ಬ್ರಿಟಿಷ್ ಪ್ರಜೆಯಿಂದ ಕಾಲ್ನಡಿಗೆಯಲ್ಲೆ ಕಾಶ್ಮೀರದಿಂದ ಕನ್ಯಾಕುಮಾರಿ ಸುತ್ತೋ ಆಸೆ!
ಬ್ರಿಟಿಷ್ ಪ್ರಜೆಯಿಂದ ಕಾಲ್ನಡಿಗೆಯಲ್ಲೆ ಕಾಶ್ಮೀರದಿಂದ ಕನ್ಯಾಕುಮಾರಿ ಸುತ್ತೋ ಆಸೆ! ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಇವರೊಬ್ಬರು ಬ್ರಿಟಿಷ್ (ಇಂಗ್ಲೆಂಡ್) ಪ್ರಜೆ. ಕಾಲ್ನಡಿಗೆಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯನ್ನ ಸುತ್ತಲೆಬೇಕೆಂದು ಸಿದ್ದರಾಗಿದ್ದಾರೆ. *ಬ್ರಿಟಿಷ್ ಪ್ರಜೆಯಾಗಿರುವ ಒಲೆವರ್ ಜೇಮ್ಸ್ @ಹಂಟರ್ ಸ್ಮಾರ್ಟ(ಸರ್ ನೇಮ್) ಇವರು ಕಾಲ್ನಡಿಗೆಯಲ್ಲೆ ನಡೆದು ಸಾಗಬೇಕೆಂದು ಇಚ್ಚೆಪಟ್ಟು ಹೊರಟಿದ್ದಾರೆ. *೧೯೮೩ ಏಪ್ರಿಲ್ ೨೧ ರಲ್ಲಿ ಜನಿಸಿರುವ ಇರುವ ಬಿ ಎಸ್ಸಿ, ಜಿಯೋಗ್ರಾಪಿ ವ್ಯಾಸಂಗ ಮಾಡಿರುವ ಇವರು ಪ್ರತಿದಿನ ೩೫ ಕಿ.ಮಿ.ಕಾಲ್ನಡಿಗೆಯಲ್ಲಿ ಕ್ರಮಿಸುವುದನ್ನ ಬಿಟ್ಟರೆ ಊಟ ಉಪಚಾರದಲ್ಲಿ ಯಾವುದೇ ತರಹ ಬದಲಾವಣೆ ಇರುವುದಿಲ್ಲ. *ಮಹಾತ್ಮಗಾಂದೀ ಅವರ ಪ್ರೇರಣೆ ಕಾಲ್ನಡಿಗೆ ಸ್ಪೂರ್ತಿದಾಯಕವಾಗಿದ್ದು ದಾರಿಯುದ್ದಕ್ಕೂ ಸಿಗುವ ನದಿ, ದೇವಾಲಯ, ಪರಿಸರ ನೋಡಿಕೊಂಡು ಹೋಗುವ ಇಚ್ಚೆ ವ್ಯಕ್ತಪಡಿಸಿದಿದರು. *ಈಗಾಗಲೇ ಏಪ್ರಿಲ್ ೨೪ ರಂದು ಪ್ರಯಾಣ ಬೆಳೆಸಿರುವ ಇವರು ಈಗಾಗಲೇ ಸರಿಸುಮಾರು ಇಂದಿಗೆ ೫೦೮೦ ಕಿ.ಮೀ ಕ್ರಮಿಸಿದ್ದು ಏಳು ತಿಂಗಳು ಪ್ರಯಾಣವಾಗಿದೆ ಎಂದು ತಿಳಿಸಿದರು. *ಕರ್ನಾಟಕದಲ್ಲಿ ಸಂಸ್ಕೃತಿ, ಪರಿಸರ ಸುಂದರವಾಗಿದೆ. ಊಟದಲ್ಲಿ ಮುದ್ದೆ ಊಟ ಚೆನ್ನಾಗಿದೆ. ದೇವಾಲಯಗಳು ಕೂಡ ಸುಂದರವಾಗಿದೆ ಎಂದು ತಮ್ಮ ಅಬಿಪ್ರಾಯವನ್ನ ವರದಿಗಾರ ಎಸ್.ವೀರಭದ್ರಸ್ವಾಮಿ ಅವರೊಂದಿಗೆ ಹಂಚಿಕೊಂಡರು. *ಚಾಮರಾಜನಗರ ದೇವಾಲಯದ ಮುಂಬಾಗ ಸಮಾಜ ಸೇವಕ ಸುರೇಶ್ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು
***********************************
ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಶೀಘ್ರ ಪೂರ್ಣಗೊಳಿಸಿ : ಜಿಪಂ ಅಧ್ಯಕ್ಷರ ಸೂಚನೆ
ಚಾಮರಾಜನಗರ, ನ. 17 - ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಡಿಸೆಂಬರ್ ಅಂತ್ಯದೊಳಗೆ ಮನೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿರಾ ಆವಾಸ್ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ ಹಾಗೂ ಬಸವ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಕೆಲಸವನ್ನು ವಿಳಂಬ ಮಾಡಬಾರದು. ಗ್ರಾಮಸಭೆಗಳನ್ನು ಕರೆದು ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕು. ನಿಗದಿತ ಅವಧಿಯೊಳಗೆ ಗುರಿ ಸಾಧನೆ ಮಾಡಬೇಕು ಎಂದು ಅಧ್ಯಕ್ಷರು ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೈಗಾರಿಕೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್ ಅವರು ವಸತಿ ಯೋಜನೆಯಡಿ ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಮತ್ತಷ್ಟು ವಸತಿ ಮಂಜೂರು ಗುರಿ ಹೆಚ್ಚುವರಿ ಮಾಡಲು ಕೋರಿದ್ದೆ. ಆದರೆ ಇನ್ನೂ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಅರ್ಹರಿಗೆ ವಸತಿ ಯೋಜನೆ ತಲುಪಿಸಲು ಶೀಘ್ರ ಕ್ರಮ ವಹಿಸಬೇಕೆಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ. ರಾಮಚಂದ್ರ ಅವರು ಸÀರ್ಕಾರಿ ಆಸ್ಪತ್ರೆಗಳ ಸೇವೆ ಕುರಿತು ಮಾತನಾಡಿ ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡಲು ಲಭ್ಯವಾಗದಿರುವ ಬಗ್ಗೆ ಸಾಕಷ್ಟು ವರದಿಗಳು ಬರುತ್ತಿವೆ. ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ವೈದ್ಯರ ಮುಷ್ಕರದ ಸಂದರ್ಭದಲ್ಲೂ ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಪರದಾಡಿರುವ ಬಗ್ಗೆ ವ್ಯಾಪಕವಾಗಿ ವರದಿಗಳಾಗಿವೆ. ಸರ್ಕಾರಿ ವೈದ್ಯರು ಸರಿಯಾದ ಸಮಯಕ್ಕೆ ಸ್ಪಂದಿಸದಿದ್ದರೆ ಜನಸಾಮಾನ್ಯರ ಪಾಡು ಏನು? ಯಾವ ರೀತಿ ಸರ್ಕಾರಿ ವೈದ್ಯರು ಸೇವೆ ನೀಡುತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಇದೇ ವೇಳೆ ಮಾತನಾಡಿದ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ ಅವರು ಖಾಸಗಿ ಕ್ಲಿನಿಕ್ ವೈದ್ಯರು ಮುಷ್ಕರ ನಡೆಸಿದ ಸಂದರ್ಭದಲ್ಲೂ ತಮ್ಮ ಭಾಗದ ಕಾಗಲವಾಡಿ, ಹೊಂಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಕಾಲಕ್ಕೆ ಹಾಜರಾಗಿಲ್ಲ. ನಾನು ಇಂದು ಬೆಳಿಗ್ಗೆ 10.15ಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಈ ಸಮಯದಲ್ಲಿ ರೋಗಿಗಳು ಸಾಕಷ್ಟು ಸಂಖ್ಯೆಯಲ್ಲಿ ಕಾದು ಕುಳಿತಿರುವುದನ್ನು ನೋಡಿಬಂದಿದ್ದೇನೆ. ವೈದ್ಯರು ಆಸ್ಪತ್ರೆಗೆ ಬಂದಿಲ್ಲವೆಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಜಿಲ್ಲೆಯ ಯಾವುದೇ ಭಾಗದಲ್ಲಿ ವೈದ್ಯಕೀಯ ಸೇವೆಗೆ ಕೊರತೆಯಾಗುವುದನ್ನು ಸಹಿಸಲಾಗುವುದಿಲ್ಲ. ಜಿಲ್ಲಾ ಹಾಗೂ ತಾಲೂಕು ಕೇಂದ್ರ ಸೇರಿದಂತೆ ಗ್ರಾಮೀಣ ಭಾಗದ ಯಾವುದೇ ಪ್ರದೇಶದಲ್ಲೂ ವೈದ್ಯರು ಸೇವೆಗೆ ಲಭ್ಯವಾಗುವಂತೆ ನೋಡಿಕೊಳ್ಳುವ ಹೊಣೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲಿದೆ ಎಂದರು.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಗತಿ ಪರಿಶೀಲನೆ ವೇಳೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 49 ಕೋಟಿ ರೂ. ಖರ್ಚು ಮಾಡಲಾಗಿದೆ. ಯೋಜನೆಯ ಪ್ರಗತಿ ಒಟ್ಟಾರೆ ಶೇ. 66ರಷ್ಟು ಇದ್ದು ಅಂತರ್ಜಲ ಮರುಪೂರಣದಲ್ಲಿ ಇಡೀ ರಾಜ್ಯದಲ್ಲಿಯೇ ಜಿಲ್ಲೆ ಎರಡನೇ ಸ್ಥಾನದಲ್ಲಿ ಇದೆ ಎಂದರು.
