Monday, 31 July 2017

ಪ್ರಕೃತಿ ವಿಕೋಪ ನಿರ್ವಹಣೆಗೆ ಸಮರ್ಪಕ ಸಿದ್ಧತೆ ಅಗತ್ಯ : ಡಾ. ಕೆ. ಹರೀಶ್ ಕುಮಾರ್ ( 31-07-2017)

ಪ್ರಕೃತಿ ವಿಕೋಪ ನಿರ್ವಹಣೆಗೆ ಸಮರ್ಪಕ ಸಿದ್ಧತೆ ಅಗತ್ಯ : ಡಾ. ಕೆ. ಹರೀಶ್ ಕುಮಾರ್                            .............................    VSS

ಚಾಮರಾಜನಗರ, ಜು. 31 :- ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಎದುರಿಸಲು ಅಗತ್ಯವಿರುವ ಸಿದ್ಧತೆ ಮಾಡಿಕೊಂಡು ಸನ್ನದ್ಧರಾಗಿರಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಕೃತಿ ವಿಕೋಪ ಅಥವ ಮಾನವ ನಿರ್ಮಿತ ವಿಕೋಪವಿರಲಿ ಮುನ್ನೆಚ್ಚರಿಕೆ ಕ್ರಮಗಳು ಅತಿ ಅಗತ್ಯ. ಇದಕ್ಕಾಗಿಯೇ ಜಿಲ್ಲಾಡಳಿತದ ವತಿಯಿಂದ ಪ್ರಕೃತಿ ವಿಕೋಪ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಕಾಲಕಾಲಕ್ಕೆ ನಡೆಸಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಲಾಗುತ್ತಿದೆ. ವಿಪತ್ತು ನಿರ್ವಹಣಾ ಕೇಂದ್ರಕ್ಕೆ 24*7 ಮಾದರಿಯಲ್ಲಿ ಸಿಬ್ಬಂದಿ ನಿಯೋಜಿಸಿ ಸಮರ್ಪಕವಾಗಿ ಮಾಹಿತಿ ಒದಗಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಅತಿವೃಷ್ಟಿ ಇಲ್ಲವೆ ಅನಾವೃಷ್ಟಿ ಸಂದರ್ಭದಲ್ಲಿ ಹಾನಿ ಸಂಭವಿಸಿದ ಕುರಿತು ವರದಿಗಳು ತ್ವರಿತವಾಗಿ ಬರಬೇಕಿದೆ. ಇದರಿಂದ ಶೀಘ್ರವಾಗಿ ಸಂತ್ರಸ್ಥರಿಗೆ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅತ್ಯಂತ ಚುರುಕಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಸಂದರ್ಭಕ್ಕೆ ಅನುಸಾರವಾಗಿ ಸ್ಪಂದಿಸಬೇಕಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಪ್ರಕೃತಿ ವಿಕೋಪದಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅರಣ್ಯ, ಹೆದ್ದಾರಿ, ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನಿತರ ಹಲವು ಕ್ಷೇತ್ರಗಳಲ್ಲಿ ತೊಂದರೆಗಳು ಉಂಟಾಗಬಹುದು. ಹೀಗಾಗಿ ನಿರ್ಧಿಷ್ಟ ಇಲಾಖೆಗೆ ಮಾತ್ರ ಪ್ರಕೃತಿ ವಿಕೋಪ ನಿರ್ವಹಣೆ ಸಾಧ್ಯವಾಗುವುದಿಲ್ಲ. ಎಲ್ಲ ಇಲಾಖೆಗಳೂ ಒಂದಿಲ್ಲೊಂದು ಕಾರಣದಿಂದ ಒಟ್ಟಾಗಿ ಪ್ರಕೃತಿ ವಿಕೋಪದಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಅಗತ್ಯ ವ್ಯವಸ್ಥೆಗೆ ಸಿದ್ಧsÀರಾಗಲೇಬೇಕಿದೆ ಎಂದರು.
 ಪ್ರಸ್ತುತ ಇರುವ ತುರ್ತು ನಿರ್ವಹಣಾ ಕೇಂದ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಸಲಕರಣೆಗಳು ಬೇಕಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಬೇಕು. ಪೂರ್ಣ ಪ್ರಮಾಣದ ಸಲಕರಣೆ ಪಟ್ಟಿಯನ್ನು ಅಂತಿಮಗೊಳಿಸಿ ಸಲ್ಲಿಸಿದರೆ ಎಲ್ಲ ಅಂಶಗಳನ್ನು ಒಳಗೊಂಡ ಪ್ರಸ್ತಾವನೆವೊಂದನ್ನು ಸಲ್ಲಿಸಬಹುದು. ಇದಕ್ಕಾಗಿ ಅಧಿಕಾರಿಗಳು ಕೂಡಲೇ ಪ್ರತ್ಯೇಕ ಸಭೆ ನಡೆಸಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
 ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಪಾತ್ರವೂ ಸಹ ಪ್ರಮುಖವಾಗಲಿದೆ. ಸಂತ್ರಸ್ಥ ಪ್ರದೇಶಗಳಲ್ಲಿ ನೀರು, ಆಹಾರ ಪೂರೈಸುವ ಪರಿಸ್ಥಿತಿಯೂ ಸಹ ಕೆಲವೊಮ್ಮೆ ಅನಿವಾರ್ಯವಾಗಬಹುದು. ಈ ಎಲ್ಲಾ ಹಿನ್ನೆಲೆಯಲ್ಲಿ ಮತ್ತಷ್ಟು ಇಲಾಖೆಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಮುಂದಿನ ಸಭೆಯ ವೇಳೆಗೆ ವಿಪತ್ತು ನಿರ್ವಹಣೆಯಲ್ಲಿ ಸಹಕಾರಿಯಾಗಲಿರುವ ಇಲಾಖೆಗಳ ಅಧಿಕಾರಿಗಳನ್ನು ಆಹ್ವಾನಿಸುವಂತೆ ಜಿಲ್ಲಾಧಿಕಾರಿ  ಹರೀಶ್ ಕುಮಾರ್ ನಿರ್ದೇಶನ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ ಪ್ರಕೃತಿ ವಿಕೋಪ ನಿರ್ವಹಣೆಗೆ ಅಗ್ನಿಶಾಮಕ, ಗೃಹರಕ್ಷಕ ದಳ ಇಲಾಖೆಗಳ ಪಾತ್ರವೂ ಸಹ ಅತ್ಯಂತ ಅವಶ್ಯಕವಾಗಿದೆ. ಆರೋಗ್ಯ ಪೂರಕ ಕಾರ್ಯಾಗಾರವನ್ನು ನಡೆಸಿ ಸಿಬ್ಬಂದಿಗೆ ಮಾರ್ಗದರ್ಶನ ಮಾಡಬೇಕಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಅಗ್ನಿಶಾಮಕ ಅಧಿಕಾರಿ ನವೀನ್, ಗೃಹರಕ್ಷಕ ದಳದ ಜಿಲ್ಲಾ ಸಮಾಧೇಷ್ಠರಾದ ಬಸವರಾಜು, ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮಹದೇಶ್ವರಬೆಟ್ಟ ಹುಂಡಿ ಪರ್ಕಾವಣೆ:1,05,65,762/- ಚಿನ್ನದ  ಪದಾರ್ಥಗಳು 0. 041 ( ನಲವತ್ತೊಂದು ಗ್ರಾಂ) ಮತ್ತು ಬೆಳ್ಳಿ  ಪದಾರ್ಥಗಳು 1.005(ಒಂದು ಕೆ.ಜಿ. ಐದು ಗ್ರಾಂ)                                                ..............    VSS


ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕು, ಮಹದೇಶ್ವರಬೆಟ್ಟ:- ದಿನಾಂಕ:31-07-2017ರಂದು ಬೆಳಿಗ್ಗೆ  7.00 ಗಂಟೆಗೆ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಹಾಗೂ ಚಾಮರಾಜನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ.ಎಂ.ಗಾಯತ್ರಿ, ಕೆ.ಎ.ಎಸ್.(ಹಿರಿಯ ಶ್ರೇಣಿ) ರವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಉಪಸ್ಥಿತಿಯಲ್ಲಿ ಹುಂಡಿಗಳನ್ನು ತೆರೆಯಲಾಗಿದ್ದು, ಸದರಿ ಹುಂಡಿಗಳ  ಪರ್ಕಾವಣೆಯಲ್ಲಿ ಶ್ರೀ ಮ.ಮ. ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ  ಪ್ರಭಾರ  ಉಪ ಕಾರ್ಯದರ್ಶಿಗಳಾದ ಶ್ರೀ ಎಂ.ಬಸವರಾಜು  ರವರು, ಸಹಾಯಕ ಅಭಿಯಂತರರಾದ ಶ್ರೀ ಆರ್.ಎಸ್.ಮನುವಾಚಾರ್ಯ, ಲೆಕ್ಕಾಧೀಕ್ಷಕರಾದ ಮಹದೇವಸ್ವಾಮಿ,  ಕಛೇರಿಯ ಅಧೀಕ್ಷಕರಾದ  ಶ್ರೀ ಬಿ.ಮಾದರಾಜು, ಆರೋಗ್ಯ ನಿರೀಕ್ಷಕರಾದ ಶ್ರೀಕಾಂತ್ ವಿಭೂತಿ ಹಾಗೂ ದೇವಸ್ಥಾನದ ಎಲ್ಲಾ ನೌಕರರುಗಳು, ಚಾಮರಾಜನಗರ ಜಿಲ್ಲಾಧಿಕಾರಿಯವರ ಕಛೇರಿಯ  ಪ್ರಥಮ ದರ್ಜೆ ಸಹಾಯಕರಾದ ಶ್ರೀ ಮೋಹನ್ ಕುಮಾರ್ ಮತ್ತು ಶ್ರೀ ಷಣ್ಮುಗ ವರ್ಮ, ಆರಕ್ಷಕ ನಿರೀಕ್ಷಕರು, ಮಹದೇಶ್ವರಬೆಟ್ಟ ಹಾಗೂ ಆರಕ್ಷಕ  ಸಿಬ್ಬಂದಿ ವರ್ಗ, ಎಸ್.ಬಿ.ಎಂ. ವ್ಯವಸ್ಥಾಪಕರಾದ ಸೆಂದಿಲ್ ನಾಥನ್  & ಸಿಬ್ಬಂದಿ ವರ್ಗದವರು ಹಾಜರಿದ್ದರು. ಇವರೆಲ್ಲರ ಸಹಕಾರದಿಂದ ಹುಂಡಿ ಪರ್ಕಾವಣೆ ಮತ್ತು ಎಣಿಕೆಯ ಕಾರ್ಯ ಸುಗಮವಾಗಿ ಜರುಗಿತು ಸದರಿ ದಿವಸದಂದು ಹುಂಡಿ ಪರ್ಕಾವಣೆಯಿಂದ ಒಟ್ಟು ರೂ.  1,05,65,762/- (  ಒಂದು ಕೋಟಿ ಐದು ಲಕ್ಷದ ಅರವತ್ತೈದು ಸಾವಿರದ ಏಳುನೂರ  ಅರವತ್ತೇರಡು ಮಾತ್ರ) ಬಂದಿರುತ್ತದೆ. ಇದಲ್ಲದೇ ಚಿನ್ನದ  ಪದಾರ್ಥಗಳು 0. 041 ( ನಲವತ್ತೊಂದು ಗ್ರಾಂ) ಮತ್ತು ಬೆಳ್ಳಿ  ಪದಾರ್ಥಗಳು 1.005(ಒಂದು ಕೆ.ಜಿ. ಐದು ಗ್ರಾಂ) ದೊರೆತಿರುತ್ತದೆ.


ಗೌರಿ ಗಣೇಶ ಪ್ರತಿಷ್ಠಾಪನೆ : ಅನುಮತಿ ಕಡ್ಡಾಯ            ..............    VSS

ಚಾಮರಾಜನಗರ, ಜು. 31 :– ಜಿಲ್ಲೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸಂಘಸಂಸ್ಥೆಗಳು ನಿಗದಿಮಾಡಿರುವ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವುದರ ಜತೆಗೆ ಕಡ್ಡಾಯವಾಗಿ ಅನುಮತಿ ಪಡೆದು ಆಗಸ್ಟ್ 15ರೊಳಗೆ ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.
ಗೌರಿ ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘಗಳ ಉಸ್ತುವಾರಿ ಮುಖ್ಯಸ್ಥರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಕಾರ್ಯಕ್ರಮದ ಆಯೋಜನೆಗೆ ಸಂಬಂಧಿಸಿದಂತೆ ಎಲ್ಲ ಆಗುಹೋಗುಗಳಿಗೆ ಜವಾಬ್ದಾರರೆಂಬ ಬಗ್ಗೆ, ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ ಸ್ಥಳೀಯ ನ್ಯಾಯಾಲಯ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ನೀಡುವ ಎಲ್ಲಾ ಸೂಚನೆಗಳನ್ನು ಪಾಲಿಸುವ ಬಗ್ಗೆ ಅನ್ಯಧರ್ಮ, ಮತ, ಸಂಘಟನೆ, ಜನಾಂಗ, ಸಾರ್ವಜನಿಕ ವ್ಯಕ್ತಿಗಳಿಗೆ ನೋವಾಗದಂತೆ ನಡೆದುಕೊಳ್ಳುವ ಬಗ್ಗೆ ಮುಚ್ಚಳಿಕೆ ಪತ್ರವನ್ನು ಸಲ್ಲಿಸಬೇಕು.
ಪ್ರತಿಷ್ಠಾಪನೆ ದಿನ ವಿಶೇಷ ಕಾರ್ಯಕ್ರಮಗಳ ಆಯೋಜನೆ, ಭಾಗವಹಿಸಲಿರುವ ವಿಶೇಷ ಅತಿಥಿಗಳ ವಿವರ, ಸಾಂಸ್ಕøತಿಕ ಕಾರ್ಯಕ್ರಮಗಳು, ಮೆರವಣಿಗೆ, ವಿಸರ್ಜನಾ ದಿನ, ಮೆರವಣಿಗೆಯ ಮಾರ್ಗ ವಿವರಗಳನ್ನು ಸಲ್ಲಿಸಬೇಕು. (ಠಾಣಾಧಿಕಾರಿಗಳೊಂದಿಗೆ ಖುದ್ದು ಚರ್ಚಿಸಿ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು)
ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಸ್ಥಳ, ವಿಳಾಸ ಹಾಗೂ ಸ್ಥಳದ ಮಾಲೀಕರಿಂದ ಪಡೆದ ಅನುಮತಿ ಪತ್ರ (ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆ, ಖಾಸಗಿ ವ್ಯಕ್ತಿಗಳು), ಸ್ಥಳೀಯ ವಿದ್ಯುತ್ ಪ್ರಾಧಿಕಾರದಿಂದ ಪಡೆದ ನಿರಾಪೇಕ್ಷಣ ಪತ್ರ, ಅಗ್ನಿಶಾಮಕ ದಳದವರಿಂದ ಪಡೆದ ನಿರಾಪೇಕ್ಷಣ ಪತ್ರ ಸಲ್ಲಿಸಬೇಕು. ಸ್ಥಳೀಯ ಠಾಣೆಯಿಂದ ಧ್ವನಿವರ್ಧಕ ಬಳಕೆಗೆ ಪಡೆದ ಅನುಮತಿ ಪತ್ರವನ್ನು ನೀಡಬೇಕು.
ಕಾರ್ಯಕ್ರಮ ಸಂಬಂಧ ಹಾಕಲಾಗುವ ಎಲ್ಲಾ ಫ್ಲೆಕ್ಸ್, ಪೋಸ್ಟರ್, ಫೋಟೋ ಇನ್ನಿತರ ಸಾಮಗ್ರಿಗಳಿಗೆ ಸ್ಥಳೀಯ ಆಡಳಿತದಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ಅನ್ಯಧರ್ಮ, ಮತ, ಸಂಘಟನೆ, ಜನಾಂಗ, ಸಾರ್ವಜನಿಕ ವ್ಯಕ್ತಿಗಳಿಗೆ ನೋವುಂಟು ಮಾಡದಂತಿರಬೇಕು. ವಿಸರ್ಜನಾ ಸ್ಥಳದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮ, ಜೀವರಕ್ಷಕ ಸಾಧನಗಳ ವಿವರ ಒದಗಿಸಬೇಕು.
ಪ್ರತಿಷ್ಠಾಪಿತ ಮೂರ್ತಿಯ ರಕ್ಷಣೆಗೆ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಬೇಕು. ನಿಯೋಜಿತರಾದವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆವುಳ್ಳ ಭಾವಚಿತ್ರ ಹೊಂದಿದ ಐಡಿ ಕಾರ್ಡ್, ಹಗಲುರಾತ್ರಿ ನಿಯೋಜಿಸಿರುವ ವೇಳಾಪಟ್ಟಿ ನೀಡಬೇಕು. ಪ್ರತಿಷ್ಠಾಪಿತ ಸ್ಥಳದಲ್ಲಿ ಒಂದು ರಿಜಿಸ್ಟರ್ ಇಟ್ಟು ಕಾವಲು ವಿವರವನ್ನು ನಮೂದಿಸಬೇಕು.
ಸಾರ್ವಜನಿಕರಿಂದ ಗಣಪತಿ ಪ್ರತಿಷ್ಠಾಪನೆಗೆ ಬಲವಂತವಾಗಿ ಚಂದಾ ವಸೂಲಿ ಮಾಡುವುದು ಕಾನೂನುಬಾಹಿರವಾಗಿದೆ. ಲಾಟರಿ ಇನ್ನಿತರ ಯೋಜನೆಗಳ ಮುಖಾಂತರವೂ ಹಣ ಸಂಗ್ರಹಣೆ ಮಾಡುವಂತಿಲ್ಲ. ಇಂತಹ ಪ್ರಕ್ರಿಯೆ ಕಂಡು ಬಂದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿರುವಂತೆ ಮಣ್ಣಿನಿಂದ ಮಾಡಿದ ಬಣ್ಣರಹಿತ ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಅಲಂಕಾರಕ್ಕೆ ನೈಸರ್ಗಿಕ ಸಾಮಗ್ರಿಗಳನ್ನು ಬಳಸಬೇಕು. ಸಾಧ್ಯವಾದಷ್ಟು ಮನೆಯಲ್ಲಿ ಬಕೆಟ್‍ಗಳಲ್ಲಿ ನೀರು ತುಂಬಿಸಿ ಮೂರ್ತಿಯನ್ನು ವಿಸರ್ಜಿಸಬೇಕು. ಇಲ್ಲವೇ ಲಭ್ಯವಿರುವ ಕೆರೆಗಳಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಸಂಚಾರಿ ವಿಸರ್ಜನಾ ವಾಹನ ಬಳಸಿ ವಿಸರ್ಜನೆ ಮಾಡಬೇಕು. ವಿಸರ್ಜನೆಗೆ ಮುನ್ನ ಅಲಂಕಾರಿಕ ವಸ್ತುಗಳನ್ನು ತೆಗೆಯಬೇಕು. ವಿಸರ್ಜನಾ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ನೋಡಿಕೊಳ್ಳಬೇಕು.
ಗಣಪತಿ ಮೂರ್ತಿ ಷ್ರತಿಷ್ಠಾಪನೆ ಸಂಬಂಧ ನೀಡಲಾಗಿರುವ ಎಲ್ಲಾ ಕ್ರಮಗಳನ್ನು ಪಾಲನೆ ಮಾಡಬೇಕು. ನಿಬಂಧನೆಗಳನ್ನು ಉಲ್ಲಂಘಿಸುವುದು, ಶಾಂತಿಭಂಗ ಉಂಟುಮಾಡುವುದು ಕಂಡುಬಂದಲ್ಲಿ ಪೊಲೀಸ್ ಅಧೀಕ್ಷಕರು, ದೂರವಾಣಿ ಸಂಖ್ಯೆ 08226-222243, ಮೊಬೈಲ್ 9480804601, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದೂರವಾಣಿ ಸಂಖ್ಯೆ 08226-225979, ಮೊಬೈಲ್ 9480804602, ಡಿಎಸ್‍ಪಿ, ಚಾಮರಾಜನಗರ ದೂರವಾಣಿ ಸಂಖ್ಯೆ 08226-222090, ಮೊಬೈಲ್ 9480804620, ಡಿಎಸ್‍ಪಿ ಕೊಳ್ಳೇಗಾಲ, ದೂರವಾಣಿ ಸಂಖ್ಯೆ 08224-252840, ಮೊಬೈಲ್ 9480804621, ಜಿಲ್ಲಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08226-222383, ಮೊಬೈಲ್ 9480804600ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಆ. 18 ರಂದು ಜಿಲ್ಲಾ ಅಭಿವ್ಥದ್ಧಿ ಸಮನ್ವಯ, ಉಸ್ತುವಾರಿ ಸಮಿತಿ ಸಭೆ 

ಚಾಮರಾಜನಗರ, ಜು. 31 - ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 18ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಪ್ರಶಸ್ತಿಗೆ ವ್ಯಕ್ತಿ, ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಚಾಮರಾಜನಗರ, ಜು. 31:- ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುವ ವೈಯಕ್ತಿಕ ಹಾಗೂ ಸಂಸ್ಥೆಗಳಿಗೆ ಪ್ರಶಸ್ತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಿದೆ.
ಕನಿಷ್ಟ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಸಂಸ್ಥೆಗೆ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಮಕ್ಕಳ ದಿನಾಚರಣೆಯಂದು ಗೌರವಿಸಲಾಗುವುದು.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಆಗಸ್ಟ್ 31ರೊಳಗೆ ಸಲ್ಲಿಸಬೇಕು ಎಂದು ಕಚೇರಿ ಪ್ರಕಟಣೆ ತಿಳಿಸಿದೆ.



