ಚಲನಚಿತ್ರಗಳಲ್ಲಿನ ಉತ್ತಮ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಬಿ. ರಾಮು
ಚಾಮರಾಜನಗರ, ನ. 24 :- ಸದಭಿರುಚಿಯ ಚಲನಚಿತ್ರಗಳನ್ನು ವೀಕ್ಷಿಸುವ ಜನರು ಅವುಗಳಲ್ಲಿರುವ ಉತ್ತಮ ಸಂದೇಶಗಳನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಅಭಿಪ್ರಾಯಪಟ್ಟರು.ನಗರತದ ಸಿಂಹ ಮೂವೀ ಪ್ಯಾರಡೈಸ್ ಚಿತ್ರಮಂದಿರದÀಲ್ಲಿಂದು ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ಕನ್ನಡ ಚಲನಚಿತ್ರಗಳ ಪ್ರದರ್ಶನ ಕುರಿತು ಆಯೋಜಿಸಲಾಗಿದ್ದ ಚಿತ್ರೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆ ಕಲೆಗಳ ತವರು. ಇಲ್ಲಿಯ ಜನ ಕಲೆಯ ಅರಾಧಕರು. ಕಲಾರಂಗಕ್ಕೆ ಜಿಲ್ಲೆ ತನ್ನದೆ ಆದ ಕೊಡುಗೆ ನೀಡಿದೆ. ರಂಗಭೂಮಿ ಹಾಗೂ ಚಲನಚಿತ್ರರಂಗಕ್ಕೆ ಹಲವಾರು ಪ್ರತಿಭೆಗಳನ್ನು ಸಹ ನೀಡಿದೆ. ಡಾ. ರಾಜ್‍ಕುಮಾರ್ ಅವರು ನಮ್ಮ ನಾಡಿನವರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು.
ಚಲನಚಿತ್ರಗಳು ಕಲಾತ್ಮಕವಾಗಿ ಮೂಡಿ ಬರಬೇಕು. ಜನತೆಯನ್ನು ತಲುಪುವÀಂತಹ ಉತ್ತಮ ಸಂದೇಶಗಳನ್ನು ಚಿತ್ರಗಳು ಒಳಗೊಂಡಿರಬೇಕು. ಈ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರಗಳನ್ನು ವಾರದ 7 ದಿನಗಳು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಜನರಿಗೆ ಮಾಡಿಕೊಟ್ಟಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ ಗಾಯತ್ರಿ ಅವರು ಮಾತನಾಡಿ ಚಲನಚಿತ್ರವು ಅತ್ಯಂತ ವೇಗವಾಗಿ ಜನರನ್ನು ತಲುಪುವ ಮಾಧ್ಯಮವಾಗಿದೆ. ಆದರೂ ಇತ್ತೀಚೆಗೆ ಕಲಾತ್ಮಕ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಒಳ್ಳೆಯ ಚಲನಚಿತ್ರಗಳನ್ನು ನೋಡುವ ಮೂಲಕ ಜೀವನಾದಶರ್Àಗಳನ್ನು ನಾವು ಮೈಗೂಡಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎಚ್. ಹರೀಶ್‍ಕುಮಾರ್ ಅವರು ಮಾತನಾಡಿ ಚಲನಚಿತ್ರಗಳು ಕೇವಲ ಮನರಂಜನೆಯಷ್ಟೆ ಅಲ್ಲ. ಅದರ ಉದ್ದೇಶ ಸಫಲವಾಗಬೇಕು. ಕಲಾತ್ಮಕ ಚಿತ್ರಗಳು ಪ್ರಶಸ್ತಿಗಾಗಿ ತಯಾರಾಗದೆ ಹೆಚ್ಚಿನ ಜನರನ್ನು ತಲುಪುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಂಗವಾಹಿನಿ ಸಂಸ್ಥೆಯ ಸಿ. ಎಂ. ನರಸಿಂಹಮೂರ್ತಿ ಕನ್ನಡಗೀತೆ ಹಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎ. ರಮೇಶ್, ಸಿಂಹ ಮೂವೀ ಪ್ಯಾರಡೈಸ್ ಚಿತ್ರಮಂದಿರದ ಮಾಲೀಕರಾದ ಎ. ಜಯಸಿಂಹ, ಇಲಾಖೆಯ ಸುರೇಶ್, ಜಯಶಂಕರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮೊಬೈಲ್ ಆ್ಯಪ್‍ಬಳಕೆ ರೈತಸ್ನೇಹಿಯಾಗಿದೆ: ಜಿಲ್ಲಾಧಿಕಾರಿ ಬಿ. ರಾಮು
ಚಾಮರಾಜನಗರ, ನ. 24 - ರೈತರು ತಮ್ಮದೆ ಮೊಬೈಲ್‍ಅ್ಯಪ್ ಬಳಸಿ ತಾವು ಬೆಳೆದ ಬೆಳೆಯ ಮಾಹಿತಿಯನ್ನು ತಾವೇ ಸರ್ಕಾರಕ್ಕೆ ಸಲ್ಲಿಸುವ ಮೊಬೈಲ್‍ಅ್ಯಪ್ ತಂತ್ರಜ್ಞಾನ ವ್ಯವಸ್ಥೆ ರೈತಸ್ನೇಹಿಯಾಗಿದೆ ಎಂದು ಜಿಲ್ಲಾಧಿಕಾರಿ ಬಿ ರಾಮು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆ.ಡಿ.ಪಿ ಸಭಾಂಗಣದಲ್ಲಿ ನಡೆದ ಬೆಳೆ ಸಮೀಕ್ಷೆ ಕುರಿತು ರೈತರಿಗೆ ಮೊಬೈಲ್ ಆ್ಯಪ್ ಬಳಕೆ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರ ರೈತರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅಲ್ಲದೆ ಅಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿಯೂ ಮುಂದಿದೆ. ಅಂತಹ ಹೊಸ ಯೋಜನೆಗಳಲ್ಲಿ ಈ ಮೊಬೈಲ್ ಆ್ಯಪ್ ಬಳಕೆ ಸಹ ಒಂದಾಗಿದೆ. ರೈತರು ತಮ್ಮ ಬೆಳೆಯ ವಿವರವನ್ನು ತಾವೇ ಮೊಬೈಲ್ ಆ್ಯಪ್ ಮೂಲಕ ಅಪ್‍ಲೋಡ್ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬಹುದು. ಈ ಮಾಹಿತಿ ಅನುಸರಿಸಿ ಸರ್ಕಾರ ಕೂಡಲೇ ಅಗತ್ಯ ನೆರವು ನೀಡಲು ಸಹಾಯಕವಾಗುತ್ತದೆ ಎಂದರು.