ಕಚೇರಿಗಳಿಗೆ ಅಧಿಕಾರಿಗಳು, ಸಿಬ್ಬಂದಿ ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲವೆಂಬ ವಿಷಯ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಿರಿಯ ಅಧಿಕಾರಿಗಳು ಕರ್ತವ್ಯ ನಿಮಿತ್ತ ಕ್ಷೇತ್ರಕ್ಕೆ ತೆರಳಿದಾಗ ಕಚೇರಿಯಲ್ಲಿರುವ ಸಿಬ್ಬಂದಿ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡಬೇಕು. ಅಪೂರ್ಣ ಹಾಗೂ ಅಸಂಬದ್ಧವಾಗಿ ಉತ್ತರಿಸದಂತೆ ಇಲಾಖೆಯ ಮುಖ್ಯ ಅಧಿಕಾರಿಗಳು ತಿಳಿವಳಿಕೆ ನೀಡಬೇಕು. ಸೌಜನ್ಯದಿಂದ ಕಚೇರಿಗೆ ಬರುವ ನಾಗರಿಕರೊಂದಿಗೆ ಸ್ಪಂದಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್ ಮಾತನಾಡಿ ಪ್ರತಿ ಇಲಾಖೆಯೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು ಕ್ಷೇತ್ರ ಪ್ರವಾಸದಲ್ಲಿ ಇದ್ದಾಗ ತಮಗೆ ಖುದ್ದು ಮಾಹಿತಿ ನೀಡಬೇಕು. ಇನ್ನು ಒಂದು ತಿಂಗಳೊಳಗೆ ಎಲ್ಲಾ ಕಚೇರಿ ಪ್ರಕ್ರಿಯೆ ಸರಿಪಡಿಸಲು ಅವಶ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.
ವಿವಿಧ ಇಲಾಖೆಯ ಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಲಾಯಿತು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಮುಖ್ಯ ಯೋಜನಾಧಿಕಾರಿ ಕೆ. ಮಾದೇಶು ಸಭೆಯಲ್ಲಿ ಹಾಜರಿದ್ದರು.
ಅಸಾಧಾರಣ ಸಾಧನÉ ಮಾಡಿದ ಮಕ್ಕಳಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ನ. 17 - ಕಲೆ, ಕ್ರೀಡೆ, ಸಾಂಸ್ಕøತಿಕ, ಸಮಾಜ ಸೇವೆ, ನಾವೀನ್ಯತೆ, ತಾರ್ಕಿಕ ಸಾಧನೆಗಳು ಮತ್ತು ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಮಕ್ಕಳಿಗೆ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
5 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಪ್ರತೀ ಕ್ಷೇತ್ರದಲ್ಲಿ ಇಬ್ಬರು ಮಕ್ಕಳಿಗೆ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು 10 ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ.
ಆಸಕ್ತ ಮಕ್ಕಳು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 22ರೊಳಗೆ ಸಲ್ಲಿಸಬೇಕು. ಪ್ರತೀ ಕ್ಷೇತ್ರಕ್ಕೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಕಚೇರಿಯನ್ನು ಸಂಪರ್ಕಿಸುವಂತೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ. 18ರಂದು ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ
ಚಾಮರಾಜನಗರ, ನ. 17 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನವೆಂಬರ್ 18ರಂದು ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ 9 ಗಂಟೆಗೆ ವಿವಿಧ ಜಾನಪದ ಕಲಾತಂಡಗಳೊಡನೆ ಸಾಗಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಪ್ರವಾಸಿ ಮಂದಿರದ ಬಳಿ ಚಾಲನೆ ನೀಡುವರು.