ಆಗಸ್ಟ್ 10 ರಂದು ಜಿಲ್ಲೆಗೆ ಸಿ.ಎಂ. ಭೇಟಿ ಹಿನ್ನಲೆ : ಜನಪ್ರತಿನಿಧಿ, ಜಿಲ್ಲಾಧಿಕಾರಿಗಳಿಂದ ಪೂರ್ವಭಾವಿ ಸಭೆ (29-07-2017)


ಆಗಸ್ಟ್ 10 ರಂದು ಜಿಲ್ಲೆಗೆ ಸಿ.ಎಂ. ಭೇಟಿ ಹಿನ್ನಲೆ : ಜನಪ್ರತಿನಿಧಿ, ಜಿಲ್ಲಾಧಿಕಾರಿಗಳಿಂದ ಪೂರ್ವಭಾವಿ ಸಭೆ 

ಚಾಮರಾಜನಗರ, ಜು. 29 :- ಮಾಜಿ ರಾಜ್ಯಪಾಲರು ಹಾಗೂ ಧೀಮಂತ ಹಿರಿಯ ನಾಯಕರಾದ  ದಿವಂಗತ ಬಿ. ರಾಚಯ್ಯ ಅವರ ಸ್ಮಾರಕ ನಿರ್ಮಾಣ ಶಿಲಾನ್ಯಾಸ ಹಾಗೂ ನಗರದ ಬಿ. ರಾಚಯ್ಯ ಜೋಡಿ ರಸ್ತೆಯ ಅಗಲೀಕರಣ ಕಾಮಗಾರಿ ಚಾಲನೆಗೆ ಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯ ಅವರು ಆಗಸ್ಟ್ 10 ರಂದು ಆಗಮಿಸಲಿರುವ ಹಿನ್ನಲೆಯಲ್ಲಿ ಇಂದು ಕಾರ್ಯಕ್ರಮ ಸಂಬಂಧ ನಗರದಲ್ಲಿ ಪೂರ್ವಸಿದ್ದತೆ ಸಭೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ   ಲೋಕಸಭಾ ಸದಸ್ಯರಾದ  ಆರ್. ಧ್ರುವನಾರಾಯಣ, ಶಾಸಕರು ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿ. ಪುಟ್ಟರಂಗಶೆಟ್ಟಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಆದ ಎ.ಆರ್. ಕೃಷ್ಣಮೂರ್ತಿ ಅವರ ಜಿಲ್ಲಾ ಪಂಚಾಯತ್ ಸದಸ್ಯರಾದ ಎ.ಆರ್. ಬಾಲರಾಜು ಜಿಲ್ಲಾಧಿಕಾರಿ  ಡಾ. ಕೆ. ಹರೀಶ್ ಕುಮಾರ್ ಅವರ ಸಮ್ಮುಖದಲ್ಲಿ  ಕಾರ್ಯಕ್ರಮ ಆಯೋಜನೆ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.
ಲೋಕಸಭಾ ಸದಸ್ಯರಾದ ಆರ್. ದ್ರುವನಾರಾಯಣ ಅವರು ಮಾತನಾಡಿ ಬಿ. ರಾಚಯ್ಯ  ಅವರ 95ನೇ ವರ್ಷಾಚರಣೆ ಸ್ಮರಣಾರ್ಥ ಚಾಮರಾಜನಗರ ತಾಲ್ಲೂಕಿನ ಆಲೂರಿನಲ್ಲಿ ಬಿ. ರಾಚಯ್ಯ ನವರ ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.  ಈ ಹಿನ್ನಲೆಯಲ್ಲಿ  ಆಲೂರು ಗ್ರಾಮದಲ್ಲಿ ಕಾರ್ಯಕ್ರಮಕ್ಕೆ ಅಗತ್ಯ ವಿರುವ ಎಲ್ಲಾ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಸ್ಮಾರಕ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಶಾಮಿಯಾನ, ವೇದಿಕೆ ಇತರ ಆಸನಗಳ ವ್ಯವಸ್ಥೆಯನ್ನು ಕೈಗೊಳ್ಳಬೇಕು. ನಾಗರಿಕರು,  ಗಣ್ಯರು, ಆಹ್ವಾನಿತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಗೊಳ್ಳುವುದರಿಂದ ಯಾವುದೇ ತೊಂದರೆಯಾಗದಂತೆ ಎಲ್ಲಾ ಸಿದ್ದತೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಧ್ರುವನಾರಾಯಣ ಅವರು ತಿಳಿಸಿದರು.
ನಗರದ ಪ್ರಮುಖ ಬಿ. ರಾಚಯ್ಯ ಜೋಡಿ ರಸ್ತೆ ಅಗಲೀಕರಣ ಕಾಮಗಾರಿಗೂ ಆಗಸ್ಟ್ 10 ರಂದು ಮುಖ್ಯಮಂತ್ರಿಯವರು ಚಾಲನೆ ನೀಡಲಿದ್ದಾರೆ. ಹೀಗಾಗಿ ನಗರದಲ್ಲಿ ಸಾರ್ವಜನಿಕ ಸಮಾರಂಭ ಆಯೋಜನೆಗೆ  ಅತ್ಯಂತ ಪ್ರಶಸ್ತವಾದ ಸ್ಥಳ ಗುರುತಿಸಿ ಆಯ್ಕೆ ಮಾಡುವಂತೆಯೂ ಧ್ರುವನಾರಾಯಣ ಅವರು ತಿಳಿಸಿದರು.
ಮಾಜಿ ಶಾಸಕರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ  ಮಾಜಿ ಅಧ್ಯಕ್ಷರು ಮತ್ತು ಬಿ. ರಾಚಯ್ಯ ನವರ ಪುತ್ರರು ಆದ ಎ. ಆರ್. ಕೃಷ್ಣಮೂರ್ತಿ ಅವರು ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಾಸ್ತು ಶಿಲ್ಪಿ ತಯಾರಿಸಿರುವ ಮಾದರಿ ನೀಲಿ ನಕ್ಷೆ ಹಾಗೂ ಅಂದಾಜು ಪಟ್ಟಿಯನ್ನು ಸಭೆಯಲ್ಲಿ ಪ್ರದರ್ಶಿಸಿದರು.  ಸ್ಮಾರಕ ನಿರ್ಮಾಣಕ್ಕೆ ಅವಶ್ಯವಿರುವ ಹೆಚ್ಚುವರಿ ಅನುದಾನದ ಬಗ್ಗೆಯೂ ಪ್ರಸ್ತಾಪಿಸಿದರು.
ಸ್ಮಾರಕ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿಕೊಡಲು ಮುಖ್ಯಮಂತ್ರಿಯವರನ್ನು ತಾವು ಸಹ ಖುದ್ದು ಮನವಿ ಮಾಡಿದ್ದೇವೆ. ಕಾರ್ಯಕ್ರಮಕ್ಕೆ ಅಗತ್ಯವಿರುವ ಸಹಕಾರವನ್ನು ತಮ್ಮ ಕುಟುಂಬ ವತಿಯಿಂದಲೂ ಸಂಪೂರ್ಣವಾಗಿ ನೀಡಲಿದ್ದೇವೆ ಎಂದು ಎ.ಆರ್. ಕೃಷ್ಣಮೂರ್ತಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಸ್ಮಾರಕಕ್ಕೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಯು ಅಚ್ಚುಕಟ್ಟಾಗಿ ಇರಬೇಕು. ಬಿ. ರಾಚಯ್ಯ ಜೋಡಿ ರಸ್ತೆ ಅಗಲೀಕರಣ ಕಾಮಗಾರಿ ಶಿಲಾನ್ಯಾಸ ಸಮಾರಂಭಕ್ಕೂ ಎಲ್ಲಾ ರೂಪುರೇಷಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಮಾತನಾಡಿ ಬಿ. ರಾಚಯ್ಯ ರವರ ಸ್ಮಾರಕ ನಿರ್ಮಾಣಕ್ಕೆ ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರದಿಂದ 1 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಸ್ಮಾರಕ ಶಿಲಾನ್ಯಾಸ ಹಾಗೂ ಜೋಡಿ ರಸ್ತೆ ಕಾಮಗಾರಿ ಅಗಲೀಕರಣ ಕಾಮಗಾರಿ  ಆರಂಭ ಸಮಾರಂಭಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಕೈಗೊಳ್ಳಲಾಗುವುದು. ನಗರದಲ್ಲಿ ಮುಖ್ಯಮಂತ್ರಿಯವರ ಸಾರ್ವಜನಿಕರ ಸಮಾರಂಭಕ್ಕೂ ಸೂಕ್ತ ಸ್ಥಳ ಗುರುತಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮುನಿರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಕೆ.ಎಚ್. ಸತೀಶ್, ನಿರ್ಮಿತಿ ಕೇಂದ್ರದ ಎಂಜಿನಿಯರ್ ವೃಷಬೇಂದ್ರ,  ಇತರರು ಸಭೆಯಲ್ಲಿ ಹಾಜರಿದ್ದರು.


ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ತುರ್ತಾಗಿ ಸ್ಪಂದಿಸಿ : ಎಸ್‍ಪಿ ಸೂಚನೆ

 ಚಾಮರಾಜನಗರ, ಜು. 29 - ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಕುರಿತು ದೂರುಗಳು ಬಂದಲ್ಲಿ ತಕ್ಷಣವೇ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಪೋಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸಂಬಂಧಿಸಿದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ  ತುರ್ತಾಗಿ ಸ್ಪಂದಿಸಬೇಕು. ಅಸ್ಪಶ್ಯತಾ ದೌರ್ಜನ್ಯ ತಡೆ ಕಾಯಿದೆ ಪ್ರಕಾರ ಪರಿಶಿಷ್ಟರಿಗೆ ರಕ್ಷಣೆ ಒದಗಿಸುವುದು ಪೊಲೀಸರ ಮುಖ್ಯ ಹೊಣೆಗಾರಿಕೆಯಾಗಿದೆ. ಪರಿಶಿಷ್ಟರ ಮೇಲೆ ಯಾವುದೇ ಭಾಗದಲ್ಲಿ ದೌರ್ಜನ್ಯ, ದಬ್ಬಾಳಿಕೆ ನಡೆದ ಕುರಿತು ದೂರುಗಳು ಬಂದರೆ ವಿಳಂಬ ಮಾಡದೆ ಪ್ರಕರಣ ದಾಖಲಿಸಿಕೊಂಡು ಅಗತ್ಯ ಪ್ರಕ್ರಿಯೆಗೆ ಮುಂದಾಗಬೇಕೆಂದು ತಿಳಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜನರ ಮೇಲೆ ಉಂಟಾಗುವ ಪ್ರಕರಣಗಳ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದರೆ ಅಥವಾ ಅನಗತ್ಯವಾಗಿ ತೊಂದರೆ ನೀಡುವುದು ಕಂಡುಬಂದರೆ ನೇರವಾಗಿ ತಮಗೆ ದೂರು ನೀಡಬಹುದು. ದೂರವಾಣಿ ಮೂಲಕವೂ ಸಂಪರ್ಕಿಸಬಹುದು. ಪರಿಶಿಷ್ಟರಿಗೆ ರಕ್ಷಣೆ ನೀಡುವ ವಿಷಯದಲ್ಲಿ ಪೊಲೀಸರು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿರುವುದಾಗಿ ಧಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಸಭೆಯಲ್ಲಿ ಮುಖಂಡರು ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಗಮನ ಹರಿಸಲಾಗುವುದು. ಸಭೆಯಲ್ಲಿ ಕೇಳಿಬಂದಿರುವ ದೂರುಗಳ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಲು ಸೂಚನೆ ನೀಡಲಾಗುವುದು. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಧಿಷ್ಟ ಅಂಶಗಳನ್ನು ಒಳಗೊಂಡ ಲಿಖಿತ ಪತ್ರವನ್ನು ನೀಡಿದಲ್ಲಿ ವಹಿಸಬೇಕಿರುವ ಮುಂದಿನ ಹಂತದ ಕ್ರಮಕ್ಕೆ ತಕ್ಷಣವೇ ಸ್ಪಂದಿಸಲು ನಿರ್ದೇಶನ ನೀಡಲಾಗುವುದು ಎಂದು ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಮಾತನಾಡಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅಧಿಕಾರಿಗಳು ಸರಿಯಾದ ಕ್ರಮವನ್ನು ವಹಿಸುತ್ತಿಲ್ಲವೆಂಬ ಬಗ್ಗೆ ಪರಿಶೀಲಿಸಲಾಗುವುದು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಯಾವುದೇ ವಿಳಂಬ ಧೋರಣೆ ಅನುಸರಿಸದೆ ತ್ವರಿತವಾಗಿ ಪರಿಹಾರ ಇತ್ಯರ್ಥಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪರಿಶಿಷ್ಟರು ಇತರೆ ವರ್ಗದವರ ಗಂಭೀರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಆಯಾ ಭಾಗದಲ್ಲೇ ಸಭೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ತಾವು ನಡೆಸಲು ಚಿಂತನೆ ಮಾಡಲಾಗಿದೆ. ವಿಶೇಷವಾಗಿ ನಾಗರಿಕರು ಜಿಲ್ಲಾ ಕೇಂದ್ರಕ್ಕೆ ಬಂದು ಸಮಸ್ಯೆ ನಿವೇದಿಸಿಕೊಳ್ಳಲು ಸಾಧ್ಯವಾಗದ ಸ್ಥಳಗಳಲ್ಲಿ ಸಭೆ ಆಯೋಜಿಸುವುದರಿಂದ ಜನರಿಗೂ ಅನುಕೂಲವಾಗುತ್ತದೆ. ಹಿರಿಯ ಅಧಿಕಾರಿಗಳಿಗೂ ಸಮಸ್ಯೆಯ ಸಂಪೂರ್ಣ ಚಿತ್ರಣ ಲಭಿಸಲಿದ್ದು ಪರಿಹಾರ ಕ್ರಮಗಳಿಗೆ ಸಾಧ್ಯವಾಗಲಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಮುಖಂಡರಾದ ಅರಕಲವಾಡಿ ನಾಗೇಂದ್ರ ಮಾತನಾಡಿ ಜಿಲ್ಲಾಡಳಿತದಿಂದ ನಡೆಸಲಾಗುವ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದೂರುಗಳನ್ನು ನೇರವಾಗಿ ಪ್ರಸ್ತಾಪಿಸಲು ಅವಕಾಶವಾಗುತ್ತಿಲ್ಲ. ಹೀಗಾದರೆ ಪರಿಹಾರ ಹೇಗೆ ದೊರಕುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಯವರು ಮುಂದಿನ ಸಭೆಗೆ ಎಲ್ಲರನ್ನೂ ಆಹ್ವಾನ ಮಾಡುವ ದಿಸೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಮತ್ತೋರ್ವ ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ ಮಾತನಾಡಿ ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುವ ಮೊಕದ್ದಮೆಗೆ ಹಾಜರಾಗುವ ಪರಿಶಿಷ್ಟರಿಗೆ ಪ್ರಯಾಣಭತ್ಯೆ, ಇತರ ಭತ್ಯೆಗಳನ್ನು ಸಕಾಲಕ್ಕೆ ನೀಡಬೇಕು ಎಂದರು.
ಇನ್ನೊಬ್ಬ ಮುಖಂಡರಾದ ಕೆ.ಎಂ. ನಾಗರಾಜು ಅವರು ಮಾತನಾಡಿ ಪರಿಶಿಷ್ಟರ ಮೇಲಿನ ದಬ್ಬಾಳಿಕೆ ಪ್ರಕರಣಗಳನ್ನು ಪ್ರತಿಭಟಿಸಿ ಗಮನ ಸೆಳೆಯುವ ಸಂದರ್ಭದಲ್ಲಿ ಪ್ರತಿಭಟನಾಕಾರರ ವಿರುದ್ಧವೇ ಕ್ರಮ ಕೈಗೊಳ್ಳಲಾಗುತ್ತಿದೆ. ಅಮಾಯಕರನ್ನು ಅನಗತ್ಯವಾಗಿ ಪ್ರಕರಣಗಳಲ್ಲಿ ಸಿಲುಕಿಸುವ ಯತ್ನವೂ ನಡೆಯುತ್ತಿದೆ. ಇಂತಹ ಕ್ರಮಗಳು ನಿಲ್ಲಬೇಕಿದೆ ಎಂದರು.
ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಡೆಯುತ್ತಿದ್ದು ಇದಕ್ಕೆ ಯಾವುದೇ ಕಡಿವಾಣ ಹಾಕಲಾಗುತ್ತಿಲ್ಲವೆಂದು ಅನೇಕ ಮುಖಂಡರು ದೂರಿದರು. ಈ ಬಗ್ಗೆ ಉತ್ತರಿಸಿದ ಹಿರಿಯ ಅಧಿಕಾರಿಗಳು ಗಸ್ತು ಸಿಬ್ಬಂದಿಗೆ ಸೂಚನೆ ನೀಡಿ ಮಾಹಿತಿ ಕೊಡಲು ತಿಳಿಸಲಾಗುವುದು. ದಾಳಿ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಹ ಅಬಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.
ಇನ್ನಿತರ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಮುಖಂಡರಾದ ವೆಂಕಟರಮಣ ಪಾಪು, ಪಿ. ಸಂಘಸೇನ, ಆಲೂರು ನಾಗೇಂದ್ರ, ಕಂದಹಳ್ಳಿ ನಾರಾಯಣ, ದೊಡ್ಡಿಂದುವಾಡಿ ಸಿದ್ಧರಾಜು, ರಾಮಸಮುದ್ರ ಸುರೇಶ್, ಮೂಡ್ನಾಕೂಡು ಪ್ರಕಾಶ್, ಶಿವಣ್ಣ, ನಾಗೇಶ್, ಅಂಬರೀಶ್, ಬ್ಯಾಡಮೂಡ್ಲು ಬಸವಣ್ಣ, ರವಿಕುಮಾರ್, ಮಾಂಬಳ್ಳಿ ರಾಮು, ಹೊನ್ನೇಗೌಡನಹಳ್ಳಿ ರವಿಕುಮಾರ್, ಬದನಗುಪ್ಪೆ ಸುರೇಶ್, ಮಹೇಶ್, ಇನ್ನಿತರರು ಪರಿಶಿಷ್ಟ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಡಿವೈಎಸ್‍ಪಿ ಗಂಗಾಧರಸ್ವಾಮಿ, ಪುಟ್ಟಮಾದಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸತೀಶ್, ಅಬಕಾರಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ.ಜಾ. ಕಾನೂನು ಪದವೀಧರರಿಂದ ಆಡಳಿತ ನ್ಯಾಯಾಧೀಕರಣ ತರಬೇತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜು. 29 - ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2017-18ನೇ ಸಾಲಿಗೆ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಕಡೆಯ ದಿನಾಂಕಕ್ಕೆ ಕಾನೂನು ಪದವಿಯಲ್ಲಿ ತೇರ್ಗಡೆಯಾಗಿ 2 ವರ್ಷ ಮೀರಿರಬಾರದು. ಅಭ್ಯರ್ಥಿಗಳು ಜಿಲ್ಲೆಯವರಾಗಿದ್ದು ಬಾರ್ ಕೌನ್ಸಿಲ್‍ನಲ್ಲಿ ಈಗಾಗಲೇ ನೊಂದಾಯಿಸಿರಬೇಕು. 40 ವರ್ಷ ವಯೋಮಿತಿಯೊಳಗಿರಬೇಕು. ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ. ಮಿತಿಯೊಳಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳು 4 ವರ್ಷಗಳವರೆಗೆ ತರಬೇತಿ ಪಡೆದುಕೊಳ್ಳಬೇಕು. ತರಬೇತಿ ಅವಧಿಯಲ್ಲಿ 5 ಸಾವಿರ ರೂ.ಗಳ ಶಿಷ್ಯ ವೇತನ ಮಂಜೂರು ಮಾಡಲಾಗುವುದು.
ನಿಗದಿತ ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಕಚೇರಿಯಿಂದ ಪಡೆದು, ಭರ್ತಿ ಮಾಡಿ ತಹಸೀಲ್ದಾರ್ ಅವರಿಂದ ಪಡೆದ ಜಾತಿ ಪ್ರಮಾಣ ಪತ್ರ, ಆದಾಯ, ಕಾನೂನು ಪದವಿ ಅಂಕಪಟ್ಟಿಗಳು, ಪದವಿ ಪತ್ರ, ಬಾರ್ ಕೌನ್ಸಿಲ್ ನೋಂದಣಿ ಪತ್ರದ ದೃಢೀಕೃತ ಪ್ರತಿಗಳೊಂದಿಗೆ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ ಆಗಸ್ಟ್ 16ರ ಸಂಜೆ 4 ಗಂಟೆಂiÀÉೂಳಗೆ ತಲುಪಿಸುವಂತೆ ಪ್ರಕಟಣೆ ತಿಳಿಸಿದೆ
ಮರಿಯಾಲ ಶ್ರೀ ನಿಧನಕ್ಕೆ ಸಂತಾಪ
ಚಾಮರಾಜನಗರ, ಜು. 29 (ಕರ್ನಾಟಕ ವಾರ್ತೆ):- ತಾಲೂಕಿನ ಮರಿಯಾಲದ ಶ್ರೀ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ವಿದ್ವಾನ್ ಶ್ರೀ ಮಹಂತ ಸ್ವಾಮೀಜಿ ಅವರ ನಿಧನಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಉಚಿತ ಶಿಕ್ಷಣ, ದಾಸೋಹ ಕಲ್ಪಿಸುವ ಸಲುವಾಗಿ ವಿದ್ಯಾಸಂಸ್ಥೆ ಸ್ಥಾಪನೆ ಮಾಡಿ ಸಾವಿರಾರು ಬಡವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸ್ವಾಮೀಜಿಯವರು ನೀಡಿದ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲದೆ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿಯೂ ಅಪಾರವಾದ ಭಕ್ತವೃಂದ ಹೊಂದಿದ್ದ ಸ್ವಾಮೀಜಿಯವರ ನಿಧನವು ತಮಗೆ ಅತೀವ ದು:ಖ ಉಂಟುಮಾಡಿದೆ ಎಂದು ಸಿ.ಎನ್. ಬಾಲರಾಜು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಜು. 31ರಂದು ಪ.ಜಾ., ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ

ಚಾಮರಾಜನಗರ, ಜು. 29 :- ಚಾಮರಾಜನಗರ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 31ರಂದು ಬೆಳಿಗ್ಗೆ 11 ಗಂಟೆಗೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

ಜು. 31ರಂದು ಚಂದಕವಾಡಿಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ

ಚಾಮರಾಜನಗರ, ಜು. 29:- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಚಂದಕವಾಡಿಯ ಸಂಯುಕ್ತ ಸರ್ಕಾರಿ ಪದವಿಪೂರ್ವ ಕಾಲೇಜು  ಸಂಯುಕ್ತ ಆಶ್ರಯದಲ್ಲಿ ಜುಲೈ 31ರಂದು ಬೆಳಿಗ್ಗೆ 10 ಗಂಟೆಗೆ ಚಂದಕವಾಡಿಯ ಸಂಯುಕ್ತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ನಿಷೇಧ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಕಾರ್ಯಕ್ರಮ ಉದ್ಘಾಟಿಸುವರು. ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಡಿ.ಎಸ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಾದೇಶ್ ಹಾಗೂ ಸಾಧನ ಸಂಸ್ಥೆ ಅಧ್ಯಕ್ಷರಾದ ಟಿ.ಜಿ. ಸುರೇಶ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ವಕೀಲರಾದ ಪ್ರಸನ್ನಕುಮಾರ್ ಅವರು ಮಾದಕ ವಸ್ತುಗಳ ಕುರಿತು, ಮಹೇಶ್ ಅವರು ಬಾಲ್ಯವಿವಾಹ ಹಾಗೂ ಮೋಟಾರ್ ವಾಹನ ಕಾಯ್ದೆ ಕುರಿತು ಮಾತನಾಡುವರು ಎಂದು ಪ್ರಕಟಣೆ ತಿಳಿಸಿದÉ.


ಕೆಂಪೇಗೌಡರ ಜಯಂತಿ ಅದ್ದೂರಿ ಆಚರಣೆಗೆ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ (28-07-2017)

ಕೆಂಪೇಗೌಡರ ಜಯಂತಿ ಅದ್ದೂರಿ ಆಚರಣೆಗೆ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ

ಚಾಮರಾಜನಗರ, ಜು. 28 :– ಜಿಲ್ಲಾಡಳಿತ
ಹಾಗೂ ವಿವಿಧ ಸಂಘಟನೆ ಸಮುದಾಯಗಳ ಸಹಕಾರದೊಂದಿಗೆ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಗಸ್ಟ್ 19ರಂದು ಜಿಲ್ಲಾ ಕೇಂದ್ರದಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಕೆ. ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಸಭೆ ಆರಂಭದಲ್ಲೇ ಮುಖಂಡರಿಂದ ಕಾರ್ಯಕ್ರಮ ಆಯೋಜನೆ ಸಂಬಂಧ ಸಲಹೆಗಳನ್ನು ಕೇಳಲಾಯಿತು. ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸುತ್ತಿರುವುದು ಅತ್ಯಂತ ಸ್ವಾಗತಾರ್ಹ ಹಾಗೂ ಸಂತಸÀದ ವಿಷಯವಾಗಿದೆ. ಕೆಂಪೇಗೌಡರ ಭಾವಚಿತ್ರ ಮೆರವಣಿಗೆಯನ್ನು ಪ್ರಮುಖ ಬೀದಿಗಳಲ್ಲಿ ಹೆಚ್ಚು ಕಲಾತಂಡಗಳೊಂದಿಗೆ ಮಾಡಬೇಕು. ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಕೆಂಪೇಗೌಡರ ವಿಚಾರಗಳು ಹೆಚ್ಚು ತಿಳಿಯುವಂತಾಗಲು ವಿಚಾರ ಸಂಕಿರಣವನ್ನು ಏರ್ಪಡಿಸಬೇಕು. ಜಯಂತಿ ಅಂಗವಾಗಿ ವಿಶೇಷ ಗ್ರಾಮೀಣ ಸೊಗಡಿನ ಕ್ರೀಡಾಕೂಟ ಏರ್ಪಡಿಸಬೇಕು ಎಂಬ ವಿಚಾರವು ಸೇರಿದಂತೆ ಇತರೆ ಹಲವು ಸಲಹೆಗಳು ಮುಖಂಡರಿಂದ ವ್ಯಕ್ತವಾದವು.
ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಮಾತನಾಡಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳುವ ಸಂಬಂಧ ಅಧಿಕಾರಿಗಳಿಗೆ ಸೂಚಿಸಲಾಗುವುದು. ಮುಖಂಡರ ಅಭಿಪ್ರಾಯದಂತೆ ಅಧಿಕಾರಿಗಳು ಹಾಗೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಆಸಕ್ತಿಯುಳ್ಳ ಮುಖಂಡರನ್ನು ಸಹ ಕೆಲವೊಂದು ಸಮಿತಿಗಳಿಗೆ ನೇಮಕ ಮಾಡಿಕೊಂಡು ಯಶಸ್ವಿಯಾಗಿ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ಇದೇ ಪ್ರಥಮ ಬಾರಿಗೆ ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಗುತ್ತಿರುವುದರಿಂದ ಕಾರ್ಯಕ್ರಮದ ಆಯೋಜನೆಗೆ ಮಹತ್ವ ನೀಡಬೇಕಿದೆ. ಮುಂದಿನ ವರ್ಷದಿಂದ ವಿಚಾರ ಸಂಕಿರಣ ಆಯೋಜನೆಗೆ ಚಿಂತನೆ ನಡೆಸೋಣವೆಂದು ಹರೀಶ್ ಕುಮಾರ್ ಅವರು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರನ್ನು ಆಹ್ವಾನಿಸಬೇಕಿದೆ. ಈ ಸಂಬಂಧ ಕೇಳಿಬಂದಿರುವ ಸಲಹೆಯಂತೆ ಭಾಷಣಕಾರರನ್ನು ಸಂಪರ್ಕಿಸಲಾಗುವುದು. ಅಂತಿಮವಾಗಿ ಲಭ್ಯರಾಗುವ ಭಾಷಣಕಾರರನ್ನು ಆಹ್ವಾನಿಸಿ ಮುಂದಿನ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ ಎಂದರು.
ಜಯಂತಿ ಆಚರಣೆ ಸಿದ್ಧತೆಗೆ ಕಾರ್ಯೋನ್ಮುಖರಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತದೆ. ಸಮಿತಿ ಕಾರ್ಯನಿರ್ವಹಣೆಯನ್ನು ಸಹ ನಿಗದಿ ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ ಅವಶ್ಯವಿರುವ ಎಲ್ಲಾ ರೂಪುರೇಷೆಗಳನ್ನು ತಯಾರಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಲು ಮುಂದಾಗುವಂತೆ ಸೂಚಿಸಲಾಗುತ್ತದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಮುಖಂಡರಾದ ಪುಟ್ಟಸ್ವಾಮಿಗೌಡ, ಚಾ.ರಂ. ಶ್ರೀನಿವಾಸಗೌಡ, ನಿಜಧ್ವನಿ ಗೋವಿಂದರಾಜು, ಕೆ.ಎಂ. ನಾಗರಾಜು, ಸಿ ಸಿ ಪ್ರಕಾಶ್, ಚಾ.ಗು. ನಾಗರಾಜು, ಬ್ಯಾಡಮೂಡ್ಲು ಬಸವಣ್ಣ, ಸೋಮಶೇಖರ ಬಿಸಲ್ವಾಡಿ, ಪಣ್ಯದಹುಂಡಿ ರಾಜು, ರಾಮಸಮುದ್ರದ ಸುರೇಶ್, ಹನುಮಯ್ಯ, ಇತರರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬಾಕಿ ಉಳಿದ ರೈತರಿಗೆ ಬೆಳೆ ವಿಮೆ ಪರಿಹಾರ ಪಾವತಿಸಲು ಡಿಸಿ ಸೂಚನೆ

