಡೀ ರಾಜ್ಯದಾದ್ಯಂತ ಹೋರಾಟ ಮಾಡುವುದಾಗಿ ವಾಟಾಳ್ ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಳಪತಿ ವೀರತಪ್ಪ, ಕಾರ್‍ನಾಗೇಶ್, ಸುರೇಶ್‍ನಾಗ್, ಶ್ರೀನಿವಾಸಗೌಡ, ಶಿವಕುಮಾರ್, ಚಾ.ಗು.ನಾಗರಾಜು, ನಾಗರಾಜಮೂರ್ತಿ, ಹುಂಡಿಬಸವಣ್ಣ, ಮಹಮದ್‍ಕಿಫಾಯತ್, ಮಹೇಶ್, ಶಿವಲಿಂಗಮೂರ್ತಿ, ಲಿಂಗಣ್ಣನಾಯಕ, ಗೋವಿಂದನಾಯಕ, ವರದನಾಯಕ, ನಿಂಗಶೆಟ್ಟಿ, ಲಿಂಗರಾಜು, ಸ್ವಾಮಿ, ರಾಜಪ್ಪ, ಅಸಾದುಲ್ಲಾಷರೀಪ್, ಬಂಗಾರನಾಯಕ, ಹೇಮಂತ್, ರೇವಣ್ಣಸ್ವಾಮಿ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದರು.
No comments:
Post a Comment