ಮೊಬೈಲ್ ಹಾಗೂ ಅಂತಜಾಲ ಸಂಪರ್ಕ ಹೊಂದಿರುವ ರೈತರು ತಮ್ಮಲ್ಲಿರುವ 4.5 ವರ್ಷನ್ ಮೊಬೈಲ್‍ನಿಂದ ಬೆಳೆ ಸಮೀಕ್ಷೆ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು, ಅಧಾರ್ ಸಂಖ್ಯೆ ನಮೂದಿಸಿ ನಂತರ ಜಮೀನಿನ ಸರ್ವೇ ನಂಬರ್, ಬೆಳೆ ಬೆಳೆಯುವ ಋತುಮಾನ, ನೀರಾವರಿ ಅಥವಾ ಮಳೆಯಾಶ್ರ್ರಿತ ಭೂಮಿ, ಬೆಳೆಯ ವಿವರಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಹಂತಹಂತವಾಗಿ ದಾಖಲಿಸಬೇಕು ಎಂದು ತಿಳಿಸಿದರು.
ಮಾಹಿತಿಯನ್ನು ಡೌನ್‍ಲೋಡ್ ಮಾಡುವ ಹಾಗೂ ಅಪ್‍ಲೋಡ್ ಮಾಡುವ ಸಮಯ ಹೊರತುಪಡಿಸಿ ಉಳಿದ ವೇಳೆ ಅಂತರ್ಜಾಲದ ಅಗತ್ಯವಿರುವುದಿಲ್ಲ. ಜಮೀನಿನ ನಕ್ಷೆಯು ಕೂಡ ಈ ಮೊಬೈಲ್‍ಆ್ಯಪ್‍ನಿಂದ ಲಭ್ಯವಾಗಲಿದೆ. ರೈತರು ತಮ್ಮ ಬೆಳೆಯ ಪ್ರಮಾಣವನ್ನು ಛಾಯಾಚಿತ್ರದೊಂದಿಗೆ ನಮೂದಿಸಬಹುದು. ರೈತರ ಹೆಸರು, ಅವರ ಜಮೀನಿನ ವಿಸ್ತೀರ್ಣವನ್ನು ನೇರವಾಗಿ ಭೂಮಿ ವ್ಯವಸ್ಥೆಯ ಸಂಪರ್ಕದೊಂದಿಗೆ ಪಡೆಯಬಹುದಾಗಿದೆ ಎಂದರು.
ಬೆಳೆ ವಿಮೆ ಯೋಜನೆಯಡಿ ರೈತರನ್ನು ನೊಂದಾಯಿಸಲು ಈ ಆ್ಯಪ್ ನೆರವಾಗಲಿದೆ. ಕನಿಷ್ಠ ಬೆಂಬಲ ಬೆಲೆಯ ಯೋಜನೆಯಲ್ಲಿ ಪಾಲ್ಗೊಳ್ಳುವ ರೈತರನ್ನು ಗುರುತಿಸಬಹುದು. ಅಲ್ಲದೆ ಸಹಾಯಧನವನ್ನು ನೇರವಾಗಿ ರೈತರ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಜಮಾ ಮಾಡಲು ಉತ್ತಮ ವ್ಯವಸ್ಥೆಯಾಗಲಿದೆ ಇದನ್ನು ಜಿಲ್ಲೆಯ ಹೆಚ್ಚಿನ ರೈತರು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಕೃಷಿ ಉಪನಿರ್ದೇಶಕರಾದ ಯೋಗೇಶ್, ಜಿಲ್ಲಾ ಸಾಂಖ್ಯಿಕ ಇಲಾಖೆ ಉಪನಿರ್ದೇಶಕರಾದ ಕೃಷ್ಣಮೂರ್ತಿ ಹಾಗೂ ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
ಬೆಳೆ ಸಮೀಕ್ಷೆ ಕುರಿತ ಮೊಬೈಲ್‍ಆ್ಯಪ್ ಬಳಕೆ ಬಗ್ಗೆ ಪವರ್ ಪಾಯಿಂಟ್ ಮೂಲಕ ಕಾರ್ಯಾಗಾರದಲ್ಲಿ ಹಾಜರಿದ್ದ ರೈತರಿಗೆ ಮಾಹಿತಿ ನೀಡಲಾಯಿತು.
No comments:
Post a Comment