ಚಾಮರಾಜನಗರ, ಜು. 28 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಬಾಕಿ ಉಳಿದಿರುವ ರೈತರಿಗೆ ಬೆಳೆ ವಿಮೆ ಪರಿಹಾರ ಹಣವನ್ನು ಶೀಘ್ರವಾಗಿ ಸಂದಾಯ ಮಾಡಲು ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2016ರ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಕಂತು ಪಾವತಿಸಿರುವ 2990 ರೈತರಿಗೆ ಇನ್ನೂ ಬೆಳೆ ವಿಮೆ ಪರಿಹಾರ ತಲುಪಿಲ್ಲ. ರೈತರ ಬ್ಯಾಂಕ್ ಖಾತೆ, ಐಎಫ್‍ಎಸ್‍ಸಿ ಕೋಡ್‍ಗಳನ್ನು ಪರಿಶೀಲಿಸಿ ಸಂರಕ್ಷಣೆ ವೆಬ್ ಸೈಟ್‍ಗೆ ಮಾಹಿತಿಯನ್ನು ಅಪ್ ಲೋಡ್ ಮಾಡಬೇಕು. ಬಾಕಿ ಉಳಿದಿರುವ ಈ ಎಲ್ಲ ರೈತರಿಗೆ ತುರ್ತಾಗಿ ಬೆಳೆ ವಿಮೆ ಪ್ರಯೋಜನ ಲಭಿಸಬೇಕು. ಈ ವಿಷಯದಲ್ಲಿ ವಿಳಂಬ ಧೋರಣೆಯನ್ನು ಸಹಿಸಲಾಗುವುದಿಲ್ಲ ಎಂದು ಹರೀಶ್ ಕುಮಾರ್ ತಿಳಿಸಿದರು.
ಬ್ಯಾಂಕುಗಳಲ್ಲಿ ರೈತರು ಬೆಳೆಗಾರರಿಗೆ ಸ್ವಂದಿಸÀುವ ವಾತಾವರಣ ನಿರ್ಮಾಣವಾಗಬೇಕು. ಬೆಳೆ ವಿಮೆ ಕಂತÀು ಪಾವತಿ ಮಾಡಲು ಬರುವವರಿಗೆ ಅಗತ್ಯ ಮಾಹಿತಿ ನೀಡಬೇಕು. ಬೆಳೆ ವಿಮೆ ಕಂತು ಪಾವತಿ ವಿಷಯದಲ್ಲಿ ಯಾವುದೇ ಬ್ಯಾಂಕುಗಳು ನಿರಾಸಕ್ತಿ ತೋರಬಾರದು. ದೂರುಗಳು ಬಾರದಂತೆ ಬೆಳೆ ವಿಮೆ ಪ್ರಕ್ರಿಯೆಗೆ ತೊಡಗಿಕೊಳ್ಳಬೇಕು. ರೈತರು, ಬೆಳೆಗಾರರು ಕೋರುವ ಸೌಲಭ್ಯಗಳಿಗೆ ವಿಳಂಬ ಮಾಡದೆ ಸ್ಪಂದಿಸಬೇಕು ಎಂದರು.
ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡುತ್ತಿಲ್ಲವೆಂಬ ದೂರುಗಳು ಕೇಳಿಬರುತ್ತಿವೆ. ಕೆಲವೊಂದು ಬ್ಯಾಂಕುಗಳಲ್ಲಿ ಕನ್ನಡ  ಬಾರದ ಅಧಿಕಾರಿಗಳು ಇರುವುದರಿಂದ ವ್ಯವಹರಿಸಲು ತೊಂದರೆಯಾಗುತ್ತಿದೆ ಎಂದು ದೂರಲಾಗುತ್ತಿದೆ. ಹೀಗಾಗಿ ಕನ್ನಡ ಮಾತನಾಡಲು ಬಲ್ಲ ಓರ್ವ ಅಧಿಕಾರಿಯನ್ನು ಕಡ್ಡಾಯವಾಗಿ ನಿಯೋಜಿಸಲೇಬೇಕು. ಬ್ಯಾಂಕು ವಹಿವಾಟಿಗೆ ಬರುವ ಜನತೆಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಹಿರಿಯ ಬ್ಯಾಂಕ್ ಅಧಿಕಾರಿಗಳ ಮೇಲಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ವಿಕಲಚೇತನರಿಗೆ ಮಾನವೀಯತೆ ದೃಷ್ಠಿಯಿಂದ ಬ್ಯಾಂಕುಗಳಲ್ಲಿ ಕೆಲ ಅವಕಾಶಗಳನ್ನು ಮಾಡಿಕೊಡಬೇಕಿದೆ. ನಡೆಯಲು ಸಾಧ್ಯವಾಗದೇ ಇರುವವರಿಗೆ ಎಟಿಎಂ ಮತ್ತು ಬ್ಯಾಂಕುಗಳಿಗೆ ಪ್ರವೇಶ ನೀಡಲು ತ್ರಿಚಕ್ರ ವಾಹನಗಳಿಗೆ ಅನುಮತಿಸಬೇಕಿದೆ. ವಿಶೇಷಚೇತನರ ಕೆಲಸಗಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಸಹ ತಿಳಿಸಿದರು.
ಬ್ಯಾಂಕುಗಳಲ್ಲಿ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಣೆ ಮಾಡುತ್ತಿಲ್ಲವೆಂಬ ದೂರುಗಳು ಬಂದಿವೆ. ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಆಗಸ್ಟ್ 15ರಂದು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನ ಆಚರಣೆ ಮಾಡಬೇಕು. ಈ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಎಲ್ಲ ಬ್ಯಾಂಕುಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆಯೇ ಎಂಬ ಬಗ್ಗೆ ಗಮನಿಸಬೇಕು ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ಸೂಚನೆ ನೀಡಿದರು.
ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸುನಂದ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ವೆಂಕಟಾಚಲಯ್ಯ, ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಸಭೆಯಲ್ಲಿ ಹಾಜರಿದ್ದರು.



ಯುವಮಂಡಳಿ ಪ್ರೋತ್ಸಾಹಧನ ಸೌಲಭ್ಯ ಪಡೆಯಲು ಸಲಹೆ

ಚಾಮರಾಜನಗರ, ಜು. 28 (ಕರ್ನಾಟಕ ವಾರ್ತೆ):- ನೆರೆಹೊರೆ ಯುವ ಸಂಸತ್ ಕಾರ್ಯಕ್ರಮದಡಿ ಯುವ ಮಂಡಳಿಗಳಿಗೆ ಪ್ರೋತ್ಸಾಹಧನ ನೀಡುತ್ತಿದ್ದು ಈ ಸೌಲಭ್ಯವನ್ನು ಪಡೆದುಕೊಳ್ಳಲು ಮುಂದಾಗುವಂತೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಸ್. ಸಿದ್ಧರಾಮಪ್ಪ ಸಲಹೆ ಮಾಡಿದರು.
ತಾಲೂಕಿನ ಕಾಗಲವಾಡಿಯಲ್ಲಿ ಗುರುವಾರ ನಡೆದ ನೆರೆಹೊರೆ ಯುವ ಸಂಸತ್ ಮತ್ತು ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಯುವ ಮಂಡಳಿಗಳನ್ನು ಕಟ್ಟಬೇಕು. ನೆರೆಹೊರೆ ಯುವ ಸಂಸತ್ ಕಾರ್ಯಕ್ರಮದಡಿ 700 ರೂ.ಗಳಂತೆ ಯುವ ಮಂಡಳಿಗಳಿಗೆ ಪ್ರೋತ್ಸಾಹಧನ ವಿತರಿಸಲು ಅವಕಾಶವಿದೆ. ನೆಹರು ಯುವ ಕೇಂದ್ರ ಆಯೋಜಿಸುವ ಉಪಯೋಗಿ ತರಬೇತಿ ಕಾರ್ಯಕ್ರಮಗಳ ಪ್ರಯೋಜನ ಹೊಂದಬೇಕೆಂದು ಸಿದ್ಧರಾಮಪ್ಪ ತಿಳಿಸಿದರು.
ಉಪನ್ಯಾಸ ನೀಡಿದ ಲೀನಾಕುಮಾರಿ ಅವರು ಯುವಜನತೆ ಬಾಲ್ಯವಿವಾಹದಂಥಹ ಪಿಡುಗಿನ ವಿರುದ್ಧ ಹೋರಾಟ ಮಾಡಬೇಕಿದೆ. ಬಾಲ್ಯವಿವಾಹದಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಶೌಚಾಲಯ ನಿರ್ಮಾಣದಿಂದ ಆಗುವ ಆರೋಗ್ಯಕರ ಕ್ರಮಗಳ ಬಗ್ಗೆಯೂ ತಿಳಿವಳಿಕೆ ನೀಡಬೇಕಿದೆ ಎಂದರು.
ಮಹಿಳೆಯರ ಸ್ವಾವಲಂಬನೆಗೆ ಸಾಕಷ್ಟು ಉದ್ಯೋಗ ಆಧಾರಿತ ತರಬೇತಿ ನೀಡಲಾಗುತ್ತಿದೆ. ವಿಶೇಷವಾಗಿ ಹೊಲಿಗೆ ತರಬೇತಿ ಪಡೆದು ಗ್ರಾಮೀಣ ಭಾಗದಲ್ಲೇ ಉದ್ಯೋಗಿಯಾಗುವ ಅವಕಾಶಗಳು ಇವೆ. ಉಳಿತಾಯ ಯೋಜನೆಗಳ ಬಗ್ಗೆಯೂ ತಿಳಿದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕೆಂದು ಲೀನಾಕುಮಾರಿ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾರ ಶಿವಮ್ಮ ಅವರು ಗ್ರಾಮ ಪಂಚಾಯಿತಿ ವತಯಿಂದ ಶೌಚಾಲಯ ನಿರ್ಮಾಣಕ್ಕಾಗಿ ನೆರವು ನೀಡಲಾಗುತ್ತದೆ. ಇದಲ್ಲದೆ ಇನ್ನೂ ಬಹು ಉಪಯೋಗಿ  ಯೋಜನೆಗಳಿಗೆ ಗ್ರಾಮ ಪಂಚಾಯಿತಿಯು ಉತ್ತೇಜನ ನೀಡಲಿದೆ. ಈ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಲು ಯುವ ಅಭ್ಯರ್ಥಿಗಳಿಗೆ ಅವಕಾಶವಿದೆ ಎಂದರು.
ಶ್ರೀಗಂಧ ಮಹಿಳಾ ಅಭಿವೃದ್ಧಿ ಸಂಯೋಜಕರಾದ ಶಿವರಾಜಮ್ಮ, ಕಾಗಲವಾಡಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ಯಜಮಾನರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪಾಲಿಟೆಕ್ನಿಕ್ ಖಾಲಿ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜು. 28 :- ನಗರದ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಖಾಲಿ ಉಳಿದಿರುವ ಸೀಟುಗಳನ್ನು ತುಂಬಲು ಎಸ್ ಎಸ್ ಎಲ್ ಸಿ ಮತ್ತು ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿಯನ್ನು ಕಾಲೇಜಿನಿಂದ ಪಡೆದು ಭರ್ತಿ ಮಾಡಿ ಆಗಸ್ಟ್ 2ರ ಒಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸುವಂತೆ ಪಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಯುವ ಸಂಘ, ವೈಯಕ್ತಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜು. 28 :- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುವ ಯುವಕ ಯುವತಿ ಸಂಘಗಳಿಂದ ವೈಯುಕ್ತಿಕ ಹಾಗೂ ಸಂಘದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಯುವಕ ಯುವತಿ ತಲಾ ಒಂದು ಸಂಘಕ್ಕೆ 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಉತ್ತಮ ಕಾರ್ಯ ನಿರ್ವಹಿಸಿರುವ ಸಂಘದ ಐದು ಸದಸ್ಯರಿಗೆ ಇಲಾ 5 ಸಾವಿರ ರೂ.ನಂತೆ ವೈಯುಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಅರ್ಜಿಯನ್ನು ನಗರದ ಜಿಲ್ಲಾಡಳೀತ ಭವನದ ಆವರಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಸಾಂಸ್ಕøತಿಕ, ಕ್ರೀಡೆಗಳು, ಆರೋಗ್ಯ ಶಿಬಿರ, ಶ್ರಮದಾನ ಶಿಬಿರ, ಪರಿಸರ, ಸಮಾಜ ಸೇವೆ, ಸಾಕ್ಷರತೆ, ತರಬೇತಿ, ರಾಷ್ಟ್ರೀಯ ಭಾವೈಕ್ಯತೆ ಇತರೆ ಕಾರ್ಯಕ್ರಮಗಳ ಬಗ್ಗೆ ಮಾಡಿರುವ ದಾಖಲೆಗಳನ್ನು ಲಗತ್ತಿಸಿ ಆಗಸ್ಟ್ 21ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಕಚೇರಿಯ ದೂರವಾಣಿ ಸಂಖ್ಯೆ 08226-224932, ಮೊಬೈಲ್ 9482718278 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಜುಲೈ 29ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಜು. 28 (ಕರ್ನಾಟಕ ವಾರ್ತೆ):- ಆಹಾರ ನಾಗರಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು   ಜುಲೈ 29 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
 ಬೆಳಿಗ್ಗೆ 10 ಗಂಟೆÉಗೆ ನಗರಕ್ಕೆ ಆಗಮಿಸುವರು. ಬೆಳಗ್ಗೆ 10.30 ಗಂಟೆಗೆ ಪಕ್ಷದ ಸಭೆಯಲ್ಲಿ ಪಾಲ್ಗೋಳ್ಳುವರು.  ಮಧ್ಯಾಹ್ನ 1 ಗಂಟೆಗೆ ಮಂಗಳೂರಿಗೆ ತೆರಳುವರÀು ಎಂದು ಸಚಿವರ ವಿಶೇಷ ಕರ್ತವ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.






ಮಾಜಿ ಮುಖ್ಯ ಮಂತ್ರಿ ಎನ್.ಧರಂಸಿಂಗ್ ಅವರ ನಿಧನಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಸಭೆ ನಡೆಸಿ ತೀವ್ರ ಸಂತಾಪ 27-07-20178

ಚಾಮರಾಜನಗರ ಜುಲೈ 27  ಮಾಜಿ ಮುಖ್ಯ ಮಂತ್ರಿ ಎನ್.ಧರಂಸಿಂಗ್ ಅವರ ನಿಧನಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಸಭೆ ನಡೆಸಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಹೊರ ರಾಜ್ಯದ ಪ್ರವಾಸದಲ್ಲಿರುವ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಹಾಗೂ ಸದಸ್ಯರು ಇಂದು ಜೈಪುರ ಪ್ರವಾಸದಲ್ಲಿದ್ದರು. ಮಾಜಿ ಮುಖ್ಯ ಮಂತ್ರಿ ಎನ್. ಧರಂಸಿಂಗ್ ಅವರ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಹಾಗೂ ಸದಸ್ಯರು ಹೋಟೆಲ್ ಒಂದರ ಆವರಣದಲ್ಲಿ ಸಭೆ ಸೇರಿ ಅಗಲಿದ ನಾಯಕನಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ಅವರು ಮಾಜಿ ಮುಖ್ಯ ಮಂತ್ರಿ ಎನ್.ಧರಂಸಿಂಗ್ ರವರು ಎಲ್ಲರ ಪ್ರೀತಿ ವಿಶ್ವಾಸ ಗಳಿಸುವ ಮೂಲಕ ಅಜಾತ ಶತ್ರುವಾಗಿದ್ದರು ಅವರ ನಿಧನದಿಂದ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಎಂದು ಕಂಬನಿ ಮಿಡಿದಿದ್ದಾರೆ.
ಧರಂ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲ ಚಾಮರಾಜನಗರ ಜಿಲ್ಲೆಯ ಮೂಲ ಸೌಕರ್ಯಕ್ಕೂ ಸಾಕಷ್ಟು ಕೊಡುಗೆ ನೀಡಿದ್ದರು. ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.  ಧರಂ ಸಿಂಗ್ ರವರ ನಿಧನದಿಂದ ಉಂಟಾಗಿರುವ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಂಕ್ಕೆ ಭಗವಂತ ನೀಡಲಿ ಎಂದು ಕೋರುವೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ.ರಾಮಚಂದ್ರ ತಿಳಿಸಿದ್ದಾರೆ.
ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷರಾದ ಕೆ.ಪಿ.ಸದಾಶಿವ ಮೂರ್ತಿ, ಬಿ.ಕೆ.ಬೊಮ್ಮಯ್ಯ, ಕೆರೆಹಳ್ಳಿ ನವೀನ್, ಸದಸ್ಯರಾದ ಇಶ್ರತ್ ಬಾನು, ಡಿ.ಲೇಖ, ಶಿವಮ್ಮ, ಮಂಜುಳ, ಉಮಾವತಿ, ಚೆನ್ನಪ್ಪ, ರತ್ನಮ್ಮ, ಶಶಿಕಲಾ, ಸಿ.ಎನ್. ಬಾಲರಾಜು, ಚಂದ್ರಕಲಾ, ನಾಗರಾಜು(ಕಮಲ್) ಇದ್ದರು.

Wednesday, 26 July 2017

ಸರಕು ಸೇವಾ ತೆರಿಗೆ ಪದ್ಧತಿ ಪೂರ್ಣ ಮಾಹಿತಿ ಹೊಂದಿ : ಹಿರಿಯ ಸಿವಿಲ್ ನ್ಯಾಯಾಧೀಶರ ಸಲಹೆ(26-07-2017)

ಸರಕು ಸೇವಾ ತೆರಿಗೆ ಪದ್ಧತಿ ಪೂರ್ಣ ಮಾಹಿತಿ ಹೊಂದಿ : ಹಿರಿಯ ಸಿವಿಲ್ ನ್ಯಾಯಾಧೀಶರ ಸಲಹೆ
ಚಾಮರಾಜನಗರ, ಜು. 26 - ನೂತನವಾಗಿ ಜಾರಿಗೆ ತರಲಾಗಿರುವ ಸರಕು ಮತ್ತು ಸೇವಾ ತೆರಿಗೆ ಪದ್ಧತಿ (ಜಿಎಸ್‍ಟಿ) ಬಗ್ಗೆ ನಿತ್ಯ ವಾಣಿಜ್ಯ ವಹಿವಾಟಿನಲ್ಲಿ ನಿರತವಾಗಿರುವ ಜಿಲ್ಲೆಯ ವ್ಯಾಪಾರಸ್ಥರು, ಉದ್ಯಮಿಗಳು ಸಂಪೂರ್ಣವಾಗಿ ಮಾಹಿತಿ ಹೊಂದಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರು ಸಲಹೆ ಮಾಡಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಕು ಸೇವಾ ತೆರಿಗೆ ಪದ್ಧತಿ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಣಿಜ್ಯ ವಹಿವಾಟು ನಡೆಸುವ ಉದ್ಯಮಿಗಳು, ವರ್ತಕರು ಹೊಸದಾಗಿ ಜಾರಿಗೆ ಬಂದಿರುವ ಸರಕು ಸೇವಾ ತೆರಿಗೆ ಪದ್ಧತಿ ಬಗ್ಗೆ ಹೆಚ್ಚು ತಿಳಿವಳಿಕೆ ಪಡೆದರೆ ದಿನನಿತ್ಯದ ವ್ಯಾಪಾರ ವಹಿವಾಟು ಪ್ರಕ್ರಿಯೆಗೆ ಅನುಕೂಲವಾಗುತ್ತದೆ. ಅಲ್ಲದೆ ಹೆಚ್ಚು ತಿಳಿದುಕೊಂಡಂತೆಲ್ಲ ಗೊಂದಲ ಪರಿಹಾರವಾಗುತ್ತದೆ ಎಂದರು.
ತೆರಿಗೆ ಪಾವತಿಸುವುದು ಪ್ರತಿಯೊಬ್ಬ ಸಾಮಾನ್ಯ ನಾಗರಿಕರ ಕರ್ತವ್ಯವಾಗಿದೆ. ಸರ್ಕಾರ ನಿಗದಿಮಾಡುವ ತೆರಿಗೆಯನ್ನು ಪ್ರಾಮಾಣಿಕವಾಗಿ ಪಾವತಿ ಮಾಡಬೇಕು. ಕೆಲವೊಂದು ಆನ್ ಲೈನ್ ಮೂಲಕ ನಡೆಸುವ ವ್ಯಾಪಾರ ವಹಿವಾಟಿನ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಸಲಹೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್ ಮಾತನಾಡಿ ಎಪಿಎಂಸಿಯಲ್ಲಿ ಸಾಕಷ್ಟು ವಹಿವಾಟು ಪ್ರಕ್ರಿಯೆ ನಡೆಯುವುದರಿಂದ ವ್ಯಾಪಾರಸ್ಥರು, ವರ್ತಕರಿಗೆ ಜಿಎಸ್‍ಟಿ ಬಗ್ಗೆ ಸಂಪೂರ್ಣ ಅರಿವು ಹೊಂದಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಪ್ರಯತ್ನಕ್ಕೆ ವರ್ತಕರ ಸಂಘವು ಪೂರಕವಾಗಿ ಸ್ಪಂದಿಸಿ ಸಹಕರಿಸಿದೆ ಎಂದÀರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾಯಿದೆ, ಬೆಳೆಗಾರರು, ವ್ಯಾಪಾರಿ ಉದ್ಯಮಿಗಳಿಗೆ ಸಮಿತಿಯಲ್ಲಿ ನೋಂದಣಿ ಪರವಾನಗಿ ಪಡೆಯುವುದರಿಂದ ಆಗುವ ಅನುಕೂಲತೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಪ್ರತ್ಯೇಕ ಕಾರ್ಯಾಗಾರವನ್ನು ಎಪಿಎಂಸಿ ವತಿಯಿಂದಲೇ ಆಯೋಜನೆ ಮಾಡಲು ಚಿಂತನೆ ನಡೆಸಲಾಗುವುದೆಂದು ಇದೇ ವೇಳೆ ಬಿ.ಕೆ. ರವಿಕುಮಾರ್ ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಉದಯ್ ಕುಮಾರ್ ಅವರು ಈಹಿಂದೆ ವರ್ತಕರು, ಉದ್ಯಮಿಗಳು ಸರಕು ಸೇವೆಗಳನ್ನು ಬೇರೆ ರಾಜ್ಯಗಳಿಗೆ ತಲುಪಿಸಿದಾಗ ಆಯಾ ರಾಜ್ಯಗಳಲ್ಲಿ ವಿಧಿಸುವ ತೆರಿಗೆಯನ್ನು ಪಾವತಿಸಬೇಕಿತ್ತು. ಕೇಂದ್ರ ಹಾಗೂ ರಾಜ್ಯಗಳು ಪ್ರತ್ಯೇಕವಾಗಿ ತೆರಿಗೆ ನಿಗದಿಮಾಡಿದ್ದರಿಂದ ಹೆಚ್ಚಿನ ತೆರಿಗೆಯು ಬೀಳುತ್ತಿತ್ತು. ನೂತನ ಸರಕು ಸೇವಾ ತೆರಿಗೆ ಪದ್ಧತಿಯಿಂದ (ಜಿಎಸ್‍ಟಿ) ದೇಶದೆಲ್ಲೆಡೆ ತೆರಿಗೆ ಪದ್ಧತಿಯಲ್ಲಿ ಏಕರೂಪತೆ ಇದೆ. ಇದರಿಂದ ಉದ್ಯಮ ಹಾಗೂ ಗ್ರಾಹಕರಿಗೂ ಹೆಚ್ಚಿನ ಹೊರೆ ತಪ್ಪುತ್ತಿದೆ ಎಂದರು.
ಜಿಎಸ್‍ಟಿ ಬಗ್ಗೆ  ವರ್ತಕರಿಗೆ ಉದ್ಯಮಿಗಳಿಗೆ ಮಾಹಿತಿ ನೀಡುವ ಸಲುವಾಗಿಯೇ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಈಗಾಗಲೇ ಅನೇಕ ಮಾಹಿತಿ ತಿಳಿವಳಿಕೆ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದೆ. ಜಿಎಸ್‍ಟಿ ಅನುಷ್ಠಾನ ಕುರಿತು ಎದುರಾಗುವ ಯಾವುದೇ ಸಮಸ್ಯೆ ಸಂದೇಹ ಪರಿಹರಿಸಲು ಇಲಾಖೆ ಸಿದ್ಧವಿದೆ. ಇನ್ನು ಅನೇಕ ಭಾಗಗಳಲ್ಲಿ ನಡೆಸಲಾಗುತ್ತಿರುವ ಕಾರ್ಯಕ್ರಮಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಪದ್ಧತಿ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗುತ್ತದೆ ಎಂದು ಉದಯ್ ಕುಮಾರ್ ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ, ವಕೀಲರಾದ ಪುಟ್ಟಸ್ವಾಮಿ ಕಾರ್ಯಕ್ರಮ ಕುರಿತು ಮಾತನಾಡಿದರು. ಎಪಿಎಂಸಿ ಉಪಾಧ್ಯಕ್ಷರಾದ ಮಹದೇವಸ್ವಾಮಿ, ನಿರ್ದೇಶಕರಾದ ವಿಶ್ವನಾಥ, ಹೆಗ್ಗೂರುಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್, ವಕೀಲರಾದ ಅರುಣ್ ಕುಮಾರ್, ಎಪಿಎಂಸಿ ಅಧಿಕಾರಿ  ಮಧುಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನ

ಚಾಮರಾಜನಗರ, ಜು. 26:- ಕೃಷಿ ಉತ್ಪಾದನೆ ಹೆಚ್ಚಳವಾಗಲು ಕಾರಣವಾಗಿರುವ ರೈತರ ಶ್ರಮ ಸಕ್ರಿಯ ಪಾಲ್ಗೊಳ್ಳುವಿಕೆ ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಬೆಳೆ ಸ್ಪರ್ಧೆಯನ್ನು ರಾಜ್ಯ ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಏರ್ಪಡಿಸಿ ಬಹುಮಾನ ನೀಡುವ ಸಲುವಾಗಿ ಕೃಷಿ ಇಲಾಖೆ ಅರ್ಜಿ ಆಹ್ವಾನಿಸಿದೆ.
ತಾಲೂಕು ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 15 ಸಾವಿರ, ದ್ವಿತೀಯ ಬಹುಮಾನವಾಗಿ 10 ಸಾವಿರ, ತೃತೀಯ ಬಹುಮಾನವಾಗಿ 5 ಸಾವಿರ ರೂ. ನೀಡಲಾಗುತ್ತದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 25 ಸಾವಿರ, ದ್ವಿತೀಯ ಬಹುಮಾನವಾಗಿ 15 ಸಾವಿರ, ತೃತೀಯ ಬಹುಮಾನವಾಗಿ 10 ಸಾವಿರ ರೂ. ನೀಡಲಾಗುತ್ತದೆ. ರಾಜ್ಯ ಮಟ್ಟದ ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 50 ಸಾವಿರ, ದ್ವಿತೀಯ ಬಹುಮಾನವಾಗಿ 25 ಸಾವಿರ, ತೃತೀಯ ಬಹುಮಾನವಾಗಿ 15 ಸಾವಿರ ರೂ. ನೀಡಲಾಗುತ್ತದೆ.
ಸ್ಪರ್ಧೆಗೆ ಭಾಗವಹಿಸಲು ಸಾಮಾನ್ಯ ವರ್ಗದ ರೈತರು 100 ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ರೈತರಾಗಿದ್ದಲ್ಲಿ 25 ರೂ. ಪ್ರವೇಶ ಶುಲ್ಕ ಸಂದಾಯ ಮಾಡಬೇಕಿದೆ. ಮುಂಗಾರು ಹಂಗಾಮಿಗೆ ಆಗಸ್ಟ್ 31, ಹಿಂಗಾರು ಹಂಗಾಮಿಗೆ ನವೆಂಬರ್ 30 ಸ್ಪರ್ಧೆಗೆ ನೊಂದಾಯಿಸಿಕೊಳ್ಳಲು ಕಡೆಯ ದಿನವಾಗಿದೆ.
ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದ ಸಮಿತಿ ನಿಗದಿಪಡಿಸುವ ಒಂದು ಬೆಳೆಯಲ್ಲಿ ಮಾತ್ರ ಸ್ಫರ್ಧೆ ನಡೆಸಲು ಅವಕಾಶವಿರುತ್ತದೆ. ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಭೇಟಿ ಮಾಡುವಂತೆ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸರಳ ಮದುವೆ ಮಾಡಿಕೊಂಡ ಪ.ಪಂ. ದಂಪತಿಗಳಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಚಾಮರಾಜನಗರ, ಜು. 26 - ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಂಡಿರುವ ಪರಿಶಿಷ್ಟ ಪಂಗಡ ದಂಪತಿಗಳಿಗೆ ಸರಳ ವಿವಾಹ ಯೋಜನೆಯಡಿ 50 ಸಾವಿರ ರೂ. ಪ್ರೋತ್ಸಾಹ ಧನ ನೀಡಲಿದ್ದು ಅರ್ಜಿ ಆಹ್ವಾನಿಸಿದೆ.
2015-16ನೇ ಸಾಲಿನಿಂದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳವಾಗಿ ವಿವಾಹವಾಗಿರುವ ಪರಿಶಿಷ್ಟ ವರ್ಗ ಪಂಗಡ ದಂಪತಿ ಪ್ರೋತ್ಸಾಹಧನ ಪಡೆಯಬಹುದು. ಅರ್ಜಿ ಹಾಗೂ ವಿವರಗಳಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ (ದೂ.ಸಂ.08226-226070), ತಾಲೂಕು ಸಮಾಜ / ಪರಿಶಿಷ್ಟ ಕಲ್ಯಾಣಾಧಿಕಾರಿ, ಚಾಮರಾಜನಗರ ದೂ.ಸಂ. 08226-223143, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಕೊಳ್ಳೇಗಾಲ ದೂ.ಸಂ. 08224-253196, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಯಳಂದೂರು ದೂ.ಸಂ. 08226-240309, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಗುಂಡ್ಲುಪೇಟೆ ದೂ.ಸಂ. 08229-222984 ಸಂಪರ್ಕಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ.ಜಾ. ಪ.ಪಂ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ

ಚಾಮರಾಜನಗರ, ಜು. 26 - ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುತ್ತಿದ್ದು ಈ ಪ್ರಯೋಜನ ಪಡೆಯಲು ಕೋರಿದೆ.
ಅರ್ಜಿ ನಮೂನೆಯಲ್ಲಿ ವಿವರಗಳನ್ನು ನಮೂದಿಸಿ ಜಾತಿ ಪ್ರಮಾಣ ಪತ್ರದ ನಕಲನ್ನು ಲಗತ್ತಿಸಬೇಕು. ವಿದ್ಯಾರ್ಥಿಗಳು ಪಾಸಿನ ದರ ಪಾವತಿಸುವಂತಿಲ್ಲ. ಆದರೆ ಸಂಸ್ಕರಣ ಶುಲ್ಕವಾಗಿ 80 ರೂ. ಹಾಗೂ ಅಪಘಾತ ಪರಿಹಾರ ಶುಲ್ಕವಾಗಿ 50 ರೂ.ಗಳನ್ನು ನಿಯಮಾವಳಿಗಳ ಅನ್ವಯ ಪಾವತಿಸಬೇಕಿದೆ. ಭರ್ತಿ ಮಾಡಿದ ಅರ್ಜಿ, ನಿಗದಿತ ಶುಲ್ಕದೊಂದಿಗೆ ಸಂಬಂಧಪಟ್ಟ ಶೈಕ್ಷಣಿಕ ಸಂಸ್ಥೆಗಳ ಮೂಲಕ ನಿಗಮಕ್ಕೆ ಸಲ್ಲಿಸಿ ಬಸ್ ಪಾಸ್ ಪಡೆದುಕೊಳ್ಳಬೇಕಿದೆ. ಶೈಕ್ಷಣಿಕ ಸಂಸ್ಥೆಯಿಂದ ವಾಸಸ್ಥಳಕ್ಕೆ ಗರಿಷ್ಟ 60 ಕಿ.ಮೀ. ಅಂತರವಿರುವ ವಿದ್ಯಾರ್ಥಿಗಳು ಮಾತ್ರ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್ ಅಶೋಕ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ : ಮನೆ ನಿರ್ಮಾಣ ಸಹಾಯಧನಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 26 - ಕೊಳ್ಳೇಗಾಲ ನಗರಸಭೆಯು 2017-18ನೇ ಸಾಲಿಗೆ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಹಾಗೂ ವಾಜಪೇಯಿ ನಗರವಸತಿ  ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವವರಿಗೆ ನೀಡಲಾಗುವ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿದೆ.
ಅಂಬೇಡ್ಕರ್ ನಿವಾಸ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಮಹಿಳೆಯರು, ವಿದುರ, ಹಿರಿಯ ನಾಗರಿಕರು, ವಿಕಲಚೇತನರು ಅರ್ಜಿ ಸಲ್ಲಿಸಬಹುದು.
ವಾಜಪೇಯಿ ನಗರ ವಸತಿ ಯೋಜನೆಗೆ ಹಿಂದುಳಿದ ವರ್ಗಗಳ ಮಹಿಳೆಯರು ಅರ್ಜಿ ಸಲ್ಲಿಸಬಹುದು. ನಿವೇಶನ, ಕಚ್ಚಾಮನೆ, ಗುಡಿಸಲು ಹೊಂದಿರುವವರಿಗೆ ಸಹಾಯಧನ ನೀಡಲಾಗುತ್ತದೆ. ಅರ್ಜಿ ಜತೆ ಜಾತಿ, ವರಮಾನ ಪತ್ರ, ಆಧಾರ್ ಅಥವಾ ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ನಿವೇಶನ ದಾಖಲೆ ಲಗತ್ತಿಸಬೇಕು. ದಾಖಲಾತಿ ಪ್ರತಿಗಳು ಗೆಜೆಟೆಡ್ ಅಧಿಕಾರಿಗಳ ದೃಢೀಕರಣ ಹೊಂದಿರಬೇಕು. ನಗರಸಭೆ ವ್ಯಾಪ್ತಿಯಲ್ಲಿ ದಾಖಲಾತಿಗಳು ಇರಬೇಕು. ಅರ್ಜಿ ಸಲ್ಲಿಕೆಗೆ ಜುಲೈ 31 ಕಡೆಯ ದಿನವಾಗಿದೆ. ವಿವರಗಳಿಗೆ ನಗರಸಭೆ ಕಾರ್ಯಾಲಯ ಕಚೇರಿ ಸಂಪರ್ಕಿಸುವಂತೆ ಪೌರಾಯುಕ್ತರು ತಿಳಿಸಿದ್ದಾರೆ.


ಜು. 27ರಂದು ನೆರೆಹೊರೆ ಯುವ ಸಂಸತ್, ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ

ಚಾಮರಾಜನಗರ, ಜು. 26:- ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ನಗರದ ಧ್ವನಿ ಮಹಿಳಾ ಅಭಿವೃದ್ಧಿ ಸಂಸ್ಥೆÀ ಆಶ್ರಯದಲ್ಲಿ ಜುಲೈ 27ರಂದು ಬೆಳಿಗ್ಗೆ 11 ಗಂಟೆÉಗೆ ಕಾಗಲವಾಡಿಯ ಅಂಬೇಡ್ಕರ್  ಸಮುದಾಯ ಭವನದಲ್ಲಿ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಹಾಗೂ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ನೆಹರು ಯುವ ಕೇಂದ್ರÀದ ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳಾದ ಎಲ್. ಸಿದ್ಧರಾಮಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಕಾಗಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಮ್ಮ ಅಧ್ಯಕ್ಷತೆ ವಹಿಸುವರು. ಧ್ವನಿ ಮಹಿಳಾ ಅಭಿವೃದ್ಧಿ ಸಂಸ್ಥೆ ಸಂಯೋಜಕರಾದ ಲೀನಾಕುಮಾರಿ ಅತಿಥಿ ಉಪನ್ಯಾಸ ನೀಡುವರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮರಿಸ್ವಾಮಿ, ಸದಸ್ಮರಾದ ಜ್ಯೋತಿ. ಶ್ರೀದೇವಿ, ರತ್ನಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಜು. 27ರಂದು ವಿದ್ಯುತ್ ವ್ಯತ್ಯಯ

ಚಾಮರಾಜನಗರ, ಜು. 26 - ತಾಲೂಕಿನ ಸಂತೆಮರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಜುಲೈ 27ರಂದು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಹೊನ್ನೂರು, ಸಂತೆಮರಹಳ್ಳಿ, ನವಿಲೂರು, ಆಲ್ದೂರು, ಅಂಬಳೆ, ಕುದೇರು, ಮಂಗಲ, ಕೆಂಪನಪುರ, ದುಗ್ಗಟ್ಟಿ, ಚಂಗಡಿಪುರ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಜು. 31ರಂದು ಮಲೆಮಹದೇಶ್ವರ ದೇವಾಲಯದ ಗೋಲಕ ಹಣ ಎಣಿಕೆ
ಚಾಮರಾಜನಗರ, ಜು. 26:- ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದ ಗೋಲಕಗಳ ಹಣ ಎಣಿಕೆ ಕಾರ್ಯವು ಜುಲೈ 31ರಂದು ಬೆಳಿಗ್ಗೆ ನಡೆಯಲಿದೆ.
ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಯೋಗದೊಂದಿಗೆ ಪರ್ಕಾವಣೆ ಕಾರ್ಯವನ್ನು ನಡೆಸಲಾಗುವುದೆಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು. 31ರಂದು ಪ.ಜಾ., ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ

ಚಾಮರಾಜನಗರ, ಜು. 26 - ಚಾಮರಾಜನಗರ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯು ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಜುಲೈ 31ರಂದು ಬೆಳಿಗ್ಗೆ 11 ಗಂಟೆಗೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.


Tuesday, 25 July 2017

ಜಿಲ್ಲೆಯ ವಿಶೇಷ ಯೋಜನೆಗಳ ಅನುಷ್ಟಾನಕ್ಕೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಅಗತ್ಯ: ಡಾ.ಕೆ. ಹರೀಶ್ ಕುಮಾರ್ (25-07-2017)

ಜಿಲ್ಲೆಯ ವಿಶೇಷ ಯೋಜನೆಗಳ ಅನುಷ್ಟಾನಕ್ಕೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಅಗತ್ಯ: ಡಾ.ಕೆ. ಹರೀಶ್ ಕುಮಾರ್ 


ಚಾಮರಾಜನಗರ, ಜು. 21 :- ಶಿಕ್ಷಣ, ಆರೋಗ್ಯ, ಕೃಷಿ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ದಿಗಾಗಿ ಜಿಲ್ಲೆಗಾಗಿಯೇ ವಿಶೇಷವಾಗಿ ರೂಪಿಸಲಾಗಿರುವ ಯೋಜನೆಗಳ ಅನುಷ್ಟಾನಕ್ಕೆ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆ.ಡಿ.ಪಿ ಸಭಾಂಗಣದಲ್ಲಿ ಇಂದು ಜಿಲ್ಲೆಗೆ ಸೀಮಿತವಾಗಿ ರೂಪಿಸಿರುವ ವಿವಿಧ ಯೋಜನೆಗಳ ಅನುಷ್ಟಾನ ಕುರಿತು ಸ್ವಯಂ ಸೇವಾ ಸಂಸ್ಥೆಗಳೊಂದಿಗಿನ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯ ಅಭಿವೃದ್ದಿ ಸೂಚ್ಯಂಕ ಏರಿಕೆಯಾಗ ಬೇಕಾದರೆ ಜೀವನ ಮಟ್ಟ ಸಹ ಸುಧಾರಣೆಯಾಗಬೇಕಿದೆ. ಬಹುಮುಖ್ಯ ಕ್ಷೇತ್ರಗಳಾದ ಕೃಷಿ,ಶಿಕ್ಷಣ,ಆರೋಗ್ಯ, ಮಕ್ಕಳು ಮತ್ತು ಮಹಿಳೆಯರಿಗೆ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕಿದೆ. ಸಾಮಾಜಿಕ ಸ್ಥಿತಿ-ಗತಿಗಳು ಉತ್ತಮಗೊಳ್ಳಬೇಕಿದೆ. ಸರ್ವಾಂಗೀಣ ಅಭಿವೃದ್ದಿಯಾದರೆ ಮಾತ್ರ ಜಿಲ್ಲೆಯ ಪ್ರಗತಿ ಸೂಚ್ಯಂಕವು ಉತ್ತಮ ಮಟ್ಟಕ್ಕೆ ಏರಲಿದೆ ಎಂದರು.
ಜಿಲ್ಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದ ಗುಣಮಟ್ಟ ಹೆಚ್ಚಳಕ್ಕಾಗಿ ಸಿಸ್ಟಮ್ಯಾಟಿಕ್ ಟೀಚಿಂಗ್ ಎನ್ಹಾನ್ಸ್‍ಮೆಂಟ್ ಪ್ರೋಗ್ರಾಮ್ (ಸ್ಟೆಪ್) ಕ್ರಿಯಾ ಯೋಜನೆ ತಯಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮಣ್ಣು ಮತ್ತು ಮಳೆ ನೀರು ಸಂರಕ್ಷಣೆ ಆಂದೋಲನಕ್ಕಾಗಿ ಬದು ಸಂಜೀವಿನಿ, ಮಹಿಳೆಯರು ಮತ್ತು ಮಕ್ಕಳಲ್ಲಿ ಕಂಡು ಬರುವ ರಕ್ತ ಹೀನತೆ ಹೋಗಲಾಡಿಸುವ ನಿಟ್ಟಿನಲ್ಲಿ ‘ಸತ್ವ’ ಹಾಗೂ ಮಹಿಳೆಯರ ಸ್ವಾವಲಂಬನೆಗಾಗಿ ಮಹಿಳಾ ಉದ್ಯೋಗಖಾತ್ರಿ ಅಭಿಯಾನದಂತಹ ಕಾರ್ಯಕ್ರಮಗಳನ್ನು ಜಿಲ್ಲೆಗೆ ವಿಶೇಷವಾಗಿ ರೂಪುಗೊಳಿಸಿ ಈಗಾಗಲೇ ಆರಂಭಿಸಲಾಗಿದೆ. ಈ ಎಲ್ಲಾ ಯಶಸ್ವಿಗೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಬೇಕಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಯಾವುದೇ ಯೋಜನೆ ಫಲಪ್ರದವಾಗಬೇಕಾದರೆ ಪರಿಣಾಮಕಾರಿಯಾಗಿ ಅನುಷ್ಟಾನ ಪ್ರಕ್ರಿಯೆ ಸರಿಯಾದ ಹಾದಿಯಲ್ಲಿ ನಡೆಯಬೇಕು. ಕೇವಲ ಅಧಿಕಾರಿ ವರ್ಗದಿಂದ ಮಾತ್ರ ಯೋಜನೆಗಳ ಸಫಲತೆ ಸಾಧ್ಯವಾಗುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಸಕ್ರಿಯವಾಗಿ ಸ್ವಯಂ ಸೇವಾ ಸಂಸ್ಥೆಗಳು ಜನರ ಸಹಭಾಗಿತ್ವದೊಂದಿಗೆ ತೊಡಗಿಕೊಂಡಾಗ ನಿಗದಿತ ಗುರಿ ತಲುಪಬಹುದು. ಹೀಗಾಗಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರವು ತುಂಬಾ ಮಹತ್ವ ಪಡೆದುಕೊಂಡಿದೆ ಎಂದು ಹರೀಶ್ ಕುಮಾರ್ ಅವರು ಅಭಿಪ್ರಾಯ ಪಟ್ಟರು.
ಜಿಲ್ಲೆಯಲ್ಲಿ ಮತ್ತೊಂದು ಪ್ರಮುಖ ಯೋಜನೆ ಸ್ವಚ್ಛ ಭಾರತ ಮಿಷನ್ ಅಡಿ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕಿದೆ. ಶೌಚಾಲಯಗಳನ್ನು ನಿರ್ಮಿಸಿದರೆ ಮಾತ್ರ ಸಾಲದು. ಅದರ ಬಳಕೆಯೂ ಆಗಬೇಕು. ಶೌಚಾಲಯ ಉಪಯೋಗದಿಂದ ಆರೋಗ್ಯದ ಮೇಲೆ ಉಂಟಾಗುವ ಒಳ್ಳೆಯ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ದಿಸೆಯಲ್ಲಿಯೂ ಮತ್ತಷ್ಟು ವೇಗವಾಗಿ ತೊಡಗಿಕೊಂಡು ಯಶಸ್ಸು ಸಾಧಿಸಬೇಕಿದೆ ಎಂದು ಅವರು ತಿಳಿಸಿದರು.
ಯೋಜನೆಗಳ ಅನುಷ್ಟಾನಕ್ಕೆ ಅನುದಾನದ ಕೊರತೆಯಿಲ್ಲ. ಶೌಚಾಲಯ ನಿರ್ಮಾಣಕ್ಕಾಗಿಯೇ 15 ಕೋಟಿ ರೂ. ಅನುದಾನ ಲಭ್ಯವಿದೆ. ಉದ್ಯೋಗ ಖಾತರಿ ಯೋಜನೆಯಡಿ ಮಹಿಳೆಯರಿಗೆ ಹೆಚ್ಚು ಉದ್ಯೋಗ ಅವಕಾಶಗಳನ್ನು ಒದಗಿಸಬಹುದಾಗಿದೆ. ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಸಹ ಅವಕಾಶ ಇವೆ. ಎಲ್ಲಾ ನೆರವು ಬಳಸಿಕೊಂಡರೆ ಜಿಲ್ಲೆಯ ಆರೋಗ್ಯ, ಉದ್ಯೋಗ ಕೇತ್ರದಲ್ಲಿಯೂ ಸಾಕಷ್ಟು ಪ್ರಗತಿಯಾಗಲಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ತಿರುಮಲೇಶ್ ಮಾತನಾಡಿ ಸರ್ಕಾರದ ಇಲಾಖೆಗಳ ಕಾರ್ಯಕ್ರಮದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚು ತೊಡಗಿಕೊಳ್ಳುವುದರಿಂದ ಜನರ ಸೇವೆಗೂ ಅವಕಾಶವಾದಂತಾಗುತ್ತದೆ. ಹೀಗಾಗಿ ಪ್ರಸ್ತುತ ಜಿಲ್ಲೆಯ ಅಭಿವೃದ್ದಿಗಾಗಿ ರಾಜ್ಯದಲ್ಲೇ ಜಿಲ್ಲೆಗಾಗಿ ವಿಶೇಷವಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಕೆ. ಹರೀಶ್ ಕುಮಾರ್ ಅವರು ಯೋಜನೆಗಳನ್ನು ರೂಪಿಸಿದ್ದಾರೆ. ಇದರ ಯೋಜಿತ ಸಂಪೂರ್ಣ ಯಶಸ್ವಿಗೆ ಸ್ವಯಂ ಸೇವಾ ಸಂಸ್ಥೆಗಳು ಪೂರಕವಾಗಿ ನಿಲ್ಲಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಂ. ಮುನಿರಾಜಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ. ಡಾ. ಕೆ. ಎಚ್. ಪ್ರಸಾದ್, ಸಾರ್ವಜನಿಕ ಶಿಕ್ಷಣ ಇಳಾಖೆಯ ಉಪನಿರ್ದೇಶಕರಾದ ಮಂಜುಳ ಮಾತನಾಡಿದರು.
ಇದೇ ವೇಳೆ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಶೇಷ ಯೋಜನೆ ಅನುಷ್ಟಾನ ಸಂಬಂಧ ವಿವರವಾಗಿ ಸಂವಾದದಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.
     