ಬೆಳಿಗ್ಗೆ 11 ಗಂಟೆಗೆ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಸಮಾರಂಭವನ್ನು ಸಕ್ಕರೆ, ಸಣ್ಣ ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ. ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರು ಉದ್ಘಾಟಿಸುವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ವಿಧಾನ ಪರಿಷತ್ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಎಸ್. ನಾಗರಾಜು (ಸಂದೇಶ್ ನಾಗರಾಜು), ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನ, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಆರ್. ಉಮೇಶ್, ಕಾಡಾ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ನಗರಸಭೆಯ ಅಧ್ಯಕ್ಷರಾದ ಶೋಭ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಹುಣಸೂರಿನ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಬಿ. ನಂಜುಂಡಸ್ವಾಮಿ ಮುಖ್ಯ ಭಾಷಣಕಾರರಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಮಾದಕ ವಸ್ತು ಬಳಕೆ, ಮಾರಾಟ ದೂರು ಮಾಹಿತಿ ನೀಡಿ
ಚಾಮರಾಜನಗರ, ನ. 17 - ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಕುರಿತು ಸಾರ್ವಜನಿಕರು ಗೌಪ್ಯವಾಗಿ ದೂರವಾಣಿ ಸಂಖ್ಯೆ 1908ರ ಮೂಲಕ ದೂರು, ಮಾಹಿತಿಯನ್ನು ನೀಡಲು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಾ ಅಧ್ಯಯನ ಫೆಲೋಷಿಪ್‍ಗೆ ಪ.ಪಂ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ನ. 17 - ಕರ್ನಾಟಕ ಲಲಿತ ಕಲಾ ಅಕಾಡೆಮಿಯು ಲಲಿತ ಕಲೆಯಲ್ಲಿ 2017-18ನೇ ಸಾಲಿನಲ್ಲಿ ಕಲಾ ಅಧ್ಯಯನ ಫೆಲೋಷಿಪ್, ವಿಶೇಷ ಸಾಧನೆ ಮಾಡಿದ ಪರಿಣಿತರಿಗೆ ಸಂಶೋಧನೆ, ಕಲಾ ಅಧ್ಯಯನ ಮಾಡುವ ಸಲುವಾಗಿ ಗಿರಿಜನ ಅಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಪಂಗಡದ ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.ಕಲಾ ಅಧ್ಯಯನದ ಅವಧಿ ಒಂದು ವರ್ಷ. ಆಸಕ್ತರು ಕಲಾ ಸಂಶೋಧನೆಗಾಗಿ ಯಾವುದೇ ಲಲಿತಕಲೆಯ (ಚಿತ್ರಕಲೆ) ವಿಷಯವನ್ನು ಆರಿಸಿಕೊಳ್ಳಬಹುದು. ಈ ಕುರಿತು ಸುಮಾರು 4-5 ಪುಟಗಳ ಸಾರಲೇಖನವನ್ನು ಅರ್ಜಿಯೊಡನೆ ಸಲ್ಲಿಸಬೇಕು.
ಗಿರಿಜನ ಅಭಿವೃದ್ಶಿ ಯೋಜನೆಯಡಿ 10 ಕಲಾವಿದರಿಗೆ ನೀಡಲಾಗುವ ಫೆಲೋಶಿಪ್‍ಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ ಒಂದು ಲಕ್ಷ ರೂ. ಕಲಾ ಸಂಶೋಧನಾ ಫೆಲೋಶಿಪ್ ಮೊತ್ತವನ್ನು 3 ಕಂತುಗಳಲ್ಲಿ ನೀಡಲಾಗುವುದು.
ಅರ್ಜಿ ಸಲ್ಲಿಸಲು ಡಿಸೆಂಬರ್ 8 ಕೊನೆಯ ದಿನ.