ಮಹಿಳೆಯರ ಮಕ್ಕಳ ಆರೋಗ್ಯ ಕಾರ್ಯಕ್ರಮಗಳಿಗೆ ಅಂಗನವಾಡಿ ಕಾರ್ಯಕರ್ತೆಯರ ಪಾತ್ರವು ಪ್ರಮುಖ :ಡಾ. ಕೆ. ಹರೀಶ್ ಕುಮಾರ್ 



ಚಾಮರಾಜನಗರ, ಜು. 21 :- ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಪೂರಕವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹೊಣೆಗಾರಿಕೆಯು ಸಹ ತುಂಬಾ ಪ್ರಮುಖವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್ ಕುಮಾರ್ ಅಭಿಪ್ರಾಯ ಪಟ್ಟರು.
ನಗರದ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಮಹಿಳೆಯರು ಮತ್ತು ಮಕ್ಕಳಲ್ಲಿ ಕಂಡು ಬರುವ ರಕ್ತ ಹೀನತೆ ಪರಿಹರಿಸುವ ನಿಟ್ಟಿನಲ್ಲಿ ಅನುಷ್ಟಾನಗೊಳಿಸುತ್ತಿರುವ ಸತ್ವ ಯೋಜನೆಯ ಕಾರ್ಯಾಗಾರ ಉಧ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತಾಯಿ ಶಿಶುವಿನ ಮರಣಕ್ಕೆ ರಕ್ತ ಹೀನತೆಯು ಮುಖ್ಯ ಕಾರಣವಾಗುತ್ತಿದೆ. ತಾಯಿ ಮತ್ತು ಮಗುವಿನಲ್ಲಿ ರಕ್ತ ಹೀನತೆ ಸಮಸ್ಯೆಯನ್ನು ಗುಣಪಡಿಸಿದರೆ ಮರಣದ ಪ್ರಮಾಣ ಕಡಿಮೆಯಾಗಲಿದೆ ಎಂಬುದು ಈ ಹಿಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ತಿಳಿದು ಬಂದಿದೆ. ಹೀಗಾಗಿ ಗರ್ಭಿಣಿಯರು ಮತ್ತು ಮಕ್ಕಳಲ್ಲಿ ರಕ್ತ ಹೀನತೆ ಪರಿಹರಿಸುವ ಉದೇಶಕ್ಕಾಗಿಯೇ ಸತ್ವ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು.
ಗ್ರಾಮೀಣ ಭಾಗದ ಮಹಿಳೆಯರಲ್ಲೇ ಹೆಚ್ಚಾಗಿ ರಕ್ತಹೀನತೆ ಸಮಸ್ಯೆ ಕಂಡು ಬಂದಿದ್ದು ಇದಕ್ಕಾಗಿ ಆಶಾ ಕಾರ್ಯಕರ್ತೆಯರನ್ನು ಸತ್ವ ಕಾರ್ಯಕ್ರಮಕ್ಕೆ ತೊಡಗಿಸಿ ಕೊಳ್ಳಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರೂ ಸಹ ಅತ್ಯಂತ ಪ್ರಮುಖವಾಗಿ ಆರೋಗ್ಯ ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭಾಗಿಯಾಗಲು ಅವಕಾಶವಿದೆ ಹೀಗಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಜವಾಬ್ಧಾರಿಯು ಹೆಚ್ಚಿದೆ ಎಂದರು.
ತಾಯಿ ಶಿಶುವಿನ ಮರಣವು ಯಾವುದೇ ನಿರ್ಲಕ್ಷ್ಯದಿಂದ ಉಂಟಾದರೆ ಸಹಿಸಲಾಗುವುದಿಲ್ಲ. ಸತ್ವ ಕಾರ್ಯಕ್ರಮವಲ್ಲದೇ ಅಪೌಷ್ಟಿಕತೆ ಹೋಗಲಾಡಿಸುವ ಕಾರ್ಯಕ್ರಮವು ಸೇರಿದಂತೆ ಇತರೇ ಯೋಜನೆಗಳಡಿ ತಾಯಿ ಶಿಶುವಿನ ಆರೋಗ್ಯ ಕಾಪಾಡಲು ಎಲ್ಲಾ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಿದೆ. ಗ್ರಾಮಾಂತರ ಪಟ್ಟಣ ಪ್ರದೇಶಗಳಲ್ಲಿ ಅತ್ಯಂತ ನಿಕಟವಾಗಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರು ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದಲ್ಲದೇ ಕಾಲಕಾಲಕ್ಕೆ ವಹಿಸಬೇಕಿರುವ ಚಿಕಿತ್ಸೆ ಆರೋಗ್ಯ ಉಪಚಾರಗಳ ಬಗ್ಗೆ ಮಾರ್ಗದರ್ಶನ ಮಾಡಬೇಕು ಎಂದು ಹರೀಶ್ ಕುಮಾರ್ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಎಂ ಗಾಯತ್ರಿ ಅವರು ಮಾತನಾಡಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಕಾಳಜಿಯಿಂದ ರೂಪಿಸಲಾಗಿರುವ ಯೋಜನೆಗಳು ಯಶಸ್ವಿಯಾಗಬೇಕಾದರೆ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ತುಂಬಾ ಅವಶ್ಯವಾಗಿದೆ. ಸೇವಾ ಮನೋಭಾವನೆಯಿಂದ  ತೊಡಗಿಕೊಂಡು ಉತ್ತಮ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಎಚ್. ಪ್ರಸಾದ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ತಿರುಮಲೇಶ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜುಲೈ.26ರಂದು ವ್ಯಾಪಾರಿ ಉದ್ಯಮಿಗಳಿಗೆ ತೆರಿಗೆ ಬಗ್ಗೆ ಕಾನೂನು ಅರಿವು



ಚಾಮರಾಜನಗರ, ಜು. 21 - ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಾಣಿಜ್ಯ ತೆರಿಗೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ ವ್ಯಾಪಾರಿ ಉದ್ಯಮಿಗಳಿಗಾಗಿ ತೆರಿಗೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜುಲೈ 26ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ ನಂದೀಶ್ ಅವರು ಕಾರ್ಯಕ್ರಮ ಉಧ್ಘಾಟಿಸುವರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಬಿ.P.É ರವಿ ಕುಮಾರ್ ಅಧ್ಯಕ್ಷತೆ ವಹಿಸುವರು. ವಾಣಿಜ್ಯ ತೆರಿಗೆ ಅಧಿಕಾರಿ ಉದಯ್ ಕುಮಾರ್ ವಿಶೇಷ ಆಹ್ವಾನಿತರಾಗಿ ಹಾಗೂ ಜಿಲ್ಲಾ ವಕೀಲ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ, ವಕೀಲರಾದ ಪುಟ್ಟಸ್ವಾಮಿ, ಅರುಣ್ ಕುಆಂರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.

Monday, 24 July 2017

ಗಣಕಯಂತ್ರ ಶಿಕ್ಷಣ ಪ್ರಾಯೋಗಿಕ ಪರೀಕ್ಷೆ: ನಿಷೇದಾಜ್ಞೆ ಜಾರಿ (24-07-2017)

24-7-2017 ರ ಬೆಳಿಗ್ಗೆ 09-25 ರಿಂದ 10-30ರ ಸಮಯ ಶ್ರಾವಣಮಾಸ ಪ್ರಾರಂಭದ ಪ್ರಯುಕ್ತ ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ದೇವಸ್ಥಾನದ ಸರದಿ ಅರ್ಚಕರು 108 ಕುಂಭಗಳಿಂದ ಶ್ರೀ ಸ್ವಾಮಿ ಗೆ ಪೂಜೆ ಸಲ್ಲಿಸಲಾಯಿತು. ಪೂಜಾ ಸಂಧರ್ಭದಲ್ಲಿ ಸಾಲೂರು ಬೃಹನ್ಮಠದ ಶ್ರೀ ಗುರುಸ್ವಾಮಿಗಳು ಹಾಗು ಶ್ರೀ ಹಿಮ್ಮಡಿ ಮಹದೇವಸ್ವಾಮಿಗಳು ಹಾಗು ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಎಂ.ಗಾಯತ್ರಿ ಕ.ಆ.ಸೆ(ಹಿ.ಶ್ರೇ) ಹಾಗು ಅಪರ ಜಿಲ್ಲಾದಂಢಾಧಿಕಾರಿಗಳು ಚಾಮರಾಜನಗರ, ಹಾಗು ದೇವಸ್ಥಾನದ ಸಿಬ್ಬಂದಿ ವರ್ಗ ಹಾಗು ಸಹಸ್ರಾರು ಭಕ್ತರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು

ಗಣಕಯಂತ್ರ ಶಿಕ್ಷಣ ಪ್ರಾಯೋಗಿಕ ಪರೀಕ್ಷೆ: ನಿಷೇದಾಜ್ಞೆ ಜಾರಿ

ಚಾಮರಾಜನಗರ, ಜು. 24 - ಚಾಮರಾಜನಗರ ಪಟ್ಟಣದ ಸಿದಾರ್ಥನಗರದ ಕಾನ್ವೆಂಟ್ ರಸ್ತೆಯಲ್ಲಿರುವ ವಿಶೂಯಲ್ ಸಾಫ್ಟ್‍ಟೆಕ್ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್‍ನಲ್ಲಿ ಗಣಕಯಂತ್ರ ಶಿಕ್ಷಣ ಪ್ರಾಯೋಗಿಕ ಪರೀಕ್ಷೆಯು ಜುಲೈ 25 ರಿಂದ 29ರವರೆಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದರಿ ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕಾರ್ಯವು ನ್ಯಾಯೋಚಿತ, ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯಲೆಂಬ ಉದ್ದೇಶದಿಂದ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ಆದೇಶ ಜಾರಿಯಲ್ಲಿರುತ್ತದೆ. ಅಲ್ಲದೆ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಮುಚ್ಚುವಂತೆಯೂ ಆದೇಶಿಸಲಾಗಿದೆ. ಆದರೆ ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ವರ್ಗದವರಿಗೆ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ನಿಷೇಧಾಜ್ಞೆ ಆದೇಶ ಅನ್ವಯವಾಗುವುದಿಲ್ಲವೆಂದು ತಿಳಿಸಲಾಗಿದೆ.

ಜು. 25ರಂದು ಉಚಿತ ಕಾನೂನು ಸಲಹಾ ಕೇಂದ್ರ ಉದ್ಘಾಟನೆ
ಚಾಮರಾಜನಗರ, ಜು. 24 :- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆಸ್ಪತ್ರೆ ಹಾಗೂ ಸಾಧನ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 25ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾ ಆಸ್ಪತ್ರೆ ಆವರಣದ ಎ ಆರ್ ಟಿ ಕೇಂದ್ರದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಸಮಾರಂಭ ಉದ್ಘಾಟಿಸುವರು. ಎಆರ್‍ಟಿ ಎಂಓ ಡಾ. ಎಂ. ಎನ್. ಜಯಪಾಲ ಅಧ್ಯಕ್ಷತೆ ವತಿಸುವರು.
ಜಿಲ್ಲಾ ಶಸ್ತ್ರ ವೈದ್ಯಾಧಿಕಾರಿ ಡಾ. ರಘುರಾಮ್, ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ, ಎಆರ್‍ಟಿ ಎಂಓ ಡಾ. ಹೆಚ್ ಆರ್ ಮಂಜು, ಡಿಎಪಿಸಿಯು ಯೂನಿಟ್‍ನ ಡಾ. ಮಹದೇವ . ಚೈತನ್ಯ ನೆಟ್ ವರ್ಕ್‍ನ ಅಧ್ಯಕ್ಷರಾದ ಭಾಗ್ಯ, ಸಾಧನ ಸಂಸ್ಥೆ ಅಧ್ಯಕ್ಷರಾದ ಸುರೇಶ್ ಟಿ.ಜೆ, ವಕೀಲರಾದ ರೂಪಶ್ರೀ ಮತ್ತು ನಂಜುಂಡಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದÉ.
ಜು.26ರಂದು ಇಂಡಿಗನತ್ತ ಗ್ರಾಮದಲ್ಲಿ ಅಂಚೆ ಸಂತೆ
ಚಾಮರಾಜನಗರ, ಜು. 24 – ಅಂಚೆ ಇಲಾಖೆಯು ಕೊಳ್ಳೇಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟ ಇಂಡಿಗನತ್ತ ಗ್ರಾಮದಲ್ಲಿ ಜುಲೈ 26ರಂದು ಅಂಚೆ ಸಂತೆ ಹಮ್ಮಿಕೊಂಡಿದೆ.
ಈ ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ.
ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಂದ ಆಡಳಿತ ನ್ಯಾಯಾಧೀಕರಣ ತರಬೇತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 24:- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2017-18ನೇ ಸಾಲಿಗೆ ಹಿಂದುಳಿದ ವರ್ಗದ  ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದ್ದು ಕಾನೂನು ಪದವೀಧರರಾಗಿರಬೇಕು. ಅರ್ಜಿ ಸಲ್ಲಿಸುವ ಕಡೆಯ ದಿನಾಂಕಕ್ಕೆ ಕಾನೂನು ಪದವಿಯಲ್ಲಿ ತೇರ್ಗಡೆಯಾಗಿ 2 ವರ್ಷ ಮೀರಿರಬಾರದು. ಅಭ್ಯರ್ಥಿಗಳು ಜಿಲ್ಲೆಯವರಾಗಿದ್ದು ಬಾರ್ ಕೌನ್ಸಿಲ್‍ನಲ್ಲಿ ಈಗಾಗಲೇ ನೊಂದಾಯಿಸಿರಬೇಕು. 30 ವರ್ಷ ವಯೋಮಿತಿಯೊಳಗಿದ್ದು ಪ್ರವರ್ಗ 1ರ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ., ಉಳಿದ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 44500 ರೂ.ಗಳ ಮಿತಿಯೊಳಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳು 4 ವರ್ಷಗಳವರೆಗೆ ತರಬೇತಿ ಪಡೆದುಕೊಳ್ಳಬೇಕು. ತರಬೇತಿ ಅವಧಿಯಲ್ಲಿ 4 ಸಾವಿರ ರೂ.ಗಳ ಶಿಷ್ಯ ವೇತನ ಮಂಜೂರು ಮಾಡಲಾಗುವುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ತಹಸೀಲ್ದಾರ್ ಅವರಿಂದ ಪಡೆದ ಜಾತಿ ಪ್ರಮಾಣ ಪತ್ರ, ಆದಾಯ, ಕಾನೂನು ಪದವಿ ಅಂಕಪಟ್ಟಿಗಳು, ಪದವಿ ಪತ್ರ, ಬಾರ್ ಕೌನ್ಸಿಲ್ ನೋಂದಣಿ ಪತ್ರದ ದೃಢೀಕೃತ ಪ್ರತಿಗಳೊಂದಿಗೆ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ ಆಗಸ್ಟ್ 18ರ ಸಂಜೆ 5 ಗಂಟೆಂiÀÉೂಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಕಚೇರಿ ಪ್ರಕಟಣೆ ತಿಳಿಸಿದೆ
ಆ. 1ರಂದು ತಾ.ಪಂ. ಸಾಮಾನ್ಯ ಸಭೆ
ಚಾಮರಾಜನಗರ, ಜು. 24 – ಚಾಮರಾಜನಗರ ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಚ್.ವಿ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 1ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜು. 28ರಂದು ಕೆಂಪೇಗೌಡ ಜಯಂತಿ ಆಚರಣೆ ಪೂರ್ವಭಾವಿ ಸಭೆ
ಚಾಮರಾಜನಗರ, ಜು. 24  ಜಿಲ್ಲಾಡಳಿತದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸುವ ಸಂಬಂಧ ಚರ್ಚಿಸುವ ಸಲುವಾಗಿ ಜುಲೈ 28ರಂದು ಮಧ್ಯಾಹ್ನ 12 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲ ಸಮುದಾಯ ಸಂಘಟನೆಗಳ ಪ್ರತಿನಿಧಿಗಳು, ಮುಖಂಡರು, ನಾಗರಿಕರು ಹಾಜರಾಗಿ ಸಲಹೆ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ಕೋರಿದೆ.
ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ
ಚಾಮರಾಜನಗರ, ಜು. 24- ಕೃಷಿ ಇಲಾಖೆಯು 2016-17ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಕೃಷಿ ಕ್ಷೇತ್ರದಲ್ಲಿ ವಿನೂತನ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ, ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ  ನೀಡುತ್ತಿರುವವರು  ಅರ್ಜಿ ಸಲ್ಲಿಸಬಹುದು. ಸಂಶೋಧನೆ, ಸಾಧನೆಗಳು ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು. ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು.
ಪ್ರಥಮ ಪ್ರಶಸ್ತಿಯು 1 ಲಕ್ಷ ರೂ. ನಗದು, ದ್ವಿತೀಯ ಪ್ರಶಸ್ತಿಯು 75 ಸಾವಿರ, ತೃತೀಯ ಪ್ರಶಸ್ತಿಯು 50 ಸಾವಿರ ರೂ. ಒಳಗೊಂಡಿದೆ. ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಗೆ ತಲಾ 25 ಸಾವಿರ ರೂ ನೀಡಲಾಗುತ್ತದೆ.
ಎಲ್ಲಾ ಕೃಷಿಕರಿಗೂ ಮುಕ್ತ ಅವಕಾಶವಿದೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಜಲಾನಯನ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತರಾದ ಕುಟುಂಬದವರನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನೂ ಸಹ  ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಅರ್ಜಿದಾರರ ಹೆಸರಿನಲ್ಲಿ ಪಹಣಿ ಪತ್ರ (ಭೂ ದಾಖಲೆ,ಆರ್‍ಟಿಸಿ) ಕಡ್ಡಾಯ. ಈ ಹಿಂದೆ ಕೃಷಿ ಪಂಡಿತ ಪ್ರಶಸ್ತಿ ಅಥವಾ ಸಾಧನೆಗಾಗಿ ಕೇಂದ್ರ ರಾಜ್ಯ ಸರ್ಕಾರದಿಂದ ಸಮಾನಾಂತರ ಪ್ರಶಸ್ತಿ ಪಡೆದಿರುವವರು ಮತ್ತೆ ಸ್ಪರ್ಧಿಸುವಂತಿಲ್ಲ.
ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಆಗಸ್ಟ್ 10ರ ಒಳಗೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.

Sunday, 23 July 2017

ಆರೋಪಿಗೆ ಗಲ್ಲು, ಪ್ರಶಂಸನೀಯ ವ್ಯಕ್ತಪಡಿಸಿದ ವರೀಷ್ಟಾಧಿಕಾರಿಗಳು 23-07-2017

ಆರೋಪಿಗೆ ಗಲ್ಲು, ಪ್ರಶಂಸನೀಯ ವ್ಯಕ್ತಪಡಿಸಿದ ವರೀಷ್ಟಾಧಿಕಾರಿಗಳು

 ಪುಲ್ ಡಿಟೆಲ್ಸ್......ಎಸ್.ವೀರಭದ್ರಸ್ವಾಮಿ

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಉಪ-ವಿಭಾಗ, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಹರಳೆ ಗ್ರಾಮದ ಶೇಖರ್ ರವರ ಸವರ್ೆನಂ: 36, 37, 38 ರ ಜಮೀನಿನ ತೋಟದ ಬಳಿ ಖಾಲಿ ಆವರಣದಲ್ಲಿ ದಿನಾಂಕ: 12-05-2015 ಕ್ಕೆ ಹಿಂದೆ ಸುಮಾರು 20 ದಿನಗಳಿಂದ ತಮಿಳುನಾಡಿನ ಹಂದಿಯೂರು ಮತ್ತು ಗುಡ್ಡೆಹೊಸೂರು ಗ್ರಾಮದಿಂದ ಸುಮಾರು 20 ಜನ ಕೂಲಿ ಕಾಮರ್ಿಕರು ಕಬ್ಬು ಕಟಾವು ಕೂಲಿ ಕೆಲಸಕ್ಕೆ ಬಂದು ಟೆಂಟ್ ಹಾಕಿಕೊಂಡು ವಾಸವಾಗಿದ್ದು ಅಕ್ಕಪಕ್ಕದ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದರು.


ಚಿತ್ತ್ರ ಸಂಗ್ರಹ :ಚಾ.ಜಿ.ಪೋ. ಚಾಮರಾಜನಗರ


ರಾತ್ರಿ ವೇಳೆಯಲ್ಲಿ ಕೆಲವರು ಟೆಂಟ್ನಲ್ಲಿ ಇನ್ನು ಕೆಲವರು ಪಿರ್ಯಾದಿ ಶೇಖರ್ ರವರ ತೋಟದ ಮನೆಯ ಮುಂದೆ ಪಡಸಾಲೆಯಲ್ಲಿ ಹಾಗೂ ಮಟ್ಟಾಳೆ ಗುಡಿಸಲಿನಲ್ಲಿ ಮಲಗುತ್ತಿದ್ದರು. ಈ ಪೈಕಿ ಕೂಲಿ ಕಾಮುಕರ ಜೊತೆಯಲ್ಲಿ ಮೇಸ್ತ್ರಿ ರಾಜೇಂದ್ರ ಎಂಬುವನು ಇದ್ದು ಈತನು ಇವರಿಗೆ ಮುಖ್ಯಸ್ಥನಾಗಿರುತ್ತಾನೆ.
ದಿನಾಂಕ: 12-05-2015 ರಂದು ಪಿರ್ಯಾದಿ ಶೇಖರ್ ಹಾಲು ಕರೆಯಲು ಬೆಳಗಿನ ಜಾವ ಜಮೀನಿನ ಬಳಿ ಹೋಗಿ ನೋಡಿದಾಗ ಟೆಂಟ್ನಲ್ಲಿ ವಾಸವಾಗಿದ್ದವರ ಪೈಕಿ  ಕಾಶಿ,  ಶಿವಮ್ಮ,  ರೋಜಾ, ರಾಜೇಂದ್ರ, ರಾಜಮ್ಮ ರವರುಗಳು ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ಬರುತ್ತದೆ.
 ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪಿಎಸ್ಐ ಗೋವಿಂದರಾಜು ರವರು ದೂರು ಸ್ವೀಕರಿಸಿ ಮೊ.ನಂ:71/2015 ಕಲಂ-302 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತಾರೆ.
ಇದು ಘೋರ ಪ್ರಕರಣವಾದರಿಂದ ಕೇಸಿನ ತನಿಖೆಯನ್ನು ವೈ.ಅಮರನಾರಾಯಣ ಸಿಪಿಐ, ಕೊಳ್ಳೇಗಾಲ ವೃತ್ತ ರವರು ಮುಂದುವರೆಸಿರುತ್ತಾರೆ. ಈ ಕೇಸಿನ ಆರೋಪಿ ಪತ್ತೆಗಾಗಿ ಮಾನ್ಯ ಪೊಲೀಸ್ ಅಧೀಕ್ಷಕರು, ಚಾ.ನಗರ ಗ್ರಾಮಾಂತರ ವೃತ್ತ ನಿರೀಕ್ಷಕ ರಾದ ಹೆಚ್.ಎಂ.ಮಹದೇವಪ್ಪ, ಪಿಐ ಡಿಸಿಐಬಿ ಷಣ್ಮುಗವಮರ್ಾ , ಪಿಎಸ್ಐ ಡಿಸಿಐಬಿ ಕುಮಾರ ಆರಾಧ್ಯ ಹಾಗೂ ಸಿಬ್ಬಂದಿಗಳ ತಂಡವನ್ನು ರಚಿಸಿದ್ದು ಸದರಿಯವರು ಆರೋಪಿ ಮುರುಗೇಶ್ @ ಮುರುಗ ಬಿನ್ ಲೇಟ್ ಆಂಡಿಯಪ್ಪನ್, 47 ವರ್ಷ, ಮಲೆಯಾಳ್ಮಕ್ಕಳ್ ಜಾತಿ, ಕೂಲಿ ಕೆಲಸ, ಪೆರಿಯರ್ನಗರ, ಕನ್ನಂಬೂಸಿ ಪೋಸ್ಟ್, ಕೊಳತ್ತೂರು ಪೊಲೀಸ್ ಠಾಣಾ ವ್ಯಾಪ್ತಿ, ಮೆಟ್ಟೂರು ತಾಲ್ಲೂಕು, ಸೇಲಂ ಜಿಲ್ಲೆ ಅನ್ನು ದಿನಾಂಕ: 13-05-2015 ರಂದು ವಶಕ್ಕೆ ಪಡೆದು ತನಿಖಾಧಿಕಾರಿಗಳ ಮುಂದೆ ಹಾಜರ್ಪಡಿಸಿದ್ದು, ವಿಚಾರಣೆಯಲ್ಲಿ ಆರೋಪಿ ಮುರುಗೇಶ್, ತಾನು ರಂಗಸ್ವಾಮಿ ಬಿನ್ ವೇಲ್ಲಯ್ಯನ್, ಸುಂಡಪೋಡು, ಬರಗೂರು 'ಎ' ಗ್ರಾಮ, ಹಂದಿಯೂರು ತಾಲ್ಲೂಕು, ಈರೋಡ್ ಜಿಲ್ಲೆ ಜೊತೆ ಸೇರಿ ಕೃತ್ಯವೆಸಗಿರುವುದು ನಿಜವೆಂದು ಒಪ್ಪಿಕೊಂಡ ಮೇರೆಗೆ ಈತನನ್ನು ಘನ ನ್ಯಾಯಾಲಯ ಹಾಜರ್ಪಡಿಸಿರುತ್ತೆ.
ತನಿಖಾ ಕಾಲದಲ್ಲಿ ಆರೋಪಿ ಮುರುಗೇಶನು ಕೊಲೆ ಮಾಡಲು ಮುಖ್ಯ ಕಾರಣ ಶಿವಮ್ಮ ಮತ್ತು ರಾಜಮ್ಮ ರವರು ತನ್ನ ಜೊತೆ ಅಕ್ರಮ ಸಂಬಂಧಕ್ಕೆ ಸ್ಪಂದಿಸಿಲ್ಲ, ಕಾಶಿಗೆ ಮತ್ತು ರಾಜೇಂದ್ರನ ಜೊತೆ ಸಂಬಂಧ ಹೊಂದಿರುತ್ತಾರೆ. ತನಗೆ ಅವರ ಮೇಲೆ ದ್ವೇಷ ಉಂಟಾಗಿ, ಅವರು ಮಲಗಿ ನಿದ್ರೆ ಮಾಡುವ ಸಮಯದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಕಬ್ಬು ಕಟಾವು ಮಾಡಲು ತಂದಿದ್ದ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ತಿಳಿದುಬಂದಿರುತ್ತದೆ. ಕೊಲೆ ಮಾಡಿದ ನಂತರ ಆರೋಪಿ ಮುರುಗೇಶನನ್ನು ಸ್ಥಳದಿಂದ ಪಾರು ಮಾಡಲು ರಂಗಸ್ವಾಮಿ ಎಂಬ ಆರೋಪಿ ಸಹಾಯ ಮಾಡಿರುವುದಾಗಿ ತಿಳಿದಿರುತ್ತದೆ. ಕೊಲೆಯಾದವರು ಪರಿಶಿಷ್ಟ ಜಾತಿಗೆ ಸೇರಿದವರಾದರಿಂದ ಕೇಸಿನ ಕಡತವನ್ನು ಮುಂದಿನ ತನಿಖೆಗಾಗಿ ಕೊಳ್ಳೇಗಾಲ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್. ಸುರೇಶ್ ಬಾಬು ರವರಿಗೆ ವಗರ್ಾಯಿಸಿದ್ದು ಸದರಿಯವರು ಕೇಸಿನ ತನಿಖೆಯನ್ನು ಮುಂದುವರೆಸಿ ಆರೋಪಿಯ ವಿರುದ್ದ ಕಲಂ: 302, 397 ರೆ/ವಿ 34 ಐಪಿಸಿ ಮತ್ತು 3 ಕ್ಲಾಸ್() (ಗಿ) ಖಅ/ಖಖಿ ಕಂ ಂಛಿಣ-1989 ರೀತ್ಯ ದಿನಾಂಕ: 30-07-2015 ರಂದು ದೋಷಾರೋಪಣೆ ಪತ್ರವನ್ನು ತಯಾರಿಸಿ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಘನ ನ್ಯಾಯಾಲಯವು ಸೆಷಲ್, ಸಿಸಿ ನಂ: 38/2015 ರಲ್ಲಿ ವಿಚಾರಣೆ ಕೈಗೊಂಡಿರುತ್ತದೆ.
ದಿನಾಂಕ: 22-07-2017 ರಂದು ಚಾಮರಾಜನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮಣ.ಎಫ್.ಮಳವಳ್ಳಿ ರವರು ಆರೋಪಿ ಮುರುಗೇಶನಿಗೆ ಮರಣ ದಂಡನೆ (ನೇಣು ಶಿಕ್ಷೆ) ಯನ್ನು ವಿಧಿಸಿ ತೀಪರ್ು ನೀಡಿರುತ್ತಾರೆ. ಸದರಿ ಕೇಸಿನಲ್ಲಿ ಸಕರ್ಾರದ ಪರವಾಗಿ ಸಕರ್ಾರಿ ಅಭಿಯೋಜಕರು ವಾದ ಮಂಡಿಸಿರುತ್ತಾರೆ.
ಈ ಪ್ರಕರಣದ ತನಿಖೆಗೆ ಸಹಕರಿಸಿದ ಪಿಎಸ್ಐ ರವರುಗಳಾದ ಶ್ರೀ ಗೋವಿಂದರಾಜು, ಶ್ರೀ ಮೋಹಿತ್ ಸಹದೇವ್, ಶ್ರೀ ಲಕ್ಷ್ಮೀನಾರಾಯಣ ಹಾಗೂ  ಮಹೇಂದ್ರ, ಶ್ರೀಮತಿ ಶಶಿರೇಖಾ ಮತ್ತು ನ್ಯಾಯಾಲಯದ ಕರ್ತವ್ಯದ  ಶ್ರೀ ರಮೇಶ್, ವಾರೆಂಟ್ ಕರ್ತವ್ಯದ  ನಾಗರಾಜೇಅರಸ್, ಸಮನ್ಸ್ ಕರ್ತವ್ಯದ  ಶ್ರೀ ಮುರುಗೇಶ್, ಆರೋಪಿ ಪತ್ತೆ ತಂಡದ ಸಿಬ್ಬಂದಿಗಳಾದ  ಶ್ರೀ ವಾಗೀಶ್,  ಶ್ರೀ ಅಬ್ರಹಾರ್ ಅಲಿಖಾನ್,  ಶ್ರೀ ಮಂಜುನಾಥ್,  ಶ್ರೀ ಮಹೇಶ್ ರವರುಗಳಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೂಲಭೂತ ಅಗತ್ಯತೆ

ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭಕ್ತಾಧಿಗಳಿಗೆ ಬೇಕಾದ ಮೂಲಭೂತ ಅಗತ್ಯತೆಗಳಾದ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗು ವಿಷೇಶ ದಾಸೋಹ ದ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಯಿತು,
 ಈ ಸಂಧರ್ಭದಲ್ಲಿ ಸ್ವಾಮಿಗೆ ವಿಷೇಶ ಪೂಜೆಗಳು ಹಾಗು ಉತ್ಸವಾದಿಗಳು ಸಕಲ ಸಂಭ್ರಮದಿಂದ ಜರುಗಿದವು, ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಎಮ. ಗಾಯತ್ರಿ(ಹಿ.ಶ್ರೇ) ಹಾಗು ಅಪರ ಜಿಲ್ಲಾದಂಢಾಧಿಕಾರಿಗಳು, ಶ್ರೀ ಬಸವರಾಜು ಉಪಕಾರ್ಯದರ್ಶಿಗಳು(ಪ್ರಭಾರ) ಹಾಗು ದೇವಸ್ಥಾನದ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.



Saturday, 22 July 2017

ನೇರ ಫೋನ್ ಇನ್ ಕಾರ್ಯಕ್ರಮ :24 ದೂರು ದಾಖಲು ,ಸಂತೇಮರಹಳ್ಳಿಯಲ್ಲಿ ನಾಗರೀಕ ಸಮಿತಿ ಸದಸ್ಯರುಗಳ ಸಭೆ (22-07-2017)

ಸಂತೇಮರಹಳ್ಳಿಯಲ್ಲಿ ನಾಗರೀಕ ಸಮಿತಿ ಸದಸ್ಯರುಗಳ ಸಭೆ



ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ, ಸಂತೇಮರಹಳ್ಳಿ ಪೊಲೀಸ್ ಠಾಣೆ ಮತ್ತು ಕುದೇರು ಪೊಲೀಸ್ ಠಾಣೆಗಳ ವ್ಯಾಪ್ತಿಯ ಬೀಟ್ ಗಳಲ್ಲಿನ ನಾಗರೀಕ ಸಮಿತಿ ಸದಸ್ಯರುಗಳ ಸಭೆಯನ್ನು ದಿನಾಂಕ:22-07-2017 ರಂದು ಸಂತೇಮರಳ್ಳಿಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀ ಧರ್ಮೇಂದರ್ ಕುಮಾರ್ ಮೀನಾ, ಐಪಿಎಸ್ ರವರು, ಚಾ.ನಗರ ಉಪ ವಿಭಾಗದ ಡಿವೈಎಸ್ಪಿ ಶ್ರೀ ಗಂಗಾಧರಸ್ವಾಮಿ ರವರು, ಚಾ.ನಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ರಾಜೇಂದ್ರರವರು, ಸಂತೇಮರಹಳ್ಳಿಯ  ಸಬ್ ಇನ್ಸ್ ಪೆಕ್ಟರ್ ಬಸವರಾಜು ಹಾಗೂ ಮತ್ತಿತರ  ಪೊಲೀಸ್ ಅಧಿಕಾರಿಗಳು ಹಾಗೂ ಬೀಟ್ ಸಿಬ್ಬಂದಿಗಳು ಮತ್ತು ಬೀಟ್ ನ ನಾಗರೀಕ ಸಮಿತಿಯ ಸದಸ್ಯರುಗಳು ಹಾಜರಿದ್ದರು.

 ನೇರ ಫೋನ್ ಇನ್ ಕಾರ್ಯಕ್ರಮ :24 ದೂರು ದಾಖಲು 

ಚಾಮರಾಜನಗರ, ಜು. 22 - ಸಾರ್ವಜನಿಕರ ಕುಂದುಕೊರತೆ ಆಲಿಸುವ ಉದ್ದೇಶದಿಂದ ಜಿಲ್ಲಾಡಳಿತದ ವತಿಯಿಂದ ಇಂದು ನಡೆದ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ 24 ದೂರುಗಳು ದಾಖಲಾದವು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್.ಮುನಿರಾಜಪ್ಪ ಅವರ ಸಮ್ಮುಖದಲ್ಲಿ ನಡೆದ ಒಂದು ತಾಸು ಅವಧಿಯ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಸತತವಾಗಿ ದೂರುಗಳು ಕೇಳಿ ಬಂದವು.
ಹೆದ್ದಾರಿಯಲ್ಲಿ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶವಾಗಿದ್ದರೂ ಸಹ ಅಂಗಡಿ ಮುಚ್ಚಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಯಾವುದೇ ಕಡಿವಾಣವನ್ನು ಹಾಕಲು ಅಧಿಕಾರಿಗಳು ಕ್ರಮ ವಹಿಸಿಲ್ಲವೆಂದು ಕರೆ ಮಾಡಿ ಕೆಲ ಭಾಗಗಳಿಂದ ಜನರು ಗಮನ ಸೆಳೆದರು.
ತಾಲ್ಲೂಕಿನ ದಡದಹಳ್ಳಿ ಅಯ್ಯನಪುರ ಗ್ರಾಮಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಬರುತ್ತಿಲ್ಲ. ಇದರಿಂದ ವಿಶೇಷವಾಗಿ ಶಾಲಾಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು. ಸ್ಥಳದಲ್ಲಿಯೆ ಇದ್ದ ಕೆ.ಎಸ್.ಆರ್.ಟಿ.ಸಿ  ಅಧಿಕಾರಿ ರಸ್ತೆ ದುರಸ್ತಿ ಯಾಗದಿರುವ ಕಾರಣ ಬಸ್ ಸಂಚಾರಕ್ಕೆ ತೊಂದರೆಯಾಗಿದೆ ಎಂದರು.
ಸಂತೇಮರಹಳ್ಳಿಯ ಆಸ್ವತ್ರೆಯಲ್ಲಿ ಹೆರಿಗೆ ವಾರ್ಡ್‍ಗಳ ತೊಂದರೆ ಇದೆ. ವೈದ್ಯರ ಕೊರತೆಯು ಇದೆ.ಕೂಡಲೇ ಸಮಸ್ಯೆ ಪರಿಹರಿಸುವಂತೆ ಅಲ್ಲಿನ ನಿವಾಸಿಯೊಬ್ಬರು ತಿಳಿಸಿದರು. ಈಬಗ್ಗೆ ಕ್ರಮ ವಹಿಸಲು ಸೂಚಿಸುವುದಾಗಿ ಹೆಚ್ಚವರಿ ಜಿಲ್ಲಾಧಿಕಾರಿ ಗಾಯತ್ರಿ ಭರವಸೆ ನೀಡಿದರು.
ರಾಮಸಮುದ್ರ ಬಳಿ ರಸ್ತೆ ಹದಗೆಟ್ಟಿದೆ.ಇದನ್ನು ಸರಿಪಡಿಸಬೇಕು.ಪೊಲೀಸ್ ಠಾಣೆ ಬಳಿ ಮದ್ಯದಂಗಡಿ ಇದ್ದು ಇದನ್ನು ಸ್ಥಳಾಂತರಿಸಬೇಕು ಎಂದು ಸ್ಥಳಿಯರೊಬ್ಬರು ಗಮನ ಸೆಳೆದರು.
ಒಡೆಯರಪಾಳ್ಯದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು. ಜಿಲ್ಲಾ ಕೇಂದ್ರ ಗ್ರಂಥಾಯಲದಲ್ಲಿ ಸ್ವರ್ದಾತ್ಮಕ ಪರೀಕ್ಷೆ ಪುಸ್ತಕಗಳು. ಕುಡಿಯುವನೀರು ವ್ಯವಸ್ಥೆ, ಪಡಿತರಅಂಗಡಿ ಸೇರಿದಂತೆ ಇತರೆ ಸಮಸ್ಯೆಗಳು ಜನರಿಂದ ಕೇಳಿ ಬಂದವು.
ಕಾರ್ಯಕ್ರಮದ ನಂತರ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಹೆಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಅವರು ಕಳೆದ ನೇರ ಪೋನ್ ಇನ್ ಕಾರ್ಯಕ್ರಮದ ಸಂದರ್ಭದಲ್ಲಿ ಗಮನಕ್ಕೆ ತರಲಾಗಿರುವ ಕೆಲ ಸಮಸ್ಯೆಗಳ ಬಗ್ಗೆ ಯಾವ ಪರಿಹಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಸಲ್ಲಿಸಲಾಗಿಲ್ಲ.ಅಧಿಕಾರಿಗಳು ಇಂತಹ ನಿರ್ಲಕ್ಷ್ಯ ಧೋರಣೆ ಬಿಟ್ಟು ಆಯಾ ಸಂದರ್ಭದಲ್ಲಿಯೇ ತುರ್ತಾಗಿ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.

     ಕೇಂದ್ರ ವಿದ್ಯಾರ್ಥಿವೇತನಕ್ಕೆ ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ   

 ಚಾಮರಾಜನಗರ, ಜು. 22:-ನ್ಯಾಷನಲ್ ಇ-ಸ್ಕಾಲರ್‍ಶಿಪ್‍ಗೆ ಆನ್ ಲೈನ್ ಮೂಲಕ ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ, ಮೆಟ್ರಿಕ್ ನಂತರದ, ಟಾಪ್ ಕ್ಲಾಸ್ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ  ಅರ್ಜಿ ಸಲ್ಲಿಸಲು ಆಗಸ್ಟ್ 31 ಕಡೆಯ ದಿನವಾಗಿದೆ. ನವೀಕರಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.ಅರ್ಜಿಗಳನ್ನು ಇಲಾಖೆ ವೆಬ್‍ಸೈಟ್ ತಿತಿತಿ.ಜisಚಿbiಟiಣಥಿಚಿಜಿಜಿಚಿiಡಿs.gov.iಟಿ ಮೂಲಕ ಸಲ್ಲಿಸಬೇಕು.ಹೆಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಅಂಗವಿಕಲರ ಮತ್ತು ಹಿರಿಯನಾಗರಿಕರ ಕಲ್ಯಾಣಾಧಿಕಾರಿ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-223688 ಅಥವಾ 224688 ಸಂಪರ್ಕಿಸಬಹುದು

ಜುಲೈ 24 ರಂದು ನಗರದಲ್ಲಿ ವಿಕಲಚೇತನರ ಕುಂದು ಕೊರತೆ ಸಭೆ 


ಚಾಮರಾಜನಗರ, ಜು. 22 :-ಜಿಲ್ಲೆಯ ವಿಕಲಚೇತನರ ಕುಂದುಕೊರತೆ ಆಲಿಸುವ ಸಲುವಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜುಲೈ 24ರಂದು ಬೆಳಗ್ಗೆ 11ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಲಿದೆ.
ಈ ಕುಂದು ಕೊರತೆ ಸಭೆಯಲ್ಲಿ ವಿಕಲಚೇತನರು ಮನವಿಯನ್ನು ಸಲ್ಲಿಸಬಹುದು.ಹೆಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-223688 ಹಾಗೂ 224688 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
           

             ಜುಲೈ 25 ರಂದು ನಗರದಲ್ಲಿ ಮಲೇರಿಯಾ ಜಾಗೃತಿ ಜಾಥಾ


 ಚಾಮರಾಜನಗರ, ಜು. 22 - ಮಲೇರಿಯಾ ವಿರೋಧಿ ಮಾಸಾಚಾರಣೆ ಅಂಗವಾಗಿ ಜಲೈ 25ರಂದು ಬೆಳಗ್ಗೆ 10ಗಂಟೆಗೆ ಚಾಮರಾಜೇಶ್ವರ ದೇವಾಲಯ ಬಳಿ ಜಾಗೃತಿ ಜಾಥಾ ಏರ್ಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 21 July 2017

ಗುಂಡ್ಲುಪೇಟೆ ಇಒ ಕರ್ತವ್ಯದಿಂದ ಬಿಡುಗಡೆ, ಪ್ರೇಕ್ಷಕರ ಮನಮುಟ್ಟಿದ ಯುಗಪುರುಷ 21-07-2017

ಗುಂಡ್ಲುಪೇಟೆ ಇಒ ಕರ್ತವ್ಯದಿಂದ ಬಿಡುಗಡೆ.....VSS

ಗುಂಡ್ಲುಪೆಟೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಪುಷ್ಪ. ಎಂ. ಕಮ್ಮಾರ್ ಅವರನ್ನು ಮಾತೃ ಇಲಾಖೆಯಾದ ಕೃಷಿ ಇಲಾಖೆಗೆ ವಾಪಸ್ಸು ಕಳುಹಿಸಿ ವರ್ಗಾವಣೆ ಮಾಡಲಾಗಿದೆ.
ಸರ್ಕಾರದ ಅಧಿಸೂಚನೆಯಂತೆ ಪುಷ್ಪ. ಎಂ. ಕಮ್ಮಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಸದರಿ ಹುದ್ದೆಯ ಪ್ರಭಾರವನ್ನು ಗುಂಡ್ಲುಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇಶಕರಾದ ಹೆಚ್. ಎಸ್. ಬಿಂದ್ಯಾ ಅವರಿಗೆ ವಹಿಸಿ ಆದೇಶಿಸಿಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ   ಡಾ. ಕೆ. ಹರೀಶ್‍ಕುಮಾರ್ ಅವರು ತಿಳಿಸಿದ್ದಾರೆ.


ಪ್ರೇಕ್ಷಕರ ಮನಮುಟ್ಟಿದ ಯುಗಪುರುಷ-----------------------------------VSS


ಚಾಮರಾಜನಗರ ಜು. 21  ಮಹಾತ್ಮಾ ಗಾಂಧೀಜಿಯವರು, ನೈರ್ಮಲ್ಯಕ್ಕೆ ನೀಡಿದ ಆದ್ಯತೆ, ಆದರ್ಶ ಸಂದೇಶ ಮತ್ತು ರಾಜ್ ಚಂದ್ರಜೀ ಮತ್ತು ಮಹಾತ್ಮಾ ಗಾಂಧಿಯವರ ನಡುವಿನ ಆಧ್ಯಾತ್ಮಿಕ ಸಂಬಂಧ ಕುರಿತು ಕಥಾ ವಸ್ತುವನ್ನು ಹೊಂದಿದ ಯುಗಪುರುಷ ನಾಟಕ ಪ್ರದರ್ಶನ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ.
ಮಹಾತ್ಮರ ಮಹಾತ್ಮ ರಾಜ್ ಚಂದ್ರಜೀ ಮತ್ತು ಮಹಾತ್ಮಾ ಗಾಂಧಿಯವರ ನಡುವಿನ ಆಧ್ಯಾತ್ಮಿಕ ಸಂಬಂಧವನ್ನು ಚಿತ್ರಿಸುವ ಒಂದು ಸ್ಪೂರ್ತಿದಾಯಕ ರೂಪಕವಾಗಿದೆ.


ಶ್ರೀಮದ್‍ಜೀ ಮತ್ತು ಗಾಂಧೀಜಿಯವರ ನಡುವೆ ಆರಂಭವಾದ ಪ್ರಾಮಾಣಿಕ ಸ್ನೇಹ, ಆಧ್ಯಾತ್ಮಿಕ ಮಾರ್ಗದರ್ಶನ ಗಾಂಧೀಜಿಯವರ ಅಭಿಪ್ರಾಯಗಳು ಮತ್ತು ಅವರ ನಂಬಿಕೆಗಳ ಮೇಲೆ ಪ್ರಭಾವ ಬೀರಿದ ಘಟನೆಗಳು ಕಲಾವಿದರಿಂದ ನೈಜವಾಗಿ ಮೂಡಿ ಬಂತು.

ರಾಜ್‍ಚಂದ್ರಜೀಯವರೊಂದಿಗಿನ ಸ್ಪೂರ್ತಿದಾಯಕ ಸಂವಹನ, ಪತ್ರ ವ್ಯವಹಾರ ಮತ್ತು ಅವರ ಆಧ್ಯಾತ್ಮಿಕ ದಾರಿಯ ಹಿಂಬಾಲಿಸುವಿಕೆಯ ಕುರಿತು ಗಾಂಧೀಜಿಯವರು ಸವೆಸಿದ ಆಂತರಿಕ ಮತ್ತು ಬಾಹ್ಯ ವಿಕಸನಗಳ ಕುರಿತು ಪ್ರೇಕ್ಷಕರನ್ನು ರೂಪಕ ಮಂತ್ರ ಮಗ್ದಗೊಳಿಸಿತು.   ನೈರ್ಮಲ್ಯಕ್ಕೆ ಗಾಂಧಿಯವರು ನೀಡಿದ ಮಹತ್ವ ಹಾಗೂ ಸ್ವತ: ತಾವೇ ಕಸ ಸ್ವಚ್ಛಗೊಳಿಸಿ ಇತರರಿಗೆ ಮಾದರಿಯಾಗುವ ಪ್ರಕರಣಗಳು ಪ್ರೇಕ್ಷಕರನ್ನು ತಲುಪಿದವು.                                                                                                                                        



ಗಾಂಧೀಜಿ ಪಾತ್ರದಲ್ಲಿ ಮಾಲತೇಶ್, ಯುವ ಗಾಂಧಿ ಪಾತ್ರದಲ್ಲಿ ಶಶಿಕುಮಾರ್, ರಾಜ್ ಚಂದ್ರ ಅವರ ಪಾತ್ರದಲ್ಲಿ ಕುಶಾಲ್ ಅಭಿನಯಿಸಿ ವಿಶೇಷ ಗಮನಸೆಳೆದರು. ಕಸ್ತೂರಬಾ ಗಾಂಧಿ ಪಾತ್ರದಲ್ಲಿ ಭೂಮಿಕಾ ಪ್ರಸನ್ನ ಅಭಿನಯಿಸಿದರು. ಉಳಿದ ಪಾತ್ರಗಳಲ್ಲಿ ಮಂಜುನಾಥ್, ಕಿರಣ್, ಲೋಕೇಶ್, ಬಿಲಾಲ್, ಎಂ.ಎನ್ ಸೈಯದ್, ಅವಿನಾಶ್, ಚೇತನ್ ಸುಶೀಲ್, ರಾಮನಾಥಗೌಡ, ಸಂಜಯ್, ನವೀನ್, ದೃಷ್ಯಾಂತ್, ಆನಂದ್ ಅಭಿನಯಿಸಿದರು.

ನಿರ್ವಹಣೆ ಶಶಾಂಕ್ ಅವರದ್ದಾಗಿದ್ದು ದ್ವನಿ ನಿರ್ವಹಣೆ ಸಂದೀಪ್ ಜೈನ್ ಹಾಗೂ ಬೆಳಕು ನಿರ್ವಹಣೆ ಅವಿನಾಶ್ ಅವರದ್ದಾಗಿತ್ತು. ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದವರು ಕೃಷ್ಣ ಹೆಬ್ಬಾಲೆ. ಶ್ರೀಮದ್ ರಾಜ್ ಚಂದ್ರ ಮಿಷನ್, ಧರಮ್‍ಪುರ್ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ನಾಟಕ ಪ್ರದರ್ಶಿತವಾಯಿತು.


**************************************************************************

ವಿದ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಳ್ಳಿ : ಜಿ.ಪಂ. ಸದಸ್ಯರಾದ ಸಿ.ಎನ್. ಬಾಲರಾಜು ಸಲಹೆ.............................                            VSS


ಚಾಮರಾಜನಗರ, ಜು. 21 - ಸಮಾಜದ ಉನ್ನತಿಗೆ ಪೂರಕವಾಗಿರುವ ಶಿಕ್ಷಣವನ್ನು ಪಡೆಯಲು ಪ್ರತಿಯೊಬ್ಬರೂ ಮುಂದಾಗುವಂತೆ  ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಅವರು ಸಲಹೆ ಮಾಡಿದರು.
ತಾಲೂಕಿನ ಬದನಗುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಮಾದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿ ಹಮ್ಮಿಕೊಂಡಿರುವ ಶಿಕ್ಷಣ, ಆರೋಗ್ಯ, ಪರಿಸರ ಕುರಿತ ವಿಶೇಷ ಕಾರ್ಯಕ್ರಮದ ಅಂಗವಾಗಿ ನಡೆದ ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಉತ್ತಮ ಮೌಲ್ಯಗಳು ಪಡೆಯಬೇಕು. ಶಿಕ್ಷಣ ಪಡೆದರೆ ಜಾಗೃತಿ ಉಂಟಾಗಿ ಶೋಷಣೆಯೂ ತಪ್ಪಲಿದೆ. ಇಡೀ ಸಮಾಜದ ಅಭ್ಯುದಯಕ್ಕೆ ಶಿಕ್ಷಣವು ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆಯೂ ಸಿಗುತ್ತಿದೆ ಎಂದರು.
ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಹೆಚ್ಚು ಗಮನ ಹರಿಸಬೇಕು. ನಿರಂತರ ಹಾಗೂ ಕಾಳಜಿಯಿಂದ ಅಧ್ಯಯನ ಮಾಡಿ ಉನ್ನತ ಸ್ಥಾನಕ್ಕೆ ಏರುವ ಗುರಿ ಹೊಂದಬೇಕು. ವಿದ್ಯಾರ್ಥಿ ಜೀವನವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಬಾಲರಾಜು ಅವರು ಕಿವಿಮಾತು ಹೇಳಿದರು.
ಪರಿಸರ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕಿದೆ. ನಮ್ಮ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕಿದೆ. ಗಿಡಮರಗಳನ್ನು ಪೋಷಿಸುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿಯೇ ಮಾದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಮೂರು ಪ್ರೌಢಶಾಲೆಗಳಲ್ಲಿ ಪರಿಸರ ಪೂರಕ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆರೋಗ್ಯದ ಹಿತದೃಷ್ಠಿಯಿಂದ ಎಲ್ಲ ಮನೆಗಳಲ್ಲೂ ಶೌಚಾಲಯ ಹೊಂದಬೇಕಿದೆ. ಶೌಚಾಲಯ ನಿರ್ಮಾಣಕ್ಕಾಗಿ ಸಾಮಾನ್ಯ ವರ್ಗದವರಿಗೆ 12 ಸಾವಿರ ರೂ., ಪ.ಜಾ, ಪ.ಪಂ. ವರ್ಗದವರಿಗೆ 15 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ನಿವೇಶನ ಕೊರತೆ ಕಂಡುಬಂದರೆ ಸಮುದಾಯ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ. ಈ ಸೌಲಭ್ಯಗಳನ್ನು ಪಡೆಯಲು ಗ್ರಾಮೀಣ ಜನರು ಮುಂದಾಗಬೇಕೆಂದು ಬಾಲರಾಜು ಅವರು ತಿಳಿಸಿದರು.
ಮಾದಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಕ್ಷಣ ಸುಧಾರಣೆ, ಆರೋಗ್ಯ ಕಾರ್ಯಕ್ರಮಗಳ ಪ್ರಗತಿಗಾಗಿ ವಿಶೇಷ ಒತ್ತು ನೀಡಲಾಗುತ್ತಿದೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಂವಾದ, ಇತರೆ ಪ್ರಗತಿಪರ ಕಾರ್ಯಕ್ರಮಗಳನ್ನು  ಕೈಗೊಳ್ಳಲಾಗಿದೆ ಎಂದು ಬಾಲರಾಜು ತಿಳಿಸಿದರು.
ಸಂವಾದದ ವೇಳೆ ವಿದ್ಯಾರ್ಥಿಗಳು ಕೆಲವು ಸಮಸ್ಯೆಗಳನ್ನು ಮುಂದಿಟ್ಟರು. ಈ ಎಲ್ಲ ಕೊರತೆಗಳನ್ನು ನೀಗಿಸಲು ಅಗತ್ಯವಿರುವ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಸೂಚನೆ ನೀಡಲಾಗುವುದೆಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಲರಾಜು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮೀಪತಿ ಅವರು ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುವುದು. ಇಲಾಖಾ ವತಿಯಿಂದ ಲಭ್ಯವಾಗಬೇಕಿರುವ ಎಲ್ಲ ಯೋಜನೆಗಳನ್ನು ತಲುಪಿಸುವ ದಿಸೆಯಲ್ಲಿ ಮುಂದಾಗಿದ್ದೇವೆ ಎಂದರು.
ತಾಲೂಕು ಪಂಚಾಯತ್ ಸದಸ್ಯರಾದ ಬಸವಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್, ಮಹದೇವಸ್ವಾಮಿ, ಮೇಲಾಜಿಪುರದ ಗುರುಸ್ವಾಮಿ, ರಾಜಶೇಖರ್, ಶಾಲಾ ಮುಖ್ಯ ಶಿಕ್ಷಕರಾದ ಬೆಳ್ಳೇಗೌಡ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ಸೆಸ್ಕಾಂ : ಜು. 24ರವರೆಗೆ ತಂತ್ರಾಂಶ ತುರ್ತು ನಿರ್ವಹಣಾ ಕಾರ್ಯ

ಚಾಮರಾಜನಗರ, ಜು. 21 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವ್ಯಾಪ್ತಿಯ ನಗರದಲ್ಲಿ ಜುಲೈ 21 ರಿಂದ 24ರ ಬೆಳಿಗ್ಗೆ 9 ಗಂಟೆಯವರೆಗೆ ಆರ್.ಎ.ಪಿ.ಡಿ.ಆರ್.ಪಿ. ತಂತ್ರಾಂಶದ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಆರ್.ಎ.ಪಿ.ಡಿ.ಆರ್.ಪಿ. ತಂತ್ರಾಂಶಗಳಾದ ವಿದ್ಯುನ್ಮಾನ ಪಾವತಿ (ತಿತಿತಿ.ಛಿesಛಿmಥಿsoಡಿe.oಡಿg), ಕರ್ನಾಟಕ ಮೊಬೈಲ್ ಒನ್ ಮತ್ತು ವಿದ್ಯುನ್ಮಾನ ಹೊಸ ತಂತ್ರಾಂಶ (ತಿತಿತಿ.iಟಿಜಿovieತಿಠಿoಡಿಣಚಿಟ) ಕಾರ್ಯನಿರ್ವಹಣೆ ಮಾಡುವುದಿಲ್ಲ.
ಎಟಿಪಿ ಯಂತ್ರ ಹಾಗೂ ಸೆಸ್ಕಾಂನ ನಗದು ಕೌಂಟರ್‍ಗಳು (ಕ್ಯಾಶ್ ಕೌಂಟರ್) ಎಂದಿನಂತೆ ಆಫ್ ಲೈನ್ ತಂತ್ರಾಂಶದ ಮೂಲಕ ಕಾರ್ಯ ನಿರ್ವಹಣೆ ಮಾಡಲಿದೆ. ಗ್ರಾಹಕರು ನಿಗಮದೊಂದಿಗೆ ಸಹಕರಿಸುವಂತೆ ಚೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಜು. 22ರಂದು ಜಿ.ಪಂ. ಸಾಮಾನ್ಯ ಸಭೆ

ಚಾಮರಾಜನಗರ, ಜು. 21 :- ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಂ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಜುಲೈ 22ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಜು. 22ರಂದು ನೇರ ಫೋನ್ ಇನ್ ಕಾರ್ಯಕ್ರಮ
ಚಾಮರಾಜನಗರ, ಜು. 21- ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಜುಲೈ 22ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ತಮ್ಮ ಕುಂದುಕೊರತೆಗಳಿದ್ದಲ್ಲಿ ದೂ.ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ನೈರ್ಮಲ್ಯ ಕಾರ್ಯಕ್ರಮಗಳಿಗೆ ಸಹಕಾರ ಅಗತ್ಯ: ಡಾ. ಕೆ. ಹರೀಶ್‍ಕುಮಾರ್ 


ಚಾಮರಾಜನಗರ ಜು 21 - ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ಉದ್ದೇಶದಿಂದ ಅನುಷ್ಟಾನಗೊಳಿಸಲಾಗುತ್ತಿರುವ ಸ್ವಚ್ಛ ಭಾರತ್ ಮಿಷನ್‍ಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿಗಳಾದ ಡಾ. ಕೆ. ಹರೀಶ್ ಕುಮಾರ್ ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಆಯೋಜಿತವಾಗಿದ್ದ ಗಾಂಧೀಜಿಯವರ ಸ್ವಚ್ಛತೆ ಕುರಿತ ಸಂದೇಶ ಹಾಗೂ ಶ್ರೀಮದ್ ರಾಜ್ ಚಂದ್ರಜೀ ಅವರ ಆಧ್ಯಾತ್ಮಿಕ ಸಂಬಂಧವನ್ನು ಪ್ರಸ್ತುತ ಪಡಿಸುವ ‘ಯುಗಪುರುಷ’ ನಾಟಕ ಪ್ರದರ್ಶನ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 30 ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. 2018ರ ಅಕ್ಟೋಬರ್ 2 ರ ವೇಳೆಗೆ ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ಉದ್ದೇಶದೊಂದಿಗೆ ನೈರ್ಮಲ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಸ್ವಚ್ಛ ಭಾರತ್ ಮಿಷನ್ ಅಡಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಕೈಗೊಳ್ಳಲಾಗಿದೆ ಎಂದರು.
ಶೌಚಾಲಯ ನಿರ್ಮಾಣ ಮಾಡಿದರಷ್ಟೇ ಸಾಲದು. ಅದರ ಬಳಕೆಯಾದರೆ ಮಾತ್ರ ಆರೋಗ್ಯ ಸಮಾಜ ನಿರ್ಮಾಣವಾಗುತ್ತದೆ. ವೈಯಕ್ತಿಕ ಆರೋಗ್ಯ ದೃಷ್ಟಿಯಿಂದ ಎಲ್ಲರೂ ಶೌಚಾಲಯ ನಿರ್ಮಿಸಿ ಕೊಂಡು ಉಪಯೋಗಿಸಬೇಕಿದೆ. ಈ ಕುರಿತು ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂದು ತಿಳಿಸಿದರು.

ಗಾಂಧೀಜಿಯವರು  ಗ್ರಾಮೀಣ ಪ್ರದೇಶ ಅಭಿವೃದ್ದಿಯಾದರೆ ದೇಶದ ಪ್ರಗತಿ ಆದಂತೆ ಎಂದು ಪ್ರತಿಪಾದಿಸಿದ್ದರು. ಗ್ರಾಮೀಣ ಅಭಿವೃದ್ದಿ ಗಾಂಧೀಜಿಯವರ ಕನಸು ಸಹ ಆಗಿತ್ತು. ಸ್ವಚ್ಛತೆ ಬಗ್ಗೆ ವಿಶೇಷವಾಗಿ ಪ್ರಾಧಾನ್ಯತೆ ನೀಡುವ ಬಗ್ಗೆ ಗಾಂಧೀಜಿಯವರು ಹೇಳುತ್ತಲೇ ಬಂದರು. ಗಾಂಧಿಯವರು ತಿಳಿಸಿದ ನೈರ್ಮಲ್ಯ ಸಂದೇಶ ಜಾಗೃತಿಗಾಗಿ ಯುಗಪುರುಷ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕೆ. ಹರೀಶ್ ಕುಮಾರ್ ತಿಳಿಸಿದರು.
ಪ್ರಸ್ತುತ ಸಂಧರ್ಭದಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಮೌಲ್ಯಗಳು ಹಾಗು ಮೂಲ ತತ್ವಗಳು ಮರೆಯಾಗುತ್ತಿವೆ. ಇಂತಹ ಹೊತ್ತಿನಲ್ಲಿ ಅರಿವು ಮೂಡಿಸುವ ಯುಗಪುರುಷದಂತಹ ನಾಟಕ ಪ್ರದರ್ಶನಗಳು ಬೇಕಿದೆ ಎಂದು ಕೆ. ಹರೀಶ್ ಕುಮಾರ್‍ರವರು ಅಭಿಪ್ರಾಯಪಟ್ಟರು.
ನಾಟಕ ಪ್ರದರ್ಶನದ ಬಳಿಕ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಎಂ. ಗಾಯತ್ರಿ ಅವರು ಶ್ರೀಮದ್ ರಾಜ್ ಚಂದ್ರಜೀ ಮತ್ತು ಗಾಂಧೀಜಿಯವರ ಮಧ್ಯೆ ಇದ್ದ ಆಧ್ಯಾತ್ಮಿಕ ಬಾಂಧವ್ಯ ಹಾಗೂ ಗಾಂಧೀಜಿಯವರು ನೈರ್ಮಲ್ಯಕ್ಕೆ  ತಾವೇ ಸ್ವತ: ಇಳಿದು ಅದರ ಮಹತ್ವವನ್ನು ಸಾರಿದ ಘಟನೆಗಳು ಅತ್ಯಂತ ನೈಜವಾಗಿ ಕಲಾವಿದರಿಂದ ಮೂಡಿ ಬಂದಿತು. ಚಿಕ್ಕಪಾತ್ರದಿಂದ ಹಿಡಿದು ಪ್ರಮುಖ ಪಾತ್ರಧಾರಿಗಳೆಲ್ಲರೂ ಅತ್ಯತ್ತಮವಾಗಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದಾರೆ ಎಂದು ಪ್ರಶಂಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಯೋಜನಾಧಿಕಾರಿ ಎಂ ಮಾದೇಶು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Thursday, 20 July 2017

ಸ್ವಾತಂತ್ರ್ಯ ದಿನ ಆಚರಣೆ ಪೂರ್ವಸಿದ್ಧತೆಗೆ ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಸೂಚನೆ 20-07-2017

ಸ್ವಾತಂತ್ರ್ಯ ದಿನ ಆಚರಣೆ ಪೂರ್ವಸಿದ್ಧತೆಗೆ ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಸೂಚನೆ

 ಚಾಮರಾಜನಗರ, ಜು. 20 - ಜಿಲ್ಲಾಡಳಿತ ಹಾಗೂ ಎಲ್ಲ ಸಂಘಸಂಸ್ಥೆಗಳ ಸಹಕಾರದೊಂದಿಗೆ ಆಗಸ್ಟ್ 15ರಂದು ಜಿಲ್ಲಾ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನ ಆಚರಣೆ ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಯೋಜನೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.
ಆರಂಭದಲ್ಲೇ ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಮಾತನಾಡಿ ಕಳೆದ ಬಾರಿ ನಡೆದ ಕಾರ್ಯಕ್ರಮದ ಅನುಭವದ ಹಿನ್ನೆಲೆಯಲ್ಲಿ ಈ ಬಾರಿ ಮಾರ್ಪಾಡುಗಳ ಅಗತ್ಯವಿದ್ದರೆ ಸಲಹೆ ನೀಡುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು ಸಂಘಟನೆ ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಎಲ್ಲರು ಕುಳಿತುಕೊಳ್ಳುವ ಸ್ಥಳದಲ್ಲಿ ಸಂಪೂರ್ಣ ನೆರಳಿನ ವ್ಯವಸ್ಥೆಯಾಗಬೇಕು. ಶಾಲಾಕಾಲೇಜು ಮಕ್ಕಳು ಕಾರ್ಯಕ್ರಮಕ್ಕಾಗಿ ತಾಲೀಮು ನಡೆಸುವ ದಿನಗಳಂದು ಕುಡಿಯುವ ನೀರು, ಮೈಕ್ ವ್ಯವಸ್ಥೆ ಮಾಡಬೇಕು. ಶಾಲೆಗಳಿಂದ ಕರೆತಂದು ಕಾರ್ಯಕ್ರಮದ ನಂತರ ಹೊಣೆಗಾರಿಕೆಯಿಂದ ಮಕ್ಕಳನ್ನು ಮನೆಗೆ ತಲುಪಿಸುವ ಜವಾಬ್ದಾರಿ ನಿರ್ವಹಣೆ ಮಾಡಬೇಕು. ಶಿಷ್ಠಾಚಾರದಲ್ಲಿ ಯಾವುದೇ ಲೋಪವಾಗಬಾರದು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಬೇಕು. ಬ್ಯಾಂಕು, ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ನೆರವೇರಬೇಕು ಎಂಬುದೂ ಸೇರಿದಂತೆ ಇನ್ನಿತರ ಸಲಹೆಗಳನ್ನು ನೀಡಿದರು.
ಎಲ್ಲ ಸಲಹೆ ಅಭಿಪ್ರಾಯಗಳನ್ನು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸ್ವಾಗತ ಸಮಿತಿ, ವೇದಿಕೆ, ಧ್ವಜಾ ಸಿದ್ಧತಾ ಸಮಿತಿ, ಬಹುಮಾನ ವಿತರಣೆ ಸಮಿತಿ, ಸಾಂಸ್ಕøತಿಕ ಕಾರ್ಯಕ್ರಮ ಸಮಿತಿ, ಪೆರೇಡ್ ಇತರೆ ಸಮಿತಿಗಳು ಅಗತ್ಯವಾಗಿ ನಿರ್ವಹಣೆ ಮಾಡಬೇಕಿರುವ ಕೆಲಸಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಥಸಂಚಲನ, ಸಾಂಸ್ಕøತಿಕ ಕಾರ್ಯಕ್ರಮ ತಾಲೀಮು ಸಂದರ್ಭದಲ್ಲಿ ಯಾವುದೇ ಕೊರತೆಯಾಗದಂತೆ ಕುಡಿಯುವ ನೀರು, ಮೈಕ್, ಇನ್ನಿತರ ವ್ಯವಸ್ಥೆಯನ್ನು ನಿರ್ವಹಿಸಬೇಕು.  ಶಾಲಾಮಕ್ಕಳನ್ನು ಕರೆತರುವ ಜವಾಬ್ದಾರಿಯಲ್ಲೂ ನಿರ್ಲಕ್ಷ್ಯ ತೋರಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾರ್ಯಕ್ರಮದಂದು ಹಿರಿಯ ಸ್ವಾತಂತ್ರ್ಯ ಯೋಧರನ್ನು ಗೌರವಿಸಬೇಕು. ಈ ಹಿನ್ನೆಲೆಯಲ್ಲಿ ಹಿರಿಯ ಸ್ವಾತಂತ್ರ್ಯ ಯೋಧರನ್ನು ಗುರುತಿಸಿ ಆಹ್ವಾನಿಸಿ ಕರೆತಂದು ಸನ್ಮಾನಿಸಿದ ಬಳಿಕ ಅವರನ್ನು ಪುನಃ ಕಳುಹಿಸಿಕೊಡುವ ಜವಾಬ್ದಾರಿಯನ್ನು ತಹಸೀಲ್ದಾರ್ ನಿರ್ವಹಿಸುವಂತೆ ಸೂಚಿಸಿದರು.
ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ವೇದಿಕೆ, ಆಹ್ವಾನಿತರು, ವಿದ್ಯಾರ್ಥಿಗಳು, ಗಣ್ಯರು ಕುಳಿತುಕೊಳ್ಳಲು ಶಾಮಿಯಾನ ಹಾಗೂ ಆಸನಗಳ ವ್ಯವಸ್ಥೆ ಮಾಡಬೇಕು. ಶಿಷ್ಠಾಚಾರದಲ್ಲಿ ಲೋಪವಿಲ್ಲದಂತೆ ಪೂರ್ವಭಾವಿಯಾಗಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಎಲ್ಲ ಸಿದ್ಧತೆಯನ್ನು ಕಾರ್ಯಕ್ರಮದ ಹಿಂದಿನ ದಿನದ 6 ಗಂಟೆಯೊಳಗೆ ಪೂರ್ಣವಾಗಿರಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸಂಜೆ ಚಾಮರಾಜೇಶ್ವರ ದೇವಾಲಯ ಬಳಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ದೇಶಪ್ರೇಮ ಆಧಾರಿತ ಕಾರ್ಯಕ್ರಮಗಳು ಮೂಡಿಬರಬೇಕು. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು ಎಂದರು.
ಖಾಸಗಿ ಸೇರಿದಂತೆ ಎಲ್ಲ ಶಾಲೆಗಳಲ್ಲೂ ಕಡ್ಡಾಯವಾಗಿ ಸ್ವಾತಂತ್ರ್ಯ ದಿನ ಆಚರಣೆಯಾಗಬೇಕು. ಬ್ಯಾಂಕುಗಳು, ಸರ್ಕಾರಿ ಕಚೇರಿಗಳಲ್ಲಿ ಸಹ ಕಡ್ಡಾಯವಾಗಿ  ಧ್ವಜಾರೋಹಣ ನೆರವೇರಬೇಕು. ತಾವು ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಧ್ವಜಾರೋಹಣ ಸಂಬಂಧ ಸೂಚನೆ ನೀಡಲಿದ್ದೇನೆ. ಎಲ್ಲ ಶಾಲೆಗಳಿಗೆ ನಿರ್ದೇಶನ ನೀಡಲಾಗುತ್ತದೆ ಎಂದರು.
ಸ್ವಾತಂತ್ರ್ಯೋತ್ಸವ ದಿನದಂದು ಎಲ್ಲ ಅಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿಯೊಂದಿಗೆ ಕಡ್ಡಾಯವಾಗಿ ಹಾಜರಿರಬೇಕು. ಅಧಿಕಾರಿ ಸಿಬ್ಬಂದಿಯವರ ಹಾಜರಾತಿಯನ್ನು ಗಮನಿಸಲಾಗುವುದು. ಜಿಲ್ಲಾ ಕೇಂದ್ರವಲ್ಲದೆ ಎಲ್ಲ ಭಾಗಗಳಲ್ಲಿಯೂ ಸರ್ಕಾರಿ ಅಧಿಕಾರಿ ಸಿಬ್ಬಂದಿ ಸ್ವಾತಂತ್ರ್ಯ ದಿನ ಆಚರಣೆ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕು. ಗೈರುಹಾಜರಾಗುವವರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹರೀಶ್ ಕುಮಾರ್ ತಿಳಿಸಿದರು.
ಹೆಚ್ಚುವರಿ ಜಿಲಾಧಿಕಾರಿ ಕೆ.ಎಂ. ಗಾಯತ್ರಿ, ಜಿ.ಪಂ. ಉಪಕಾರ್ಯದರ್ಶಿ ಮುನಿರಾಜಪ್ಪ,  ಮುಖಂಡರಾದ ಶಾ. ಮುರಳಿ, ಚಾ.ರಂ. ಶ್ರೀನಿವಾಸಗೌಡ, ನಿಜಧ್ವನಿ ಗೋವಿಂದರಾಜು, ಚಾ.ಗು. ನಾಗರಾಜು, ಆಲೂರು ನಾಗೇಂದ್ರ, ಗು. ಪುರುಷೋತ್ತಮ್, ಬ್ಯಾಡಮೂಡ್ಲು ಬಸವಣ್ಣ, ಸೋಮಶೇಖರ ಬಿಸಲ್ವಾಡಿ, ಶಿವಣ್ಣ, ಜಿ. ಬಂಗಾರು, ಚಾ.ಹ. ಶಿವರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶರಾದ ಮಂಜುಳ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜು. 22ರಂದು ಜಿ.ಪಂ. ಸಾಮಾನ್ಯ ಸಭೆ

ಚಾಮರಾಜನಗರ, ಜು. 20 - ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯು ಅಧ್ಯಕ್ಷರಾದ ಎಂ. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಜುಲೈ 22ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಜು. 22ರಂದು ನೇರ ಫೋನ್ ಇನ್ ಕಾರ್ಯಕ್ರಮ

ಚಾಮರಾಜನಗರ, ಜು. 20 - ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮವನ್ನು ಜುಲೈ 22ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಾಗರಿಕರು ತಮ್ಮ ಕುಂದುಕೊರತೆಗಳಿದ್ದಲ್ಲಿ ದೂ.ಸಂಖ್ಯೆ 08226-224888ಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಜುಲೈ 21ರಂದು ಸ್ವಚ್ಛತೆ, ಸತ್ಯ, ಅಹಿಂಸೆ, ಸಂದೇಶಗಳ ‘ಯುಗಪುರುಷ’ ವಿಶಿಷ್ಟ ನಾಟಕ ಪ್ರದರ್ಶನ
ಚಾಮರಾಜನಗರ, ಜು. 20 - ಮಹಾತ್ಮಾ ಗಾಂಧೀಜಿಯವರ ಜೀವನ ಶೈಲಿ, ನೈರ್ಮಲ್ಯಕ್ಕೆ ನೀಡಿದ ಆದ್ಯತೆ ಹಾಗೂ ಆದರ್ಶ ಸಂದೇಶಗÀ ಕುರಿತು ಕಥಾ ವಸ್ತುವನ್ನು ಹೊಂದಿರುವ ಅತ್ಯಂತ ವಿಶಿಷ್ಟ ನಾಟಕ ‘ಯುಗಪುರುಷ’ ಪ್ರದರ್ಶನ ಇದೇ ಪ್ರಥಮ ಬಾರಿಗೆ ಜುಲೈ 21 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ಏರ್ಪಾಡಾಗಿದೆ.

ಅಹಿಂಸೆ, ಸತ್ಯ, ಸ್ವಚ್ಛತೆ ಮತ್ತು ಮಹಾತ್ಮರ ಸಂದೇಶಗಳನ್ನು ಬಿಂಬಿಸುವ ಯುಗಪುರುಷ ನಾಟಕವು ಅತ್ಯಂತ ಪರಿಣಾಮಕಾರಿಯಾಗಿ ಮನ: ಮುಟ್ಟಲಿದೆ.

ರಾಜ್‍ಚಂದ್ರಜೀ ನಿಷ್ಠಾವಂತ ಹಿಂಬಾಲಕರಾಗಿರುವ ರಾಜ್‍ಚಂದ್ರ ಮಿಷನ್ ಧರಮ್‍ಪೂರದ ಸಂಸ್ಥಾಪಕರಾದ ಗುರುದೇವ ರಾಕೇಶ್ ಭಾಯ್‍ರವರ ಸ್ಪೂರ್ತಿ ಮತ್ತು ಮಾರ್ಗದರ್ಶನದ ಹಿನ್ನೆಲೆಯಲ್ಲಿ  ಈ ರೂಪಕವನ್ನು ಪ್ರಸ್ತುತಪಡಿಸಲಾಗುತ್ತಿದೆ.

ಯುಗಪುರುಷ – ಮಹಾತ್ಮರ ಮಹಾತ್ಮ ರಾಜ್ ಚಂದ್ರಜೀ ಮತ್ತು ಮಹಾತ್ಮಾ ಗಾಂಧಿಯವರ ನಡುವಿನ ಆಧ್ಯಾತ್ಮಿಕ ಸಂಬಂಧವನ್ನು ಚಿತ್ರಿಸುವ ಒಂದು ಸ್ಪೂರ್ತಿದಾಯಕ ರೂಪಕವಾಗಿದೆ.

ಯುಗಪುರುಷ ಕನ್ನಡದ ಅವತರಣಿಕೆಯು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್. ಕೆ ಪಾಟೀಲ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಬೆಂಬಲ ಮತ್ತು ಪ್ರೇರಣೆಯಿಂದ ಸಾಧ್ಯವಾಗಿದೆ.

ರಾಜ್ಯಾದ್ಯಂತ ಕುಡಿಯುವ ನೀರು ಪೂರೈಕೆ ಇರಲಿ, ವೈಯಕ್ತಿಕ ಶೌಚಾಲಯಗಳಿಂದ ಹಿಡಿದು ಸಾರ್ವಜನಿಕ ಶೌಚಾಲಯ ಮತ್ತು ಸ್ನಾನ ಗೃಹ ಸಂಕೀರ್ಣಗಳ ನಿರ್ಮಾಣದಂತಹ ಬಲಯುತವಾದ ಮೂಲ ಸೌಕರ್ಯ ಒದಗಿಸುವಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮುಂಚೂಣಿಯಲ್ಲಿದೆ.