ಹೆಚ್ಚಿನ ವಿವರ ಮತ್ತು ಅರ್ಜಿಗಾಗಿ ಅಕಾಡೆಮಿ ಕಾರ್ಯಾಲಯ, 2ನೇ ಮಹಡಿ, ಕನ್ನಡ ಭವನ, ಜೆಸಿ ರಸ್ತೆ, ಬೆಂಗಳೂರು – 560002 (ದೂ.ಸಂಖ್ಯೆ 080-22480297) ಸಂಪರ್ಕಿಸಬಹುದು. ಸ್ವವಿಳಾಸದ ಲಕೋಟೆ ಕಳುಹಿಸಿ ಅಂಚೆಯ ಮೂಲಕವೂ ಅರ್ಜಿಯನ್ನು ಪಡೆಯಬಹುದು. ಅಥವ ಅಕಾಡೆಮಿ ವೆಬ್ ಸೈಟ್ ತಿತಿತಿ.ಟಚಿಟiಣhಚಿಞಚಿಟಚಿಞಚಿಡಿಟಿಚಿಣಚಿಞಚಿ.oಡಿg ನಿಂದ ಅರ್ಜಿ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಎಚ್.ವಿ. ಇಂದ್ರÀಮ್ಮ ಪ್ರಟಣೆಯಲ್ಲಿ ತಿಳಿಸಿದ್ದಾರೆ.ನ. 20ರಂದು ಅರಿಶಿನ ಉತ್ಪನ್ನ, ಮಾರುಕಟ್ಟೆ ಕುರಿತು ಕಾರ್ಯಾಗಾರ
ಚಾಮರಾಜನಗರ, ನ. 17 (ಕರ್ನಾಟಕ ವಾರ್ತೆ):- ತೋಟಗಾರಿಕೆ ಇಲಾಖೆಯು ಅರಿಶಿನ ಕೊಯ್ಲು ಪೂರ್ವ, ಕೊಯ್ಲು ನಂತರ ತಂತ್ರಜ್ಞಾನ ಹಾಗೂ ಅರಿಶಿನ ಮಾರುಕಟ್ಟೆ ವ್ಯವಸ್ಥೆ ಕುರಿತ ಉತ್ಪನ್ನವಾರು ಕಾರ್ಯಾಗಾರವನ್ನು ನವೆಂನರ್ 20ರಂದು ಬೆಳಿಗ್ಗೆ 11 ಗಂಟೆಗೆ ನಗರದ ಮುಖ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಆಯೋಜಿಸಿದೆ.ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿ ಸದುಪಯೋಗ ಮಾಡಿಕೊಳ್ಳುವಂತೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಿರುವ ರೈತರಿಗೆ ದಾಖಲಾತಿ ಸಲ್ಲಿಸಲು ಮನವಿ
ಚಾಮರಾಜನಗರ, ನ. 17:- ತೋಟಗಾರಿಕೆ ಇಲಾಖೆಯು ಸೂಕ್ಷ್ಮ ಹನಿ ನೀರಾವರಿ ಯೋಜನೆಯಡಿ ಪ್ರಸಕ್ತ ಸಾಲಿಗೆ ಹನಿ ನೀರಾವರಿ, ಡ್ರಿಪ್ ಉಪಕರಣ ಅಳವಡಿಸಿಕೊಂಡು ಸಹಾಯಧನಕ್ಕೆ ರೈತರಿಂದ ಅರ್ಜಿ ಸ್ವೀಕರಿಸಲಾಗಿತ್ತು. ಈಗಾಗಲೇ ಸಾಕಷ್ಟು ರೈತರಿಗೆ ಇಲಾಖೆಯಿಂದ ಸಹಾಯಧನ ಮಂಜೂರಾಗಿದ್ದು ರೈತರ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗಿದೆ.ಈ ಸಂಬಂಧ ಕಚೇರಿಯಲ್ಲಿ ತಾಕು ಪರಿಶೀಲಿಸಿ ಸಹಾಯಧನ ಪಾವತಿಸಲು ರೈತರು ಸಲ್ಲಿಸಿರುವ ಅರ್ಜಿಗಳಲ್ಲಿ ಕೆಲವು ದಾಖಲಾತಿಗಳನ್ನು ಲಗತ್ತಿಸಿರುವುದಿಲ್ಲ. ಕೆಲ ನ್ಯೂನತೆಗಳಿಂದ ಸಹಾಯಧನ ಪಾವತಿಸಲು ತೊಡಕಾಗಿದೆ.
ಆದ್ದರಿಂದ ತಾಲೂಕಿನ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರು ಸಹಾಯಧನ ಮಂಜೂರಾಗದೇ ಇದ್ದಲ್ಲಿ ತಕ್ಷಣ ತೋಟಗಾರಿಕೆ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲಾತಿ ನೀಡಬೇಕು. ನ್ಯೂನತೆ ಇದ್ದಲ್ಲಿ ಮಾಹಿತಿ ಪಡೆದು ಕ್ರಮವಹಿಸಲು ರೈತಬಾಂಧವರಲ್ಲಿ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
No comments:
Post a Comment