ಸ್ವಚ್ಛತೆ ಮತ್ತು ವೈಯಕ್ತಿಕ ನೈರ್ಮಲ್ಯಗಳಿಗೆ ಗಾಂಧೀಜಿಯವರು ನೀಡುತ್ತಿದ್ದ ಅತ್ಯಂತ ಪ್ರಧಾನವಾದ ಮಹತ್ವವನ್ನು ಪ್ರಮುಖವಾಗಿ ಬಿಂಬಿಸಿದ ಮಹಾತ್ಮಾ ಗಾಂಧೀಜಿಯವರ ಉಲ್ಲೇಖಗಳು ಮತ್ತು ಸ್ವಾರಸ್ಯಕರವಾದ ಉತ್ತೇಜಕ ಸಾರ್ಥಕಗೊಳಿಸುವ ಹೇಳಿಕೆಗಳಿಂದ ಇತಿಹಾಸ ತುಂಬಿಕೊಂಡಿದೆ. ದೇಶದಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಸುಧಾರಿಸುವ ಅಗತ್ಯದ ಕುರಿತು ಗಾಂಧೀಜಿ ಮಾತನಾಡಿದರು, ‘ರಾಜಕೀಯ ಸ್ವಾತಂತ್ಯಕ್ಕಿಂತ ನೈರ್ಮಲ್ಯ ಮಹತ್ವದ್ದು’ ಎಂಬುದು ಗಾಂಧೀಜಿಯವರ ಉವಾಚವಾಗಿದೆ.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ದೂರದೃಷ್ಟಿಯ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮ ಶತಾಬ್ಧಿ ವರ್ಷವಾದ 2018ರ ಅಕ್ಟೋಬರ್-02 ರೊಳಗಾಗಿ ಕರ್ನಾಟಕ ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿಸುವ ಗುರಿಯನ್ನು ಹೊಂದಿದೆ.
ನೈರ್ಮಲ್ಯಕ್ಕೆ ಗಾಂಧೀಜಿಯವರು ನೀಡಿದ ಪ್ರಾಧಾನ್ಯತೆ ಬಗ್ಗೆ ತಿಳಿಸಿ ಈ ಮೂಲಕ ಸ್ವಚ್ಛತೆಯ ಮಹತ್ವವನ್ನು ಹಾಗೂ ಅಹಿಂಸೆ, ಸತ್ಯ, ಸಂದೇಶವನ್ನು ಸಾರುವ ಮಹತ್ತರ ಆಶಯದೊಂದಿಗೆ  ಯುಗಪುರುಷ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಯುಗಪುರುಷ ನಾಟಕ ಕನ್ನಡದಲ್ಲಿ 20ಕ್ಕೂ ಹೆಚ್ಚು ಪ್ರದರ್ಶಿತವಾಗಿದ್ದು ಜನಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದ ಅನೇಕ ಮಠಾಧೀಶರು, ಸಚಿವರು, ಶಾಸಕರು, ಪಂಚಾಯತ್‍ರಾಜ್‍ನ ಚುನಾಯಿತ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಹಿರಿಯ ಗಾಂಧಿವಾದಿಗಳು ಮತ್ತು ಯುವ ಕಾಲೇಜು ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದ ಗಣ್ಯರು ಮತ್ತು ಸರ್ಕಾರಿಯೇತರ ಸಂಘ-ಸಂಸ್ಥೆಗಳು, ನಾಟಕ ಪ್ರಿಯರು, ನಾಗರಿಕರು ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ರಾಜ್ಯದಲ್ಲೇ ಈ ನಾಟಕವನ್ನು ವೀಕ್ಷಿಸಿರುವುದು ವಿಶೇಷವಾಗಿದೆ.

‘ಕೋಡ್ ಮಂತ್ರ’ ಖ್ಯಾತಿಯ ರಾಜೇಶ್ ಜೋಷಿ “ಯುಗಪುರುಷ” ರೂಪಕವನ್ನು ನಿರ್ದೇಶಿಸಿದ್ದಾರೆ. ಮರಾಠಿ ಖ್ಯಾತಿಯ ಹೆಸರಾಂತ ಬರಹಗಾರ ಉತ್ತಮ್ ಗಡಾರವರು ಬರೆದ ಕಥೆಯನ್ನಾಧರಿಸಿದ್ದು ಸಂಗೀತ ನಿರ್ದೇಶನವನ್ನು ಸಚಿನ್ ಜಿಗದ್ವಯರ್ ರವರು ನೀಡಿದ್ದಾರೆ.
ಶ್ರೀಮದ್ ರಾಜ್ ಚಂದ್ರ ಮಿಷನ್ ಧರ್ಮಾಪುರ್ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಸಂಯುಕ್ತ ಸಹಯೋಗದಲ್ಲಿ ಈ ರೂಪಕದ ಕನ್ನಡ ಅವತರಣಿಕೆಯನ್ನು ಚಾಮರಾಜನಗರದ ಜನತೆಯ ಮುಂದೆ ಜುಲೈ 21ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಜಿಲ್ಲೆಯ ಜನತೆ ಹೆಚ್ಚು ಸಂಖ್ಯೆಯಲ್ಲಿ ಈ ನಾಟಕ ಪ್ರದರ್ಶನವನ್ನು ವೀಕ್ಷಿಸಬೇಕು. ಸ್ವಚ್ಛ ಭಾರತ ಮಿಷನ್ ಅನುಷ್ಟಾನಕ್ಕೆ ಪೂರಕವಾಗಿಯೂ ಇರುವ ಕಾರ್ಯಕ್ರಮಕ್ಕೆ ಸ್ಪಂದಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಜಿಲ್ಲೆಯ ನಾಗರಿಕರಲ್ಲಿ ಕೋರಿದ್ದಾರೆ.

ಜುಲೈ 21ರಂದು ಯುಗಪುರುಷ ನಾಟಕ ಪ್ರದರ್ಶನಕ್ಕೆ ಚಾಲನೆ


ಚಾಮರಾಜನಗರ, ಜು. 20 :- ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ ಸ್ವಚ್ಛತೆ ಇನ್ನಿತರ ಮಹತ್ತರ ಸಂದೇಶಗಳನ್ನು ಸಾರುವ ಆಶಯದೊಂದಿಗೆ ರೂಪುಗೊಂಡಿರುವ ಯುಗಪುರುಷ ನಾಟಕ ಪ್ರದರ್ಶನದ ಉಧ್ಘಾಟನೆ ಕಾರ್ಯಕ್ರಮವು ಜುಲೈ 21 ರಂದು ಬೆಳಿಗೆ 11ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಆಯೋಜಿತವಾಗಿರುವ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಉದ್ಫಾಟಿಸುವರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಉಪಸಭಾಪತಿಯವರಾದ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಎಂ.ಸಿ. ಮೋಹನಕುಮಾರಿ ಉರುಫ್ ಗೀತಾ, ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು (ಸಂದೇಶ್ ನಾಗರಾಜು), ಆರ್. ಧರ್ಮಸೇನ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಮೈಸೂರು ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ನಗರಸಭೆ ಪ್ರಭಾರ ಅಧ್ಯಕ್ಷರಾದ ಆರ್. ಎಂ ರಾಜಪ್ಪ ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಪಿ.ಎನ್. ದಯಾನಿಧಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಶ್ವದ ಎಲ್ಲ ಸಮಸ್ಯೆಗಳಗೂ ಅಂಬೇಡ್ಕರ್ ಚಿಂತನೆಯಲ್ಲಿ ಪರಿಹಾರ: ಮಹೇಶ್‍ಚಂದ್ರ ಗುರು


      ಚಾಮರಾಜನಗರ, ಜು. 20 - ಜಗತ್ತನ್ನು ಇಂದು ಕಾಡುತ್ತಿರುವ ಭಯೋತ್ಪಾದನೆ, ಕೋಮುವಾದ, ಯುದ್ಧಭೀತಿ ಹಾಗೂ ಇತರೆ ಎಲ್ಲ ಸಮಸ್ಯೆಗಳಿಗೆ ಅಂಬೇಡ್ಕರ್ ಅವರ ಚಿಂತನೆಗಳಲ್ಲಿ ಪರಿಹಾರವಿದೆ ಎಂದು ಮೈಸೂರು ವಿ.ವಿ. ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ. ಬಿ.ಪಿ. ಮಹೇಶ್‍ಚಂದ್ರ ಗುರು ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆವತಿಯಿಂದ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ತಮಗಿದೋ ನಮ್ಮ ಗೌರವ ನಮನ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಮೂರು ನುಡಿ-ನೂರು ದುಡಿ ನುಡಿನಮನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಇಡೀ ವಿಶ್ವ ಕವಲು ಹಾದಿಯಲ್ಲಿದೆ. ಇದೆಲ್ಲದರ ಅರಿವು ಹೊಂದಿದ್ದ ಅಂಬೇಡ್ಕರ್ ಅವರು ಬುದ್ದನ ತತ್ವಗಳಿಗೆ ಮಾರುಹೋಗಿ ಪ್ರೀತಿಯಿಂದ ಪ್ರಪಂಚವನ್ನೆ ಗೆದ್ದು ಪ್ರಬುದ್ಧರಾದರು. ಭಾರತದಲ್ಲಿಯೇ ಮಾತ್ರವಲ್ಲ. ವಿಶ್ವದ ಎಲ್ಲ ರಾಷ್ಟ್ರಗಳಲ್ಲಿಯೂ ಅಂಬೇಡ್ಕರ್ ಅವರ ಕುರಿತು ಅಧ್ಯಯನಗಳು ನಡೆಯುತ್ತಿವೆ. ಈ ಮೂಲಕ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಮುಂದೆ ಬಂದಿವೆ ಎಂದರು.
ಅಂಬೇಡ್ಕರ್ ಅವರು ವಿಶ್ವದಲ್ಲೇ ಸರ್ವಶ್ರೇಷ್ಠರಾದರು. ಸ್ವಾತಂತ್ರ್ಯನಂತರ ಅಂಬೇಡ್ಕರರು ಉನ್ನತ ಹುದ್ದೇಗಳಿಗೆ ಏರಬಹುದಿತ್ತು. ಆದರೆ ಅವರು ಯಾವುದನ್ನು ಬಯಸಲಿಲ್ಲ. ತಮ್ಮ ಜೀವನವನ್ನು ಶೋಷಿತರ, ದಮನಿತರ ಹಿಂದುಳಿದವರ ಏಳಿಗೆಗೆ ಮುಡಿಪಾಗಿಟ್ಟ ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಗುರುತಿಸಿ ಗೌರವಿಸುತ್ತಿದೆ ಎಂದರು.
ಅಂಬೇಡ್ಕರ್‍ರು ಕಾನೂನು ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರೈತರು, ಅಲ್ಪಸಂಖ್ಯಾತರು, ಅದಿವಾಸಿಗಳು, ಹಿಂದುಳಿದವರು ಹಾಗೂ ಶೋಷಿತರ ಏಳಿಗೆಗಾಗಿ ದುಡಿದರು, ಹಲವಾರು ಅಭಿವೃದ್ಧಿಪರ ಕಾನೂನುಗಳನ್ನು ಜಾರಿಗೆ ತಂದರು. ಸಂವಿಧಾನದಲ್ಲಿ ಮಹಿಳೆಯರ ಸಮಾನತೆಗಾಗಿ ವಿವಿಧ ಹಕ್ಕು ಭಾಧ್ಯತೆಗಳನ್ನು ಕಲ್ಪಿಸಿದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ ವಿಶ್ವದ ಮಹಾತ್ಮರಲ್ಲಿ ವಿಭಿನ್ನ ಹಾಗೂ ವಿಶಿಷ್ಟವಾಗಿ ಅಂಬೇಡ್ಕರ್ ಅವರು ಕಾಣುತ್ತಾರೆ ಎಂದರು.
ಅಂದು ಸಂಪತ್ತÀನ್ನು ಸೃಷ್ಠಿಸುವವರು ಸಂಪತ್ತಿನ ವಾರಸುದಾರ ಆಗುವಂತಿರಲಿಲ್ಲ. ಅಂತಹ ಸಂದರ್ಭದಲ್ಲಿ ಅಂಬೇಡ್ಕರ್ ಕೃಷಿಕರು, ಸಣ್ಣ ಇಡುವಳಿದಾರರು, ಅಸಂಘಟಿತ ಕಾರ್ಮಿಕರಿಗೆ ಸಂವಿಧಾನಬದ್ಧ ಕಾಯ್ದೆಗಳನ್ನು ಜಾರಿಗೆ ತಂದು ಕೃಷಿಕಾರ್ಮಿಕರ ಅರ್ಥಿಕ ಸದೃಢತೆಗೆ ಕಾರಣರಾದರು. ಇಂದಿನ ದಿನಗಳಲ್ಲಿ ಮಾನವ ಬದುಕಿನ ಸಮತೋಲನ ಕಾಪಾಡುವಲ್ಲಿ ಅಂಬೇಡ್ಕರ್ ಅವರ ಅಂತ್ಯೋದಯ ಮಾದರಿಯನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ.
ಅಂಬೇಡ್ಕರ್ ಅವರು ಎಲ್ಲ ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತಕ್ಕಾಗಿ ಹೋರಾಡಿದ ಮಹಾಪುರುಷರಾಗಿದ್ದಾರೆ. ವಿಶ್ವಸಂಸ್ಥೆಯೇ ಅಂಬೇಡ್ಕರ್ ಅವರನ್ನು ವಿಶ್ವ ಜ್ಞಾನದ ಸಂಕೇತ ಎಂದು ಬಣ್ಣಿಸಿರುವ ಹಿನ್ನಲೆಯಲ್ಲಿ ನಮ್ಮಲ್ಲಿ ಬದಲಾವಣೆಯ ಪರ್ವ ಇನ್ನೂ ಅರಂಭವಾಗಬೇಕಿದೆ ಎಂದು ಮಹೇಶ್‍ಚಂದ್ರಗುರು ಅವರು ತಿಳಿಸಿದರು.
ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮಾತನಾಡಿ ಅಂಬೇಡ್ಕರ್ ಅವರು ಕೇವಲ ಒಂದು ಸಮಾಜಕ್ಕೆ ಸೀಮಿತರಾಗದೇ ಎಲ್ಲರ ಹಿತಕ್ಕಾಗಿ ಹೋರಾಡಿದವರು. ಅವರ ಆದಶರ್À, ಚಿಂತನೆ, ಮಾನವೀಯ ಮೌಲ್ಯಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳುವ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಎಲ್ಲರ ಪ್ರಗತಿಗೆ ಶಿಕ್ಷಣ, ಸಂಘಟನೆ, ಹೋರಾಟದ ಘೋಷಣೆ ಮಾಡಿದ ಅಂಬೇಡ್ಕರ್ ಅವರ ಶ್ರಮವೇ ಕಾರಣ. ಮೀಸಲಾತಿ ಸೌಲಭ್ಯ ಕಲ್ಪಿಸಿದ ಅಂಬೇಡ್ಕರ್ ಅವರು ಅದರ್ಶಪ್ರಾಯರಾಗಿದ್ದಾರೆ. ಅವರ ಸಿದ್ದಾಂತಗಳು ಇಂದಿಗೂ ಅನುಕರಣೀಯವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ. ಕೆ. ಬೊಮ್ಮಯ್ಯ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್. ವಿ. ಚಂದ್ರು, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ನಗರಸಭೆ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಎಸ್. ನಂಜುಂಡಸ್ವಾಮಿ, ತಾಲೂಕುಪಂಚಾಯಿತಿ ಸದಸ್ಯರಾದ ಮಹದೇವ್, ಹೆಚ್ಚುವರಿ ಜಿಲ್ಲಾಧಿಕಾರಿ ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸತೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಅವರಣದ ಮುಖ್ಯ ದ್ವಾರದ ಬಳಿಯಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು.
ಗಮನ ಸೆಳೆದ ಚರ್ಮವಾದ್ಯಮೇಳ, ಪ್ರಗತಿಪರ ಹೋರಾಟದ ಹಾಡುಗಳು:- ಕಾರ್ಯಕ್ರಮದಲ್ಲಿ ಹೋರಾಟದ ಹಾಡುಗಳನ್ನು ಪಿ. ಮಹೇಶ್, ಕಂದಹಳ್ಳಿ ನಾರಾಯಣ, ಪರಶಿವಮೂರ್ತಿ, ಮಹೇಶ್ ಎನ್, ಶಾಂತರಾಜು, ಮೂರ್ತಿ ಚಂಗಹಳ್ಳಿ, ಕಲೆನಟರಾಜು ಪ್ರಸ್ತುತಪಡಿಸಿದರು. ಸುಗ್ಗಿಕುಣಿತ, ಬೀಸು ಕಂಸಾಳೆಯಂತಹ ಜಾನಪದ ಕಲೆ ಪ್ರದರ್ಶನವು ನಡೆಯಿತು.
ಅಂಬೇಡ್ಕರ್ ಪ್ರತಿಮೆ ಬಳಿ ಸಂಜೆ 6 ಗಂಟೆಗೆ ಸರಿಯಾಗಿ 50ಕ್ಕೂ ಹೆಚ್ಚು ತಮಟೆ, ಡೊಳ್ಳು ಕಲಾವಿದರು ತಮ್ಮ ವಾದ್ಯಗಳನ್ನು ಮೊಳಗಿಸುವ ಮೂಲಕ ಗಮನ ಸೆಳೆದರು. ನೆರೆದಿದ್ದ ಜನಸ್ತೋಮ ಈ ಕಿವಿಗಡಚಿಕ್ಕುವ ಚರ್ಮವಾದ್ಯಗಳ ನುಡಿಸುವಿಕೆಯಿಂದ ಹರ್ಷಚಿತ್ತರಾದರು. ಬಳಿಕ ಸಿ.ಎಂ. ನರಸಿಂಹಮೂರ್ತಿ ಮತ್ತು ತಂಡ ಪ್ರಗತಿಪರ ಗೀತೆಗಳನ್ನು ಹಾಡಿದರು.          
     

 ಲಯನ್ಸ್ ಸಂಸ್ಥೆಯು ಉತ್ತಮ ಸೇವಾ ಕಾರ್ಯಗಳನ್ನು ಮಾಡಿದೆ :ನಾಗರಾಜ್‍ಭೈರಿ



ಚಾಮರಾಜನಗರ. ಜು20- ಚಾಮರಾಜನಗರ ಲಯನ್ಸ್ ಸಂಸ್ಥೆಯು ಉತ್ತಮ ಸೇವಾ ಕಾರ್ಯಗಳನ್ನು ಮಾಡಿದೆ ಎಂದು 2ನೇ ಉಪರಾಜ್ಯಪಾಲರಾದ ಲಯನ್ಸ್ ನಾಗರಾಜ್‍ಭೈರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ನಗರದ ನಂದಿ ಭವನದಲ್ಲಿ ನಡೆದ ಅಂತರ ರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಲಯನ್ಸ್ ಸಂಸ್ಥೆ, ಚಾಮರಾಜನಗರ   ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಲಯನ್ಸ್ ಸಂಸ್ಥೆಯು ಸಹ ಕಳೆದ 30 ವರ್ಷಗಳಿಂದ ಸಕ್ರೀಯವಾಗಿ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಕಳೆದ ವರ್ಷ ಇನ್ನು ಉತ್ತಮವಾಗಿ ಕಾರ್ಯ ನಿರ್ವಹಿಸಿ 3 ಅವಾರ್ಡ್‍ಗಳನ್ನು ಪಡೆದುಕೊಂಡಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಸಂಸ್ಥೆಗೆ ಇನ್ನು ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವಂತೆ ಕಿವಿ ಮಾತು ಹೇಳಿದರು.
 ನೂತನ ಅದ್ಯಕ್ಷ ಲ .ವೈ.ಪಿ. ರಾಜೇಂದ್ರಪ್ರಸಾದ್ ಮಾತನಾಡಿ, ನಮ್ಮ ನೂತನ ತಂಡದ ಸೇವಾವಧಿüಯಲ್ಲಿ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸೇವೆಗೆ ಒತ್ತು ನೀಡಲಾಗುವುದು ಎಂದ ಅವರು, ಹೀಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಡೆಂಗ್ಯೂ, ಚಿಕನ್‍ಗುನ್ಯ ದಂತ ಸಾಂಕ್ರಾಮಿಕ ರೋಗವು ಜನರನ್ನು ಕಾಡುತ್ತಿದೆ. ಇದನ್ನು ತಡೆಗಟ್ಟಲು ಲಯನ್ಸ್ ಸಂಸ್ಥೆಯು ಈ ವರ್ಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
 ಇದಲ್ಲದೆ ಉಚಿತ ನೇತ್ರಾ ಚಿಕಿತ್ಸಾ ಶಿಬಿರ, ಆರೋಗ್ಯ ತಪಾಸಣಾ ಶಿಬಿರ,  ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಜೊತೆಗೆ ನಗರದಲ್ಲಿ ಲಯನ್ಸ್ ಸಂಸ್ಥೆಯ ವತಿಯಿಂದ ಡಯಾಲಿಸಸ್ ಕೇಂದ್ರವನ್ನು ತೆರೆದು ಕಿಡ್ನಿ ತೊಂದರೆ ಇರುವ ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
 ಇನ್ನು ಅನೇಕ ಸೇವಾ ಕಾರ್ಯಕ್ರಮಗಳನ್ನು ಲಯನ್ಸ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾದ ಲ. ವೈ.ಪಿ.ರಾಜೇಂದ್ರ ಕಾರ್ಯದರ್ಶಿ ಲ. ಹೊಸೂರುಜಗದೀಶ್, ಖಜಾಂಚಿ ಲ.ಚೇತನ್, ಉಪಾಧ್ಯಕ್ಷರಾದ ಲ.ವೃಷಬೇಂದ್ರಪ್ಪ,  ಲ.ರಂಗಸ್ವಾಮಿ ನಿರ್ದೇಶಕರಾದ ಲ.ಡಾ.ಎ.ಬಿ.ನಂಜಪ್ಪ, ಲ.ಬಿ.ಎಂ.ಸ್ವಾಮಿ, ಲ.ಕೆ.ಬಾಲಸುಬ್ರಮಣ್ಯಂ, ಲ.ಬಿ.ಆರ್.ಪ್ರಕಾಶ್‍ಕುಮಾರ್, ಲ.ಬಿ.ಮುರುಗೇಶ್, ಲ. ಕನ್ನಯ್ಯಲಾಲ್‍ಜೈನ್, ಲ.ಡಾ.ಪ್ರಭುರಾಮ್, ಲ.ಸಿ.ಪಿ.ಜಗದೀಶ್, ಲ.ಬಿ.ಎಂ.ಪ್ರಭುಸ್ವಾಮಿ, ಲ.ಜಿ.ಎನ್.ವಿಜಯ್‍ಕುಮಾರ್, ಲ.ಲೋಕೇಶ್‍ಕುಮಾರ್ ಜೈನ್, ಲ.ಪ್ರಕಾಶ್, ಲ.ಸಿ.ಎನ್.ಮೋಹನ್‍ಕುಮಾರ್ ಅವರಿಗೆ   ರಾಜ್ಯಪಾಲ ಲನಾಗರಾಜ್‍ಭೈರಿ ಅವರು ಪ್ರಮಾಣ ವಚನ ಬೋಧಿಸಿದರು.

ಲಯನ್ಸ್ ಸಂಸ್ಥೆಯ ವತಿಯಿಂದ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮೂವರು ಬೀದಿ ಬದಿ ವ್ಯಾಪಾರಿಗಳಿಗೆ ಉಚಿತವಾಗಿ ಕೊಡೆ ವಿತರಣೆ, ಕಿಡ್ನಿ ವೈಫಲ್ಯದ ವ್ಯಕ್ತಿಗೆ ಚಿಕಿತ್ಸೆಗಾಗಿ ಧನ ಸಹಾಯ ನೀಡಲಾಯಿತು, ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ ಮತ್ತು ವೈದ್ಯರಾದ ಡಾ.ಬಿ.ಪಿ.ನಟರಾಜಮೂರ್ತಿ, ಕಲಾವಿದ ಉಮ್ಮತ್ತೂರು ಬಸವರಾಜು, ನಟರಾದ ಬಸವಟ್ಟಿ ಲೋಕೇಶ್, ಅಗ್ನಿಸಾಕ್ಷಿಯ ಅಂಜಲಿ ಅವರನ್ನು ಸನ್ಮಾನಿಸಲಾಯಿತು.
     ಪ್ರಾಂತೀಯ ಅಧ್ಯಕ್ಷ ಮಹಮ್ಮದ್ ನಾಸೀರ್ ಅವರು ಪ್ರತಿಭಾವಂತ ಬಡ ವಿದ್ಯಾರ್ಥಿನಿಯಾದ ಕುಮಾರಿ ರಾಜೇಶ್ವರಿಯ ಎಸ್‍ಎಸ್‍ಎಲ್‍ಸಿ ನಂತರದ ವಿದ್ಯಾಬ್ಯಾಸದ ಪೂರ್ಣ ವೆಚ್ಚವನ್ನು ಭರಿಸುವುದಾಗಿ ವಾಗ್ದಾನ ನೀಡಿದರು.
 ಕಾರ್ಯಕ್ರಮದಲ್ಲಿ ವಲಯ ಅದ್ಯಕ್ಷ ಲ.ಚಂದ್ರಶೇಖರ್, ಲ.ಜಿ.ಎ.ರಮೇಶ್, ಲ.ಜಯರಾಮ್, ಲ.ವಿರೂಪಾಕ್ಷ, ಲ.ನಾಗೇಶ್‍ಮೂರ್ತಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು
   













01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು